ಬಿಝಿ ತಾನ್ಯಾ
Team Udayavani, Jun 3, 2018, 6:00 AM IST
ಕೆಲವರು ಚಿತ್ರರಂಗಕ್ಕೆ ಬಲಗಾಲಿಟ್ಟು ಎಂಟ್ರಿಕೊಡುತ್ತಾರೆ. ಎಂಟ್ರಿಕೊಟ್ಟ ದಿನದಿಂದಲೇ ಅವರಿಗೆ ಒಳ್ಳೆಯ ಸಿನೆಮಾಗಳು ಸಿಗುತ್ತಾ, ಬಿಝಿಯಾಗುತ್ತಾ ಹೋಗುತ್ತಾರೆ. ವಿಶೇಷವೆಂದರೆ ಒಂದೇ ಒಂದು ಸಿನೆಮಾ ರಿಲೀಸ್ ಆಗುವ ಮುನ್ನವೇ ಕೈ ತುಂಬಾ ಅವಕಾಶ ಸಿಗುತ್ತದೆ. ಸದ್ಯ ಈ ಮಾತು ಅನ್ವಯವಾಗೋದು ತಾನ್ಯಾ ಹೋಪ್. ಯಾರು ಈ ತಾನ್ಯಾ ಹೋಪ್ ಎಂದು ನೀವು ಕೇಳಬಹುದು. ಕಳೆದ ಒಂದು ವಾರದಿಂದ ಈ ಹೆಸರು ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಕೇಳಿಬಂದಿತ್ತು. ಅದಕ್ಕೆ ಕಾರಣ ಅಮರ್ ಚಿತ್ರ. ಅಂಬರೀಶ್ ಪುತ್ರ ಅಭಿಷೇಕ್ ಅಮರ್ ಚಿತ್ರದ ಮೂಲಕ ಲಾಂಚ್ ಆಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆಂಬ ಚರ್ಚೆ ಜೋರಾಗಿ ಕೇಳಿಬರುತ್ತಿರುವ ಹೊತ್ತಿನಲ್ಲಿ ಓಡಾಡಿದ ಹೆಸರು ತಾನ್ಯಾ ಹೋಪ್. ಆದರಂತೆ ತಾನ್ಯಾ ಈಗ ಅಮರ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಅಮರ್ ಚಿತ್ರಕ್ಕೆ ನಾಯಕಿಯಾಗಿರುವುದು ತಾನ್ಯಾಗೂ ಖುಷಿಕೊಟ್ಟಿದೆಯಂತೆ. ಚಿತ್ರದಲ್ಲಿ ತಾನ್ಯಾ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಯಾರು ಈ ತಾನ್ಯಾ ಎಂದು ನೀವು ಕೇಳಿದರೆ ಮಹಾರಾಷ್ಟ್ರ ಮೂಲದ ಬೆಂಗಳೂರು ಹುಡುಗಿ. ತಾನ್ಯಾ ಹುಟ್ಟಿ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಎಲ್ಲಾ ನಟಿಯರಂತೆ ತಾನ್ಯಾ ಕೂಡಾ ರ್‍ಯಾಂಪ್ ವಾಕ್, ಮಾಡೆಲಿಂಗ್ ಮಾಡಿಯೇ ಸಿನೆಮಾ ರಂಗಕ್ಕೆ ಬಂದವರು.
ತಾನ್ಯಾ ಬೆಂಗಳೂರು ಮೂಲದವ ರಾದರೂ ಕೆರಿಯರ್ ಆರಂಭಿಸಿದ್ದು ಮಾತ್ರ ತೆಲುಗಿನಲ್ಲಿ. ಈಗಾಗಲೇ ತಾನ್ಯಾ ತೆಲುಗಿನ ನಾಲ್ಕು ಸಿನೆಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ಒಂದು ತಮಿಳು ಸಿನಿಮಾ ಕೂಡಾ ತಾನ್ಯಾ ಕೈಯಲ್ಲಿದೆ. ಇಂತಿಪ್ಪ ತಾನ್ಯಾ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದು ಉಪೇಂದ್ರ ಅವರ ಸಿನೆಮಾ ಮೂಲಕ. ಸದ್ದಿಲ್ಲದೇ ಆರಂಭಗೊಂಡ ಉಪೇಂದ್ರ ಅವರ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ತಾನ್ಯಾ ನಾಯಕಿ ಯಾಗುವ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದ್ದಾರೆ. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದರ ಬೆನ್ನಲ್ಲೇ ತಾನ್ಯಾಗೆ ಸಿಕ್ಕ ದೊಡ್ಡ ಅವಕಾಶ ಎಂದರೆ ಯಜಮಾನ. ದರ್ಶನ್ ನಾಯಕರಾಗಿರುವ ಯಜಮಾನ ಚಿತ್ರದ ಇಬ್ಬರು ನಾಯಕಿಯರಲ್ಲಿ ತಾನ್ಯಾ ಕೂಡಾ ಒಬ್ಬರು. ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸಿ ಖುಷಿಯಾಗಿದ್ದಾರೆ. ಈಗ ತಾನ್ಯಾಗೆ ಅಮರ್ ಚಿತ್ರದಿಂದ ಅವಕಾಶ ಸಿಕ್ಕಿದೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ ತಾನ್ಯಾ ಕೈಯಲ್ಲಿ ಮೂರು ಸಿನೆಮಾಗಳಿರುವುದು ವಿಶೇಷ. ಈ ನಡುವೆಯೇ ತಾನ್ಯಾಗೆ ಮತ್ತೂಂದಿಷ್ಟು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.