kappatagudda: ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಲೇಸು!


Team Udayavani, Aug 27, 2023, 1:13 PM IST

kappatagudda: ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಲೇಸು!

ಕಪ್ಪತ್ತಗುಡ್ಡದಲ್ಲಿ ಚಾರಣ ಮಾಡಲು ಅನುಮತಿ ಸಿಕ್ಕದ್ದು ಇತ್ತೀಚೆಗೆ. ಅಂಥ ಅಪೂರ್ವ ಅವಕಾಶ ದೊರೆತ ತಕ್ಷಣ ಹಸಿರು ವನಸಿರಿಯ ಹಾದಿಯಲ್ಲಿ ಸುತ್ತಾಡಿ ಬಂದವರ ಅನುಭವದ ಮಾತುಗಳ ಝಲಕ್‌…

ಕಪ್ಪತ್ತಗುಡ್ಡದ ಚಾರಣಕ್ಕೆ ನಾವು ಹೋದದ್ದು ಒಂದು ತಿಂಗಳ ಹಿಂದೆ. ಗುಡ್ಡದ ಕೆಳಗಿನ ಊರೇ ನನ್ನದಾದ್ದರಿಂದ ನಿತ್ಯ ಅಲ್ಲಿಗೆ ಹೋಗಿ ಬರುವುದು ರೂಢಿಯಾದ ಹವ್ಯಾಸ. ಇದು ಗೊತ್ತಿದ್ದ ಕೊಪ್ಪಳದ ಆನಂದತೀರ್ಥ ಪ್ಯಾಟಿ, ಶ್ರೀಪಾದರಾಜ್‌, ಡಾ. ಬದರೀ ಪ್ರಸಾದ್‌ ಹಾಗೂ ದೇವೇಂದ್ರ ಅವರು “ಒಂದು ದಿನದ ಮಟ್ಟಿಗೆ ನಾವು ಬರಬೇಕಲ್ಲ’ ಎಂದರು. “ನೀವು ಬರೋದು ಹೆಚ್ಚೋ.. ನಾವು ಅಲ್ಲಿಗೆ ಹೋಗೋದು ಹೆಚ್ಚೋ’ ಅಂದಾಗ, ಅದೊಂದು ಬೆಳಗ್ಗೆ ದಿಢೀರ್‌ ಹಾಜರಾದರು. ಎಲ್ಲರೂ ಒಟ್ಟಿಗೆ ಕಾರು ಹತ್ತಿ ಹೊರಟೆವು. ಕಪ್ಪತ್ತಗುಡ್ಡದವರೆಗಿನ ಹಾದಿಯನ್ನು ಕಾರಿನಲ್ಲಿಯೂ, ಆನಂತರದ ದಾರಿಯನ್ನು ಕಾಲಿನಲ್ಲಿಯೂ ಕ್ರಮಿಸುವ ನಿರ್ಧಾರ ನಮ್ಮದಾಗಿತ್ತು.

ವಾಸ್ತವವಾಗಿ ಕಪ್ಪತ್ತಗುಡ್ಡ ಸಾಧು- ಸಂತರು ಹಾಗೂ ಮಠಗಳ ಸರಣಿ ಹೊಂದಿರುವ ಗುಡ್ಡದ ಸಾಲು. ಅಪರಿಮಿತ ವನಸ್ಪತಿಗಳ ಆಶ್ರಯದಾಣ. ನಾವು ಹೊರಟ ದಾರಿಯಲ್ಲಿದ್ದ ನಂದಿವೇರಿ ಮಠವನ್ನೂ, ಅದರ ಹಿಂದಿದ್ದ ಎಂದೂ ಬತ್ತದ ಬಾವಿಯ ನೀರನ್ನೂ ನೋಡಿಕೊಂಡು ಮುಂದೆ ಸಾಗಿದೆವು. ಅಲ್ಲಿಂದ ಮೇಲೇರಲು ನವಣಿರಾಶಿ ಗುಡ್ಡದ ಪಕ್ಕದ ರಸ್ತೆಯಿಂದಲೇ ಹೋಗಬೇಕು. ನವಣಿರಾಶಿಯ ಥರ ಇರುವ ಕಾರಣಕ್ಕೆ ಅದು ನವಣಿರಾಶಿ ಗುಡ್ಡ.

ಇಲ್ಲೊಂದು ಕೆಜಿಎಫ್ ಇದೆ!
ಈ ದಾರಿಯ ನಡುವೆಯೇ ಒಂದು ಕಡೆ ಗಣಿಗಾರಿಕೆ ನಡೆದ ಜಾಗವಿದೆ. ಅದನ್ನು ಎಲ್ಲರೂ ಕೆಜಿಎಫ್ ಎಂದು ಕರೆಯಲು ಕಾರಣ, ಅಲ್ಲಿನ ಬಂಗಾರದ ಗಣಿ ನಡೆದ ಜಾಗದಂತೆಯೇ ಅದಿರುವುದು. ಕ್ಷಣಕಾಲ ಅಲ್ಲಿ ನಿಂತರೆ ಬೀಸುವ ಗಾಳಿಯಲ್ಲಿನ ವನಸ್ಪತಿಯ ಸುವಾಸನೆ ಮೂಗಿಗೆ ಬಡಿಯುತ್ತದೆ. ಹಾಗೇ ಹಾವಿನ ಮೈಯ್ಯಂತ ದಾರಿಯಲ್ಲಿ ಮೇಲೆ ಸಾಗಿದರೆ ನೆಲಜೇರಿ ಬಸವಣ್ಣನ ಗುಡಿಗಿಂತ ಮೊದಲು ಸಿಗುವ ಒಂದದ್ಭುತ ಜಾಗ ಉಪ್ಪಿಸನಪಡಿ. ಮಣ್ಣಿನಲ್ಲೂ ಉಪ್ಪಿನ ರುಚಿ ಸಿಗುವ ಗುಹೆಯೊಂದಕ್ಕೆ ಹೋಗುವ ದಾರಿಯ ಮೇಲ್ಭಾಗದ ಸ್ಥಳ ಇದು. ಇಲ್ಲಿ ನಿಂತರೆ ಕಾಡಿನ ಅಗಾಧ ವಿಸ್ತಾರ ಹಾಗೂ ಅದರ ಹಸಿರಿನ ಸ್ವರೂಪದ ಜೊತೆಗೆ, ವೇಗವಾಗಿ ಬೀಸುವ ಗಾಳಿಯ ತೀಕ್ಷ್ಣತೆ ಅನುಭವಕ್ಕೆ ಬರುತ್ತದೆ.

ಮೋಡಗಳು ಜೊತೆಗಿದ್ದವು!
ಸಾಧ್ಯವಾದಷ್ಟೂ ಮಟ್ಟಿಗೆ ಕಾಡನ್ನು ನೋಡಬೇಕು, ಆ ಹಸಿರು ವನಸಿರಿಯ ನಡುವೆ ಇರುವ ಜೀವಸಂಕುಲವನ್ನು, ಅಗಾಧ ವೃಕ್ಷರಾಶಿಯನ್ನು ನೋಡಬೇಕು ಎಂದು ಎಲ್ಲರೂ ಹುಮ್ಮಸ್ಸಿನಲ್ಲಿಯೇ ಹೆಜ್ಜೆಯಿಟ್ಟೆವು. ಸ್ವಲ್ಪಹೊತ್ತಿನÇÉೇ ಜಿಟಿಜಿಟಿ ಮಳೆ ಶುರುವಾಯಿತು. ಆ ಕಾನನದಲ್ಲಿ ಮಳೆಯ ಮೋಡಗಳು, ಕೈಗೆಟಕುವಷ್ಟು ಹತ್ತಿರದಲ್ಲಿ ಕಾಣಿಸಿದವು! ಅವು ನಮಗೆ ಮುತ್ತಿಡಲು ಬರುತ್ತಿರುವಂತೆ ಕಾಣಿಸಿ ನಾವೆಲ್ಲರೂ ಮೂಕರಾದೆವು. ಅಲ್ಲಿಂದ ತುಸು ದೂರದಲ್ಲಿ ವಾಚ್‌ಟವರ್‌ ಇತ್ತು. ಮುಳ್ಳುಕಂಟಿ ಬೆಳೆದ ಕಾರಣಕ್ಕೆ ಅಲ್ಲಿಗೆ ಹೋಗಲು ಪೇಚಾಡಬೇಕು. ಹೇಗೋ ಕಷ್ಟಪಟ್ಟು ತಲುಪಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಂಡೆವು.

ಆ ಅಪೂರ್ವ ದೃಶ್ಯ ವೈಭವ
ಕಪ್ಪತ್ತಗುಡ್ಡದಲ್ಲಿ ಗಾಳಿಗುಂಡಿ ಬಸವಣ್ಣ ಗುಡಿಯ ಎದುರಿಗೆ ಹಾಯ್ದು ಕೊನೆಯ ಫ್ಯಾನಿನವರೆಗೆ ಮಾತ್ರ ವಾಹನ ಹೋಗಬಲ್ಲುದು. ಎಲ್ಲ ಜಾಗಗಳನ್ನು ಕಣ್ತುಂಬಿಕೊಳ್ಳಲು ಕನಿಷ್ಠ 2-3 ದಿನಗಳು ಬೇಕೇ ಬೇಕು. ನಮಗೆ ಏಳೆಂಟು ಕಿ. ಮೀ. ಮಾತ್ರ ಕ್ರಮಿಸಲು ಸಾಧ್ಯವಾಯಿತು. ಅಡಿಕೆ ಕಣಿವೆಯತ್ತ ಹೊರಟಾಗ ಮತ್ತೆ ಸೋನೆ ಮಳೆ ಶುರುವಾಯಿತು. ಅಡಿಕೆ ಕಣಿವೆಯ ಒಡಲೊಳಗೆ ಸುಮಾರು ಮೂರು ಕಿ. ಮೀ. ಸಿಗುವ ಹುಲ್ಲುಗಾವಲಿನಂತಹ ಪ್ರದೇಶ, ಹುಲ್ಲಿನ ಹಸಿರು, ಕುರುಚಲು ಕಾಡುಗಿಡಗಳನ್ನು ನೋಡುವುದೇ ಚೆಂದದ ಅನುಭವ. ಅಲ್ಲಿದ್ದ ಪೊಟರೆಯಂತಹ ಬಂಡೆಯ ಮೇಲೆ ನಿಂತರೆ ಕಾಣುವ ದೃಶ್ಯ ವೈಭವವನ್ನು ನೋಡಿಯೇ ಅನುಭವಿಸಬೇಕು. ನಾವು ನೋಡಿದ್ದು ಇಷ್ಟೇ ಜಾಗಗಳಾದದರೂ ನೋಡದೆ ಉಳಿದ ಜಾಗಗಳು ಸಾಕಷ್ಟು. ಮಂಜಿನ ಡೋಣಿ, ಕಬ್ಬಿನ ಕಲ್ಲುವಾರಿ, ಹಂದಿಬಚ್ಚಲು, ಸೂಜಿಮಡ್ಡಿ, ಕೆಂಪಗುಡ್ಡ, ಎತ್ತಿನಗುಡ್ಡ ಮುಂತಾದುವನ್ನು ಹೆಸರಿಸಬಹುದು. ನಮಗೆಲ್ಲಾ ಮೈ ಮನದಲ್ಲಿ ಉತ್ಸಾಹವಿದ್ದರೂ ಆಗಲೇ ಸಂಜೆಯಾಗಿದ್ದರಿಂದ ಆ ಕಾನನ ಪ್ರದೇಶದಲ್ಲಿ ಮುನ್ನಡೆಯಲು ಸಾಧ್ಯವಾಗಲಿಲ್ಲ.

ನಿಸರ್ಗ ನಿರ್ಮಿತ ವ್ಯೂ ಪಾಯಿಂಟ್‌
ಮತ್ತೂಂದೆರಡು ಕಡೆ ನಿಂತು ಕಪ್ಪತ್ತ ಮಲ್ಲೇಶ್ವರ ಮಠದ ಕಡೆ ನೋಡಿ ನಾವೆಲ್ಲರೂ ಈಗ ಅಲ್ಲಿಗೆ ಹೋಗಬೇಕಾಗಿದೆ. ಆ ಜಾಗ ಹೆಚ್ಚು ಕಡಿಮೆ 20 ಕಿಲೋಮೀಟರ್‌ ದೂರವಿದೆ ಎಂದೆ. ಜೊತೆಯಲ್ಲಿದ್ದವರಿಗೂ ಈ ವಿಷಯ ತಿಳಿದಿತ್ತು. ಕಪ್ಪತ್ತಗುಡ್ಡದ ಎಲ್ಲ ಕಡೆಯೂ ಹಬ್ಬಿಕೊಂಡಿರುವ ಬೆಟ್ಟಗಳ ನಡುವೆ ನಿಸರ್ಗ ನಿರ್ಮಾಣ ಮಾಡಿ­ ಕೊಂಡಂಥ ಸಹಜ ವೀವ್‌ ಪಾಯಿಂಟ್‌ಗಳಿವೆ. ಅಲ್ಲಿಗೆಲ್ಲ ಹೋಗಲು ಆ ಜಾಗಗಳನ್ನು ಚೆನ್ನಾಗಿ ತಿಳಿದವರು ಇದ್ದರೆ ಚೆನ್ನ. ಅಲ್ಲಿಂದ ಮತ್ತೆ ಡೋಣಿ ಗ್ರಾಮದ ಮೂಲಕ ಹಾಯ್ದು ಕಪ್ಪತ್ತ ಮಲ್ಲೇಶ್ವರ ಮಠದ ಕಡೆ ಬಂದಾಗ ಸಂಜೆ. ಕಾರಿಸಿದ್ದಪ್ಪನ ಪಡಿ ಏರಿ, ನಂತರ ಕಪ್ಪತ್ತ ಮಲ್ಲೇಶ್ವರ ಮಠದ ಒಳಗೆ ನಡೆದು ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿಕೊಂಡಾಗ ನಡೆದು ನಡೆದು ದಣಿದಿದ್ದ ಕಾಲುಗಳಿಗೆ ಸಮಾಧಾನ. ಸುಮಾರು 16 ರಿಂದ 20 ಕಿ. ಮೀ. ಚಾರಣದ ದಣಿವು ಮಲ್ಲೇಶ್ವರ ಮಠದಲ್ಲಿನ ಸಾಂಬಾರು ಕುಡಿದಾಗ ಮಾಯವಾಗಿತ್ತು.

ಅರಣ್ಯ ಇಲಾಖೆಯ ಶ್ಲಾಘನೀಯ ಕಾರ್ಯ
ಮಳೆಗಾಲದ ನಂತರದ ಕಾಲದಲ್ಲಿ ಕಪ್ಪತ್ತಗುಡ್ಡದಲ್ಲಿ ಜನದಟ್ಟಣೆ ಕಡಿಮೆ. ಡೋಣಿ ಗ್ರಾಮದಿಂದ ಗಾಳಿಗುಂಡಿ ಬಸವಣ್ಣನ ಗುಡಿಯ ಕಡೆಗೆ ವಾಹನದ ಮೂಲಕ ಹೋಗುವವರು ನಿಗದಿತ ಶುಲ್ಕ ಪಾವತಿಸಿ ವಾಹನಗಳನ್ನು ಪರಿಶೀಲನೆಗೊಳಪಡಿಸಿಯೇ ಹೋಗಬೇಕು. ಗುಡ್ಡದ ಸುಸ್ಥಿರತೆ, ಸುರಕ್ಷತೆಗಾಗಿ ಹಾಗೂ ಪ್ಲಾಸ್ಟಿಕ್‌ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ವಾಚ್‌ಟವರ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ಮೇಲೆ ಮಾನವ ಹಸ್ತಕ್ಷೇಪ ಸಾಕಷ್ಟು ಕಡಿಮೆಯಾ­ಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರಂತರ ಸಾಹಸದಿಂದ ಕಳ್ಳಬೇಟೆ ಪ್ರಕರಣಗಳೂ ತಗ್ಗಿವೆ.

ವನಸ್ಪತಿಗಳ ತಾಣ
“ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಣ್‌’ ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.

ಚಿತ್ರ- ಲೇಖನ: ಸಿದ್ದು ಸತ್ಯಣ್ಣವರ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.