ಐ ಲವ್‌ ಯೂ ರಚಿತಾ ಲವ್‌ ಯೂ ನಾಟ್‌


Team Udayavani, Jun 30, 2019, 5:00 AM IST

R-RAM

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬುಲ್‌ ಬುಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ ರಚಿತಾ ರಾಮ್‌. ಮೊದಲ ಚಿತ್ರದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಸಿನಿಪ್ರಿಯರ ಮನಗೆದ್ದ ಈ ಚೆಲುವೆ, ಬಳಿಕ ದಿಲ್‌ ರಂಗೀಲಾ, ರನ್ನ, ರಥಾವರ, ಭರ್ಜರಿ, ನಟ ಸಾರ್ವಭೌಮ ಮೊದಲಾದ ಸ್ವಾರ್‌ ನಟರ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಂದನವನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಾಕೆ. ರಚಿತಾ ರಾಮ್‌ ಇಲ್ಲಿಯವರೆಗೆ ಅಭಿನಯಿಸಿರುವ ಬಹುತೇಕ ಚಿತ್ರಗಳು ಹಿಟ್‌ ಚಿತ್ರಗಳ ಪಟ್ಟಿಯಲ್ಲಿರುವುದರಿಂದ, ಚಿತ್ರರಂಗದಲ್ಲೂ ಈಕೆಗೆ ಸಾಕಷ್ಟು ಬೇಡಿಕೆ ಇದೆ. ರಚಿತಾ ಸಿನಿ ಕೆರಿಯರ್‌ನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುವಾಗಲೇ, ಕಳೆದ ಒಂದು ವರ್ಷದಿಂದ ರಚಿತಾ ಅನಗತ್ಯ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾ ಗುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದ ರಚಿತಾ, ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿದ್ದರು. ರಚಿತಾ ಈ ನಿಲುವಿನ ಬಗ್ಗೆ ಚಿತ್ರರಂಗದಿಂದ, ಪ್ರೇಕ್ಷಕರಿಂದ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇವೆಲ್ಲವೂ ಮುಗಿಯಿತು ಎನ್ನುವಾಗಲೇ ಐ ಲವ್‌ ಯು ಚಿತ್ರದಲ್ಲಿ ರಚಿತಾ ಅವರ ಹಾಟ್‌ ಆ್ಯಂಡ್‌ ಬೋಲ್ಡ್‌ ಲುಕ್‌ ಬಗ್ಗೆ ಮಾತುಗಳು ಶುರುವಾದವು.

ಕೆಲವರು ಐ ಲವ್‌ ಯು ಚಿತ್ರದಲ್ಲಿ ರಚಿತಾ ಅವರ ಬೋಲ್ಡ್‌ ಲುಕ್‌ ನೋಡಿ ಮೆಚ್ಚಿಕೊಂಡರೆ, ಇನ್ನು ಕೆಲವರು “ರಚಿತಾಗೆ ಇವೆಲ್ಲ ಬೇಕಾ?’ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಟ್ರೋಲ್‌ ಆಗುತ್ತಿದ್ದಂತೆ, ಇದ್ದಕ್ಕಿದ್ದಂತೆ ಎಚ್ಚೆತ್ತ ರಚಿತಾ, ಮಾಧ್ಯಮ ಗಳ ಮುಂದೆ “ಈ ಪಾತ್ರದ ಬಗ್ಗೆ ನನಗೇನೂ ಗೊತ್ತಿಲ್ಲ. ಇಂಥ ಪಾತ್ರ ಮಾಡ ಬಾರದಿತ್ತು. ನಾನು ತಪ್ಪು ಮಾಡಿದೆ. ಉಪೇಂದ್ರ ಹೇಳಿದ್ದರಿಂದ ಈ ಪಾತ್ರ ಮಾಡಿದೆ. ಮುಂದೆ ಇಂಥ ಪಾತ್ರ ಮಾಡಲ್ಲ’ ಅಂಥೆಲ್ಲ ತಡಬಡಾಯಿಸಿದ್ದಾರೆ.

ರಚಿತಾ ನೀಡಿದ ಇಂಥ ಹೇಳಿಕೆ ಸಹಜ ವಾಗಿಯೇ ಐ ಲವ್‌ ಯು ಚಿತ್ರತಂಡಕ್ಕೆ ಇರುಸು ಮುರುಸು ಉಂಟಾಗುವಂತೆ ಮಾಡಿದೆ. ಅದರಲ್ಲೂ ರಚಿತಾ ರಾಮ್‌ ಈ ಹೇಳಿಕೆಗೆ ಉಪ್ಪಿ ಫ್ಯಾನ್ಸ್‌ ಅಂತೂ ಕೆಂಡಾಮಂಡಲ ಆಗಿದ್ದಾರೆ. ಅಷ್ಟೇ ಏಕೆ, ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ರಚಿತಾ ವಿರುದ್ದ ಗರಂ ಆಗಿದ್ದಾರೆ. ಇನ್ನು ಸ್ವತಃ ಉಪೇಂದ್ರ ಕೂಡ, “ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು, ಅಭಿನಯಿಸುವ ಮೊದಲು ಇಂಥ ವಿಷಯಗಳ ಬಗ್ಗೆ ಯೋಚಿಸಬೇಕು. ಕಲಾವಿದರಾಗಿ ಅಭಿನಯಿಸಿದ ನಂತರ ಅದರ ಬಗ್ಗೆ ಯೋಚಿಸಲು ಹೋಗಬಾರದು’ ಅಂತ ಮಾತಿನಲ್ಲೇ ಚಾಟಿ ಬೀಸಿದ್ದಾರೆ.

ಇದೆಲ್ಲದರ ನಡುವೆ ರಚಿತಾ ಅಭಿನಯದ ಹೊಸಚಿತ್ರ 100 ಇತ್ತೀಚೆಗೆ ಸೆಟ್ಟೇರಿದೆ. ಇನ್ನೂ ಎರಡು-ಮೂರು ಹೊಸ ಚಿತ್ರಗಳಲ್ಲೂ ರಚಿತಾ ರಾಮ್‌ ಹೆಸರು ಕೇಳಿ ಬರುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಸುದ್ದಿಗಳು ಹೊರಬೀಳಬೇಕಿದೆ. ಅದೇನೆಯಿರಲಿ, ಇನ್ನಾದರೂ ಗುಳಿಕೆನ್ನೆ ಹುಡುಗಿ ರಚಿತಾ ರಾಮ್‌, ಇಂಥ ಕಾಂಟ್ರವರ್ಸಿಗಳಿಂದ ದೂರವಿರಲಿ ಅನ್ನೋದು ಅವರ ಅಭಿಮಾನಿಗಳ ಆಶಯ.

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.