ಗಾಟಾ ಲೂಪ್ಸ್‌  ಸುಳಿದು ಸುತ್ತುವ ಹಾದಿ


Team Udayavani, Sep 3, 2017, 6:30 AM IST

Gatta-Loops-Ladakh-Bike-Tour.jpg

ಹಿಮಾಚಲ ಪ್ರದೇಶದ ಲೇಹ್‌-ಮನಾಲಿಯ ದುರ್ಗಮ ಹಾದಿಯಲ್ಲಿ ಜೀವದ ಮೂಲವನ್ನೇ ಹಿಡಿದು ಗಲಗಲ ಅಲುಗಿಸಿ ನಡುಗಿಸುತ್ತ ಪಾತಾಳಕ್ಕೆ ಇಳಿಸುವ ದಾರಿಯಲ್ಲಿ ಎಂಬತ್ತು ಕಿ.ಮೀ. ಇಳಿದು ಸಾರ್ಚು ಎಂಬಲ್ಲಿ ಕಾರು ನಿಲ್ಲಿಸುವಾಗ ನಮ್ಮ ದೇಹದ ಕೀಲುಗಳೆಲ್ಲ ತಪ್ಪಿ ಹೋದಂತೆ ಅನಿಸಿತ್ತು. ಒಂದು ಟೆಂಟಿನೊಳಗೆ ನುಗ್ಗಿ ಕುಸಿದಾಗ ಅದೇ ಪರಿಚಿತ ತರುಣಿಯ ದನಿ ಕೇಳಿಸಿತು : ಮಮ್ಮಿà… ವೋ ಲೋಗ್‌ ಆಯಾ…

ಹಿನ್ನೆಲೆ ಇದು… ಮೂರು ದಿನಗಳ ಹಿಂದೆ ನಾನು, ನಂದಳಿಕೆಯ ವೀಕೆ, ಸಚ್ಚರಿಪೇಟೆಯ ಸತ್ಯಶಂಕರ, ಮತ್ತು ಸೊರಬದ ದಿನಕರ ಅದೇ ದಾರಿಯಲ್ಲಿ ಲಡಾಖ್‌, ಲೇಹ್‌, ಝಂಸ್ಕರ್‌ ಕಣಿವೆಗೆ ಹೋಗುವಾಗ ಅÇÉೇ ವಿಶ್ರಾಂತಿ ಪಡೆದಿ¨ªೆವು. ಇಬ್ಬರೇ  ಮಹಿಳೆಯರು… ಅಮ್ಮ, ಮಗಳು ! ಹೊರಡುವಾಗ “ಥ್ಯಾಂಕ್ಸ್‌ ಆಂಟೀ…’ ಅಂತ ಮಗಳ ಬಳಿ ಹೇಳಿದ್ದು ಅವಳನ್ನು ಕೆರಳಿಸಿತ್ತು. “ಕ್ಯಾ? ಮೈ ಆಂಟೀ?’ ಅಂತ ಕೆರಳಿದ್ದಳು! ನಗುತ್ತ ಹೊರಟಾಗ ಸತ್ಯಶಂಕರರ ಶಾಲನ್ನು ಮರೆತು ಅÇÉೇ ಬಿಟ್ಟಿ¨ªೆವು. ಅದೇ ದಾರಿಯಲ್ಲಿ ಮರಳುವಾಗ  ಬಂದೇ ಬರುತ್ತಾರೆ ಎಂದು ಅವರು ನಿರೀಕ್ಷಿಸಿರಬೇಕು. 
ಗಂಟೆ ಆರೂವರೆಯಾಗಿತ್ತು. ಅಸಾಧ್ಯ ಚಳಿ. ಸಾಲದೆಂಬಂತೆ ವೀಕೆಗೆ ಜ್ವರ. ಅಲ್ಲಿಂದ ಮುಂದಿನ ಕ್ಯಾಂಪ್‌ ಭರತಪುರಕ್ಕೆ ನಲುವತ್ತು ಕಿ.ಮೀ. ಸಾಗಬೇಕು. ಕಷ್ಟ ಅನಿಸಿ ಅÇÉೇ ಉಳಿದುಕೊಂಡೆವು. ಟೆಂಟು ಅಂದರೆ ಸಾಲಾಗಿ ದಪ್ಪದಪ್ಪನೆಯ ಹಾಸಿಗೆಗಳು. ಒಬ್ಬರಿಗೆ ಒಂದು ರಾತ್ರಿ ಮಲಗಲು ಇನ್ನೂರೈವತ್ತು ರೂಪಾಯಿ. ಹೊದೆಯಲು ಐದಾರು ಹಾಸುಗಳು.

ರಾತ್ರಿಯ ಸಣ್ಣ ಊಟ ಮುಗಿಸಿ ಮಲಗಲು ಅಣಿಯಾದಂತೆ ಇಬ್ಬರು ಬೈಕಿನಲ್ಲಿ ಬಂದು ಚಹಾ ಕೇಳಿದರು. ನಾವು ಬಂದಿದ್ದ ದಾರಿಯÇÉೇ ಅವರೂ ಬಂದಿದ್ದರು. ಅವರು ಹೇಳಿದ ಸುದ್ದಿ ಕೇಳಿ ನಡುಕ ಉಂಟಾಯಿತು… ತಗ್ಲಂಗ್ಲಾ ಟಾಪ್‌ನಿಂದ ಪಾಂಗ್‌ಗೆ ಇಳಿಯುವ 69 ಕಿ.ಮೀ. ಉದ್ದದ ತಿರುವುಗಳಲ್ಲಿ ಅವರ ಕಣ್ಣೆದುರೇ ಒಂದು ಟಾಟಾ ಸುಮೋ ಕಣಿವೆಗೆ ಉರುಳಿತಂತೆ! ಅದರಲ್ಲಿದ್ದ ಇಬ್ಬರು ಕೆಳಗೆ ಹಾರುವುದನ್ನು ಇವರು ನೋಡಿದ್ದರು. ಉಳಿದವರ ಬಗ್ಗೆ ಗೊತ್ತಿಲ್ಲ, ಬದುಕಿ ಉಳಿಯಲಿಕ್ಕಿಲ್ಲ ಎಂದರು. ನಾವು ಅದೇ ದಾರಿಯಲ್ಲಿ ಸ್ವಲ್ಪ ಮೊದಲು ಬಂದವರು !

ಮಲಗುವ ಮುಂಚೆ ಟೆಂಟಿನ ಒಡತಿ ನಮ್ಮ ಸಾರಥಿ ಟೀಕಾ ಶರ್ಮನೊಡನೆ ಹೇಳಿದ್ದು ಕೇಳಿಸಿತು, “”ಗಾಟಾ ಲೂಪ್ಸ್‌  ಕೈಸಾ ಹೈ? ವೋ ಮಿಲಾ?”

ಈ ಘಟನೆ ನಮಗೆ ತಿಳಿದದ್ದು ಹಾಗೆ. ತಗ್ಲಂಗ್ಲಾ ಟಾಪ್‌ 17,500 ಅಡಿಯಿಂದ ಪಾಂಗ್‌ವರೆಗಿನ 69 ಕಿ.ಮೀ. ದುರ್ಗಮ ಹಾದಿಯಲ್ಲಿ ನಕೀಲಾ ಪಾಸ್‌, ಲೇ ಚುಂಗ್‌ ಪಾಸ್‌ ಮತ್ತು ಗಾಟಾ ಲೂಪ್ಸ್‌ ಎಂಬ ಗಂಟು ದಾರಿಗಳಿವೆ. ಪಾಂಗ್‌ನಿಂದ ನೇರ ಮೇಲೆ ನೋಡಿದರೆ ಕಾಣುವುದು ಪರ್ವತಗಳ ಮೈಗಳಲ್ಲಿ ಅಡ್ಡಡ್ಡ ಗೀರುಗಳು ಮಾತ್ರ. ಅದೇ ಮನಾಲಿ-ಲೇಹ್‌ ದಾರಿ ಅಂತ ನಮಗೆ ಮತ್ತೆ ತಿಳಿಯಿತು. 22 ಕಡಿದಾದ ತಿರುವುಗಳಿರುವ ಗಾಟಾ ಕಗ್ಗಂಟು ಆ ದಾರಿಯನ್ನು ಹಿಡಿದು ಹುಚ್ಚುಹುಚ್ಚಾಗಿ ತಿರುವಿ ಗಂಟು ಹಾಕಿದಂತಿದೆ. ಹಾಗಾಗಿ ಇದಕ್ಕೆ ಲೂಪ್ಸ್‌ ಅಂತ ಹೆಸರು. ಕಾರಿನಲ್ಲಿ ಬರುವಾಗ ಕೆಳಗೆ ನೋಡಿದರೆ ಕಣ್ಣು ಕತ್ತಲೆ ಬರುತ್ತದೆ. ಈ ಕಗ್ಗಂಟಿನ ದಾರಿಯಲ್ಲಿ ಒಂದು ಕಡೆ ಮೂರು ಸುತ್ತ ಕಲ್ಲುಗಳನ್ನು ಒಟ್ಟಿ ಅದರ ಸುತ್ತ ನೂರಾರು ನೀರಿನ ಬಾಟಿÉಗಳನ್ನು ಎಸೆದಿದ್ದನ್ನು ನಾವು ಕಂಡಿ¨ªೆವು. ಅದು ಪ್ಲಾಸ್ಟಿಕ್‌ ಬಾಟಿÉ ಎಸೆಯುವ ಜಾಗ ಎಂದುಕೊಂಡಿ¨ªೆ.

ಆಗ ಆಕೆ ಹೇಳಿದ ಗಾಟಾ ಲೂಪ್ಸಿನ ಘಟನೆ ಇದು. ಹಲವು ವರ್ಷಗಳ ಹಿಂದೆ ಅಕ್ಟೋಬರ್‌ನ ಕೊನೆಯಲ್ಲಿ ಒಂದು ಟ್ರಕ್‌ ರೊಹrಂಗ್‌ ಪಾಸ್‌ ದಾಟಿ ಲೇಹ್‌ ಕಡೆಗೆ ಹೊರಟಿತ್ತು. ಸಾಮಾನ್ಯವಾಗಿ ಮನಾಲಿ-ಲೇಹ್‌ ದಾರಿ ಅಕ್ಟೋಬರ್‌ನಿಂದ ಮಾರ್ಚ್‌ ವರೆಗೆ ಹಿಮದಿಂದ ಮುಚ್ಚಿರುತ್ತದೆ. ಆದರೆ, ಆ ದಿನ ಅವರು ಲೇಹ್‌ ಸೇರಲೇಬೇಕಾಗಿತ್ತು. ಡ್ರೈವರ್‌ ಮತ್ತು ಕ್ಲೀನರ್‌ ಇಬ್ಬರೇ. ಹಿಮಪಾತ ಶುರುವಾಗಿತ್ತು. ಸಾರ್ಚು ದಾಟಿ ಪಾಂಗ್‌ಗೆ ಬರುವಾಗ ಗಾಟಾಲೂಪ್ಸ್‌ನಲ್ಲಿ ಟ್ರಕ್‌ ಕೆಟ್ಟು ನಿಂತಿತು. ಕ್ಲೀನರ್‌ ಹಿಂದಿನ ಚಕ್ರಗಳಿಗೆ ಕಲ್ಲಿಡಲು ಹೋದಾಗ ಟ್ರಕ್‌ ಹಿಂದೆ ಜಾರಿ ಅವನ ಕಾಲುಗಳ ಮೇಲೆ ಚಲಿಸಿತು.

ಅವನನ್ನು ಕ್ಯಾಬಿನ್‌ನಲ್ಲಿ ಕೂರಿಸಿ ಹತ್ತಿರದ ಹಳ್ಳಿಯಿಂದ ಸಹಾಯ ಪಡೆಯಲು ಹೋದ ಡ್ರೈವರ್‌ ನಲುವತ್ತು ಕಿ.ಮೀ. ನಡೆದ ನಂತರ ಅವನಿಗೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ನೀರು ಆಹಾರ ಪಡೆದು ವಾಪಸ್‌ ಹೊರಟಾಗ ಭಯಂಕರ ಹಿಮಪಾತ ಶುರುವಾಯಿತು. ಏಳು ದಿನ ಅಲ್ಲಿಂದ ಹೊರಡಲಾಗಲಿಲ್ಲ. ಎಂಟನೆಯ ದಿನ ಹಳ್ಳಿಗರೊಂದಿಗೆ ಅಲ್ಲಿಗೆ ಮರಳಿದಾಗ ಆ ಬಡಪಾಯಿ ಕ್ಲೀನರ್‌ ಅನ್ನ-ನೀರಿಲ್ಲದೆ ಚಳಿಯಲ್ಲಿ ನಡುಗುತ್ತ ಸತ್ತೇಹೋಗಿದ್ದ. ಅÇÉೇ ಅವನ ಹೆಣವನ್ನು ಸುಟ್ಟುಹಾಕಿದರು.

ಕತೆ ಇಲ್ಲಿಗೆ ಮುಗಿಯಲಿಲ್ಲ. ಕೆಲವು ಸಮಯದ ನಂತರ ಗಾಟಾ ಲೂಪ್ಸ್‌ನಲ್ಲಿ ಸಾಗುವ ವಾಹನಗಳನ್ನು ಅದೇ ಜಾಗದಲ್ಲಿ ಒಬ್ಬ ನಿಲ್ಲಿಸಿ ನೀರು ಮತ್ತು ಸಿಗರೇಟ್‌ ಕೇಳತೊಡಗಿದನಂತೆ. ಕೈಗೆ ನೀರು ಹಾಕಿದಾಗ ಅದು ಬೊಗಸೆಯಿಂದ ಇಳಿದು ಹೋಗುತ್ತಿತ್ತಂತೆ. ಅದು ಅವನ ದೆವ್ವ ಅಂತ ವದಂತಿ ಹಬ್ಬಿತು. ಈಗ ನೀರಿನ ಬಾಟಿÉಗಳನ್ನು ನಾವು ಕಂಡಲ್ಲಿ ಯಾರೂ ವಾಹನ ನಿಲ್ಲಿಸುವುದಿಲ್ಲ. ನೀರ ಬಾಟಲಿ ಎಸೆದು ಹೋಗ್ತಾರೆ.

ಘಟಸರ್ಪದಂತಹ ಈ ದೆವ್ವಪೀಡಿತ ಗಾಟಾಲೂಪ್ಸ್‌ನ ಕತೆ ಮೊದಲೇ ನಮಗೆ ಗೊತ್ತಿದ್ದರೆ ಅಲ್ಲಿ ಇಳಿದು ನೋಡಬಹುದಾಗಿತ್ತು. ಆದರೂ ಸಾವು ಬಾಯ್ದೆರೆದು ಆಕಳಿಸುತ್ತಿರುವಂತಹ ಪ್ರಪಾತ, ಸುತ್ತ ಹೆಪ್ಪುಗಟ್ಟಿರುವ ಹಿಮರಾಶಿ, ಜನವಿಹೀನ ಕಣಿವೆಗಳಲ್ಲಿ ಸಿಂಧೂ ಝಂಸ್ಕರ್‌ ನದಿಗಳ ಮೊರೆತ… ಇವೆಲ್ಲವನ್ನು ಬದುಕಿನಲ್ಲಿ ಒಮ್ಮೆಯಾದರೂ ಅನುಭವಿಸಬೇಕು!

– ಬಿ. ಸೀತಾರಾಮ ಭಟ್‌

ಟಾಪ್ ನ್ಯೂಸ್

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.