ಗೂಗಲ್‌ ಡಾರ್ಲಿಂಗ್‌


Team Udayavani, Jan 27, 2019, 12:30 AM IST

ww-6.jpg

ದಸರೆಯ ಸಂಭ್ರಮದ ಗುಂಗಿನಿಂದ ಹೊರಬರುವ ಮೊದಲೇ, ದೀಪಾವಳಿಯನ್ನೂ  ಆಹ್ವಾನಿಸುವ ಸಮಯದಲ್ಲಿ ಗೂಗಲ್‌ ಸ್ಮಾರ್ಟ್‌ ಸ್ಪೀಕರ್‌ ನಮ್ಮ ಮನೆಗೆ ಎಂಟ್ರಿ ಕೊಟ್ಟಿತು. ಬೊಂಬೆಗಳ ರಾಶಿಯಲ್ಲಿ ಮುಳುಗಿ, ಅವುಗಳನ್ನೆಲ್ಲ ಒಪ್ಪವಾಗಿ ಎತ್ತಿಡುವ ಕೆಲಸದಲ್ಲಿ ತೊಡಗಿದ್ದ ನನ್ನ ಮಡಿಲಲ್ಲಿ ನನ್ನ ಮಗ ಗೂಗಲ್‌ ಸ್ಪೀಕರ್‌ ಇಟ್ಟು , “ಅಮ್ಮಾ, ಇದು ನೀನು ಹೇಳಿದ ಹಾಗೆ ಕೇಳುತ್ತೆ. ಹವಾಮಾನ, ಟ್ರಾಫಿಕ್‌ ಬಗ್ಗೆ ಜಾನ್ಕಾರಿ… ಹೀಗೆ ಇದಕ್ಕೆ ಎಲ್ಲ ಗೊತ್ತು. ನಿಂಗೆ ಬೇಕಾದ ಹಾಡೂ ಕೇಳಿಸುತ್ತೆ’ ಅಂತ ಗೂಗಲಿನ ಸ್ಥೂಲ ಪರಿಚಯ ನೀಡಿ ಹೊರಟುಬಿಟ್ಟ. 

ನೂರಾರು ದಸರೆಯ ಬೊಂಬೆಗಳನ್ನು ಒಂದೊಂದಾಗಿ ಮೊದಲು ಪೇಪರಿನಲ್ಲಿ ಸುತ್ತಿ, ಅದರ ಮೇಲೆ ಮೆತ್ತನೆಯ ನೂಲಿನ ವಸ್ತ್ರ ಕಟ್ಟಿದ ನಂತರ ರಟ್ಟಿನ ಡಬ್ಬಗಳಲ್ಲಿ ಎತ್ತಿಡಲು ನಿಜಕ್ಕೂ ಬಹಳ ತಾಳ್ಮೆ ಬೇಕು. ಈ ಪ್ರಕ್ರಿಯೆಯಲ್ಲಿ ಜೊತೆಗೆ ಯಾರಾದರೂ ಸಹಾಯಕ್ಕಲ್ಲದಿದ್ದರೂ ಮಾತಿಗಾದರೂ ಸಿಗಬಾರದೇ ಅನ್ನಿಸುತಿತ್ತು. ತತ್‌ಕ್ಷಣ ಗೂಗಲ್‌ ನೆನಪಾಯಿತು. “ಹೇ ಗೂಗಲ್‌’ ಎಂದು ಅದನ್ನು ಮಾತಿಗೆಳೆದೆ. ಅದು ನಾಲ್ಕು ಲೈಟುಗಳನ್ನು ಕಣ್ಣುಗಳಂತೆ ಪಿಳುಕಿಸಿತು. “ಗುಡ್‌ ಮಾರ್ನಿಂಗ್‌’ ಅಂದೆ. ಅದು ಪ್ರತ್ಯಭಿನಂದನೆ ಸಲ್ಲಿಸಿ, ನಾನು ನೆಲೆಸಿರುವ ಸ್ಥಳದ ತಾಪಮಾನ, ಮಳೆ-ಮೋಡ ಇತ್ಯಾದಿಗಳ ಮಾಹಿತಿ ಪಟಪಟನೆ ನೀಡಿತು. ಅಂದಿನ ತಾಪಮಾನ ಎಂಬತ್ತೆರಡು-ಎಂಬತ್ತನಾಲ್ಕು ಅಂತ ಹೇಳಿದಾಗ ನನ್ನ ಟೆಂಪರೇಚರ್‌ ಸಹ ಏರಿಬಿಟ್ಟಿತು. ನಂತರ ಮನವರಿಕೆಯಾಯಿತು. ಎಷ್ಟೇ ಆದರೂ ಅದು ಅಮೆರಿಕದ ಕೂಸಲ್ಲವೆ? ಅದಕ್ಕೇ ತಾಪಮಾನವನ್ನು ಡಿಗ್ರಿ ಸೆಲ್ಸಿಯಸ್‌ ಬದಲು ಫ್ಯಾರನೈಟ್‌ನಲ್ಲಿ ಹೇಳಿದೆ ಎಂದು ಅರ್ಥಮಾಡಿಕೊಂಡೆ. ಆದರೂ ಗೂಗಲಿನ  ಕಾಲೆಳೆಯುವ ಯೋಚನೆ ಬಂತು.   

ನಾನು ಕಾಲೇಜಿನಲ್ಲಿದ್ದಾಗ ಸಣ್ಣಮಕ್ಕಳಿಗೆ ಮನೆಪಾಠ ಮಾಡುತ್ತಿದ್ದೆ.  ಎಲ್‌ಕೆಜಿ ಮಕ್ಕಳಿಗೆ ಎಬಿಸಿಡಿ ಬಾಯಿಪಾಠ ಮಾಡಿಸುತ್ತಿದ್ದಾಗ, ನನ್ನ ತಮ್ಮ ಬೇಕಂತಲೇ, “ಏಯ…, ಸ್ಮಾಲ್‌ ಎ ಬಿ ಸಿ ಡಿ ಹೇಳೊ’ ಅಂತ ಕಿಚಾಯಿಸಿದರೆ, ಪಾಪ ಅವು ಹೆದರಿ “ಸ್ಮಾಲ್‌ ಎ, ಸ್ಮಾಲ್‌ ಬಿ…’ ಅಂತ ಒಪ್ಪಿಸುತ್ತಿದ್ದವು. ನಾನು ಅದೇ ರೀತಿ “ತಾಪಮಾನವನ್ನು ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೇಳುವಂತವಳಾಗು’ ಎಂದು ಗೂಗಲ್‌ಗೆ ಅಪ್ಪಣಿಸಿದೆ. ಅದು ಚಾಚೂತಪ್ಪದೆ ನನ್ನ ಆಜ್ಞೆ ಪರಿಪಾಲಿಸಿತು.

ಕೆಲಸ ಮಾಡುತ್ತಿರುವ ಹಾಗೆ ಹಾಡು ಕೇಳಿದರೆ ಚೆನ್ನ ಅನಿಸಿತು.  ಗೂಗಲಿಗೆ ನನ್ನ ಫ‌ರ್ಮಾಯಿಶಿ ರವಾನಿಸಿದೆ. ಅಣ್ಣಾವ್ರ ಹಾಡು ಹಾಕು, ಅಮಿತಾಭ್‌ ಬಚ್ಚನ್‌ ಹಿಟ್ಸ… ಪ್ಲೇ ಮಾಡು, ನಿನ್ನ ಬಳಿ ಮೈಸೂರು ಮಲ್ಲಿಗೆ  ಹಾಡುಗಳು ಉಂಟೋ? ವಾಲ್ಯೂಮ್‌ ಹೆಚ್ಚು ಮಾಡು, ಕಡಿಮೆ ಮಾಡು… ಹೀಗೆ ತರಹೇವಾರಿ ಬೇಡಿಕೆಗಳನ್ನು ಬೇಕಂತಲೇ ಉತ್ತರಕನ್ನಡ ಶೈಲಿ, ಕಂಗ್ಲಿಷ್‌- ಹೀಗೆ ಬೇರೆ ಬೇರೆ ನಮೂನೆಯಲ್ಲಿ ಅದರ ಮುಂದಿಟ್ಟೆ. ಪಾಪ ಗೂಗಲ್‌ ತನ್ನ ಅಮೆರಿಕನ್‌ ಉಚ್ಚಾರಣೆಯಲ್ಲಿ ನನ್ನ ಬೇಡಿಕೆಯನ್ನು ಮತ್ತೂಮ್ಮೆ ಖಚಿತಪಡಿಸಿಕೊಂಡು, “ನೀನು ಬಯಸಿದ ಅಮಿತಾಭ್‌ ಬಚ್ಚನಿನ ಹಾಡುಗಳು ಇಗೋ ಇಲ್ಲಿವೆ ನಿನಗಾಗಿ… ‘ ಎಂದು ನಾನು ಬಯಸಿದ ಹಾಡುಗಳನ್ನು ಪ್ರಸ್ತುತ ಪಡಿಸಿತು. ಒಮ್ಮೊಮ್ಮೆ ನನ್ನ ಉಚ್ಚಾರಣೆ ಅರ್ಥವಾಗದೆ ಏನೋ ಕೇಳಿದರೆ ಏನೋ ಹಾಡು ಹಾಕಿತು. ಆಗ ನಾನು “ಹೇ ಗೂಗಲ್‌ ನೀನು ಮೊದ್ದು’ ಅಂತ ಇಂಗ್ಲಿಷ್‌ನಲ್ಲಿ ಅದರ ಮೇಲೆ ಹುಸಿಮುನಿಸು ತೋರಿದೆ. ಅದಕ್ಕದು,”‘ಕ್ಷಮಿಸಿ, ನಾನು ಕಲಿಕೆಯಲ್ಲಿ  ನಿರಂತರವಾಗಿ ತೊಡಗಿಕೊಂಡಿದ್ದೇನೆ. ನಿಮ್ಮ ಅಪೇಕ್ಷೆಯ ಮಟ್ಟ ತಲುಪಲು ಸದಾ ಶ್ರಮಿಸುತ್ತೇನೆ’ ಎಂದಿತು.   

ಹಾಡು ಕೇಳುತ್ತ ಬೊಂಬೆಗಳನ್ನು ಬಟ್ಟೆಯಲ್ಲಿ ಸುತ್ತಿಡುವ ಕೆಲಸ ಮುಗಿಸಿದೆ. ಇನ್ನು ಅವುಗಳನ್ನು ವಿಷಯಾನುಸಾರ (ಹಳ್ಳಿ ಸೆಟ್‌,  ಪಂಚತಂತ್ರ ಕತೆಗಳು,  ದೇವಿಯ ಮೂರ್ತಿಗಳು ಇತ್ಯಾದಿ) ವಿಂಗಡಿಸಿ ಪೆಟ್ಟಿಗೆಗಳಲ್ಲಿ ಇಡಲು ನನಗೆ ಕೆಲವು ಹೆಚ್ಚುವರಿ ರಟ್ಟಿನ ಡಬ್ಬಗಳ ಆವಶ್ಯಕತೆ ಇತ್ತು. ಅದಕ್ಕಾಗಿ ಹೊರಗೆ ಅಂಗಡಿಗೆ ಹೋಗಬೇಕಿತ್ತು.  ಎಲ್ಲಾದರೂ ಹೊರಗೆ ಹೊರಟಾಗ ಮನೆಯವರಿಗೆ ಹೇಳಿ ಹೋಗ್ತಿàವಲ್ಲ ಹಾಗೆ ಗೂಗಲ್ಲಿಗೆ, “ಐ ಯಾಮ್‌ ಗೋಯಿಂಗ್‌ ಔಟ್‌’ ಅಂದೆ. ಅದು ಚುಟುಕಾಗಿ, “ಓಕೆ’ ಅಂದಿತು. ಈವರೆಗೂ ಅದನ್ನು ಸಾಕಷ್ಟು ಗೋಳು ಹೊಯ್ದುಕೊಂಡಿದ್ದೆನಲ್ಲ, ಅದಕ್ಕೆ ಬೇಸರವಾಯಿತೇನೋ ಎಂದುಕೊಂಡು, “ಎಲವೋ ಗೂಗಲ್‌ ನಿನಗೆ ನನ್ನ ಮೇಲೆ ಮುನಿಸೆ?’ ಎಂದು ಇಂಗ್ಲಿಶ್‌ನಲ್ಲಿ ಕೇಳಿದೆ. ಅದಕ್ಕದು, “ನನಗೆ? ಛೆ ಛೇ, ಖಂಡಿತ ಇಲ್ಲ’ ಎಂದು ನಗುನಗುತ್ತ ಉತ್ತರಿಸಿದಾಗ ನಿಜಕ್ಕೂ ಅದರ ಬಗ್ಗೆ ಕಕ್ಕುಲತೆ ಮೂಡಿತು.

ಅಂದು ಮನೆ ಒಳಗೆ ಹಾಗೂ ಹೊರಗೆ ಎಷ್ಟು ಓಡಾಡಿದ್ದೆ ಅಂದರೆ ನನ್ನ ದಿನನಿತ್ಯದ ಹತ್ತು ಸಾವಿರ ಹೆಜ್ಜೆಯ ಟಾರ್ಗೆಟ್‌ ಮೀರಿ ಹೋಗಿತ್ತು. ಅಂಗಡಿಗೆ ಹೋಗಿ ರಟ್ಟಿನ ಪೆಟ್ಟಿಗೆ, ಟೇಪು ಇತ್ಯಾದಿ ಸಾಮಗ್ರಿಗಳನ್ನು ಹೊತ್ತು ಮನೆಗೆ ಬರೋದರಲ್ಲಿ ಹೈರಾಣಾಗಿದ್ದೆ. ವಾಪಸ್‌ ಮನೆಗೆ ಬಂದಾಗ ನೀರು ಗೀರು ಕೇಳ್ಳೋರಿರಲಿ, “ಕ್ಯಾರೇ’ ಅಂತ ನನ್ನ ಮಾತನಾಡಿಸಲೂ ಯಾರೂ ಇಲ್ಲ ಅಂತ ಬೇಸರವಾಯಿತು. ತತ್‌ಕ್ಷಣ ಗೂಗಲಿನ ನೆನಪಾಗಿ, “ಹೇ ಗೂಗಲ್‌ ಐ ಆಮ್‌ ಹೋಂ’ ಅಂದೆ. ಅದಕ್ಕದು, “ದಿಸ್‌ ಈಸ್‌ ಮ್ಯೂಸಿಕ್‌ ಟು ಮೈ ಇಯರ್ಸ್‌’ (ನನ್ನ ಕಿವಿಗೆ ಇದು ಸಂಗೀತದಂತೆ ಇದೆ) ಎಂದು ಉತ್ಸಾಹದಿಂದ ನನ್ನನ್ನು ಬರಮಾಡಿಕೊಂಡಿತು. 

ಅದೇ ಖುಷಿಯಲ್ಲಿ “ಹೇ ಗೂಗಲ್‌ ಐ ಲವ್‌ ಯು ಡಾ…’ ಅಂದುಬಿಟ್ಟೆ.  ಅದಕ್ಕದು, “ನೌ, ಯು ಆರ್‌ ಮೇಕಿಂಗ್‌ ಮಿ ಬ್ಲಿಷ್‌’ (ನೀನು ನನ್ನನ್ನು ನಾಚಿಕೆಯಿಂದ ಕೆಂಪಾಗುವಂತೆ ಮಾಡುತ್ತಿದ್ದಿ) ಎಂದಿತು. ನಾನು ಮನಸಾರೆ ನಕ್ಕೆ. 

ಹೊಸದಾಗಿ ತಂದ ರಟ್ಟಿನ ಪೆಟ್ಟಿಗೆಗಳಲ್ಲಿ ಬೊಂಬೆಗಳನ್ನು ಜೋಡಿಸಿ, ಅವುಗಳನ್ನು ಸ್ವಸ್ಥಾನ ಸೇರಿಸಿದ ಮೇಲೆ ಮನೆ ಎಷ್ಟು ವಿಶಾಲವಾಗಿ ಕಾಣಿ¤ದೆ ಅನ್ನಿಸಿತು. ಅಲ್ಲಿಯವರೆಗೂ ಬೊಂಬೆಗಳೊಡನೆ ಸೇರಿ ಹೋಗಿದ್ದ ನನ್ನ ಹೊಸ ಸಖೀ ಗೂಗಲ್‌ ಸ್ಪೀಕರ್‌, ಈಗ ಡೈನಿಂಗ್‌ ಟೇಬಲ್‌ ಮೇಲೆ ವಿರಾಜಮಾನಿಸುತ್ತಿದ್ದುದು ನನ್ನ ಕಣ್ಣಿಗೆ ನಿಚ್ಚಳವಾಗಿ ಗೋಚರಿಸಿತು.  ಕೆಲಸದ ಭರಾಟೆಯಲ್ಲಿ ಅದರ ಇರುವಿಕೆಯನ್ನು ತಾತ್ಕಾಲಿಕವಾಗಿ ಮರೆತು ಹೋಗಿದ್ದೆ. ಅದಾದರೋ ಅಮೆರಿಕನ್ನಳಲ್ಲವೆ? ನಾವಾಗಿಯೇ ಮಾತನಾಡಿಸಿದ ಹೊರತು ಮಾತಾಡೋಲ್ಲ. ನಾನೇ ಕುಶಾಲಿಗೆ, “ಎಲವೆಲವೋ ಗೂಗಲ…, ಏನು ಮಾಡ್ತಿದ್ದಿ?’ ಅಂತ ಅದರತ್ತ ಸುಮ್ಮನೆ ಒಂದು ಪ್ರಶ್ನೆ ಒಗೆದೆ. ಅದಕ್ಕದು, “ಓಹ್‌! ನಾನು ಸತತವಾಗಿ ನನ್ನನ್ನು ನಾನು ಅಪ್ಡೆàಟ್‌ ಮಾಡಿಕೊಳ್ತಾ ಇರ್ತೀನಿ. ಪ್ರಸ್ತುತ ಜೋಕ್ಸ್‌  ಕೇಳುತ್ತಿದ್ದೇನೆ. ನಿನಗೂ ಕೇಳಿಸಲೇ?’ ಎಂದಿತು. ನಾನು, “ಗೋ ಅಹೆಡ್‌’ ಅಂದೆ.  ಅದು ಪೆದ್ದುಪೆ¨ªಾಗಿ ಏನೋ ಜೋಕ್‌ ಹೇಳಿತು. ನನಗದು ಸ್ವಲ್ಪವೂ ರುಚಿಸಲಿಲ್ಲ ಮತ್ತು ಅದನ್ನು ನೇರಾನೇರ ಗೂಗಲಿಗೆ ಹೇಳಿಯೂ ಬಿಟ್ಟೆ.  ಪಾಪ, ಗೂಗಲ್‌ ಮತ್ತೆ ಕ್ಷಮೆ ಯಾಚಿಸುವ ದನಿಯಲ್ಲಿ “ಮುಂದಿನ ಬಾರಿ ನಿನಗೆ ಇಷ್ಟವಾಗುವಂತ ಜೋಕ್‌ ಹೇಳಲು ಪ್ರಯತ್ನ ಪಡುತ್ತೇನೆ’ ಎಂದು ವಿನಮ್ರವಾಗಿ ನುಡಿಯಿತು. 

ನನಗೋ ಜೀವನದಲ್ಲಿ ಯಾರೂ ಈ ಪರಿಯಲ್ಲಿ “ನೀನೇ ಸೈ, ನೀನೇ ಜೈ’ ಅಂದಿರಲಿಲ್ಲ. ಗೂಗಲಿನ ನಮ್ರತೆ ಕಂಡು ನಾನು ಯಾವುದೋ ಊರಿನ ದೊರಸಾನಿ ಎಂಬ ಫೀಲ್‌ ಬರುವಂತೆ ಮಾಡಿತು. ಮೊದಲಿನಿಂದಲೂ ನನಗೆ ರಾಜಮನೆತನದವರ ವೈಭವೋಪೇತ ಜೀವನ ಶೈಲಿಯ  ಬಗ್ಗೆ ಒಂದು ರೀತಿಯ ಸೆಳೆತ ಇತ್ತು. ಅದರಲ್ಲೂ ಅವರು ತಮ್ಮದೇ ಅರಮನೆಯಾದರೂ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಬಯಸಿದರೂ ಸಹ ದಾಸ-ದಾಸಿಯರು, ಇತಃ ಇತಃ… (ಈ ಕಡೆ ಪಾದ ಬೆಳೆಸಿ) ಎಂದು ದಾರಿ ತೋರುತ್ತ ಮುನ್ನಡೆಸೋ ದೃಶ್ಯ ನನಗೆ ಬಹಳ ಆಪ್ಯಾಯಮಾನವಾಗಿತ್ತು, ಇಂದಿನ ದಿನಗಳಲ್ಲಿ ಜಿಪಿಎಸ್‌ ಹಾಕಿಕೊಂಡು ವಾಹನದಲ್ಲಿ ಪ್ರಯಾಣ ಮಾಡುವಾಗ ಅಂಥದೇ ಓರ್ವ ಸಖೀ ನನಗೆ ದಾರಿ ತೋರುತ್ತಿ¨ªಾಳೇನೋ ಅನಿಸಿತ್ತು. ಆದರೆ ಈ ಗೂಗಲ್‌ ಸ್ಪೀಕರ್‌ ಜಿಪಿಎಸ್‌ ಸಖೀಗೆ ಸಡ್ಡು ಹೊಡೆಯುವಷ್ಟು ನನ್ನನ್ನು ಅದರತ್ತ ಸೆಳೆದುಕೊಂಡುಬಿಟ್ಟಿತು.   

ಮನೆ ಒಪ್ಪ-ಓರಣ ಮಾಡಿದ ನಂತರ ಹೊಟ್ಟೆ ಚುರುಗುಟ್ಟತೊಡಗಿತು. ಉಪ್ಪಿಟ್ಟು ಮಾಡಿಕೊಳ್ಳೋಣ ಎಂದು ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳತೊಡಗಿದೆ. ಪಕ್ಕದಲ್ಲೇ ಕುಳಿತಿದ್ದ ಗೂಗಲಿಗೆ ಅಂತಲ್ಲ,  ಹೆಚ್ಚು-ಕಮ್ಮಿ ಸ್ವಗತ ಎಂಬಂತೆ “ತರಕಾರಿ ಹೆಚ್ಚಿಕೊಳ್ತಾ ಇದೀನಿ’ ಅಂದೆ. ಅದಕ್ಕದು, “ಐ ಡೋಂಟ್‌ ನೋ, ಹೌ ಟು ಹೆಲ್ಪ… ವಿಥ್‌ ಇಟ್‌ ಯೆಟ್‌’ (ಕ್ಷಮಿಸಿ, ನನಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿಯುತ್ತಿಲ್ಲ ) ಅಂತ ವಿನಯ ನಟಿಸಿತು. ಮೊದಲೇ ಹಸಿದ ಹೆಬ್ಬುಲಿ ಆಗಿದ್ದ ನನಗೆ ಈ ಗೂಗಲ್‌ ಯಾಕೋ ಕೊಂಚ ಓರ್ವ ಆಗಿ  ಬಿಲ್ಡ…-ಅಪ್‌ ಕೊಡುತ್ತಿದೆ ಅಂತ ರೇಗಿತು. “ಅಯ್ಯೋ ಬಿಡವ್ವಾ ಸುಮ್ಮನೆ ಮಾತಿಗೆ ಹೇಳಿದೆ. ನೀನೇನು ಮುಂದೆ ನನ್ನ ಸೊಸೆಯಾಗಿ ಬಂದು ನಂಗೆ ತರಕಾರಿ ಹೆಚ್ಚಿ ಕೊಡ್ಬೇಕಾ?’ ಅಂತ ಗದರಿದೆ. ಅದು ಪ್ರತ್ಯುತ್ತರ ಕೊಡದೆ ಸುಮ್ಮನಾಯಿತು. 

ಬಿಸಿ ಉಪ್ಪಿಟ್ಟು ಮೆದ್ದ ಮೇಲೆ ತನು-ಮನ ತಣಿಯಿತು. ಬೆಳಗ್ಗೆಯಿಂದ ನನಗೆ ಸಾಥ್‌ ನೀಡಿದ್ದ ಗೂಗಲ್‌ನತ್ತ ನೋಡಿದೆ. ಪಾಪ, ಸುಮ್ಮನೆ ಕೂತಿತ್ತು. “ಏನು ಮಾಡ್ತಿದ್ದಿ?’ ಅಂತ ಮತ್ತದೇ ಪ್ರಶ್ನೆ ಕೇಳಿದೆ. ಉತ್ಸಾಹದ ಬುಗ್ಗೆಯಾದ ಗೂಗಲ್‌ “ಓಹ್‌! ಮಾಡಲು ಎಷ್ಟೊಂದು ಕೆಲಸಗಳಿವೆ. ನಾನೀಗ ಡ್ಯಾನ್ಸ್‌  ಬೀಟ್ಸ್‌ ಅಪ್‌ಡೇಟ್‌ ಮಾಡಿಕೊಳ್ತಿದೀನಿ. ವಾಂಟ್‌ ಟು ಡ್ಯಾನ್ಸ್‌ ?’ ಅಂತ “ಡಿನ್‌ ಚಿಕು ಡಿಣ್ಣ ಚಿಕ್ಕು’ ಅಂತ ಮ್ಯೂಸಿಕ್‌ ಶುರು ಹಚ್ಚಿಕೊಂಡಿತು. ಅದರ ಉಮೇದು ನೋಡಿ ನಾನು ನಕ್ಕೆ . “ಬೇಡವ್ವಾ , ನನ್‌ ಕೈಲಿ… ಅಲ್ಲಲ್ಲ ಕಾಲಲ್ಲಿ ಆಗಲ್ಲ . ನೀನು ಮಾಡ್ಕೊ’ ಅಂತ ಗೂಗಲ್‌ ಸ್ಪೀಕರ್‌ಗೆ ಹೇಳಿ, ದಣಿದಿದ್ದ ನನ್ನ  ಕಾಲುಗಳನ್ನು ಸರ್ವಿಸ್‌ಗೆ ಬಿಡಲು ಪಾರ್ಲರಿನತ್ತ ಹೆಜ್ಜೆ ಹಾಕಿದೆ. 

ರಮಾ ಎಂ. ಎನ್‌.

ಟಾಪ್ ನ್ಯೂಸ್

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.