Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

Team Udayavani, Jul 21, 2024, 6:01 PM IST

Guru Purnima Spcl: ವೈಎನ್‌ಪಿ ಎಂಬ ಅಪರೂಪದ ಶಿಕ್ಷಕರು

ಸಾಂದರ್ಭಿಕ ಚಿತ್ರ

ನನಗೆ ಕಲಿಸಿದ, ನನ್ನ ವ್ಯಕ್ತಿತ್ವವನ್ನು ರೂಪಿಸಿದ ಎಲ್ಲ ಗುರುಗಳೂ ನನಗೆ ಮಾನ್ಯರೇ. ಆದರೆ ಅವರ ಪೈಕಿ, ನನ್ನ ನೆನಪಲ್ಲಿ ಸದಾ ಉಳಿದವರೆಂದರೆ ಹೈಸ್ಕೂಲ್‌ನಲ್ಲಿ ಕಲಿಸಿದ ವೈ.ಎನ್‌.ಪರಮೇಶ್ವರಯ್ಯ ಎನ್ನುವ ಗುರುಗಳು.

ವೈಎನ್‌ಪಿ ಎಂದೇ ಕರೆಯಲಾಗುತ್ತಿದ್ದ ಅವರು ಬೇರೆ ಬೇರೆ ತರಗತಿಗಳಲ್ಲಿ ಇಂಗ್ಲಿಷ್‌, ಗಣಿತ, ವಿಜ್ಞಾನಗಳನ್ನು ಬೋಧಿಸಿದವರು. ಅವರ ಪಾಠಗಳನ್ನು ಕೇಳುವುದೇ ಒಂದು ರೋಚಕ ಅನುಭವ. ಒಮ್ಮೆ ತರಗತಿಯಲ್ಲಿ ಕೇಳಿದರೆ ಸಾಕಾಗ್ತಿತ್ತು. ಮನದಲ್ಲಿ ಗಟ್ಟಿಯಾಗಿ ಕುಳಿತು ಬಿಡ್ತಿತ್ತು. ಅವರ ಪಾಠವೆಂದರೆ ಒಂದು ನಿಗೂಢ ಲೋಕದೊಳಗೆ ಹೊಕ್ಕು ಬರುವ ಒಂದು ಬೆರಗಿನ ಅನುಭವ. ಎಲ್ಲಕ್ಕಿಂತ ನನಗೆ ಇಷ್ಟವಾದದ್ದು ಅವರ ಇಂಗ್ಲಿಷ್‌ ಪಾಠ. ನನ್ನ ಬಗ್ಗೆ ವಿಶೇಷ ಪ್ರೀತಿ ಇದ್ದ ಅವರು, ಬಿಡುವಿನ ವೇಳೆಯಲ್ಲಿ, ಸ್ಟಾಫ್ ರೂಮಿನಲ್ಲಿ ಇಂಗ್ಲಿಷ್‌ ಕವಿತೆಗಳನ್ನು ವಾಚನ ಮಾಡೋದು ಹೇಗೆ, ಅವುಗಳ ಲಯವೈವಿಧ್ಯ ವನ್ನು ಹಿಡಿಯೋದು ಹೇಗೆ, ಅವನ್ನು ಅರ್ಥ ಮಾಡಿಕೊಳ್ಳೋದು ಹೇಗೆ ಎಂಬುದನ್ನು ತಿಳಿಸಿ, ಮನದಟ್ಟು ಮಾಡಿಬಿಡ್ತಿದ್ದರು.

ಅವರ ಆ ಪಾಠವು ನನಗೆ ಕನ್ನಡ ಕವಿತೆಗಳ ಲಯ ವ್ಯವಸ್ಥೆಯನ್ನೂ, ಕವಿತೆಗಳನ್ನೂ ಅರ್ಥ ಮಾಡಿಕೊಳ್ಳುವ ಬಗೆಯನ್ನು ತಿಳಿಯಲು ಸಹಾಯವಾಗ್ತಿತ್ತು. ಇಂದು ನಾನು ಸಾಹಿತ್ಯ ಕ್ಷೇತ್ರದಲ್ಲಿ ಒಂಚೂರು ಕೆಲಸ ಮಾಡಿದ್ದರೆ ಅದಕ್ಕೆ ಅವರ ಕೊಡುಗೆಯೂ ಇದೆ ಎಂಬುದು ಖಚಿತ. ಅವರಿಗೆ, ಅವರಂಥ ಅನೇಕ ಗುರುಗಳಿಗೆ, ಆಮೇಲೆ ನನಗೆ ಕವಿತೆಯ ಹೊಸ ದಾರಿಯನ್ನು ಸೂಚಿಸಿದ ಗುರುವಲ್ಲದ ಗುರು ಕವಿ ಗೋಪಾಲಕೃಷ್ಣ ಅಡಿಗರಿಗೆ ನಾನು ಸದಾ ಕೃತಜ್ಞ. ಅವರೆಲ್ಲರಿಗೆ ನನ್ನ ಗೌರವ ಪೂರ್ವಕ ನಮನಗಳು

-ಸುಬ್ರಾಯ ಚೊಕ್ಕಾಡಿ ಅಧ್ಯಾಪಕರು, ಹಿರಿಯ ಸಾಹಿತಿಗಳು

ಟಾಪ್ ನ್ಯೂಸ್

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Exam 3

Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ

1-kanaka

Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.