ನಿನಗೆ ನೀನೇ,ಗೆಳೆಯ ನಿನಗೆ ನೀನೇ!
Team Udayavani, Mar 5, 2017, 7:41 PM IST
ಅವರಿವರ ನಂಬುಗೆಯ ಮಳಲರಾಶಿಯ ಮೇಲೆ
ಬಾಳಮನೆಯನು ಮುಗಿಲಿಗೆತ್ತರಿಸಲಿಹೆಯಾ?
ನಿನಗೆ ನೀನೇ, ಗೆಳೆಯ ನಿನಗೆ ನೀನೇ!
ಅಡಿಗರ ಕವಿತೆಯ ಈ ಸಾಲುಗಳನ್ನು ಸದಾ ಗುನುಗುತ್ತಿರುತ್ತೇನೆ. ಅದೆಷ್ಟೋ ಸಂಕಷ್ಟಮಯ ಸ್ಥಿತಿಗಳಲ್ಲಿ ನನ್ನನ್ನು ಎಬ್ಬಿಸಿದ ಗೀತೆಯ ಕೃಷ್ಣನ ಜೊತೆಗೆ ಇಂಥಾ ಅದ್ಭುತ ಕವಿತೆಗಳೂ ಅಪಾರ ಸಾಂತ್ವನ ನೀಡಿವೆ.
ಅನ್ಯಾಯ, ವಂಚನೆಗಳು ಸಾರ್ವತ್ರಿಕವಾಗಿದ್ದರೂ, ದುರ್ಬಲರ ಮೇಲೆ ಪ್ರಹಾರಗಳು ಜಾಸ್ತಿಯೇ. ವೃದ್ಧರ, ಅಶಕ್ತರ, ಅಂಗವಿಕಲರ ಪರಿಸ್ಥಿತಿಯನ್ನು, ಮನೋದೌರ್ಬಲ್ಯವನ್ನು ಬಳಸಿಕೊಂಡು ಅನ್ಯಾಯವೆಸಗುವುದು, ಅವರ ಭಾವನೆಗಳ ಜೊತೆ ಚೆÇÉಾಟವಾಡುವುದು ನಯವಂಚಕರಿಗೆ ಬಲು ಸುಲಭವಾಗುತ್ತದೆ. ಇದಕ್ಕೆ ಕಾರಣ ಅವರ ಮೌನ. ಬಹುತೇಕರು ಪ್ರತಿಭಟಿಸಲೂ ದಾರಿಗಾಣದೇ, ಧೈರ್ಯ ಸಾಲದೇ, ಆರ್ಥಿಕ ನೆರವು, ದೈಹಿಕ ಕಸುವೂ ಇಲ್ಲದೇ ಅಸಹಾಯಕರಾಗಿ ಒಳಗೊಳಗೇ ಕೊರಗಿಕೊಳ್ಳುವ ಅವರ ಈ ಮೌನವೇ ಇಂಥವರಿಗೆ ಪ್ರಬಲ ಗುರಾಣಿಯಾಗುತ್ತದೆ. ಸುಮಾರು ಏಳೆಂಟು ವರುಷಗಳ ಹಿಂದೆ ನಡೆದ ಘಟನೆಯಿದು. ಆಗಷ್ಟೇ ನಾನು ಬ್ಲಾಗನಲ್ಲಿ ಬರಹಗಳನ್ನಾರಂಭಿಸಿ¨ªೆ. ಓರ್ವ ವ್ಯಕ್ತಿ ತಾನು ಕಾಲೇಜು ಕಲಿಯುತ್ತಿರುವ ಹುಡುಗಿಯೆಂದು ಹೇಳಿಕೊಂಡು, ಹೆಣ್ಣಿನ ಹೆಸರಿನ ಮುಸುಕು ಧರಿಸಿ ಬ್ಲಾಗ್ ಬರೆಯುತ್ತ… ನನ್ನೊಂದಿಗೊಮ್ಮೆ ಸಂವಹಿಸುವಾಗ, “ಅಕ್ಕಾ… ನನಗೆ ಡಿಪ್ರಶನ್… ಕಾಲೇಜೂ ಬೇಡ ಎಂದೆನಿಸುತ್ತದೆ.
ಸತ್ತು ಹೋಗುವಷ್ಟು ಬೇಸರ’ ಎಂದೆÇÉಾ ಬಡಬಡಿಸಿ ಮೈಲ್ ಮಾಡಿದ್ದ. ಆಗ ಈ ಜಗತ್ತಿನ ಕರಾಳತೆಯ ಪರಿಚಯ ಅಷ್ಟಾಗದಿದ್ದ ನಾನು, ಅದರಲ್ಲೂ ಹೆಣ್ಣುಮಗಳ್ಳೋರ್ವಳು ಮನಸು ರೋಸಿ ಸಾಯುವ ಮಾತನಾಡುತ್ತಿರುವುದನ್ನು ಕಂಡು, ಸಹಾನುಭೂತಿ ತೋರಿ¨ªೆ. ನನ್ನ ದೈಹಿಕ ವಿಕಲತೆಯನ್ನೇ ಉದಾಹರಣೆ ಕೊಟ್ಟು ಧೈರ್ಯ ತಂದುಕೊಂಡು ಮುನ್ನಡೆಯಬೇಕೆಂದು ಹೇಳಿ ಹುರಿದುಂಬಿಸಿ¨ªೆ. ನನ್ನ ಬದುಕಿನ ಉದಾಹರಣೆಯನ್ನೋದಿದ ಮೇಲೂ ತಪ್ಪನ್ನು ತಿದ್ದಿಕೊಳ್ಳದೇ, ಅದೇ ಸುಳ್ಳು ಹೆಸರಿನೊಡನೆಯೇ ಮೈಲ್ ಬರೆದಿದ್ದ. ಕೆಲ ದಿನಗಳ ನಂತರ ಸ್ನೇಹಿತರೋರ್ವರ ಮುಖಾಂತರ ಅವನ ನಿಜ ಮುಖದ ಅನಾವರಣವಾಯಿತು. ಅಂದೇ ಈ ಘಟನೆಯ ಕುರಿತು ನನ್ನ ಬ್ಲಾಗಲ್ಲೂ ಬರೆದು ಇತರ ಬ್ಲಾಗಿಗರನ್ನೂ ಎಚ್ಚರಿಸಿ¨ªೆ. ಅಲ್ಲಿಗೆ ಆತನ ನಾಟಕಕ್ಕೆ ತೆರೆಬಿದ್ದು, ಅವನ ಫೇಕ್ ಹೆಸರಿನ ಬ್ಲಾಗ್ ಕೂಡ ಬಂದಾಯಿತು.
ಇಂದು ಹಲವೆಡೆ ಅಂಗನ್ಯೂನತೆಯುಳ್ಳವರ ಮನೋದೌರ್ಬಲ್ಯವನ್ನು, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು, ತಾವು ತಮ್ಮ ಬೊಕ್ಕಸ ತುಂಬಿಸಿಕೊಳ್ಳುವ ಮೋಸಗಾರರ ಕುರಿತು ಕೇಳುತ್ತೇವೆ, ಸ್ವತಃ ನೊಡುತ್ತೇವೆ ಕೂಡ! ಇದಕ್ಕಾಗಿ ಅವರು ಕಂಡುಕೊಂಡಿರುವ ದಾರಿ ನೂರಾರು ವಿಧದ್ದು. ಬಹುರೂಪಿ ಠಕ್ಕರಾದ ಇವರದು ಸಮಾಜದೊಳಗೆ ಮಾತ್ರ ಬಹಳ ಸಭ್ಯ ಮುಖವಾಡವಿದ್ದಿರುತ್ತದೆ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು, ಜಾಗರೂಕ ನಡೆ ನಡೆಯದಿದ್ದರೆ ನಿರಾಸೆಯ, ಅವಮಾನದ, ಹತಾಶೆಯ ಪೆಟ್ಟನ್ನು ಮತ್ತೆ ಮತ್ತೆ ತಿನ್ನಬೇಕಾಗುವುದು. ಅದಕ್ಕೊಂದು ಪುಟ್ಟ ಉದಾಹರಣೆಯನ್ನು ಕೊಡುವೆ.
ನಡೆಯಲಾಗದಿದ್ದರೂ, ಹಳ್ಳಿಯ ಮೂಲೆಯಲ್ಲಿ ಕುಳಿತು ಅಂತರ್ಜಾಲದ ಮೂಲಕವೇ ಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿರುತ್ತಾಳೆ ಅವಳು. ಅದ್ಭುತವಾಗಿ ಸಣ್ಣ ಕಥೆಗಳನ್ನು, ಕವಿತೆಗಳನ್ನು ಬರೆಯುತ್ತಿರುತ್ತಾಳೆ. ಆಕೆಯನ್ನು ಗೌರವಿಸಿ, ಬೆಂಬಲಿಸುವ ಸಹೃದಯ ಗೆಳೆಯ/ಗೆಳತಿಯರು ಆ ಊರಿನಲ್ಲಿ ಮತ್ತು ಅಂತರ್ಜಾಲದಲ್ಲಿ ಬಹಳ. ಹೀಗಿರುವಾಗ ಪ್ರಕಾಶಕನೋರ್ವ ಅವಳ ಬೊಚ್ಚಲ ಕೃತಿ ಹೊರ ತರಲು ಮುಂದೆ ಬಂದ. ಆಕೆಯೂ ಖುಶಿಯಿಂದ ಒಪ್ಪಿ, ಕೊಟ್ಟುಬಿಟ್ಟಳು. ಆದರೆ ಕೊನೆಗೆ ಆತ ಕಾರ್ಯಕ್ರಮದ ದಿನ ಅವಳಿಗೊಂದಿಷ್ಟು ಪ್ರತಿಗಳನ್ನಷ್ಟೇ ಕೊಟ್ಟು, ತನ್ನದೇ ಪ್ರತಿಗಳನ್ನು ಅಂದು ಮಾರಾಟಕ್ಕಿಟ್ಟು, ದುಡ್ಡು ಮಾಡಿಕೊಂಡು ನಾಪತ್ತೆಯಾದ. ನಡೆಯಲೂ ಆಗದ ಆಕೆ ಅದೆಂತು ಹೇಗೆ ತನ್ನಲ್ಲಿರುವ ಪ್ರತಿಗಳನ್ನು ಮಾರಿಕೊಂಡಾಳು? ಪುಸ್ತಕ ಪ್ರಕಟಣೆಯ ವ್ಯವಹಾರದ ಗಂಧಗಾಳಿಯೂ ಇಲ್ಲದ ಅವಳಿಗೆ ಸರಿಯಾಗಿ ಟೋಪಿ ಇಟ್ಟು ಹೋಗಿದ್ದ ಆ ನಯವಂಚಕ.
ಇನ್ನೊಂದು ಪ್ರಕರಣದಲ್ಲಿ ಅಂತರ್ಜಾಲದಲ್ಲಿ ಓರ್ವರು ತಮ್ಮೂರಿನ ಅಂಗವಿಕಲರೊಬ್ಬರಿಗೆ ವ್ಹೀಲ್‌ಚೇರ್ ಸಹಾಯ ಕೋರಿ ಬರೆದುಕೊಂಡಿದ್ದರು. ಇದಕ್ಕಾಗಿ ಹಲವರು ಸ್ಪಂದಿಸಿದ್ದರು. ಅವರÇÉೋರ್ವರು, “ಸದ್ಯದÇÉೇ ಖಂಡಿತವಾಗಿಯೂ ನಾನು ವ್ಹೀಲ್‌ಚೇರ್ ತಲುಪಿಸುವೆ. ನಿಶ್ಚಿಂತೆಯಾಗಿರಿ’ ನನ್ನ ಕಡೆಯಿಂದ ಸಹಾಯ ಹೊರಟಾಗಿದೆ ಎಂಬಂತೆ ಘೋಷಿಸಿ ಬರೆದಿದ್ದರು. ಇದನ್ನು ನಂಬಿದ ಎಲ್ಲರೂ ಆ ಪ್ರಕಟಣೆಯನ್ನೂ ಮರೆತುಬಿಟ್ಟರು. ಸಹಾಯ ಮಾಡಲು ಮುಂದಾಗಿದ್ದ ಉಳಿದವರು ವ್ಯವಸ್ಥೆಯಾಯಿತೆಂದು ಸುಮ್ಮನಾದರು. ಕೆಲವು ದಿನಗಳ ನಂತರ ಕುತೂಹಲದಿಂದ ವಿಚಾರಿಸಿದಾಗ, ವ್ಹೀಲ್‌ಚೇರಾಗಲಿ, ಅದನ್ನು ಕೊಳ್ಳಲು ಬೇಕಾದ ಧನ ಸಹಾಯವಾಗಲಿ ತಮ್ಮನ್ನು ತಲುಪಿಯೇ ಇಲ್ಲ , ಯಾರೂ ತಮ್ಮನ್ನು ಸಂಪರ್ಕಿಸಿಯೂ ಇಲ್ಲ ಎಂದು ನೊಂದುಕೊಂಡು ಅವರು ಹೇಳಿದ್ದು ತಿಳಿದು ಬಂತು. ಅಂದು ಸಹೃದಯತೆಯಿಂದ ಅಷ್ಟಿಷ್ಟು ಸಹಾಯ ಮಾಡಲು ಹೊರಟವರನ್ನೂ ಹಿಮ್ಮೆಟ್ಟಿಸಿ, ಕೊನೆಗೆ ಕೈಕೊಡುವ ಇಂಥ ಢೋಂಗಿ ದಾನಿಗಳು ಅನೇಕ. ಅಲ್ಲದೆ, ಎಷ್ಟೋ ಕಡೆ, ದೈಹಿಕ ನ್ಯೂನತೆಯುಳ್ಳವರಿಗೆ “ನಿಮಗೆ ವ್ಹೀಲ್‌ಚೇರ್, ಕ್ಲಚಸ್ ಮುಂತಾದವುಗಳನ್ನು ಕೊಡಿಸಲು ನಾನು ಹಣ ಹೊಂದಿಸುವೆ. ನಮ್ಮದು ಅನುಕಂಪವಲ್ಲ, ಸಹಾನುಭೂತಿ. ನಮ್ಮೊಳಗೆ ಸ್ವಾರ್ಥವಿಲ್ಲ. ನಾವು ಮಾಡುತ್ತಿರುವುದು ಸಮಾಜ ಸೇವೆ’ ಎಂದೆಲ್ಲ ಹೇಳಿಕೊಂಡು ಜನರ ಸಹೃದಯತೆಯನ್ನು, ಅಂಗವಿಕಲರ ಧನವನ್ನೂ ದುರುಪಯೋಗ ಪಡಿಸಿಕೊಂಡಿರುವವರ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.
ಹೀಗಿರುವಾಗ, ತಣ್ಣೀರನ್ನೂ ತಣಿಸಿ ಕುಡಿವ ತಾಳ್ಮೆ, ದೂರಾಲೋಚನೆ, ಧೈರ್ಯ ನಮ್ಮೊಳಗೆ ನಾವೇ ತುಂಬಿಕೊಳ್ಳಬೇಕಾಗುತ್ತದೆ. ಯಾರ ಪ್ರೀತಿ ಸಹಜ, ಯಾರ ಕಾಳಜಿ ನೈಜ, ಯಾರ ಸಹಾನುಭೂತಿಯೊಳಗೆ ಕಪಟ ತುಂಬಿಲ್ಲ, ಯಾರ ಉದ್ದೇಶ ಕೆಡುಕಾಗಿಲ್ಲ ಎಂಬುದನ್ನೆಲ್ಲ ಅಳೆದು, ಸುರಿದು ಸ್ವೀಕರಿಸಬೇಕಾಗುತ್ತದೆ. ಆರ್ಥಿಕ ಹೊಡೆತ, ಏಟನ್ನು ಹೇಗಾದರೂ ಸಹಿಸಬಹುದು. ಮಾನಸಿಕ ಹೊಡೆತ, ಬದುಕಿನೊಡನೆ ಚೆÇÉಾಟ ಇವುಗಳನ್ನು ಸಹಿಸುವುದು ಖಂಡಿತ ಕಷ್ಟ. ಹಾಗಾಗಿ, ಒಂದು ಎಚ್ಚರಿಕೆಯೊಂದಿಗೆಯೇ ವ್ಯವಹರಿಸುವ ಕ್ಷಮತೆಯನ್ನು, ವ್ಯಾವಹಾರಿಕ ಚಾತುರ್ಯವನ್ನು ಇಂಥ ಹೊಡೆತಗಳ ಮೂಲಕವೇ ಕಲಿಯಬೇಕಾಗುತ್ತದೆ. ಸೋಲುಂಟಾದಾಗ ಕುಸಿಯದೇ, ಅದನ್ನೊಂದು ಪಾಠವನ್ನಾಗಿಸಿಕೊಂಡು, ಮುಂದೆ ಅಂಥವರಿಂದ ಯಾವುದೇ ಹಾನಿಯಾಗದಂತೇ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳಬೇಕು.
ಆರ್ಥಿಕವಾಗಿ ಸಬಲಳಾಗಿರುವ ನನ್ನ ಪರಿಚಿತ ಅಂಗವಿಕಲ ಸ್ನೇಹಿತೆಯೋರ್ವಳನ್ನು ಕೇವಲ ಅವಳ ದುಡ್ಡು, ಆಸ್ತಿಗಾಗಿ ವರಿಸಲು ಅನೇಕರು ಬಂದಿದ್ದರು. ಆದರೆ, ಆಕೆ ಬಂದ ವರರನ್ನೆಲ್ಲ ತತ್‌ಕ್ಷಣ ಒಪ್ಪಿಕೊಳ್ಳದೇ, ಮನೆಯವರ ಒತ್ತಡಕ್ಕೂ ಮಣಿಯದೇ, ತನ್ನದೇ ಆದ ರೀತಿಯಲ್ಲಿ ಚೆನ್ನಾಗಿ ಪರಿಶೀಲಿಸಿ, ಸಕಲ ಮಾಹಿತಿಗಳನ್ನು ಸಂಗ್ರಹಿಸಿ ಆಮೇಲೆ ಸಕಾರಣವನ್ನು ಕೊಟ್ಟೇ ತಿರಸ್ಕರಿಸಿದ್ದಳು. ಸ್ನೇಹಿತೆಯ ಈ ಧೈರ್ಯ, ದೂರದೃಷ್ಟಿತ್ವ , ಚಾಣಾಕ್ಷತನ ನನಗೆ ಬಹಳ ಮೆಚ್ಚುಗೆಯಾಗುತ್ತದೆ. ಯಾವುದೇ ಪ್ರಲೋಭನೆಗೆ, ಮಾನಸಿಕ ದೌರ್ಬಲ್ಯಕ್ಕೆ ಒಳಗಾಗದೇ ಸರಿಯಾದ ದಾರಿಯಲ್ಲಿ ನಡೆದರೆ ಇಂಥಾ ಏಟುಗಳಿಂದ ಪಾರಾಗಬಹುದು. ಟಿ. ಎನ್. ಸೀತಾರಾಮರ ಪ್ರಸಿದ್ಧ ಧಾರಾವಾಹಿಯಾದ ಮುಕ್ತ ಮುಕ್ತದ ಶೀರ್ಷಿಕೆ ಗೀತೆ ನನಗೆ ಬಹಳ ಅಚ್ಚುಮೆಚ್ಚು. ಅದರಲ್ಲಿ ಬರುವ ಈ ಸಾಲು ಸದಾ ಪ್ರೇರಣೀಯ. ಹೂಮೊಗವಾಡದ ಇರಿಯುವ ಮುಳ್ಳೆ ಎಲ್ಲಿವರೆಗೆ ನಿನ್ನಾಟ…
ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿದ ಜೀವನ ಪಾಠ. ಕಲಿತ ಪಾಠವ ಮರೆಯದೇ, ಬದುಕಲ್ಲಿ ಅಳವಡಿಸಿಕೊಂಡರೆ, ಅಂಗವಿಕಲರು, ದೈಹಿಕವಾಗಿ ದುರ್ಬಲರು ಮಾನಸಿಕವಾಗಿ ಅತ್ಯಂತ ಸದೃಢರಾಗಿ, ಸಬಲರಾಗಿ, ತಮ್ಮ ಬದುಕಲ್ಲಿ ಎದುರಾಗುವ ಇಂಥ ಅನೇಕಾನೇಕ ಮುಖವಾಡಗಳ ಹೊಡೆತಗಳಿಂದ ಮುಕ್ತರಾಗಬಲ್ಲರು.
– ತೇಜಸ್ವಿನಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.