ಭಾಗವತರ ಚರಿತೆಯ ಮೂಲಕ ಯಕ್ಷಗಾನದ ಚರಿತ್ರೆ
Team Udayavani, Jun 2, 2019, 6:00 AM IST
ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ “ಶತಸ್ಮತಿ’ ಎಂಬ ಪದ ವಿಶೇಷ ಮಹತ್ವವನ್ನು ಪಡೆದಿದೆ. ಅನೇಕ ಕಲಾವಿದರ ನೂರರ ನೆನಪಿನ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ. ಶತಸ್ಮತಿ ಸಂಪುಟಗಳೂ ಪ್ರಕಟವಾಗಿ ಯಕ್ಷಗಾನದ ಇತಿಹಾಸದ ಅಪೂರ್ವ ದಾಖಲೆ ಎನಿಸುತ್ತಿವೆ. ಇವೆಲ್ಲದರ ನಡುವೆ, ಬಡಗುತಿಟ್ಟು ಯಕ್ಷಗಾನದಲ್ಲಿ ಭಾಗವತಿಕೆಯಲ್ಲಿ ನವ ಮಾರ್ಗಪ್ರವರ್ತಕರೆನಿಸಿದ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಮಾತ್ರ ವಿಶೇಷವಾಗಿ ಗಮನಸೆಳೆಯುತ್ತದೆ. ಭಕ್ತಿ¤ಪರಂಪರೆಯ “ಭಾಗವತ’ ಎಂಬ ಪದದ ಅರ್ಥವಂತಿಕೆಗೆ ಅನುಗುಣವಾಗಿ, ಯಕ್ಷಗಾನದ “ಭಾಗವತ’ನ ಉಪಾಧಿಯ ಘನತೆಗೆ ತಕ್ಕುದಾಗಿ ಬದುಕಿದ ನಾರ್ಣಪ್ಪ ಉಪ್ಪೂರರ ನೂರು ವರ್ಷಗಳ ಬದುಕೆಂದರೆ, ಅದರೊಳಗೆ ನೂರಾರು ಕಲಾವಿದರ ಜೀವನಕಥನಗಳೂ ಅಡಕವಾಗಿವೆ. ರಂಗದ ಮೇಲೆ ಕಲಾವಿದರನ್ನು ಸಮರ್ಥವಾಗಿ ನಿರ್ದೇಶಿಸಬಲ್ಲಂಥ “ಗುರು’ತರ ವ್ಯಕ್ತಿತ್ವ ಅವರದು. ಹಾಗಾಗಿಯೇ ಅವರ ಹೆಸರಿನೊಂದಿಗೆ “ಪ್ರಾಚಾರ್ಯ’ ಉಪಾಧಿಯಿದೆ. ಅವರ ಸುಪುತ್ರ ಶ್ರೀಧರ ಉಪ್ಪೂರರೇ ಸಂಪಾದಕತ್ವ ವಹಿಸಿ ಪ್ರಕಟಿಸಿರುವ ಅವರ ಶತಮಾನದ ಸ್ಮರಣ ಸಂಪುಟ ಕೇವಲ ಭಾಗವತರೊಬ್ಬರ ಸಾಧನೆಯ ಕಥನವಾಗದೆ, ಬಡಗುತಿಟ್ಟಿನ ಒಂದು ಕಾಲದ ಐತಿಹಾಸಿಕ ದಾಖಲೆಯಂತಿದೆ. ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ, ಅವಲೋಕ ಎಂಬ ಐದು ವಿಭಾಗಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಸುಮಾರು 100ಕ್ಕಿಂತ ಅಧಿಕ ಸಹೃದಯ ಲೇಖಕರು, ಕಲಾವಿಮರ್ಶಕರು, ಕಲಾವಿದರು, ಕಲಾಭಿಜ್ಞರು ಭಾಗವತರ ನೆನಪುಗಳನ್ನು ಹಂಚಿ ಕೊಂಡಿದ್ದಾರೆ.
ನಾರ್ಣಪ್ಪ ಉಪ್ಪೂರರದು ಸರ್ವಸಮರ್ಪಣಾಭಾವದ ಬದುಕು. ಯಕ್ಷಗಾನವನ್ನಲ್ಲದೆ ಬೇರೆ ಯೋಚಿಸಿದವರೇ ಅಲ್ಲ. ಹಣಕ್ಕೆ ಬಾಗದ, ಹೆಸರಿಗೆ ಬೀಗದ ಸ್ವಾಭಿಮಾನಿ. ಹಾಗಾಗಿಯೇ ಅವರು ಸತ್ತ ಮೇಲೆಯೂ ಹೀಗೆ ನಮ್ಮ ನಡುವೆ ಬದುಕುತ್ತಿದ್ದಾರೆ.
ಶತಸ್ಮತಿ
(ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು)
ಸಂ.: ಡಾ. ಶ್ರೀಧರ ಉಪ್ಪೂರ
ಪ್ರ.: ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋ ತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ- 576226, ಉಡುಪಿ ಜಿಲ್ಲೆ
ಮೊದಲ ಮುದ್ರಣ: 2019 ಬೆಲೆ: ರೂ. 300
ಶ್ರೀಕೃಷ್ಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.