Guru Purnima Spcl: ತಾಯಿ ಜನ್ಮ ಕೊಟ್ಟಳು, ಗುರು ಪುನರ್ಜನ್ಮಕೊಟ್ಟರು!
Team Udayavani, Jul 21, 2024, 5:55 PM IST
ನನ್ನ ಗುರುಗಳ ಬಗ್ಗೆ ಮಾತಾಡಲಿಕ್ಕೆ ನನಗ ಭಾಳ ಆನಂದ ಆಗ್ತದ. ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಗಾನಯೋಗಿ ಪುಟ್ಟರಾಜ ಗವಾಯಿಗಳು ಇಬ್ಬರೂ ಹುಟ್ಟು ಕುರುಡರು. ಅವರನ್ನ ಕರಕೊಂಡ ಬಂದು ಶಿವಯೋಗಿ ಮಂದಿರದೊಳಗ ಇಟ್ಕೊಂಡು ಸಂಗೀತ ಕಲಿಸಿದ್ದು ಹಾನಗಲ್ ಕುಮಾರಸ್ವಾಮಿ ಅವರು. ಅವರೆಂಥಾ ದಿವ್ಯಜ್ಞಾನಿ..!
ಗುರುಗಳು ಜ್ಞಾನಿಗಳಿರ್ತಾರ. ಆದರ, ಸಮಾಜಕ್ಕಾಗಿ ನಿಸ್ವಾರ್ಥ ಸೇವಾ ಮಾಡಿದವರು ಕಡಿಮಿ. ನಮ್ಮ ಗುರುಗಳು ಪುಟ್ಟರಾಜ ಗವಾಯಿಗಳು ತಮಗಾಗಿ ಏನನ್ನೂ ಬಯಸಲಿಲ್ಲ. ಇಂಥ ಗುರುಗಳು ಸಿಕ್ಕಿದ್ದು ಶಿಷ್ಯರಾದ ನಮ್ಮ ಭಾಗ್ಯ.
ತಿಂಗಳಾನುಗಟ್ಟಲೆ ಒಂದ ರಾಗ :
1967ರೊಳಗ ನಾನು ಗದಗಿನ ವೀರೇಶ್ವರ ಪುಣ್ಯಾಶ್ರಮ ಸೇರಿದೆ. 12 ವರ್ಷ ಅಲ್ಲಿ ಸಂಗೀತಾಭ್ಯಾಸ ಮಾಡಿದೆ. ನಾನು ಕಲಿತಿದ್ದು ಗುರುಕುಲ ಪದ್ಧತಿಯೊಳಗ. ಪ್ರತಿದಿನ ನಶಿಕ್ಲೆ ಏಳಬೇಕು. ಶುಭ್ರರಾಗಿ ಅಭ್ಯಾಸಕ್ಕ ಹೋಗಬೇಕು. ನಾವು ಹೋಗೋದ್ರಾಗ ಗುರುಗಳು ತಂಬೂರಿ ಹಿಡಿಕೊಂಡು ಕೂತಿರ್ತಿದ್ರು. ಪ್ರತಿದಿನ ಬೆಳಗ್ಗೆ 4ರಿಂದ 7 ಗಂಟೆ ತನ 3 ತಾಸು ಸಂಗೀತ, ವಾದ್ಯ ಅಭ್ಯಾಸ. ಒಂದ ರಾಗವನ್ನ 3-4 ತಿಂಗಳು ಕಲಸ್ತಿದ್ರು. ಅದು ಪಕ್ಕಾ ಆಗೋತನ ಮುಂದ ಹೋಗ್ತಿರಲಿಲ್ಲ.
ನಿನಗ ಈಗ ಸಂಗೀತ ತಿಳಿಲಿಕತ್ತದ :
ನನಗ ಭಾಳ ಸಲ ಭೂಪಾಲಿ, ಶುದ್ಧ ಕಲ್ಯಾಣಿ, ದೇಸಕರ್ ಈ ಮೂರು ರಾಗದೊಳಗ ಸ್ವರ ಹಚ್ಚೋದರ ಬಗ್ಗೆ ಭಾಳ ಗೊಂದಲ ಆಗ್ತಿತ್ತು. ಅದಕ್ಕ ಗುರುಗಳ ಕಡೆ ಹೋಗಿ “ಅಜ್ಜಾರ, ನನಗ ಭೂಪಾಲಿ ಹಾಡಲಿಕ್ಕೆ ಯಾಕೊ ವಿಶ್ವಾಸ ಬರಲ್ತು’ ಅಂತ ಅಂದೆ. “ಇಷ್ಟು ವರ್ಷ ಆತು, ಇನ್ನ ಭೂಪ್ ಬರಂಗಿಲ್ಲ..? ಈಗ ನಿನಗ ಸಂಗೀತ ತಿಳಿಲಿಕತ್ತದ. ಸಂಗೀತ ಅಂದ್ರ ಹಂಗ. ಅಭ್ಯಾಸ ಮಾಡ್ತಾ ಮಾಡ್ತಾ 60ನೇ ವರ್ಷಕ್ಕ ಸ್ವರ ಹಚ್ಚೋದು ಗೊತ್ತಾಗ್ತದ’ ಅಂತ ಹೇಳಿದ್ರು.
“ನ ಗುರೋರ್ ಅಧಿಕಂ’ ಅಂತ ಸಂಸ್ಕೃತದೊಳಗ ಒಂದು ಮಾತು ಅದ. ಇದರರ್ಥ “ಗುರುವಿನ ಮುಂದ ಜಗತ್ತಿನ್ಯಾಗ ಯಾವುದೂ ದೊಡ್ಡದಲ್ಲ’. ಅವರು ನಮಗೆ ಮುಖ್ಯವಾಗಿ ಕಲಿಸಿದ್ದು ಸಂಸ್ಕಾರ. “ಆಚಾರ ಕಲಿರಿ, ಅಂದ್ರ ವಿಚಾರ ಹೊಳಿತದ. ಸದಾ ಒಳ್ಳೆದು ಮಾಡ್ರಿ…’ ಇದನ್ನ ಒತ್ತಿ ಒತ್ತಿ ಹೇಳ್ತಿದ್ರು. ನನ್ನ ಗುರುಗಳಿಂದನ ಇವತ್ತು ನಾನು ಸ್ವಾವಲಂಬಿ ಜೀವನ ಮಾಡಲಿಕತ್ತೇನಿ. ನನ್ನ ತಾಯಿ ನನಗ ಜನ್ಮ ಕೊಟ್ಟಳು, ಗುರು ಪುನರ್ಜನ್ಮ ಕೊಟ್ಟರು. ನನಗ ಅವರ ದೇವರು
-ಪಂ. ಎಂ. ವೆಂಕಟೇಶ್ ಕುಮಾರ್, ಖ್ಯಾತ ಗಾಯಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.