ಅವರು ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡಿದರು


Team Udayavani, Nov 19, 2017, 6:15 AM IST

chirasmarane.jpg

ಅರೆ, ಇದೇನಿದು..!’ ಎಂದು ನಾನು ಬೆಕ್ಕಸಬೆರಗಾಗಿ ಹೋದೆ. ನನ್ನ ಕೈಯಲ್ಲಿದ್ದದ್ದು ನಿರಂಜನರ ಚಿರಸ್ಮರಣೆ. ಕಾದಂಬರಿ ತೆರೆದುಕೊಳ್ಳುವ ಮುನ್ನ ನಿರಂಜನರು ತಾವೇ ನಿರೂಪಕನಾಗಿ “ಬನ್ನಿ ರೈಲುಗಾಡಿ ಹೊರಡುವುದು ಇನ್ನೂ ತಡ’ ಎಂದು ಕರೆಯುತ್ತ ಓದುಗನನ್ನು ಕಯ್ಯೂರಿನ ಒಳಗೆ ಕರೆದುಕೊಂಡು ಹೋಗುತ್ತಾರೆ. ಆ ಅಧ್ಯಾಯದ ಉದ್ದಕ್ಕೂ ಇದ್ದದ್ದು ಮತ್ತೆ ಘಟಿಸಿ ಹೋಯೆ¤ನೋ ಎನ್ನುವಂತಾದದ್ದು ನನ್ನ ಕಣ್ಣೆದುರಿಗಿದ್ದ ಫೇಸ್‌ಬುಕ್‌ ಪುಟಗಳನ್ನು ನೋಡಿದಾಗ. ಹಾಗಾಗಿ, ನಾನು ಇಲ್ಲಿ ಚಿರಸ್ಮರಣೆಯ ಪುಟಗಳಲ್ಲಿ ನಿರಂಜನರು ಬರೆದದ್ದನ್ನೂ ಮತ್ತು ಚಿರಸ್ಮರಣೆ ಓದಿ ಕಯ್ಯೂರಿನತ್ತ ಹೆಜ್ಜೆ ಹಾಕಿದವರ ಕಥಾನಕವನ್ನೂ ಬಿಚ್ಚಿಟ್ಟಿದ್ದೇನೆ. ಆ ಚಿರಸ್ಮರಣೆ ಹಾಗೂ ಈ “ಚಿರಸ್ಮರಣೀಯ’ ಅನುಭವ ಪಡೆದವರ ನಡುವೆ ಹೆಜ್ಜೆ ಹಾಕೋಣ ಬನ್ನಿ.
.
ಬೆಂಗಳೂರಿನಿಂದ ಮಂಗಳೂರಿಗೆ, ಮಂಗಳೂರಿನಿಂದ ಚರ್ವತ್ತೂರಿಗೆ…
ಬನ್ನಿ, ರೈಲುಗಾಡಿ ಇಲ್ಲಿಂದ ಹೊರಡುವುದು ಇನ್ನೂ ತಡ, ಊರು ಇರುವುದು ಆ ಭಾಗದಲ್ಲಿ, ಹಿಂದಕ್ಕೆ ಸಾಗಿ, ರೈಲು ಕಂಬಿಯನ್ನು ದಾಟಿ ಹೊರಟುಹೋಗೋಣ. ಇಷ್ಟು ಜನ ಯಾಕೆ ಬರಬೇಕಿತ್ತು ಎಂದಿರಾ? ಒಳ್ಳೆಯ ಪ್ರಶ್ನೆ! ಈ ದಿನದ ಮಹೋತ್ಸವಕ್ಕೆ ಇಷ್ಟೊಂದು ದೂರದಿಂದ ಬಂದ ಪ್ರೇಕ್ಷಕರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಊರವರು ಏನೆಂದಾರು?

ಯಾಕೆ ಅತ್ತ ನೋಡ್ತಿದ್ದೀರಿ? ಟಿಕೆಟ್‌ ಕಲೆಕ್ಟರು ಕರೆಯಬಹುದೆಂದೆ? ಇಲ್ಲಿ ಕೊಡಿ ಟಿಕೆಟ…, ಆತನಿಗೆ ಕಳುಹಿಸಿಕೊಡ್ತೇವೆ, ಅವನಾಗಿ ನಮ್ಮನ್ನೆಂದೂ ಕರೆಯಲಾರ. ಇಲ್ಲಿ ಇಳಿದು ನಮ್ಮ ಹಳ್ಳಿಗೆ ಹೋಗುವವರಲ್ಲಿ ಮೋಸಗಾರರು ಯಾರೂ ಇಲ್ಲ ಎಂಬುದು ಆತನಿಗೆ ಗೊತ್ತಿದೆ.
.
“ಸರಿ ಬೆಂಗಳೂರಿನಿಂದ, ಬೇರೆ ಕಡೆಯಿಂದ ಬರುವವರು ಎಲ್ಲರೂ ಮಂಗಳೂರಿಗೆ ಬನ್ನಿ. ಅಲ್ಲಿ ಬೆಳ್ಳಂಬೆಳಗ್ಗೆ ಟ್ರೇನ್‌ ಇದೆ. ಅದನ್ನು ಹತ್ತಿದರೆ ನೇರ ನಾವು ಇಳಿಯುವುದು ನೀಲೇಶ್ವರದಲ್ಲಿ. ಅಲ್ಲಿ ನಮ್ಮನ್ನು ಸ್ವಾಗತಿಸಲು ಸಾಕಷ್ಟು ಸಂಗಾತಿಗಳಿರುತ್ತಾರೆ. ಅವರ ಜೊತೆ ಕೈ ಕುಲುಕಿ, ಸಾಧ್ಯವಾದರೆ ಚಹಾ ಕುಡಿದು ನಮಗಾಗಿಯೇ ಸಿದ್ಧವಾಗಿರುವ ಬಸ್‌ ಏರೋಣ. ಅಲ್ಲಿಂದ ಅಬ್ಬಬ್ಟಾ ಎಂದರೆ 30 ನಿಮಿಷ. ನೀವು ಕಣ್ಣು ಮುಚ್ಚಿ ತೆಗೆಯುವುದರೊಳಗೆ ತೇಜಸ್ವಿನಿ ನದಿ ನಿಮ್ಮೆದುರು ಬಿಚ್ಚಿಕೊಂಡಿರುತ್ತದೆ. ಆಮೇಲೆ ಆಮೇಲೆ ಏನು… ನಾವು ಮತ್ತು ಚಿರಸ್ಮರಣೆ ಎರಡೇ…

ಹಾಗಂತ ಹೊರಟುಬಿಟ್ಟ ದಂಡು ಇತ್ತಲ್ಲ ಅದು ಒಂದೇ ರೆಕ್ಕೆಯ ಹಕ್ಕಿಗಳೆÇÉಾ ಒಟ್ಟಿಗೆ ಸೇರಿದಂತೆ ಸೇರಿಬಿಟ್ಟಿದ್ದರು. ಬಹುತೇಕ ಮಂದಿಗೆ ಪರಸ್ಪರ ಪರಿಚಯವಿರಲಿಲ್ಲ. ಇನ್ನು ಕೆಲವರಿಗೆ ಪರಿಚಯ ಇದ್ದರೂ ಕೈ ಕುಲುಕಿ ಮಾತನಾಡಿರಲಿಲ್ಲ, ಫೇಸ್‌ಬುಕ್‌ ಅವರನ್ನು ಬೆಸುಗೆ ಹಾಕಿತ್ತಾದರೂ ಅವರ ಬದುಕು, ಕಥೆ, ಹಾಡು ಅವರ ಬಾಯಿಂದಲೇ ಕೇಳಿರಲಿಲ್ಲ. ಹಾಗೆ ಸೇರಿದವರು ಗದಗ, ಚಿಕ್ಕಮಗಳೂರು, ಬೆಂಗಳೂರು, ಬಳ್ಳಾರಿ ಹೀಗೆ ಎÇÉೆಲ್ಲಿಂದಲೋ ಬಂದಿದ್ದರು. ಎಲ್ಲರೂ ಮಂಗಳೂರಿನ ರೈಲು ನಿಲ್ದಾಣದಲ್ಲಿ ಉತ್ಸಾಹದಿಂದ ಸೇರಿದ್ದರು. 60ಕ್ಕೂ ಹೆಚ್ಚು ಜನರಿದ್ದ ಹಕ್ಕಿಗಳ ಕಲರವ ಕೇಳಿ ಅಲ್ಲಿದ್ದವರು, “”ಯಾರೋ ಎಲ್ಲಿಗೆ ಹೊರಟಿದ್ದೀರಿ?” ಎಂದು ಕೇಳಿದರು- ಅಷ್ಟೇ. ಎಲ್ಲರೂ ಒಕ್ಕೊರಲಿನಿಂದ “ಕಯ್ಯೂರು’ ಎಂದರು. “ಹೌದು’ ಅವರೆಲ್ಲರನ್ನೂ ಅಲ್ಲಿಗೆ ಕರೆದು ತಂದಿದ್ದು ಒಂದು ಪುಸ್ತಕ ಎಂದರೆ ನೀವು ನಂಬಲೇಬೇಕು. ತಿಂಗಳ ಕಾಲ ನಿರಂಜನರ ಚಿರಸ್ಮರಣೆ  ಓದಿದ ದಂಡು ಆ ಕಾದಂಬರಿ ನಡೆದುಹೋದ ಕಯ್ಯೂರನ್ನು ನೋಡಲೇಬೇಕು ಎನ್ನುವ ಹುಮ್ಮಸ್ಸಿನಿಂದ ಕೇರಳದ ರೈಲು ಹತ್ತಿದ್ದರು. 
.
ಎಚ್ಚರದಿಂದ ದಾಟಿ, ಕೈಕಂಬದ ಸಾಲು ತಂತಿ ಕೆಳಗಿದೆ, ಎಡವಿ ಬಿದ್ದೀರಿ. 
ಬನ್ನಿ ಹೀಗೆ, ನಿಂತು ರೈಲುಗಾಡಿಯತ್ತ ಯಾಕೆ ದಿಟ್ಟಿಸಿದಿರಿ? ಅದೊಂದು ವಿಚಿತ್ರ ಅನುಭವ, ಅಲ್ಲ? ಸಹಸ್ರ ಸಹಸ್ರ ಜನರನ್ನು ಹೊತ್ತು, ನಿಮ್ಮೊಬ್ಬರನ್ನೇ ಇಳಿಯಬಿಟ್ಟು, ಮುಂದೆ ಸಾಗುವ ಉಗಿ ಶಕಟ, ಸಮುದ್ರದಂಡೆಯುದ್ದಕ್ಕೂ ದಕ್ಷಿಣಾಭಿಮುಖವಾಗಿ, ಮುಂದಕ್ಕೆ.

ಹೊಲಗಳ ನಡುವೆ ನಡೆದೇ ನಿಮಗೆ ಅಭ್ಯಾಸವಿದೆಯೊ ಇಲ್ಲವೊ. ಏನಂದಿರಿ? ನೀವೂ ಹಳ್ಳಿಯÇÉೆ ಹುಟ್ಟಿದವರೆಂದ? ಮಣ್ಣಿನ ಮಗುವೆಂದೆ? ಸಂತೋಷ. ನಾನೂ ಹಾಗೆಯೇ ಊಹಿಸಿ¨ªೆ.

ಈ ಹೊಲದ ಅಂಚುಗಳ ಮೇಲೆ ಒಬ್ಬೊಬ್ಬರೇ ನಡೆಯಬೇಕು. ಒಬ್ಬರ ಹಿಂದೊಬ್ಬರು, ಸಾಲುಸಾಲಾಗಿ ಮುಂದಿನವರು ನಿಂತರೆ ಹಿಂದಿನವರೂ ನಿಲ್ಲಬೇಕು. ನಗರದಲ್ಲಿ ಮೋಟಾರು ವಾಹನಗಳು ಒಂದರ ಹಿಂದೊಂದು ಹೋಗುವುದಿಲ್ಲವೇ? ಹಾಗೆ.
.
“ಬನ್ನಿ’ ಎಂದು ಅವರು ಕೈ ಕುಲುಕಿದಾಗ ನಿಜಕ್ಕೂ ಸೂರ್ಯ ತನ್ನ ಪ್ರಭಾವ ತೋರಿಸಲು ಅಣಿಯಾಗುತ್ತಿದ್ದ. ಅಲ್ಲಿದ್ದವರಿಗೆ ನಾಯಕರೂ ಇಲ್ಲ ಹಿಂಬಾಲಕರೂ ಇಲ್ಲ. ಅವರಲ್ಲಿ ಇದ್ದವರು ಪುಸ್ತಕ ಓದಲು ಹುರಿದುಂಬಿಸಿದವರು ಹಾಗೂ ಓದಿದವರು ಅಷ್ಟೇ. ಕಯ್ಯೂರಿನಲ್ಲಿ ಬದಲಾವಣೆಯ ಸೂರ್ಯ ಉದಿಸಿದಾಗ ಆಗಿದ್ದೂ ಅದೇ ಅಲ್ಲವೇ. ಚಿರಕುಂಡ ಅಪ್ಪುವನ್ನು ಮಾಸ್ಟರ್‌ ಓದು ಎಂದರು, ಸಮಾಜ ನೋಡು ಎಂದರು, ಹೋರಾಡು ಎಂದರು. ಅಷ್ಟೇ ಶತಮಾನಗಳ ಕತ್ತಲು ಅನುಭವಿಸಿದ್ದ ಕಯ್ಯೂರಿನಲ್ಲಿ ಹೊಸ ಸೂರ್ಯ ಉದಿಸಿದ್ದ. ಅಷ್ಟೂ ಜನರನ್ನು ಹೊತ್ತ ವಾಹನ ನೇರ ಭೇಟಿ ಕೊಟ್ಟದ್ದೇ ಕಯ್ಯೂರಿನ ವೀರರ ಹುತಾತ್ಮ ಸ್ಮಾರಕದ ಬಳಿಗೆ. ಅಲ್ಲಿಯವರೆಗೆ ಎಲ್ಲಿತ್ತೋ ಆ ಹುಡುಗರ ಎದೆಯೊಳಗೆ ಚಿರಸ್ಮರಣೆ ಓದಿ ಹುಟ್ಟಿದ್ದ ಬದಲಾವಣೆಯ ಕನಸುಗಳು. ಹುತಾತ್ಮ ಸ್ಮಾರಕ ನೋಡುತ್ತಿದ್ದಂತೆಯೇ ಅರಿವೇ ಇಲ್ಲದೆ ಅನೇಕ ಕಂಠಗಳಿಂದ ಘೋಷಣೆಗಳು ಮೊಳಗಿದವು-  ಅಂದು ಹರಿದ ನಿಮ್ಮಯ ರಕ್ತ. ನಮ್ಮ ರಕ್ತ, ನಮ್ಮ ರಕ್ತ. ಎಲ್ಲರೂ ಭಾವುಕರಾಗಿದ್ದರು. ತಾವು ಪುಸ್ತಕದ ಪುಟಗಳಲ್ಲಿ ಅಕ್ಷರಗಳಾಗಿ ಕಂಡ ನೆಲದ ಮೇಲೆ ನಿಂತಿದ್ದರು. ಕಥೆಯಾಗಿ ಕಂಡವರು ಕಣ್ಣೆದುರಿನ ಫೋಟೋಗಳಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಂದಿನ ಕಯ್ಯೂರು ವೀರರನ್ನು ನೋಡಿದ ಅದೇ ತೇಜಸ್ವಿನಿ ನದಿ ಈಗ ಜಾಗತೀಕರಣ ಕಾಲದ ಮಧ್ಯೆ ನಿಂತಿದ್ದ ಈ ತಂಡವನ್ನೂ ನೋಡುತ್ತಿತ್ತು. ಆ ದಿನವೂ ಅದು ಜುಳು ಜುಳು ಸದ್ದು ಮಾಡಿತ್ತು. ಮತ್ತು ಈ ದಿನವೂ.
.
ಬಿಸಿಲು ರಣಗುಡುತ್ತಿದ್ದರೂ ವಿಶಾಲವಾದ ಭೂಮಿ ಹಸುರಾಗಿದೆ, ನೋಡಿದಿರಾ? ಇದಕ್ಕೆ ಕಾರಣ ನದಿ. ಅದೋ ದೂರದಲ್ಲಿ ಹರಿಯುತ್ತಿದೆಯಲ್ಲ, ಕಂಡೂ ಕಾಣಿಸದ ಹಾಗೆ? ತೇಜಸ್ವಿನಿ. ಹೆಸರು ಚೆನ್ನಾಗಿದೆ, ಎಂದಿರಾ? ಇಲ್ಲದೆ! ನಾಮಕರಣ ಮಾಡಿದವರು ನಮ್ಮ ಜನ. 

ಈ ಕಾಲು ಹಾದಿ ಕಂಡಿರಾ? ಅದರಾಚೆಗಿರುವುದೇ ನಮ್ಮ ಗ್ರಾಮ. ಅದೇ ಕಯ್ಯೂರು. ಕಯ್ಯೂರಿನ ಗಡಿ ಮೊದಲಾಗುವÇÉೇ ಮಾವಿನತಳಿರಿನ ಕಮಾನು ಕಟ್ಟಿ ಸುಸ್ವಾಗತ ಎಂದು ಬರೆದಿ¨ªಾರೆ. ಇದು ಮಲೆಯಾಳ ಭಾಷೆ. ನಿಮಗೆ ತಿಳಿಯದು ಅಲ್ಲವೆ? ಆ ಕಮಾನಿನ ಮೇಲೆ ಅಲಂಕಾರವಾಗಿ ನಿಂತಿರುವ ದೊಡ್ಡ ಕುಡುಗೋಲು; ಅದಕ್ಕೆ ಅಡ್ಡವಾಗಿ ಭತ್ತದ ತೆನೆಯ ತುಂಬಿದ ಗೊಂಚಲು. ಇನ್ನು ಇಲ್ಲಿಂದ ಮೊದಲಾಗಿ ನೀವು ನೋಡುವುದೆಲ್ಲ, ಕಯ್ಯೂರಿನ ಕಲಾವಿದರ ಕೃತಿ ಕೌಶಲ, ಆ ಚೀಲ ಕೊಡಿ. ಕೈ ಬೀಸಿ ನಡೆಯುವಿರಂತೆ…
.
ಕಯ್ಯೂರಿಗೆ ಪ್ರವೇಶ ಪಡೆದಾಗ ಒಂದು ರೀತಿ ಕಯ್ಯೂರೇ ನಮ್ಮನ್ನು ಕೈಹಿಡಿದು ನಡೆಸಿದ ಅನುಭವವಾಯಿತು. 1943ರ ಹಿಂದೆ ಮಡತ್ತಿಲ್‌ ಅಪ್ಪು, ಚಿರಕಂಡ, ಅಬೂಬಕ್ಕರ್‌, ಪೊಡವರ ಕುಂಞಂಬುರವರು ಕೈಯ್ಯೂರಿನಲ್ಲಿ ನಡೆಸಿದ ರೈತ ಚಳುವಳಿ ಆ ಮೂಲಕ ಅವರು ಮೈಗೂಡಿಸಿಕೊಂಡಿದ್ದ ಸಾಮ್ರಾಜ್ಯಶಾಹಿ ವಿರೋಧಿ ಚಿಂತನೆಗಳು ಇಂದಿಗೂ ಇಲ್ಲಿ ಜೀವಂತವಾಗಿವೆ. ಅವರು ಬಿತ್ತಿದ್ದ ವಿಚಾರಗಳು 80 ವರ್ಷಗಳ ನಂತರವೂ ಇಲ್ಲಿ ಅಚ್ಚ ಹಸಿರಾಗಿ ನಳನಳಿಸುತ್ತಿದೆ. ಮಾತ್ರವಲ್ಲ ಇನ್ನಷ್ಟು ಗಟ್ಟಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಯ್ಯೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕೆಂಬಾವುಟಗಳು ರಾರಾಜಿಸುತ್ತಿದ್ದವು. ಚಿರಸ್ಮರಣೆಯ ಮೂಲಕ ಕಯ್ಯೂರನ್ನ ಪ್ರವೇಶಿಸಿದವರಿಗೆ ಹೋರಾಟ ನಾಡಿನ ಜೀವಂತ ಅನುಭವವಾಯಿತು ಎಂದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ನೀಲೇಶ್ವರಕ್ಕೆ,

ನೀಲೇಶ್ವರದಿಂದ ಕಯ್ಯೂರಿಗೆ ತಲುಪಿಕೊಂಡಿದ್ದ ನವೀನ ಕುಮಾರ್‌ ಹುಮ್ಮಸ್ಸಿನಿಂದ ಬಣ್ಣಿಸಿದರು. 
ನಾನು ಅವರಿಗೆ “ಅದು ಸರಿ, ಆ ಜುಳು ಜುಳು ಹರಿವ ತೇಜಸ್ವಿನಿ ನೋಡಿದ ತಕ್ಷಣ ನಿಮಗೆ ಏನನ್ನಿಸಿತು?’ ಕೇಳಿದೆ. ಅಷ್ಟೇ, ಅವರ ಎದೆಯ ಒಳಗೂ ನೆನಪುಗಳ ನದಿಯೊಂದು ಜುಳು ಜುಳು ಹರಿಯಿತೇನೋ. “ಆ ತೂತು ಬಿದ್ದ ದೋಣಿ…’ ಎಂದರು. “ಅದರÇÉೇ ಅಲ್ಲವೇ ಆ ಅಪ್ಪು, ಚಿರಕುಂಡ ನದಿ ದಾಟಿ ತಮ್ಮ ಮಾಸ್ತರರನ್ನು ಭೇಟಿಯಾಗಿದ್ದು’ ಎಂದರು. 
ಚಿರಸ್ಮರಣೆ 300ಕ್ಕೆ ಒಂದಿಪ್ಪತ್ತು ಕಡಿಮೆ ಪುಟ ಇರುವ ಪುಸ್ತಕ. ಆದರೆ, ಪ್ರತಿಯೊಂದು ಪುಟವೂ ಅಲ್ಲಿಗೆ ಹೋಗಿದ್ದ ತಂಡದವರ ಒಳಗೆ ಮನೆಮಾಡಿ ಕೂತಿತ್ತು. 
.
ಚಿರಸ್ಮರಣೆ ಎಷ್ಟು ಜನ ಓದಿದ್ದೀರಿ ಎಂದು ಪ್ರತೀ ಸಭೆಯಲ್ಲೂ ಕೇಳುವುದು ಹಲವರಿಗೆ ರೂಢಿ. ಹಾಗೆಯೇ ಅದೊಂದು ಸಭೆಯಲ್ಲಿ ನೋಡೋಣ ಓದಿದವರು ಕೈ ಎತ್ತಿ ಎಂದರು. ಓದಿದವರು ಎಷ್ಟು ಜನ ಇದ್ದರೋ ಓದದವರೂ ಅಷ್ಟೇ ಜನ. ಆಗಲೇ ಮುನೀರ್‌ ಕಾಟಿಪಳ್ಳ “ಚಿರಸ್ಮರಣೆ ಓದಿ ಯಾಕೆ ಕಯ್ಯೂರಿಗೆ ಹೋಗಿ ಬರಬಾರದು’ ಎನ್ನುವ ಪ್ರಸ್ತಾಪ ಮುಂದಿಟ್ಟದ್ದು. ಫೇಸ್‌ಬುಕ್‌ ಹೊಕ್ಕು ನೋಡನೋಡುತ್ತಿದ್ದಂತೆಯೇ ಚಿರಸ್ಮರಣೆ  ಕೊಂಡ, ಅದನ್ನು ಓದುತ್ತಿರುವ ಸೆಲ್ಫಿಗಳು ರಾರಾಜಿಸತೊಡಗಿದವು.  ಚಿರಸ್ಮರಣೆ ಓದೋಣ ಕಯ್ಯೂರಿಗೆ ಹೋಗೋಣ ಅಭಿಯಾನ ತನಗೆ ಗೊತ್ತಿಲ್ಲದಂತೆ ರೆಕ್ಕೆ ಪಡೆದುಕೊಂಡೇಬಿಟ್ಟಿತು. ನ. 11 ಬೆಳ್ಳಂಬೆಳಗ್ಗೆ ಅಷ್ಟೂ ಜನ ಸೇರಿ ತಮ್ಮೊಳಗೆ ಒಂದು “ಚಿರಸ್ಮರಣೆ’ಯನ್ನು ದಾಖಲು ಮಾಡಿಕೊಳ್ಳಲು ರೈಲು ಹತ್ತಿಯೇಬಿಟ್ಟಿದ್ದರು. 
.
ಈ ಹೆಸರುಗಳನ್ನೆಲ್ಲ ನೀವು ಬಲ್ಲಿರಿ, ಅಲ್ಲವ? ಮಠದ ಅಪ್ಪು, ಕೋಯಿ ತಟ್ಟಿನ ಚಿರಕಂಡ, ಪೊಡವರ ಕುಂಇಂಬು, ಅಬೂಬಕರ್‌…. ಹಿಂದೆ ಹಸುಗೂಸುಗಳಿಗೆ ತಾಯಿ-ತಂದೆಯರು ಹಾಗೆ ಹೆಸರಿಟ್ಟಾಗ, ಮುಂದೆಯೊಂದು ದಿನ ಹೀಗಾಗಬಹುದೆಂದು ಯಾರಾದರೂ ಭಾವಿಸಿದ್ದರೆ? ಆ ನಾಲ್ಕು ಹೆಸರುಗಳು ಲೋಕದ ನಾಲ್ಕು ಮೂಲೆಗಳಿಗೆ ಸಂಚಾರ ಮಾಡುವುದೆಂದು, ಯಾವುದೋ ಆಸೆ-ಆಕಾಂಕ್ಷೆಗಳಿಗೆ ಸಂಕೇತವಾಗುವುದೆಂದು ಯಾರಾದರೂ ಊಹಿಸಿದ್ದರೆ?
ಅಪ್ಪು-ಚಿರುಕಂಡ-ಕುಂಇಂಬು ಮತ್ತು ಅಬೂಬಕರ್‌…

ಆ ನೆನಪು ಒಡಮೂಡಿಸುವ ಭಾವನೆ ಯಾವುದು?- ಸಂತೋಷವೇ? ದುಃಖವೆ? ನಾವು ತೋರುವ ಪ್ರತಕ್ರಿಯೆ ಯಾವುದು?-ಬಾಹುಸು#ರಣವೆ? ಕಂಬನಿ ತುಂಬಿದ ಕಣ್ಣೆ?
(ಸಣ್ಣ ವಿರಾಮದ ಬಳಿಕ ಮತ್ತೆ ಈ ಅಂಕಣ)

– ಜಿ. ಎನ್‌. ಮೋಹನ್‌

ಟಾಪ್ ನ್ಯೂಸ್

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ

Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್‌  ಸೇವೆ

1

Karinja: ಅಪಾಯಕಾರಿ ವಿದ್ಯುತ್‌ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.