ಪ್ರಿಯಾ ಪ್ರಿಯಾ ಹೋ ಹರಿಪ್ರಿಯಾ!
Team Udayavani, Jun 16, 2019, 5:00 AM IST
ಚಿತ್ರರಂಗದಲ್ಲಿ ಅಭಿನಯ ಮತ್ತು ಸೌಂದರ್ಯ ಎರಡರಿಂದಲೂ ಗುರುತಿಸಿಕೊಂಡಿರುವ ನಟಿ ಹರಿಪ್ರಿಯಾ. ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹನ್ನೆರಡು ವರ್ಷಗಳಾದರೂ, ಇಂದಿಗೂ ಹರಿಪ್ರಿಯಾ ಅವರನ್ನು ಚಿತ್ರರಂಗ ಗುರುತಿಸುವುದು ಉಗ್ರಂ ಚಿತ್ರದ ಮೂಲಕ. ಉಗ್ರಂ ಚಿತ್ರ ಹರಿಪ್ರಿಯಾ ಸಿನಿ ಕೆರಿಯರ್‌ಗೆ ಒಂದೊಳ್ಳೆ ಬ್ರೇಕ್ ತಂದು ಕೊಟ್ಟಿತು. ಬಳಿಕ ಹರಿಪ್ರಿಯಾ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಪ್ರವರ್ಧಮಾನಕ್ಕೆ ಬಂದರು. ಕಳೆದ ನಾಲ್ಕೈದು ವರ್ಷಗಳಿಂದ ಮಾಡಿದ ಚಿತ್ರಗಳು ಹರಿಪ್ರಿಯಾಗೆ ಸಾಕಷ್ಟು ಹೆಸರು, ಜನಪ್ರಿಯತೆ ಎರಡನ್ನೂ ತಂದು ಕೊಟ್ಟವು. ಅದರಲ್ಲೂ ಬುಲೆಟ್ ಬಸ್ಯಾ, ರಿಕ್ಕಿ, ಭರ್ಜರಿ, ರನ್ನ, ನೀರ್ ದೋಸೆ, ಬೆಲ್ ಬಾಟಂ, ಸೂಜೀದಾರ ಮೊದಲಾದ ಚಿತ್ರಗಳು ಹರಿಪ್ರಿಯಾ ಅವರು ಕ್ಲಾಸಿ ಮತ್ತು ಗ್ಲಾಮರ್ ಲುಕ್ ಎರಡಕ್ಕೂ ಒಪ್ಪುವ ನಟಿ ಎಂದು ಸಾಬೀತು ಮಾಡಿದವು.
ಇದೇ ವೇಳೆ ಛೇಂಜ್ ಓವರ್ ಎನ್ನುವಂತೆ ಹರಿಪ್ರಿಯಾ ಗ್ಲಾಮರ್ ಲುಕ್‌ನಿಂದ ಆ್ಯಕ್ಷನ್ ಲುಕ್‌ನತ್ತ ಮುಖ ಮಾಡಿದರು. ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಟಾಮ್ ಗರ್ಲ್ ಗೆಟಪ್‌ನಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಹರಿಪ್ರಿಯಾ ಪ್ರೇಕ್ಷಕರ ಮುಂದೆ ಎಂಟ್ರಿ ಕೊಟ್ಟರು. ಆದರೆ ಅದೇಕೋ ಹರಿಪ್ರಿಯಾ ಹೊಸಲುಕ್ ಅಭಿಮಾನಿಗಳಿಗೆ ಅಷ್ಟಾಗಿ ಹಿಡಿಸಲಿಲ್ಲ. ಇಲ್ಲಿಯವರೆಗೆ ಗ್ಲಾಮರ್ ಪಾತ್ರಗಳಲ್ಲಿ ನೋಡಿದ ಪ್ರೇಕ್ಷಕರು, ಮೊದಲ ಬಾರಿಗೆ ಹರಿಪ್ರಿಯಾ ಅವರನ್ನು ಇಂಥದ್ದೊಂದು ಲುಕ್‌ನಲ್ಲಿ ನೋಡಿ ಅರಗಿಸಿಕೊಳ್ಳುವುದು ಕಷ್ಟವಾಯಿತು. ಅದಕ್ಕೇ ಇರಬೇಕೋ, ಏನೋ.., ಪ್ರೇಕ್ಷಕರು ಪಾರ್ವತಮ್ಮನ ಮಗಳ ಸಾಹಸಗಾಥೆ ನೋಡುವ ಮನಸ್ಸು ಮಾಡಲಿಲ್ಲ. ಹಾಗಾಗಿ ಡಾಟರ್ ಆಫ್ ಪಾರ್ವತಮ್ಮ ಬಂದಷ್ಟೇ ವೇಗದಲ್ಲಿ ಚಿತ್ರಮಂದಿರಗಳಿಂದಲೂ ಹೊರ ಹೋಗಬೇಕಾಯಿತು.
ಸದ್ಯ ಹರಿಪ್ರಿಯಾ ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀ ತನಕ, ಕಥಾ ಸಂಗಮ, ಬಿಚ್ಚುಗತ್ತಿ, ಕುರುಕ್ಷೇತ್ರ ಹೀಗೆ ಸಾಲು ಸಾಲು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ. ಈ ಎಲ್ಲಾ ಚಿತ್ರಗಳು ಕಥೆಗೆ ಮತ್ತು ಪಾತ್ರಗಳಿಗೆ ಪ್ರಾಮುಖ್ಯ ಇರುವ ಚಿತ್ರಗಳಾಗಿರುವುದರಿಂದ ಪ್ರೇಕ್ಷಕರಿಗೆ ಇಷ್ಟವಾಗುವುದು ಎಂಬ ವಿಶ್ವಾಸ ಹರಿಪ್ರಿಯಾ ಅವರದ್ದು.
ಒಟ್ಟಾರೆ ಗ್ಲಾಮರ್ ಮತ್ತು ಕ್ಲಾಸಿ ಲುಕ್‌ನಲ್ಲಿ ಹರಿಪ್ರಿಯಾ ಅವರನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಅಂಥದ್ದೇ ಪಾತ್ರಗಳಲ್ಲಿ ಹೆಚ್ಚು ನೋಡಲು ಬಯಸುತ್ತಾರೆ ಎನ್ನುವ ಸಂಗತಿಯನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ಅವರ ಚಿತ್ರಗಳೇ ಹೇಳುತ್ತಿವೆ. ಪ್ರೇಕ್ಷಕರು ಬಯಸಿದಂತ ಪಾತ್ರಗಳನ್ನು ಹೆಚ್ಚು ಹೆಚ್ಚು ಮಾಡಲಿ ಎನ್ನುವುದು ಕನ್ನಡ ಸಿನಿ ಪ್ರಿಯರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.