ಆತ್ಮಾವಲೋಕನ


Team Udayavani, Mar 5, 2017, 3:45 AM IST

Featured-Image.jpg

Not I, believe me. You have dancing shoes
With nimble soles. I have a soul of lead
So stakes me to the ground I cannot move.
-Shakespeare, Romeo and Juliet, Act 1, Sc. 4

ಪಿ. ಲಂಕೇಶ್‌ ಸಂಪಾದಿಸಿದ ಅಕ್ಷರ ಹೊಸ ಕಾವ್ಯ (1970) ಕೇವಲ ಸಮಕಾಲೀನ ಕವಿಗಳ ಕವಿತೆಗಳ ಸಂಗ್ರಹವಾಗಿರದೆ ಬಹಳ ದೂರದೃಷ್ಟಿಯದೂ ಆಗಿತ್ತು. ಎಂದರೆ ಹೊಸ ಕಾವ್ಯವನ್ನು ದಾಖಲಿಸುವುದಕ್ಕಿಂತಲೂ ಹೊಸ ಕಾವ್ಯವನ್ನು ಸೃಷ್ಟಿಸುವ ಒಂದು ಮನೋಭೂಮಿಕೆಯನ್ನು ಒದಗಿಸುವುದು ಅದು ಮಾಡಿದ ಮಹತ್ವದ ಕೆಲಸ. ಉದಾಹರಣೆಗೆ, ವಿ. ಜಿ. ಭಟ್ಟರ ಆತ್ಮಶೋಧನೆ. ನಾವದರಲ್ಲಿ ಕಾಣುವ ಒಂದು ಬಹು ಮುಖ್ಯ ಕವಿತೆ ಹುಡುಕಿದೆ ಹಗಲೆÇÉಾ | ಎಲ್ಲೂ ಸಿಗಲಿಲ್ಲ | ಹಳಬರು ಹೇಳಿದ ಆತ್ಮವು ನನಗೆ | ಎಲ್ಲೂ ಸಿಗಲಿಲ್ಲ  ಎಂದು ಮೊದಲಾಗುವ ಕವಿತೆ ಕೊನೆಗೊಳ್ಳುವುದು ಹೀಗೆ:

ಸಿಕ್ಕಿತು! ಸಿಕ್ಕಿತು! 
ಆತ್ಮವು ಸಿಕ್ಕಿತು
ಕಿಟ್ಟೆಲ ಕೋಶದ ನೂರಾ ಐವತ್‌
ಮೂರನೆ ಪುಟದಲ್ಲಿ
ಹರಿ ಓಂ ಹರ ಓಂ ಹರಿಹರ ಓಂ ಸತ್‌
ಆತ್ಮವು ಇನ್ನೆಲ್ಲಿ? 
ಹಳಬರು ಹೇಳಿದ 
ಆತ್ಮವು ಇನ್ನೆಲ್ಲಿ?
   -ವಿ. ಜಿ. ಭಟ್ಟ, “ಆತ್ಮಶೋಧನೆ’

ಇದೊಂದು ನಿಬ್ಬೆರಗಾಗಿಸುವ ಹಾಗೂ ಆಸ್ತಿಕರನ್ನು ಕೆರಳಿಸುವ ಹುಡುಕಾಟದ ಕೊನೆ! (ಕವಿ ಹೇಳಿದ್ದು ನಿಜವೋ ತಪ್ಪೋ ಎಂದು ನಾನು ಸ್ವತಃ ಕಿಟೆಲರ ಡಿಕ್ಷನರಿಯನ್ನು ತೆರೆದು ನೋಡಿದೆ: ಅಕ್ಷರಶಃ ನಿಜ, ನೂರಾ ಐವತ್‌ ಮೂರನೆಯ ಪುಟದಲ್ಲಿ!) ಹೊಸ ಕಾವ್ಯದಲ್ಲಲ್ಲದೆ ಇಂಥದೊಂದು ಕವಿತೆ ಬರುವುದು ಅಸಾಧ್ಯವಾಗಿತ್ತು. (ಆದರೆ ಮೇಲೆ ಉದ್ಧರಿಸಿದ ಶೇಕ್ಸ್‌ ಪಿಯರ್‌ನ ಸಾಲುಗಳನ್ನು ಗಮನಿಸಿ: ಅವನು “ಸೋಲ್‌’ ಎಂಬ ಪದವನ್ನು ದ್ವಂದ್ವಾರ್ಥದಲ್ಲಿ ಬಳಸಲು ಹಿಂಜರಿಯುವುದಿಲ್ಲ! ಇದು ತಾನು ಯಾಕೆ ನರ್ತಿಸಲಾರೆ ಎನ್ನುವುದಕ್ಕೆ ರೋಮಿಯೋ ಚತುರತೆಯಿಂದ ನೀಡುವ ಕಾರಣ: ನನ್ನ ಆತ್ಮ / ಪಾದರಕ್ಷೆಯ ತಳ ಸೀಸದಂತೆ ಭಾರವಾಗಿದೆ ಎಂದು; sಟlಛಿ ಎಂದರೆ ಪಾದ ಅಥವಾ ಪಾದರಕ್ಷೆಯ ತಳಭಾಗ; ಖಟul ಎಂದರೆ ಆತ್ಮ; ಉಚ್ಚಾರಣೆಯಲ್ಲಿ ಎರಡೂ “ಸೋಲ್‌’. ಆದರೆ ಆತ್ಮವನ್ನು ನಿರಾಕರಿಸುವ ಇರಾದೆ ಶೇಕ್ಸ್‌ಪಿಯರಿಗೆ ಇಲ್ಲ.) ಜಿ. ಎಸ್‌. ಶಿವರುದ್ರಪ್ಪನವರ ಎÇÉೋ ಹುಡುಕಿದೆ ಇಲ್ಲದ ದೇವರ | ಕಲ್ಲು ಮಣ್ಣುಗಳ ಗುಡಿಯೊಳಗೆ ಎಂಬ ಹಾಡು ಇದಕ್ಕೆ ಸಮೀಪವೆನಿಸಿದರೆ ಆಶ್ಚರ್ಯವಿಲ್ಲ, ಎರಡೂ ರಚನೆಗಳು ಸನಾತನ ಕಲ್ಪನೆಗಳನ್ನು ಅಲ್ಲಗಳೆಯುತ್ತವೆ; ಆದರೆ, ಮನೋಭೂಮಿಕೆಯಲ್ಲಿ ವ್ಯತ್ಯಾಸವಿರುವುದು ಸ್ಪಷ್ಟವೇ ಇದೆ.

ದೇವರು ಗುಡಿಯೊಳಗಿಲ್ಲ, ಹೊರಗಿ¨ªಾನೆ, ಎÇÉೆಡೆ ಇ¨ªಾನೆ ಎನ್ನುವುದರಲ್ಲಿ ಹೊಸತೇನೂ ಇಲ್ಲ-ಶಿವರುದ್ರಪ್ಪನವರು ಹೇಳಿದ ರೀತಿ ಮಾತ್ರ ತುಂಬಾ ಸೊಗಸಿನದು; ಆದರೆ ಆತ್ಮವು ನಿಘಂಟಿನೊಳಗೆ ಇದೆ, ಹಾಗೂ ಅಲ್ಲಿಯಷ್ಟೇ ಇರುವುದು ಎನ್ನುವುದು ಬಹು ದೊಡ್ಡ ನಿರಾಕರಣೆಯಾಗುತ್ತದೆ. ಶಿವರುದ್ರಪ್ಪನವರ ನಿರಾಕರಣೆಯಲ್ಲೂ ಸಮರ್ಪಣಾಭಾವವಿದೆ, ಭಟ್ಟರ ನಿರಾಕರಣೆಯಲ್ಲಿರುವುದು ವ್ಯಂಗ್ಯ. 

    ಬಟ್ರೆìಂಡ್‌ ರಸೆಲ್‌ನದೊಂದು ಚಿಕ್ಕ ಲೇಖನವಿದೆ: ಆತ್ಮವೆಂದರೇನು? (‘What is th soul?’, 1928) ರಸೆಲ್‌ ಹೇಳುತ್ತಾನೆ: “One of the most painful circumstances of recent advances in science is that each one makes us know less than we thought we did. When I was young we all knew, or thought we knew, that a man consists of a soul and a body; that the body is in time and space, but the soul is in time only. Whether the soul survives death was a matter as to which opinions might differ, but that there is a soul was thought to be indubitable.”   ಆತ್ಮವೆಂದರೆ ಏನು, ಅದು ಇದೆಯೋ ಇಲ್ಲವೋ ಎನ್ನುವುದರ ಬಗ್ಗೆ ಅವನು ನೇರವಾಗಿ ಏನೂ ಹೇಳುವುದಿಲ್ಲ. ಆದರೆ ಸತ್ತ ಮೇಲೂ ಉಳಿಯುವ ಆತ್ಮದ ಅಸಾಧ್ಯತೆಯ ಕುರಿತು ಸೂಚಿಸುತ್ತಾನೆ. ಆತ್ಮದ ಬದಲು ಮನಸ್ಸು ಎಂಬ ಪದವನ್ನು ಪರ್ಯಾಯವಾಗಿ ಬಳಸುತ್ತಾನೆ; ಯಾಕೆಂದರೆ ರಸೆಲನ ಪ್ರಕಾರ, ಆತ್ಮವು ಮನಸ್ಸಿನ ಒಂದು ಭಾಗ. ಸತ್ತ ಮನುಷ್ಯನಿಗೆ ನೆನಪುಗಳು ಇರುವುದಿಲ್ಲ, ಯಾಕೆಂದರೆ ನೆನಪುಗಳು ಮೆದುಳಿನ ಪ್ರಕ್ರಿಯೆ. ಹೀಗೆ ಮನುಷ್ಯ ಸತ್ತ ಮೇಲೆ ಅವನ ಆತ್ಮ (ಅಥವಾ ಈ ಪದದಿಂದ ನಾವು ಉದ್ದೇಶಿಸುವ ಸಂಗತಿ) ಇರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಆಧುನಿಕ ವಿಜ್ಞಾನದೆದುರು ಪರಂಪರಾಗತ ಅರ್ಥದ ಆತ್ಮ ಮಾಯವಾಗುತ್ತದೆ.

    ವಿದ್ಯುತ್ತಿನೆದುರು ದೆವ್ವಗಳ ಸಂಖ್ಯೆ ಗಣನೀಯವಾಗಿ ಇಳಿದಿರುವಂತೆ, ಆಧುನಿಕ ವಿಜ್ಞಾನದೆದುರು ನಮ್ಮ ಹಲವಾರು ಪ್ರಾಕ್ತನ ಕಲ್ಪನೆಗಳು ಹೊರಟುಹೋಗುತ್ತ ಇವೆ. ದೆವ್ವಗಳು ಯಾಕೆ ಕತ್ತಲÇÉೇ ಓಡಾಡಿಕೊಂಡಿರುತ್ತವೆ, ಯಾಕೆ ವಿದ್ಯಾಭ್ಯಾಸವಿಲ್ಲದ ಮುಗ್ಧರನ್ನೇ ಬಾಧಿಸುತ್ತವೆ ಎಂದು ಯೋಚಿಸಿದರೆ ಗೊತ್ತಾಗುತ್ತದೆ ಆಧಾರವಿಲ್ಲದ ಆತ್ಮ, ಜೀವಾತ್ಮ, ಪರಮಾತ್ಮ, ಭೂತಾತ್ಮ ಮುಂತಾದ ಪರಿಕಲ್ಪನೆಗಳು ಕೂಡ ಇಂಥ ಯುಗದÇÉೇ ಹುಟ್ಟಿಬಂದವು. ಜ್ಞಾನದ ಬೆಳಕು ಬಿ¨ªಾಗ ಅವು ಏನಾಗುತ್ತವೆ? ಬಹುಶಃ ಕಾಣಿಸದಾಗುತ್ತವೆ, ಅವಕ್ಕೆ ನಿಜಕ್ಕೂ ಅಸ್ತಿತ್ವವಿಲ್ಲ ಎನ್ನುವುದು ಗೊತ್ತಾಗುತ್ತದೆ, ಅಥವಾ ಪುನರ್‌ನಿರೂಪಣೆಗೆ ಒಳಗಾಗುತ್ತವೆ- ಸೂರ್ಯಗ್ರಹಣ, ಚಂದ್ರಗ್ರಹಣಗಳು ಒಳಗಾದಂತೆ. ಜಗತ್ತು ಬದಲಾಗುತ್ತ ಇರುತ್ತದೆ; ಆದರೆ ನಮ್ಮ ಭಾಷೆ, ಆಚಾರ-ವಿಚಾರಗಳು ಅಷ್ಟು ಬೇಗನೆ ಬದಲಾಗುವುದಿಲ್ಲ. ಭಾಷೆ ಹುಟ್ಟಿಕೊಂಡದ್ದು ವಿದ್ಯಮಾನೀಯ (ಟಜಛಿnಟಞಛಿnಚl)  ಜಗತ್ತಿನಲ್ಲಿ ವ್ಯವಹರಿಸುವುದಕ್ಕೆಂದು. ಲೋಕದ ಕುರಿತಾದ ನಮ್ಮ ನಂಬಿಕೆಗಳು ಬದಲಾದರೂ ಅದಕ್ಕೆ ಅನುಸಾರವಾಗಿ ನಮ್ಮ ವಿದ್ಯಮಾನೀಯ ಜೀವನ ಬದಲಾಗಿಲ್ಲ; ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ ಎನ್ನುತ್ತೇವೆ, ಸೂರ್ಯ ಹಾಗೇನೂ ಮಾಡುವುದಿಲ್ಲ ಎಂದು ಗೊತ್ತಿದ್ದರೂ; ಯಾಕೆಂದರೆ ಸೂರ್ಯ ಹುಟ್ಟುವುದು, ಮುಳುಗುವುದು ಎಂಬ ಪದಗಳು ನಮಗೆ ದೈನಂದಿನ ವ್ಯವಹಾರಕ್ಕೆ ಇಂದಿಗೂ ಬೇಕಾಗಿವೆ. ಅದೇ ರೀತಿ ಆತ್ಮ ಕೂಡ ಇತರ ಪದಗಳೊಂದಿಗೆ ಬೆರೆತು ನಮ್ಮ ಭಾಷೆಯ ಒಂದು ಅಂಗವೇ ಆಗಿದೆ. ಉದಾಹರಣೆಗೆ: ಆತ್ಮಚರಿತ್ರೆ, ಆತ್ಮಸಾಕ್ಷಿ, ಆತ್ಮಹತ್ಯೆ, ಆತ್ಮಾಹುತಿ, ಆತ್ಮವಂಚನೆ, ಆತ್ಮಜ್ಞಾನ, ಆತ್ಮಗ್ಲಾನಿ, ಆತ್ಮಸಂತೋಷ, ಆತ್ಮನಿವೇದನೆ, ಆತ್ಮಾವಲೋಕನ, ಮಹಾತ್ಮ, ಪುಣ್ಯಾತ್ಮ, ದುರಾತ್ಮ, ಹುತಾತ್ಮ, ಪ್ರೇತಾತ್ಮ, ಅಂತರಾತ್ಮ ಎಂದು ಮುಂತಾಗಿ; ಇÇÉೆಲ್ಲ ಆತ್ಮಕ್ಕೆ ಪ್ರಾಣ, ಮನಸ್ಸು, ಜೀವನ, ಸ್ವಂತ, ಆಂತರ್ಯ ಎಂಬಿತ್ಯಾದಿ ಬೇರೆ ಬೇರೆ ಅರ್ಥಗಳಿವೆ. ಆತ್ಮದಲ್ಲಿ ನಂಬಿಕೆಯಿಲ್ಲದವರೂ ಕೂಡ ಮೃತರ ಆತ್ಮಕ್ಕೆ ಶಾಂತಿಯಿರಲಿ! ಎಂದು ಸಂತಾಪಸೂಚಕ ಸಭೆಗಳಲ್ಲಿ ಅನ್ನುವುದಿದೆ. ಇನ್ನು ಹಿಂದೂ, ಕ್ರಿಶ್ಚಿಯನ್‌, ಇಸ್ಲಾಮ್‌ ಧರ್ಮಗಳಲ್ಲಿ ಆತ್ಮವೆನ್ನುವುದು ಒಂದು ಪ್ರಧಾನ ಘಟಕ. ಆಶ್ಚರ್ಯವೆಂದರೆ, ದೇವರ ಕುರಿತು ಮೌನ ತಾಳಿದ ಜೈನಿಸಂ, ಬುದ್ಧಿಸಂಗಳಲ್ಲಿ ಕೂಡ ಪುನರ್ಜನ್ಮದ ಕಲ್ಪನೆ ಢಾಳವಾಗಿ ಇದೆ: ಪುನರ್ಜನ್ಮವೆಂದರೆ ಮರಣಾನಂತರ ಆತ್ಮವೇ ಮತ್ತೂಮ್ಮೆ ಹುಟ್ಟಿಬರುವುದು. ಹೀಗಿರುತ್ತ ಆತ್ಮ ಕೇವಲ ಕಿಟೆಲ್‌ ನಿಘಂಟಿನಲ್ಲಿ ಇದೆ ಎಂದು ವಿ. ಜಿ. ಭಟ್ಟರು ಹೇಳಿದ್ದು ರೆØಟರಿಕ್‌ ಎಂದು ತಿಳಿದುಕೊಳ್ಳಬೇಕಾಗುತ್ತದೆ. 

    ಭಾರತದಂಥ ಜನಕೂಟದಲ್ಲಿ ಮತೀಯವಾಗಿ, ವರ್ಗೀಯವಾಗಿ, ಜಾತೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಲವು ಒಳಕೂಟಗಳಿವೆ: ಭೌತಿಕ ವಿಷಯಗಳಂತೆ, ಅತಿಭೌತಿಕ ವಿಷಯಗಳ ಕುರಿತಾಗಿಯೂ ಜನಕ್ಕೆ ವಿಭಿನ್ನ ನಂಬಿಕೆಗಳಿರುತ್ತವೆ. ಆದ್ದರಿಂದ ಆತ್ಮ, ಪರಮಾತ್ಮ ಮುಂತಾದವುಗಳ ಬಗ್ಗೆ ಎಲ್ಲರಿಗೂ ಒಂದೇ ಅಭಿಪ್ರಾಯ ಇರುತ್ತದೆ ಎನ್ನುವುದಕ್ಕಾಗದು. ಒಂದೇ ಮನೆಯಲ್ಲಿನ ಜನರಲ್ಲೂ ಬೇರೆ ಬೇರೆ ಯೋಚನೆಗಳಿರುವುದು ಸಾಧ್ಯ. ಈ ಭಿನ್ನತೆ ಬಹುಶಃ ಎಂದೂ ಇಲ್ಲದಾಗುವುದಿಲ್ಲ. ಇನ್ನು ವಿಜ್ಞಾನ ಯಾವತ್ತೂ ಸಾಮಾನ್ಯ ಜ್ಞಾನಕ್ಕಿಂತ ಮುಂದಿರುತ್ತದೆ. ಅದಕ್ಕೇ ಅದು ವಿಜ್ಞಾನ. ವಿಜ್ಞಾನವು ಸಾಮಾನ್ಯ ಜ್ಞಾನವನ್ನು ಹೆಚ್ಚೆಚ್ಚು ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದರೂ, ಇವೆರಡರ ನಡುವೆ ಅಂತರ ಇದ್ದೇ ಇರುತ್ತದೆ. ಅದಲ್ಲದಿದ್ದರೆ ಎಲ್ಲರೂ ವಿಜ್ಞಾನಿಗಳಾಗಿ ಇರಬೇಕಾಗಿರುತ್ತದೆ. 

    ರಸೆಲ್‌ನ ಲೇಖನ ನಿಜಕ್ಕೂ ಆತ್ಮದ ಬಗ್ಗೆ ಅಲ್ಲ, ವಿಜ್ಞಾನದ ಬಗ್ಗೆ. ಅದೂ ಆ ಲೇಖನ ಬರೆಯುವ ವೇಳೆಗಾಗಲೇ ವಿಜ್ಞಾನವಲಯದಲ್ಲಿ ದಿಗ್ಭ್ರಮೆಯೆಬ್ಬಿಸಿದ ಕ್ವಾಂಟಮ್‌ ಮೆಕಾನಿಕ್ಸ್‌ ಬಗ್ಗೆ. ಆದರೆ ರಸೆಲ್‌ ಇದನ್ನು ಸಾಮಾನ್ಯ ಓದುಗರಿಗೋಸ್ಕರ ಬರೆದುದು; ಆದ್ದರಿಂದ ಯಾವುದೇ ತಾಂತ್ರಿಕ ಪರಿಭಾಷೆಯನ್ನು ಅವನು ಬಳಸುವುದಿಲ್ಲ. ಬದಲು ಘಟನೆಗಳು (Events)  ಎಂಬ ಪದವನ್ನು ಬಳಸುತ್ತಾನೆ: ಲೋಕದಲ್ಲಿ ಭೌತಿಕವಾಗಲಿ (material) ಅತಿಭೌತಿಕವಾಗಲಿ (metaphysical)  ಇಲ್ಲ, ಇರುವುದು ಘಟನೆಗಳು ಮಾತ್ರ ಎನ್ನುತ್ತಾನೆ. ವಸ್ತುಗಳಾಗಿ ನಾವು ಗುರುತಿಸುವುದು ಘಟನಾವಳಿಗಳನ್ನು; ಹೀಗೆ ಗುರುತಿಸುವುದು ಒಂದು ಸುಲಭೋಪಾಯ ಅಷ್ಟೆ . ಯಾವುದು ಯಾವುದನ್ನೂ ಮುಟ್ಟುವುದಿಲ್ಲ, ದೂರ ಸರಿಯುವುದೂ ಇಲ್ಲ. ಇರುವುದು ಆಕರ್ಷಣೆ ಮತ್ತು ವಿಕರ್ಷಣೆಗಳು ಮಾತ್ರ. ಇಂಥ ಮಾತನ್ನು ಜನಸಾಮಾನ್ಯರು ಅರಗಿಸಿಕೊಳ್ಳುವುದು ಕಷ್ಟ. ಕೆಲವೊಮ್ಮೆ ವಿಜ್ಞಾನವು ಅಧ್ಯಾತ್ಮಕ್ಕಿಂತಲೂ ನಿಗೂಢವಾಗಿ ತೋರುತ್ತದೆ. ಆದರೆ, ಮುಂದೊಂದು ಕಾಲದಲ್ಲಿ ಬಹುಶಃ ಅದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ವಿದ್ಯುತ್ತನ್ನು ತಕ್ಕಮಟ್ಟಿಗೆ ನಾವು ಅರ್ಥಮಾಡಿಕೊಂಡ ಹಾಗೆ. ಆದರೆ ಅಷ್ಟರಲ್ಲಿ ವಿಜ್ಞಾನ ಇನ್ನೂ ಮುಂದೆ ಹೋಗಿರುತ್ತದೆ ಮತ್ತು ಇನ್ನಷ್ಟು ವಿಸ್ಮಯಕಾರಿಯಾಗಿರುತ್ತದೆ. 

– ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.