ವೈಮಾನಿಕ ಸಂಸ್ಥೆಗೆ ಸುವರ್ಣ ಸಂಭ್ರಮ


Team Udayavani, Jan 20, 2019, 12:30 AM IST

nemichandra-photo.jpg

ಮತ್ತೂಮ್ಮೆ ಬೆಂಗಳೂರಿನ ಆಗಸದಲ್ಲಿ ದೇಶ-ವಿದೇಶಗಳ ಅತ್ಯಾಧುನಿಕ ವಿಮಾನಗಳು ಘರ್ಜಿಸಲಿವೆ. ಬೆಂಗಳೂರು, ಭಾರತದ ವಾಯುಯಾನದ ತವರೂರು. ಬೆಂಗಳೂರನ್ನು ವಾಯುಯಾನದ ಭೂಪಟದಲ್ಲಿ ನಿಲ್ಲಿಸಿದ ಕೀರ್ತಿ ದೂರದೃಷ್ಟಿಯ ಉದ್ಯಮಿ, ವಾಲ್‌ಚಂದ್‌ ಹೀರಾಚಂದ್‌ ಅವರಿಗೆ ಸೇರುತ್ತದೆ.

ಕನ್ನಡ ನೆಲದಲ್ಲಿ ಬೇರಿಳಿಸಿ ಬೆಳೆದ ನಮ್ಮ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ಗೆ ಅದ್ಭುತ ಇತಿಹಾಸವಿದೆ. ಪರಾಡಳಿತದಲ್ಲಿದ್ದ ನಮ್ಮ ದೇಶದಲ್ಲಿ ಒಂದು ಸೈಕಲ್‌ ಮಾಡುವ, ಕಾರು ತಯಾರಿಸುವ ಕಾರ್ಖಾನೆ ಇಲ್ಲದಿದ್ದ ಕಾಲದಲ್ಲಿ, ವಾಲ್‌ಚಂದ್‌ ಅವರು ವಿಮಾನ ಕಾರ್ಖಾನೆಯನ್ನು ಸ್ಥಾಪಿಸುವ ಕನಸು ಕಂಡರು. ನಾಡಿನ ಹೆಮ್ಮೆಯ ಇಂಜಿನಿಯರ್‌ ಸರ್‌ ಎಮ್‌ ವಿಶ್ವೇಶ್ವರಯ್ಯ, ಅಂದಿನ ದೀವಾನರಾದ ಸರ್‌ ಮಿರ್ಜಾ ಇಸ್ಮಾಯಿಲ್‌ ಮತ್ತು ಮೈಸೂರು ಮಹಾರಾಜರು, ವಾಲ್‌ಚಂದ್‌ ಅವರ ಕನಸು ಇಲ್ಲಿ ನನಸಾಗಲು ಸಹಾಯಕರಾದರು. ದೇಶದ ವೈಮಾನಿಕ ಇತಿಹಾಸ ಎಚ್‌ಎಎಲ್‌ನ ಇತಿಹಾಸದೊಡನೆ ಒಂದುಗೂಡಿದೆ. 
1940ರಲ್ಲಿ ಸ್ಥಾಪಿತಗೊಂಡು, ಎರಡನೆಯ ಮಹಾಯುದ್ಧದ ಸಮಯದಲ್ಲಿ ವಿಮಾನಗಳ ಜೋಡಣೆ ಮತ್ತು ದುರಸ್ತಿಯ ಕೆಲಸದಿಂದ ಆರಂಭಗೊಂಡ ಕಾರ್ಖಾನೆ ಇದು. 1952ರಲ್ಲಿ ಮೊತ್ತಮೊದಲ ದೇಶೀಯ ವಿನ್ಯಾಸದ ಪ್ರಾಥಮಿಕ ತರಬೇತಿ ವಿಮಾನ “ಎಚ್‌.ಟಿ.-2 ಟ್ರೇನರ್‌’ ಹಾರಿದಾಗ, ಎಚ್‌ಎಎಲ್‌ನ ಇತಿಹಾಸದಲ್ಲಿ “ಸಂಶೋಧನೆ ಮತ್ತು ವಿನ್ಯಾಸ’ದ ಹೊಸ ಅಧ್ಯಾಯ ಆರಂಭವಾಯಿತು. ಈ ವಿಮಾನ ಭಾರತೀಯ ವಾಯುಪಡೆಯ ತರಬೇತಿ ತಂಡದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿತು.
ಭಾರತದ ವೈಮಾನಿಕ ಕನಸು ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ “ಧ್ರುವ’ ಮತ್ತು ಹಗುರ‌ ಯುದ್ಧ ವಿಮಾನ “ತೇಜಸ್‌’ ರೂಪದಲ್ಲಿ ರೆಕ್ಕೆ ಬಿಚ್ಚಿ ಹಾರಿದಾಗ, ದೇಶೀಯ ವಿನ್ಯಾಸ ಮತ್ತು ಸ್ವಾವಲಂಬನೆಯ ಹಾದಿಯಲ್ಲಿ ದೃಢ ಹೆಜ್ಜೆಗಳು ಮೂಡಿದವು. ತಾಂತ್ರಿಕ ಅಡತಡೆಗಳನ್ನು, ಅಮೆರಿಕದ ದಿಗ್ಬಂಧನವನ್ನು ಎದುರಿಸಿ ನೆಲ ಬಿಟ್ಟು ಮುಗಿಲು ಮುಟ್ಟಿದ ಹಾರುವ ಯಂತ್ರಗಳಿವು. 

ಎಚ್‌ಎಎಲ್‌ 1968ರಲ್ಲಿ “ಮ್ಯಾನೇಜ್‌ಮೆಂಟ್‌ ಟ್ರೆ„ನಿ’ಗಳಾಗಿ ಇಂಜಿನಿಯರಿಂಗ್‌ ಪದವೀಧರರನ್ನು ತೆಗೆದುಕೊಂಡಾಗ ಇವರಿಗೆ ವಿಧಿವತ್ತಾಗಿ ತರಬೇತಿ ನೀಡಲೆಂದು “ಎಚ್‌ಎಎಲ್‌ ಸ್ಟಾಫ್ ಕಾಲೇಜ್‌’ 1969ರಲ್ಲಿ ಸ್ಥಾಪಿತವಾಯಿತು. ಆರಂಭದಲ್ಲಿ ಕೆಲಕಾಲ ತುಮಕೂರು ರಸ್ತೆಯಲ್ಲಿ, ಮತ್ತೆ ಕೆಲಕಾಲ ಹೈದರಾಬಾದಿನಲ್ಲಿ ಇದ್ದ ಈ ಕಾಲೇಜು, 1974ರಲ್ಲಿ ಬೆಂಗಳೂರಿನ ಸುರಂಜನ್‌ದಾಸ್‌ ರಸ್ತೆಯಲ್ಲಿ ತನ್ನದೇ ಆದ ಕಟ್ಟಡದಲ್ಲಿ ನೆಲೆಯೂರಿತು. (ಈ ತಾಣದಲ್ಲಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುದ್ಧ ಕೈದಿಗಳನ್ನು ಇರಿಸಿದ್ದರೆಂಬ ಮಾತನ್ನೂ ನಾನು ಕೇಳಿದ್ದೇನೆ). ಇದೇ ಸಂಸ್ಥೆ 2001ರಲ್ಲಿ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ ಆಗಿ ವಿಸ್ತರಿಸಿ ಬೆಳೆಯಿತು, ವಿಮಾನ ಕಾರ್ಖಾನೆಯ ತರಬೇತಿಯ ಎಲ್ಲ ಅಗತ್ಯಗಳನ್ನು ಪೂರೈಸುತ್ತ ಬಂದಿತು.
 
ಶರವೇಗದ ಬೆಳವಣಿಗೆ
ಭಾರತದ ವೈಮಾನಿಕ ರಂಗ ಮಿಲಿಟರಿ ಮತ್ತು ಸಿವಿಲ್‌ ಎರಡೂ ಕ್ಷೇತ್ರದಲ್ಲಿ ಅತಿವೇಗದ ಬೆಳವಣಿಗೆಗೆ ಸಿದ್ಧವಾಗಿ ನಿಂತಿದೆ. ದೇಶದ ಸಣ್ಣ ಸಣ್ಣ ನಗರಗಳನ್ನೂ ವಾಯುಯಾನದ ಮೂಲಕ ಜೋಡಿಸುವ “ಉಡಾನ್‌’ (ಉಡೆ ದೇಶ್‌ ಕಿ ಆಮ್‌ ಆದಮಿ) ಹಾಗೂ “ಮೇಕ್‌ ಇನ್‌ ಇಂಡಿಯಾ’ ಯೋಜನೆಗಳು ಇದಕ್ಕೆ ಸಹಾಯಕವಾಗಿವೆ. ಇಂದು ವಿಮಾನ ಪ್ರಯಾಣ ಸಿರಿವಂತರ ಸವಲತ್ತಾಗಿಲ್ಲ. ಜನಸಾಮಾನ್ಯರೂ ವಿಮಾನದಲ್ಲಿ ಪ್ರಯಾಣ ಮಾಡುವುದು ಸಾಧ್ಯವಾಗಿದೆ.
 
2010ರಲ್ಲಿ ಡೊಮೆಸ್ಟಿಕ್‌ ಏರ್‌ಲೈನ್ಸ್‌ನಲ್ಲಿ ಹಾರಿದ ಪ್ರಯಾಣಿಕರ ಸಂಖ್ಯೆ 520 ಲಕ್ಷವಿತ್ತು. ಇಸವಿ 2017ರಲ್ಲಿ ಇದೇ ಅಂತರ್ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 1100 ಲಕ್ಷವನ್ನು ಮೀರಿತು. 2018ರಲ್ಲಿ, ನವೆಂಬರ್‌ ಹೊತ್ತಿಗೆ ಪ್ರಯಾಣಿಕರ ಸಂಖ್ಯೆ 1200 ಲಕ್ಷ ದಾಟಿತ್ತು. ಹಾಗೆಂದೇ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೊಮೆಸ್ಟಿಕ್‌ ಸಿವಿಲ್‌ ಏವಿಯೇಷನ್‌ ಮಾರ್ಕೆಟ್‌ ಆಗಿ ಭಾರತ ಮೂರನೆಯ ಸ್ಥಾನ ಪಡೆದಿದೆ. ಅಮೆರಿಕ ಮತ್ತು ಚೀನಾ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಮುಂದಿನ ವರ್ಷಗಳಲ್ಲಿ ಸಾವಿರ ಸಂಖ್ಯೆಯಲ್ಲಿ ನಾಗರಿಕ ಉಡ್ಡಣೆಯ ವಿಮಾನಗಳು ಭಾರತಕ್ಕೆ ಬರಲಿವೆ. 

ಬರೀ ವಿಮಾನಗಳಷ್ಟೇ ಅಲ್ಲ, ಹೆಲಿಕಾಪ್ಟರ್‌ಗಳ ಮಾರುಕಟ್ಟೆಯೂ ಹಿಗ್ಗಲಿದೆ. 130 ಕೋಟಿ ಜನರಿರುವ ಭಾರತದಲ್ಲಿ 280ಕ್ಕೂ ಕಡಿಮ ಸಿವಿಲ್‌ ಹೆಲಿಕಾಪ್ಟರ್‌ಗಳಿವೆ. ನಮ್ಮ ದಿಲ್ಲಿಯಂತಹ ಒಂದು ನಗರವಾದ ಬ್ರೆಜಿಲ್‌ ದೇಶದ  ಸಾವೋಪೋಲೋದಲ್ಲಿ 700ಕ್ಕೂ ಹೆಚ್ಚು ಸಿವಿಲ್‌ ಹೆಲಿಕಾಪ್ಟರ್‌ಗಳು ಹಾರಾಡುತ್ತವೆ. ಅಮೆರಿಕದಲ್ಲಿ 1400 ಹೆಲಿಕಾಪ್ಟರ್‌ಗಳು ಹಾರುಡುತ್ತಿವೆ. ಮುಂದುವರೆದ ದೇಶಗಳಲ್ಲಿ, ಹೆಲಿಕಾಪ್ಟರ್‌ಗಳನ್ನು ಹೆಲಿಆಂಬ್ಯುಲೆನ್ಸ್‌, ಪೊಲೀಸ್‌ ಕೆಲಸಕ್ಕೆ, ಕಾನೂನು ಭದ್ರತೆಗೆ, ದುರ್ಗಮ ಪ್ರದೇಶಗಳಲ್ಲಿ ಸಿಕ್ಕಿಬಿದ್ದವರನ್ನು ಹುಡುಕಿ ಕಾಪಾಡುವ ಆಪತಾºಂಧವನಾಗಿ ಬಹುಪಾತ್ರಗಳಲ್ಲಿ ಬಳಸಲಾಗುತ್ತದೆ. “ಉಡಾನ್‌’ ಯೋಜನೆಯಲ್ಲಿ ಸಣ್ಣ ನಗರಗಳನ್ನು ಕೂಡಿಸಲು ಹೆಲಿಕಾಪ್ಟರುಗಳು ಕೂಡ ಬಳಕೆಯಾಗಲಿರುವ ಕಾರಣ, ದೇಶದ ಹೆಲಿಕಾಪ್ಟರ್‌ಗಳ ಸಂಖ್ಯೆ ಹೆಚ್ಚಲಿದೆ. ಮುಂಬರುವ ಕೆಲವೇ ವರ್ಷಗಳಲ್ಲಿ, ಏರ್‌ಪೋರ್ಟ್‌ ನಂತೆಯೇ  ಹೆಲಿಪೋರ್ಟ್‌ಗಳೂ ಕಾಣಲಿವೆ. ಮೊತ್ತಮೊದಲ ಹೆಲಿಪೋರ್ಟ್‌ “ರೋಹಿಣಿ’ ದಿಲ್ಲಿಯಲ್ಲಿ 2016ರ ಮಾರ್ಚ್‌ ತಿಂಗಳಲ್ಲಿ ಕಾರ್ಯನಿರತವಾಯಿತು. ಈ ಎಲ್ಲ ವಿಮಾನಗಳು, ಹೆಲಿಕಾಪ್ಟರ್‌ಗಳು, ಅವುಗಳ ತಯಾರಿಕೆ, ರಿಪೇರಿ, ದುರಸ್ತಿ, ಸಂರಕ್ಷಣೆ, ಹೊಸ ಹೊಸ ನಗರಗಳಲ್ಲಿ ವಿಮಾನ ನಿಲ್ದಾಣಗಳು, ಏರ್‌ ಟ್ರಾಫಿಕ್‌ ಕಂಟ್ರೋಲ್‌, ಅವುಗಳ‌ ಮ್ಯಾನೇಜ್‌ಮೆಂಟ್‌, ಏರ್‌ಲೈನ್ಸ್‌  ಇವುಗಳ ಮೂಲಕ ವೈಮಾನಿಕ ರಂಗ ಬೃಹತ್ತಾಗಿ ಬೆಳೆಯಲಿರುವ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. 
 
ವೈಮಾನಿಕ ರಂಗಕ್ಕೆ ಸ್ವಾಗತ
ಶರವೇಗದಲ್ಲಿ ಸಾಗುವ ವೈಮಾನಿಕ ರಂಗದ ಸವಾಲು ಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ವೈಮಾನಿಕ ಇಂಜಿನಿಯರುಗಳ ಅಗತ್ಯವಿದೆ. ಇಂದು ಕಾಲೇಜಿನ ಕಲಿಕೆ ಮತ್ತು ಕಾರ್ಖಾನೆಯ ಅಗತ್ಯಗಳ ನಡುವೆ ದೊಡ್ಡ ಅಂತರವಿದೆ. 

ಪ್ರತಿವರ್ಷ ದೇಶದ ಸುಮಾರು 9000 ಇಂಜಿನಿಯರಿಂಗ್‌ ಕಾಲೇಜುಗಳಿಂದ 6 ಲಕ್ಷಕ್ಕೂ ಹೆಚ್ಚು ಇಂಜಿನಿಯರುಗಳು ಹೊರಬಿದ್ದರೂ ಇಂದಿನ ಶಿಕ್ಷಣದ ಒತ್ತು ಪರೀಕ್ಷೆ ಪಾಸು ಮಾಡಿ ಪದವಿ ಪಡೆಯುವತ್ತ ಕೇಂದ್ರೀಕರಿಸಿದ ಕಾರಣ, ಈ ಇಂಜಿನಿಯರುಗಳು ಕಾರ್ಖಾನೆಯ ಕೆಲಸಕ್ಕೆ ತತ್‌ಕ್ಷಣವೇ ಸಿದ್ಧವಿರುವುದಿಲ್ಲ. ಇವರನ್ನು “ಇಂಡಸ್ಟ್ರಿ ರೆಡಿ’ ಮಾಡಲು ಸೇತುವೆಯಾದ ಕೋರ್ಸ್‌ಗಳ ಅಗತ್ಯವಿದೆ. ಬಹಳಷ್ಟು ಬಾರಿ ಕಾಲೇಜು ಕಲಿಕೆ ಎಲ್ಲವೂ ಸೈದ್ಧಾಂತಿಕವಾಗಿದ್ದು, ವೈಮಾನಿಕ ರಂಗದ ಪ್ರಾಯೋಗಿಕ ಮಗ್ಗುಲನ್ನು ಕಾಣದೆಯೇ ನಾವು ಹೊರಬಂದಿರುತ್ತೇವೆ.  
 
ಸ್ವತಃ ನಾನು ರ್‍ಯಾಂಕ್‌ ಪಡೆದು, ಇಂಜಿನಿಯರಿಂಗ್‌ ಪದವಿ ಹೊತ್ತು, ಟಾಟಾ ಇನ್‌ಸ್ಟಿಟ್ಯೂಟ್‌ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಸಂಶೋಧನೆಯ ಮೂಲಕ ಎಂ.ಎಸ್‌. ಪದವಿ ಪಡೆದರೂ, ನನಗೆ ವಿಮಾನ ಕಾರ್ಖಾನೆಯನ್ನು ಸೇರಿದಾಗ ವೈಮಾನಿಕ ರಂಗದ ಬಗ್ಗೆ ಏನೇನೂ ತಿಳಿದಿರಲಿಲ್ಲ. ಕಾರಣ ನನ್ನ ಪದವಿ ಮತ್ತು ಸಂಶೋಧನೆ “ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌’ ವಿಷಯಕ್ಕೆ ಸಂಬಂಧಿಸಿತ್ತು. ನಾನು ಯಾವ ರಂಗದ ಕೆಲಸಕ್ಕೆ ಸಿದ್ಧವಾಗಬೇಕೆಂಬ ಅರಿವು ನನಗೇ ಇರಲಿಲ್ಲ. ಬಹುಶಃ ಅದರ ಅರಿವು ನನಗಿದ್ದರೆ, ಸಂಸ್ಥೆ ನನ್ನನ್ನು ಆ ರಂಗಕ್ಕೆ ಸಿದ್ಧಗೊಳಿಸುತ್ತಿತ್ತು. 

1942ರಲ್ಲಿಯೇ “ಭಾರತೀಯ ವಿಜ್ಞಾನ ಸಂಸ್ಥೆ’ಯಲ್ಲಿ ಏರೋನಾಟಿಕಲ್‌ ಇಂಜಿನಿಯರಿಂಗ್‌ ವಿಭಾಗ ಆರಂಭವಾಗಿ, ವಿಮಾನ ಕಾರ್ಖಾನೆಯ ಡಾ. ವಿ. ಎಮ್‌. ಘಾಟೆY ಅದರ ಮುಖ್ಯಸ್ಥರಾಗಿದ್ದರು. ಈ ವಿಭಾಗದವರಿಗೆ ವೈಮಾನಿಕ ರಂಗದ ಅರಿವಿತ್ತು. 

ಆದರೆ, ವೈಮಾನಿಕ ರಂಗ ಇಂದು ಮಲ್ಟಿ ಡಿಸಿಪ್ಲಿನರಿ ಕ್ಷೇತ್ರವಾಗಿ ಹಿಗ್ಗಿ ಹರಡಿದೆ. ಒಂದು ವಿಮಾನ ಅಥವಾ ಹೆಲಿಕಾಪ್ಟರ್‌ ತಯಾರು ಮಾಡಲು ಲೋಹ ವಿಜ್ಞಾನ, ಕಾಂಪೋಸಿಟ್ಸ್‌ ಮೆಟೀರಿಯಲ್ಸ್‌ನ ತಜ್ಞರು ಬೇಕು. ಏರ್‌ಫ್ರೆàಮ್‌, ಎಂಜಿನ್‌, ಮೆಕ್ಯಾನಿಕಲ್‌ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆಗೆ  ಬಹು ಸಂಖ್ಯೆಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರುಗಳು ಬೇಕು. ಒಂದು ಕಾಲಕ್ಕೆ ವಿಮಾನದ ನಿಯಂತ್ರಣ ಪೂರ್ಣ ಚಾಲಕನ ಜವಾಬ್ದಾರಿಯಾಗಿತ್ತು. ಯಾಂತ್ರಿಕ ದಂಡಗಳ ಮೂಲಕ ವಿಮಾನವನ್ನು ನಿಯಂತ್ರಿಸಲಾಗುತ್ತಿತ್ತು. ಆದರೆ, ಕಂಪ್ಯೂಟರ್‌ಗಳನ್ನು ಅಳವಡಿಸಿದ ಸ್ವಯಂ ಹಾರಾಟ ನಿಯಂತ್ರಣ ವ್ಯವಸ್ಥೆ  ಆಟೋಪೈಲೆಟ್‌ ಅಳವಡಿಸಿ ಆಧುನಿಕ ವಿಮಾನಗಳು “ಫ್ಲೈ-ಬೈ-ವೈರ್‌’ ಆದವು. 
 
ಇದಲ್ಲದೆ, ವಿಮಾನದ ಕಾಕ್‌ಪಿಟ್‌ ಕೂಡ ಬದಲಾಯಿತು. ಒಂದು ಕಾಲಕ್ಕೆ ಕಾಕ್‌ಪಿಟ್‌ನಲ್ಲಿ ಗುಂಡನೆಯ ವಿದ್ಯುತ್‌-ಯಾಂತ್ರಿಕ ಮಾಪಕಗಳು ಕಾಣುತ್ತಿದ್ದವು. ವಿಮಾನ ಚಾಲಕರು ಈ ಮಾಪಕಗಳ ಮೂಲಕ ವಿಮಾನ ಹಾರುತ್ತಿರುವ ಎತ್ತರ, ವೇಗ, ದಿಕ್ಕು, ವಿಮಾನ ವಾಲಿರುವ ಕೋನ, ವಿಮಾನದಲ್ಲಿ ಉಳಿದಿರುವ ಇಂಧನ, ಎಂಜಿನ್‌ ಮುಂತಾದ ಮುಖ್ಯ ವ್ಯವಸ್ಥೆಗಳನ್ನು ಕುರಿತ ವಿವರಗಳನ್ನು ಪಡೆಯುತ್ತಾರೆ. ಆದರೆ, ಇಂದು ಇಂತಹ ಹತ್ತಿಪ್ಪತ್ತು ಸಲಕರಣೆಗಳನ್ನು ಚಾಲಕ ಗಮನಿಸುತ್ತ¤ ಹಾರಬೇಕಿಲ್ಲ. ಆಧುನಿಕ ಕಾಕ್‌ಪಿಟ್‌ಗಳು ಸಂಪೂರ್ಣ ಎಲೆಕ್ಟ್ರಾನಿಕ್‌ ಆಗಿದ್ದು, ಮಲ್ಟಿಫ‌ಂಕ್ಷನ್‌ ಡಿಸ್‌ಪ್ಲೇ ಎಂಬ ಚಪ್ಪಟೆ ಫ‌ಲಕಗಳನ್ನು ಅಲ್ಲಿ ಕಾಣುತ್ತೇವೆ. ಇವುಗಳ ಮೇಲೆ ಮೂಡುವ ಮಾಹಿತಿಯನ್ನು  ಕಂಪ್ಯೂಟರುಗಳು ನಿಯಂತ್ರಿಸುತ್ತವೆ. ಹಾಗೆಂದೇ ಬಹುಸಂಖ್ಯೆಯಲ್ಲಿ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಕಮ್ಯುನಿಕೇಷನ್‌, ಕಂಪ್ಯೂಟರ್‌, ಐಟಿ ವಿಷಯದ ಇಂಜಿನಿಯರುಗಳ ಅಗತ್ಯ ವೈಮಾನಿಕ ರಂಗಕ್ಕಿದೆ.  

ಕಾಲೇಜಿನಿಂದ ಹೊರಬಿದ್ದ ಪದವೀಧರರನ್ನು ವೈಮಾನಿಕ ರಂಗಕ್ಕೆ ಸಿದ್ಧಗೊಳಿಸಲು, ಕಾಲೇಜು ಮತ್ತು ಕಾರ್ಖಾನೆಯ ನಡುವೆ ಸೇತುವೆಯಾಗುವ ಬ್ರಿಡಿjಂಗ್‌ ಕೋರ್ಸ್‌ ಅಗತ್ಯವಿದೆ. ದೇಶದ ಈ ಅಗತ್ಯವನ್ನು ಪೂರೈಸುವತ್ತ ತನ್ನ ಒಂದು ಹೆಜ್ಜೆಯಾಗಿ “ಎಚ್‌ಎಎಲ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ’, ಇಸವಿ 2018ರಲ್ಲಿ ಎರಡು ಪ್ರಮುಖ ದೀರ್ಘ‌ಕಾಲಿಕ ಪ್ರೋಗ್ರಾಮ್‌ಗಳನ್ನು ವಿನ್ಯಾಸ ಮಾಡಿ, ಆರಂಭಿಸಿತು. ಹೊರಗಿನ ಇಂಜಿನಿಯರ್‌ ಮತ್ತು ಅಧಿಕಾರಿಗಳನ್ನು ತನ್ನ ಅತ್ಯಾಧುನಿಕ ಕ್ಯಾಂಪಸ್‌ಗೆ ಸ್ವಾಗತಿಸಿತು. 

ಮೊದಲಿಗೆ 3 ತಿಂಗಳ “ಸರ್ಟಿಫಿಕೇಷನ್‌ ಪ್ರೋಗ್ರಾಮ್‌ ಇನ್‌ ಏರೋಸ್ಪೇಸ್‌ ಮ್ಯಾನೇಜ್‌ಮೆಂಟ್‌’ ಅನ್ನು ಲಖೌ°ನ “ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌’ ಜೊತೆಯಲ್ಲಿ ಆರಂಭಿಸಿತು. ನಂತರ ಅಕಾಡೆಮಿಗೆ “ಆಲ್‌ ಇಂಡಿಯಾ ಕೌನ್ಸಿಲ್‌ ಆಫ್ ಟೆಕ್ನಿಕಲ್‌ ಎಜುಕೇಶನ್‌’ನ ಮಾನ್ಯತೆ ಪಡೆದು, 15 ತಿಂಗಳ “ಪೋಸ್ಟ್‌ ಗ್ರಾಜುಯೇಟ್‌ ಡಿಪ್ಲೊಮೋ ಇನ್‌ ಏವಿಯೇಷನ್‌ ಮ್ಯಾನೇಜ್‌ಮೆಂಟ್‌’ ಆರಂಭಿಸಿತು. 

1940ರಲ್ಲಿ ಆರಂಭವಾದ ವಿಮಾನ ಕಾರ್ಖಾನೆ, ಇಂದು ಆಧುನಿಕ ಹೆಲಿಕಾಪ್ಟರ್‌,  ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು, ಅದರೊಳಗೆ ಅಳವಡಿಸುವ ಏರೋ ಎಂಜಿನ್‌ಗಳು, ವಾಯುಯಾನದಲ್ಲಿ ಬಳಸುವ ಇಲೆಕ್ಟ್ರಾನಿಕ್‌ ಉಪಕರಣಗಳು- ಇವೆಲ್ಲವುಗಳ ವಿನ್ಯಾಸ, ವಿಕಾಸ, ತಯಾರಿಕೆ, ದುರಸ್ತಿ, ಅಲ್ಲದೆ ಉಪಗ್ರಹ ಮತ್ತು ಉಪಗ್ರಹ ಉಡಾವಣಾ ವಾಹನಗಳ ಹೊರಮೈ ತಯಾರಿಕೆಯನ್ನೂ ಕಾರ್ಖಾನೆ ಕೈಗೊಂಡಿದೆ. ಎಚ್‌ಎಎಲ್‌ ದೇಶೀಯ ವಿನ್ಯಾಸದ ವಿಮಾನ ಮತ್ತು ಹೆಲಿಕಾಪ್ಟರ್‌ಗಳಲ್ಲದೆ, ರಷಿಯಾ, ಬ್ರಿಟನ್‌, ಫ್ರಾನ್ಸ್‌, ಇಸ್ರೇಲ್‌ ಮುಂತಾದ ದೇಶಗಳ ವಿಮಾನ, ಹೆಲಿಕಾಪ್ಟರ್‌ಗಳ ಲೈಸೆನ್ಸ್‌ ತಯಾರಿಕೆ ಹಾಗೂ ದುರಸ್ತಿ ಕೆಲಸದಲ್ಲೂ ತೊಡಗಿರುವ‌ ಕಾರ್ಖಾನೆ. ವಿಮಾನ ಕಾರ್ಖಾನೆಯ ಈ 78 ವರ್ಷಗಳ ವೈಮಾನಿಕ ರಂಗದ ಶ್ರೀಮಂತ ಅನುಭವವನ್ನು, ಅಕಾಡೆಮಿಯ 50 ವರ್ಷಗಳ ತರಬೇತು ನೀಡುವ ಕೌಶಲದೊಂದಿಗೆ ಒಗ್ಗೂಡಿಸಿ ವಿನ್ಯಾಸ ಮಾಡಿದ ಫೊÅàಗ್ರಾಮ್‌ಗಳು ಇವು. 

ಆಗ್ನೇಯ ಏಷಿಯಾದ ಅತಿ ದೊಡ್ಡ ವೈಮಾನಿಕ ಕೇಂದ್ರವಾದ ಎಚ್‌.ಎ.ಎಲ್‌.ನಲ್ಲಿ ಇಂದು 31 ವಿಭಾಗಗಳಿವೆ. ಎಚ್‌ಎಎಲ್‌ನ  11 ಸಂಶೋಧನಾ ಮತ್ತು ವಿನ್ಯಾಸ ವಿಭಾಗಗಳು, 20 ಪ್ರೊಡಕ್ಷನ್‌ ಮತ್ತು ಎಂ.ಆರ್‌.ಒ. ವಿಭಾಗಗಳಿಂದ “ಕೇಸ್‌ ಸ್ಟಡಿ’ಗಳನ್ನು ಆಯ್ದು ಈ ಪ್ರೋಗ್ರಾಮ್‌ಗಳಲ್ಲಿ ಸೇರ್ಪಡಿಸಲಾಗಿದೆ. ಇಲ್ಲಿ ಕಲಿಸುವ ಪ್ರಾಧ್ಯಾಪಕರು ಸ್ವತಃ ವಿಮಾನ ಮತ್ತು ಹೆಲಿಕಾಪ್ಟರ್‌ ವಿನ್ಯಾಸ ಮತ್ತು ತಯಾರಿಕೆಯಲ್ಲಿ ದಶಕಗಳ ಅನುಭವವಿರುವವರು. 

ಬಹು ಮುಖ್ಯವಾಗಿ ವೈಮಾನಿಕ ರಂಗದ ಪ್ರಾಯೋಗಿಕ ಮಗ್ಗುಲನ್ನು ಇವರೆದುರು ತೆರೆದವು. ಒಂದು ಏರೋಫಾಯಿಲ್‌ನ ವಿನ್ಯಾಸವನ್ನು ವಿವರಿಸುವಾಗ ಅವರನ್ನು “ವಿಂಡ್‌ ಟನಲ್‌ ಟೆಸ್ಟಿಂಗ್‌’ ವಿಭಾಗಕ್ಕೆ ಕರೆದು ತೋರಿಸಲಾಗುತ್ತದೆ. ವಿಮಾನ ಮತ್ತು ಹೆಲಿಕಾಪ್ಟರ್‌ ವಿನ್ಯಾಸ ಮತ್ತು ತಯಾರಿಕೆಯ ಹಂತಗಳನ್ನು ಆಯಾ ವಿಭಾಗಗಳಿಗೆ ಕರೆದೊಯ್ದು ಕಲಿಸಲಾಗುತ್ತಿದೆ. ವಿಮಾನದ ಟೈಟಾನಿಯಮ್‌ನ ಭಾಗಗಳಾಗಲಿ, ಅತ್ಯಂತ ಕ್ಲಿಷ್ಟ ಮತ್ತು ಸೂಕ್ಷ್ಮ ಪ್ರಾಸಸ್‌ ಹೊಂದಿದ ಕಾಂಪೋಸಿಟ್‌ ಭಾಗಗಳ ತಯಾರಿಕೆಯಾಗಲಿ, ಆಯಾ ವಿಭಾಗದಲ್ಲಿ ನೋಡಿ ಅರಿಯುತ್ತಾರೆ. ಫ್ಲೈಟ್‌ ಟೆಸ್ಟ್‌ ಸೆಂಟರ್‌, ಗ್ರೌಂಡ್‌ ಟೆಸ್ಟ್‌, ಫ್ಲೈಟ್‌ ಹ್ಯಾಂಗರ್‌ ಅಲ್ಲದೆ ಎಚ್‌.ಎ.ಎಲ್‌. ಏರ್‌ಪೋರ್ಟ್‌ ಕೂಡ ಇರುವ ಕಾರಣ, ಏರ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಕೂಡ ಪುಸ್ತಕದ ವಿಷಯವಾಗುವುದಿಲ್ಲ. ಕಂಡು ತಿಳಿಯುವ ಆಸಕ್ತಿಯ ಕಲಿಕೆಯಾಗುತ್ತದೆ. 

ಅಂದು ವಾಲ್‌ಚಂದ್‌ ಭಾರತವನ್ನು ವಾಯುಯಾನದ ಭೂಪಟದಲ್ಲಿ ನಿಲ್ಲಿಸಿದ್ದರು. ನಮ್ಮ ಅಗತ್ಯದ ವಿಮಾನಗಳನ್ನು ನಮ್ಮ ನೆಲದಲ್ಲಿಯೇ ಸೃಷ್ಟಿಸಿ ತಯಾರಿಸುವ ಮೂಲಕ ಇಂದು ನಾವು ಭಾರತವನ್ನು ವಿಶ್ವದ ವೈಮಾನಿಕ ಭೂಪಟದಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲಿಸಬೇಕಿದೆ. ಇದು ದೂರದ ಕನಸಲ್ಲ. ದೇಶದಲ್ಲಿ ವೈಮಾನಿಕ ರಂಗಕ್ಕೆ ಸಿದ್ಧವಾದ ಮಾನವ ಸಂಪನ್ಮೂಲದ “ಕ್ರಿಟಿಕಲ್‌ ಮಾಸ್‌’ ರೂಪುಗೊಂಡಂತೆ, ಇದು ಕೂಡ ಖಂಡಿತ ಸಾಧ್ಯವಾಗುತ್ತದೆ. 

ವೈಮಾನಿಕ ರಂಗ ತಾಂತ್ರಿಕವಾಗಿ ವಿಶೇಷ ತಜ್ಞತೆಯನ್ನು ಬೇಡುವ ರಂಗ. ವೈಮಾನಿಕ ರಂಗ ಮಲ್ಟಿಡಿಸಿಪ್ಲಿನರಿ ಫೀಲ್ಡ್‌ – ಬಹು ಕ್ಷೇತ್ರಗಳ ತಜ್ಞತೆಯನ್ನು ಒಳಗೊಂಡ ರಂಗ.  ಒಂದು ವಿಮಾನ, ಹೆಲಿಕಾಪ್ಟರ್‌ ಅಥವಾ ಯು.ಎ.ವಿ.ಯನ್ನು  (ಮಾನವರಹಿತ ವಾಯು ವಾಹನ) ವಿನ್ಯಾಸ ಮಾಡಿ, ತಯಾರಿಸಿ, ಹಾರಿಸಲು ಬಹು ರಂಗಗಳ ತಂತ್ರಜ್ಞರು ಮತ್ತು ಇಂಜಿನಿಯರುಗಳು ಬೇಕಾಗುತ್ತಾರೆ. ವೈಮಾನಿಕ ರಂಗಕ್ಕೆ ಕೇವಲ ಏರೋನಾಟಿಕಲ್‌ ಇಂಜಿನಿಯರುಗಳು ಬೇಕೆಂಬ ತಪ್ಪು$ಕಲ್ಪನೆ ಇದೆ. ಹಾಗೆ ನೋಡಿದರೆ, ಬಹು ಸಂಖ್ಯೆಯಲ್ಲಿ ಮೆಕಾನಿಕಲ್‌ ಇಂಜಿನಿಯರುಗಳು, ಇಲೆಕ್ಟ್ರಿಕಲ್‌, ಇಲೆಕ್ಟ್ರಾನಿಕ್ಸ್‌, ಕಮ್ಯುನಿಕೇಷನ್‌, ಕಂಪ್ಯೂಟರ್‌, ಐಟಿ, ಮೆಟೀರಿಯಲ್ಸ್‌ ಇನ್ನೂ ಹಲವು ವಿಷಯಗಳಲ್ಲಿ ಪದವಿ ಪಡೆದ ಇಂಜಿನಿಯರುಗಳ ಅಗತ್ಯ ಈ ರಂಗಕ್ಕಿದೆ. 

ಹೊಸ ಕ್ಯಾಂಪಸ್‌ಗೆ…
2015ರಲ್ಲಿ ಬೆಂಗಳೂರಿನ ದೊಡ್ಡನಕುಂದಿ ಮುಖ್ಯರಸ್ತೆಯಲ್ಲಿ ಅತ್ಯಾಧುನಿಕ ಅನುಕೂಲಗಳನ್ನು ಒಳಗೊಂಡು ನಿರ್ಮಾಣಗೊಂಡ ಹೊಸ ಕ್ಯಾಂಪಸ್‌ಗೆ ಎಚ್‌ಎಎಲ್‌ ಮ್ಯಾನೇಜ್‌ಮೆಂಟ್‌ ಅಕಾಡೆಮಿ ಆಗಮಿಸಿತು. ಇಸವಿ 2018ರವರೆಗೆ ಬಹುಪಾಲು ತನ್ನದೇ ಅಧಿಕಾರಿಗಳಿಗೆ ವೈಮಾನಿಕ ತರಬೇತಿ ನೀಡುತ್ತಿದ್ದ ಈ ಸಂಸ್ಥೆ ದೇಶದ ವೈಮಾನಿಕ ಇಂಜಿನಿಯರುಗಳ ಅಗತ್ಯವನ್ನು ಪರಿಗಣಿಸಿ, ತನ್ನ ಬಾಗಿಲನ್ನು ವೈಮಾನಿಕ ರಂಗಕ್ಕೆ ಪ್ರವೇಶಿಸಲು ಆಶಿಸುವ ಪದವೀಧರರಿಗೆ ತೆರೆಯಿತು. ಇದಕ್ಕೆಂದೇ 3 ತಿಂಗಳ ಅವಧಿಯ ಸರ್ಟಿಫಿಕೇಷನ್‌ ಪ್ರೋಗ್ರಾಮ್‌ ಇನ್‌ ಎರೋಸ್ಪೇಸ್‌ ಮ್ಯಾನೇಜ್‌ಮೆಂಟ್‌ ಹಾಗೂ 15 ತಿಂಗಳ ಪೋಸ್ಟ್‌ ಗ್ರಾಜುಯೇಟ್‌ ಡಿಪ್ಲೊಮಾ ಇನ್‌ ಏವಿಯೇಷನ್‌ ಮ್ಯಾನೇಜ್‌ಮೆಂಟ್‌ ಪ್ರೋಗ್ರಾಮ್‌ಗಳನ್ನು ವಿನ್ಯಾಸ ಮಾಡಿ ಆರಂಭಿಸಿತು. ಹಾಗೆಯೇ ಅಕಾಡೆಮಿಗೆ ಮತ್ತು ಪಿಜಿಡಿಎಎಮ್‌ ಪ್ರೋಗ್ರಾಮ್‌ಗಳಿಗೆ ಆಲ್‌ ಇಂಡಿಯಾ ಕೌನ್ಸಿಲ್‌ ಆಫ್ ಟೆಕ್ನಿಕಲ್‌ ಎಜುಕೇಶನ್‌ನ ಮಾನ್ಯತೆಯನ್ನೂ ಪಡೆಯಿತು.

– ನೇಮಿಚಂದ್ರ

ಟಾಪ್ ನ್ಯೂಸ್

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Maharashtra Polls: Who will be the next Chief Minister? Fadnavis gives a hint

Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Dhanashree Verma: ಯಶ್‌ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.