ದೇವರ ಕತೆಗಳು


Team Udayavani, Aug 27, 2017, 7:05 AM IST

devara-kathe.jpg

ದೇವರ ಸಂಕಟ
ಒಂದು ದಿನ ಒಬ್ಬ ನದೀ ತೀರದಲ್ಲಿ ಉದಾಸೀನನಾಗಿ ಕೂತು ಆಗಸವನ್ನು ನೋಡುತ್ತಿದ್ದ. ದೇವರು ಅವನ ಪರಿಚಯ ಮಾಡಿಕೊಂಡ. ಅವನು ನಗರಕ್ಕೆ ಬಂದಿರುವ ಸರ್ಕಸ್‌ ಕಂಪೆನಿಯ ಜೋಕರ್‌, ನಗಿಸುವುದು ಅವನ ಕೆಲಸ ಎಂಬುದು ದೇವರಿಗೆ ತಿಳಿಯಿತು.

ಅವನು ದೇವರೆದುರು ತನ್ನ ಕಳವಳವನ್ನು ವ್ಯಕ್ತಪಡಿಸಿದ, “”ಸ್ವಾಮಿ, ಈಚೆಗೆ ಜನ ನಗುವುದೇ ಇಲ್ಲ. ಮಕ್ಕಳು ಮಾತ್ರ ನಗುತ್ತವೆ. ಆದರೆ ಮಕ್ಕಳು ನಕ್ಕರೆ ಸರ್ಕಸ್‌ ನಡೆಯುವುದಿಲ್ಲ. ನನ್ನ ಜೀವನಕ್ಕೆ ಸಂಚಕಾರ ಬಂದಿದೆ. ಒಮ್ಮೆ ನಾನು ಪ್ರೇಕ್ಷಕರಿಗೆ ನಗಿಸಲು ತುಂಬಾ ಪ್ರಯತ್ನಿಸಿದೆ. ಆದರೆ ಯಾರೂ ನಗಲಿಲ್ಲ. ಆಗ ನಾನು ಭಯದಿಂದ ಅತ್ತೆ. ನಾನು ಅತ್ತಾಗ ಪ್ರೇಕ್ಷಕರ ಕಡೆಯಿಂದ ನಗುವಿನ ಅಲೆಯೇ ಹರಿಯಿತು. ಕೆಲವರು ಹೊಟ್ಟೆ ನೋಯುವಷ್ಟು ನಕ್ಕರು. ಅಂದಿನಿಂದ ಕಂಪೆನಿಯ ಮಾಲಿಕ “ಪ್ರೇಕ್ಷಕರನ್ನು ನಗಿಸಲು ನೀನು ನಿತ್ಯ ಅಳು’ ಎಂದ. ನಾನೀಗ ಪ್ರೇಕ್ಷಕರನ್ನು ನಗಿಸಲು ಅಡ್ಡಾಡಿ ಮತ್ತು ಅಸಂಬದ್ಧ ಪ್ರಯತ್ನ ಮಾಡಿ ಅಳಬೇಕಾಗುವುದು ಎಂದು ಯೋಚಿಸಿಯೇ ನನಗೆ ಅಳು ಬರುತ್ತದೆ”
ಆಗ ದೇವರು ಜೋರಾಗಿ ನಕ್ಕರು.

“”ಆದರೆ, ಸ್ವಾಮಿ ಕಾಲ ಬದಲಾಗುತ್ತಿದೆ. ಜನರಿಗೆ ನಾನು ಅತ್ತರೂ ನಗು ಬರುವುದಿಲ್ಲ. ಇನ್ನು ನನ್ನ ಜೀವನ ಹೇಗೆ ನಡೆಯುತ್ತದೆಯೋ?” ಎಂದು ಅವನು ರೋದಿಸಿದ.

ದೇವರು ಅವನಿಗೆ ಸಮಾಧಾನ ಮಾಡಿದ. ಆದರೆ ಅವನು ಮತ್ತೂ ಅಳುತ್ತಾ ಹೇಳಿದ, “”ನಾನು ಬಡವ. ಬಡವ ಯಾರನ್ನೂ ನಗಿಸಲಾರ, ಯಾರನ್ನೂ ಅಳಿಸಲಾರ. ಯಾರನ್ನಾದರೂ ನಗಿಸಬೇಕಾದರೆ ನಾನು ಶ್ರೀಮಂತನಾಗಬೇಕಾಗುತ್ತದೆ”.

ದೇವರು ಅವನಿಗೆ “ತಥಾಸ್ತು’ ಎಂದು ಆಶೀರ್ವದಿಸಬೇಕೆಂದಿದ್ದ, ಆದರೆ ಆಗಲೇ ಅವನು ಮತ್ತೆ ಹೇಳಿದ, “”ನನಗೆ ನನ್ನ ಈಗಿನ ಪರಿಸ್ಥಿತಿಗಿಂತಲೂ ಶ್ರೀಮಂತಿಕೆಯ ಬಗ್ಗೆ ತುಂಬಾ ಅಸಹನೆ ಇದೆ” ಎಂದು ಹೇಳಿ ಮತ್ತಷ್ಟು ರೋದಿಸಿದ !
ದೇವರು ಏನು ಮಾಡುವುದೆಂದು ತೋಚದೆ ನಿಂತ.

ದೇವರ ತಪ್ಪು 
ಒಂದು ದಿನ ದೇವರು ಒಂದು ಅಂಗಡಿಯ ಹೊರಗೆ ಕೋಕಾ ಕೋಲಾ ಕುಡಿಯುತ್ತಿದ್ದ. ನಿಜವಾದ ಭಕ್ತನಿಗೆ, ಇವನು ದೇವರು ಎಂದು ಗುರುತು ಹಿಡಿಯುವಲ್ಲಿ ತಡವಾಗಲಿಲ್ಲ. ಅವನು ಆಶ್ಚರ್ಯದಿಂದ ಹೇಳಿದ, “”ನೀವು ದೇವರಾಗಿ ವಿದೇಶಿ ಪೇಯ ಕೋಕಾ-ಕೋಲಾವನ್ನು ಕುಡಿಯುತ್ತಿದ್ದೀರ?”

“”ಭಕ್ತ, ನಾನು ಪೆಪ್ಸಿಯನ್ನೂ ಕುಡಿದಿದ್ದೇನೆ” ಎಂದ ದೇವರು.
“”ಪ್ರಭು, ನಿಮಗೆ ಇದೆಲ್ಲಾ ಶೋಭೆ ತರುವಂಥದ್ದಲ್ಲ”. ಭಕ್ತ ತನ್ನ ಕಿವಿಗಳನ್ನು ಹಿಡಿದುಕೊಂಡ.
“”ಭಕ್ತನಾಗಿ ನೀನು ಕುಡಿದು ನನಗೆ ಆಸೆ ತೋರಿಸುತ್ತೀಯ. ಅಲ್ಲದೆ ನನಗೆ ವಿದೇಶಿ ಕೂಲ್‌ ಡ್ರಿಂಕ್ಸ್‌ ಕುಡಿಯುವುದು ಶೋಭೆ ತರುವಂಥದ್ದಲ್ಲ ಅಂತ ಹೇಳ್ತೀಯ?”

ಈಗ ಭಕ್ತ ಹೇಳಿದ, “”ಆದರೆ ನಾವು ಮನುಷ್ಯರು, ನಮ್ಮಿಂದ ಇಂಥ ತಪ್ಪುಗಳಾದರೂ ತೊಂದರೆಯಿಲ್ಲ”.
“”ಮೂರ್ಖ, ಎಷ್ಟೇ ಆದರೂ ನಾನು ನಿಮ್ಮ ದೇವರಲ್ಲವೇ!” ಎಂದ ದೇವರು.

ದೇವರ ಸತ್ಸಂಗ
ದೇವರು ಸತ್ಸಂಗದಲ್ಲಿ ಕೂತು ತನ್ನ ಮಹಿಮೆಯ ಗುಣಗಾನವನ್ನು ಕೇಳುತ್ತಿದ್ದ. ಕೇಳಿ ಕೇಳಿ ಮನಸ್ಸಿನಲ್ಲಿ ಖುಷಿಪಡುತ್ತಿದ್ದ.
“”ದೇವರು ಕಣ ಕಣದಲ್ಲೂ ಇದ್ದಾನೆ…” ಎಂದು ಸನ್ಯಾಸಿ ಮುಂದುವರೆಸಿದ, “”ಭೂಮಿ ದುಷ್ಟರಿಂದ ತುಂಬಿದೆ”
ಒಬ್ಬ ದುಷ್ಟ ಆ ಸಭೆಯಲ್ಲಿದ್ದ. ಅವನು ಎಲ್ಲರನ್ನು ಗಮನಿಸುತ್ತಾ ಹೇಳಿದ, “”ಮಧ್ಯದಲ್ಲಿ ಮಾತನಾಡುತ್ತಿರುವುದಕ್ಕೆ ಕ್ಷಮಿಸಿ. ಆದರೆ ನನಗೊಂದು ಕುತೂಹಲವಿದೆ. ನೀವು ದೇವರು ಕಣ ಕಣದಲ್ಲೂ ಇದ್ದಾನೆ ಎಂದು ಹೇಳುತ್ತೀರ. ಹಾಗಾದರೆ ನಾವು ದೇವರನ್ನೇ ತಿನ್ನುತ್ತೇವೆ, ದೇವರನ್ನೇ ಕುಡಿಯುತ್ತೇವೆ, ದೇವರನ್ನೇ…

ಈ ಮಾತುಗಳನ್ನು ಕೇಳುತ್ತಲೇ ದೇವರಿಗೂ ನಗು ಬಂತು. ಆ “ದುಷ್ಟ’ನೊಂದಿಗೆ ದೇವರನ್ನೂ ಹೊರ ಹಾಕಲಾಯಿತು.

ದೇವರ ಖುಷಿ
ಭೂಲೋಕದಲ್ಲಿ ಮಕ್ಕಳ ಕೈಗಳಲ್ಲಿ ಕೊಳಲುಗಳಿರಬಹುದೆಂದು ದೇವರು ಕಲ್ಪಿಸಿಕೊಳ್ಳುತ್ತಿದ್ದ.
ಆದರೆ, ಮಕ್ಕಳ ಕೈಗಳಲ್ಲಿ ಪಿಸ್ತೂಲ್‌ಗ‌ಳಿರುವುದನ್ನು ದೇವರು ನೋಡಿದ. ಇವುಗಳನ್ನು ಅಮಿತಾಭ್‌ ಬಚ್ಚನ್‌ ಕೊಟ್ಟಿದ್ದಾನೆ ಎಂಬುದನ್ನು ತಿಳಿದ ಮೇಲೆ ಅವನ ವಿಚಾರಗಳಲ್ಲಿ ಈ ರೀತಿ ಬದಲಾವಣೆಗಳಾಯಿತು-
“ಇಷ್ಟು ಶತಮಾನಗಳ ನಂತರ ಮನುಷ್ಯನಲ್ಲಿ ಇಂಥ ಅಲ್ಪಸ್ವಲ್ಪ ಅಭಿವೃದ್ಧಿಯಾಗುವುದು ಆವಶ್ಯಕ’

ದೇವರ ಗಡ್ಡ
ದೇವರು ಒಂದು ದಿನ ಚಾಂದಿನಿ ಚೌಕದಲ್ಲಿ ಅಡ್ಡಾಡುತ್ತಿದ್ದ. ಎಲ್ಲಿಂದಲೋ ಒಂದು ಹುಲ್ಲುಕಡ್ಡಿ ಹಾರಿ ಬಂದು ಅವನ ಗಡ್ಡದಲ್ಲಿ ಸಿಲುಕಿಕೊಂಡಿತು. 

ಕಡೆಗೆ ಏನಾಯಿತೆಂದರೆ, ಈ ರೂಪದಲ್ಲಿ ದೇವರನ್ನು ನೋಡಿದವರು ತಮ್ಮ ಜೇಬುಗಳನ್ನು ತಡಕಾಡಿಕೊಂಡು, ತಮ್ಮ ಜೇಬುಗಳನ್ನು ಕತ್ತರಿಸಲಾಗಿಲ್ಲ ತಾನೇ ಎಂದು ನೋಡಿಕೊಳ್ಳತೊಡಗಿದ್ದರು. 

ಎಲ್ಲವೂ ಸುರಕ್ಷಿತವಾಗಿರುವುದನ್ನು ಗಮನಿಸಿದ ಮೇಲೆ ದೇವರಿಗೆ ಧನ್ಯವಾದ ಅರ್ಪಿಸಿದರು- ಆ ದೇವರು ಅವರ ಎದುರಿಗೇ ಇದ್ದ ! ಆದರೆ, ಅವನ ಗಡ್ಡದಲ್ಲಿ ಹುಲ್ಲುಕಡ್ಡಿ ಕಂಡು “ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ’ ಎಂಬ ಗಾದೆಯಂತೆ ದೇವರನ್ನು ಕಳ್ಳ ಎಂದೇ ತಿಳಿಯುತ್ತಿದ್ದರು.

ದೇವರ ಸಮಾಧಾನ
“”ಟಿ.ವಿ. ಖರೀದಿಸಿ, ಮನೆಯಲ್ಲಿ ಕೂತು ಶ್ರೀಮಂತರಾಗಿರಿ”- ಹೀಗೆಂದು ಒಂದು ಅಂಗಡಿಯೆದುರು ಬೋರ್ಡ್‌ ನೇತುಹಾಕಲಾಗಿತ್ತು.

ದೇವರಿಗೆ ಈ ಜಾಹೀರಾತು ರೋಚಕವೆಂದು ಅನ್ನಿಸಿತು. “ನನ್ನ ಭಕ್ತರಿಗೆ ಇದು ತಿಳಿಯುವಂತೆ ಮಾಡಿ, ಅವರಿಗೆ ಪ್ರಯೋಜನಕಾರಿಯಾಗಿಸಬೇಕು’ ಎಂದು ದೇವರು ಯೋಚಿಸಿದ.

ಒಳಗೆ ಇಣುಕಿದರೆ ಅಲ್ಲಿ ಉದ್ದನೆಯ “ಕ್ಯೂ’ ಇತ್ತು. ನುಗ್ಗಾಟ-ತಳ್ಳಾಟವೂ ಸಾಗಿತ್ತು. ದೇವರು ಒಮ್ಮೆ ಸುತ್ತಮುತ್ತ ದೃಷ್ಟಿ ಹರಿಸಿದ, ಅಲ್ಲಿ ಎಲ್ಲರೂ ಅವನ ಭಕ್ತರೇ ಇದ್ದರು.

ತನಗಿಂತ ತನ್ನ ಭಕ್ತರು ಹೆಚ್ಚು ಬುದ್ಧಿವಂತರಿದ್ದಾರೆ ಎಂದು ಅವನಿಗೆ ತುಂಬ ಸಮಾಧಾನವೆನ್ನಿಸಿತು.

ಮೂಲ: ವಿಷ್ಣು ನಾಗರ್‌

ಅನು.: ಡಿ. ಎನ್‌. ಶ್ರೀನಾಥ್‌

ಟಾಪ್ ನ್ಯೂಸ್

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

1-jpc

One Nation, One Election: ಸಂಸದರಿಗೆ ಜೆಪಿಸಿ ಸಭೆಯಲ್ಲಿ 52 ಕೆ.ಜಿ. ತೂಕದ ಸೂಟ್‌ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

modi (4)

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.