ಸ್ಕಾಟ್‌ಲೆಂಡ್‌ನ‌ಲ್ಲೊಂದು ಮನೆಯ ಮಾಡಿ…


Team Udayavani, Apr 30, 2017, 3:45 AM IST

scotland-(1).jpg

ಒಂಭತ್ತು ಗಂಟೆಗಳ ಕಾಲದ ದೀರ್ಘ‌ ಪ್ರಯಾಣ ಮಾಡಿ, ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾಹ್ನ 1 ಗಂಟೆ. ಸುತ್ತ ಉದ್ದ ಕೋಟು, ಸ್ಟೈಲಾದ ಹ್ಯಾಟು-ಟೋಪಿಗಳನ್ನು ಧರಿಸಿದ್ದ ಬಿಳೀ ಜನ. ಮಧ್ಯೆ ನಾವು ಟೀ ಷರ್ಟು-ಜ್ಯಾಕೆಟ್‌-ಜೀನ್ಸ್‌ನ ಎಲ್ಲಿಯೂ ಹೊಂದಿಕೊಳ್ಳುವ ಭಾರತೀಯರು!  ಎಡಿನ್‌ಬರೋಕ್ಕೆ ಲಂಡನ್‌ನಿಂದ ವಿಮಾನದಲ್ಲಿ ಸುಮಾರು ಒಂದು ಗಂಟೆಯ ಪ್ರಯಾಣ.  ಎಡಿನ್‌ಬರೋಕ್ಕೆ ಬಂದಿಳಿದರೆ ಛಳಿ-ಛಳಿ. ಅದೂ ಒಂಥರಾ ಒ¨ªೆ ಚಳಿ. ಮಳೆ ಬರದಿದ್ದರೂ ಇಡೀ ರಸ್ತೆ ಒ¨ªೆ. 10 ದಿನಗಳ ಪ್ರವಾಸಕ್ಕಾಗಿ ನಾವು ಈ ಬಾರಿ ಕಾದಿರಿಸಿದ್ದು “ಸರ್ವಿಸ್ಡ್ ಅಪಾರ್ಟ್‌ಮೆಂಟ್‌’. ಅಂದರೆ ಒಂದು ಮನೆ. ನಮ್ಮ ಮನೆಯಂತೆ ನಮ್ಮದೇ ಅಡುಗೆ, ನಮ್ಮದೇ ಕ್ಲೀನಿಂಗ್‌! ಜೊತೆಗೆ ನಮ್ಮ ಮನೆಯ ಹಾಗೇ “ನೆಮ್ಮದಿ’!.

ಬರ್ಗ್‌ ಅಲ್ಲ ಬರೋ !
“ಎಡಿನ್‌ಬರೋ’ ಸ್ಪೆಲ್ಲಿಂಗ್‌ ಏಕೆ ಹೀಗೆ (Edinburgh)  “ಎಡಿನ್‌ಬರ್ಗ್‌’ ಎನ್ನುವ ಬದಲು ಸ್ಪೆಲ್ಲಿಂಗ್‌ ಹೀಗೆ ಬರೆದು, “ಬರ್ಗ್‌’ ಬದಲು “ಬರೋ’  ಅಂತ ಏಕೆ ಹೇಳುತ್ತಾರೆ ಎಂಬ ಚರ್ಚೆಯ ಮಧ್ಯೆ ಸ್ಕಾಟ್‌ಲೆಂಡಿನ ಈ ತಾತ್ಕಾಲಿಕ “ಮನೆ’ಗೆ ಬಂದಿಳಿದಿ¨ªೆವು.  ಮೊದಲೇ ಕೊಟ್ಟಿದ್ದ ಪಾಸ್‌ವರ್ಡ್‌ ಉಪಯೋಗಿಸಿ ಕೀ ಇಟ್ಟಿರುವ ಸಣ್ಣ ಪೆಟ್ಟಿಗೆಯನ್ನು ತೆರೆಯಬೇಕು. ಆ ಕೀ ಉಪಯೋಗಿಸಿ ಮನೆಯೊಳಗೆ ಹೊಕ್ಕರಾಯಿತು. ಯಾರನ್ನೂ ಕಾಯಬೇಕಿಲ್ಲ. ನಾವಿದ್ದ 10 ದಿನಗಳೊಳಗೆ ಒಮ್ಮೆಯೂ ಮನೆಯ ಮಾಲೀಕರ ಭೇಟಿಯಾಗಲೇ ಇಲ್ಲ!  ಮಾಲೀಕರನ್ನು ಬಿಡಿ, ಒಂದು ನರಪಿಳ್ಳೆಯೂ ವಿಚಾರಿಸಲಿಲ್ಲ. ಹಾಗೆಂದು ಸೌಲಭ್ಯಗಳೆಲ್ಲವೂ ಪರಿಪೂರ್ಣ. ಒಂದು ಸುಸಜ್ಜಿತ ಮನೆಗೆ ಇರಬೇಕಾ¨ªೆಲ್ಲವೂ ಇತ್ತು. ಆದರೆ ಕೆಲಸ ಮಾಡಲು, ಸ್ವಿಚ್‌ ಒತ್ತಲು ಮನುಷ್ಯರ ಕೊರತೆ. ನಮ್ಮ ಕೆಲಸ ನಾವೇ ಮಾಡಬೇಕು. ಸಂಪೂರ್ಣ ಸ್ವಾವಲಂಬನೆ.

ಎಡಿನ್‌ಬರೋ ಬೀದಿಗಳಿಗೆÇÉಾ ರಾಜರು, ರಾಣಿಯರು, ಅವರ ಮಕ್ಕಳು, ನಾಯಿ ಹೀಗೆ ರಾಜಮನೆತನದವರ ಹೆಸರುಗಳೇ. ಹೇ ಮಾರ್ಕೆಟ್‌, ಗ್ರೇ ಮಾರ್ಕೆಟ್‌, ಪ್ರಿನ್ಸೆಸ್‌ ಸ್ಟ್ರೀಟ್‌, ಇತ್ಯಾದಿಗಳೆಲ್ಲವೂ ಅದರದ್ದೇ ಆದ ಇತಿಹಾಸ. ಈ ಇತಿಹಾಸದ ಬಗೆಗೊಂದು ದೊಡ್ಡ ಲೋಹದ ಫ‌ಲಕ. ಅದನ್ನೂ ಈ ಜನ ಆಸಕ್ತಿಯಿಂದ ಓದುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ. “ಅರೆ, ನಮ್ಮ ಶಿವಮೊಗ್ಗದಲ್ಲಿಯೇ ಕೋಟೆ ರಸ್ತೆ ಅಂಥ ಇದೆಯಲ್ಲ!’ ಎನಿಸಿತು.

ಸಂಜೆ ಉದ್ದ ರಸ್ತೆಯಲ್ಲಿ ನಡೆದುಕೊಂಡು ಹೋದರೆ ಇಡೀ ಎಡಿನ್‌ಬರೋನ ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಮರದ ಬೆಂಚ್‌ಗಳು. ಅದರ ಬೆನ್ನಿನ ಮೇಲೆ ಕಾಣುವ ಹಾಗೆ “ಇಂಥವರ ನೆನಪಿಗೆ’ ಎಂಬ ಫ‌ಲಕ. ಇಲ್ಲಿ ಇದೊಂದು ಸ್ಮಾರಕದ ರೀತಿ ಇತರರಿಗೂ ಉಪಯೋಗವಾಗುವ ಸ್ಮಾರಕ.

ಎಡಿನ್‌ಬರೋ ಪಟ್ಟಣದ ಘನತೆ-ಸೌಂದರ್ಯ ಹೆಚ್ಚಿಸುವುದು ಅಲ್ಲಿರುವ ದೊಡ್ಡ ಕೋಟೆ. ಈ ಕೋಟೆ ಎಡಿನ್‌ಬರೋದ ಯಾವ ಕಡೆ ನಿಂತು ನೋಡಿದರೂ ಕಾಣುತ್ತದೆ. ಕೋಟೆಯ ಸುತ್ತ ಮ್ಯೂಸಿಯಂಗಳಿವೆ. ಹಲವು ಆಕರ್ಷಕ ಚರ್ಚುಗಳಿವೆ. ಕೋಟೆಯ ಸುತ್ತ ಯಾವ ವಾಹನಗಳೂ ಬರದಂತೆ ಮಾಡಿ ಪಾದಚಾರಿಗಳಿಗೆ ಹಾದಿ ಸುಗಮಗೊಳಿಸಿ¨ªಾರೆ. ಕಾಲು ನೋವಿರುವವರಿಗೆ ಇದು “ದುರ್ಗಮ’ ಎನಿಸಿದರೂ, ಅವರಿಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ¨ªಾರೆ. ಸ್ಕಾಟಿಷ್‌ ಜನ “ಸ್ಟೆçಲಿಷ್‌’ ಜನ!  ಹಾಗಾಗಿ ಇಲ್ಲಿ ನಿಲ್ಲುವ ತಿಂಡಿ-ತೀರ್ಥದ ಗಾಡಿಗಳಿಗೂ ಬಣ್ಣಬಣ್ಣದ ಹಳೇ ಕಾಲದ ವೈಭವೋಪೇತ ಕಾರು-ವ್ಯಾನ್‌ಗಳ ಮಾದರಿ, ಜೊತೆಗೆ ಚೌಕಳಿ-ಚೌಕಳಿಯ ಸ್ಕರ್ಟ್‌ ಮಾದರಿಯ “ಕಿಲ್ಟ್’ ಧರಿಸಿದ ಸ್ಕಾಟಿಷ್‌ ಸೈನಿಕನಿಗೆ ಸ್ಕಾಟ್‌ಲ್ಯಾಂಡ್‌ನ‌ ದೊಡ್ಡ ಪೀಪಿ ಹಿಡಿಸಿ ಆತ ಊದುತ್ತಿರುತ್ತಾನೆ. ಫೋಟೋ ತೆಗೆಯುವವರು ತೆಗೆಯುತ್ತಿರುತ್ತಾರೆ.

ದುಡೂx ಹಾಕುತ್ತಾರೆ! ಹಾಗೆಯೇ ಕೋಟೆಯ ಸುತ್ತಮುತ್ತ ಭೂತ-ರಾಕ್ಷಸರ ವೇಷದಲ್ಲಿ, ಉದ್ದ ನಿಲುವಂಗಿ, ಕೋಟು ಧರಿಸಿ ಉದ್ದ ಕೋಲಿನ ಕಾಲಿನ ಮನುಷ್ಯರು ಓಡಾಡುತ್ತಾರೆ. ಇವರ ಜೊತೆ ಫೋಟೋ ತೆಗೆಯಬೇಕೆಂದರೆ ಕಾಸು ಬಿಚ್ಚಬೇಕು!  ಹಾಗೊಮ್ಮೆ ಕಾಸು ಕೊಡದೇ ಫೋಟೋ ತೆಗೆಯಲು ಹೋದರೆ ಬೇರೆಡೆ ತಿರುಗಿ, ಬೆನ್ನು ತೋರಿಸಿ, ಮುಖ ಮುಚ್ಚಿಕೊಳ್ಳುತ್ತಾರೆ!.

ಎಡಿನ್‌ಬರೋ ಕೋಟೆಯ ಸುತ್ತಮುತ್ತ ಕಿರಿದಾದ ಬೀದಿಗಳು. ಬೀದಿಗಳು ಚಿಕ್ಕ ಚೌಕಾಕಾರದ ಕಲ್ಲುಗಳಿಂದ ಮಾಡಲ್ಪಟ್ಟವು. ಹಾಗಾಗಿ ಸಹಜವಾಗಿ ಇಡೀ ವಾತಾವರಣ ನಮ್ಮನ್ನು ಹಳೆಯ ಕಾಲಕ್ಕೆ ಕೊಂಡೊಯ್ಯುತ್ತವೆ. ವಾಹನಗಳೇ ಇಲ್ಲದ, ಬಿಳಿ ಬಿಳೀ ಜನರು ಅಲ್ಲಲ್ಲಿ ಓಡಾಡುತ್ತಿರುವ, ದೊಡ್ಡ ದೊಡ್ಡ ಬಿಯರ್‌ ಮಗ್‌ಗಳ, ಅಗ್ಗಿಷ್ಟಿಕೆಗಳ ಚಿತ್ರವಿರುವ ಬೋರ್ಡುಗಳು ತುಂಬಿರುವ ಬೀದಿಗಳು.

ಎಡಿನ್‌ಬರೋ ಕೋಟೆ ಎಂಬ ಪುಟ್ಟ ಜಗತ್ತು
ಎಡಿನ್‌ಬರೋ ಕ್ಯಾಸಲ್‌ ಅಥವಾ ಕೋಟೆ ಸ್ಕಾಟ್‌ಲೆಂಡ್‌ನ‌ ಜಗತøಸಿದ್ಧ ನಿಶಾನೆ. ಕೋಟೆಯೊಳಗೆ ಅದರದ್ದೇ ಆದ ಒಂದು ಪುಟ್ಟ ಜಗತ್ತು. ಒಂದು ಕೋಟೆ ಎಂದರೆ ಹೇಗಿರಬಹುದು ಎಂಬ ನಮ್ಮ ಕಲ್ಪನೆಗೆ ಅತಿ ಹತ್ತಿರವಾಗಿ ಎಡಿನ್‌ಬರೋ ಕೋಟೆ ನಿಲ್ಲುತ್ತದೆ. ಇಡೀ ಕೋಟೆ ನಿಂತಿರುವುದು ಭೌಗೋಳಿಕವಾಗಿ 70 ಮಿಲಿಯನ್‌ ವರ್ಷಗಳ ಹಿಂದೆ ಜ್ವಾಲಾಮುಖೀಯೊಂದರಿಂದ ರೂಪುಗೊಂಡ ¸ೃಹದಾಕಾರವಾದ ಬಂಡೆಯ ಮೇಲೆ. ಕೋಟೆಯ ಸುತ್ತ ಬೆಟ್ಟಗುಡ್ಡಗಳು, ಇಡೀ ಎಡಿನ್‌ಬರೋದ ಪಟ್ಟಣದ ಮನೆಗಳು, ಹಸಿರು ಗಿಡಮರಗಳು ಕಾಣುತ್ತವೆ. ಒಳಹೋಗಲು 15 ಪೌಂಡ್‌ ಕೊಡಬೇಕು. ಎಂದರೆ ಬರೋಬ್ಬರಿ 1350 ರೂಪಾಯಿ. ಶತಮಾನಗಳ ಹಿಂದಿನ ಚರಿತ್ರೆ ನಮ್ಮ ಕಣ್ಣ ಮುಂದೆ ತೆರೆಯತೊಡಗುತ್ತದೆ. ಸೇಂಟ್‌ ಮಾರ್ಗರೆಟ್‌ ಚಾಪೆಲ್‌ 12ನೇ ಶತಮಾನ¨ªಾದರೆ, ಇಲ್ಲಿರುವ “ಗ್ರೇಟ್‌ಹಾಲ್‌’ ನಾಲ್ಕನೇ ಜೇಮ್ಸ್‌ ದೊರೆಯಿಂದ ನಿರ್ಮಾಣವಾದದ್ದು 1510ರಲ್ಲಿ. ಸ್ಕಾಟ್‌ಲೆಂಡ್‌ನ‌ ರಾಷ್ಟ್ರೀಯ ಸಮರ ಸಂಗ್ರಹಾಲಯ ಇಲ್ಲಿಯೇ ಇದೆ. ಯುದ್ಧದಲ್ಲಿ ಮಡಿದ ವಿವಿಧ ರೆಜಿಮೆಂಟ್‌ನ ಸೈನಿಕರ ನೆನಪಿಗೆ, ಅವರ ವಿವರಗಳಿರುವ ದೊಡ್ಡ ದೊಡ್ಡ ಪುಸ್ತಿಕೆಗಳು. ಮೈಸೂರು ಯುದ್ಧದ ವಿವರಗಳನ್ನು ಅಲ್ಲಿ ನೋಡಿ ನಮಗೆ ಒಂದು ಥರ ರೋಮಾಂಚನ!.

ರಾಜಮನೆತನದ ಸಂಗ್ರಹಾಲಯ, ಅವರಿಗೆ ಸಂಬಂಧಿಸಿದ ಆಭರಣ, ಕಿರೀಟ, ವಸ್ತುಗಳನ್ನು ತೋರಿಸುತ್ತದೆ. ಇವೆಲ್ಲವೂ ಇತರ ಸಂಗ್ರಹಾಲಯ ಗಳಂತೆಯೇ. ಆದರೆ ಮಧ್ಯೆ ಮಧ್ಯೆ ಇರುವ ದೃಶ್ಯಾವಳಿಗಳು, ಕಥಾಫ‌ಲಕಗಳಿಂದ ಈ ಆಭರಣ ಗಳು-ವಸ್ತುಗಳು ನಮ್ಮೊಡನೆ ಮಾತನಾಡುವ ರೀತಿ ಭಾಸವಾಗುತ್ತದೆ. ಅನುಭವವನ್ನು ಮತ್ತಷ್ಟು ಅರ್ಥಪೂರ್ಣ ಎನಿಸುವಂತೆ ಮಾಡುತ್ತದೆ. 6-7ನೇ ತರಗತಿಯಲ್ಲಿ ನಾವು ಓದಿದ್ದ ಜೇಡರ ಬಲೆಯಿಂದ ಸ್ಫೂರ್ತಿಗೊಂಡ ಕಿಂಗ್‌ ಬ್ರೂಸನ ಕತೆ ಇಲ್ಲಿಯದೇ. ಹಾಗೆ ಸ್ಫೂರ್ತಿಗೊಂಡ ಬ್ರೂಸ್‌ ಗೆದ್ದಿದ್ದು ಇದೇ ಕೋಟೆಯನ್ನು. ಕೋಟೆಯ ವಿವಿಧ ಸ್ಥಳಗಳಲ್ಲಿ ನಿರ್ದಿಷ್ಟ ಸಮಯಕ್ಕೆ ಕೆಲವು ಪ್ರದರ್ಶನಗಳೂ ನಡೆಯುತ್ತವೆ. ದಿನದಲ್ಲಿ ನಡೆಯುವ ಈ “ಶೋ’ಗಳು ಉಚಿತ. “ಗ್ರೇಟ್‌ಹಾಲ್‌’ ನಲ್ಲಿ ಒಬ್ಬ ಸಂಗೀತ ಕಲಾವಿದ ಏಳು ವಾದ್ಯಗಳನ್ನು ಒಮ್ಮೆಲೇ ನುಡಿಸಿ ತೋರಿಸುತ್ತಿದ್ದ. ಹೀಗೆ ನಡೆಯುವ ಯಾವ ಪ್ರದರ್ಶನಗಳಾದರೂ, ಅವು ಚರಿತ್ರೆಯನ್ನು ಎತ್ತಿ ತೋರಿಸುವ, ಇಲ್ಲಿಯ ಜನರ ಹಾಸ್ಯ-ಮಾತಿನ ಚಾಕಚಕ್ಯತೆ, ನಟನಾ ಕೌಶಲ, ತಮ್ಮನ್ನು ಹೊಗಳಿಕೊಳ್ಳುತ್ತಲೇ ಇತರ ದೇಶದವರನ್ನು ಸ್ವಲ್ಪ ಗೇಲಿ ಮಾಡುವ, ಒಟ್ಟಿನಲ್ಲಿ “ಮಾತೇ’ ಬಂಡವಾಳವಾಗಿರುವ “ಶೋ’ ಗಳು. ಪ್ರವಾಸಿಗರಿಗೆ ಖಂಡಿತವಾಗಿ “ಮಜಾ’ ನೀಡುವಂತಹವು. 

ಎಡಿನ್‌ಬರೋ ಕೋಟೆಯಿಂದ ನಿಧಾನವಾಗಿ ನಡೆಯುತ್ತ “ಹೇಮಾರ್ಕೆಟ್‌’ ಗೆ ಬಂದರೆ ದಾರಿಯಲ್ಲಿ ಸಿಗುವ “ಪ್ರಿನ್ಸೆಸ್‌ ಗಾರ್ಡನ್‌’ ನಲ್ಲಿ ಹೂವುಗಳ ರಾಶಿ. ವಿಶಾಲವಾಗಿ ಹರಡಿಕೊಂಡ ಲಾನ್‌. ಅಲ್ಲಲ್ಲಿ ನಾಯಿಗಳು ಸ್ಮಾರಕಗಳು. ಕರಡಿ ಕೊಂದ ನಾಯಿ, ತನ್ನ ಒಡೆಯನಿಗಾಗಿ ಹೋರಾಡಿದ ದಿಟ್ಟ ಬುಲ್‌ಡಾಗ್‌ ಹೀಗೆ ಮನುಷ್ಯರಂತೆಯೇ ನಾಯಿಗಳ ಮೂರ್ತಿಗಳು! 

ಎಡಿನ್‌ಬರೋದ ಮನೆ ನಮ್ಮ ಮನೆಯಿಂದ ದೂರವಾಗಿದ್ದರೂ, ಮನೆಯ ನೆಮ್ಮದಿ ನೀಡುವಂತಿತ್ತು. ನಾನು ಮತ್ತೆ ಮತ್ತೆ “ಅಲ್ಲಿಹುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ’ ಎಂದು ಹಾಡಿದರೂ, ಸುತ್ತ ಕೋಟೆ ಕಾಣುವ ಮನೆ ಇಷ್ಟವೇ ಆಗಿತ್ತು. ಸ್ವಾವಲಂಬನೆಯ ಪಾಠ ಕಲಿಸಿತ್ತು! “”ಇವರು ಹೇಗೆ ಮಾನಿಟರ್‌ ಮಾಡ್ತಾರೆ? ನಾವೇನಾದ್ರೂ ಇಲ್ಲಿಯ ಸಾಮಾನು ಕದ್ದುಕೊಂಡು ಹೋದರೆ?” ಎಂಬ ಮಕ್ಕಳ ಪ್ರಶ್ನೆಗೆ “”ಸಿಸಿಟಿವಿ’ ಇರುತ್ತೆ’ ಎಂದು ತಕ್ಷಣ ಉತ್ತರ ಬಂದರೂ, “”ಹಾಗೆ ಮಾಡದಿರುವುದು ನಮ್ಮ “ಒಳಗಿನ’ ಜವಾಬ್ದಾರಿ. ಈ ನಂಬಿಕೆಯಿಂದ ನಾವು ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಪರದೇಶದಲ್ಲಿ “ಭಾರತ’ಕ್ಕೆ ಕೆಟ್ಟ ಹೆಸರು” ಎಂಬ ಉತ್ತರ ಹೊಳೆದಿತ್ತು!

– ಡಾ. ಕೆ. ಎಸ್‌. ಪವಿತ್ರಾ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.