Km chinnappa: ನಿಷ್ಠಾವಂತ ನಿಸರ್ಗವಾದಿ ಚಿಣ್ಣಪ್ಪ


Team Udayavani, Mar 3, 2024, 4:47 PM IST

Km chinnappa: ನಿಷ್ಠಾವಂತ ನಿಸರ್ಗವಾದಿ ಚಿಣ್ಣಪ್ಪ

ನಾಲ್ಕು ದಶಕಗಳ ಕಾಲ ನಾಗರಹೊಳೆಯ ಕಾಡನ್ನು ಕಾಪಾಡಿದ ಚಿಣ್ಣಪ್ಪ, ಕಾಡಿಗಾಗಿಯೇ ಬದುಕಿದ ಅಪರೂಪದ ವ್ಯಕ್ತಿ.  ಕಾಡಿನ ರಕ್ಷಣೆಗೋಸ್ಕರ ಕೋವಿ ಹಿಡಿದ ಅವರು ಎಲ್ಲ ಅರ್ಥದಲ್ಲೂ ಕಾಡಿನ ಜೀವ. ಕಾಡುವ ಜೀವ. ಅವರ ನಿರ್ಗಮನದಿಂದ ಆಗಿರುವ ನಷ್ಟ ದೊಡ್ಡದು. ಅವರಂಥ ಕಾಡಿನ ಜ್ಞಾನಿ ಮತ್ತೂಬ್ಬರು ಬರುವುದು ಕಷ್ಟ ಕಷ್ಟ…

ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಒಂದು ಪ್ರೌಢಶಾಲೆಯ ಸಭಾಂಗಣ. ನಾನು ಸ್ಲೈಡ್‌ ಪ್ರೊಜೆಕ್ಟರಿನಿಂದ ಬಿಳಿಯ ಪರದೆಯ ಮೇಲೆ ಮೂಡಿಸುತ್ತಿದ್ದ ವನ್ಯ ಪ್ರಪಂಚದ ಚಿತ್ರಗಳಿಗೆ ಚಿಣ್ಣಪ್ಪನವರಿಂದ ಸಂರಕ್ಷಣಾ ಮಹತ್ವ ಕುರಿತ ವ್ಯಾಖ್ಯಾನ ನಡೆದಿತ್ತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಕ್ಕಳು ತದೇಕಚಿತ್ತರಾಗಿ ಆಲಿಸುತ್ತ ಕುಳಿತಿದ್ದರು. ಪರದೆಯ ಮೇಲೆ ಹುಲಿಯ ಚಿತ್ರ ಕಾಣಿಸಿಕೊಂಡಿತು. ನಿಸರ್ಗದಲ್ಲಿ ಹುಲಿಯಂಥ ಪ್ರಾಣಿಯ ಪಾತ್ರವೇನೆಂಬುದನ್ನು ಚಿಣ್ಣಪ್ಪ ವಿವರಿಸುತ್ತಿರುವಂತೆಯೇ ಹುಡುಗನೊಬ್ಬ ಎದ್ದು ನಿಂತು-“ಒಂದು ಪ್ರಶ್ನೆ ಕೇಳ್ತಾ ಸರ್‌ ಎಂದವನು, ಇದೆಲ್ಲ ನಮಗೆ ಯಾಕೆ ಬೇಕು ಸರ್‌?’ ಎಂದು ಕೇಳಿಬಿಟ್ಟ.

“ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಎಲ್ಲವೂ ಪ್ರಕೃತಿಯ ಭಾಗ. ಪ್ರತಿಯೊಂದಕ್ಕೂ ಈ ಪ್ರಪಂಚದಲ್ಲಿ ಅದರದ್ದೇ ಆದ ಸ್ಥಾನವಿದೆ. ನಮಗೆ ಯಾಕೆ ಬೇಕು ಎನ್ನುವುದು ಮುಖ್ಯವಲ್ಲ’ ಎಂದು ಚಿಣ್ಣಪ್ಪ ಉತ್ತರಿಸಿದರು. ಈ ಪ್ರಪಂಚ ನಮ್ಮದು. ಆನೆ, ಹುಲಿ, ಕರಡಿ ಇವು ಯಾವುದೂ ನಮ್ಗೆ ಬೇಕಿಲ್ಲ ಎಂದು ಹುಡುಗ ವಾದಿಸಿದ. ಅವೆಲ್ಲ ಇರದಿದ್ದರೆ ಕಾಡೇ ಇರುವುದಿಲ್ಲ ಎಂದು ವಿವರಿಸಹೊರಟಾಗ, “ಕಾಡೂ ಬೇಕಾಗಿಲ್ಲ, ನಮಗೆ ಊರೇ ಸಾಕಲ್ಲ’ ಎಂದುಬಿಟ್ಟ. ಅವನ ಉದ್ಧಟತನಕ್ಕೆ ಚಿಣ್ಣಪ್ಪನಿಗೆ ಕೋಪವೇನೂ ಬರಲಿಲ್ಲ. “ಮಗೂ, ಕಾಡಿಲ್ಲದಿದ್ದರೆ ಮಳೆ, ಶುದ್ಧ ಗಾಳಿ ಏನೂ ದೊರಕದೆ ಎಲ್ಲರೂ ಸಾಯಬೇಕಾಗುತ್ತದೆ, ಅಲ್ಲವೇ?’ ಎಂದರು. ಹುಡುಗನೋ ತನ್ನ ಪಟ್ಟು ಬಿಡದೆ, “ಸತ್ತರೆ ಸಾಯ್ತೀವಿ, ಕಾಡಿಂದ ನಾವು ಬದುಕಬೇಕಾಗಿಲ್ಲ’ ಎಂದು ಮೊಂಡನಂತೆ ವರ್ತಿಸಿದ. ಶಾಲೆಯ ಉಪಾಧ್ಯಾಯರು ಸಿಟ್ಟಿನಿಂದ ಎದ್ದು ಅವನತ್ತ ಹೊರಟಾಗ ತಡೆದ ಚಿಣ್ಣಪ್ಪನವರು, ಆ ಹುಡುಗನನ್ನು ಕರೆದು ತಮ್ಮ ಪಕ್ಕ ನಿಲ್ಲಿಸಿಕೊಂಡರು. ಮಕ್ಕಳತ್ತ ತಿರುಗಿ, “ನಿಮ್ಮ ಸ್ನೇಹಿತ ಮಾತನಾಡಿದ್ದರಲ್ಲಿ ಯಾವ ತಪ್ಪೂ ಇಲ್ಲ, ಅಲ್ಲವೇ?’ ಎಂದರು. ಮಕ್ಕಳೆಲ್ಲ ತಪ್ಪು ತಪ್ಪು ಎಂದು ಕೂಗಿಕೊಂಡರು. “ಇಲ್ಲ ತಪ್ಪಿಲ್ಲ. ಅವನು ಈ ನಿಸರ್ಗದ ಬಗೆಗೆ ಇಡೀ ಮನುಷ್ಯ ಕುಲದ ತಾತ್ಸಾರ, ತಿರಸ್ಕಾರಗಳನ್ನು ತುಂಬಾ ಚೆನ್ನಾಗಿ ತನ್ನ ಮಾತಿನಲ್ಲಿ ತೋರಿಸಿಕೊಟ್ಟಿದ್ದಾನೆ. ಈ ಪ್ರಪಂಚದಲ್ಲಿರುವ ಇತರ ಎಲ್ಲ ಜೀವಿಗಳೂ ತಮ್ಮ ಬದುಕಿಗೆ ಆಧಾರವಾಗಿರುವ ಪ್ರಕೃತಿ ಯಾವಾಗಲೂ ಚೆನ್ನಾಗಿರಲಿ, ಹಾಗಿದ್ದರೆ ಮಾತ್ರ ತಾವೂ ತಮ್ಮ ಸಂತತಿಯೂ ಉಳಿಯಬಹುದು ಎಂದು ನಂಬಿರುತ್ತವೆ. ಆದರೆ, ಮನುಷ್ಯ ಹಾಗಲ್ಲ. ತಾನು ಸತ್ತರೂ ಪರವಾಗಿಲ್ಲ, ಪ್ರಕೃತಿ ನಾಶವಾಗಿ ಹೋಗಲಿ, ತನ್ನ ಸ್ವಾರ್ಥ ಸಾಧನೆಯೊಂದೇ ಮುಖ್ಯ. ಮುಂದೆ ತನ್ನದೇ ಸಂತತಿಗೆ ಅಪಾಯವಾದರೂ ಚಿಂತೆಯಿಲ್ಲ ಎಂಬ ರಾಕ್ಷಸ ಧೋರಣೆಯಿರುವ ಮನುಷ್ಯನಿಂದಾಗಿ ನಿಸರ್ಗಕ್ಕೆ ಏನೇನು ಅಪಾಯಗಳಾಗುತ್ತಿವೆ ಎಂಬುದನ್ನು ನಿಮ್ಮ ಸ್ನೇಹಿತ ಹೇಳಿದ. ಹೌದು ತಾನೇ ಎಂದು ಆ ಹುಡುಗನ ಹೆಗಲ ಮೇಲೆ ಕೈಯಿಟ್ಟು ಕೇಳಿದರು. ಹುಡುಗನಿಗೆ ಏನು ಹೇಳಬೇಕೋ ತೋಚದೆ ಸುಮ್ಮನೆ ತಲೆಯಾಡಿಸಿದ. ಮಕ್ಕಳೆಲ್ಲ ಚಪ್ಪಾಳೆ ತಟ್ಟಿದರು.

ಅರಣ್ಯ, ವನ್ಯಜೀವನಗಳ ಬಗೆಗೆ ಹೆಚ್ಚೇನೂ ತಿಳಿಯದಿದ್ದ ಆ ಮುಗ್ಧ ಬಾಲಕ, ವರ್ತಮಾನದ ಹಿರಿಯ ಪೀಳಿಗೆಯ ನಮ್ಮೆಲ್ಲರ ಧೋರಣೆಯ ಪ್ರತಿನಿಧಿಯಂತೆ ನನಗೆ ಕಂಡ. ಸ್ವಾರ್ಥಪರರಾದ ನಮ್ಮ ತಲೆಮಾರಿನವರನ್ನು ಅಲಕ್ಷಿಸಿ, ನಮಗೆ ವನ್ಯಸಂರಕ್ಷಣೆಯ ಪಾಠ ಕಲಿಸುವ ಹೊಣೆಯನ್ನು ನಮ್ಮ ಎಳೆಯ ಪೀಳಿಗೆಯವರಿಗೆ ವಹಿಸುವ ಕೆಲಸವನ್ನು ಚಿಣ್ಣಪ್ಪ ಶಕ್ತಿಮೀರಿ ಕೈಗೊಂಡರು.

ವನ್ಯಜೀವಿ ಸಂರಕ್ಷಣೆಯೇ ಮೂಲಮಂತ್ರ:

ಕಾಡಿನಂಚಿನ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳಲ್ಲಿ ನಿಸರ್ಗಪ್ರೇಮವನ್ನು ಮೂಡಿಸಬಲ್ಲ. ಇಂತಹ ನೂರಾರು ಕಾರ್ಯಕ್ರಮಗಳನ್ನು ನಿರೂಪಿಸಿದ ಚಿಣ್ಣಪ್ಪನವರು, ಹಿರಿಯ ಪೀಳಿಗೆಯವರು ನಿಸರ್ಗಕ್ಕೆ ಎಸಗಿದ ಘೋರ ಅಪಚಾರವನ್ನು ಮನದಟ್ಟು ಮಾಡಿಸಲು ಯತ್ನಿಸಿದರು. ಪತ್ರಕರ್ತರಿಂದ ಸರ್ಕಾರಿ ಅಧಿಕಾರಿಗಳವರೆಗೆ, ಶಿಕ್ಷಕರಿಂದ ಮಠಾಧೀಶರವರೆಗೆ ಸಮಾಜದ ಎಲ್ಲ ವರ್ಗಗಳ ಪ್ರತಿನಿಧಿಗಳೊಡನೆ ಸಂವಾದಗಳನ್ನೇರ್ಪಡಿಸಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸಿದರು. ಅರಣ್ಯ ಇಲಾಖೆಯಲ್ಲಿ 26 ವರ್ಷಗಳ ಸೇವೆ ಸಲ್ಲಿಸಿ 1993ರಲ್ಲಿ ಸ್ವಯಂನಿವೃತ್ತಿ ಪಡೆದ ನಂತರ ಅವರ ಜೀವಿತದ ಕೊನೆಯ ದಿನಗಳವರೆಗೂ ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರುವುದೇ ಅವರ ಧ್ಯೇಯಮಂತ್ರವಾಗಿತ್ತು. ವೃತ್ತಿಜೀವನದ ಕಹಿ ನೆನಪುಗಳನ್ನು ಹಿಂದಿಕ್ಕಿ, ಸ್ವಜನರ ಕುಹಕ, ಕೋಟಲೆಗಳನ್ನು ಬದಿಗೊತ್ತಿ ವನ್ಯಜೀವಿ ಸಂರಕ್ಷಣೆಯ ಅಗತ್ಯ, ಮಹತ್ವಗಳನ್ನು ನಾಡಿನ ಮೂಲೆಮೂಲೆಗಳಲ್ಲಿ ಸಂತನಂತೆ ಸಾರುತ್ತ ಸಾಗಿದ ಚಿಣ್ಣಪ್ಪ- ವೃತ್ತಿ, ಪ್ರವೃತ್ತಿಗಳೆರಡರ ಹಿರಿಮೆಯನ್ನೂ ಎತ್ತಿ ಹಿಡಿದ ನಿಷ್ಠಾವಂತ ನಿಸರ್ಗವಾದಿ. ಅವರ ಸಿಟ್ಟು, ದುಡುಕು, ಟೀಕೆ, ಸಾಹಸ, ಆಕ್ಷೇಪ, ಹೋರಾಟಗಳೇನಿದ್ದರೂ ವನ್ಯಜೀವಿ ಸಂರಕ್ಷಣೆಯ ಪರ ವಕಾಲತ್ತಿನ ಪ್ರತಿಕ್ರಿಯೆಗಳೇ.

ನಿಸರ್ಗದ ನೇರ ಶಿಷ್ಯ:

ನಾಗರಹೊಳೆಯ ವಿವಿಧ ಅರಣ್ಯವಲಯಗಳಲ್ಲಿ ಅಧಿಕಾರಿಯಾಗಿ ಚಿಣ್ಣಪ್ಪ ಸಲ್ಲಿಸಿದ ಸೇವೆಯ ಅಧ್ಯಾಯಗಳು ವನ್ಯಜೀವಿ ಸಂರಕ್ಷಣಾಸಕ್ತರಿಗೆ ಅತ್ಯುತ್ತಮ ಅಧ್ಯಯನ ಸಾಮಗ್ರಿ. ಅವರು ಗುರು ಮುಖೇನ ಕಲಿತುದಕ್ಕಿಂತ ನಿಸರ್ಗದ ನೇರ ಶಿಷ್ಯನಾಗಿ ಪಡೆದ ಶಿಕ್ಷಣವೇ ಮಿಗಿಲಾದದ್ದು. ಅವರ ಕಾರ್ಯಕ್ಷಮತೆಯೇನಿದ್ದರೂ ಸ್ವಾನುಭವದಿಂದ, ಕ್ಷೇತ್ರ ಕಾರ್ಯಪ್ರಯೋಗಗಳಿಂದ ಫ‌ಲಿತವಾದ ಸಿದ್ಧಿ. ಎಲ್ಲಿಯೋ ಚೆದುರಿದ ಎರಡು ಹುಲ್ಲುಕಡ್ಡಿ ತೋರಿಸಿ “ಈಗ ಆನೆ ಹೋಗಿದೆ’ ಎನ್ನುವುದಾಗಲಿ, ಮರವೊಂದರ ಕಾಂಡದ ಬಳಿ ಉಸಿರೆಳೆಯುತ್ತ “ಹುಲಿ ಇತ್ತ ಬಂದು ಹೋಗಿದೆ’ ಎನ್ನುವುದಾಗಲಿ ಯಾರೋ ಕಾಲಜ್ಞಾನಿಯೊಬ್ಬನ ಹೇಳಿಕೆಗಳಂತೆ ಭಾಸವಾಗುತ್ತಿದ್ದವು. ಅಲ್ಲೇ ಮುಂದೆ ಆನೆಯ ಹಸಿ ಲದ್ದಿಯನ್ನೋ ಹುಲಿಯ ಹೆಜ್ಜೆಯನ್ನೋ ಕಾಣುವಾಗ ಚಿಣ್ಣಪ್ಪನವರ ವನ್ಯಜ್ಞಾನ ಅದೆಷ್ಟು ಖಚಿತ ಎಂದು ವಿಸ್ಮಯವೂ ಮೂಡುತ್ತಿತ್ತು.

ಎಪ್ಪತ್ತರ ದಶಕದಲ್ಲಿ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನೇಮಕಗೊಂಡ ಕಾಲಕ್ಕೆ ಅರಣ್ಯಪಾಲನೆಗೆ ಕಂಟಕವಾಗಿದ್ದ ಮರಗಳ್ಳತನ, ಕಳ್ಳ ಬೇಟೆಗಳನ್ನು ನಿಯಂತ್ರಣಕ್ಕೆ ತರಲು ಚಿಣ್ಣಪ್ಪ ಪಟ್ಟಪಾಡು ಅಷ್ಟಿಷ್ಟಲ್ಲ. ನಟ್ಟಿರುಳ ಕತ್ತಲಲ್ಲೂ ದಟ್ಟ ಕಾಡಿನಲ್ಲಿ ನಡೆಯಬಲ್ಲ ಕೌಶಲ, ಕುಖ್ಯಾತ ಬೇಟಿಗಾರರನ್ನು ಅಟ್ಟಾಡಿಸಬಲ್ಲ ಕ್ಷಾತ್ರಧೀರತೆ, ಅವರ ಧೈರ್ಯಸ್ಥೈರ್ಯಗಳು ವದಂತಿಗಳಾಗಿ ಪಡೆದುಕೊಂಡ ಅತಿಮಾನುಷರೂಪ-ಎಲ್ಲವೂ ಸೇರಿ ಚಿಣ್ಣಪ್ಪನ ಅರಣ್ಯಸಂರಕ್ಷಣಾ ಕಾರ್ಯ ಅಸಾಮಾನ್ಯ ಶಕ್ತಿಯನ್ನು ಪಡೆದುಕೊಂಡಿತ್ತು. ಅವರ ನಿಷ್ಠುರತೆ ಸ್ವಾಭಿಮಾನಗಳು, ಗರ್ವದರ್ಪಗಳ ಅವಗುಣದಂತೆ ಬಹುಜನರಿಗೆ ಭಾಸವಾಗುತ್ತಿದ್ದವು. ತಮ್ಮ ನಡೆ-ನುಡಿಗಳಲ್ಲಿ ಚಿಣ್ಣಪ್ಪ ಎಂದೂ ಯಾವ ಹೊಂದಾಣಿಕೆಯನ್ನೂ ಮಾಡಿಕೊಂಡವರಲ್ಲ. ಈ ಬಿಟ್ಟ ಬಾಣದ ರೀತಿ ಅವರಿಗೆ ಗೆಲುವು ತಂದುಕೊಟ್ಟದ್ದಲ್ಲದೆ  ವೈರಿಗಳನ್ನೂ ಎದಿರು ನಿಲ್ಲಿಸಿತು. ಕೆಲವರು ಪೊಲೀಸ್‌ ಅಧಿಕಾರಿಗಳು ಅವರ ಮೇಲೆ ಯಾವುದೋ ದೋಷಾರೋಪ ಹೊರಿಸಿ, ಕೈಗೆ ಕೋಳ ತೊಡಿಸಿ ಊರ ಬೀದಿಯಲ್ಲಿ ಮೆರೆವಣಿಗೆ ಮಾಡಿದರೆಂಬುದು ಚಿಣ್ಣಪ್ಪನವರ ನಿಷ್ಠುರತೆಯ ಪರಿಣಾಮ ಹೇಗಿತ್ತೆನ್ನುವುದಕ್ಕೆ ಒಂದು ಉದಾಹರಣೆ.

ಏರುತ್ತಿರುವ ಜನಸಂಖ್ಯೆ, ಸರ್ಕಾರದ ಜನಪರವಾದ ನೀತಿ ನಿರೂಪಣೆ, ಅರಣ್ಯಗಳ ನಿರ್ವಹಣೆಯಲ್ಲಿನ ದೋಷ, ವನ್ಯಜೀವಿಗಳ ಬಗೆಗಿನ ನಿಷ್ಕರುಣೆ, ಅನಾದರಗಳಿಂದಾಗಿ ಇಂದು ಅರಣ್ಯಪಾಲನೆ ಮತ್ತು ವನ್ಯಜೀವಿ ಸಂರಕ್ಷಣೆಗಳು ಸರ್ಕಾರಕ್ಕೆ ದೊಡ್ಡ ಸವಾಲೆನಿಸಿವೆ. ಪ್ರಸ್ತುತ, ಚಿಣ್ಣಪ್ಪನವರಿಗಿದ್ದ ಯೋಧನಿಷ್ಠೆ, ನಿಲುವುಗಳನ್ನು ಒಂದು ಸಾಧಾರಣ ಮಾದರಿಯಾಗಿ ಮುಂದಿಟ್ಟುಕೊಳ್ಳಲೂ ಸಾಧ್ಯವಾಗದ ಸಂಶಯ ನಮ್ಮನ್ನು ಕಾಡುತ್ತಿದೆ. ಚಿಣ್ಣಪ್ಪನಂಥವರ ಸಾವಿನಿಂದಾದ ನಷ್ಟವನ್ನು ನಾಗರಹೊಳೆಯ ವನ್ಯಜೀವಿಗಳಂತೂ ಹೇಳಿಕೊಳ್ಳಲಾರವು;

ಇನ್ನು ಅರಣ್ಯನಾಶಕ್ಕೆ ಪಣತೊಟ್ಟು ನಿಂತ ಮನುಕುಲಕ್ಕೆ ಅವರ ಅಗಲಿಕೆಯಿಂದ ಆಗಬೇಕಾದುದೇನು?

ಸಾಧನೆಗಳು ಒಂದೆರಡಲ್ಲ :

ವೈಲ್ಡ್‌ ಲೈಫ್ ಫ‌ಸ್ಟ್ ಎಂಬ ಸರ್ಕಾರೇತರ ಸೇವಾ ಸಂಘಟನೆಯ ಅಧ್ಯಕ್ಷರಾಗಿಯೂ ಚಿಣ್ಣಪ್ಪನವರ ಸೇವೆ, ಸಾಧನೆಗಳು ಗಮನಾರ್ಹ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನಿರ್ವಹಣೆಯಿಂದ ವನ್ಯಜೀವಿ ವಿಭಾಗದ ಬೇರ್ಪಡಿಕೆ, ಅರಣ್ಯದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ವಾಹನಗಳ ರಾತ್ರಿ ಸಂಚಾರಕ್ಕೆ ನಿರ್ಬಂಧ, ಕುದುರೆಮುಖದ ಗಣಿಗಾರಿಕೆಯ ತಡೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ- ಮೊದಲಾದವುಗಳ ಮೂಲಕ ಚಿಣ್ಣಪ್ಪನವರ ತಂಡ ಸಾಧಿಸಿದ ಯಶಸ್ಸು ನಾಡಿನ ವನ್ಯಜೀವನಕ್ಕೆ ಲಭಿಸಿದ ಶ್ರೇಯಸ್ಸೂ ಹೌದು.

-ಟಿ.ಎಸ್‌. ಗೋಪಾಲ್‌ 

ಟಾಪ್ ನ್ಯೂಸ್

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

13-uv-fusion

Terrace Garden: ಮನೆಗೊಂದು ತಾರಸಿ ತೋಟ

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…

Shimoga; ಬಂದ್‌ ಆಗದ ತಳಭಾಗದ ಗೇಟ್‌: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು

Shimoga; ಬಂದ್‌ ಆಗದ ತಳಭಾಗದ ಗೇಟ್‌: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು

ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

Raichur; ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

Trekking tips: ಟ್ರೆಕ್ಕಿಂಗ್‌ ಹೋಗ್ತಾ ಇದ್ದೀರಾ?: ನಾವ್‌ ಹೇಳ್ಳೋದ್‌ ಸ್ವಲ್ಪ ಕೇಳ್ರಿ…

ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!

ಮುದ್ರಣ ನಮ್ಮ ರಕ್ತದಲ್ಲೇಇದೆ, ಅದೇ ನಮ್ಮ ಉಸಿರು!

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Untitled-1

School Days: ವ್ಯಾನ್‌ ಬಂತು ಓಡೂ..! ಸ್ಕೂಲ್‌ ಶುರುವಾಗಿದೆ; ಮಕ್ಕಳಿಗೆ, ಅಮ್ಮಂದಿರಿಗೆ..

H. S. Venkateshamurthy: ಎಚ್ಚೆಸ್ವಿ 80 ತುಂಬಿದ ಕಾವ್ಯತಪಸ್ವಿ

H. S. Venkateshamurthy: ಎಚ್ಚೆಸ್ವಿ 80 ತುಂಬಿದ ಕಾವ್ಯತಪಸ್ವಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

Sedam: ಮಹಿಳೆಯರ ರಕ್ಷಣೆ ಮರೆತ ಪಶ್ಚಿಮ ಬಂಗಾಳ: ಸದಾಶಿವ ಶ್ರೀ ಬೇಸರ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

New NEET Exam: ಮುಂದೂಡಿಕೆಯಾದ 2 ವಾರದ ಬಳಿಕ ನೀಟ್‌ ಪಿಜಿ ಪರೀಕ್ಷೆ ದಿನಾಂಕ ಘೋಷಣೆ

Channapatna Bypoll; I am the candidate of alliance party…: What did CP Yogeshwar say?

Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?

13-uv-fusion

Terrace Garden: ಮನೆಗೊಂದು ತಾರಸಿ ತೋಟ

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…

Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.