ಜ್ಞಾನದೇಗುಲದ ಗುರುದ್ವಾರ


Team Udayavani, Nov 5, 2017, 6:00 AM IST

lead.jpg

ನಿನ್ನೆ ಗುರುನಾನಕ್‌ ಜಯಂತಿ. ಗುರುನಾನಕರು ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಅವರ ಉಪದೇಶಗಳು ಕೇವಲ ಒಂದು ಜನಾಂಗಕ್ಕೆ ಸೀಮಿತವಾದುದಲ್ಲ ; ಸಮಸ್ತ ಮಾನವ ಜನಾಂಗಕ್ಕೆ ಸಲ್ಲುವಂತಹುದು. ಗುರುನಾನಕರು ತಮ್ಮ ಜೀವಿತ ಕಾಲದಲ್ಲಿ ಕರ್ನಾಟಕವನ್ನು ಸಂದರ್ಶಿಸುತ್ತಿದ್ದರೆಂದು ಹೇಳಲಾಗುತ್ತದಾದರೂ ಕನ್ನಡದಲ್ಲಿ ಆ ಬಗ್ಗೆ  ಪುಸ್ತಕಗಳು ಬಂದಿಲ್ಲ. ಗುರುನಾನಕರ ಹೊಸ ಕೃತಿ ಈಗಷ್ಟೇ ಪ್ರಕಟಗೊಳ್ಳುತ್ತಿದ್ದು ಇದರ ಕುರಿತ ಬರಹ ಇಲ್ಲಿದೆ.

ಕರ್ನಾಟಕದೊಡನೆ ಸಿಕ್ಖ್ ಧರ್ಮದ ಸಂಬಂಧ‌ ಸಿಕ್ಖ್  ಧರ್ಮ ಸಂಸ್ಥಾಪಕರಾದ ಗುರುನಾನಕ ದೇವರ ಕಾಲದಿಂದಲೂ ಇದೆ. ಬೀದರ್‌ನ ಗುರುದ್ವಾರ, ನಾನಕ ಝೀರ ಸಿಕ್ಖ್ ಧರ್ಮೀಯರಿಗೆ ಒಂದು ಅತ್ಯಂತ ಪವಿತ್ರವಾದ ಯಾತ್ರಾಸ್ಥಳವಾಗಿದೆ. ಇಲ್ಲಿ ಗುರುದೇವರು ಕೆಲಕಾಲ ತಂಗಿದ್ದರು. ಸೂಫಿಸಂತರಾದ ಪೀರ್‌ ಜಲಾಲುದ್ದೀನ್‌ ಮತ್ತು ಯಾಕೂಬ್‌ ಆಲಿ ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದರು. ಸ್ಥಳೀಯ ಜನರು ಗುರುವಿನ ದರ್ಶನ ಮಾಡಿ ಅವರ ಆಶೀರ್ವಾದ ಪಡೆಯಲು ಆಗಮಿಸಿದ್ದರು. ಆಗ ಅವರು ನೀರಿನ ಅಭಾವದಿಂದಾಗಿ ತಾವು ಪಡುತ್ತಿದ್ದ ಕಷ್ಟವನ್ನು ಗುರುಗಳಲ್ಲಿ ನಿವೇದಿಸಿಕೊಂಡರಂತೆ. ಜನರ ಕಷ್ಟವನ್ನು ಕಂಡ ಗುರೂಜಿಯ ಹೃದಯ ಕರಗಿತು. ಪರಮಾತ್ಮನ ನಾಮವನ್ನುಚ್ಚರಿಸುತ್ತ ಅವರು ತಮ್ಮ ಮರದ ಪಾದುಕೆಯಿಂದ ಕೆಳಗಿನ ಒಂದು ಸಣ್ಣಕಲ್ಲನ್ನು ಸರಿಸಿದರು.

ಅತ್ಯಾಶ್ಚರ್ಯಕರವಾಗಿ ಅಲ್ಲಿಂದ ನೀರು ಚಿಮ್ಮಿ ಹರಿಯಲಾರಂಭಿಸಿದ್ದನ್ನು ಕಂಡು ಜನರು ಅತೀವ ಆನಂದಿತರಾದರು. ಆ ನೀರು ಇಂದಿಗೂ ಹರಿಯುತ್ತಿದೆ ಮತ್ತು ಅತ್ಯಂತ ಪವಿತ್ರವಾದುದು ಎಂದು ಪರಿಗಣಿಸಲಾಗಿದೆ. ಇದೇ ನಾನಕ ಝೀರ. 
ಇಂದಿಲ್ಲಿ ಒಂದು ಸುಂದರವಾದ ಗುರುದ್ವಾರವಿದೆ. ಗುರುನಾನಕರ ಅನುಯಾಯಿಗಳಿಗೆಲ್ಲ ಇದು ವಿಶೇಷವಾದ ಪವಿತ್ರ ಸ್ಥಳ. ಪ್ರಪಂಚದ ಎÇÉೆಡೆಗಳಿಂದ ಭ‌ಕ್ತರು ಇಲ್ಲಿಗೆ ಬರುತ್ತಾರೆ. ಬೀದರ್‌ನ ಸಿಕ್ಖ್ ಧ‌ರ್ಮದೊಡನೆಯ ಸಂಬಂಧ ಹತ್ತನೆಯ ಗುರು ಶ್ರೀಗುರು ಗೋವಿಂದ್‌ ಸಿಂಗರ ಕಾಲದಲ್ಲಿ ಇನ್ನೂ ಭದ್ರವಾಯಿತು. ವಿಕ್ರಮ ಸಂವತ್ಸರ 1756, ವೈಶಾಖ ಮಾಸದ ಮೊದಲ ದಿನ ಆನಂದಪುರ ಸಾಹೀಬ್‌ನ‌ಲ್ಲಿ ಗುರು ಗೋವಿಂದ ಸಿಂಗರು, ತಮ್ಮ ಕರೆಗೆ ಓಗೊಟ್ಟು ತಮ್ಮ ಶಿರವನ್ನು ಅರ್ಪಿಸಲು ಸಿದ್ಧರಾದ ಐದು ಜನ ಭಕ್ತರಿಗೆ ಅಮೃತವನ್ನು ಕೊಟ್ಟು “ಕಾಲ್ಸಾ’ವನ್ನು ಸಂಘಟಿಸಿದರು. ಈ ಐದು ಜನರನ್ನ “ಪಂಚ್‌ ಪ್ಯಾರೆ’ ಎನ್ನುತ್ತಾರೆ (ಗುರುವಿಗೆ ಪ್ರಿಯರಾದ ಐದು ಜನ). ಐದು ಜನರಲ್ಲಿ ಒಬ್ಬರ ಹೆಸರು ಬೀದರ್‌ನ “ಸಾಯಿಬಣ್ಣ’. ಸಿಕ್ಖರ ದಿನನಿತ್ಯದ ಪ್ರಾರ್ಥನೆಯಲ್ಲಿ ಈ ಪಂಚ್‌ ಪ್ಯಾರೆಯನ್ನು ಸ್ಮರಿಸುತ್ತಾರೆ. ಚಮ್‌ಕೌರ್‌ನ ಯುದ್ಧದಲ್ಲಿ ಭಾಯಿ ಸಾಹಿಬ್‌ ಸಿಂಗ್‌ ಗುರು ಗೋವಿಂದ ಸಿಂಗರ ಇಬ್ಬರು ಹಿರಿಯ ಪುತ್ರರು ಮತ್ತು ಇನ್ನಿಬ್ಬರು ಪ್ಯಾರೆಗಳಾದ ಭಾಯಿ ಹಿಮ್ಮತ್‌ ಸಿಂಗ್‌ ಮತ್ತು ಭಾಯಿ ಮೊಹಕಾಂ ಸಿಂಗರೊಡನೆ ಹುತಾತ್ಮರಾದರು. ಭಾಯಿ ಸಾಹಿಬ್‌ ಸಿಂಗರಲ್ಲದೆ, ಸಿಕ್ಖ್ ಇತಿಹಾಸದಲ್ಲಿ ಅತ್ಯಂತ ಗೌರವಾನ್ವಿತ ಹೆಸರಾದ ಮಾಯಿ ಬಾಗೊ, ಬೀದರ್‌ಗೆ ಬಂದು ಹತ್ತಿರದ ಗ್ರಾಮ ಜನವಾಡದಲ್ಲಿ ನೆೆಲೆ ನಿಂತರು. ಮಾಯಿ ಬಾಗೊ ಮೊಗಲರ ವಿರುದ್ಧ ಹೋರಾಡಿದ್ದರು, ನಾದೇಡ್‌ಗೆ ಗುರು ಗೋವಿಂದ ಸಿಂಗರೊಡನೆ ಬಂದಿದ್ದರು ಮತ್ತು ಅವರು ಜನವಾಡದಲ್ಲಿ ತಮ್ಮ ಅಂತ್ಯಕಾಲದವರೆಗೆ ವಾಸಿಸುತ್ತಿದ್ದರು.

ಜನವಾಡದಲ್ಲಿ ಆಕೆ ವಾಸಿಸುತ್ತಿದ್ದ ಜಾಗದಲ್ಲಿ ಅವರ ಸ್ಮರಣಾರ್ಥವಾಗಿ ಒಂದು ಗುರುದ್ವಾರವಿದೆ. ಈ ಸಂಬಂಧಗಳಿಂದಾಗಿ “ಬೀದರ್‌’ ಎಲ್ಲ ಸಿಕ್ಖVರ ಅಂತಃಸಾಕ್ಷಿಯ ಭಾಗವೇ ಆಗಿದೆ. ಗುರುನಾನಕರು ರಾಮೇಶ್ವರ ಮತ್ತು ಶ್ರೀಲಂಕಾಗಳಿಗೆ ಹೋಗುವಾಗ ಮತ್ತು ಹಿಂದಿರುಗುವಾಗ ಕರ್ನಾಟಕದ ಮೂಲಕ ಹಾದುಹೋಗಿದ್ದರು. ಕರ್ನಾಟಕದಲ್ಲಿನ ಅವರ ಪ್ರಯಾಣದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. 

ಗುರುನಾನಕ್‌ ಮತ್ತು ಗುರು ಗೋವಿಂದ ಸಿಂಗರ ಈ ಸಂಬಂಧಗಳಿದ್ದರೂ, ಗುರು ನಾನಕರ¨ªಾಗಲೀ, ಗುರು ಗೋವಿಂದ ಸಿಂಗರ¨ªಾಗಲೀ ವಿಸ್ತಾರವಾದ ಜೀವನ ಚರಿತ್ರೆ ಕನ್ನಡದಲ್ಲಿ ಇದುವರೆವಿಗೂ ಬಂದಿಲ್ಲ ಎನ್ನುವುದು ಆಶ್ಚರ್ಯದ ಸಂಗ‌ತಿಯಾಗಿದೆ. ಅಂಥ ನಿರ್ವಾತವನ್ನು ಇತ್ತೀಚೆಗೆ ಬಿಡುಗಡೆಯಾದ ಸೀತಾರಾಮು ಅವರ ಕೃತಿ ಸದ್ಗುರು ನಾನಕ್‌ ದೇವ: ಜೀವನ ಮತ್ತು ದರ್ಶನ ತುಂಬಿದೆ ಎಂದು ಭಾವಿಸುತ್ತೇನೆ. 

ಗುರುನಾನಕ್‌ ದೇವ್‌ ಅವರ “ಜಪಜಿ’ (ಹಾಡು) ಯ ಮೇಲಿನ ತಮ್ಮ ಕೃತಿ ದ ಟ್ರಾ ನೇಮ್‌ನಲ್ಲಿ ಓಶೋ ರಜನೀಶ್‌ ಹೇಳಿರುವ ಮಾತು “ದೈವತ್ವದ ಪರಮ ಸಾûಾತ್ಕಾರಕ್ಕೆ ನಾನಕರ ಹಾಡು  ಮಾರ್ಗ ಹೂವುಗಳಿಂದ ತುಂಬಿರುವಂಥ‌ದು. ಅವರು ಹೇಳಿರುವುದೆÇÉಾ ಪದ್ಯಗಳಲ್ಲಿ. ಅವರ ಮಾರ್ಗ ರಾಗ ಮಾಧುರ್ಯವಾದುದು, ಅಮೃತದ ರುಚಿಯಿಂದ ತುಂಬಿದ್ದು. ಅವರ ಗೀತೆಗಳು ಸಾಧಾರಣ ಗಾಯಕನದ್ದಲ್ಲ. ಅವುಗಳಲ್ಲಿ ದೇವರ ಪ್ರತಿಫ‌ಲನವಿದೆ. ಸ್ವರ್ಗ ಸಾಮ್ರಾಜ್ಯದಿಂದ ತಂದ ತಾಜಾ ಸುದ್ದಿಗಳು ಅವು. ಗುರುನಾನಕರ ಬಗ್ಗೆ ಕೇವಲ ವಿದ್ವತೂ³ರ್ಣವಾದ ಶುಷ್ಕ ಗದ್ಯ ಗುರುನಾನಕರ ಜೀವನ ಮತ್ತು ಕೃತಿಗೆ ನ್ಯಾಯ ಒದಗಿಸುವುದಿಲ್ಲ. ಸೀತಾರಾಮು ಅವರು ಗುರುವಿನ ಬಗ್ಗೆ ತಮ್ಮ ಭಕ್ತಿಯನ್ನ ಸರಾಗ ಗದ್ಯದಲ್ಲಿ ವ್ಯಕ್ತಪಡಿಸಿ¨ªಾರೆ. ಎಲ್ಲಿಯೂ ಅವರ ಭಾಷೆ ಘನವಾದದ್ದು ಎಂದಾಗಲಿ, ತಿಣಿಕಿ ಬರೆದಿದ್ದು ಎಂದಾಗಲಿ ಎನಿಸುವುದಿಲ್ಲ. ಇದು ಈ ಕೃತಿಯ ಸಫ‌ಲತೆಯ ಸೂಚನೆಯಾಗಿದೆ. 

ನಾನೊಬ್ಬ ಸಾಹಿತ್ಯ ವಿಮರ್ಶಕನಲ್ಲ. ಈ ಜೀವನಚರಿತ್ರೆಯನ್ನು ಕೇವಲ ಸಾಹಿತ್ಯಿಕ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ನಾನು ಹುಟ್ಟಿದ್ದು ಗುರುನಾನಕರು ಹುಟ್ಟಿದ ನಾನಕ್‌ ಸಾಹೀಬ್‌ನಲ್ಲಿ. ಗುರೂಜಿ ಹುಟ್ಟಿದ ಮತ್ತು ಅವರ ಬಾಲಲೀಲೆಗಳ ಸ್ಥಳ. ಅದರಿಂದಾಗಿ ಗುರೂಜಿಯವರೊಡನೆ ನನಗೊಂದು ವೈಯಕ್ತಿಕ ಬಾಂಧವ್ಯ ಉಂಟು. ಗುರುನಾನಕರ ಕೃತಿಯನ್ನು ಯಾರಿಗೆ ತಾವು ಹಾಡುವ ನಾಡಗೀತೆಯಿಂದಾಗಿ, “ನಾನಕ, ರಾಮಾನಂದ, ಕಬೀರ’ ಎಂಬ ಹೆಸರುಗಳ ಸಾಲಿನಲ್ಲಿ ನಾನಕರ ಹೆಸರು ಚಿರಪರಿಚಿತವೋ, ಆದರೆ ಅವರ ಜೀವನ ಮತ್ತು ಉಪದೇಶಗಳ ಬಗ್ಗೆ ಹೆಚ್ಚು ಗೊತ್ತಿಲ್ಲವೋ ಅಂತಹವರು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾರೆ ಎಂದು ಆಶಿಸುತ್ತೇನೆ.

ಗುರುನಾನಕ ದೇವರ ಶಬ್ದವನ್ನು ಅರ್ಥಮಾಡಿಕೊಳ್ಳದೆ ಅವರ ಜೀವನವನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ದುರದೃಷ್ಟವಶಾತ್‌ ಗುರಬಾನಿಯ ಯಾವುದೇ ಉತ್ತಮ ಭಾಷಾಂತರ ಕನ್ನಡದಲ್ಲಿ ದೊರಕುವುದಿಲ್ಲ. ಸದ್ಗುರು ನಾನಕ್‌ ದೇವ್‌: ಜೀವನ ಮತ್ತು ದರ್ಶನ  ಕೃತಿಯಲ್ಲಿ ಲೇಖಕರು ಗುರುಬಾನಿಯ ಇಂಗ್ಲಿಶ್‌ ಭಾಷಾಂತರದ ಆಧಾರದ ಮೇಲೆ ತಮ್ಮ ಕನ್ನಡ ಭಾಷಾಂತರವನ್ನು ಮಾಡಿ¨ªಾರೆ. ಗುರುಬಾನಿಯನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವುದು ಕಷ್ಟದ ಕೆಲಸ. ಭಾಷಾಂತರದ ಭಾಷಾಂತರವನ್ನು ಮಾಡುವಾಗಿನ ನಷ್ಟ , ಸೀಮಿತತೆಯನ್ನು  ಅಂಗೀಕರಿಸಿ ಇಲ್ಲಿ ಈ ಕೆಲಸ ನಡೆದಿದೆ. ಗುರುಬಾನಿಯನ್ನು ಕೂಡ ಕನ್ನಡಕ್ಕೆ ಭಾಷಾಂತರಿಸುವ ಕೆಲಸವನ್ನು ಮಾಡಬೇಕಾಗಿದೆ. ಗುರು ಗೋವಿಂದ ಸಿಂಗರ ಜಾಪ್‌ ಸಾಹೀಬ್‌ನ್ನು ಎಚ್‌. ಎಸ್‌. ಶಿವಪ್ರಕಾಶ್‌ ಸಮರ್ಥವಾಗಿ ಭಾಷಾಂತರ ಮಾಡಿ¨ªಾರೆ.

ಆದರೆ, ಅದು ಸುಲಭವಾಗಿ ಲಭ್ಯವಿಲ್ಲ. ನಿರಹಂಕಾರ, ಅಸೀಮ ಪರಮಾತ್ಮನ ಗುಣಗಾನ ಮಾಡುವ ಜಾಪ್‌ ಸಾಹೀಬ್‌ನಿಂದ ಅವರು ಆಕರ್ಷಿತರಾಗಿದ್ದರು. ಮಹಾತ್ಮಾಗಾಂಧಿಯವರ ಮೊಮ್ಮಗ, ಪ್ರಸಿದ್ಧ ತತ್ವಜ್ಞಾನಿಗಳಾದ ರಾಮಚಂದ್ರ ಗಾಂಧಿ ಅವರ ಪ್ರಕಾರ, “ಭಾರತ‌ದಲ್ಲಿನ ಎಲ್ಲ ಋಷಿಗಳೂ, ಧರ್ಮಪ್ರವರ್ತಕರೂ ಮಂತ್ರಗಳನ್ನು ಕೊಟ್ಟಿ¨ªಾರೆ. ಗುರುನಾನಕ್‌ ದೇವ್‌ ಕೊಟ್ಟಿರುವ ಮಂತ್ರ- ಏಕ್‌ ಓಂಕಾರ್‌ ಸತ್‌ನಾಮ್‌ ಕರ್ತಾಪುರಖ ನಿಭೌì ನಿÊçೆìರ್‌ ಅಕಾಲಮೂರತ್‌ ಗುರ್‌ಪ್ರಸಾದ್‌. (ಏಕ್‌ ಓಂಕಾರ್‌ ಸತ್‌ನಾವå ಕರ್ತಾಪುರುಷ ನಿರ್ಭಯ ನಿರ್ವೈರ ಅಕಾಲಮೂರ್ತಿ ಅಯೋನಿ ಸ್ವಯಂಭೂ). ಇದನ್ನ ಮೂಲಮಂತ್ರವೆನ್ನಲಾಗಿದೆ. ಇದೇ ಗುರುನಾನಕ‌‌ ದೇವರ ಉಪದೇಶದ ಮತ್ತು ಸಿಕ್ಖ್ ಧರ್ಮದ ಸಾರ. ಇಲ್ಲಿ ಗಮನಾರ್ಹವಾದ ಅಂಶ ಎಂದರೆ “ಏಕ್‌’ನ್ನು ಸಂಖ್ಯೆಯಲ್ಲಿ ಬರೆಯಲಾಗಿದೆ, ಅಕ್ಷರಗಳಲ್ಲಿ ಅಲ್ಲ. ಅಕ್ಷರಗಳಿಗೆ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳನ್ನು ಕೊಡಬಹುದು ಆದರೆ, ಸಂಖ್ಯೆಗೆ ವಿವಿಧ ಅರ್ಥಗಳನ್ನು ಕೊಡಲು ಸಾಧ್ಯವಿಲ್ಲ. ಆದ್ದರಿಂದ “ಏಕ್‌’ ಎನ್ನುವುದು ಒಬ್ಬನೇ ಪರಮಾತ್ಮನನ್ನು ಮತ್ತು ಸೃಷ್ಟಿಕರ್ತ ಹಾಗೂ ಸೃಷ್ಟಿಯನ್ನು ಪ್ರತಿನಿಧಿಸುತ್ತದೆ. ಏಕೆಂದರೆ, ದೇವರು ಎÇÉೆಲ್ಲಿಯೂ, ಎಲ್ಲರಲ್ಲೂ ಇ¨ªಾರೆ. ಎಲ್ಲ  ಸೃಷ್ಟಿಕರ್ತನಿಂದ ವ್ಯಾಪಿಸಿದೆ. ಸಿಕ್ಖ್ ಸಂಪದ್ರಾಯದಂತೆ ಮೂಲಮಂತ್ರವನ್ನು ಗುರು ನಾನಕ್‌ ದೇವ್‌ ಅವರು ಪರಮಾತ್ಮನ ಸಾûಾತ್ಕಾರವಾದಾಗ ಹೇಳಿದ್ದರು. ಈ ಘಟನೆಯನ್ನು ಗುರುನಾನಕ್‌ ದೇವರ ಎಲ್ಲ ಜೀವನ ಚರಿತ್ರೆಗಳಲ್ಲೂ ವಿವರಿಸಲಾಗಿದೆ. ಗುರು‌ದೇವರ ಜೀವನದಲ್ಲಿ ಪರಮಾತ್ಮನ ಸಾûಾತ್ಕಾರವಾದದ್ದು ಪ್ರಮುಖ ತಿರುವು.

ಸಂಕ್ಷಿ±¤‌ವಾಗಿ ಹೇಳುವುದಾದರೆ, ಮೂವತ್ತು ವರ್ಷಗಳಾಗಿದ್ದ ಗುರುನಾನಕ್‌, ನವಾಬ್‌ ದೌಲತ್‌ ಖಾನ್‌ ಲೋಧಿಯ ಮೋದಿಖಾನೆಯಲ್ಲಿ ಮೋದಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಎಂದಿನಂತೆ ಸೂಯೊìàದಯಕ್ಕೆ ಮುನ್ನ ಅವರು ನದಿಯಲ್ಲಿ ಸ್ನಾನ ಮಾಡಲು ಹೋಗಿ ನದಿಯಲ್ಲಿ ಇಳಿದರು. ಅವರ ಜೊತೆಗೆ ಬಂದಿದ್ದ ಒಬ್ಬ ಸಹಚರ ದಡದÇÉೇ ಇದ್ದ. ನೀರಿನಲ್ಲಿ ಇಳಿಯುತ್ತಿದ್ದಂತೆ ಗುರೂಜಿ ಅದೃಶ್ಯನಾಗಿ ಹೋದ. ದೇವದೂತನೊಬ್ಬ ಅವನನ್ನು ಪರಮಾತ್ಮನ ಬಳಿಗೆ ಕೊಂಡೊಯ್ದ. ಗುರು ನೀರಿನಿಂದ ಹೊರ ಬಾರದಿ¨ªಾಗ ಜೊತೆಗೆ ಬಂದಿದ್ದ ಸೇವಕ ಸಹಚರ ಆತಂಕಗೊಂಡು ಗುರು ಮುಳುಗಿಹೋದ ಎಂದು ಜೋರಾಗಿ ಕೂಗುತ್ತ ಊರಿಗೆ ಓಡಿಬಂದ. ನವಾಬ ಮತ್ತು ಇತರ ಎಲ್ಲ ಜನರೂ ನದಿಯ ಬಳಿಗೆ ಬಂದರು. ಎಲ್ಲರೂ ಬಹಳ ದುಃಖೀತರಾಗಿದ್ದರು. ನವಾಬ ತನ್ನ ಆಳುಗಳಿಗೆ ನದಿಯಲ್ಲಿ ಧುಮುಕಿ ಶೋಧಿಸುವಂತೆ ಆಜ್ಞಾಪಿಸಿದ. ಎಷ್ಟು ಹುಡುಕಿದರೂ ಗುರುವಿನ ದೇಹ ದೊರೆಯಲಿಲ್ಲ. 

ಪರಮಾತ್ಮ ಗುರುವಿಗೆ ಒಂದು ಬಟ್ಟಲು ಅಮೃತವನ್ನಿತ್ತು, ಅವನು ಕೊಟ್ಟಿದ್ದನ್ನು ಇತರರಿಗೂ ಕೊಡುವಂತೆ  ಆದೇಶಿಸಿದನು. ಈ ಆಜ್ಞೆಯನ್ನು ಹೊತ್ತು ಗುರೂಜಿ ಮೂರು ದಿವಸಗಳ ನಂತರ ನದಿಯಲ್ಲಿ ಕಾಣಿಸಿಕೊಂಡರು. ಎಲ್ಲರೂ ಆಶ್ಚರ್ಯಚಕಿತರಾಗಿ, ಹರ್ಷಿತರಾದರು. ಈ ಸಾûಾತ್ಕಾರದ ನಂತರ ಮೂಲಮಂತ್ರವನ್ನು  ಪಠಿಸಲಾಯಿತು. ಈ ಅನುಭವವೇ ಜಾಪ್‌ ಸಾಹೀಬ್‌ನ ಸಾರಸರ್ವಸ್ವವಾಗಿದೆ.

ನಾನಕರು ಕೇವಲ ಸಿಕ್ಖರ ಗುರುವಲ್ಲ ಅವರು ಮಾನವ ಜನಾಂಗದ ಗುರು. ಅವರ ಸಂದೇಶ ಸಾರ್ವತ್ರಿಕವಾಗಿದ್ದು , ಎಲ್ಲ ಕಾಲ-ದೇಶಗಳಿಗೆ ಅನ್ವಯವಾಗುವಂತಹುದು. 
(ಮೂಲಬರಹದ ಆಯ್ದ ಭಾಗ)

– ಚಿರಂಜೀವಿ ಸಿಂಗ್‌
(ಕರ್ನಾಟಕ ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ)

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.