ಯಹೂದಿ ಕಥೆಗಳು
Team Udayavani, Jun 2, 2019, 6:00 AM IST
ನೀತಿಗೆ ತಕ್ಕ ಕತೆ
ಯಹೂದ್ಯರಲ್ಲಿ ರಬೈಗಳಿಗೆ ವಿಶೇಷ ಮಾನ್ಯತೆ. ರಬೈ ಅಥವಾ ಧರ್ಮಗುರುಗಳು ತಮ್ಮ ಸಮುದಾಯದ ಸದಸ್ಯರನ್ನೆಲ್ಲ ಸೇರಿಸಿ ಪ್ರತಿ ವಾರ ಉಪನ್ಯಾಸ ಕೊಡುವುದು ಕ್ರಮ. ಇಂಥ ಉಪನ್ಯಾಸಗಳಲ್ಲಿ ಯಾರು ಹೆಚ್ಚು ಹೆಚ್ಚು ಕತೆ, ಉಪಕತೆ, ದೃಷ್ಟಾಂತಕತೆಗಳನ್ನು ಹೇಳುತ್ತಾರೋ ಅವರು ಹೆಚ್ಚು ಜನಪ್ರಿಯರಾಗುವುದು ಸಾಮಾನ್ಯ. ಹಾಗೆ ಕತೆ- ಉಪಕತೆಗಳ ಮೂಲಕ ಪ್ರಸಿದ್ಧರಾಗಿದ್ದವರು ಡಬೊ°à ಊರಿನ ರಬೈ ಜೇಕಬ್. ಅವರನ್ನು ಭೇಟಿ ಮಾಡಿದ ರಬೈ ಎಲಿಜಾ ಒಂದು ಪ್ರಶ್ನೆ ಮುಂದಿಟ್ಟರು.
“ಜೇಕಬ್ ಅವರೇ, ನೀವು ನನ್ನ ಆತ್ಮೀಯ ಸ್ನೇಹಿತರಾದ್ದರಿಂದ ಕೇಳುತ್ತಿದ್ದೇನೆ. ಉಪನ್ಯಾಸದ ಸಮಯದಲ್ಲಿ ನೀವು ಪುಂಖಾನುಪುಂಖವಾಗಿ ಪ್ರಸಂಗಗಳನ್ನೂ ಕತೆಗಳನ್ನೂ ಹೇಳುತ್ತೀರಲ್ಲ. ಹೇಗೆ ಸಾಧ್ಯ ಅದು? ಅಂದರೆ ಒಂದೊಂದು ವಿಷಯ ಹೇಳುವಾಗಲೂ ಅದಕ್ಕೆ ತಕ್ಕಂಥ ಕತೆಗಳು ಹೇಗೆ ತಕ್ಷಣ ಹೊಳೀತವೆ ನಿಮಗೆ?”
ಡಬೊ°àದ ರಬೈ ನಕ್ಕರು. “”ಎಲಿಜಾ ಅವರೇ, ಇದಕ್ಕೆ ಒಂದು ಕತೆ ಹೇಳೆ¤àನೆ ಕೇಳಿ. ಒಂದೂರಿನಲ್ಲಿ ಒಬ್ಬ ಹಿರಿಯನಿದ್ದ. ಅವನು ತನ್ನ ಮಗ ಶೂಟಿಂಗ್ ಚಾಂಪಿಯನ್ ಆಗಬೇಕು ಎಂಬ ಆಸೆಯಿಂದ ಮಗನನ್ನು ದೂರದ ಸೇನಾಶಾಲೆಗೆ ಸೇರಿಸಿದ. ಮಗ ಅಪ್ಪನ ಆಸೆಯಂತೆ ಬಹಳ ದೊಡ್ಡ ಶೂಟಿಂಗ್ ಸ್ಟಾರ್ ಆದ. ಅವನ ಪ್ರಾವೀಣ್ಯಕ್ಕೆ ಮೆಚ್ಚಿ ಶಾಲೆಯಲ್ಲಿ ಅವನಿಗೆ ಪದವಿಪತ್ರದ ಜೊತೆ ಒಂದು ಚಿನ್ನದ ಪದಕವನ್ನೂ ಕೊಟ್ಟರು.
ಅವನು ತನ್ನ ಪದವಿ ಮುಗಿಸಿಕೊಂಡು ಊರಿಗೆ ವಾಪಸಾಗುತ್ತಿ¨ªಾಗ ಒಂದೂರಿನಲ್ಲಿ ಸಂಜೆ ಉಳಿದುಕೊಳ್ಳಬೇಕಾಯಿತು. ಅಲ್ಲಿನ ಒಂದು ಗೋಡೆಯಲ್ಲಿ ಅವನಿಗೆ ನೂರಾರು ವೃತ್ತಗಳು ಕಾಣಿಸಿದವು. ಯಾರೋ ಬಳಪದ ಕಡ್ಡಿಯಿಂದ ಗೋಡೆಯಲ್ಲಿ ವೃತ್ತ ಬರೆದಿದ್ದರು. ಅದೇನು ಎಂದು ನೋಡಲು ಹೋದಾಗ ಅವನಿಗೆ ಆಶ್ಚರ್ಯವಾಗುವಂಥ ಸಂಗತಿ ಅಲ್ಲಿತ್ತು. ಪ್ರತಿ ವೃತ್ತದ ಮಧ್ಯದಲ್ಲೂ ಒಂದು ಗುಂಡಿನ ಗುರುತು ಇತ್ತು. ಅಷ್ಟು ಕರಾರುವಾಕ್ಕಾಗಿ ಟಾರ್ಗೆಟ್‌ನ ನಟ್ಟನಡುವಿಗೆ ಗುಂಡು ಹೊಡೆದ ಶೂರ ಯಾರು ಎಂದು ಆ ಯುವಕ ಹುಡುಕಲು ಹೊರಟ. ಕೊನೆಗೆ ಅವನಿಗೆ ಹುಡುಕುತ್ತಿದ್ದ ವ್ಯಕ್ತಿಯ ಭೇಟಿ ಸಾಧ್ಯವಾಯಿತು.
ಹಾಗೆ ಗುಂಡು ಹೊಡೆದಿದ್ದವನು ಒಬ್ಬ ಹನ್ನೆರಡು ವಯಸ್ಸಿನ ಹುಡುಗ ಎಂಬುದನ್ನು ತಿಳಿದಾಗ ಯುವಕನಿಗೆ ನಂಬಲಿಕ್ಕೇ ಸಾಧ್ಯವಾಗಲಿಲ್ಲ. “ಗೋಡೆಯಲ್ಲಿ ಬರೆದ ಟಾರ್ಗೆಟ್‌ಗಳಿಗೆ ಅಷ್ಟು ಕರಾರುವಾಕ್ಕಾಗಿ ಗುಂಡು ಹೊಡೆಯುವ ಕಲೆ ಎಲ್ಲಿ ಕಲಿತೆ?’ ಎಂದು ಕೇಳಿದ ಯುವಕ. ಆಗ ಆ ಹುಡುಗ ನಗುತ್ತ ಹೇಳಿದ: ನಾನು ವೃತ್ತ ಬರೆದು ಗುಂಡು ಹೊಡೆಯುವು ದಿಲ್ಲ. ಮೊದಲು ಗುಂಡು ಹೊಡೆದು, ಅದು ಎಲ್ಲಿ ಗೋಡೆಗೆ ಹೊಡೆಯಿತೋ ಅದರ ಸುತ್ತ ವೃತ್ತ ಬಿಡಿಸುತ್ತೇನೆ”
ರಬೈ ಎಲಿಜಾ ಅವರೇ, “”ಆ ಹುಡುಗನ ಕತೆಯೇ ನನ್ನದೂ ಕೂಡ. ನಾನು ಸಂದರ್ಭಕ್ಕೆ ತಕ್ಕ ಕತೆ ಹೇಳಲು ಹೋಗುವುದಿಲ್ಲ. ಒಂದಷ್ಟು ಕತೆಗಳನ್ನು ಮನಸ್ಸಲ್ಲಿ ಮೊದಲೇ ತಯಾರಿಟ್ಟುಕೊಂಡು ಉಪನ್ಯಾಸ ಶುರು ಮಾಡುತ್ತೇನೆ. ಒಂದೊಂದು ಕತೆ ಹೇಳಿ ಅದರ ಸುತ್ತ ನನ್ನ ನೀತಿಪಾಠಗಳನ್ನು ಕಟ್ಟುತ್ತ ಬರುತ್ತೇನೆ. ಅಂದ ಹಾಗೆ, ಈ ಗುಟ್ಟು ನಮ್ಮಿಬ್ಬರಲ್ಲೇ ಇರಲಿ” ಎಂದರು ರಬೈ ಜೇಕಬ್.
ಗಣಿತದ ಜ್ಞಾನ
ಕೆಲ್ಮ್ ನಗರದ ಸಾರ್ವಜನಿಕ ಸ್ನಾನಗೃಹದಲ್ಲಿ ಇಬ್ಬರು ಗಂಡಸರು ಸ್ನಾನ ಮುಗಿಸಿ ಕೂತಿದ್ದರು. ಬೇಸರ ಕಳೆಯಲೆಂದು ಅವರಲ್ಲೊಬ್ಬ ಮಾತು ಪ್ರಾರಂಭಿಸಿದ.
“ನಮ್ಮೂರಿಂದ ದ್ವಿನ್ಸಕ್ ಪಟ್ಟಣಕ್ಕೆ ಕುದುರೆ ಸವಾರಿ ಮಾಡ್ಕೊಂಡು ಹೋಗೋದಾದ್ರೆ ನಾಲ್ಕು ತಾಸು ಬೇಕು. ಆದ್ರೆ ನಾನು ಎರಡೇ ಗಂಟೆಯಲ್ಲಿ ಹೋಗ್ತೀನೆ”
“ಹೌದಾ? ಅದು ಹೇಗೆ ಸಾಧ್ಯ?” ಎರಡನೆಯಾತ ಆಸಕ್ತಿ ತೋರಿಸಿದ.
“ಹೇಗೆ ಅಂದ್ರೆ ನಾನು ಎರಡು ಕುದುರೆ ತಗೊಂಡು ಹೋಗ್ತೀನೆ. ಹಾಗಾಗಿ, ನನಗೆ ಅರ್ಧ ಸಮಯ ಸಾಕು” ಎಂದು ಮೊದಲನೆಯ ಗಂಡಸು ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದ.
ಮುಂದುವರಿಸಿ, “ಇನ್ನೂ ಬೇಗ ಹೋಗ್ಬೇಕು ಅಂದುಕೋ. ಆಗ ನಾಲ್ಕು ಕುದುರೆಗಳನ್ನು ಕಟ್ಟಿಕೊಂಡು ಹೋದರೆ ಆಯ್ತು. ಒಂದೇ ತಾಸಿನಲ್ಲಿ ಇಲ್ಲಿಂದ ಹೊರಟು ದ್ವಿನ್ಸಕ್‌ನಲ್ಲಿರಬಹುದು” ಎಂದ.
“”ನಿನ್ನ ಗಣಿತ ಜ್ಞಾನವೇನೋ ಚೆನ್ನಾಗಿದೆ. ಆದರೆ, ಸ್ವಲ್ಪ ಕಾಮನ್‌ಸೆನ್ಸ್ ಉಪಯೋಗಿಸಿ ಯೋಚಿಸು. ಇಲ್ಲಿಂದ ನಾಲ್ಕು ಕುದುರೆ ಕಟ್ಟಿಕೊಂಡು ಆ ಊರಿಗೆ ಹೋಗೋದಾದ್ರೂ ಯಾಕೆ ಹೇಳು! ಈ ಊರೇ ಚೆನ್ನಾಗಿಲ್ವೆ? ಅದೂ ಅಲ್ಲದೆ ದ್ವಿನ್ಸಕ್‌ನಲ್ಲಿ ಕುದುರೆಗಳಿಗೆ ತಿನ್ನಿಸೋ ಹುಲ್ಲು ಕೂಡ ತುಟ್ಟಿ” ಎಂದ ಎರಡನೆಯ ಬುದ್ಧಿವಂತ.
ಜ್ಞಾನೋಪದೇಶ
ತಲಮುಡ್ ಎಂಬುದು ಯಹೂದ್ಯರ ಪವಿತ್ರ ಗ್ರಂಥಗಳಲ್ಲೊಂದು. ಬಹಳಷ್ಟು ಗುರು-ಶಿಷ್ಯರು ನೂರಾರು ವರ್ಷಗಳ ಕಾಲ ನಡೆಸಿದ ಪ್ರಶ್ನೋತ್ತರ, ಚರ್ಚೆ-ಸಂವಾದಗಳ ಅತಿ ಸಂಕ್ಷಿಪ್ತ ಲಿಖೀತ ರೂಪವೇ ತಲಮುಡ್. ಯಹೂದ್ಯನೊಬ್ಬ ತನ್ನ ಧಾರ್ಮಿಕತೆಯನ್ನು ಉಳಿಸಿಕೊಳ್ಳಲು ನಡೆಸಬೇಕಾದ ಹಲವು ಕಾರ್ಯಗಳಲ್ಲಿ ಈ ತಲಮುಡ್‌ನ ಅಧ್ಯಯನವೂ ಒಂದು. ಅದೊಂದು ದಿನ ಒಬ್ಬ ಹಳ್ಳಿಮುಕ್ಕ ಒಬ್ಬರು ಹಿರಿಯ ರಬೈ ಬಳಿ ಬಂದ.
“”ಗುರುಗಳೇ, ನಾನು ಬಹಳ ವರ್ಷಗಳಿಂದ ತಲಮುಡ್ ಬಗ್ಗೆ ಕೇಳ್ತಾ ಇದ್ದೇನೆ. ಇದು ಏನು ಅನ್ನೋದೇ ನನಗಿನ್ನೂ ಸ್ಪಷ್ಟವಾಗಿಲ್ಲ. ನೀವು ಈ ವಿಷಯದ ಕುರಿತು ಏನಾದರೂ ಸಂಕ್ಷಿಪ್ತವಾಗಿ, ನನಗೆ ಅರ್ಥವಾಗುವ ಭಾಷೆಯಲ್ಲಿ ಹೇಳಿ ನನ್ನ ಅನುಮಾನ ಪರಿಹರಿಸಬೇಕು” ಎಂದು ಕೇಳಿಕೊಂಡ. ರಬೈ ಅವನನ್ನು ಮೇಲಿಂದ ಕೆಳಗಿನವರೆಗೆ ದಿಟ್ಟಿಸಿದರು. ಈ ಹಳ್ಳಿಗುಗ್ಗುವಿಗೆ ಜಗತ್ತಿನ ಅತ್ಯಂತ ಸಂಕೀರ್ಣ ಜ್ಞಾನಭಂಡಾರವಾದ ತಲಮುಡ್ ಬಗ್ಗೆ ಪಾಠ ಹೇಳುವುದೇ? ಅದರ ಸಣ್ಣ ತುಣುಕಾದರೂ ಈತನ ತಲೆಗೆ ಹೊಕ್ಕೀತೇ? ಮನಸ್ಸಿನಲ್ಲೇ ಅಂದಾಜಿಸಿದರು.
“”ನೋಡಯ್ಯ, ತಲಮುಡ್ ಏನಿದ್ದರೂ ಬುದ್ಧಿವಂತರಿಗೆ. ನಿನ್ನಂಥವರಿಗಲ್ಲ” ನೇರವಾಗಿ ಹೇಳಿಬಿಟ್ಟರು ರಬೈ.
“”ಹಾಗೆ ಹೇಳಿದರೆ ಹೇಗೆ ಸ್ವಾಮಿ! ನಾನು ದಡ್ಡ ಅಂತ ಒಂದೇಟಿಗೆ ನಿರ್ಣಯಿಸಿಬಿಟ್ಟಿರಲ್ಲ ನೀವು?” ಕೋಪದಿಂದ ಬುಸುಗುಡತೊಡಗಿದ ಹಳ್ಳಿಗ.
“”ಓಹೋ, ನೀನು ಬುದ್ಧಿವಂತನೋ? ಪರೀಕ್ಷೆ ಮಾಡೇ ಬಿಡೋಣಂತೆ. ಒಂದು ಪ್ರಶ್ನೆ ಕೇಳೆ¤àನೆ. ಉತ್ತರ ಕೊಡು. ಒಂದು ಮನೆಯ ತಾರಸಿ ಹತ್ತಿ ಚಿಮಣಿಯೊಳಗೆ ಇಳಿದು ಆ ಮನೆಯನ್ನು ಇಬ್ಬರು ಕಳ್ಳರು ಸೇರಿಕೊಳ್ತಾರೆ. ಅವರಲ್ಲಿ ಒಬ್ಬನ ಮುಖ ಮಸಿ ಹಿಡಿದಿರುತ್ತೆ. ಇನ್ನೊಬ್ಬನ ಮುಖ ಬೆಳ್ಳಗಿರುತ್ತೆ. ಅವರಲ್ಲಿ ಯಾರು ಮೊದಲು ಮುಖ ತೊಳ್ಕೊàತಾರೆ?” ಪ್ರಶ್ನಿಸಿದರು ರಬೈ.
ಹಳ್ಳಿಯವನು ಸ್ವಲ್ಪ ಯೋಚಿಸಿದ. ಈ ಪ್ರಶ್ನೆಯಲ್ಲೇನಾದರೂ ವಂಚನೆ ಇದೆಯೇ ತರ್ಕಿಸಿದ. ಅಂಥಾದ್ದೇನೂ ಕಾಣಲಿಲ್ಲ. ಇದರಲ್ಲಿ ಯೋಚಿಸುವಂಥಾದ್ದೇನಿದೆ. “”ಯಾರ ಮುಖ ಮಸಿ ಹಿಡಿದಿರುತ್ತೋ ಅವನೇ ಮೊದಲು ಮುಖ ತೊಳ್ಕೊàತಾನೆ ಅಲ್ವೆ” ಎಂದ.
“”ಅದಕ್ಕೇ ನಿನ್ನನ್ನು ಹೆಡ್ಡ ಅನ್ನೋದು! ಮಸಿಹಿಡಿದ ಮುಖದ ಮನುಷ್ಯ ಬೆಳ್ಳಗಿನ ಮುಖದ ಮನುಷ್ಯನನ್ನು ನೋಡ್ತಾನೆ. ನೋಡಿ ತನ್ನ ಮುಖವೂ ಅಷ್ಟೇ ಬೆಳ್ಳಗಿದೆ ಎಂದು ಭಾವಿಸ್ತಾನೆ. ಆದರೆ, ಬೆಳ್ಳಗಿನ ಮುಖದ ವ್ಯಕ್ತಿ ಮಸಿ ಹಿಡಿದ ಮುಖದವನನ್ನು ನೋಡಿ ತನ್ನ ಮುಖದಲ್ಲೂ ಮಸಿ ಹಿಡಿದಿದೆ ಎಂದು ಭಾವಿಸಿ ಮುಖ ತೊಳೆಯಲು ಹೋಗ್ತಾನೆ. ಹಾಗಾಗಿ, ಮೊದಲು ಮುಖ ತೊಳೆಯುವುದು ಬೆಳ್ಳಗಿನ ಮುಖದವನೇ” ಎಂದರು ರಬೈ.
ಹಳ್ಳಿಗನಿಗೆ ಜ್ಞಾನೋದಯವಾದಂತಾಯಿತು. ಹೌದು, ಇದು ಸರಿಯಾದ ಉತ್ತರ ಅನ್ನಿಸಿತು. ಕೂಡಲೇ ರಬೈಗಳಿಗೆ ಕೈ ಮುಗಿದು ನಿಂತುಕೊಂಡ. “”ರಬೈಯವರೇ, ನನ್ನ ಕಣ್ಣು ತೆರೆಸಿದಿರಿ. ನನ್ನ ಹೆಡ್ಡತನ ಕಳೆದುಹಾಕಿದಿರಿ. ನಿಮ್ಮ ಮಾತಿಂದ ನನ್ನ ಅಜ್ಞಾನ, ಬೆಂಕಿಗೆ ಕರಗಿದ ಮಂಜುಗಡ್ಡೆಯಂತೆ ಕರಗಿಹೋಯ್ತು. ದಯವಿಟ್ಟು ನನಗೆ ತಲಮುಡ್‌ನ ಜ್ಞಾನವನ್ನು ಉಪದೇಶಿಸಿ” ಎಂದ.
“”ಇಲ್ಲ! ಇಲ್ಲ! ತಲಮುಡ್‌ನ ಜ್ಞಾನ ಗಳಿಸುವುದಕ್ಕೆ ನೀನಿನ್ನೂ ತಯಾರಾಗಿಲ್ಲ. ಚಿಮಣಿಯಲ್ಲಿ ಇಬ್ಬರು ಇಳಿದಾಗ ಒಬ್ಬನ ಮುಖ ಬೆಳ್ಳಗೆ ಇರುತ್ತೆ, ಒಬ್ಬನ ಮುಖಕ್ಕೆ ಮಾತ್ರ ಮಸಿ ಹಿಡಿಯುತ್ತೆ ಅನ್ನೋದನ್ನ ಪ್ರಶ್ನಿಸದೆ ಒಪ್ಪಿಕೊಳ್ಳುವ ನೀನಿನ್ನೂ ಹೆಡ್ಡನೇ” ಎಂದರು ರಬೈ.
ಶ್ರೀಹರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.