ಕನ್ನಡ, ತುಳುವಿನ ನಡುವಿನ ಸ್ನೇಹಸೇತು

ಮರೆಯಲಾಗದ ಮಹನೀಯ ದರ್ಬೆ ಕೃಷ್ಣಾನಂದ ಚೌಟ

Team Udayavani, Jun 23, 2019, 5:00 AM IST

2

ದ‌ರ್ಬೆ ಕೃಷ್ಣಾನಂದ ಚೌಟ (ಡಿ. ಕೆ. ಚೌಟ)ರು ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ. ಅವರು ತುಳು ಸಾಹಿತ್ಯ ಕೃತಿಗಳು ಮತ್ತು ರಂಗಭೂಮಿಗೆ ನೀಡಿರುವ ಕೊಡುಗೆಗಳು ನಮ್ಮ ಮುಂದಿವೆ, ಮುಂದೆಯೂ ಇರುತ್ತವೆ. ಕೃಷ್ಣಾನಂದ ಚೌಟರು ಅವರ ಹೆಸರನ್ನು ಹಿಂದೆ ಮುಂದೆ ಮಾಡಿಕೊಂಡು ಆನಂದಕೃಷ್ಣ ಎಂಬ ಕೃತಿನಾಮದಲ್ಲಿ ಹಿಂದಿನ ನೆನಪುಗಳನ್ನು ಮುಂದಕ್ಕೆ ತಂದು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಬಾಲ್ಯದ ನೆನಪುಗಳು ಮತ್ತು ಬದುಕಿನ ಅನುಭವಗಳೇ ಅವರ ಕೃತಿಗಳಲ್ಲಿ ಮುಖ್ಯವಾಗಿ ಕಂಡುಬರುತ್ತವೆ.

ಮಂಜೇಶ್ವರ ಗೋವಿಂದ ಪೈಗಳೆಂದರೆ ಡಿ.ಕೆ. ಚೌಟರಿಗೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಗೋವಿಂದ ಪೈಗಳ ಮನೆಗೆ ಚೌಟರು ಹೋಗುತ್ತಿದ್ದರು. ಪೈಗಳ ಸಾಹಿತ್ಯ ಮತ್ತು ಸಂಶೋಧನಾ ಕೃತಿಗಳ ಮಹತ್ವವನ್ನು ಅರಿತುಕೊಂಡು ಅವರ ಪ್ರಭಾವ- ಪ್ರೇರಣೆಗಳಿಗೆ ಅವರು ಒಳಗಾದರು. ಪೈಗಳಲ್ಲಿದ್ದ ಅನೇಕ ಭಾಷೆಗಳ ಪುಸ್ತಕಗಳ ಸಂಗ್ರಹವನ್ನು ನೋಡಿ ಬೆರಗಾಗಿದ್ದರು. “ಮೊದಲು ಪುಸ್ತಕಗಳನ್ನು ಸಂಗ್ರಹಿಸು, ಅವುಗಳನ್ನು ಓದು, ಆಮೇಲೆ ಕೃತಿಗಳನ್ನು ರಚಿಸು’ ಎಂಬ ಪೈಗಳ ಮಾತನ್ನು ಚೌಟರು ಅಕ್ಷರಶಃ ಪಾಲಿಸಿದ್ದಾರೆ. ಚೌಟರು ತುಳುವಿನಲ್ಲಿ ಕೃತಿಗಳನ್ನು ಬರೆಯುವುದಕ್ಕೆ ಮೊದಲು ಬೇರೆ ಬೇರೆ ಭಾಷೆಗಳ ಕೃತಿಗಳನ್ನು ಕೊಂಡುಕೊಂಡರು ಮತ್ತು ಅವುಗಳನ್ನು ಓದಿದರು. ವಾಸ್ತವವಾಗಿ ಚೌಟರು ಕೃತಿಗಳನ್ನು ಬರೆದದ್ದು ಬದುಕಿನಲ್ಲಿ ಮಾಗಿದ ಮೇಲೆಯೇ!

ಚೌಟರ ಕಾದಂಬರಿಯಲ್ಲಿ ಪೈಗಳ ಪಾತ್ರ
ಆಫ್ರಿಕಾದ ಘಾನಾ ಸೇರಿದಂತೆ ವಿದೇಶದ ಹಲವೆಡೆಗಳಲ್ಲಿ ಉದ್ಯಮಿ ಯಾಗಿದ್ದ ಡಿ. ಕೆ. ಚೌಟರು ಅಲ್ಲಿ¨ªಾಗಲೂ ಅವರನ್ನು ಕಾಡುತ್ತಿದ್ದುದು ಅವರೊಳಗಿನ ಕರಾವಳಿ, ಕರಾವಳಿಯ ಮಂಜೇಶ್ವರ, ಮಂಜೇಶ್ವರದ ಹತ್ತಿರದ ಮೀಯಪದವು, ದರ್ಬೆ ಮನೆ, ಮನೆಯೊಳಗಿನ ಆಚರಣೆಗಳು, ಆರಾಧನೆಗಳು, ಭತ್ತದ ಬೇಸಾಯ, ಒಕ್ಕಲುಗಳು ಇತ್ಯಾದಿ. ಗುತ್ತಿನ ಮನೆಯ ವೈಭವ ಮತ್ತು ಅದರೊಳಗಿನ ಬಿಕ್ಕಟ್ಟುಗಳು ಚೌಟರನ್ನು ಬಹಳ ಕಾಡಿವೆ. ಗೋವಿಂದ ಪೈಗಳು ಚೌಟರ ಮೇಲೆ ಎಷ್ಟು ಪ್ರಭಾವ ಬೀರಿದ್ದರೆಂದರೆ ಮಿತ್ತಬೈಲ್‌ ಯಮುನಕ್ಕೆ ಕಾದಂಬರಿಯಲ್ಲಿ ಪೈಗಳ ಪಾತ್ರವನ್ನು ಸೊಗಸಾಗಿ ಕಂಡರಿಸಿದ್ದಾರೆ. ಇಳಿವಯಸ್ಸಿನಲ್ಲಿ ಮತ್ತು ಆರೋಗ್ಯ ಚೆನ್ನಾಗಿ ಇಲ್ಲದೇ ಇದ್ದ ಕಾಲದಲ್ಲಿಯೂ ಮಂಜೇಶ್ವರದ ಗಿಳಿವಿಂಡಿನ ಯೋಜನೆಗಳಲ್ಲಿ ಚೌಟರು ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದಾರೆ. ಪೈಗಳ ಸ್ಮರಣೆ ಮತ್ತು ಗೌರವಾರ್ಥ ಕೈಗೆತ್ತಿಕೊಂಡ ಯೋಜನೆಗಳ ಮೇಲೆ ಅವರು ಹೊಂದಿದ್ದ ಬದ್ಧತೆ ಅವರ ಮಾತುಗಳಲ್ಲಿ ಪ್ರಕಟವಾಗುತ್ತಿತ್ತು. ಪೈಯವರ ನಿವಾಸವನ್ನು ಸಾಂಸ್ಕೃತಿಕವಾಗಿ ಅಭಿವೃದ್ಧಿಪಡಿಸುವ ಯೋಜನೆಗಳು ಚೌಟರು ಇದ್ದಾಗಲೇ ಮುಗಿದಿದ್ದರೆ ಅವರು ಬಹಳ ಸಂತೋಷ ಪಡುತ್ತಿದ್ದರು.

ಕರಿಯವಜ್ಜೆರ್ನ ಕತೆಕುಲು ಮತ್ತು ಪತ್ತ್ ಪಜ್ಜೆಲು ತುಳುವಿನ ಕಥಾಸಂಕಲಗಳು. ಪಿಲಿಪತ್ತಿ ಗಡಸ್‌, ಉರಿಉಷ್ಣದ ಮಾಯೆ, ಧರ್ಮೆತ್ತಿ ಮಾಯೆ, ಮೂಜಿ ಮುಟ್ಟು ಮೂಜಿ ಲೋಕ ಇವು ತುಳು ನಾಟಕಗಳು. ಮಿತ್ತಬೈಲ್‌ ಯಮುನಕ್ಕೆ-ಒಂಜಿ ಗುತ್ತುದ ಕತೆ ತುಳು ಕಾದಂಬರಿ. ಅರ್ಧಸತ್ಯ-ಬಾಕಿ ಸುಳ್ಳಲ್ಲ ಇದು ಕನ್ನಡ ಕಾದಂಬರಿ. ಇವರ ನಾಟಕಗಳು, ಕಾದಂಬರಿ ಮತ್ತು ಸಣ್ಣ ಕತೆಗಳು ಕನ್ನಡಕ್ಕೆ ಅನುವಾದವಾಗಿ ದರ್ಬೆ ಎಂಬ ಸಂಪುಟದಲ್ಲಿ ಪ್ರಕಟಗೊಂಡಿವೆ. ಈ ಅನುವಾದದಿಂದಾಗಿ ಚೌಟರು ಕನ್ನಡದ ಓದುಗರಿಗೂ ಒದಗಿ¨ªಾರೆ. ಈ ಪ್ರಮಾಣದಲ್ಲಿ ತುಳುವಿನ ಯಾವ ಲೇಖಕನೂ ಕನ್ನಡದ ಓದುಗರಿಗೆ ಹತ್ತಿರದವರಾಗಲಿಲ್ಲ. ಚೌಟರಿಗೆ ಕನ್ನಡದ ಅಭಿಮಾನಿ ಓದುಗರಿದ್ದಾರೆ. ಕನ್ನಡದ ಅನೇಕ ವಿಮರ್ಶಕರು ಇವರ ಕೃತಿಗಳನ್ನು ವಿಮರ್ಶಿಸಿ ಅವುಗಳ ಅನನ್ಯತೆ ಮತ್ತು ಶ್ರೇಷ್ಠತೆಯ ಬಗ್ಗೆ ವ್ಯಾಖ್ಯಾನಿಸಿದ್ದಾರೆ, ಮೌಲ್ಯಮಾಪನ ಮಾಡಿದ್ದಾರೆ. ಕನ್ನಡದಲ್ಲಿ ಅನುವಾದಗೊಂಡ ಅವರ ಮಿತ್ತಬೈಲ್‌ ಯಮುನಕ್ಕ ಆವೃತ್ತಿಯ ಕೆಲವು ಸಾವಿರ ಪ್ರತಿಗಳು ಮಾರಾಟವಾದದ್ದು ಆ ಕೃತಿಯ ಮಹತ್ವ ಮತ್ತು ಜನಪ್ರಿಯತೆಗೆ ಸಾಕ್ಷಿ.

ಸಂಸ್ಕೃತಿಯ ವಿಮರ್ಶಕ
ಚೌಟರ ಬರವಣಿಗೆಯ ಬಹುಮುಖ್ಯವಾದ ಒಂದು ಆಶಯವನ್ನು ಹೀಗೆ ವಿವರಿಸಬಹುದು. ಗುತ್ತು ಮತ್ತು ಅದರೊಳಗೆ ಅಡಗಿರುವ ಸಂಭ್ರಮ ಮತ್ತು ಅವಿತಿರುವ ದೌರ್ಜನ್ಯಗಳನ್ನು ಬಹಳ ಸೂಕ್ಷ್ಮವಾಗಿ ಅವರು ಗಮನಿಸಿದ್ದಾರೆ. ಪಿಲಿಪತ್ತಿ ಗಡಸ್‌ ನಾಟಕದ ಕತೆ ಒಂದು ಗುತ್ತು ವಿಗೆ ಸಂಬಂಧಪಟ್ಟಿದೆ. ಗುತ್ತು ಎಂದರೆ ಒಂದು ಊರಿನ ಆಡ್ಯ ಮನೆತನ. ಗುತ್ತಿನ ಯಜಮಾನನ ನೈತಿಕ ಅಧಃಪತನ ಒಂದು ಗುತ್ತಿನ ನಾಶಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಅವರು ಈ ನಾಟಕದಲ್ಲಿ ವಿಶ್ಲೇಷಿಸಿದ್ದಾರೆ. ಅಮೃತ ಸೋಮೇಶ್ವರ ಅವರ ಗೋಂದೋಳು ನಾಟಕದ ಪೆರ್ಗಡೆಯಂತೆ, ಈಡಿಪಸ್‌ ನಾಟಕದ ಈಡಿಪಸ್‌ನಂತೆ ಈ ನಾಟಕದ ನಾಯಕ ಕೂಡ ತನ್ನ ದೌರ್ಬಲ್ಯಗಳಿಂದಾಗಿ ಪಾಪಗಳನ್ನು ಮಾಡುತ್ತ ಸಾಯುತ್ತಾನೆ. ಗುತ್ತುವಿನ ಅಧಃಪತನಕ್ಕೆ ಹೆಣ್ಣು ಹೆಂಗಸರ ಶಾಪವೂ ಕಾರಣವಾಗುತ್ತದೆ. ಅಧಿಕಾರ ಮತ್ತು ಅಂತಸ್ತುಗಳ ಕಾರಣದಿಂದ ಗಂಡಸರು ಹೆಂಗಸರ ಮೇಲೆ ನಡೆಸುವ ದೌರ್ಜನ್ಯ ಮತ್ತು ಆ ಹೋರಾಟದಲ್ಲಿ ಪ್ರತಿಭಟನೆಯ ಮೂಲಕ ಅವರು ಎದ್ದುನಿಲ್ಲುವ ರೀತಿಯನ್ನು ಚೌಟರು ಅದ್ಭುತವಾಗಿ ನಿರೂಪಿಸಿದ್ದಾರೆ. ಮಿತ್ತಬೈಲ್‌ ಯಮುನಕ್ಕೆ ಕಾದಂಬರಿಯಲ್ಲಿ ಈ ವಸ್ತು ಇನ್ನಷ್ಟು ವಿಸ್ತಾರವಾಗಿ ಚಿತ್ರಿತವಾಗಿದೆ. ಗುತ್ತಿನ ಏಳುಬೀಳುಗಳನ್ನು ವಿವರಿಸುವ ಮೂರು ತಲೆಮಾರುಗಳ ಕತೆ ಇಲ್ಲಿದೆ. ಒಂದು ಗುತ್ತಿನ ನಾಶಕ್ಕೆ ಒಳಗಿನ ಮತ್ತು ಹೊರಗಿನ ಹುನ್ನಾರಗಳು ಕಾರಣವಾಗುವ ಬಗೆಯನ್ನು ಈ ಕಾದಂಬರಿಯಲ್ಲಿ ಹೇಳಿದ್ದಾರೆ. ಒಂದು ಗುತ್ತು ಕೆಲವು ಶತಮಾನಗಳ ಕಾಲಘಟ್ಟದಲ್ಲಿ ಎದ್ದುಬಿದ್ದ ಮತ್ತು ಆಧುನಿಕತೆಗೆ ತೆರದುಕೊಂಡ ಆಯಾಮವನ್ನು ಚೌಟರು ವಿವರಿಸಿದ್ದಾರೆ. ಪತ್ತ್ ಪಜ್ಜೆಲು ಸಂಕಲನದ ಕತೆಗಳಲ್ಲಿಯೂ “ಪದವು’ ಕೇಂದ್ರ ಘಟಕವಾಗಿದ್ದು ಊರಿನ ಬದಲಾವಣೆಗೆ ಸಾಕ್ಷಿಯಾಗುತ್ತದೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಮತ್ತೂಂದು ಸಂಗತಿಯೆಂದರೆ ಆರಾಧನೆಗಳಲ್ಲಿರುವ ಆಡಂಬರವನ್ನು ತಮ್ಮ ಮಾತು ಮತ್ತು ಬರವಣಿಗೆಗಳ ಮೂಲಕ ಚೌಟರು ವಿರೋಧಿಸುತ್ತಲೇ ಬಂದಿದ್ದಾರೆ. ಹಾಗೆಂದು, ಜನರ ನಂಬಿಕೆ-ಶ್ರದ್ಧೆಗಳನ್ನು ಗೌರವಿಸಿದ್ದಾರೆ.

ಬಹುಮುಖೀ ವ್ಯಕ್ತಿತ್ವ
ಡಿ. ಕೆ. ಚೌಟರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಅಂಶವೆಂದರೆ ಅವರೊಳಗಿನ ಒಬ್ಬ ಕಲಾವಿದ. ಅವರ ನಾಟಕಗಳಲ್ಲಿ, ರಂಗಭೂಮಿ ಚಟುವಟಿಕೆಗಳಲ್ಲಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕೆಲಸಗಳಲ್ಲಿ ಅವರೊಳಗಿನ ಕಲಾವಿದನ ಅಸ್ತಿತ್ವವನ್ನು ಗುರುತಿಸಬಹುದು. ನಾಟಕ ಒಂದು ಸಾಹಿತ್ಯ ಕೃತಿ. ಪ್ರದರ್ಶನಗೊಳ್ಳುವಾಗ ಅದು ರಂಗಕೃತಿಯಾಗುತ್ತದೆ. ರಂಗಕೃತಿಯ ಪರಿಕಲ್ಪನೆ ಚೌಟರಿಗೆ ಚೆನ್ನಾಗಿ ಇದ್ದುದರಿಂದ ಅವರ ಎಲ್ಲಾ ನಾಟಕಗಳು ರಂಗದ ಮೇಲೆ ಅದ್ಭುತ ಯಶಸ್ಸನ್ನು ಕಂಡವು. ಪಿಲಿಪತ್ತಿ ಗಡಸ್‌ ನಾಟಕವು ನೂರಾರು ಪ್ರದರ್ಶನಗಳನ್ನು ಕಂಡು ತುಳು ಮಾತ್ರವಲ್ಲ ತುಳುವೇತರ ಪ್ರೇಕ್ಷಕರ ಮನಸ್ಸನ್ನು ಗೆದ್ದುವು. ಚಿತ್ರಕಲಾ ಪರಿಷತ್ತಿನ ಮೂಲಕ ಚಿತ್ರಸಂತೆಯನ್ನು ಏರ್ಪಡಿಸಿ ಚಿತ್ರಕಲಾ ಕೃತಿಗಳನ್ನು ಜನಸಾಮಾನ್ಯರ ಹತ್ತಿರಕ್ಕೆ ಚೌಟರು ತಂದರು. ಸ್ವಂತ ಊರಾದ ದರ್ಬೆಯಲ್ಲಿ ಅವರು ಕಟ್ಟಿಸಿರುವ ಅವರ ಹೊಸಮನೆಯಲ್ಲಿ, ಹಚ್ಚಹಸುರಾಗಿ ಕಂಗೊಳಿಸುತ್ತಿರುವ ಚೌಟರತೋಟದ ನಿರ್ಮಾಣದಲ್ಲಿ ಕಲಾವಿದನೊಬ್ಬನ ಸೃಜನಶೀಲತೆಯನ್ನು ನೋಡಬಹುದು. ಕಲೆ ಮತ್ತು ಕಲಾವಿದನನ್ನು ಸಮಾನವಾಗಿ ಗೌರವಿಸುವ ಪ್ರವೃತ್ತಿಯನ್ನು ಚೌಟರು ತಮ್ಮ ಬದುಕಿನ ಸಿದ್ಧಾಂತವಾಗಿ ಇಟ್ಟುಕೊಂಡಿದ್ದರು. ಕಲಾವಿದರಿಗೆ, ನಾಟಕ ಸಂಸ್ಥೆಗಳಿಗೆ ಚೌಟರು ಸಾಕಷ್ಟು ಧನ ಸಹಾಯ ನೀಡಿದ್ದಾರೆ. ಕಾರ್ಕಳದ ಕಾಂತಾವರದ ಚೌಟರ ಚೌಕಿ, ಮೀಯಪದವಿನ ಚೌಟರ ಬಯಲು ರಂಗಮಂದಿರ, ಮುದ್ರಾಡಿಯೂ ಸೇರಿದಂತೆ ಅನೇಕ ನಾಟಕ ತಂಡ ಮತ್ತು ಪ್ರದರ್ಶನಗಳಿಗೆ ಅನುದಾನ, ಕಾಸರಗೋಡು ಚಿನ್ನಾ ಅವರ ಮೂಲಕ ನಡೆದ ನಾಟಕ ಮತ್ತು ಸಾಂಸ್ಕೃತಿಕ ಅಭಿಯಾನಗಳಿಗೆ ಅವರು ನೀಡಿದ ನೆರವು, ತುಳುವಿನ ಮೌಲಿಕ ಗ್ರಂಥಗಳ ಪ್ರಕಟನೆಗೆ ಅನುದಾನ- ಹೀಗೆ ಚೌಟರು ಸಾಹಿತ್ಯ ಮತ್ತು ರಂಗಭೂಮಿಯನ್ನು ಕಟ್ಟಿಬೆಳೆಸಿದ ರೀತಿ ಅನನ್ಯವಾದುದು.

ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಘನತೆಯನ್ನು ತಂದುಕೊಟ್ಟಿರುವ ಸಂಗತಿಯನ್ನು ವಿಶೇಷವಾಗಿ ಉಲ್ಲೇಖೀಸಬೇಕು. ತನ್ನ ಕೃತಿಗಳು ಇತರ ಭಾಷೆಯ ಓದುಗರಿಗೆ ಲಭ್ಯವಾಗಬೇಕು ಎಂದು ಕನ್ನಡ ಮತ್ತು ಇಂಗ್ಲಿಷ್‌ಗೆ ತಮ್ಮ ಕೃತಿಗಳನ್ನು ಅನುವಾದಮಾಡಿಸಿ ಪ್ರಕಟಿಸಿದರು. ತುಳು ನಾಟಕಗಳು ರಂಗದ ಮೇಲೆ ಬಂದು ಹೆಚ್ಚು ಜನರನ್ನು ತಲುಪಬೇಕೆಂದು ತಂಡ ಕಟ್ಟಿ ಪ್ರದರ್ಶನಗಳನ್ನು ನೀಡುವಂತೆ ಎಲ್ಲಾ ಬಗೆಯ ಬೆಂಬಲವನ್ನು ನೀಡಿದರು. ತುಳುವಜ್ಜೆರ್ನ ಕತೆಕುಲು ಮತ್ತು ಬೃಹತ್‌ ಕಾದಂಬರಿ ಮಿತ್ತಬೈಲ್‌ ಯಮುನಕ್ಕೆ ಯನ್ನು ರಂಗಕ್ಕೆ ಅಳವಡಿಸಿ ಪ್ರಸ್ತುತಪಡಿಸಿದರು. ಸಿ. ಜಿ. ಕೃಷ್ಣಮೂರ್ತಿ, ಕೃಷ್ಣಮೂರ್ತಿ ಕವತ್ತಾರು ಮೊದಲಾದ ರಂಗನಿರ್ದೇಶಕರ ಜೊತೆ ಚರ್ಚಿಸಿ ತುಳು ರಂಗಭೂಮಿಯ ಪರಿಧಿಯನ್ನು ವಿಸ್ತರಿಸಿದರು. ಅವರ ಮಿತ್ತಬೈಲ್‌ ಯಮುನಕ್ಕೆ ಕಾದಂಬರಿಯ ಇಂಗ್ಲಿಷ್‌ ಅನುವಾದವನ್ನು ಬಿ. ಸುರೇಂದ್ರರಾವ್‌ ಹಾಗೂ ನನ್ನ ಮೂಲಕ ಮಾಡಿಸಿದರು. ಯು. ಆರ್‌. ಅನಂತಮೂರ್ತಿ ಹೇಳಿರುವಂತೆ ಭಾರತೀಯ ಭಾಷೆಗಳಲ್ಲಿ ಬಂದಿರುವ ಈ ಅಪೂರ್ವ ಕಾದಂಬರಿಯನ್ನು ಇಂಗ್ಲಿಷ್‌ ಓದುಗರಿಗೆ ನೀಡಬೇಕು ಎಂಬ ತಮ್ಮ ಇಂಗಿತವನ್ನು ಅವರು ಹಂಚಿಕೊಂಡದ್ದ‌ನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಚೌಟರ ಒಂದು ತುಳು ಕವನವನ್ನು ನಾವು ಇಂಗ್ಲಿಷ್‌ಗೆ ಅನುವಾದ ಮಾಡಿ ಆಧುನಿಕ ತುಳು ಕವನಗಳ ಅನುವಾದ ಸಂಪುಟ ಲ್ಯಾಡ್ಲ್ ಇನ್‌ ಎ ಗೋಲ್ಡನ್‌ ಬೌಲ್‌ ನಲ್ಲಿ ಸೇರಿಸಿ ಪ್ರಕಟಿಸಿದ್ದೆವು. ಅದು ಅವರಿಗೆ ಬಹಳ ಇಷ್ಟವಾಗಿತ್ತು. ಮಿತ್ತಬೈಲ್‌ ಯಮುನಕ್ಕೆ ಇಂಗ್ಲಿಷ್‌ಗೆ ಬರಬೇಕು ಎಂಬುದು ನನ್ನ ಕೊನೆಯ ಆಸೆ ಎಂದು ದೂರವಾಣಿ ಮೂಲಕ ಹೇಳಿದ್ದರು. ಆ ಕಾದಂಬರಿಯ ಅನುವಾದ ಪ್ರಕ್ರಿಯೆಯಲ್ಲಿ ಚೌಟರು ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ವ್ಯಾಪಕ ಓದಿನ ಪರಿಚಯ ಆಗ ನಮಗೆ ಆಗಿತ್ತು. ತುಳುವಿನ ಪಾರಿಭಾಷಿಕ ಪದಗಳ ಅನುವಾದವನ್ನು ಅಂತಿಮಗೊಳಿಸುವಲ್ಲಿ ಅವರು ನೀಡಿದ್ದ ಸಲಹೆಗಳು ಬಹಳ ಮುಖ್ಯವಾಗಿದ್ದವು. ಚೌಟರ ಸಾಹಿತ್ಯದ ಓದಿನ ವಿಸ್ತಾರ ಮತ್ತು ಕೃತಿ ವಿಮರ್ಶೆಯ ಅವರ ಸೂಕ್ಷ್ಮ ಸಂವೇದನೆಯನ್ನು ಪ್ರೊ. ಬಿ.ಎ.ವಿವೇಕ ರೈ ಮತ್ತು ಪ್ರೊ. ಬಿ. ಸುರೇಂದ್ರರಾವ್‌ ಪ್ರಸ್ತಾವಿಸುತ್ತಿದ್ದುದು ನನಗೆ ನೆನಪಿದೆ.

ಡಿ.ಕೆ. ಚೌಟರ ತುಳು ಸಾಹಿತ್ಯ ಮತ್ತು ರಂಗಭೂಮಿ ಚಟುವಟಿಕೆಗಳಿಗಾಗಿ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಮಂಗಳೂರು ವಿ. ವಿ. ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿ ಗೌರವಿಸಿದೆ. ಚೌಟರ ಮಗಳು ಪ್ರಜ್ಞಾ ಚೌಟ ಹೇಳುವಂತೆ- ಬದುಕಿರುವಷ್ಟು ಕಾಲ ತುಳು ಭಾಷೆ ಮತ್ತು ರಂಗಭೂಮಿಯನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಅವರು ಪ್ರೀತಿಸಿದ್ದಾರೆ.

ಕೆ. ಚಿನ್ನಪ್ಪ ಗೌಡ

ಟಾಪ್ ನ್ಯೂಸ್

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.