ಮರೆಯಲಿ ಹೇಗೆ ಆ ದಿನವನ್ನು!
Team Udayavani, Aug 6, 2017, 6:30 AM IST
ಯಾವುದದು? ಶಾಲೆಗೆ ಸೇರಿದ ದಿನವೆ? ಪದವಿ ಗಳಿಸಿದ ದಿನವೆ? ಉದ್ಯೋಗ ದೊರಕಿದ ದಿನವೆ? ತಾಳಿ ಕಟ್ಟಿದ ದಿನವೆ? ಮಕ್ಕಳನ್ನು ಪಡೆದ ದಿನವೆ? ಇವುಗಳಲ್ಲಿ ಒಬ್ಬೊಬ್ಬರಿಗೊಂದೊಂದು ಮರೆಯಲಾಗದ ದಿನವಿರಬಹುದು. ಆದರೆ, ನನ್ನ ಪಾಲಿಗೆ ಹೇಳುವುದಾದರೆ ನಾನು ನಿವೃತ್ತಿಹೊಂದಿದ ದಿನವೇ ಎಂದೆಂದೂ ಮರೆಯಲಾಗದ ದಿನ ಎಂದು ಎದೆ ತಟ್ಟಿ ಹೇಳಬÇÉೆ !
ಹೌದು, ನನ್ನ ನೌಕರಿಯ ಕೊನೆಯ ದಿನದಂದು ವಿಭಾಗದ ಅಧ್ಯಾಪಕರೆಲ್ಲ ಸೇರಿ ನನಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟಿದ್ದರು. “”ಸರ್, ನಾಳೆಯಿಂದ ನೀವಿಲ್ಲದ ವಿಭಾಗವನ್ನು ಊಹಿಸಲೂ ಸಾಧ್ಯವಾಗಲಾರದು” ಎಂದಿದ್ದರು ನನ್ನ ಸಹೋದ್ಯೋಗಿಗಳು. “”ಯಾರೂ ಈ ಪ್ರಪಂಚದಲ್ಲಿ ಯಾವುದಕ್ಕೂ ಅನಿವಾರ್ಯರಲ್ಲ” ಎಂದೆ ನಾನು ಅವರಿಗೆಲ್ಲ ಶುಭಾಶಯವನ್ನು ಕೋರುತ್ತ. ಅಂದು ನನ್ನನ್ನು ಕೇಳಲಾದ ಪ್ರಶ್ನೆ ಒಂದೇ- “”ಮುಂದೇನು ಮಾಡುತ್ತೀರಿ?” ಎಂದು. ನಾನು ಕೊಟ್ಟ ಉತ್ತರವೂ ಒಂದೇ. “ಓದು ಮತ್ತು ಬರಹ’! ಆ ದಿನ ನನ್ನ ಪತ್ನಿಯನ್ನೂ ವೇದಿಕೆಯ ಮೇಲೆ ಕುಳ್ಳಿರಿಸಿದರು. ನನಗೆ ಸನ್ಮಾನ ಮಾಡುತ್ತಿ¨ªಾಗ ಆಕೆಯ ಕಣ್ಣಂಚಿನಲ್ಲಿ ಒಂದೆಡು ಹನಿ ಉದುರಿದುದನ್ನು ನಾನು ಗಮನಿಸಿ¨ªೆ. ಕಾರ್ಯಕ್ರಮ ಮುಗಿದ ಬಳಿಕ ಶಾಲು, ಹೂಹಾರ, ಫಲಕ, ಹಣ್ಣುಗಳೊಂದಿಗೆ ಸಂತೋಷದಿಂದಲೇ ಮನೆಗೆ ಹಿಂದಿರುಗಿದೆವು. ಮಲ್ಲಿಗೆಯ ಹಾರ ನನ್ನವಳಿಗಾಯಿತು!
ಮನೆಯಲ್ಲಿ ಅರ್ಧಾಂಗಿಯನ್ನು ಕಣ್ಣೀರಿಗೆ ಕಾರಣವೇನೆಂದು ಕೇಳಿದೆ. ಅದಕ್ಕೆ ಉತ್ತರ ಇಂದಿನ ತನಕವೂ ದೊರಕಲಿಲ್ಲ. ನಾಳೆಯಿಂದ ನನ್ನವರು ಮನೆಯÇÉೇ ಇರುತ್ತಾರೆಂಬ ಸಂತೋಷದ ಭಾಷ್ಪವೇ? ಅಥವಾ ಮುಂದೆ ಎಣಿಸಿದ್ದನ್ನೆಲ್ಲ ಖರೀದಿಸಲಾಗದೆ ನಿವೃತ್ತಿ ವೇತನದಲ್ಲಿ ದಿನ ದೂಡಬೇಕೆಂಬ ಚಿಂತೆಯೇ? ಅಥವಾ ನಾಳೆಯಿಂದ ಅವರ ಕಿರಿಕಿರಿ ಕೇಳುತ್ತಿರಬೇಕೆಂಬ ಕಷ್ಟದ ಸೂಚನೆಯ ಸಂಕೇತವೇ? ಮಕ್ಕಳ ಮದುವೆಯಾಗಬೇಕೆಂಬ ಯೋಚನೆಯೇ? ಅಥವಾ ಮರುದಿನದಿಂದ ಪತಿ ನಿರುದ್ಯೋಗಿಯಾಗಿ, ಸೋಮಾರಿಯಾಗಿ ಕಾಲಹರಣ ಮಾಡಿದರೆ ಹೇಗೆ ಎಂಬ ಚಿಂತೆಯೇ? ನನ್ನ ಪ್ರಶ್ನೆಗೆ ಮೌನವೇ ಉತ್ತರವಾದರೆ ನಾನು ನಿಸ್ಸಹಾಯಕನಲ್ಲವೆ? ಈ ಹೆಣ್ಣಿನ ಮನಸ್ಸನ್ನು ಅರಿಯಲು ನನ್ನಿಂದ ಸಾಧ್ಯವಾಗಲೇ ಇಲ್ಲ!
ರಾತ್ರಿಯ ಊಟ ಮುಗಿಸಿ ಮಲಗಲು ಹೋದೆ. ನಿ¨ªೆ ಮುಷ್ಕರ ಹೂಡಿತು. ಏನೇನೋ ಯೋಚನೆಗಳು. ಬಳಿಯಲ್ಲಿ ನೋಡುತ್ತೇನೆ, ನನ್ನವಳು ಚೆನ್ನಾಗಿ ಗೊರಕೆ ಹೊಡೆಯುತ್ತಾಳೆ. ಈ ಗೃಹಿಣಿಯರಷ್ಟು ಅದೃಷ್ಟವಂತರು ಯಾರಿ¨ªಾರೆ? ಎಂದಿತು ಮನಸ್ಸು. ಇಲ್ಲ , ನಿ¨ªೆ ಹತ್ತುವುದೇ ಇಲ್ಲ, ಎದ್ದು ಹಾಸಿಗೆಯಲ್ಲಿ ಕುಳಿತು ಧ್ಯಾನಾಸಕ್ತನಾದೆ. ನನ್ನವಳು ಕಣ್ಣೀರು ಸುರಿಸಿದ್ದೇಕೆ? ನಾಳೆಯಿಂದ ನಾನೇನು ಮಾಡಲಿ? ಧ್ಯಾನದಲ್ಲೂ ಇದೇ ಪ್ರಶ್ನೆಗಳ ಕಾಟ! ಮತ್ತೆ ಮಲಗಿದೆ. ಒಂದೆರಡು ಗಂಟೆ ನಿ¨ªೆ ಬಂದು ಎಚ್ಚರಗೊಂಡಾಗ ಸೂರ್ಯೋದಯವಾಗಿತ್ತು.
ಎದ್ದು ಹಾಸಿಗೆಯಲ್ಲಿ ಕುಳಿತೆ. ನನ್ನ ನಿವೃತ್ತಿ ಜೀವನದ ಮೊದಲ ಆ ದಿನ ಮನಸ್ಸು ಉಯ್ನಾಲೆಯಂತೆ ಸಂಭ್ರಮದಿಂದ ತೂಗುತ್ತಿತ್ತು. ಮೊದಲು ನನ್ನ ಮನಸ್ಸಿಗೆ ಬಂದುದು ಇನ್ನು ನನಗೆ ಪ್ರತಿ ದಿನವೂ ಭಾನುವಾರ ಎಂದು. ನನ್ನವಳು ಎಂದೋ ಎದ್ದಿದ್ದಳು. “ಕಾಫಿ’ ಎಂದಳು. ಹಲ್ಲುಜ್ಜಿ ಬಂದು ಕಾಫಿ ಹೀರಿದೆ. ದೋಸೆ ತಿಂದೆ. ದಿನಪತ್ರಿಕೆ ಬಂತು. ಮೇಲಿಂದ ಮೇಲೆ ಕಣ್ಣು ಹಾಯಿಸಿದೆ. ನನ್ನ ಸನ್ಮಾನದ ಬಗೆಗೂ ಅದರಲ್ಲಿ ಚಿತ್ರವಿತ್ತು! ಮಡದಿಗೆ ತೋರಿಸಿದೆ. ಒಂದು ತೆಳ್ಳಗಿನ ನಗುಬೀರಿದಳು. ಸ್ನಾನ ಮಾಡಿ ಕಾಲೇಜಿಗೆ ಹೋಗುವಾಗ ಉಡುವ ಉಡುಪನ್ನೇ ಧರಿಸಿದೆ. ಮನಸ್ಸು ಹಗುರವಾದಂತೆ ಕಂಡಿತು. ಕಾಲೇಜಿಗೆ ಹೋಗಬೇಕೆಂದಿಲ್ಲ, ಪಠ್ಯ ಓದಬೇಕೆಂದಿಲ್ಲ. ವಿದ್ಯಾರ್ಥಿಗಳ ಕಿರಿಕಿರಿಯಿಲ್ಲ, ಕಾಲೇಜಿನ ಯಾವ ಕೆಲಸವೂ ಇಲ್ಲ, ಪ್ರಾಂಶುಪಾಲರಿಗೆ ಹೆದರಬೇಕೆಂದಿಲ್ಲ, ಆದರೆ, ಪಾಠ ಮಾಡುವ ಸಂತೋಷ ತಪ್ಪಿತಲ್ಲ? ಇರಲಿ, ಅದನ್ನು ಇನ್ನೊಂದು ಕಾರ್ಯದ ಮೂಲಕ ಗಳಿಸೋಣ ಎಂದಿತು ಮನಸ್ಸು. “ಯಾವ ಕಡೆ ಹೊರಟಿರಿ?’ ಎಂಬ ನನ್ನವಳ ಪ್ರಶ್ನೆಗೆ “ಈಗ ಬರುತ್ತೇನೆ’ ಎನ್ನುತ್ತ ಹೊರಗೆ ನಡೆದೆ. “ಬೇಗ ಬನ್ನಿ’ ಎಂದಳು ಅಲ್ಲಿಂದಲೇ! ಗೇಟು ದಾಟುತ್ತಿದ್ದಂತೆ ಬಳಿಯಲ್ಲಿರುವ ಗೆಳೆಯನ ಮನೆಯ ನೆನಪಾಯಿತು. ಎಂದಿನಂತೆ ಅಲ್ಲಿಗೆ ಹೋದೆ. ಅವರಿಗೂ ಖುಷಿಯಾಯಿತು. ಕುರ್ಚಿಯಲ್ಲಿ ಆರಾಮವಾಗಿ ಕುಳಿತೆ.
“”ಇನ್ನು ನಾನೂ ನಿಮ್ಮಂತೆಯೇ, ಪೂರ್ಣ ಸ್ವಾತಂತ್ರ್ಯದ ಹಕ್ಕಿ” ಎಂದೆ. ನಗುನಗುತ್ತ ಮಾತಿಗೆ ತೊಡಗಿದೆ. ಅವರ ಮಡದಿಯೂ ಹರಟೆಯಲ್ಲಿ ಪಾಲ್ಗೊಂಡರು. ಅಂದಿನಂತೆ ನಾನು ಎಂದೂ ಗಪ್ಪಾ ಹೊಡೆದದ್ದಿಲ್ಲ. ಕಾಫಿಯಾಯಿತು, ತಿಂಡಿಯೂ ಆಯಿತು, ಮಾತು ಮಾತು ಎಂದೂ ಮುಗಿಯದ, ಗುರಿಯಿಲ್ಲದ, ಅರ್ಥವಿಲ್ಲದ, ಸ್ವಾರ್ಥವಿಲ್ಲದ, ಕೊನೆಮೊದಲಿಲ್ಲದ ಮಾತು. ಗೂಡಿನಿಂದ ಹೊರಬಂದ ಹಕ್ಕಿಯಾದೆ, ದಂಡೆ ಕಡಿದ ನೀರಾದೆ, ಗಗನದಲ್ಲಿ ಹಾರಾಡುವ ಗಿಡುಗವಾದೆ. ಚಿಟ್ಟೆಯಾದೆ, ಹೂವಾದೆ, ದುಂಬಿಯಾದೆ ಇನ್ನು ಏನೇನೋ ಆದೆ. ಯಾವ ಯೋಚನೆಯೂ ಪರಿವೆಯೂ ಇಲ್ಲದೆ ನಮ್ಮ ಹರಟೆ ಸಾಗಿತು.
ಮಧ್ಯಾಹ್ನವಾಯಿತು. ಮನೆಯ ನೆನಪಾಯಿತು. ಅವರನ್ನು ಬೀಳ್ಕೊಂಡು ಮನೆಗೆ ಬಂದೆ. ಎಂದೂ ಉಣ್ಣದಷ್ಟು ಉಂಡೆ. ಆ ದಿನ ನನ್ನವಳು ಪಾಯಸ ಮಾಡಿದ್ದಳು, ಚಪಾತಿಯೂ ಇತ್ತು, ಕೇಳಬೇಕೆ? ಉಂಡು ಚೆನ್ನಾಗಿ ನಿದ್ರಿಸಿದೆ. ನಿ¨ªೆ ಮನಸ್ಸಿಗೆ ಮುದ ನೀಡಿತು. ಅಪರಾಹ್ನದ ನಿ¨ªೆಯಲ್ಲೂ ಕನಸುಗಳು! ಎದ್ದು ಚಹಾ ಕುಡಿದು ಪೇಟೆಯ ಕಡೆಗೆ ಈರ್ವರೂ ಹೊರಳಿದೆವು. ಅದು ಕಾಲೇಜು ಬಿಡುವ ಸಮಯವಾಗಿತ್ತು. ಮಾರ್ಗವನ್ನು ವರ್ಣಮಯವನ್ನಾಗಿಸಿ ಸಾಗುತ್ತಿದ್ದ ನನ್ನ ವಿದ್ಯಾರ್ಥಿಗಳ ನಮಸ್ಕಾರಗಳ ಸುರಿಮಳೆಗೆ ತುತ್ತಾದೆ.
ಅಲ್ಲಿಂದ ಮುಂದೆ ಹೊಟೇಲಿಗೆ ಹೋಗಿ ಕುಳಿತು ಹರಟುತ್ತ ಒಂದೊಂದು ಗಡ್‌ಬಡ್ ತಿಂದೆವು. ರಾತ್ರಿಯ ಊಟವೂ ಅÇÉೇ ಮುಗಿಯಿತು. ಫೊಟೋಗಳನ್ನು ತೆಗೆದೆವು. ಹೊಟ್ಟೆ ತುಂಬಿ ಮನಸ್ಸು ತಂಪಾಯಿತು. “ನಾಳೆಯಿಂದ ಮನೆಯಲ್ಲಿ ಕುಳಿತು ನಾನೇನು ಮಾಡಲಿ?’ ಎಂದೆ. “ಮನೆಗೆೆಲಸದಲ್ಲಿ ನನಗೆ ಸಹಕರಿಸಿ, ಅಗತ್ಯ ಬಿ¨ªಾಗ ಒಂದು ಕಾಫಿ ಮಾಡಲೂ ನಿಮಗೆ ಬರುವುದಿಲ್ಲ, ನಾನು ಕಲಿಸುತ್ತೇನೆ’ ಎಂದಳು. “ಹೌದು ಕಣೇ, ನೀನು ನನಗೆ ಗುರುವಾಗುವ ಯೋಗ ಬಂದಿದ್ದರೆ ತಪ್ಪಿಸಲಿಕ್ಕಾಗುತ್ತದೆಯೆ?’ ಎಂದೆ. “ಅಷ್ಟೇ ಅಲ್ಲ , ನಿಮಗೆ ಎಲ್ಲ ಅಡುಗೆಯ ವಿಧಾನವನ್ನು ಕಲಿಸುತ್ತೇನೆ’ ಎಂದಳು ಧೈರ್ಯ ತುಂಬಿ. ಯಾವುದೋ ಮೂಡಲ್ಲಿದ್ದ ನಾನು “ಹೂಂ’ ಎಂದೆ. ಹೀಗೆ ಹರಟುತ್ತ ಮನೆಗೆ ಹಿಂದಿರುಗಿದೆವು. ಯೋಚನಾಮಗ್ನನಾದೆ.
ನನ್ನ ಬರವಣಿಗೆ ಮುಂದುವರಿಯಬೇಕೆಂದು ಯೋಚಿಸಿದೆ. ಕಂಪ್ಯೂಟರಿನಲ್ಲಿ ಪ್ರಾವೀಣ್ಯವನ್ನು ಹೊಂದಿದ ನನ್ನ ತಂಗಿಯ ಮಗ ಆಗ ತಾನೇ ಮನೆಗೆ ಬಂದಿದ್ದ. ಕೈಯಲ್ಲಿ ಬರೆಯುವ ಕಷ್ಟವನ್ನು ಅವನೊಂದಿಗೆ ಹಂಚಿಕೊಂಡಾಗ ಆತ, “ನುಡಿಯಲ್ಲಿ ಬರೆಯಿರಿ’ ಎಂದು ನುಡಿದ. ಅದರ ಬಗೆಗೆ ಚರ್ಚಿಸುತ್ತ ಒಂದೆರಡು ದಿನದಲ್ಲಿ ಮನೆಗೆ ಕಂಪ್ಯೂಟರ್ ಪ್ರವೇಶಿಸಿತು.
ನುಡಿಯಲ್ಲಿ ಬೆರಳಚ್ಚು ಮಾಡಲು ಅವನೇ ಕಲಿಸಿದ. ಸುಮಾರು ಒಂದು ತಿಂಗಳೊಳಗೆ ಅದರಲ್ಲಿ ಪರಿಣತಿಯನ್ನು ಗಳಿಸಿದೆ. ಲೇಖನಗಳನ್ನು ಬರೆದೆ, ಪುಸ್ತಕಗಳನ್ನು ಪ್ರಕಟಿಸಿದೆ, ಕಂಪ್ಯೂಟರ್ ಲೋಕ ನನಗೆ ವರವಾಗಿ ಪರಿಣಮಿಸಿತು. ನನ್ನ ಬರವಣಿಗೆ ಅದರÇÉೇ ಮುಂದುವರಿಯುತು. ಬರಬರುತ್ತ ಕಾಲೇಜು, ಪಾಠ ಎಲ್ಲ ಮರೆತು ಹೋಯಿತು.
ಅದರÇÉೇ ಸುಖವನ್ನು ಕಂಡೆ. ನನ್ನವಳೂ ಕಲಿತಳು! ಅದರಲ್ಲಿ ಇಡಿಯ ಪ್ರಪಂಚವನ್ನೇ ನೋಡಿದೆ. ಅನಂತರ ಅದೇ ನನ್ನ ಆತ್ಮೀಯ ನೇಹಿಗನ ಸ್ಥಾನವನ್ನು ಉಳಿಸಿಕೊಂಡಿತು. ಕಂಪ್ಯೂಟರ್ ಎಂಬ ಬ್ರಹ್ಮಾಂಡದಲ್ಲಿ ಏನೇನು ಅಡಗಿದೆ? ಎಂಬುದನ್ನು ತಿಳಿಯಲು ನನ್ನಿಂದ ಇನ್ನೂ ಸಾಧ್ಯವಾಗಲಿಲ್ಲ! ಒಂದೊಂದೇ ಹೆಜ್ಜೆಯಿಡುತ್ತ ನಿಧಾನವಾಗಿ ಮುಂದೆ ಸಾಗುತ್ತಿದ್ದೇನೆ.
ಹೀಗೆ ನಿವೃತ್ತನಾಗಿಯೂ ಪ್ರವೃತ್ತನಾಗುವ ಸುಯೋಗ ಒದಗಿ ಬಂದ ಆ ದಿನವನ್ನು ಹೇಗೆ ಮರೆಯಲು ಸಾಧ್ಯ?
– ಎನ್. ಜಿ. ಪಟವರ್ಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.