ನಿಜವಾಗಿ ಹೊಸದಾಗುವುದು…
Team Udayavani, Jan 1, 2017, 3:45 AM IST
ಹೊಸ ವರ್ಷ ಎಂದರೆ ಹೊಸ ಕಾಲದೆಡೆಗಿನ ಪಯಣ. ಹಾಗಾಗಿ, ಹಳೆಯ ನೆನಪುಗಳು ಹಿಂದುಳಿಯುತ್ತವೆ, ಬರುವ ವರ್ಷಕ್ಕಾಗಿ ಹೊಸ ನೆನಪುಗಳು ಸಂಭವಿಸುತ್ತವೆ.
ಕಳೆದ ವರ್ಷದ ಕೊನೆಯಲ್ಲಿ ನಡೆದ ನೋಟುಗಳ ಅಪಮೌಲಿÂàಕರಣದಿಂದ ಸಮಾಜದಲ್ಲಿ ನೈತಿಕ ಜಾಗೃತಿ ಉಂಟಾಗಬಹುದೆಂದು ಭಾವಿಸಿದರೆ ಅದು ನಿಜವಾಗುವ ಬಗ್ಗೆ ಸಂದೇಹವಿದೆ. ಮದ್ಯದಂಗಡಿಗಳಲ್ಲಿ ವ್ಯಾಪಾರ ಕಡಿಮೆಯಾಗಿಲ್ಲ. ಯುವಕರು ಹೊಸವರ್ಷಾಚರಣೆ ಎಂದರೆ ಅಮಲಿನ ಲೋಕದಲ್ಲಿ ಮುಳುಗಿಹೋಗುವುದೆಂದು ತಿಳಿದಂತಿದೆ. ಕೆಲವು ವರ್ಷಗಳ ಹಿಂದೆ ಡಿಸೆಂಬರ್ 31ರ ರಾತ್ರಿ ಗೆಳೆಯರೊಂದಿಗೆ ಬೆಂಗಳೂರಿನ ಎಂ.ಜಿ. ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಆಗ ಹೊಸವರ್ಷಾಚರಿಸುವ ಯುವಕರ ನೂಕುನುಗ್ಗಲಿನಿಂದ ನಮ್ಮ ಜೊತೆಗಿದ್ದ ಹಿರಿಯ ಸ್ನೇಹಿತರೊಬ್ಬರು ದೂಡಲ್ಪಟ್ಟು ರಸ್ತೆ ಬದಿಗೆ ಬೀಳುವಂತಾಯಿತು. ಹೊಸದರ ಆಚರಣೆ ಎಂದರೆ ಹಳೆಯ ನೋಟುಗಳನ್ನು, ಹಳೆಯ ತಲೆಗಳನ್ನು ಅವಗಣಿಸಬೇಕೆಂದು ಅರ್ಥವೆ?
ಭಾರತೀಯ ಸಂಸ್ಕೃತಿಯಲ್ಲಿ ಚೈತ್ರ ಮಾಸ ನಿಜವಾದ ಹೊಸ ಕಾಲ. ಸಂಸ್ಕೃತಿ ಮಾತ್ರವಲ್ಲ, ಪ್ರಕೃತಿಯೂ ಈ ಸಂದರ್ಭದಲ್ಲಿ ಲವಲವಿಕೆಯನ್ನು ಅನುಭವಿಸುತ್ತದೆ. ಆದರೆ, ನಾವು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಮುಳುಗಿದ್ದೇವೆ. ವರ್ಷ ನಿಜವಾಗಿ ಹೊಸದಾಗುವುದು ಯಾವಾಗ?”
– ಕುಂ. ವೀರಭದ್ರಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.