ಜಪಾನಿನ ಕತೆ: ಕನಸಿನ ಮರ


Team Udayavani, Dec 30, 2018, 12:30 AM IST

90.jpg

ಒಂದು ಹಳ್ಳಿಯಲ್ಲಿ ಒಬ್ಬ ಮುದುಕಿ ಇದ್ದಳು. ತುಂಬ ಕೆಟ್ಟ ಗುಣದ ವಳು. ಯಾರಿಗೂ ಒಳ್ಳೆಯ ಮಾತು ಹೇಳುವವಳಲ್ಲ. ಉಪಕಾರ ಮಾಡುವವಳಲ್ಲ. ಅವಳು ಏನು ಕೇಳಿದರೂ ಬೇರೆಯವರು ಕೊಡಬೇಕು. ಇಲ್ಲ ಎಂದರೆ ಜಗಳ ಮಾಡುವುದು ಅವಳ ಸ್ವಭಾವ. ಮುದುಕಿಯ ವರ್ತನೆಯಿಂದ ಹಳ್ಳಿ ಜನ ಬೇಸತ್ತು ಹೋಗಿದ್ದರು. ಆದರೆ, ಅವಳನ್ನು ವಿರೋಧಿಸುವ ಧೈರ್ಯ ಯಾರಿಗೂ ಇರಲಿಲ್ಲ. ಮುದುಕಿ ಬಾಯಿ ತೆರೆದರೆ ಜನ ಹೆದರಿ ಓಡುತ್ತಿದ್ದರು. 
ಆ ದೇಶದ ಯುವರಾಜನಿಗೆ ಮದುವೆಯ ವಯಸ್ಸಾಗಿತ್ತು. ತನ್ನನ್ನು ಮದುವೆಯಾಗುವ ಹುಡುಗಿ ರಾಜಕುಮಾರಿಯಾಗಬೇಕಿಲ್ಲ, ಹಳ್ಳಿಯ ರೈತನ ಮಗಳಾದರೂ ಅಡ್ಡಿಯಿಲ್ಲ. ಅವಳು ರೂಪವತಿಯಾಗಿರಬೇಕು, ಗುಣಸಂಪನ್ನೆಯಾಗಿರಬೇಕು ಎಂಬುದು ಅವನ ಆಶಯ. ಹಾಗಿರುವ ವಳನ್ನು ಹುಡುಕಿಕೊಂಡು ಬರಬೇಕೆಂದು ಸೇವಕರನ್ನು ಎಲ್ಲ ಕಡೆಗೂ ಕಳುಹಿಸಿದ್ದ. ಅವರು ಅಂಥವಳನ್ನು ಅರಸಿಕೊಂಡು ಹಳ್ಳಿಗೆ ಬಂದರು. ಅಲ್ಲಿ ರೇಷ್ಮೆ ನೂಲಿನಿಂದ ಬಟ್ಟೆ ನೇಯುತ್ತಿದ್ದ ನಿಕಿಷಾ ಎಂಬ ಯುವತಿಯಿದ್ದಳು. ಚಿಕ್ಕಂದಿನಲ್ಲೇ ತಾಯಿ, ತಂದೆಯನ್ನು ಕಳೆದುಕೊಂಡಿದ್ದ ಅವಳೆಂದರೆ ಹಳ್ಳಿಯ ಎಲ್ಲರಿಗೂ ಪ್ರೀತಿ ಇತ್ತು. ಸೇವಕರು ಯುವತಿಯನ್ನು ನೋಡಿದರು. ಅವಳಷ್ಟು ರೂಪವತಿ ದೇಶದಲ್ಲಿಯೇ ಇನ್ನೊಬ್ಬರಿಲ್ಲ ಅನಿಸಿತು ಅವರಿಗೆ. ಮಾತನಾಡಿಸಿದರು. ಅವಳು ಪ್ರೀತಿಯಿಂದ ನೀಡಿದ ಅಕ್ಕಿಯ ಖಾದ್ಯವನ್ನು ಸವಿದರು. ಎಲ್ಲ ಬಗೆಯಿಂದಲೂ ಅವಳನ್ನು ಪರೀಕ್ಷಿಸಿ ಯುವರಾಜನಿಗೆ ಹೆಂಡತಿಯಾಗಲು ಇವಳು ತಕ್ಕವಳು ಎಂದು ನಿರ್ಧರಿಸಿದರು. “”ನಿನಗೆ ರಾಜಕುಮಾರನ ಕೈ ಹಿಡಿಯಲು ಇಷ್ಟವಿದೆಯೇ?” ಎಂದು ಕೇಳಿದರು. ನಿಕಿಷಾ ತಲೆತಗ್ಗಿಸಿ, “”ನಾನು ಬಡವರ ಮನೆಯವಳು. ಯುವರಾಜರು ಒಪ್ಪಿಕೊಳ್ಳುವುದಾದರೆ ನನ್ನ ಅಭ್ಯಂತರವಿಲ್ಲ” ಎಂದು ಹೇಳಿದಳು. ಕೆಲವೇ ದಿನಗಳಲ್ಲಿ ಅವಳ ಮನೆಗೆ ಯುವರಾಜನು ಬರುತ್ತಾನೆಂದು ಹೇಳಿ ಸೇವಕರು ಹೊರಟುಹೋದರು.

ಮುದುಕಿಗೆ ಈ ವಿಷಯ ತಿಳಿಯಿತು. ನೇರವಾಗಿ ನಿಕಿಷಾ ಮನೆಗೆ ಬಂದಳು. “”ಸುದ್ದಿ ಕೇಳಿದೆ, ನೀನು ಯುವರಾಜನ ಹೆಂಡತಿ ಯಾಗುವೆಯಂತೆ! ಅದು ಹೇಗೆ ಸಾಧ್ಯ? ಅವನಿಗೆ ನೀನು ಮುಖ ತೋರಿಸು. ಆದರೆ ಕುದುರೆಯ ಮೇಲೆ ಕುಳಿತು ವಧುವಾಗಿ ಅವನ ಬಳಿಗೆ ಹೋಗುವವಳು ನಾನು. ಅವನು ನನ್ನನ್ನು ಒಪ್ಪಿಕೊಳ್ಳದಿದ್ದರೆ ಅವನನ್ನು ಕೊಂದುಹಾಕುತ್ತೇನೆ” ಎಂದು ಹೆದರಿಸಿದಳು. ಯುವರಾಜ ನಿಕಿಷಾಳನ್ನು ನೋಡಲು ಬಂದ. ಅವಳ ರೂಪಾತಿಶಯ, ಗುಣ-ನಡತೆಗಳಿಂದ ಅವನಿಗೆ ಆನಂದವಾಯಿತು. ಆದರೆ ನಿಕಿಷಾಳ ಮುಖದಲ್ಲಿ ಸಂತೋಷ ಇರಲಿಲ್ಲ. “”ಯಾಕೆ ಸೊರಗಿದ್ದೀ? ನಿನಗೆ ಅರಮನೆಯ ಸಂಬಂಧ ಇಷ್ಟವಿಲ್ಲವೆ?’ ಎಂದು ಕೇಳಿದ.

“”ಅರಮನೆಯ ಸಂಬಂಧ ನಿರಾಕರಿಸಲು ನಾನು ಹುಂಬಳಲ್ಲ. ಆದರೆ ಹಳ್ಳಿಯಲ್ಲಿದ್ದಾಳಲ್ಲ, ಕೆಟ್ಟ ಸ್ವಭಾವದ ಮುದುಕಿ. ಅವಳಿಗೆ ಎಲ್ಲರೂ ಅಂಜುತ್ತಾರೆ. ತಾನು ಇಷ್ಟಪಟ್ಟುದೆಲ್ಲವೂ ತನಗೇ ಬೇಕು ಎಂದು ಹೇಳಿ ಯಾವ ರೀತಿಯಿಂದಾದರೂ ಪಡೆಯುತ್ತಾಳೆ. ಈಗ ನನ್ನ ಸರದಿ. ನನ್ನ ಬದಲಿಗೆ ಅರಮನೆಗೆ ಬಂದು ನಿನ್ನ ಕೈ ಹಿಡಿಯುವವಳು ತಾನೇ ಎಂದು ಅವಳು ಹೇಳುತ್ತಿದ್ದಾಳೆ” ಎಂದಳು ನಿಕಿಷಾ.     

ಯುವರಾಜ ನಕ್ಕುಬಿಟ್ಟ. “”ಇದಕ್ಕೆ ಚಿಂತಿಸಿದರೆ ಹೇಗೆ? ಅವಳಿಂದ ಬಂದ ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ. ಇನ್ನೊಬ್ಬರ ವಸ್ತುಗಳ ಮೇಲೆ ಆಶೆಪಡುವವರಿಗೆ ಎಷ್ಟು ಸಿಕ್ಕಿದರೂ ತೃಪ್ತಿಯಿರುವುದಿಲ್ಲ. ಅವರ ಆಶೆಗಳಿಂದಲೇ ನಾಶ ಹೊಂದುತ್ತಾರೆ. ಈ ಕೆಲಸ ನಾನು ಹೇಗೆ ಮಾಡುತ್ತೇನೆ, ನೋಡು” ಎಂದು ಹೇಳಿ ಯುವರಾಜ ನೇರವಾಗಿ ಮುದುಕಿಯ ಮನೆಗೆ ಬಂದ. “”ನಿಕಿಷಾ ನಿನ್ನನ್ನು ಕಳುಹಿಸಿದಳು ತಾನೆ? ಅವಳ ಬದಲು ನಿನಗೆ ರಾಣಿಯಾಗುವವಳು ನಾನು, ಗೊತ್ತಿದೆಯೆ?” ಎಂದು ದರ್ಪದಿಂದ ಕೇಳಿದಳು ಮುದುಕಿ.

“”ಹೌದು, ನಿಜವಾಗಿಯೂ ನಾನು ನಿನ್ನನ್ನು ನೋಡಲು ಬಂದಿದ್ದೇನೆ. ನೀನು ನನ್ನ ರಾಣಿಯಾಗಲು ಏನೂ ತೊಂದರೆಯಿಲ್ಲ. ಆದರೆ ನಿನ್ನ ಮೈಯಲ್ಲಿ ಮೂಳೆ, ಚಕ್ಕಳಗಳು ಮಾತ್ರ ಇವೆ. ಹೀಗಿರಬಾರದು, ನಿಕಿಷಾಳ ಹಾಗೆಯೇ ಚೆಲುವೆಯಾಗಬೇಕು. ಮೈತುಂಬ ಒಡವೆಗಳನ್ನು ಧರಿಸಿಕೊಂಡು ಬರಬೇಕು. ಹಾಗಿದ್ದರೆ ಮಾತ್ರ ನಮ್ಮ ವಿವಾಹ” ಎಂದು ಹೇಳಿದ ಯುವರಾಜ.

ಮುದುಕಿ ಸಿಟ್ಟಿಗೆದ್ದಳು. “”ಏನಿದು, ಇಷ್ಟು ವಯಸ್ಸಾಗಿರುವ ನಾನು ಯುವತಿಯಾಗಲು ಸಾಧ್ಯವೇ? ಕಬ್ಬಿಣದ ಕಡಗಗಳಿರುವ ನನ್ನಲ್ಲಿ ಚಿನ್ನದ ಒಡವೆಗಳು ಹೇಗೆ ಬರುತ್ತವೆ? ಸುಮ್ಮನೆ ತಲೆಹರಟೆ ಮಾಡಬೇಡ” ಎಂದು ಗದರಿದಳು.

“”ತಲೆಹರಟೆ ಅಲ್ಲ, ಮನಸ್ಸಿದ್ದರೆ ಮಾರ್ಗವಿದೆ. ದಟ್ಟ ಅರಣ್ಯದ ನಡುವೆ ಒಂದು ಮರವಿದೆ. ಕಾಡಿನಲ್ಲಿ ಈ ಜಾತಿಯ ಬೇರೆ ಮರಗಳು ಇಲ್ಲವಾದ ಕಾರಣ ಅದನ್ನು ಗುರುತಿಸುವುದು ಕಷ್ಟವೇನಲ್ಲ. ಅದು ಸಾಧಾರಣವಾದುದಲ್ಲ, ಅದ್ಭುತ ಶಕ್ತಿಯನ್ನು ಪಡೆದಿದೆ. ಅದರ ಕೆಳಗೆ ಅಮಾವಾಸ್ಯೆಯ ದಿನ ರಾತ್ರೆ ಬೆಳಗಾಗುವ ವರೆಗೂ ಕುಳಿತುಕೊಳ್ಳಬೇಕು. ತೂಕಡಿಸಬೇಕು. ಆಗ ಏನು ಬೇಕೋ ಕನಸು ಕಾಣಬೇಕು. ಕನಸು ಕಂಡ ಎಲ್ಲ ವಸ್ತು ದೊರಕುತ್ತದೆ. ಅಲ್ಲಿ ಒಂದು ರಾತ್ರೆ ಕಳೆದು ಬೇಕಾದುದನ್ನು ಪಡೆದುಕೊಂಡು ಬಾ. ಹಾಗಿದ್ದರೆ ನನಗೆ ತಕ್ಕ ರಾಣಿಯಾಗುವೆ’ ಎಂದು ಹೇಳಿದ ಯುವರಾಜ.

“”ಅಂತಹ ಶಕ್ತಿಯಿರುವ ಮರವಿದ್ದರೆ ನಾನು ಖಂಡಿತ ಅಲ್ಲಿಗೆ ಹೋಗಿ ನಿನಗೆ ಇಷ್ಟವಾಗುವ ಹಾಗೆ ಸುಂದರಿಯಾಗಿ ಬರುತ್ತೇನೆ’ ಎಂದು ಮುದುಕಿ ಒಪ್ಪಿಕೊಂಡಳು. ಕೆಲವು ದಿನಗಳಲ್ಲಿ ಅಮಾವಾಸ್ಯೆ ಬಂದಿತು. ಮುದುಕಿ ಮರವನ್ನು ಹುಡುಕಿಕೊಂಡು ದಟ್ಟ ಕಾಡಿಗೆ ಹೋದಳು. ವಿಶೇಷವಾಗಿರುವ ಮರವನ್ನು ಹುಡುಕುವುದು ಕಷ್ಟವಾಗಲಿಲ್ಲ. ತನಗೆ ಬೇಕಾದುದನ್ನೆಲ್ಲ ಪಡೆದು ಹಳ್ಳಿಯವರನ್ನು ಮೀರಿಸುವ ಶ್ರೀಮಂತಳಾಗ ಬೇಕು, ಮನ ಮೆಚ್ಚಿಸುವ ಸುಂದರಿಯಾಗಬೇಕು ಎಂದು ಯೋಚಿಸುತ್ತ ಮರದ ಕೆಳಗೆ ಕುಳಿತುಕೊಂಡಳು.

ಕುಳಿತಲ್ಲಿಯೇ ಮುದುಕಿಗೆ ತೂಕಡಿಕೆ ಆರಂಭವಾಯಿತು. ಆಗ ಮರದ ಮೇಲಿಂದ ಒಂದು ದೊಡ್ಡ ಹಣ್ಣು ತೊಟ್ಟು ಕಳಚಿ ನೇರ ವಾಗಿ ಅವಳ ನೆತ್ತಿಯ ಮೇಲೆ ಬಿದ್ದಿತು. ಮುದುಕಿ ಕನಸಿನಲ್ಲಿ, “”ಈ ಹಣ್ಣಿನ ಬದಲು ನನ್ನ ಮುಂದೆ ಒಂದು ಚೀಲ ತುಂಬ ಬೆಳ್ಳಿಯ ಗಟ್ಟಿಗಳು ಬಂದುಬೀಳಬಹುದಿತ್ತಲ್ಲವೆ?” ಎಂದು ಯೋಚಿಸುತ್ತಿದ್ದಳು. ಮರುಕ್ಷಣವೇ ಆಕಾಶದಿಂದ ಚೀಲ ತುಂಬ ಬೆಳ್ಳಿಯ ಗಟ್ಟಿಗಳು ಅವಳ ಬಳಿಯಲ್ಲಿ ಬಿದ್ದಿತು.

ಯುವರಾಜ ಹೇಳಿದ ಮಾತಿನ ಮೇಲೆ ಮುದುಕಿಗೆ ನಂಬಿಕೆ ಬಂತು. ಈ ಮರ ಕನಸು ಕಂಡುದನ್ನೆಲ್ಲ ಕೊಡುವುದರಲ್ಲಿ ಅನುಮಾನವಿಲ್ಲ ಎನಿಸಿತು. ಮತ್ತೆ ತೂಕಡಿಕೆ ಆರಂಭಿಸಿದಳು. ಆಗ ಒಂದು ತರಗೆಲೆ ಬಂದು ಅವಳ ಬೆನ್ನಿನ ಮೇಲೆ ಬಿದ್ದಿತು. ಮುದುಕಿ ಕನಸು ಕಾಣುತ್ತಿದ್ದಳು. “”ಒಣಗಿದ ಎಲೆಯ ಬದಲು ಬಂಗಾರದ ನಾಣ್ಯಗಳಿರುವ ಚೀಲ ಕೆಳಗೆ ಬೀಳಬಹುದಿತ್ತಲ್ಲವೆ?” ಎಂದು ಅವಳ ಯೋಚನೆ. ಕನಸಿನಿಂದ ಎಚ್ಚರ ವಾದ ಕೂಡಲೇ ಚೀಲವೊಂದು ಬಳಿಗೆ ಬಂದುಬಿದ್ದಿತು. ಅದನ್ನು ಮುಟ್ಟಿ ನೋಡಿ ನಾಣ್ಯಗಳಿರುವುದನ್ನು ಖಚಿತಪಡಿಸಿಕೊಂಡಳು.

ಚಿನ್ನ ಮತ್ತು ಬೆಳ್ಳಿ ಕೈ ಸೇರಿದ ಕೂಡಲೇ ಮುದುಕಿಗೆ ತಾನು ಸುಂದರಿ ಯಾಗಿ ಯುವರಾಜನ ಕೈ ಹಿಡಿಯಬೇಕೆಂಬ ವಿಷಯ ಮರೆತು ಹೋಯಿತು. ಬೆಳಗಾಗುವ ಮೊದಲು ಇದನ್ನೆಲ್ಲ ತೆಗೆದುಕೊಂಡು ಮನೆ ಸೇರಬೇಕು, ಯಾರ ಕಣ್ಣಿಗೂ ಬೀಳದ ಹಾಗೆ ಸುರಕ್ಷಿತವಾಗಿಡಬೇಕು. ಮುಂದಿನ ಅಮಾವಾಸ್ಯೆಗೆ ಮತ್ತೆ ಬಂದು ಬೇಕಾದುದನ್ನೆಲ್ಲ ಪಡೆಯ ಬೇಕು ಎಂದು ಯೋಚಿಸಿದಳು. ಮೆಲ್ಲಗೆ ಬೆಳ್ಳಿಯ ಗಟ್ಟಿಗಳಿರುವ ಚೀಲವನ್ನು ತಲೆಯ ಮೇಲಿಟ್ಟುಕೊಂಡಳು. ಬಂಗಾರದ ನಾಣ್ಯಗಳ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡಳು. ಮನೆಯ ದಾರಿ ಹಿಡಿಯಲು ಮುಂದಾದಳು. ಆಗ ತೂಕಡಿಕೆ ಬಂದಿತು.

ಆಗ ದೂರದಲ್ಲಿ ತೋಳವೊಂದು ಕೂಗುವ ಧ್ವನಿ ಕೇಳಿಸಿತು.ಮುದುಕಿ ಕನಸಿನಲ್ಲಿ ಭಯಗೊಂಡು, “”ತೋಳ ಈ ಕಡೆಗೆ ಬಂದು ನನ್ನ ಮೇಲೆ ಎರಗಿ ಕೊಂದುಬಿಟ್ಟರೆ?” ಎಂದು ನೆನೆದಳು. ಅವಳಿನ್ನೂ ಕನಸಿನ ಮರದ ಕೆಳಗೆ ಕುಳಿತುಕೊಂಡಿದ್ದ ಕಾರಣ ತೋಳ ಅವಳೆದುರಿಗೆ ಬಂದೇ ಬಿಟ್ಟಿತು. ಮುದುಕಿಯ ಮೈಮೇಲೆ ಹಾರಿ ಅವಳನ್ನು ಕೊಂದು ಹಾಕಿತು. ಮುದುಕಿಯ ಕಾಟದಿಂದ ಹಳ್ಳಿ ಮುಕ್ತವಾಯಿತು. ನಿಕಿಷಾ ಯುವರಾಜನ ಕೈಹಿಡಿದು ಅರಮನೆಯಲ್ಲಿ ಸುಖವಾಗಿದ್ದಳು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.