ಫ್ರೆಂಚ್‌ ನಗರ ಡೀಪಿಯ ಆಗಸದಲ್ಲಿ ಕರಾವಳಿಯ ಗಾಳಿಪಟ


Team Udayavani, Jul 29, 2018, 6:00 AM IST

2.jpg

ಫ್ರಾನ್ಸ್‌ನ ಡೀಪಿ ನಗರದಲ್ಲಿ ಜರಗುವ ಡೀಪಿ ಇಂಟರ್‌ ನ್ಯಾಷನಲ್‌ ಕೈಟ್‌ ಫೆಸ್ಟಿವಲ್‌ನಲ್ಲಿ ಟೀಮ್‌ ಮಂಗಳೂರು ಕರಾವಳಿಯ ತುಳುಸಂಸ್ಕೃತಿಯನ್ನು ಬಿಂಬಿಸುವ ಗಾಳಿಪಟವನ್ನು ಹಾರಿಸುತ್ತಿದೆ. ಎಂಟನೆಯ ಸಲ ಈ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಈ ತಂಡಕ್ಕೆ ಲಭಿಸಿದೆ.

ಸುಂದರ ದೇಶ ಮತ್ತು ಫ್ಯಾಶನ್‌ ನಾಡು ಎಂದೇ ಖ್ಯಾತಿ ಪಡೆದಿದೆ ಫ್ರಾನ್ಸ್‌ ದೇಶ. ರಾಜಧಾನಿ ಪ್ಯಾರಿಸ್‌ ಸಿರಿವಂತರ ಸ್ವರ್ಗವಾಗಿದೆ, ರಸಿಕರ ಪಾಲಿಗೆ ಅಗ್ಗವಾಗಿ ಲಭ್ಯ. ಸಿಯಾನಾ ನದಿ ನಗರವನ್ನು ಸುತ್ತುವರಿದಿದ್ದು ನಗರದ ನಡುವೆ ಧುತ್ತೆಂದು ಎದ್ದು ನಿಂತಿದೆ ಜಗತ್‌ ಪ್ರಸಿದ್ಧ ಐಫೆಲ್‌ ಟವರ್‌. ಪ್ಯಾರಿಸ್‌ ನಗರದಿಂದ ಪಶ್ಚಿಮಕ್ಕೆ 276 ಕಿ.ಮೀ. ದೂರದಲ್ಲಿ ಕಡಲ ಕಿನಾರೆಯಲ್ಲಿ ಮನೋಹರ ಸೌಂದರ್ಯಗಳೊಂದಿಗೆ ಒಂದು ನಗರವಿದೆ ಅದುವೇ ಡೀಪಿ ನಗರ. ಫ್ರೆಂಚ್‌ ಉಚ್ಚಾರದಲ್ಲಿ ಝಿಯಪ್‌. 

ಜೋವಿಯಲ್‌ ಮತ್ತು ಲೇಖಕ ದಿನೇಶ ಹೊಳ್ಳ

ಇಂಗ್ಲಿಶ್‌ ಚಾನೆಲ್‌ ಎಂಬ ಸಮುದ್ರದ ತಟದಲ್ಲಿ ಈ ನಗರವಿದ್ದು ಇಂದು ಫ್ರಾನ್ಸ್‌ ಒಂದು ಮಗ್ಗುಲಿನ ಕೊನೆಯ ನಗರವಾಗಿರುತ್ತದೆ. ಈ ಕಡಲನ್ನು ದಾಟಿ ಹೋದರೆ ಇಂಗ್ಲೆಂಡ್‌ ತಲುಪಬಹುದು. ಡೀಪಿ ನಗರವು ಬಂದರು ಪ್ರದೇಶವಾಗಿದ್ದು ಮೀನುಗಾರಿಕೆ ಅಲ್ಲಿನ ಪ್ರಮುಖ ಉದ್ಯಮ. 1940ರಲ್ಲಿ ಜರ್ಮನಿಯ ನಾಝಿಗಳಿಂದ ಆಕ್ರಮಣಕ್ಕೊಳಗಾಗಿದ್ದ ಈ ನಗರ ಎರಡನೆಯ ಮಹಾಯುದ್ಧದಲ್ಲಿ ಕೆನಡಾದ ಸಹಕಾರದಿಂದ ಜರ್ಮನಿಯಿಂದ ಮುಕ್ತವಾಗಿತ್ತು.  1942ರಲ್ಲಿ ಕೆನಡಾ ಮತ್ತು ಡೀಪಿ ನಡುವೆ ಒಂದು ಆಡಳಿತ ಒಡಂಬಡಿಕೆಯಾಗಿದೆ. ಇಂದು ಈ ಎರಡು ನಗರಗಳ ನಡುವೆ ಸ್ನೇಹ ಸಂಬಂಧವಿದೆ.

ಡೀಪಿ ಕ್ಯಾಪಿಟಲ್‌ ಆಫ್ ಕೈಟ್ಸ್‌ ಎಂಬ ಸಂಘಟನೆಯು ಅಲ್ಲಿನ ಮೇಯರ್‌ ಸ್ಯಾಲಿನ್‌ ಆಡಿಗೋರವರ ಸಹಕಾರದೊಂದಿಗೆ ಆಯೋಜಿಸುತ್ತಿದೆ ಡೀಪಿ ಇಂಟರ್‌ ನ್ಯಾಷನಲ್‌ ಕೈಟ್‌ ಫೆಸ್ಟಿವಲ್‌! ಜಗತ್ತಿನಲ್ಲೇ ಅತೀ ದೊಡ್ಡ ಗಾಳಿಪಟ ಉತ್ಸವ. 48 ದೇಶಗಳು ಈ ಉತ್ಸವದಲ್ಲಿ ಭಾಗವಹಿಸುತ್ತವೆ. ಭಾರತದ ಪ್ರತಿನಿಧಿಗಳಾಗಿ ಸರ್ವೆàಶ್‌ ರಾವ್‌ ನೇತೃತ್ವದ ಟೀಮ್‌ ಮಂಗಳೂರಿನ ಈ ಲೇಖಕ ಮತ್ತು ಮಿತ್ರ ಸತೀಶ್‌ ರಾವ್‌ ಭಾಗವಹಿಸುತ್ತಿದ್ದೇವೆ. ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ ಎಂಬ ಸ್ನೇಹ ಸಾಮರಸ್ಯದ ಶೀರ್ಷಿಕೆಯು ಈ ಉತ್ಸವದಲ್ಲಿದ್ದು ಜಗತ್ತಿನ ಎಲ್ಲರೂ ಸಮಾನರು ಎಂಬ ದೃಷ್ಟಿಕೋನ ಇದರ ಹಿಂದಿದೆೆ. ಟೀಮ್‌ ಮಂಗಳೂರು ತಂಡವು ಈ ಉತ್ಸವದಲ್ಲಿ ಎಂಟನೆಯ ಬಾರಿಗೆ ಭಾಗವಹಿಸುತ್ತಿದ್ದು ಯಕ್ಷಗಾನ, ಕಥಕಳಿ, ಭೂತಕೋಲ, ಭರತನಾಟ್ಯ, ಗರುಡ, ಪುಷ್ಪಕವಿಮಾನ ಹೀಗೆ ಹಲವಾರು ವಿನ್ಯಾಸಗಳ ಗಾಳಿಪಟಗಳನ್ನು ಈ ಉತ್ಸವದಲ್ಲಿ ಈಗಾಗಲೇ ಹಾರಿಸಿದೆ. 

ತುಳು ಸಂಸ್ಕೃತಿಯ ಗಾಳಿಪಟ
ಈ ಸಲ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕೋಳಿ ಅಂಕದ ಕುರಿತ ಗಾಳಿಪಟವನ್ನು ಈ ಉತ್ಸವಕ್ಕೋಸ್ಕರ ರಚಿಸಿಲಾಗಿದೆ. ಭಾರತೀಯ ಸಂಸ್ಕೃತಿಯನ್ನು ಗಾಳಿಪಟಗಳ ಮೂಲಕ ಜಗತ್ತಿಗೇ ಪರಿಚಯಿಸುವುದು ಟೀಮ್‌ ಮಂಗಳೂರು ತಂಡದ ಉದ್ದೇಶವಾಗಿದ್ದು ಜಗತ್ತಿನ 12 ದೇಶಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದ ಕೀರ್ತಿ ಟೀಮ್‌ ಮಂಗಳೂರು ತಂಡಕ್ಕೆ ಲಭಿಸಿದೆ. ಗಾಳಿಪಟ ಹಾರಾಟದೊಂದಿಗೆ ಭಾರತದ ಸಂಸ್ಕೃತಿ, ಪ್ರಕೃತಿ, ಜಾನಪದ ನೃತ್ಯ ಮುಂತಾದವುಗಳ ಬಗ್ಗೆ ರೇಖಾಚಿತ್ರಗಳ ಕಲಾಕೃತಿಯನ್ನು  ಪ್ರದರ್ಶನ ಮಾಡಲಾಗುತ್ತಿದೆ. 

ನಿಜವಾದ ನಾಗರೀಕತೆ
ಡೀಪಿ ನಗರವು ಅತೀ ಸುಂದರ ಹಾಗೂ ಸ್ವತ್ಛತೆಯ ಸಂಕೀರ್ಣವಾಗಿದೆ. ಒಂದು ಕಡೆ ನಗರ ಮತ್ತು ಇನ್ನೊಂದು ಕಡೆ ಸಾಗರ. ನಗರದ ನಡುವೆ ವೃತ್ತಾಕಾರದಲ್ಲಿ ನೀರು ತುಂಬಿದೆ. ಒಂದಷ್ಟು ದೋಣಿಗಳು ನಿಂತಿರುತ್ತವೆ. ನಗರದ ಒಂದು ಕಡೆ ಪುರಾತನ ಟರೆಲ್‌ (ಚಾಪೆಲ್‌) ಇದ್ದು ಇನ್ನೊಂದು ಕಡೆ ಎತ್ತರದಲ್ಲಿ ಡೀಪಿಯ ಚರಿತ್ರೆಯನ್ನು ಹೇಳುವ ಪುರಾತನ ಚರ್ಚು ನಗರದ ಮುಕುಟವಿಟ್ಟಂತೆ ತಲೆ ಎತ್ತಿ ನಿಂತಿದೆ. ಡೀಪಿ ಕಡಲ ಕಿನಾರೆಯ ರೋವಾನ್‌ ಬೀಚ್‌ನಲ್ಲಿ ವರ್ಷ ಪೂರ್ತಿ ಉತ್ಸವ, ಸಂಭ್ರಮಗಳು ಜರಗುತ್ತಿದ್ದು ಕಡಲ ಕಿನಾರೆಯೇ ಆಕರ್ಷಣೆಯ ಕೇಂದ್ರ ಭಾಗ. ನಗರದ ಮನೆ, ಕಟ್ಟಡಗಳಲ್ಲಿ ಕಡಲ ಕಾಗೆ ಕೂಗುತ್ತಿರುವ ಸದ್ದು ಕೇಳಿಸುತ್ತದೆ. ಅದು ಡೀಪಿಯ ಸೌಂದರ್ಯಕ್ಕೆ ಸಂಗೀತದ ಲೇಪನ ನೀಡುತ್ತದೆ. ಫ್ರೆಂಚ್‌ ಆಹಾರಗಳ ಹೋಟೆಲ್‌ಗ‌ಳೇ ತುಂಬಿರುವ ಡೀಪಿಯಲ್ಲಿ ಏಕೈಕ ಭಾರತೀಯ ಹೊಟೇಲ್‌ ತಾಜ್‌ಮಹಲ್‌.

ಚಾಕೊಲೇಟ್‌ ಮಾರಿ ದೇಶ ಸುತ್ತಿದರು 
ಡೀಪಿ ನಗರದಲ್ಲಿ ನಮಗೆ ವಿಶೇಷವಾಗಿ ಆತ್ಮೀಯರಾಗಿ ಕಂಡು ಬರುವ ವ್ಯಕ್ತಿಯೆಂದರೆ ಅಲ್ಲಿನ ಪ್ರಜೆ ಜೋವಿಯಲ್‌. ಭಾರತಕ್ಕೆ ಕಳೆದ 26 ವರ್ಷಗಳಿಂದ ನಿರಂತರ ಬರುತ್ತಿದ್ದು ಜಗತ್ತಿನ ಎಲ್ಲಾ  ದೇಶಗಳನ್ನು ಸುತ್ತಿ ಬಂದವರು. ಜೋವಿಯಲ್‌ ಹೋಗದ ದೇಶಗಳೇ ಇಲ್ಲ. ತಾನು ಪ್ರವಾಸ ಮಾಡಿದ ಎಲ್ಲಾ ದೇಶಗಳ ಸಂಸ್ಕೃತಿ, ಪದ್ಧತಿ, ಸಂಪ್ರದಾಯ, ಆಚಾರ-ವಿಚಾರ, ಆಹಾರ-ವಿಹಾರ, ಎಲ್ಲದರ ಬಗ್ಗೆಯೂ ತಿಳಿದುಕೊಂಡು ಬರುವ ಒಬ್ಬ ವಿಶೇಷ ಅಧ್ಯಯನಕಾರ. ಅದರಲ್ಲೂ ಭಾರತೀಯ ನೃತ್ಯ ಮತ್ತು ತುಳುನಾಡಿನ ಯಕ್ಷಗಾನದ ಬಗ್ಗೆ ಇವರಿಗೆ ಅಪಾರ ಒಲವು. ಇಷ್ಟೆಲ್ಲ ನಿರಂತರ ಪ್ರಪಂಚ ಸುತ್ತಾಡುವ ಜೋವಿಯಲ್‌ ಏನೂ ಬಹಳ ದೊಡ್ಡ ಉದ್ಯಮಿ ಅಲ್ಲ ಅಥವಾ ಬಹಳ ದೊಡ್ಡ ಸಂಬಳದ ಉದ್ಯೋಗಿ ಅಲ್ಲ. ಜೋವಿಯಲ್‌ನ ಉದ್ಯೋಗ ಕೇವಲ ರಸ್ತೆ ಬದಿಯಲ್ಲಿ ಚಾಕೊಲೇಟು ಮಾರುವುದು ಅಷ್ಟೆ ! ವರ್ಷದ ಅರ್ಧಭಾಗ ದುಡಿದರೆ ಉಳಿದ ಅರ್ಧಭಾಗ ಪ್ರವಾಸ. ಡೀಪಿ ನಗರದ ರಸ್ತೆ ಬದಿಯಲ್ಲಿ ಚಾಕೊಲೇಟು ಮಾರಿ ಇಡೀ ಪ್ರಪಂಚ ಸುತ್ತಾಡುತ್ತಾರೆಂದರೆ ಆಶ್ಚರ್ಯವೇ. ಜೋವಿಯಲ್‌ನ ಸ್ನೇಹ ನಮಗೂ ಹೆಮ್ಮೆ.

ದಿನೇಶ ಹೊಳ್ಳ

ಟಾಪ್ ನ್ಯೂಸ್

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.