ಚಿನ್ನದ ಸರ


Team Udayavani, Dec 3, 2017, 6:20 AM IST

sara.jpg

ಇಡಿ ಗೋಧಿಯನ್ನು ಹಿಟ್ಟು ಮಾಡಿಸಲೆಂದು ರುದ್ರಮ್ಮ, ಐದು ಕೆಜಿ ಗೋಧಿ ತುಂಬಿದ್ದ ಡಬರಿಯನ್ನು ಒಂದು ಚೀಲದೊಳಗಿರಿಸಿಕೊಂಡು, “ಶಾಂತಾ, ಬಾಗುÉ ಹಾಕ್ಕೋಮ್ಮ’ ಎಂದು ಒಳಕೋಣೆಯಲ್ಲಿದ್ದ ಸೊಸೆಗೆ ಕೂಗಿ ಹೇಳಿ ಮನೆಯಿಂದ ಹೊರಬಿದ್ದರು.

ಎರಡು ದಿನಗಳ ಮೊದಲೇ ಅಂಗಡಿಯಿಂದ ಗೋಧಿ ತಂದು, ಮೊರದಲ್ಲಿ ಕೇರಿ, ಗೋಧಿಯಲ್ಲಿ ಇದ್ದಿರಬಹುದಾದ ಸಣ್ಣ ಕಲ್ಲು, ಅತೀ ಸಣ್ಣ ಮಣ್ಣಿನ ಹೆಂಟೆಗಳನ್ನು ಆರಿಸಿ ತೆಗೆದು, ಧೂಳು ತೆಗೆಯಲು ಗೋಧಿಯನ್ನು ತೊಳೆದು, ತಲೆ ಕಾದು ಹೋಗುವಂತಿದ್ದ ಬಿಸಿಲಿನಲ್ಲಿ ಒಂದು ದಿನವಿಡೀ ಒಣಗಿಸಿ ದೊಡ್ಡ ಡಬರಿಯಲ್ಲಿ ತುಂಬಿಟ್ಟಿದ್ದರು. ಗೋಧಿ ಹಿಟ್ಟಿಲ್ಲದಿದ್ದರೆ ಅವರ ಮನೆಯಲ್ಲಿ ನಡೆಯುತ್ತಲೇ ಇರಲಿಲ್ಲ; ಯಾಕೆಂದರೆ, ದಿನಾ ರಾತ್ರಿ ಮನೆಮಂದಿಯೆಲ್ಲರಿಗೂ ಚಪಾತಿಯೇ ಆಗಬೇಕಿತ್ತು. ಇದರ ಜೊತೆಗೆ ಊರಿಂದ ನೆಂಟರು ಬರುವವರಿದ್ದರು. ಹಾಗಾಗಿ ಹಿಟ್ಟು ಮಾಡಿಸುವ ಕೆಲಸವೊಂದನ್ನು ಬೇಗ ಮಾಡಿ ಮುಗಿಸಿಕೊಳ್ಳುವ ತರಾತುರಿಯಲ್ಲಿ ರುದ್ರಮ್ಮ ಮಿಲ್ಲಿನ ಕಡೆ ಹೊರಟರು.

ಮಿಲ್ಲನ್ನು ತಲುಪಿದಾಗ, ಅದಿನ್ನೂ ಬಾಗಿಲು ತೆಗೆಯದ್ದನ್ನು ಕಂಡು, ಛೆ! ಎಂದುಕೊಳ್ಳುತ್ತ ಅಲ್ಲಿಯೇ ಇದ್ದ ಕಟ್ಟೆಯ ಮೇಲೆ ಕೈ ಭಾರವನ್ನು ಇಳಿಸಿ, ಮಿಲ್‌ ಬಾಗಿಲು ತೆರೆಯುವುದನ್ನೇ ಕಾಯುತ್ತ ಕುಳಿತರು ರುದ್ರಮ್ಮ.
ಅದೇ ಹೊತ್ತಿಗೆ, ಅಲ್ಲಿಗೆ ಮತ್ತೂಬ್ಬ ಹೆಂಗಸು ಸಣ್ಣ ಡಬರಿ ಹಿಡಿದುಕೊಂಡು ಬಂದವಳು,
“”ಎಷ್ಟು ಹೊತ್ತಿಗೆ ಮಿಲ್‌ ಬಾಗುÉ ತೆಗೀತಾರೆ?” ಎಂದು ವಿಚಾರಿಸಿದಳು.

“”ಅದೇ ಇಷ್ಟು ಹೊತ್ತಿಗೆ ತೆಗೀಬೇಕಿತ್ತು. ಇನ್ನೂ ಯಾಕೆ ತೆಗೆದಿಲ್ವೋ ಗೊತ್ತಿಲ್ಲ. ಬನ್ನಿ ಇÇÉೇ ಕೂತ್ಕೊಳಿ” ಎನ್ನುತ್ತ ರುದ್ರಮ್ಮ ತುಸು ಸರಿದು, ಆ ಅಪರಿಚಿತ ಹೆಂಗಸಿಗೆ ಕಟ್ಟೆಯಲ್ಲಿ ಜಾಗ ಮಾಡಿಕೊಟ್ಟರು.

ಕುತ್ತಿಗೆಯ ಬೆವರನ್ನು ಸೆರಗಿಂದ ಒರೆಸಿಕೊಳ್ಳುತ್ತ ಆಕೆಯೂ ಅಲ್ಲಿ ಕೂತಳು. ತನ್ನ ಹೆಸರು ಲತಾ ಎಂದೂ, ಯಾವಾಗಲೂ ತಾನು ತನ್ನ ಮನೆಯ ಬಳಿ ಇರುವ ಮಿಲ್ಲಿನÇÉೇ ಹಿಟ್ಟು ಮಾಡಿಸುವುದೆಂದೂ, ಆದರೆ ಇಂದು ಅಲ್ಲಿ ಮೆಶಿನ್‌ ಹಾಳಾಗಿರುವ ಕಾರಣ ಇಲ್ಲಿಗೆ ಬಂದುದಾಗಿಯೂ ಹೇಳಿದಳು. ಹಾಗೆಯೇ ಇಬ್ಬರೂ ಮಾತಾಡುತ್ತ ಅರ್ಧ ಗಂಟೆ ಕಳೆದರೂ ಮಿಲ್ಲಿನ ಬಾಗಿಲು ತೆಗೆಯುವ ಸೂಚನೆ ಕಂಡು ಬರಲಿಲ್ಲ.

ಇನ್ನೇನು ಮಾಡೋದು? “”ಇÇÉೇ ಹತ್ರ ಪರಿಚಯದವರ ಮನೆ ಇದೆ. ಡಬರಿ ಅಲ್ಲಿಟ್ಟು ಮನೆಗೆ ಹೋಗ್ತಿàನಿ. ಆಮೇಲೆ ಬಂದು ನೋಡಿದರಾಯ್ತು” ಎನ್ನುತ್ತಾ ರುದ್ರಮ್ಮ ಎದ್ದರು.

ತಕ್ಷಣ ಲತಾ, “”ಅಯ್ಯೋ ಯಾಕೆ ವಾಪಾಸ್‌ ಹೋಗ್ತಿàರ? ಇÇÉೇ ಹತ್ರ ದೇವಸ್ಥಾನಕ್ಕೆ ಹೋಗಿ ಬರೋಣ ಬನ್ನಿ. ತಿರುಗಿ ಬರುವಾಗ ಮಿಲ್‌ ಬಾಗಿಲು ತೆಗೆದಿದ್ರೂ ತೆಗೀಬಹುದು” ಎಂದಳು.

ರುದ್ರಮ್ಮ, “ಹಾಂ ಹೂಂ’ ಎಂದು ಅನುಮಾನಿಸುತ್ತಿದ್ದುದನ್ನು ಕಂಡು ಲತಾ, “”ದೇವಸ್ಥಾನಕ್ಕೆ ಬರಕ್ಕೆ ಯಾಕಮ್ಮಾ ಅಷ್ಟು ಯೋಚನೆ ಮಾಡ್ತೀರಾ? ಹೋಗಕ್ಕೆ ಹತ್ತು ನಿಮಿಷ, ಬರಕ್ಕೆ ಹತ್ತು ನಿಮಿಷ ಅಷ್ಟೇ. ಒಂದ್ಕೆಲಸ ಮಾಡೋಣ. ಇಬ್ರದ್ದೂ ಡಬರಿ ತೆಗೊಂಡು ಹೋಗಿ ನಿಮ್ಮ ಪರಿಚಯದವರ ಮನೇಲಿ ಇಡೋಣ. ವಾಪಸ್‌ ಇಬ್ರೂ ಇಲ್ಲಿಗೇ ಬರೋಣ ಆಯ್ತಾ?” ಎಂದಳು.

ಅವಳ ಮಾತುಗಳನ್ನು ಕೇಳಿದ ರುದ್ರಮ್ಮ ಅರೆಮನಸ್ಸಿನಿಂದಲೇ ಆಕೆಯೊಡನೆ ದೇವಸ್ಥಾನಕ್ಕೆ ಹೊರಟರು. ಅಲ್ಲಿ ದೇವರ ಗುಡಿಗೆ ಮೂರು ಸುತ್ತು ಬಂದು ನಮಸ್ಕರಿಸಿ, ತೀರ್ಥಪ್ರಸಾದ ತೆಗೆದುಕೊಂಡು ತಿರುಗಿ ಹೊರಟರು.
ಚಪ್ಪಲಿ ಹಾಕಿಕೊಂಡು ಎರಡು ಹೆಜ್ಜೆಗಳನ್ನು ಇಟ್ಟಿದ್ದರೋ ಇಲ್ಲವೋ ಆಗಲೇ ಇನ್ನೊಬ್ಬ ಮಹಿಳೆ ಗಾಬರಿ, ಭಯದಿಂದ ಅವರೆಡೆಗೆ ಓಡಿದಂತೆ ಬಂದಳು.

ಒಂದು ನಿಮಿಷ “ನಿಲ್ಲಿ’ ಎಂದು ಇವರನ್ನು ಉದ್ದೇಶಿಸಿ ಹೇಳಿದವಳು, “”ಈಗ ಸ್ವಲ್ಪ ಹೊತ್ತಿಗೆ ಮುಂಚೆ ಗುಡಿಗೆ ಬಂದು ಹೋದೆ. ಮನೆಯಲ್ಲಿ ಏನಕ್ಕೋ ನೋಡಿಕೊಂಡರೆ ಪರ್ಸ್‌ ಕಾಣಿಸಲಿಲ್ಲ. ನಿಮಗೇನಾದರೂ ಸಿಕ್ಕಿದೆಯಾ?” ಎಂದಳು.
“”ಇಲ್ಲಮ್ಮ, ನಮಗೇನು ಸಿಕ್ಕಿಲ್ಲ. ಇನ್ನೊಂದು ಸಲ ಇÇÉೇ ಎÇÉಾ ನೋಡಿ. ಇÇÉಾಂದ್ರೆ ಮನೆಯಲ್ಲೂ ಹುಡುಕಿ ನೋಡಿ, ಸಿಕ್ಕಿದ್ರೂ ಸಿಗಬಹುದು” ಎಂದರು ರುದ್ರಮ್ಮ.

ಆ ಮಹಿಳೆ, “”ಅಯ್ಯೋ ಎÇÉಾ ಕಡೆ ನೋಡಿದಿನಮ್ಮ. ಸಿಕ್ಕಿಲ್ಲ. ಒಂದ್ಕೆಲಸ ಮಾಡಿ, ನೀವು ನನ್ನ ಪರ್ಸ್‌ ನಿಮಗೆ ಸಿಕ್ಕಿಲ್ಲ ಅಂತ ಪ್ರಮಾಣ ಮಾಡಿ ಹೇಳಿ” ಎಂದಳು.

“”ಅಯ್ಯೋ ಇದೊಳ್ಳೇ ಕಥೆಯಾಯ್ತಲ್ಲ. ನಿನ್ನ ಪರ್ಸ್‌ ನಮಗೆ ಯಾಕಮ್ಮಾ ತಾಯಿ? ನಾವು ಈಗ ತಾನೇ ಗುಡಿಗೆ ಬಂದಿದ್ದು. ನೀವು ಬಂದು ಹೋದ ಮೇಲೆ ಎಷ್ಟು ಜನರು ಇಲ್ಲಿಗೆ ಬಂದು ಹೋದರೋ? ಯಾರಿಗೆ ಸಿಕ್ಕಿದಿಯೋ?” ಎನ್ನುತ್ತಾ, “”ನಡಿಯಮ್ಮ ಲತಾ, ನಾವು ವಾಪಸ್‌ ಹೋಗೋಣ” ಎಂದರು ರುದ್ರಮ್ಮ.

ತಕ್ಷಣ ಲತಾ, “”ಇರಿ ರುದ್ರಮ್ಮ, ಸುಮ್ನೆ ಇವಳ ಹತ್ರ ಯಾಕೆ ಮಾತು ಕೇಳ್ಳೋದು? ಆಣೆ ಮಾಡಿ ಬಿಡೋಣ” ಎಂದು, “”ನೋಡಮ್ಮ ನಾನು ನನ್ನ ತಾಳಿಸರ ಮುಟ್ಟಿ ಆಣೆ ಮಾಡ್ತೀನಿ. ನನಗಂತೂ ನಿನ್ನ ಪರ್ಸ್‌ ಸಿಕ್ಕಿಲ್ಲ, ನಾನಂತೂ ತೆಗೊಂಡಿಲ್ಲ” ಎನ್ನುತ್ತ ತನ್ನ ತಾಳಿಯನ್ನು ಹಿಡಿದು ಪ್ರಮಾಣ ಮಾಡಿದಳು.

“”ನೀವು ಪ್ರಮಾಣ ಮಾಡಿ ರುದ್ರಮ್ಮ, ಸುಮ್ನೆ ಯಾಕೆ ಬೇಕು ಇವರ ಸಹವಾಸ?” ಎಂದಳು.
ಆಗ ರುದ್ರಮ್ಮ ತಾನೂ ತನ್ನ ತಾಳಿಸರವನ್ನು ಹಿಡಿದು ಪ್ರಮಾಣ ಮಾಡಿದ ಮೇಲೆಯೇ ಆ ಮಹಿಳೆ ಅಲ್ಲಿಂದ ಹೋಗಿ ಅಲ್ಲಿ ಇಲ್ಲಿ ಹುಡುಕಲು ಶುರು ಮಾಡಿದಳು.

ಇತ್ತ ಲತಾ, “”ನೋಡಿ ರುದ್ರಮ್ಮ, ತಾಳಿಸರದ ಮೇಲೆ ಯಾರೇ ಆಗಲಿ ಆಣೆ ಮಾಡಿದರೆ, ತಕ್ಷಣನೇ ಅದನ್ನ ಕತ್ತಿಗೆ ಹಾಕಬಾರದು. ತೆಗೆದು ಮನೆಯಲ್ಲಿ ದೇವರ ಮುಂದೆ ಒಂದು ಗಂಟೆ ಇಟ್ಟು, ಆಮೇಲೆ ಹಾಕ್ಕೋಬೇಕು. ಇÇÉಾಂದ್ರೆ ಗಂಡಂಗೆ ಅಪಾಯ ಆಗುತ್ತೆ. ಅದಿಕ್ಕೆ ನನ್ನ ತಾಳಿಸರ ತೆಗೆದು ಕೊಡ್ತೀನಿ, ಒಂಚೂರು ನನ್ನ ಸೆರಗಿಗೆ ಕಟ್ಟಿಬಿಡಿ” ಎಂದು ಹೇಳಿ ಸರವನ್ನು ರುದ್ರಮ್ಮನ ಕೈಗೆ ಕೊಟ್ಟು, ತಾನು ಗುಡಿಯ ಕಡೆ ತಿರುಗಿ ಕಣ್ಣು ಮುಚ್ಚಿ ಕೈ ಮುಗಿದು ನಿಂತಳು.
ನಂತರ, “”ನಿಮ್ಮದೂ ಕೊಡಿ ರುದ್ರಮ್ಮ, ನಿಮ್ಮ ಸೆರಗಿಗೆ ಕಟಿ¤àನಿ” ಎಂದಳು ಲತಾ.

ರುದ್ರಮ್ಮ ಕೂಡ ಲತಾನ ಹಾಗೆಯೇ ಗುಡಿಯ ಕಡೆ ತಿರುಗಿ ಕಣ್ಣುಮುಚ್ಚಿ ಕೈಮುಗಿದು ನಿಂತು ಸೆರಗಿಗೆ ಸರವನ್ನು ಕಟ್ಟಿಸಿಕೊಂಡರು.

ಆಮೇಲೆ ಇಬ್ಬರೂ ಮಿಲ್ಲಿನ ಬಾಗಿಲು ತೆಗೆದಿದೆಯೋ ಇಲ್ಲವೋ ನೋಡಲು ಬೇಗ ಬೇಗನೆ ಮಿಲ್ಲಿನೆಡೆಗೆ ಬಂದರು. ಇನ್ನೂ ತೆರೆಯದ್ದು ನೋಡಿ, ರುದ್ರಮ್ಮನ ಪರಿಚಯದವರ ಮನೆಗೆ ಹೋಗಿ ತಮ್ಮ ತಮ್ಮ ಡಬರಿ ತೆಗೆದುಕೊಂಡು ರುದ್ರಮ್ಮ ಮತ್ತು ಲತಾ ತಮ್ಮ ತಮ್ಮ ಮನೆಗೆ ಹೊರಟರು.

ಮನೆಗೆ ಬಂದ ರುದ್ರಮ್ಮ, “”ಶಾಂತಾ ಒಂದು ಲೋಟ ನೀರು ಕೊಡಮ್ಮ ಎಂದು ಉಸ್ಸಪ್ಪಾ” ಎನ್ನುತ್ತ ಕುರ್ಚಿಯ ಮೇಲೆ ಕುಳಿತರು.

ನೀರು ತಂದ ಶಾಂತಾ, “”ಇದೇನತ್ತೇ? ನಿಮ್ಮ ತಾಳಿಸರ ಎಲ್ಲಿ?” ಎಂದು ಗಾಬರಿಯಿಂದ ಪ್ರಶ್ನಿಸಿದಳು. ಆಗ ನಡೆದ ವಿಷಯವನ್ನೆÇÉಾ ಹೇಳಿದ ರುದ್ರಮ್ಮ, ತಗೋ, “”ಇದನ್ನ ಒಂಚೂರು ದೇವರ ಮುಂದೆ ಇಟ್ಟುಬಿಡು” ಎನ್ನುತ್ತ ತಮ್ಮ ಸೆರಗಿನ ಗಂಟು ಬಿಚ್ಚಿದರು.

ಅದರೊಳಗೆ ತಮ್ಮ ಎರಡೂವರೆ ಪವನು ಚಿನ್ನದ ತಾಳಿಸರ ಇರಲಿಲ್ಲ.  ಬದಲಿಗೆ ಯಾವುದೋ ರೋಲ್ಡ್‌ಗೋಲ್ಡ… ಸರ ಇತ್ತು. ರುದ್ರಮ್ಮನ ಎದೆಯೊಡೆಯಿತು. ಅವರು ಒಂದೇ ಸವನೆ ರೋದಿಸತೊಡಗಿದರು.

– ಅದಿತಿ ಎಂ. ಎನ್‌

ಟಾಪ್ ನ್ಯೂಸ್

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.