ಯುಕ್ತಾಯುಕ್ತ ಸಂಯುಕ್ತ


Team Udayavani, Feb 12, 2017, 3:45 AM IST

Samyukta-Hegade-(2).jpg

ಕಿರಿಕ್‌ ಪಾರ್ಟಿ ಸಿನೆಮಾ ನೋಡಿದವರಿಗೆ ಈ ಹುಡುಗಿ ಖಂಡಿತಾ ಇಷ್ಟವಾಗಿರುತ್ತಾಳೆ. ಚಿತ್ರದ ದ್ವಿತೀಯಾರ್ಧದಲ್ಲಿ ಎಂಟ್ರಿಕೊಡುವ ಈ ಹುಡುಗಿ ಸಖತ್‌ ಬೋಲ್ಡ್‌ ಹಾಗೂ ಅಷ್ಟೇ ಜೋಶ್‌ನಿಂದ ನಟಿಸುವ ಮೂಲಕ ಮೊದಲ ಸಿನೆಮಾದಲ್ಲೇ ಮೆಚ್ಚುಗೆ ಪಡೆದಿದ್ದಾರೆ. ಕೆಲವರು ಮೊದಲ ಸಿನೆಮಾದಲ್ಲೇ ಎಲ್ಲರ ಮೆಚ್ಚುಗೆ ಪಡೆದು ಚಿತ್ರರಂಗದಲ್ಲಿ ಬೇಗನೇ ಕ್ಲಿಕ್‌ ಆಗುತ್ತಾರೆ. ಸಂಯುಕ್ತಾ ಕೂಡಾ ಇದೇ ಕೆಟಗರಿಗೆ ಸೇರುವ ಹುಡುಗಿ. ಮೊದಲ ಸಿನೆಮಾದಲ್ಲೇ ಗಮನ ಸೆಳೆಯುವ ಮೂಲಕ ಸಂಯುಕ್ತಾ ಚಿತ್ರರಂಗದಲ್ಲಿ ಗಟ್ಟಿನೆಲೆ ನಿಲ್ಲುವ ವಿಶ್ವಾಸ ಮೂಡಿಸಿದ್ದಾರೆ.

ಸಂಯುಕ್ತಾಗೆ ಕಿರಿಕ್‌ ಪಾರ್ಟಿ ಮೊದಲ ಚಿತ್ರವಾದರೂ, ಇದಕ್ಕೂ ಮುನ್ನ ಸಿಪಾಯಿ ಸೇರಿದಂತೆ ಒಂದೆರಡು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿರಿಕ್‌ ಪಾರ್ಟಿ ಸಿನೆಮಾದ ಅವಕಾಶ ಸಿಕ್ಕಿದ್ದು ಅಚಾನಕ್‌ ಆಗಿ ಎಂದರೆ ನೀವು ನಂಬಲೇಬೇಕು. ಹೌದು, ಆಗಷ್ಟೇ ಕಿರಿಕ್‌ ಪಾರ್ಟಿ ಚಿತ್ರದ ಕಥೆ ಫೈನಲ್‌ ಆಗಿ ನಾಯಕಿಗಾಗಿ ಹುಡುಕುತ್ತಿದ್ದಾಗ ಚಿತ್ರತಂಡಕ್ಕೆ ಫೋಟೋವೊಂದು ಸಿಕ್ಕಿತಂತೆ. ಫೋಟೋ ನೋಡಿದ ಕೂಡಲೇ, ಈ ಹುಡುಗಿ ಚಿತ್ರಕ್ಕೆ ಮತ್ತು ಪಾತ್ರಕ್ಕೆ ಸರಿ ಹೊಂದುತ್ತಾಳೆ ಎಂದು ಚಿತ್ರತಂಡಕ್ಕೆ ಅನಿಸುತ್ತದೆ. ತಕ್ಷಣವೇ ಅವನ್ನು ಅಡಿಷನ್‌ಗೆ ಕರೆಸಲಾಗುತ್ತದೆ. ಸಂಯುಕ್ತಾ ಅಡಿಷನ್‌ ಕೊಡುತ್ತಾರೆ. ಎಲ್ಲರಿಂದಲೂ ಮೆಚ್ಚುಗೆ ಪಡೆದ ಸಂಯುಕ್ತಾ ನೇರವಾಗಿ “ಕಿರಿಕ್‌’ ತಂಡ ಸೇರಿಕೊಳ್ಳುತ್ತಾರೆ. 

“ನನ್ನ ಫೋಟೋ ನೋಡಿ ನನಗೆ ಅಡಿಷನ್‌ಗೆ ಕರೆದರು. ಅಡಿಷನ್‌ ನಂತರ ನೇರವಾಗಿ ಸೆಲೆಕ್ಟ್ ಆದೆ. ಈ ಸಿನೆಮಾದಲ್ಲಿ ನಾನು ನಟಿಸುತ್ತೇನೆ, ನನಗೆ ಅವಕಾಶ ಸಿಗುತ್ತದೆ, ಇಷ್ಟೊಂದು ಮೆಚ್ಚುಗೆ ಸಿಗುತ್ತದೆ ಎಂದು ನಾನಂದುಕೊಂಡಿರಲಿಲ್ಲ’ ಎಂದು ತಮಗೆ ಸಿಕ್ಕ ಅವಕಾಶದ ಬಗ್ಗೆ ಹೇಳುತ್ತಾರೆ. ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಇವರ ಪಾತ್ರ ಇಡೀ ಸಿನೆಮಾವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಪ್ರಮುಖವಾಗಿದೆ. ನಾಯಕನನ್ನು ಲವ್‌ ಮಾಡುತ್ತಲೇ ಆತನ ಭಾವನೆಗಳಿಗೆ ಸ್ಪಂದಿಸುವ ಪಾತ್ರದಲ್ಲಿ ಸಂಯುಕ್ತಾ ತುಂಬಾ ಚೆನ್ನಾಗಿ ನಟಿಸುವ ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ್ದಾರೆ. 

ಸಂಯುಕ್ತಾಗೆ ಚಿತ್ರರಂಗದಲ್ಲಿ ಯಾರೊಬ್ಬರೂ ಗಾಡ್‌ಫಾದರ್‌ ಇಲ್ಲವಂತೆ. ಮೂಲತಃ ಡ್ಯಾನ್ಸರ್‌ ಆಗಿರುವ ಸಂಯುಕ್ತಾಗೆ ಸದ್ಯ ಗಾಡ್‌ಫಾದರ್‌ ಅಂದರೆ ಅದು ರಕ್ಷಿತ್‌ ಶೆಟ್ಟಿ. ಮುಂದೆಯೂ ರಕ್ಷಿತ್‌ ಶೆಟ್ಟಿಯವರ ಮಾರ್ಗದರ್ಶನದಲ್ಲೇ ಸಿನೆಮಾ ಒಪ್ಪಿಕೊಳ್ಳುವುದಾಗಿ ಹೇಳುತ್ತಾರೆ. ಸಂಯುಕ್ತಾಗೆ ಯಾವ ತರಹದ ಪಾತ್ರ ಇಷ್ಟ ಎಂದು ನೀವು ಕೇಳಬಹುದು. ಬಹುತೇಕ ನಟಿಯರು ಸವಾಲಿನ ಪಾತ್ರಗಳೆಂದರೆ ಇಷ್ಟ ಎನ್ನುತ್ತಾರೆ. ಆದರೆ, ಸಂಯುಕ್ತಾಗೆ ಸವಾಲು ಎನ್ನುವುದಕ್ಕಿಂತ ಜನರಿಗೆ ಬೇಗನೇ ಹತ್ತಿರವಾಗುವ, ಇಷ್ಟವಾಗುವ ಪಾತ್ರಗಳೆಂದರೆ ಇಷ್ಟವಂತೆ. ಅದೇ ಕಾರಣಕ್ಕೆ ಆಕೆ ಕಿರಿಕ್‌ ಪಾರ್ಟಿಯನ್ನು ಒಪ್ಪಿಕೊಂಡಿದ್ದಂತೆ. 

“ನನಗೆ ಜನಕ್ಕೆ ಇಷ್ಟವಾಗುವಂತಹ ಪಾತ್ರ ಮಾಡಬೇಕೆಂಬ ಆಸೆ. ಕೆಲವು ಪಾತ್ರಗಳು ಬೇಗನೇ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಕಿರಿಕ್‌ ಪಾರ್ಟಿಯಲ್ಲಿ ನನ್ನ ಪಾತ್ರ ದ್ವಿತೀಯಾರ್ಧದಲ್ಲಿ ಬಂದರೂ ಜನ ಅದನ್ನು ಇಷ್ಟಪಟ್ಟರು. ನನಗೆ ಆ ತರಹದ ಪಾತ್ರಗಳು ಇಷ್ಟ. ಸಿನೆಮಾದಲ್ಲಿ ಕಾಣಿಸಿಕೊಳ್ಳಬೇಕು, ಕೈ ತುಂಬಾ ಸಿನೆಮಾ ಇರಬೇಕೆಂಬ ಆಸೆ ನನಗಿಲ್ಲ’ ಎಂದು ನೇರವಾಗಿ ಹೇಳುತ್ತಾರೆ ಸಂಯುಕ್ತಾ. ಸಿನೆಮಾದಲ್ಲಿ ಎಷ್ಟೇ ಬಿಝಿಯಾದರೂ ತನ್ನ ಡ್ಯಾನ್ಸ್‌ ಮುಂದುವರಿಸುತ್ತೇನೆ ಎನ್ನಲು ಸಂಯುಕ್ತಾ ಮರೆಯುವುದಿಲ್ಲ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.