ಮನೆಗೊಂದು ಕೈತೋಟ
Team Udayavani, Apr 14, 2017, 3:50 AM IST
ಮನೆಯ ಅಂಗಳದಲ್ಲೊಂದು ಪುಟ್ಟ ಕೈತೋಟ ಇದ್ದರೆ ಮನಸ್ಸಿಗೆ ಬಹಳ ಆನಂದ ನೀಡುತ್ತದೆ. ಮನೆಯ ಅಂಗಳದ ತೋಟದಲ್ಲಿ ನೆಟ್ಟ ಹೂ ಗಿಡಗಳು ಸಮೃದ್ಧವಾಗಿ ಬೆಳೆದು ಬಗೆ ಬಗೆಯ ಹೂಗಳಿಂದ ಕಂಗೊಳಿಸುವಂತೆ ಮಾಡಲು ಕೆಲವು ಸಲಹೆಗಳು:
.ಅಕ್ಕಿ ತೊಳೆದ ನೀರು, ತರಕಾರಿ ತೊಳೆದ ನೀರು, ಮಜ್ಜಿಗೆಯ ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ.
.ಗಿಡಗಳ ಉದುರಿದ ಎಲೆಗಳನ್ನು , ಹಣ್ಣೆಲೆಗಳನ್ನು ಪುನಃ ಅದೇ ಕುಂಡಗಳಲ್ಲಿ ಹಾಕುವುದರಿಂದ, ಅದು ಗೊಬ್ಬರವಾಗಲು ಸಹಾಯಕವಾಗುತ್ತದೆ.
.ಹೂಕುಂಡಗಳ ತಳದಲ್ಲಿ ಇರಿಸಿದ ಪ್ಲೇಟ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಬೆಳೆದು ವಿವಿಧ ರೋಗಗಳು ಹರಡುತ್ತವೆ.
.ಚಹಾ ಸೋಸಿದ ಬಳಿಕ ಚಹಾದ ಚರಟವನ್ನು ಗುಲಾಬಿ ಗಿಡಗಳು ತಳದಲ್ಲಿ ಹಾಕಿದರೆ, ಗುಲಾಬಿ ಗಿಡ ಸೊಂಪಾಗಿ ಬೆಳೆದು ಬೇಗನೇ ಹೂಬಿಡುತ್ತದೆ.
.ಪಾಟ್‌ಗಳಲ್ಲಿನ ಮಣ್ಣನ್ನು ಆಗಾಗ ಬದಲಿಸುತ್ತಿದ್ದರೆ ಹೂಗಿಡ ಗಳು ಚೆನ್ನಾಗಿ ಬೆಳೆಯುತ್ತವೆ. ಅಲ್ಲದೆ ಹೂಗಿಡಗಳನ್ನು ನೆಡುವಾಗ, ಪಾಟ್‌ನ ಕೆಳಗಡೆ ಕಾಫಿ ಫಿಲ್ಟರ್ ಇರಿಸಬೇಕು. ಇದರಿಂದ ಅಧಿಕ ನೀರು ಹರಿದುಹೋಗುತ್ತದೆ. ಆದರೆ ಮಣ್ಣು ಹರಿದು ಹೋಗುವುದಿಲ್ಲ.
.ಗುಲಾಬಿ ಗಿಡಗಳ ಅಡಿಯಲ್ಲಿ ಒಂದೆಲಗದ ಗಿಡ ನೆಟ್ಟರೆ ಔಷಧೀಯವಾಗಿಯೂ ಉಪಯುಕ್ತ. ಚಟ್ನಿ ತಂಬುಳಿಗಳಿಗಾಗಿ ಆಹಾರಖಾದ್ಯಗಳಿಗೂ ಬಳಸಬಹುದು. ಜೊತೆಗೆ ಒಂದೆಲಗ ನೆಟ್ಟರೆ ಕಳೆಯ ಗಿಡಗಳು ಬೆಳೆಯುವುದಿಲ್ಲ.
.ಬಿಳಿ ವಿನೆಗರ್ ಸ್ಪ್ರೆà ಮಾಡಿದರೆ ಗಾರ್ಡನ್‌ನಲ್ಲಿರುವ ಕಳೆಯ ಗಿಡಗಳನ್ನು ನಾಶಪಡಿಸಬಹುದು.
ಸ್ವಾತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.