ಜನವರಿ 30- ಗಾಂಧಿ ಪುಣ್ಯತಿಥಿ

Team Udayavani, Jan 28, 2018, 11:40 AM IST

Vaidehi11.jpg

ಮೂರು ರೇಖೆಯಲಿ ಚಿತ್ರ ಬಿಡಿಸಿದರೂ  ಗಾಂಧಿ ಮೂಡಲಿಲ್ಲ ಮೂರು ಮುನ್ನೂರು ಶಬ್ದ ಬರೆದರೂ ಆತನು ಸಿಗಲಿಲ್ಲ  ಮೂರು ಮಂಗಗಳ ಆಡಿ ತೋರಿದರು  ಆತ ಕಾಣಲಿಲ್ಲ

ಮೂರು ಬಣ್ಣಗಳ ಬಳಿದು ತಂದರು ನಕ್ಕಂತಾಯಿತೆ ಉದ್ದ?  ಟೊಪ್ಪಿ ತೊಟ್ಟರೂ ಕಳಚಿ ಇಟ್ಟರೂ  ಆತನೆಲ್ಲಿ ಇದ್ದ?

ಸರ್ತ ಕುಳಿತರು ಚರಕ ಸುತ್ತಿದರೂ ಮಂದಿ ಮಾಗಧವಂದಿ ಖಾದಿ ತೊಟ್ಟರೂ  ಭಾಷಣ ಮಳೆಯಲಿ ತೋಯಿಸಿ ನೆನೆದರೂ  ತಾತನ ಸುಳಿವಿಲ್ಲ. ಉಪವಾಸಕೆ ಹಾ! ಅಪಹಾಸವೆ ಗತಿ ಗಾಂಧಿ ದಕ್ಕಲಿಲ್ಲ  ರಾಮ ರಾಮ ಹೇ ರಾಮ ಪ್ರಾರ್ಥನಾ  ಮಂತ್ರಕುದುರಲಿಲ್ಲ ಯಂತ್ರ ತಂತ್ರಕೂ ಕಂಪ್ಯೂಟರಿಗೂ ವೈಷ್ಣವ ಜನತೋ ಪತಿತ ಪಾವನಕೂ ಭಜನೆ ಹಾರ್ಮನೀ ತಾಳ ತಂಬೂರಿಗೂ ಸಿಗುವ ಸಿದ್ಧನಲ್ಲ 

ಬೋಳುತಲೆ ಮತ್ತು ಬೊಚ್ಚುಬಾಯಿಯೂ ತುಂಡು ಉಡುಗೆ ಜೊತೆ ಮೇಲು ಹೊದಿಕೆಯೂ ದಂಡ ಕನ್ನಡಕ ಧಾಪು ನಡಿಗೆಯೂ ಆಚೆಗೀಚೆಗಿನ ಅನುಯಾಯಿನಿಯರು ನಾಡಿನುತ್ಸವದಿ ಸ್ತಬ್ದ ಚಲಿಸಿದರೂ ಗಾಂಧಿ ನಾಡಿ ಇಲ್ಲ. 

ಹುಡುಕುತ ಹುಡುಕುತ ದೇಶ ತಿರುಗಿದರೂ  ಸಂಶೋಧಿಸುತಾ ಲೋಕ ಅಲೆದರೂ ಆತನು ಸಿಗಲಿಲ್ಲ. 

ನಮ್ಮನೆಯಲ್ಲೇ  ನಮ್ಮೊಳಗಿರುವವ ಆ ಮಹಾತಮ ಜೀವ  ಕದ ತೆರೆದರೆ ಸೈ ಬಂದೇ ಬರುವವ  ಗರುವವೆ ಇಲ್ಲದವ ಕರೆಗೋ ಕೊಡುವವ ಕಂಬನಿ ತಿಳಿವವ  ಎಂದೆಲ್ಲಾ ಖ್ಯಾತನವ  ಎಲ್ಲಿ ಕರಗಿ ಹೋದ?

ಮರುಗಿದನೇ ಅವ ಕರಗಿದನೇ  ಒರಗಿದನೇ ಅವ ಶಾಶ್ವತದಲ್ಲಿ ನಮ್ಮೊಡಲಿನ ಒಳಸಂಚಿನಲಿ? ಒಳಗಿದ್ದೇ ಒಳ ಬೇಗೆಯಲಿ?   ಸರಳ ಕಾಣುವ ಸುಲಭ ಕಾಣುವ ಸರಳ ಸುಲಭವಲ್ಲ ಸರಳ ಮಾತ್ರನೇ? ಮರುಳನು ಗಾಂಧಿ  ಮರುಳು ಸರಳವಲ್ಲ  ಮರುಳೆ,  ಗಾಂಧಿ ಸರಳನಲ್ಲ 

ವೈದೇಹಿ 

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.