Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!


Team Udayavani, Mar 17, 2024, 5:49 PM IST

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

ದಟ್ಟ ಕಾಡಿನ ಮೌನವನ್ನು ಅನುಭವಿಸುತ್ತ, ಕಾಡಿನ ಪಕ್ಷಿಗಳ ಅವಲೋಕನ ಮತ್ತು ಛಾಯಾಗ್ರಹಣ ಮಾಡಬೇಕೆನ್ನುವ ಮಹದಾಸೆಯೊಂದಿಗೆ ನಾನು ಮತ್ತು ಮಿತ್ರ ಪಕ್ಷಿಪ್ರೇಮಿ-ಛಾಯಾಗ್ರಾಹಕ ಚಿರಂತನ ವಸಿಷ್ಠ ಇಬ್ಬರೂ ದಾಂಡೇಲಿ, ಗಣೇಶಗುಡಿ, ಜೋಯಿಡಾ ಕಾಡಿನೆಡೆಗೆ ಹೊರಟೆವು.

ಯಲ್ಲಾಪುರ ದಾಟಿ ದಾಂಡೇಲಿ ರಸ್ತೆ ಹಿಡಿಯುತ್ತಿದ್ದಂತೆ ಕಾಣುವ ಸಾಗವಾನಿ ಮೀಸಲು ಅರಣ್ಯ, ಗಣೇಶಗುಡಿಯ ನೈಸರ್ಗಿಕ ಕಾಡು ನಮ್ಮನ್ನು ಆಕರ್ಷಿಸತೊಡಗಿತು. ದಾಂಡೇಲಿಯಲ್ಲಿ ಸಾಮಾನ್ಯವಾಗಿ ಕಾಣುವ ಗ್ರೇಟ್‌ ಇಂಡಿಯನ್‌ ಹಾರ್ನ್ಬಿಲ್‌ ಈ ಬಾರಿ ಹೆಚ್ಚಾಗಿ ಕಣ್ಣಿಗೆ ಬೀಳಲಿಲ್ಲ. ಅಲ್ಲಿನ ಟಿಂಬರ್‌ ಯಾರ್ಡ್‌ನ ಎತ್ತರದ ಮರಗಳ ಮೇಲೆ ದೂರದವರೆಗೆ ಕಣ್ಣು ಹಾಯಿಸಿದರೂ ಯಾವ ಪಕ್ಷಿಗಳ ಸುಳಿವೂ ಸಿಗಲಿಲ್ಲ.

ಹಾಗೇ ಮುಂದುವರೆದು ಗಣೇಶಗುಡಿ ಸಮೀಪದ “ಓಲ್ಡ್ ಮ್ಯಾಗಜೀನ್‌ ಹೌಸ್‌’ ಜಂಗಲ್‌ ರೆಸಾರ್ಟ್‌ ಕಡೆಗೆ ಪ್ರಯಾಣ ಬೆಳೆಸಿದೆವು. ಓಲ್ಡ್‌ ಮ್ಯಾಗಜೀನ್‌ ಹೌಸ್‌, 20-25 ವರ್ಷಗಳ ಹಿಂದೆ ಡೈನಾಮೇಟ್‌ನ ಮದ್ದು- ಗುಂಡುಗಳ ಸಂಗ್ರಹಾಲಯವಾಗಿತ್ತು. ಈಗ ಅದನ್ನೇ ಜಂಗಲ್‌ ರೆಸಾರ್ಟ್‌ ಆಗಿ ಪರಿವರ್ತಿಸಿದ್ದಾರೆ. ಇಲ್ಲಿ ಪಕ್ಷಿ ವೀಕ್ಷಣೆಗೆಂದೇ ಮಹಾರಾಷ್ಟ್ರ ಮತ್ತಿತರ ರಾಜ್ಯದ ಪಕ್ಷಿಪ್ರೇಮಿಗಳು ಬರುತ್ತಾರೆ. ಕಾಡಿನ ಅದೆಷ್ಟೋ ಪಕ್ಷಿಗಳನ್ನು ಒಟ್ಟಿಗೇ ನೋಡುವ ಅವಕಾಶ ಇಲ್ಲಿದೆ.

ನಾವು ಒಂದೇ ದಿನದಲ್ಲಿ 20 ರಿಂದ 25ಜಾತಿಯ ಪಕ್ಷಿಗಳನ್ನು ಗಮನಿಸಿದೆವು. ಈ ಬಾಲದಂಡೆಯ ಹಕ್ಕಿ ಅಥವಾ ಇಂಡಿಯನ್‌ ಪ್ಯಾರಡೇಸ್‌ ಫ್ಲೈಕ್ಯಾಚರ್‌ ಪಕ್ಷಿಯನ್ನು ನಮ್ಮ ಊರಿನಲ್ಲಿ ಒಂದೆರಡು ಬಾರಿ ತುಂಬಾ ದೂರದಿಂದ ನೋಡಿದ್ದೆನಾದರೂ, ಅಲ್ಲಿ ಇದು ಛಾಯಾಗ್ರಹಣಕ್ಕೆ ಸಿಕ್ಕೇ ಇರಲಿಲ್ಲ. ಅಂಥ ಹಕ್ಕಿ ಇಲ್ಲಿ ನಮ್ಮ ಕಣ್ಣೆದುರಿಗೇ ಯಾವುದೇ ಭಯ, ಆತಂಕಗಳಿಲ್ಲದೆ ಕುಳಿತು ಕ್ಯಾಮರಾಕ್ಕೆ ಫೋಸ್‌ ಕೊಟ್ಟಿತ್ತು. ಗಂಡು ಮತ್ತು ಹೆಣ್ಣು ಎರಡೂ ಒಟ್ಟಿಗೇ ಸಿಕ್ಕಿದ್ದವು.

ಮೋಡಿ ಮಾಡುವ ಆಕಾರ, ಬಣ್ಣ:

ಬಾಲದಂಡೆಯ ಹಕ್ಕಿ ತನ್ನ ಆಕರ್ಷಕ ಬಣ್ಣ ಮತ್ತು ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದದ ಓಲಾಡುವ ಬಾಲದಿಂದಾಗಿ ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತದೆ. ಇಂಡಿಯನ್‌ ಪ್ಯಾರಡೇಸ್‌ ಫ್ಲೈಕ್ಯಾಚರ್‌ಗಳು ಪ್ರಧಾನವಾಗಿ ಶ್ರೀಲಂಕಾ ಮತ್ತು ಮ್ಯಾನ್ಮಾರ್‌ ಸೇರಿದಂತೆ ಭಾರತೀಯ ಉಪಖಂಡದಾದ್ಯಂತ ಕಂಡುಬರುತ್ತವೆ. ದಟ್ಟವಾದ ಕಾಡುಗಳಲ್ಲಿ, ಸಸ್ಯವರ್ಗದ ಉದ್ಯಾನವನಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಸಾಮಾನ್ಯವಾಗಿ ವಯಸ್ಕ ಹಕ್ಕಿ ಸುಮಾರು ಏಳರಿಂದ ಒಂಬತ್ತು ಇಂಚುಗಳಷ್ಟು ಉದ್ದವಿರುತ್ತವೆ. ಅವುಗಳ ತಲೆಯ ಭಾಗ ಕತ್ತಿನಿಂದ ಮೇಲೆ ಹೊಳೆವ ಕಪ್ಪು ಬಣ್ಣದಿಂದ ಕೂಡಿದ್ದು ಕಿರೀಟದಂತಹ ಜುಟ್ಟು ಹೊಂದಿರುತ್ತವೆ.

ಗಂಡು ಹಕ್ಕಿಯ ಮೈ ಬಣ್ಣ ಪೂರ್ಣ ಬಿಳಿಯದಾಗಿದ್ದು, ಕತ್ತಿನಿಂದ ಬಾಲದ ತುದಿಯವರೆಗೂ ಬಿಳಿಯ ಬಣ್ಣದಿಂದ ಕೂಡಿರುತ್ತವೆ. ಸುಮಾರು ಎಂಟರಿಂದ ಒಂಬತ್ತು ಇಂಚು ಉದ್ದದ ಎರಡು ಬಿಳಿಯ ಬಾಲವೇ ಈ ಪಕ್ಷಿಯ ವಿಶೇಷ ಆಕರ್ಷಣೆ. ಹೆಣ್ಣು ಬಾಲದಂಡೆಯ ಹಕ್ಕಿ ಮೋಹಗೊಳ್ಳುವುದೂ ಇದೇ ಕಾರಣಕ್ಕೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಕ್ಕಿ ಹೆಣ್ಣನ್ನು ಆಕರ್ಷಿಸಲು ತನ್ನ ಭವ್ಯವಾದ ಬಾಲವನ್ನು ಪ್ರದರ್ಶಿಸಿ ಮರುಳುಗೊಳಿ ಸುತ್ತದೆ. ಹೆಣ್ಣು ಹಕ್ಕಿಗೆ ಇಷ್ಟು ಉದ್ದದ ಬಾಲ ಇರುವುದಿಲ್ಲ. ಅದು ಕಂದು ಬಣ್ಣದಿಂದ ಕೂಡಿದ್ದು ಸುಮಾರು ನಾಲ್ಕು ಇಂಚುಗಳಷ್ಟೇ ಉದ್ದವಿರುತ್ತದೆ. ಮರಿ ಗಂಡು ಹಕ್ಕಿ ನೋಡುವುದಕ್ಕೆ ಹೆಣ್ಣು ಬಾಲದಂಡೆ ಹಕ್ಕಿಯಂತೆಯೇ ಕಾಣುತ್ತವೆ. ಅವುಗಳ ಗರಿಗಳು ಉದ್ದವಿರುವುದಿಲ್ಲ ಮತ್ತು ಕಂದು ಬಣ್ಣದಿಂದ ಕೂಡಿರುತ್ತದೆ. ಮೂರು ವರ್ಷ ಆದ ನಂತರ ರೆಕ್ಕೆಯ ಬಣ್ಣ ಬಿಳಿಯಾಗುವುದಲ್ಲದೇ ಒಂಭತ್ತು ಇಂಚುಗಳವರೆಗೆ ಬೆಳೆಯುತ್ತಾ ಹೋಗುತ್ತದೆ.

ಬುಟ್ಟಿಯಾಕಾರದ ಗೂಡುಗಳು:

ಇವುಗಳ ಮುಖ್ಯ ಆಹಾರ ನೊಣಗಳು, ಸೊಳ್ಳೆಗಳು ಮತ್ತು ಇತರ ಹಾರುವ ಕೀಟಗಳು. ಇವು ಗಾಳಿಯಲ್ಲಿ ಹಾರಿ ಬಂದು ತನ್ನ ಬೇಟೆಯನ್ನು ಹಿಡಿಯುವಲ್ಲಿ ಚಮತ್ಕಾರಿಕ ಕುಶಲತೆಯನ್ನು ಪ್ರದರ್ಶಿಸುತ್ತವೆ. ಅತ್ಯಂತ ವೇಗವಾಗಿ ತನ್ನ ಉದ್ದ ಬಾಲವನ್ನು ಬೀಸುತ್ತಾ ಬಂದು ಬೇಟೆಯಾಡುತ್ತವೆ. ಬಾಲದಂಡೆಯ ಹಕ್ಕಿ ಮೂಲತಃ ವಲಸೆ ಹಕ್ಕಿ. ಮಾರ್ಚ್‌ನಿಂದ ಜುಲೈ ತಿಂಗಳವರೆಗೆ ಅವುಗಳ ಸಂತಾನೋತ್ಪತ್ತಿಯ ಸಮಯ. ಮರದ ಕೊಂಬೆಯ ಮೇಲೆ ಜೇಡರಬಲೆ ಮತ್ತು ಒಣಗಿದ ನಾರು, ಕಾಂಡಗಳನ್ನು ಬಳಸಿ, ಆಳವಿಲ್ಲದ ಚಿಕ್ಕ ಬುಟ್ಟಿಯಾಕಾರದ ಗೂಡುಗಳನ್ನು ನಿರ್ಮಿಸಿ ಅದರಲ್ಲಿ ಹೆಣ್ಣು ಹಕ್ಕಿ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು ಸುಮಾರು 14 ರಿಂದ 16 ದಿನಗಳವರೆಗೆ ಕಾವು ಕೊಡುತ್ತದೆ. ಮೊಟ್ಟೆ ಒಡೆದ 22 ದಿನಗಳಲ್ಲಿ ಮರಿಗಳು ಹಾರಲು ಸಿದ್ದವಾಗುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಮರಿಗಳಿಗೆ ಪೋಷಣೆ ಮತ್ತು ರಕ್ಷಣೆ ನೀಡುವಲ್ಲಿ ಸರಿಸಮವಾಗಿ ಕಾರ್ಯ ನಿರ್ವಹಿಸುತ್ತವೆ.

ರಾಜ ಪಕ್ಷಿ-ರಾಜ್ಯ ಪಕ್ಷಿ! : ಬಾಲದಂಡೆಯ ಹಕ್ಕಿ, ಮಧ್ಯ ಪ್ರದೇಶದ “ರಾಜ್ಯ ಪಕ್ಷಿ’ಯ ಸ್ಥಾನ ಪಡೆದಿದೆ. ಅಲ್ಲಿ ಈ ಹಕ್ಕಿಯನ್ನು ದೂಧ್‌ ರಾಜ್‌’ ಎಂದು ಕರೆಯುತ್ತಾರೆ. ಇದರ ತಲೆಯ ಮೇಲಿನ ಜುಟ್ಟು ಕಿರೀಟದಂತೆ ಇರುವುದರಿಂದ ಮತ್ತು ಅದರ ಬಾಲ ರಾಜರ ಪೋಷಾಕಿನಂತೆ ಕಾಣುವದರಿಂದ ಇದನ್ನು “ರಾಜ ಹಕ್ಕಿ’ ಎಂತಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಈ ಹಕ್ಕಿಯನ್ನು ಅರ್ಜುನಕ ಎಂದು ಕರೆಯುತ್ತಾರೆ. ಭಾರತ ಮತ್ತು ಶ್ರೀಲಂಕಾ ದೇಶದ ಅಂಚೆ ಇಲಾಖೆ ಈ ಪಕ್ಷಿಯ ಚಿತ್ರದ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡಿವೆ.

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

9

Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ವಿದ್ಯಾರ್ಥಿಗಳಿಗೆ ಗಾಯ

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.