ಗಾಂಧಿ ಪತ್ರ


Team Udayavani, Feb 23, 2020, 5:54 AM IST

ram-3

ಗಾಂಧೀಜಿಯವರು 1934ರ ಫೆಬ್ರವರಿ 24-25ರಂದು ಕರ್ನಾಟಕದ ಕರಾವಳಿಯಲ್ಲಿ ಪ್ರವಾಸ ಮಾಡಿದರು. ಅಂದು ಅವರು ಸಾಮಾನ್ಯ ಬಾಲಕಿಗೆ ಬರೆದ ಪತ್ರ ಮತ್ತು ಪತ್ರಕ್ಕೆ ಸಂಬಂಧಿಸಿದ ಒಂದಷ್ಟು ವಿಚಾರಗಳು ಇಲ್ಲಿವೆ.

ಅಸ್ಪೃಶ್ಯತೆ ವಿರುದ್ಧದ ಗಾಂಧೀಜಿ ಅವರ ಪ್ರವಾಸ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಸುಮಾರು ಎರಡು ವರ್ಷ ದೇಶಾದ್ಯಂತ ನಡೆಯಿತು. ಇದನ್ನು ಆ ಕಾಲದಲ್ಲಿ ಹರಿಜನ್‌ ಯಾತ್ರೆ ಎಂದು ಜನರು ಗುರುತಿಸುತ್ತಿದ್ದರು, ಗಾಂಧೀಜಿಯವರೂ ಹೀಗೆ ಕರೆದುಕೊಂಡಿದ್ದರು.

ಫೆ. 25ರಂದು ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಗಾಂಧೀಜಿಯವರಿಗೆ ಮಾನಪತ್ರವನ್ನು ಅರ್ಪಿಸಲಾಗಿತ್ತು. ಸಾಮಾನ್ಯವಾಗಿ ಗಾಂಧೀಜಿಯವರು ಮಾನಪತ್ರವನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ, ಹಿರಿಯ ನಾಯಕರು ಮಾನಪತ್ರ ಓದುವ ಹೊಣೆಗಾರಿಕೆಯನ್ನು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಪಾಂಗಾಳ ನಾಯಕ್‌ ಕುಟುಂಬದ 11ರ ಹರೆಯದ ಬಾಲಕಿ ನಿರುಪಮಾ ಅವಳಿಗೆ ವಹಿಸಿಕೊಟ್ಟಿದ್ದರು. ಆ ಕಾಲದಲ್ಲಿ ಹಿಂದಿಯನ್ನು ಸುಲಲಿತವಾಗಿ ಓದುವಷ್ಟು ಭಾಷಾ ಪ್ರೌಢಿಮೆಯನ್ನು ಈಕೆ ಬೆಳೆಸಿಕೊಂಡದ್ದೂ ವಿಶೇಷ. ಮಾನಪತ್ರವನ್ನು ವಾಚಿಸಿ ಅರ್ಪಿಸಿದ್ದ ಬಾಲಕಿ ತನ್ನ ಚಿನ್ನದ ಕೈಬಳೆಗಳನ್ನು ಗಾಂಧೀಜಿಯವರಿಗೆ ಅರ್ಪಿಸಿದಳು. ಆಗ ಗಾಂಧೀಜಿ ತುಂಟ ನಗುವಿನೊಂದಿಗೆ “ಸರ, ಕಿವಿಯೋಲೆ ಇದೆಯಲ್ಲ? ಅದನ್ನೂ ಕೊಡು’ ಎಂದರು. ಅದನ್ನೂ ಆಕೆ ಕೊಟ್ಟಳು. ಸ್ವಲ್ಪ ಅಳುಕನ್ನು ಗಮನಿಸಿದ ಗಾಂಧೀಜಿಯವರು “ಅಮ್ಮನ ಬಳಿ ಕೇಳಿದ್ದೆಯಾ? ಯಾವುದನ್ನು ಕೊಡಲು ಹೇಳಿದ್ದಾರೆ?’ ಎಂದು ಪ್ರಶ್ನಿಸಿದಾಗ, “ಬಳೆಗಳನ್ನು ಕೊಡಲು ಹೇಳಿದ್ದಾಳೆ’ ಎಂದಳು. “ಭಾರತ ಬಡದೇಶ. ಎಲ್ಲರಿಗೂ ಚಿನ್ನಾಭರಣ ಧರಿಸುವ ಅವಕಾಶ ಇರುವುದಿಲ್ಲ. ಆದ್ದರಿಂದ ಚಿನ್ನದ ವ್ಯಾಮೋಹ ಇರಬಾರದು’ ಎಂದು ಸಲಹೆ ಇತ್ತ ಗಾಂಧೀಜಿಯವರು ಆಕೆಯಿಂದ ಅನಗತ್ಯ ಚಿನ್ನ ಧರಿಸುವುದಿಲ್ಲ ಎಂಬ ಮಾತು ಪಡೆದು ಚಿನ್ನದ ಬಳೆಗಳನ್ನು ಮಾತ್ರ ಇರಿಸಿಕೊಂಡು ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ಮರಳಿಸಿದರು.

ನಿರುಪಮಾ ಓರ್ವ ಸಾಮಾನ್ಯ ಬಾಲಕಿ. ಗಾಂಧೀಜಿ ಆಗಲೇ ದೇಶದ ಮೂಲೆಮೂಲೆಗಳಲ್ಲಿ ಜನಪ್ರಿಯರಾದ ಓರ್ವ ನಾಯಕ. ಹೀಗಿರುವಾಗ ನಿರುಪಮಾ ಗಾಂಧೀಜಿಯವರಿಗೆ ಪತ್ರ ಬರೆಯುತ್ತಿದ್ದಳು, ಬಿಡುವಿಲ್ಲದ ಪ್ರವಾಸದ ನಡುವೆಯೂ ಗಾಂಧೀಜಿ ಈಕೆಗೆ ಮರು ಉತ್ತರ ಬರೆದಿರುವುದು ಅಚ್ಚರಿ ತರುತ್ತದೆ.

ಉಡುಪಿಗೆ ಬಂದು ಮೂರು ತಿಂಗಳ ಬಳಿಕ ಅಂದರೆ ಮೇ 23, 1934 ರಂದು ಗಾಂಧೀಜಿಯವರು ಬರೆದ ಪತ್ರದ ಪ್ರತಿ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಗ್ರಹದಲ್ಲಿದೆ. ಒಟ್ಟು ಮೂರು ಪತ್ರಗಳು ಬಂದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕೇಂದ್ರದ ಸಂಯೋಜಕ ಯು.ವಿನೀತ್‌ ರಾವ್‌.

“ಚಿ| ನಿರುಪಮಾ, ನಿನ್ನ ಪತ್ರ ತಲುಪಿದೆ. ನಿನ್ನ ಭಾಷೆ ಚೆನ್ನಾಗಿದೆ. ಒಡವೆಗಳು ಅನಗತ್ಯ. ಅವು ಹುಡುಗಿಯರಲ್ಲಿ ಅವರ ಬಾಹ್ಯ ಸೌಂದರ್ಯದ ಬಗ್ಗೆ ಅವರಲ್ಲಿಯೇ ಆಕರ್ಷಣೆ ಉಂಟಾಗಲು ಕಾರಣವಾಗುತ್ತದೆ. ಬಡತನವಿರುವ ದೇಶದಲ್ಲಿ ಒಡವೆಗಳ ಬಗ್ಗೆ ಕಡಿಮೆ ಆಕರ್ಷಣೆ ಇರಬೇಕು. ಈ ಎಲ್ಲ ಕಾರಣಗಳಿಂದ ನಾನು ಒಡವೆಗಳ ವಿರೋಧಿ’ ಎಂದು ಗಾಂಧೀಜಿ ಅಂಚೆಕಾರ್ಡ್‌ನಲ್ಲಿ ಚುಟುಕಾಗಿ ಬರೆದಿದ್ದಾರೆ. ವಾಕ್ಯ ರಚನೆ ಗಮನಿಸಿದಾಗ ಮೊದಲ ಪತ್ರ ಇದಾಗಿರಬಹುದು ಎಂದೆನಿಸುತ್ತದೆ.

ಒಡವೆಯ ದುಷ್ಪರಿಣಾಮಗಳು
ಗಾಂಧೀಜಿಯವರ ಪ್ರಕಾರ ಒಡವೆ ಇಲ್ಲದವರ ನಡುವೆ ಒಡವೆ ಧರಿಸಿದವರಿಗೆ ಒಂದು ರೀತಿಯ ಹೆಚ್ಚುಗಾರಿಕೆ (ಅಹಂಕಾರ) ಬರುತ್ತದೆ. ಒಡವೆಗಳು ಧರಿಸಿದವರಿಗೆ ಅವು ವ್ಯಾಮೋಹ ಉಂಟುಮಾಡುತ್ತದೆ. ಇದರಿಂದ ಇನ್ನೂ ಬೇಕು, ಮತ್ತೂ ಬೇಕು ಎಂಬ ಹಪಹಪಿಸುವಿಕೆ ಸೃಷ್ಟಿಯಾಗುತ್ತದೆ. ಕೊನೆಗೆ ಒಡವೆ ಸಂಗ್ರಹಿಸುವುದು ಜೀವನದ ಪರಮ ಗುರಿಯಾಗುತ್ತದೆ. ಬಡವರ ದೇಶವಾಗಿರುವುದರಿಂದ ದೊಡ್ಡ ಸಂಖ್ಯೆಯ ಬಡವರು ಆಭರಣ ಹೇರಿಕೊಂಡವರನ್ನು ಕಂಡು ಕೊರಗುತ್ತಾರೆ. ಇದು ಸಾಮಾಜಿಕ ಅಸಂತುಷ್ಟಿಗೆ ಕಾರಣವಾಗುತ್ತದೆ.

ಕೇಂದ್ರೀಕರಣ-ವಿಕೇಂದ್ರೀಕರಣ
ಚಿನ್ನವನ್ನು ಕೊಡುವವರು ಯಾರು? ಇದ್ದವರು ಮಾತ್ರ ಕೊಡುತ್ತಾರೆ. ಒಂದರ್ಥದಲ್ಲಿ ಗಾಂಧೀಜಿ ಈ ಮೂಲಕ ಇದ್ದವರಿಂದ ಪಡೆದು ಅದರ ದ್ರವ್ಯವನ್ನು ಇಲ್ಲದವರಿಗೆ ಹಂಚಿದರು. ನಿರುಪಮಾ ನಾಯಕ್‌ ಬಳಿಕ ವೈದ್ಯೆಯಾಗಿ ದೊಡ್ಡ ಹುದ್ದೆಯಲ್ಲಿದ್ದರೂ ಜೀವನದ ಕೊನೆಯವರೆಗೂ ತೀರಾ ಅಗತ್ಯದ ಆಭರಣ ಹೊರತುಪಡಿಸಿದರೆ ಮತ್ತೇನನ್ನೂ ಧರಿಸದೆ ಗಾಂಧೀಜಿಯವರ ಮಾತನ್ನು ಉಳಿಸಿಕೊಂಡಿದ್ದರು.

ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

police

Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.