ಔಲಿಯಾರ ದುನಿಯಾದಲ್ಲಿ

ದಿಲ್‌ವಾಲೋಂಕೀ ದಿಲ್ಲಿ

Team Udayavani, Jul 21, 2019, 5:24 AM IST

60ca60de6bb9b–A000

ಎ-ಆತಿಶೇ ಫ‌ುರ್ಕತ್‌, ದಿಲ್‌ ಹಾ ಹಬೀಬ್‌ ಕರ್ದಾ…ಸಯ್ಲಬೇ ಇಶಿ¤ಯಾಕತ್‌ ಜನ್ಹಾ ಖರಾಬ್‌ ಕರ್ದಾ…(ವಿರಹದ ಬೇಗೆಯು ಈ ಹೃದಯವನ್ನು ಸುಡುವಂತೆ ಮಾಡಿದೆ,
ಆತ್ಮೀಯತೆಯ ಪ್ರವಾಹವು ಈ ಆತ್ಮವನ್ನೇ ನಾಶಗೊಳಿಸಿದೆ…)

ವಿಶ್ವದ ಶ್ರೇಷ್ಠ ಆಧ್ಯಾತ್ಮಿಕ ಗುರುವೊಬ್ಬ ತನ್ನ ಶಿಷ್ಯನನ್ನು ಮೊತ್ತಮೊದಲ ಬಾರಿಗೆ ಕಂಡಾಗ ಮಾಡಿದ ಉದ್ಗಾರವಿದು. ತಾನು ಹದಿನಾರು- ಹದಿನೇಳರ ಹರೆಯದಲ್ಲಿದ್ದಾಗಲೇ ಬಾಲಕನೊಬ್ಬ ಸೂಫಿ ಸಂಗೀತಗಾರನಿಂದ ಓರ್ವ ಗುರುವಿನ ಹೆಸರನ್ನು ಕೇಳಿ ರೋಮಾಂಚಿತನಾಗಿದ್ದ. ಅಂದು ಮಿಂಚಿನಂತೆ ಹುಟ್ಟಿದ್ದ ಪ್ರೀತಿ, ಗೌರವ, ರೋಮಾಂಚನಗಳು ಆ ಬಾಲಕನ ಜೀವನದುದ್ದಕ್ಕೂ ನೆರಳಾಗಿ ಅವನನ್ನು ಪೊರೆಯಿತು. ಪ್ರತೀ ಬಾರಿ ನಮಾಜ್‌ ಮಾಡಿದ ನಂತರವೂ ತನ್ನ ಹೆಸರನ್ನು ಭಕ್ತಿಯಿಂದ ಉಚ್ಚರಿಸುತ್ತಿದ್ದ ಆ ಬಾಲಕನ ಪ್ರೀತಿಯು ಅದ್ಯಾವ ರೂಪದಲ್ಲಿ ಗುರುವನ್ನು ತಟ್ಟಿತ್ತೋ! ಆದರೆ ಈತನೇ ತನ್ನ ಶ್ರೀಮಂತ ಪರಂಪರೆಯನ್ನು ಮುಂದುವರಿಸಲಿರುವ ಮಹಾಪುರುಷ ಎಂಬ ಸತ್ಯವಂತೂ ತೊಂಬತ್ತನಾಲ್ಕರ ಇಳಿವಯಸ್ಸಿನಲ್ಲಿದ್ದ ಗುರುವಿಗೆ ಮನದಟ್ಟಾಗಿತ್ತು. ಇತ್ತ ದಿಲ್ಲಿಯೂ ಬಹುಶಃ ಆಧ್ಯಾತ್ಮ ಮತ್ತು ಮಾನವೀಯತೆಯ ಸಂದೇಶವನ್ನು ಸಾರಲಿರುವ ಮಹಾಪುರುಷನೊಬ್ಬನ ಕರ್ಮಭೂಮಿಯಾಗಲು ಸಿದ್ಧವಾಗಿತ್ತು.

ಆ ಶಿಷ್ಯ ಮತಾöರೂ ಅಲ್ಲ. ಇಸ್ಲಾಂ ಮತ್ತು ಸೂಫಿ ಪಂಥಗಳ ಹಿನ್ನೆಲೆಯ ಹೊರತಾಗಿಯೂ ಇಂದು ಧರ್ಮ-ದೇಶ-ಕಾಲ-ಸಂಸ್ಕೃತಿಗಳ ಎಲ್ಲೆಗಳನ್ನು ಮೀರಿ ವಿಶ್ವವಿಖ್ಯಾತರಾಗಿರುವ ಸಂತ ಹಜ್ರತ್‌ ನಿಜಾಮುದ್ದೀನ್‌ ಔಲಿಯಾ. ಇನ್ನು ಬಾಬಾ ಫ‌ರೀದ್‌ ಎಂಬ ಹೆಸರಿನಲ್ಲಿ ಸಾಮಾನ್ಯವಾಗಿ ಕರೆಯಲ್ಪಡುವ ಬಾಬಾ ಫ‌ರೀದುದ್ದೀನ್‌ ಗಂಜ್‌-ಎ- ಶಕರ್‌ ಇಂಥ ಶಿಷ್ಯನನ್ನು ಜಗತ್ತಿಗೆ ಅರ್ಪಿಸಿದ ಮಹಾಮೇಧಾವಿ ಗುರು. ಮುಲ್ತಾನ್‌ (ಈಗಿನ ಪಾಕಿಸ್ತಾನದಲ್ಲಿದೆ) ನಿಂದ ಬಂದಿದ್ದ ಅಬು ಬಕರ್‌ ಎಂಬ ಕವ್ವಾಲ್‌ (ಸೂಫಿ ಸಂಗೀತಗಾರ) ನ ಸಂಭಾಷಣೆಯು ಗುರುಶಿಷ್ಯರ ಇಂಥಾದ್ದೊಂದು ಅಪೂರ್ವ ಸಮ್ಮಿಲನಕ್ಕೆ ನಾಂದಿ ಹಾಡಿತ್ತು.

ಶಹರಕ್ಕೊಬ್ಬ ಸಂತನೂ ಸುಲ್ತಾನನೂ…
ದಿಲ್ಲಿಯಲ್ಲಿ ಸುಲ್ತಾನರ ವೈಭವಕ್ಕೆ ಅದೆಷ್ಟು ಐತಿಹಾಸಿಕ ಮಹತ್ವವಿದೆಯೋ ಸಂತರ ಆಧ್ಯಾತ್ಮಿಕತೆಗೂ ಅಷ್ಟೇ ಮಹತ್ವವಿದೆ. ಒಂದೇ ನೆಲದಲ್ಲಿ ವೈಭವ ಮತ್ತು ವೈರಾಗ್ಯಗಳು ಮುಖಾಮುಖೀಯಾದವು. ಆದರೆ, ಎಂದಿನಂತೆ ಯಾವುದರಲ್ಲಿ ಸತ್ವವಿತ್ತೋ ಅದು ಮಾತ್ರ ಅಜರಾಮರವಾಯಿತು. ದಿಲ್ಲಿಯ ಹಲವು ಸ್ಥಳಗಳಲ್ಲಿ ಅಲೆದಾಡಿದ್ದ ಸಂತ ನಿಜಾಮುದ್ದೀನ್‌ ಕೊನೆಗೂ ನೆಲೆಯಾಗಿದ್ದು ಯಾಸ್ಪುರ್‌ ಪ್ರದೇಶದಲ್ಲಿ. ತನ್ನ ಜೀವಿತಾವಧಿಯಲ್ಲಿ ಹಲವು ಸುಲ್ತಾನರನ್ನು ಕಂಡ ವೈಭವದ ದಿಲ್ಲಿಯು ಔಲಿಯಾರನ್ನೆಂದೂ ಆಕರ್ಷಿಸಿರಲಿಲ್ಲ. “ರಾಜ ಮತ್ತು ರಾಜನೀತಿಗಳಿರುವ ಸ್ಥಳಗಳಲ್ಲಿ ಫ‌ಕೀರನಿಗೇನು ಕೆಲಸ’ ಎಂಬ ಭಾವನೆ ಅವರದ್ದು. “ನನ್ನ ಖಾಂಕಾ (ಆಶ್ರಮ)ದಲ್ಲಿ ಎರಡು ದ್ವಾರಗಳಿವೆ. ಸುಲ್ತಾನನೊಬ್ಬ ಒಂದು ದ್ವಾರದಿಂದ ಆಗಮಿಸಿದ್ದೇ ಆದಲ್ಲಿ ನಾನು ಇನ್ನೊಂದು ದ್ವಾರದಿಂದ ಹೊರಹೋಗುವೆ’, ಎಂದು ತನ್ನ ಶಿಷ್ಯಗಣಕ್ಕೆ ಹೇಳಿದ್ದ ಮಹಾಬೈರಾಗಿ ಇವರು.

ನಿಜಾಮುದ್ದೀನ್‌ ಔಲಿಯಾರು ತನ್ನ ಕಾರ್ಯವ್ಯಾಪ್ತಿಯನ್ನು ಧರ್ಮಬೋಧನೆಗಷ್ಟೇ ಸೀಮಿತಗೊಳಿಸದೆ ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕ ಜೀವನವನ್ನು ನಡೆಸಲು ಎಲ್ಲರನ್ನೂ ಪ್ರೋತ್ಸಾಹಿಸಿದರು. ಹೀಗಾಗಿ ದರ್ಗಾವು ಜಾತಿ- ಮತ, ಸಿರಿವಂತ- ಬಡವರೆಂಬ ಭೇದವಿಲ್ಲದೆ ಎಲ್ಲರಿಗೂ ಅನ್ನ, ಆಶ್ರಯ ಮತ್ತು ಆಶೀರ್ವಾದವನ್ನು ದಯಪಾಲಿಸುವ ಬೀಡಾಗಿ ಬೆಳೆಯಿತು. ಈ ಪರಂಪರೆಯು ಇಂದಿಗೂ ಮುಂದುವರೆದಿ ರುವುದು ಇಲ್ಲಿಯ ವಿಶೇಷ.

ದಿಲ್ಲಿ ಅಭೀ ದೂರ್‌ ಹೈ…
ದಿಲ್ಲಿಯ ಸುಲ್ತಾನ ಯಾ ಸುದ್ದೀನ್‌ ತುಘಲಕ್‌ನಿಗೆ ನಿಜಾಮುದ್ದೀನ್‌ ಮತ್ತವರ ಅನುಯಾಯಿಗಳು ತನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆಂಬ ಅನುಮಾನವು ಅನುಕ್ಷಣವೂ ಕೊಲ್ಲುತ್ತಿತ್ತು. ಹೀಗಾಗಿ, ಹೇಗಾ ದರೂ ಮಾಡಿ ಈ ಸಂತನನ್ನು ಮಟ್ಟಹಾಕುವುದೇ ತನ್ನ ಏಕೈಕ ಉದ್ದೇಶವೆಂಬಂತೆ ಆತ ವರ್ತಿಸುತ್ತಿದ್ದನೆಂದು ಇತಿಹಾಸ ಹೇಳುತ್ತದೆ. ಔಲಿಯಾರು ತುಘಲಕಾಬಾದ್‌ನಲ್ಲಿ ಬಾವೊಲಿ (ಕುಂಡದಂಥ ದೈತ್ಯ ಬಾವಿ)ಯನ್ನು ನಿರ್ಮಿಸುತ್ತಿದ್ದಾಗ ಅತ್ತ ತಲೆಹಾಕದಂತೆ ಸುಲ್ತಾನ ಕಾರ್ಮಿಕರನ್ನು ನಿರ್ಬಂಧಿಸಿದ್ದ. ಆದರೆ, ಸಂತನ ಜನಪ್ರಿಯತೆಯು ಸುಲ್ತಾನನಿಗಿಂತಲೂ ಹೆಚ್ಚಿತ್ತು. ಸೂರ್ಯಾಸ್ತದ ನಂತರ ಬಾವೊಲಿಯ ನಿರ್ಮಾಣವು ನಿರಾತಂಕವಾಗಿ ಮುಂದುವರಿಯುತ್ತಿತ್ತು. ಕ್ಷುದ್ರನಾದ ಸುಲ್ತಾನ ಎಣ್ಣೆಯಿದ್ದರಷ್ಟೇ ಅಲ್ವಾ ದೀಪ ಎಂದು ಲೆಕ್ಕಹಾಕಿ ಕಾಮಗಾರಿಯ ಪ್ರದೇಶಕ್ಕೆ ತೈಲದ ಪೂರೈಕೆಯನ್ನು ಸ್ಥಗಿತಗೊಳಿಸಿದ್ದ. ಆದರೆ, ಔಲಿಯಾರ ಅನುಗ್ರಹದಿಂದಾಗಿ ನೀರಿನಲ್ಲೇ ದೀಪಗಳು ಬೆಳಗಿದವಂತೆ.

ಔಲಿಯಾರ ಶಿಷ್ಯ ಮತ್ತು ವಿಶ್ವವಿಖ್ಯಾತ ಕವಿಯಾಗಿದ್ದ ಆಮಿರ್‌ ಖುಸ್ರೋ ಔಲಿಯಾರ ಅನುಯಾಯಿಯಾಗಿದ್ದರೂ ಯಾಸುದ್ದೀನನಿಗೆ ಪ್ರಿಯರಾಗಿದ್ದರಂತೆ. ಒಮ್ಮೆ ಬಂಗಾಲದಲ್ಲಿ ಯುದ್ಧವನ್ನು ಗೆಲ್ಲುವ ಸುಲ್ತಾನ ತಾನು ಮರಳುವ ಹೊತ್ತಿಗೆ ಔಲಿಯಾ ದಿಲ್ಲಿ ಬಿಟ್ಟು ಹೋಗಿರತಕ್ಕದ್ದು ಎಂಬ ಫ‌ರ್ಮಾನನ್ನು ಖುಸ್ರೋನ ಮೂಲಕ ಗುರುವಾದ ಸಂತನಿಗೆ ಹೇಳಿಸುತ್ತಾನೆ. ಫ‌ರ್ಮಾನಿನಿಂದ ಕೊಂಚವೂ ವಿಚಲಿತರಾಗದ ಔಲಿಯಾ ತನ್ನ ಶಿಷ್ಯನಿಗೆ ಹೀಗಂದಿದ್ದರು: ಹುನುಝ್ ದಿಲ್ಲಿ ದೂರ್‌ ಹಸ್ತ್ (ದಿಲ್ಲಿ ಇನ್ನೂ ದೂರವಿದೆ).

ಔಲಿಯಾರ ಭವಿಷ್ಯ ನಿಜವಾಯಿತು. ಸುಂಟರಗಾಳಿಯೊಂದರ ರಾಕ್ಷಸದಾಳಿಗೀಡಾದ ಸುಲ್ತಾನನ ಡೇರೆಗಳು ನಾಶವಾಗಿದ್ದವು. ದಿಲ್ಲಿಗೆ ಮರಳುವ ಮೊದಲೇ ಸುಲ್ತಾನನ ಅಂತ್ಯವಾಗಿತ್ತು. ಸುಲ್ತಾನನ ಕನಸಿನ ನಗರಿಯಾದ ತುಘಲಕಾಬಾದ್‌ ಬಗ್ಗೆಯೂ ಯಾ ರಹೇ ಗುಜ್ಜರ್‌, ಯಾ ರಹೇ ಉಸರ್‌ (ಶಹರದಲ್ಲಿ ಒಂದೋ ಅಲೆಮಾರಿ ಗುಜ್ಜರ್‌ ನೆಲೆಸುವರು. ಇಲ್ಲವೋ ಬಂಜರಾಗುವುದು) ಎಂದಿದ್ದರು ಸಂತ ನಿಜಾಮುದ್ದೀನ್‌. ಸಂತನ ಶಾಪವೋ ಎಂಬಂತೆ ಭವಿಷ್ಯದಲ್ಲಿ ನೀರಿನ ಕೊರತೆಯಿಂದಾಗಿ ತುಘಲಕಾಬಾದ್‌ ಕೋಟೆಯ ಪ್ರದೇಶವು ಬಂಜರಾಯಿತು.

ನಿಜಾಮುದ್ದೀನ್‌ ದರ್ಗಾ : ದಿಲ್ಲಿಯ ಗರ್ಭಗುಡಿ
ಚಿಶಿ¤ ಸಂಪ್ರದಾಯದ ಸಂತರಾಗಿದ್ದ ನಿಜಾಮುದ್ದೀನ್‌ ಔಲಿಯಾರ ಕಾಲದಲ್ಲಿ ಸೂಫಿ ಪಂಥವು ಹಲವು ಮಹನೀಯರಿಂದ ಉತ್ತುಂಗಕ್ಕೆ ತಲುಪಿದರೂ ಇವರ ಜನಪ್ರಿಯತೆಯು ಮಾತ್ರ ಕಾಲಾತೀತವಾಗಿ ಅಜರಾಮರವಾಯಿತು. ಯಾಸ್ಪುರ್‌ ಇವರಿಂದಾಗಿಯೇ ದಿಲ್ಲಿಯ ಜನನಿಬಿಡ ಶಹರವಾಗಿ ಬದಲಾಗಿತ್ತಂತೆ. ಮುಂದೆಯೂ ಈ ವಿಶಾಲವಾದ ಪ್ರದೇಶವು ನಿಜಾಮುದ್ದೀನ್‌ ಹೆಸರನ್ನೇ ಪಡೆದುಕೊಂಡು ದಿಲ್ಲಿಯ ಪ್ರಮುಖ ಭಾಗಗಳಲ್ಲೊಂದಾಗಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ.
ಇಂದಿಗೂ ಜಾತಿಭೇದಗಳ ಹಂಗಿಲ್ಲದೆ ನಿಜಾಮುದ್ದೀನ್‌ ದರ್ಗಾವು ಸರ್ವರಿಗೂ ವಿಶ್ವಮಾನವತೆಯ ಸಂದೇಶವನ್ನು ಸಾರುತ್ತಿದೆ. “ದೇಹಿ’ ಎಂದವರಿಗೆ ಇಲ್ಲವೆನ್ನದ ದಾನಧರ್ಮದ ಪರಂಪರೆಯು ಔಲಿಯಾರ ನಂತರವೂ ಮುಂದುವರಿಯುತ್ತ ಬಂದಿದೆ. ಇಲ್ಲಿ ವಾರಕ್ಕೊಮ್ಮೆ ನಡೆಯುವ ಕವ್ವಾಲಿ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯ. ನಿಜಾಮುದ್ದೀನ್‌ ದರ್ಗಾದಲ್ಲಿ ಶಿಷ್ಯ ಆಮೀರ್‌ ಖುಸ್ರೋ ಮತ್ತು ಗುರು ಖ್ವಾಜಾ ನಿಜಾಮುದ್ದೀನ್‌ ಔಲಿಯಾರ ಗೋರಿಗಳನ್ನು ಅಕ್ಕಪಕ್ಕದಲ್ಲಿ ಕಾಣಬಹುದು. ಇನ್ನು ಮೊಗಲ್‌ ಸುಲ್ತಾನನಾಗಿದ್ದ ಹುಮಾಯೂನ್‌ ಮತ್ತು ಮಹಾಕವಿ ಮಿರ್ಜಾ ಗಾಲಿಬನ ಗೋರಿಗಳೂ ಕೂಡ ನಿಜಾಮುದ್ದೀನ್‌ ಪ್ರದೇಶದಲ್ಲಿ ಕಾಣಸಿಗುವ ಇತರ ಮುಖ್ಯ ಪ್ರೇಕ್ಷಣೀಯ ಸ್ಥಳಗಳು.

-ಪ್ರಸಾದ್‌ ನಾೖಕ್‌

ಟಾಪ್ ನ್ಯೂಸ್

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.