Journey: ನಾಲ್ಕಿಂಚಿನ ಮುಗಿಯದ ದೂರ


Team Udayavani, Oct 15, 2023, 11:50 AM IST

tdy-7

ಅವಳೇನೂ ಹೆಚ್ಚು ಮಾತಾಡುತ್ತಿಲ್ಲ. ಆದರೆ ಆ ಕಡೆಯಿಂದ ಯಾರೋ ನಿರಂತರವಾಗಿ ಮಾತಾಡುತ್ತಿದ್ದಾರೆ. ಅವಳ ಕಣ್ಣು ನಿಧಾನವಾಗಿ ಹನಿಗೂಡುತ್ತಿದೆ. ಬ್ಯಾಗಿನಿಂದ ಒಂದೆರಡು ಟಿಶ್ಯೂ ಪೇಪರ್‌ ತೆಗೆದು ಚೂಪು ಮೂಗನ್ನು ಒರೆಸಿಕೊಳ್ಳುತ್ತಿದ್ದಾಳೆ. ನಡುವಿನಲ್ಲೊಮ್ಮೆ ಒಂದಿಷ್ಟು ಮಾತಾಡಿದರೂ ಗಂಟಲು ಕಟ್ಟುತ್ತಿದೆ…

ಭರ್ತಿ ಎಂಟೂವರೆ…ಎಂದಿನಂತೆ ಮನೆಯೆದುರು ಕ್ಯಾಬ್‌ ಬಂದಾಗಿತ್ತು. ಎಂದಿನಂತೆ ಮನಸ್ಸೂ ವಿಹ್ವಲ. ಬೆಳ್ಳಂಬೆಳಗ್ಗೆ ವಿನಾಕಾರಣ ಜಗಳವಾಡಿದರೆ ಅವಳಿಗೆ ಮನಸ್ಸು ಕಹಿಯಾಗುತ್ತದೆ. ಮತ್ತೆ ದಿನವಿಡೀ ಅದೇನೋ ಚಡಪಡಿಕೆ. ಅವಳು ಸಿಂಗಲ್‌ ಆಗಿದ್ದಾಗ ಬದುಕು ಬೇರೆಯೇ ಆಗಿತ್ತು. ಸ್ವತ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದವಳು ಈಗ ಪಂಜರದ ಗಿಳಿಯಾಗಿಬಿಟ್ಟಿದ್ದಾಳೆ. ಫ‌ುಲ್‌ ಟೈಂ ಮುನಿಸಿಗೆಂದೇ ಬಾಯ್‌ ಫ್ರೆಂಡ್‌ ಒಬ್ಬನನ್ನು ಕಟ್ಟಿಕೊಂಡಳೇನೋ ಎನ್ನುವಂತಾಗಿದೆ ಬದುಕು.

ಹೀಗಾಗಿಯೇ ಅವಳಿಂದು ನಿರ್ಧರಿಸಿಬಿಟ್ಟಿದ್ದಾಳೆ. ಅವನ ಮೇಲೆ ಸಣ್ಣದಾಗಿ ಸೇಡು ತೀರಿಸಿಕೊಳ್ಳಬೇಕು. ಇವತ್ತು ಬೇಕೆಂದೇ ಒಬ್ಬ ಆಗಂತುಕನೊಂದಿಗೆ ಮಾತಾಡಬೇಕು. ಅದು ಗಂಡಸೋ, ಹೆಂಗಸೋ, ಅಜ್ಜಿಯೋ… ಯಾರೇ ಆಗಿರಲಿ. ಕ್ಯಾಬು, ಆಫೀಸು, ಕೆಫೆಟೇರಿಯಾ… ಎಲ್ಲಾದರೂ ಸರಿ. ಸುಮ್ಮನೆ ಮಾತಾಡಬೇಕು. ನಂಬರ್‌ ವಿನಿಮಯ ಮಾಡಿಕೊಳ್ಳಬೇಕು.

ಪುರುಸೊತ್ತಿದ್ದರೆ ಜೊತೆಯಲ್ಲಿ ಕಾಫಿ ಕುಡಿಯಬೇಕು. ಇಲ್ಲವಾದರೆ ಮರೆತುಬಿಡಬೇಕು. ಈ ರೀತಿಯಲ್ಲಾದರೂ ಕಳೆದುಹೋಗಿ­ರುವ ರೆಕ್ಕೆಗಳನ್ನು ಮತ್ತೆ ಹೆಗಲಿಗೆ ಕಟ್ಟಿಕೊಳ್ಳಬೇಕು.

ಹೀಗೆಲ್ಲಾ ಅಂದುಕೊಳ್ಳುವಷ್ಟರಲ್ಲಿ ಅವನೊಬ್ಬ ಕ್ಯಾಬ್‌ ಹತ್ತಿ ಪಕ್ಕದಲ್ಲೇ ಕೂತುಬಿಟ್ಟಿದ್ದ. ಒಂದೇ ಒಂದು ಕ್ಷಣ. ನಿನಗಾಗಿಯೇ ಕಾಯುತ್ತಿದ್ದೆ ಎಂಬಂತೆ ಅವನತ್ತ ಅವಳು ದಿಟ್ಟಿಸಿದ್ದಳು.

***

ನಿನ್ನೆ ಗೆಳೆಯರೊಂದಿಗೆ ಕುಡಿದಿದ್ದು ಹೆಚ್ಚಾಯಿತು. ಹಾಗಾಗಿ ಎದ್ದಿದ್ದೂ ಲೇಟು. ವಿಪರೀತ ಎಂಬಷ್ಟಿನ ಹ್ಯಾಂಗೋವರ್‌.

ಕಳೆದೆರಡು ವಾರಗಳಲ್ಲಿ ಇದು ಐದನೇ ಸಂದರ್ಶನ. ಆಯ್ಕೆಯ ಉಳಿದ ಹಂತಗಳನ್ನು ದಾಟಿದರೂ ಇಂಟರ್‌ವ್ಯೂ ರೌಂಡಿನಲ್ಲಿ ಎಂದಿನಂತೆ ಗೋವಿಂದಾನು ಗೋವಿಂದ. ನಿಮಗೆ ಕಮ್ಯೂನಿಕೇಷನ್‌ ಸ್ಕಿಲ್ಲೇ ಇಲ್ಲಾರೀ ಎಂಬ ದೂರು ಎಲ್ಲೆಡೆಯಿಂದ. ಈ ನಿಟ್ಟಿನಲ್ಲಿ ಪರ್ಸನಾಲಿಟಿ ಡೆವಲಪ್ಮೆಂಟ್‌ ಎಂಬ ಫ್ಯಾನ್ಸಿ ಕೋರ್ಸೊಂದಕ್ಕೆ ಸೇರಿಯಾಗಿದೆ. ನರ್ವಸ್‌ ಆಗ್ತಿàನಿ ಅಂದ್ರೆ ಹೇಗೆ? ಸಿಕ್ಕಸಿಕ್ಕವರನ್ನು ಮಾತಾಡಿಸಿ. ಏನೋ ಒಂದು ಮಾತಾಡಿ. ಆಗ ನಿಮ್ಮೊಳಗಿನ ಭಯವು ನಿಧಾನವಾಗಿ ಕಮ್ಮಿಯಾಗುತ್ತದೆ. ಕ್ರಮೇಣ ಆತ್ಮವಿಶ್ವಾಸ ಗಟ್ಟಿಯಾಗುತ್ತದೆ, ಎಂದಿದ್ದ ಕೋಚ್‌.

ಆಗಿದ್ದಾಗಲಿ… ಇವತ್ತು ಯಾರನ್ನಾದರೂ ಮಾತಾಡಿಸಲೇಬೇಕು ಎಂದು ನಿರ್ಧರಿಸಿದ್ದ ಅವನು. ಹೀಗೆ ಈ ಗುಂಗಿನಲ್ಲೇ ಹೊರಟರೆ ಅವಳೊಬ್ಬಳು ಆಗಲೇ ಕ್ಯಾಬಿನಲ್ಲಿ ಕೂತಿದ್ದಳು. ಅಪರಿಚಿತ ಹುಡುಗಿ. ತೀರಾ ಸುಂದರಿಯೇನಲ್ಲ. ಆದರೆ ಲಕ್ಷಣವಾಗಿದ್ದಾಳೆ. ಅಬ್ಬಬ್ಬ… ತುಟಿ ಒಣಗುತ್ತಿದೆ. ಹಸ್ತರೇಖೆಗಳ ಸಪೂರ ಕಣಿವೆಗಳಲ್ಲಿ ತೆಳು ಬೆವರು. ಮಾತಾಡಿಸಲೇ? ಮಾತಾಡಿಸಿಯೇಬಿಡಲೇ?

ಅದೊಂದು ಕ್ಷಣ. ಅವನ ದೃಷ್ಟಿಯು ನೇರವಾಗಿ ಅವಳ ಕಣ್ಣಲ್ಲೇ ನೆಟ್ಟಿತ್ತು. ದಿಗಿಲೋ, ಮತ್ತೂಂದೋ… ಯಾವನಿಗ್ಗೊತ್ತು!

***

ಪೂಲಿಂಗ್‌ ಕ್ಯಾಬುಗಳಲ್ಲಿ ಯಾರ್ಯಾರು ಎಷ್ಟೊತ್ತು ಜೊತೆಯಲ್ಲಿರುತ್ತಾರೆ ಎಂಬುದು ಗೊತ್ತಿರುವುದಿಲ್ಲ.

ಒಮ್ಮೆ ಮಾತಾಡಿಸಿಯೇ ಬಿಡೋಣ ಎಂದು ಅವನು ಕೊನೆಯ ಬಾರಿ ಯೋಚಿಸಿದ. ಅಷ್ಟರಲ್ಲಿ ಅವಳ ಫೋನ್‌ ಕಿರ್ರೆಂದಿತು. ಯಾರದ್ದೋ ಕಾಲ್. ಅವಳು ಕರೆಗೆ ಉತ್ತರಿಸಿದಳು. ಅವನು ಅವಳನ್ನು ತನ್ನ ಕಣ್ಣಿನ ಮೂಲೆಯಿಂದ ಪರೀಕ್ಷಿಸುತ್ತಿದ್ದಾನೆ. ಮಾತನ್ನಾರಂಭಿಸಲು ಲೆಕ್ಕಹಾಕುತ್ತಲೇ ಇದ್ದಾನೆ. ಅಬ್ಬಬ್ಬ… ಇದೂ ಒಂಥರಾ ಇಂಟರ್‌ವ್ಯೂ ಥರಾನೇ ಎಂದು ಅವನಿಗೆ ವಿನಾಕಾರಣ ಗಾಬರಿಯಾಗುತ್ತದೆ.

ಫೋನು ಅವಳ ಕಿವಿಗಂಟಿಕೊಂಡಿದೆ. ಅವಳೇನೂ ಹೆಚ್ಚು ಮಾತಾಡುತ್ತಿಲ್ಲ. ಆದರೆ ಆ ಕಡೆಯಿಂದ ಯಾರೋ ನಿರಂತರವಾಗಿ ಮಾತಾಡುತ್ತಿದ್ದಾರೆ. ಅವಳ ಕಣ್ಣು ನಿಧಾನವಾಗಿ ಹನಿಗೂಡುತ್ತಿದೆ. ಬ್ಯಾಗಿನಿಂದ ಒಂದೆರಡು ಟಿಶ್ಯೂ ಪೇಪರ್‌ ತೆಗೆದು ಚೂಪು ಮೂಗನ್ನು ಒರೆಸಿಕೊಳ್ಳುತ್ತಿ¨ªಾಳೆ. ನಡುವಿನಲ್ಲೊಮ್ಮೆ ಒಂದಿಷ್ಟು ಮಾತಾಡಿದರೂ ಗಂಟಲು ಕಟ್ಟುತ್ತಿದೆ. ವಿಚಿತ್ರವಾದ ಒತ್ತಡದಲ್ಲಿರುವಂತೆ. ಯಾರಿರಬಹುದು ಆ ಕಡೆ? ಕಟ್ಟುನಿಟ್ಟಿನ ಅಪ್ಪನೋ? ಮುಂಗೋಪಿ ಪ್ರಿಯಕರನೋ? ಕಿರುಕುಳ ಕೊಡುವ ಬಾಸೋ? ಅವನ ಲೆಕ್ಕಾಚಾರಗಳಿಗೆ ಕೊನೆಯಿಲ್ಲ.

ವಿವಾಹಿತೆಯಂತೆ ಕಾಣುತ್ತಿಲ್ಲ. ಅಲ್ಲಲ್ಲಿ ಏನೇನೋ ಟ್ಯಾಟೂ ಹಾಕಿಕೊಂಡಿದ್ದಾಳೆ. ಆದರೆ ದಿರಿಸು, ವ್ಯಕ್ತಿತ್ವಗಳನ್ನು ಮಾತ್ರ ಎಲ್ಲಿಂದಲೋ ಎರವಲು ಪಡೆದಂತಿದೆ. ಕಾಲ್‌ ಈಗ ಮುಗಿಯ­ಬಹುದೇ? ತಾನೊಮ್ಮೆ ಮಾತಾಡಿಸಲೇ? ಅವನು ಕಾಯುತ್ತಲೇ ಇದ್ದಾನೆ. ಆದರೆ ಅವಳ ಕಾಲ್‌ ಮಾತ್ರ ಮುಗಿಯುತ್ತಿಲ್ಲ.

***

ಅವಳಿಗೆ ಸಾಕಾಗಿಹೋಗಿದೆ. ಎಷ್ಟೂಂತ ಕಿತ್ತಾಡೋದು! ಕರೆಯನ್ನು ಬೇಕಂತಲೇ ಡಿಸ್ಕನೆಕ್ಟ್ ಮಾಡಿದ್ದಾಳೆ. ತಾನು ಅತ್ತಿದ್ದು ಪಕ್ಕದಲ್ಲಿ ಕೂತವನಿಗೆ ಕಾಣದಂತೆ ಮರೆಮಾಚಲು ಯತ್ನಿಸುತ್ತಾಳೆ. ಟಿಶ್ಯೂ ಪೇಪರಿನಿಂದ ಮೂಗೊರೆಸುತ್ತಾ ಬೆವರೊರೆಸಿಕೊಂಡವಳಂತೆ ನಾಟಕವಾಡುತ್ತಾಳೆ. ತಾನು ಲೆಕ್ಕಹಾಕಿದ್ದು ಸರಿಯಾಗಿದೆ. ಸಣ್ಣ­ದೊಂದು ಸೇಡು ತನಗೀಗ ಬೇಕೇಬೇಕು. ಯಾರ್ಯಾರಿಗೋ ಕಾಯೋದ್ಯಾಕೆ? ಇವನನ್ನೇ ಮಾತಾಡಿಸೋಣ ಎಂದು ಹಲೋ ಎನ್ನುವಷ್ಟರಲ್ಲಿ…

ಅವನ ಫೋನ್‌ ಬೀಪ್‌-ಬೀಪ್‌ ಅನ್ನುತ್ತಿದೆ. ಅದ್ಯಾವುದೋ ಅಪರಿಚಿತ ನಂಬರ್. ಎತ್ತಲೋ ಬೇಡವೋ ಎಂಬಂತೆ ಅವನು ಮೀನಮೇಷ ಎಣಿಸುತ್ತಿದ್ದಾನೆ. ಒಂದ್ಹತ್ತು ನಿಮಿಷ ಎತ್ತಬೇಡ ಮಾರಾಯ ಎಂಬಂತೆ ಇವಳು ಒಳಗೊಳಗೇ ಬೇಡಿಕೊಳ್ಳುತ್ತಿದ್ದಾಳೆ. ಆದರೆ ಹಾಗಾಗಿಲ್ಲ. ಅವನದ್ದು ಅದೇನು ಅವಶ್ಯಕತೆಯೋ. ಹಸಿರು ಬಟನ್‌ ಒತ್ತಿ ಅವನು ಕರೆಯನ್ನು ಸ್ವೀಕರಿಸಿದ್ದಾನೆ.

ಅತ್ತ ಕಡೆ ಅದ್ಯಾರೋ ಏನೋ! ಇವನು ನಿಮಿಷಕ್ಕೊಮ್ಮೆ “ಯೆಸ್‌ ಸರ್‌’ ಅನ್ನುತ್ತಿದ್ದಾನೆ. ದನಿ ಕ್ಷೀಣವಾಗಿದೆ. ಅವನ ಹಾವಭಾವಗಳನ್ನು ಇವಳು ಕೂತಲ್ಲೇ ಚೆಕ್‌ ಔಟ್‌ ಮಾಡುತ್ತಿದ್ದಾಳೆ. ಯುವಕನೇ. ಹೆಚ್ಚೆಂದರೆ ಇಪ್ಪತ್ತಾರು. ಯಾವುದೋ ಖಾಸಗಿ ಸಂಸ್ಥೆಯಲ್ಲಿ ಕೆಳಹಂತದ ಉದ್ಯೋಗಿಯಾಗಿರ­ಬಹುದು. ಡ್ರೆಸ್ಸಿಂಗ್‌ ಸೆನ್ಸ್‌ ಓಕೆ. ತೀಡಿದ ಇಸ್ತ್ರಿ ಅಲ್ಲಲ್ಲಿ ಪುಡಿಯಾಗಿದೆ. ಜೆಲ್‌ ಲೇಪಿಸಿರುವ ಕೂದಲನ್ನು ಮಟ್ಟಸವಾಗಿ ಬಾಚಿಕೊಂಡಿದ್ದರೂ ಕಣ್ಣಿನಲ್ಲಿ ಆಯಾಸವಿದೆ. ನಿದ್ದೆಯಿಲ್ಲವೋ? ಅದ್ಯಾವ ಚಿಂತೆಯೋ?

ಇರಲಿ. ಕಾಲ್‌ ಮುಗೀಲಿ… ಅವನಿಗಷ್ಟು ಧೈರ್ಯವಿದ್ದಂತೆ ಕಾಣುತ್ತಿಲ್ಲ. ಅಂಥಾ ಮಾತುಗಾರನೂ ಅಲ್ಲವೇನೋ. ನಾನೇ ಮಾತನ್ನಾರಂಭಿಸುತ್ತೇನೆ… ಎಂದು ಅವಳು ಲೆಕ್ಕಹಾಕುತ್ತಿದ್ದಾಳೆ. ಆದರೆ ಅವನ ಕಾಲ್‌ ಮಾತ್ರ ಮುಗಿಯುವಂತೆಯೇ ಕಾಣುತ್ತಿಲ್ಲ.

***

ಸಾಮಾನ್ಯವಾಗಿ ಪೂಲಿಂಗ್‌ ಡ್ನೂಟಿಗಳೆಂದರೆ ಇವನಿಗೆ ಮಹಾ­ಬೋರು. ಕೂತಿರುವ ಪ್ರಯಾಣಿಕರು ತನ್ನೊಂದಿಗೆ ಏನಾದರೂ ಮಾತಾಡುತ್ತಿದ್ದರೆ, ಹರಟೆಯನ್ನು ಸವಿಯುತ್ತಾ ಕಾರು ಓಡಿಸು­ವುದೆಂದರೆ ಅವನಿಗೆ ಮಜ. ಕೂತವರು ತಮ್ಮತಮ್ಮಲ್ಲಿ ಮಾತಾಡು­ತ್ತಿದ್ದರೂ ಇವನು ಕಿವಿ ನಿಮಿರಿಸಿಕೊಂಡು ಕೂತಿರುತ್ತಾನೆ. ಒಟ್ಟಿನಲ್ಲಿ ಯಾವುದಾದರೊಂದು ಮನುಷ್ಯದನಿ ಗಜಲ್ಲಿನಂತೆ ಕೇಳುತ್ತಲೇ ಇರಬೇಕು. ಇದೇನು ಹುಚ್ಚೋ, ಒಬ್ಬಂಟಿತನವೋ, ಚಟವೋ, ವಾಚಾಳಿತನವೋ… ಅವನಿಗಂತೂ ಗೊತ್ತಿಲ್ಲ. ಒಟ್ಟಿನಲ್ಲಿ ಸುತ್ತಮುತ್ತ ಮಾತಿನ ಮೋಡಗಳಿದ್ದರೇನೇ ಅವನಿಗೆ ಡ್ರೈವಿಂಗ್‌ ಸರಾಗ.

ಇಂದು ತನ್ನ ಕಾರಿನಲ್ಲಿ ಕೂತಿರುವ ಇಬ್ಬರು ಪ್ರಯಾಣಿಕರನ್ನು, ಅವನು ರಿಯರ್‌ ವ್ಯೂ ಮಿರರಿನಲ್ಲಿ ನೋಡುತ್ತಲೇ ಇದ್ದಾನೆ. ಇದ್ಯಾಕೋ ಹೋಪ್‌ ಲೆಸ್‌ ಎಂದನ್ನಿಸುತ್ತಿದೆ ಅವನಿಗೆ. ಈ ಮನೆಹಾಳ ಸ್ಮಾರ್ಟ್‌ ಫೋನುಗಳು ಬಂದ ನಂತರ ಎದುರುಬದುರು ಕೂತು ಮಾತಾಡುವುದು ಮನುಷ್ಯನಿಗೆ ಮರೆತೇ ಹೋಗಿದೆ ಎಂಬುದು ಅವನ ಅಳಲು.

ಅಂದೂ ಹಾಗೆಯೇ ಆಯಿತು. ಸಿಕ್ಕ ಒಂದಿಷ್ಟು ಹೊತ್ತನ್ನು ಇಬ್ಬರ ಫೋನುಗಳೂ ನುಂಗಿಹಾಕಿದ್ದವು. ಒಂದು ಹಂತದ ನಂತರ ಇಬ್ಬರ ಫೋನ್‌ ಸಂಭಾಷಣೆಗಳು ಮುಗಿದುಹೋದರೂ ಗಮ್ಯವು ಅದಾಗಲೇ ಬಂದಾಗಿತ್ತು. ಮೊದಲ ಸ್ಟಾಪಿನಲ್ಲಿ ಅವನು ಇಳಿದುಹೋಗಿದ್ದ. ಒಂದೆರಡು ಕಿಲೋಮೀಟರುಗಳ ನಂತರ ಅವಳೂ ಎದ್ದುಹೋಗಿದ್ದಳು. ಪರಸ್ಪರ ನಾಲ್ಕಿಂಚು ದೂರದಲ್ಲಿ ಕೂತಿದ್ದರೂ ಅವರಿಬ್ಬರ ಮಧ್ಯೆ ಮಾತು ಹುಟ್ಟಿರಲಿಲ್ಲ.

ನನ್ನಂತೆ ಉಳಿದವರೂ ಕೂಡ ಮಾತಿಗಾಗಿ ಹಂಬಲಿಸುತ್ತಿರಬಹುದೇ ಎಂದು ಮರಳಿ ಡ್ರೈವ್‌ ಮಾಡುತ್ತಾ ಅವನು ಯೋಚಿಸುತ್ತಿದ್ದ. ಇಳಿದುಹೋಗಿದ್ದ ಅವರಿಬ್ಬರ ಮನಸ್ಸಿನಲ್ಲೂ ಅದೇ ಪ್ರಶ್ನೆಯು ಆವರಿಸಿಕೊಂಡಿತ್ತು.

– ಪ್ರಸಾದ್‌ ನಾಯ್ಕ್, ದೆಹಲಿ 

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.