ಪುರಾನೀ ದಿಲ್ಲಿಯಲ್ಲೊಂದು ಹೆರಿಟೇಜ್‌ ವಾಕ್‌!

ದಿಲ್‌ವಾಲೋಂಕೀ ದಿಲ್ಲಿ

Team Udayavani, Jun 30, 2019, 5:00 AM IST

big_422269_1467518331

ಆಫ್ರಿಕಾದ ಬಹಳಷ್ಟು ಭಾಗಗಳಲ್ಲಿ ಕತ್ತಲಾದ ನಂತರ ಪ್ರಯಾಣಕ್ಕೆಂದು ಸಂಚರಿಸಲು ವಾಹನ ಚಾಲಕರು ಹಿಂಜರಿಯುವುದು ಸಾಮಾನ್ಯ.

ದಿಲ್ಲಿಯಲ್ಲಿ ಈ ಬಗೆಯ ಹಣೆಪಟ್ಟಿಯನ್ನು ಹೊಂದಿರುವ ಕೆಲವೇ ಕೆಲವು ಪ್ರದೇಶಗಳಲ್ಲಿ ಹಳೇ ದಿಲ್ಲಿಯೂ ಒಂದು. ದಿಲ್ಲಿಯ ಯಾವ ಮೂಲೆಗಾದರೂ ತಮ್ಮ ವಾಹನಗಳನ್ನು ಒಯ್ಯಲು ಖುಷಿಯಿಂದಲೇ ಸಿದ್ಧರಾಗುವ ಬಹಳಷ್ಟು ಮಂದಿ ಈ ಏರಿಯಾದಿಂದ ತಲೆಮರೆಸಿಕೊಂಡು ಓಡಾಡುವವರಂತೆ ವ್ಯವಹರಿಸುತ್ತಾರೆ. ಟ್ಯಾಕ್ಸಿಗಳಂತೂ ಬಂದವರನ್ನು ಹಳೇ ದಿಲ್ಲಿಯ ಹೊರಭಾಗದಲ್ಲಿ ನಿಲ್ಲಿಸಿ “ಇಲ್ಲಿಂದ ನೀವಾಯಿತು, ನಿಮ್ಮ ನಡಿಗೆಯಾಯಿತು’ ಎನ್ನುತ್ತಾ ಅರ್ಧದಲ್ಲಿಯೇ ಅಂಜಲಿ ಬಿಟ್ಟು ಕೈತೊಳೆದುಕೊಳ್ಳುತ್ತಾರೆ. ಹಳೇ ದಿಲ್ಲಿಯೆಂಬುದ ಇವರೆಲ್ಲರ ಮಟ್ಟಿಗೆ ಒಮ್ಮೆ ಒಳನುಗ್ಗಿದರೆ ಹೊರಬರಲಾರದಷ್ಟು ಸಂಕೀರ್ಣವಾಗಿರುವ ಚಕ್ರವ್ಯೂಹ.

ಹಳೇ ದಿಲ್ಲಿಯೆಂಬ ಗೋಜಲು ಗೋಜಲು
ಪುರಾನೀ ದಿಲ್ಲಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಹಳೇ ದಿಲ್ಲಿಯ ಜನನಿಬಿಡ ರಸ್ತೆಗಳ ಮಹಿಮೆಯಿದು. ಜನಜಂಗುಳಿ ಮತ್ತು ವಾಹನಗಳಷ್ಟೇ ಇರಬೇಕಾಗಿರುವ ಈ ಭಾಗದ ರಸ್ತೆಗಳಲ್ಲಿ ಮನುಷ್ಯರು, ಪ್ರಾಣಿಗಳು, ವಾಹನಗಳು, ಕೈಗಾಡಿಗಳು… ಹೀಗೆ ಎಲ್ಲವೂ ತಮ್ಮದೇ ಲಯದಲ್ಲಿ ಮಗ್ನರಾಗಿರುವಂತೆ, ಗಡಿಬಿಡಿಯಲ್ಲಿ ಅಸ್ತವ್ಯಸ್ತವಾಗಿ ಚಲಿಸುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯ. ವಾಹನಗಳು ಇನ್ನು ಒಂದಕ್ಕೊಂದು ಅಂಟುವುದಷ್ಟೇ ಬಾಕಿಯೆಂಬಷ್ಟರ ಮಟ್ಟಿನ ಸಾಮೀಪ್ಯದಲ್ಲಿ ಚಲಿಸುತ್ತಿದ್ದರೆ ಕರ್ಕಶ ಹಾನುìಗಳು ಬಿಡದೆ ತಮ್ಮ ಗಂಟಲು ಹರಿದುಕೊಳ್ಳುತ್ತಿರುತ್ತವೆ. ಇನ್ನು ಪಾದಚಾರಿಗಳು ಸಾಗುವ ಹಾದಿಯಲ್ಲೂ ತಮ್ಮ ದ್ವಿಚಕ್ರವಾಹನಗಳನ್ನು ನುಗ್ಗಿಸಿ ಸಿನಿಮೀಯ ಶೈಲಿಯಲ್ಲಿ ನುಸುಳಿಹೋಗುವ ಚಾಣಾಕ್ಷರು ಈಗಾಗಲೇ ಇರುವ ಗೊಂದಲವನ್ನು ಮತ್ತಷ್ಟು ಪಟ್ಟು ಹೆಚ್ಚಿಸುವ ಮಹಾಬುದ್ಧಿವಂತರೇ ಸರಿ.

ದಿಲ್ಲಿಯ ಈ ಒಂದು ಭಾಗವು ತನ್ನ ಹೆಸರಿಗೆ ತಕ್ಕಂತೆ ಹಳೆಯದಾಗಿದ್ದು ಗತಕಾಲದ ಅನುಭೂತಿಯನ್ನು ಉಳಿಸಿಕೊಳ್ಳಲು ಕೆಲ ಪುರಾತನ ಹವೇಲಿಗಳನ್ನು ಅವೇ ಸ್ಥಿತಿಗಳಲ್ಲಿ ಉಳಿಸಿಕೊಳ್ಳಲಾಗಿದೆ ಕೂಡ. ಮೇಲ್ನೋಟಕ್ಕೆ ಪುಟ್ಟ ಮಹಲುಗಳಂತಿದ್ದು ಬಣ್ಣಗೆಟ್ಟ ಗೋಡೆಗಳನ್ನು ಹೊಂದಿರುವ ಹವೇಲಿಗಳು, ರಸ್ತೆಗಳಿಗಿಂತಲೂ ಇಕ್ಕಟ್ಟಾಗಿರುವ ಪುಟ್ಟ ಗಲ್ಲಿಗಳು, ತೊಂಬತ್ತರ ಅಂಚಿನಲ್ಲಿರುವ ವೃದ್ಧ ಸನ್ಯಾಸಿಯೊಬ್ಬನ ಗಡ್ಡದಂತೆ ಇಳಿಬಿದ್ದಿರುವ ಜೊಂಪೆಯಲ್ಲಿರುವ ವಿದ್ಯುತ್‌ತಂತಿಗಳು, ಹೆಜ್ಜೆಯಿಡಲೂ ಜಾಗವಿಲ್ಲವೆಂಬಷ್ಟಿನ ಚಟುವಟಿಕೆಯಿಂದ ಕೂಡಿರುವ ಉಸಿರುಗಟ್ಟಿಸುವ ರಸ್ತೆಗಳು… ಇವೆಲ್ಲಾ  ಹಳೇ ದಿಲ್ಲಿಯ ಅಪರೂಪದ ನೋಟಗಳು. ಭಯಂಕರವೆನಿಸುವ ಟ್ರಾಫಿಕ್‌ ಜಾಮ… ಇಲ್ಲಿಯ ಸಹಜ ದಿನಚರಿ. ಗಡಿಬಿಡಿಗಳಿರುವುದು ಮನುಷ್ಯರಿಗೆ ಮಾತ್ರ. ಶಹರಕ್ಕಲ್ಲವಲ್ಲ !

ಹಳೇ ದಿಲ್ಲಿಯ ಕಮಾಲ್‌
ಹಾಗೆಂದು ಹಳೇ ದಿಲ್ಲಿಯು ನೋಡಿ ಮರೆತು ಬಿಡುವಷ್ಟು ನೀರಸವೂ ಅಲ್ಲ. ಇದು ಜಾಮಾ ಮಸೀದಿ, ಕೆಂಪುಕೋಟೆ, ಚಾಂದನೀ ಚೌಕ್‌ಗಳ ತವರು. ಕಮಾನಿನಂಥ ದ್ವಾರಗಳನ್ನು ಹೊಂದಿರುವ ದರ್ಗಾದ ಇಕ್ಕಟ್ಟು ಗಲ್ಲಿಗಳು ನೂರಿನ್ನೂರು ವರ್ಷಗಳ ಹಿಂದಿನ ದಿಲ್ಲಿಯನ್ನು, ಶಹರದ ಹೇಳದೆ ಉಳಿದ ಕಥೆಗಳನ್ನು ಹೇಳುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಬಗೆಬಗೆಯ ತಿಂಡಿ-ತಿನಿಸುಗಳನ್ನು ಹೊಂದಿರುವ ಪುಟ್ಟ ಅಸಂಖ್ಯಾತ ಅಂಗಡಿಗಳು ಈ ಬೀದಿಗಳನ್ನೊಂದು ನಿರಂತರ ಚಟುವಟಿಕೆಯಲ್ಲಿಟ್ಟಿರುವಂತೆ ಭಾಸವಾಗುತ್ತದೆ. ಸ್ಟ್ರೀಟ್‌ ಫ‌ುಡ್‌ಗಳಿಗೆ ಹೆಸರಾಗಿರುವ ದಿಲ್ಲಿಯಲ್ಲಿ ಚಾಟ್‌ಗಳನ್ನು ಸವಿಯಲು ಚಾಂದನಿಚೌಕ್‌ ಮತ್ತು ಚಾವಡಿ ಬಜಾರ್‌ನಂಥ ಸ್ಥಳಗಳಿವೆ. ಅಂದ ಹಾಗೆ ಸರಿಸುಮಾರು 17ನೆಯ ಶತಮಾನದಷ್ಟು ಹಿಂದಿನ ಹಿನ್ನೆಲೆಯುಳ್ಳ ಚಾವಡಿ ಬಜಾರ್‌ ದಿಲ್ಲಿಯ ಅತ್ಯಂತ ಹಳೆಯ  ಬಜಾರುಗಳಲ್ಲೊಂದು.

ಚಿಕ್ಕ ಬಜೆಟ್ ಅನ್ನು ಹೊಂದಿದ್ದು ದಿಲ್ಲಿ ಸುತ್ತುವವರಿಗೂ ಕೂಡ ಹಳೇದಿಲ್ಲಿಯು (ಮಹಾನಗರಗಳ ಮಟ್ಟಿಗೆ) ತನ್ನ ಅಷ್ಟೇನೂ ದುಬಾರಿಯಲ್ಲದ ಮತ್ತು ಅಪ್ಪಟ ದೇಸಿತನದ ಅನುಭೂತಿಯನ್ನು ತರುವ ಜೀವನಶೈಲಿಯಿಂದಾಗಿ ಬಹುಮುಖ್ಯ ಅನ್ನಿಸಿಕೊಳ್ಳುತ್ತದೆ. ಬ್ಯಾಕ್‌-ಪ್ಯಾಕ್‌ ಬೆನ್ನಿಗೇರಿಸಿಕೊಂಡು ದಿಲ್ಲಿ ದರ್ಶನವನ್ನು ಮಾಡುವ ಬಹಳಷ್ಟು ವಿದೇಶೀಯರಿಗೆ ಹಳೇ ದಿಲ್ಲಿಯಲ್ಲಿರುವ ಪಹಾಡ್‌ಗಂಜ್‌ ಪ್ರದೇಶವು ಕಾಶಿಯಿದ್ದಂತೆ. ಕಡಿಮೆ ದರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಗಳಲ್ಲದೆ ವಿಪರೀತವೆಂಬಷ್ಟು ಚೌಕಾಶಿಯ ಸಾಧ್ಯತೆಗಳುಳ್ಳ ಸ್ಥಳೀಯ ಬಜಾರುಗಳು ಇವರಿಗೆ ಅಚ್ಚುಮೆಚ್ಚು. ಇನ್ನು ಕೆಂಪುಕೋಟೆಯ ಆಸುಪಾಸಿನಲ್ಲಿರುವ ದರಿಯಾಗಂಜ್‌ ಮತ್ತು ನಯೀಸಡಕ್‌ನಂಥಾ ಪ್ರದೇಶಗಳು ಪುಸ್ತಕಪ್ರಿಯರ ಸ್ವರ್ಗಗಳು. ಅಧ್ಯಯನಗಳಿಗೆ ಸಂಬಂಧಪಟ್ಟಂತಹ ಆಯಾ ವಿಷಯಾಧಾರಿತ ಪುಸ್ತಕಗಳಿಂದ ಹಿಡಿದು ಮುದ್ರಣಗಳು ನಿಂತುಹೋಗಿ ದಶಕಗಳೇ ಕಳೆದಿರುವ ಅಪರೂಪದ ಪುಸ್ತಕಗಳು ಇಲ್ಲಿ ಹಟಾತ್ತನೆ ಸಿಗಬಹುದು. ಪುಸ್ತಕಪ್ರಿಯರಿಗಂತೂ ಇದೊಂಥರ ಕಲ್ಲುಗಳನ್ನು ಹೆಕ್ಕಹೋದವನಿಗೆ ಕೊಪ್ಪರಿಗೆ ಸಿಕ್ಕಿದಂಥ ಅನುಭವಗಳೇ. ಮೊಗಲ್‌ ದಿಲ್ಲಿಯಿಂದ ಫಿಲ್ಮಿ ದಿಲ್ಲಿಯವರೆಗೆ
17 ನೆಯ ಶತಮಾನದಲ್ಲಿ ದೊರೆ ಶಹಜಹಾನನಿಂದ
“ಶಹಜಹಾನಾಬಾದ್‌’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿದ್ದ ಈಗಿನ ಹಳೇ ದಿಲ್ಲಿ ಪ್ರದೇಶವು ದೈತ್ಯಗೋಡೆಗಳು ಮತ್ತು ದ್ವಾರಗಳಿಂದ ಸಂರಕ್ಷಿಸಲ್ಪಟ್ಟ ಪ್ರದೇಶವಾಗಿತ್ತು. 14 ದ್ವಾರಗಳನ್ನು ಹೊಂದಿರುವ ಈ ಪ್ರದೇಶವು ಸರಿಸುಮಾರು 1500 ಎಕರೆಯಷ್ಟಿನ ಪ್ರದೇಶವನ್ನು ಆವರಿಸಿತ್ತಂತೆ. ದಿಲ್ಲಿಯ ಖ್ಯಾತ ಕೆಂಪುಕೋಟೆಯನ್ನಷ್ಟೇ ಪರಿಗಣಿಸಿದರೂ ಇದು ಸುಮಾರು ಇನ್ನೂರೈವತ್ತು ಚಿಲ್ಲರೆ ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹಬ್ಬಿಕೊಂಡಿದ್ದು ಎರಡೂವರೆ ಕಿಲೋಮೀಟರುಗಳಷ್ಟು ಉದ್ದದ ದೈತ್ಯ ಆವರಣವನ್ನು ಹೊಂದಿದೆ. ಇನ್ನು ಹಳೇ ದಿಲ್ಲಿಯ ಹದಿನಾಲ್ಕು ದ್ವಾರಗಳಲ್ಲಿ ಕಶ್ಮೀರಿಗೇಟ್, ಲಾಹೋರಿಗೇಟ್, ಅಜ್ಮೇರಿಗೇಟ್ ಮತ್ತು ದಿಲ್ಲಿಗೇಟುಗಳು ಇಂದಿಗೂ ಜನಸಾಮಾನ್ಯರ ಭಾಷೆಯಲ್ಲೂ, ದೈನಂದಿನ ಜೀವನದಲ್ಲೂ ಜೀವಂತವಾಗಿರುವ ದ್ವಾರಗಳು.

ಮಹಾನಗರಿಯಲ್ಲಿ ಈಚೆಗೆ ಸುದ್ದಿಮಾಡುತ್ತಿರುವ “ಹೆರಿಟೇಜ್‌ವಾಕ್‌’ ಕಾರ್ಯಕ್ರಮಗಳು ಆಸಕ್ತರನ್ನು ಇಂಥ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ನಗರದ ಇತಿಹಾಸವನ್ನು ಹತ್ತಿರದಿಂದ ನೋಡುವಂತೆ ಪ್ರೇರೇಪಿಸುತ್ತಿವೆ.

ಹೀಗೆ ಕೋಟೆ, ಸ್ಮಾರಕ, ಗಲ್ಲಿಗಳೆಂದು ಸದಾ ಚಟುವಟಿಕೆಯಲ್ಲಿರುವ ಹಳೇ ದಿಲ್ಲಿಯು ಶಹರಕ್ಕೆ ಶ್ರೀಮಂತ ಪರಂಪರೆಯನ್ನು ನೀಡಿರುವುದಂತೂ ಸತ್ಯ. ಈ ಸೊಗಸು ಯಾವ ಮಟ್ಟಿನದ್ದೆಂದರೆ ಬಾಲಿವುಡ್‌ ಸೇರಿದಂತೆ ದಿಲ್ಲಿಯನ್ನು ತನ್ನ ಫ್ರೆàಮಿನಲ್ಲಿ ತೋರಬಯಸುವ ಯಾವ ಭಾಷೆಗಳ ಚಿತ್ರಗಳಾದರೂ ಹಳೇ ದಿಲ್ಲಿಯನ್ನು ಮರೆಯುವುದಿಲ್ಲ. 2009ರಲ್ಲಿ ತೆರೆಗೆ ಬಂದಿದ್ದ ರಾಕೇಶ್‌ಓಂಪ್ರಕಾಶ್‌ ಮೆಹ್ರಾ ನಿರ್ದೇಶನದ ಡೆಲ್ಲಿ-6 ಮತ್ತು ಇಮ್ತಿಯಾಝ್ ಅಲಿ ನಿರ್ದೇಶನದ ಲವ್‌ ಆಜ್ಕಲ್ ಚಿತ್ರಗಳಲ್ಲಿ ಇಂಥಾ ಅಪ್ಪಟ ದೇಸಿತನವನ್ನು ಹೊಂದಿರುವ ಹಳೇ ದಿಲ್ಲಿಯ ಸೊಗಸನ್ನು ಕಾಣಬಹುದು. ಅಂದ ಹಾಗೆ ಹಳೇ ದಿಲ್ಲಿಯಲ್ಲಿರುವ ಚಾಂದನಿಚೌಕ್‌ ಪ್ರದೇಶವನ್ನು ಡೆಲ್ಲಿ-6 ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತನ್ನ ಪಿನ್‌ಕೋಡ್‌ ಆಗಿರುವ 110006 ಮ್ಯಾಜಿಕ್‌ ಸಂಖ್ಯೆಯು 6 ಆಗಿಯಷ್ಟೇ ಉಳಿದುಕೊಂಡು ಪ್ರದೇಶಕ್ಕೆ ಸಿಕ್ಕಿರುವ ನಾಮಧೇಯವಿದು.

ಹೊಸದಿಲ್ಲಿಯದ್ದು ವೈಭವದ ಮಾತಾದರೆ ಹಳೇ ದಿಲ್ಲಿಯದ್ದು ದೇಸೀತನದ ಪರಂಪರೆ. ಖ್ಯಾತ ಸ್ಕಾಟಿಶ್‌ ಲೇಖಕರೂ, ಇತಿಹಾಸಕಾರರೂ ಆಗಿರುವ ವಿಲಿಯಂ ಡಾಲ್ರಿಂಪಲ್ ಹೇಳುವ ಮಾತುಗಳಲ್ಲಿ ಸತ್ಯವಿದೆ : ದಿಲ್ಲಿಯೆಂಬುದು ಮೊಗೆದಷ್ಟೂ ಮುಗಿಯದ ಅಚ್ಚರಿ.

-ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.