Bird Story: ಆಕಾಶದಿಂದ ಹಾರಿ ಭೂಮಿಗೆ ಬಂತು ನೋಡಿ..! ಮೂರು ಬೆರಳಿನ ಮಿಂಚುಳ್ಳಿ ಮಹಾತ್ಮೆ

Team Udayavani, Sep 10, 2023, 11:13 AM IST

ಆಕಾಶದಿಂದ ಹಾರಿ ಭೂಮಿಗೆ ಬಂತು ನೋಡಿ..! ಮೂರು ಬೆರಳಿನ ಮಿಂಚುಳ್ಳಿ ಮಹಾತ್ಮೆ

ಕರ್ನಾಟಕದಲ್ಲಿ ಅಷ್ಟಾಗಿ ಕಾಣಿಸದ ಓರಿಯಂಟಲ್‌ ಡ್ವಾಫ್ì ಕಿಂಗ್‌ ಫಿಷರ್‌, ಮಹಾರಾಷ್ಟ್ರದ ಬಾಂದಾ ಕಾಡಿನಲ್ಲಿ ಕಾಣಸಿಗುತ್ತದೆ! ಕಾಮನಬಿಲ್ಲಿನ ಬಣ್ಣಗಳನ್ನೆಲ್ಲಾ ಒಳಗೊಂಡಿರುವ ಈ ಹಕ್ಕಿಯ ಚಿತ್ರ ತೆಗೆಯಲೆಂದೇ ಮಹಾರಾಷ್ಟ್ರಕ್ಕೆ ಹೋಗಿ ಬಂದವರ ಅನುಭವ ಕಥನ…

ಕಳೆದ ವಾರವಷ್ಟೇ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೆ. ಡಿ. ಸತ್ಯನಾರಾಯಣ ಮತ್ತು ಗೌತಮ್‌ ರಮೇಶ್‌ ಕರೆ ಮಾಡಿ, ಮಹಾರಾಷ್ಟ್ರದ ಬಾಂದಾ ಕಾಡಿನಲ್ಲಿ ಓರಿಯಂಟಲ್‌ ಡ್ವಾರ್ಫ್ ಕಿಂಗ್‌ ಫಿಷರ್‌ ಗೂಡು ಕಟ್ಟಿ ಮರಿ ಮಾಡಿದ್ದಾವೆಂದೂ, ಅಲ್ಲಿಗೆ ಹೋಗಿ ಛಾಯಾಗ್ರಹಣ ಮಾಡೋಣವೆಂದೂ ಸಲಹೆ ಇತ್ತರು. ತರಾತುರಿಯಲ್ಲಿ ಕ್ಯಾಮರಾ ಬ್ಯಾಗ್‌ ಹೆಗಲಿಗೇರಿಸಿ, ಗೋವಾ ತಲುಪಿ ಅಲ್ಲಿಂದ ಎರಡು ತಾಸು ಕಾರಿನಲ್ಲಿ ಪ್ರಯಾಣಿಸಿ, ಬೆಳಗಿನ ಆರು ಗಂಟೆಯ ಹೊತ್ತಿಗೆ ಬಾಂದಾ ತಲುಪಿದೆವು. ಅಲ್ಲಿ ನಮಗಾಗಿಯೇ ಕಾಯುತ್ತಿದ್ದ ಪ್ರವೀಣ್‌, ಆ ದಟ್ಟ ಕಾಡಿನ ಎರಡು ಸ್ಥಳಗಳಲ್ಲಿ ಈ ಪಕ್ಷಿ ಸಿಗುವದೆಂದು ತಿಳಿಸಿ, ಅಲ್ಲಿಗೆ ಕರೆದುಕೊಂಡು ಹೋದರು.

ಭರ್ರನೆ ಬಂದು ಸರ್ರನೆ ಹೋಯಿತು!
ಇಳಿಜಾರಿನ ದಟ್ಟ ಕಾನನದ ಮಧ್ಯೆ ಪಕ್ಷಿಯ ಗೂಡಿನಿಂದ ಸ್ವಲ್ಪ ದೂರದಲ್ಲಿ ಮರೆಗೋಡೆಯೊಂದನ್ನು (ಏಜಿಛಛಿ) ವ್ಯವಸ್ಥೆ ಮಾಡಲಾಗಿತ್ತು. ಪಕ್ಷಿ ಛಾಯಾಗ್ರಹಣಕ್ಕೆ ಈ ತರದ ಮರೆಗೋಡೆಗಳು ಅನಿವಾರ್ಯ. ನಾವು ಅದರಲ್ಲಿ ಕುಳಿತು ಕ್ಯಾಮರಾ ಕಾರ್ಯಾಚರಣೆಗೆ ತೊಡಗಿದೆವು. ಮರಿಗಳು ಸ್ವಲ್ಪ ದೊಡ್ಡದಾಗಿವೆಯೆಂದೂ, ಅವಕ್ಕೆ ಆಹಾರ ಪೂರೈಸಲು ಮಿಂಚುಳ್ಳಿ ದೊಡ್ಡ ದೊಡ್ಡ ಕೀಟಗಳನ್ನು ಹಿಡಿದು ತರುತ್ತಿದೆಯೆಂದೂ ಪ್ರವೀಣ್‌ ತಿಳಿಸಿದ. ನೋಡನೋಡು­ತ್ತಿದ್ದಂತೆಯೇ ಮುಷ್ಟಿ ಗಾತ್ರದ ಚಂದದ ಹಕ್ಕಿ, ಕಪ್ಪೆಯೊಂದನ್ನು ಕೊಕ್ಕಿನಲ್ಲಿ ಕಚ್ಚಿ ತಂದು, ಗೂಡಿನ ಹೊರಗೆ ಸ್ವಲ್ಪ ದೂರದಲ್ಲಿದ್ದ ಟೊಂಗೆಯೊಂದರ ಮೇಲೆ ಕುಳಿತೇಬಿಟ್ಟಿತು. ಅತ್ತಿತ್ತ ನೋಡುತ್ತ, ತನ್ನನ್ನು ಯಾವ ಪ್ರಾಣಿ-ಪಕ್ಷಿಗಳೂ ಗಮನಿಸುತ್ತಿಲ್ಲ ಎನ್ನುವದನ್ನು ಖಾತ್ರಿ ಪಡಿಸಿಕೊಂಡು ವೇಗವಾಗಿ ಗೂಡಿಗೆ ಹೋಗಿ ಮರಿಗಳಿಗೆ ಕಪ್ಪೆಯನ್ನು ಆಹಾರವಾಗಿ ಕೊಟ್ಟು ಸರ್ರನೆ ಹಾರಿ ಹೋಯಿತು.

ಕ್ಲಿಕ್‌… ಕ್ಲಿಕ್‌… ಕ್ಲಿಕ್‌… ಕ್ಲಿಕ್‌!
ಹೀಗೆ ಹಾರಿಹೋದ ಹಕ್ಕಿ ಹತ್ತು-ಹದಿನೈದು ನಿಮಿಷಕ್ಕೊಮ್ಮೆ ಮತ್ತೆ ಆಹಾರ ಹುಡುಕಿ ತರುತ್ತಿತ್ತು. ಅದು ಆಹಾರ ಹೊತ್ತು ಬರುವದನ್ನೇ ನಮ್ಮ ಕ್ಯಾಮರಾ ಕಾಯತೊಡಗಿತು. ಒಮ್ಮೆ ಕಪ್ಪೆ, ಇನ್ನೊಮ್ಮೆ ಹಾವುರಾಣಿ, ಓತಿಕ್ಯಾತ, ಮಿಡತೆ, ಜೇಡ, ಏಡಿ ಹೀಗೆ ಹತ್ತು ಹಲವು ಬಗೆಯ ಕೀಟಗಳನ್ನು ಹಿಡಿದು ತರುತ್ತಿತ್ತು. ನಮಗೆ, ನಮ್ಮ ಕ್ಯಾಮರಾಕ್ಕೆ ಅವತ್ತು ಹಬ್ಬ. ರೆಕ್ಕೆ ಬಿಚ್ಚಿದ ಹಕ್ಕಿ, ಹಾರಲನುವಾದ ಹಕ್ಕಿ, ತಾನು ತಂದ ಕೀಟವನ್ನು ಕೊಕ್ಕಿನಿಂದ ಎಗರಿಸಿ ಹಾರಿಸಿ ಹಿಡಿಯುತ್ತಿದ್ದ ಹಕ್ಕಿ, ಹೀಗೆ… ಮಿಂಚುಳ್ಳಿಯ ನಾನಾ ಭಂಗಿಗಳು ನಮ್ಮ ಕ್ಯಾಮರಾದಲ್ಲಿ ಸೆರೆಯಾದವು. ಬೆಳಿಗ್ಗೆ ಆರರಿಂದ ಆರಂಭಿಸಿದವರು ಸಂಜೆ ಆಗುವವರೆಗೂ ಬರ್ಡ್‌ ಫೋಟೋಗ್ರಫಿ ಮಾಡಿದೆವು. ನಾವು ಕುಳಿತಲ್ಲಿಗೇ ಪ್ರವೀಣ್‌ ಊಟ ತಿಂಡಿ ಕರುಣಿಸುತ್ತಿದ್ದ.

ಸುರಂಗ ಕೊರೆದು ಗೂಡು ಮಾಡುತ್ತವೆ!
ಇವು ಸಾಮಾನ್ಯವಾಗಿ ಅರಣ್ಯ ಪ್ರದೇಶ ಮತ್ತು ಜೌಗು ಭೂಮಿಯಲ್ಲಿ ವಾಸಿಸುತ್ತವೆ. ಕಾಡಿನ ತೊರೆ-ಕೊಳಗಳ ಬಳಿ ಹೆಚ್ಚಾಗಿ ಕಂಡು ಬರುತ್ತವೆ. ಗೂಡುಗಳನ್ನು ಕಡಿದಾದ ಗುಡ್ಡಗಳ ತಳದಲ್ಲಿ, ಬಿದ್ದ ಮರದ ಬೇರುಗಳ ಬಳಿ ಮಣ್ಣಿನಲ್ಲಿ ನಿರ್ಮಿಸುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಒಟ್ಟಾಗಿ 100 ಸೆಂಟಿಮೀಟರ್‌ ಉದ್ದದ 3 ರಿಂದ 4 ಸೆಂಟಿಮೀಟರ್‌ ವ್ಯಾಸದ ಸಮತಳವಾದ ಸುರಂಗ ಕೊರೆದು ಗೂಡು ನಿರ್ಮಿಸಿಕೊಳ್ಳುತ್ತವೆ. ಮೊಟ್ಟೆ ಇಡುವ ಕೋಣೆ ಮೇಲ್ಮುಖವಾಗಿರುತ್ತದೆ. ಕೋಣೆಯೊಳಗೆ ನೀರು ನುಗ್ಗದಂತೆ ಮತ್ತು ಒಳಗಿನ ತ್ಯಾಜ್ಯ ಹೊರಗೆ ಹರಿದು ಹೋಗಲನುವಾಗುವಂತೆ ಚಾಕಚಕ್ಯತೆಯಿಂದ ಗೂಡನ್ನು ನಿರ್ಮಿಸುತ್ತವೆ. ಒಮ್ಮೆ 3 ರಿಂದ 7 ಮೊಟ್ಟೆಗಳನ್ನು ಇಡುತ್ತದೆ. ಅಂತಿಮ ಮೊಟ್ಟೆ ಇಟ್ಟ ನಂತರ ಸುಮಾರು 17 ರಿಂದ 18 ದಿನ ಗಂಡು-ಹೆಣ್ಣು ಸರದಿಯ ಮೇಲೆ ಕಾವು ಕೊಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಮೊದಮೊದಲು ಚಿಕ್ಕ ಚಿಕ್ಕ ಕೀಟಗಳನ್ನು ಹಿಡಿದು ತರುತ್ತವೆ. ಒಂದು ವಾರದ ನಂತರ, ಕಪ್ಪೆ ಓತಿಕ್ಯಾತದಂತಹ ದೊಡ್ಡ ಪ್ರಾಣಿಗಳನ್ನೇ ತಂದು ಮರಿಗಳ ಹೊಟ್ಟೆ ತುಂಬಿಸುತ್ತವೆ. ಇದನ್ನೆಲ್ಲಾ ಮರೆಯಲ್ಲಿ ಅಡಗಿ ಕುಳಿತು ಪ್ರತ್ಯಕ್ಷ ನೋಡಿದ ಖುಷಿ ನಮ್ಮದು. ಕರ್ನಾಟಕದಲ್ಲಿ ವಿರಳವಾದ ಡ್ವಾರ್ಫ್ ಕಿಂಗ್‌ ಫಿಷರ್‌ ಹಕ್ಕಿಯ ಛಾಯಾಗ್ರಹಣ ಮಾಡಬೇಕೆಂಬ ಬಹುದಿನದ ಆಸೆ ನೆರವೇರಿದ್ದು ಹೀಗೆ..

ಬಣ್ಣಗಳ ಬೆಡಗು ಬಿನ್ನಾಣ
ಓರಿಯಂಟಲ್‌ ಡ್ವಾರ್ಫ್ ಕಿಂಗ್‌ ಫಿಷರ್‌, ಮಿಂಚುಳ್ಳಿ ಜಾತಿಯ ಪಕ್ಷಿಗಳಲ್ಲಿ ಕಂಡುಬರುವ ಅತ್ಯಂತ ಸಣ್ಣ ಪಕ್ಷಿ. ಬಾಲ, ಕೊಕ್ಕು ಸೇರಿ ಸುಮಾರು 12 ರಿಂದ 14 ಸೆಂಟಿಮೀಟರ್‌ ಉದ್ದ. ಹೆಣ್ಣು ಹಕ್ಕಿ 14 ರಿಂದ 16 ಗ್ರಾಂ ತೂಕ ಹೊಂದಿದ್ದರೆ ಗಂಡು ಹಕ್ಕಿ ಸುಮಾರು 22 ಗ್ರಾಂ ನಷ್ಟು ತೂಕ ಹೊಂದಿರುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಒಂದೇ ತರ. ನೆತ್ತಿಯ ಮೇಲೆ ಕಪ್ಪು ಚುಕ್ಕೆ, ಕತ್ತಿನ ಪಕ್ಕಗಳಲ್ಲಿ ನೀಲಿ ಮತ್ತು ಬಿಳಿ ಬಣ್ಣ, ಗಾಢ ನೀಲಿ ಮತ್ತು ಕಪ್ಪು ಬಣ್ಣದ ರೆಕ್ಕೆಗಳು, ಗಲ್ಲ ಮತ್ತು ಗಂಟಲು ಭಾಗ ಬಿಳಿ, ಅಡಿ ಭಾಗ ತೆಳು ಹಳದಿ, ಕಿತ್ತಳೆ ಬಣ್ಣ ಹೊಂದಿರುತ್ತವೆ. ಕಾಲು ಮತ್ತು ಕೊಕ್ಕುಗಳು ಕೆಂಪು ಬಣ್ಣ. ಕಾಲುಗಳಲ್ಲಿ ಮೂರೇ ಬೆರಳುಗಳನ್ನು ಹೊಂದಿರುವದು ಇದರ ವಿಶೇಷ. ಹಾಗಾಗಿಯೇ ಇದನ್ನು ಮೂರು ಬೆರಳಿನ ಮಿಂಚುಳ್ಳಿ ಎಂದೂ ಕರೆಯುತ್ತಾರೆ. ಚಿಕ್ಕ ಗಾತ್ರದ ಈ ಹಕ್ಕಿ, ತನ್ನ ಆಕರ್ಷಕ ಬಣ್ಣಗಳಿಂದಾಗಿ ಬೆರಗುಗೊಳಿಸುತ್ತವೆ.

ಚಿತ್ರ – ಲೇಖನ: ಜಿ. ಆರ್‌. ಪಂಡಿತ್‌, ಸಾಗರ

ಟಾಪ್ ನ್ಯೂಸ್

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.