ಕೊರಿಯಾದ ಕತೆ: ಜೀವ ಉಳಿಸಿದ ಶಿಕ್ಷಕ


Team Udayavani, Mar 3, 2019, 12:30 AM IST

v-67.jpg

ಒಂದು ಗ್ರಾಮದಲ್ಲಿ ಡಿಂಗ್‌ ಎಂಬ ಶ್ರೀಮಂತನಿದ್ದ. ಅವನಿಗೆ ಒಬ್ಬನೇ ಮಗನಿದ್ದ. ಅವನ ಹೆಸರು ಡಾಂಗ್‌. ಮಗನಿಗೆ ಮನೆಯಲ್ಲೇ ಪಾಠ ಹೇಳಲು ಡಿಂಗ್‌ ಒಬ್ಬ ಶಿಕ್ಷಕನನ್ನು ನೇಮಿಸಿಕೊಂಡಿದ್ದ. ಡಾಂಗ್‌ನಿಗೆ ಕತೆಗಳನ್ನು ಕೇಳುವುದೆಂದರೆ ಪಂಚಪ್ರಾಣ. ಓದು, ಬರಹ ಮುಗಿದ ಮೇಲೆ ದಿನವೂ ಒಂದು ಸುಂದರವಾದ ಕತೆ ಹೇಳುವಂತೆ ಶಿಕ್ಷಕನ ಬಳಿ ಕೋರುತ್ತಿದ್ದ. ಶಿಕ್ಷಕನು ಕತೆಗಳಿಗೆ ಕಣಜವಾಗಿದ್ದ. ಅವನು ಹೇಳುವ ಕತೆಗಳು ಬಹು ಸೊಗಸಾಗಿದ್ದವು. ತಾನಲ್ಲದೆ ಬೇರೆ ಯಾರೂ ಈ ಕತೆಗಳನ್ನು ಕೇಳಲು ಅವಕಾಶ ಸಿಗಬಾರದೆಂಬ ಸ್ವಾರ್ಥಡಾಂಗ್‌ ಮನಸ್ಸಿನಲ್ಲಿ ಮೂಡಿತು. ಹೀಗಾಗಿ, “”ನನಗೆ ಹೇಳಿದ ಕತೆಗಳನ್ನು ಬೇರೆ ಯಾರಿಗೂ ಹೇಳಬಾರದು” ಎಂದು ಶಿಕ್ಷಕನಿಂದ ವಚನ ತೆಗೆದುಕೊಂಡ.

ಕೆಲವು ವರ್ಷಗಳು ಕಳೆದವು. ಯುವಕನಾಗಿದ್ದ ಮಗನಿಗೆ ಮದುವೆ ಮಾಡಲು ಡಿಂಗ್‌ ನಿರ್ಧರಿಸಿದ. ಒಬ್ಬ ಧನಿಕರ ಮಗಳ ಜೊತೆಗೆ ಮದುವೆಯೂ ನಿಶ್ಚಯವಾಯಿತು. ಮಗನ ಮದುವೆಗೆ ಬರಲೇಬೇಕೆಂದು ಶಿಕ್ಷಕನಿಗೆ ಆಮಂತ್ರಣ ಕಳುಹಿಸಿದ. ಶಿಕ್ಷಕನು ಮದುವೆಗಾಗಿ ಡಿಂಗ್‌ ಮನೆಗೆ ಹೊರಟ. ಮಾರ್ಗಮಧ್ಯೆ ಕತ್ತಲಾಯಿತು. ಒಂದು ಮರದ ಕೆಳಗೆ ಮಲಗಿಕೊಂಡು ಬೆಳಗಾದ ಬಳಿಕ ಪ್ರಯಾಣ ಮುಂದುವರೆಸಲು ಅವನು ನಿರ್ಧರಿಸಿದ. ಮಧ್ಯರಾತ್ರೆಯ ಸಮಯ ಯಾರೋ ಗಟ್ಟಿಯಾಗಿ ಮಾತನಾಡುವುದು ಕೇಳಿಸಿ ಅವನು ಎಚ್ಚರಗೊಂಡ.

ಆಗ ಒಂದು ಧ್ವನಿ, “”ನಾನು ಶಿಕ್ಷಕ ಹೇಳುತ್ತಿದ್ದ ಬಂಗಾರದ ಹಂಸದ ಕತೆ. ಬಹು ಸುಂದರವಾಗಿರುವ ನನ್ನನ್ನು ಬೇರೆ ಯಾರಿಗೂ ಹೇಳದಂತೆ ವಚನ ತೆಗೆದುಕೊಂಡನಲ್ಲ, ಆ ಡಾಂಗ್‌. ನನಗೆ ಅವನ ಮೇಲೆ ಎಷ್ಟು ಕೋಪ ಬಂದಿದೆಯೆಂದರೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ. ಹೇಗೆ ಗೊತ್ತಾ? ಮದುವೆಗೆ ಕುದುರೆ ಮೇಲೆ ಕುಳಿತುಕೊಂಡು ದಿಬ್ಬಣದೊಂದಿಗೆ ಹೋಗುತ್ತಾನಲ್ಲ. ಆಗ ದಾರಿಯಲ್ಲಿ ಒಂದು ಬಾವಿಯ ನೀರು ಕಂಡು ಕುಡಿಯಲು ಬಯಸುತ್ತಾನೆ. ಬಾವಿಯ ನೀರಿನಲ್ಲಿ ವಿಷವಾಗಿದ್ದುಕೊಂಡು ಕೂಡಲೇ ಅವನನ್ನು ಸಾಯಿಸುತ್ತೇನೆ” ಎಂದು ಹೇಳಿತು.

ಎರಡನೆಯ ಧ್ವನಿ, “”ನಾನೂ ಒಂದು ಕತೆಯೇ. ನನಗೂ ಅವನ ಮೇಲೆ ಇದೇ ಕಾರಣಕ್ಕೆ ಸಿಟ್ಟು ಇದೆ. ಅದೇ ದಾರಿಯಲ್ಲಿ ಚೆರಿ ಹಣ್ಣುಗಳಾಗಿ ಕಾಣಿಸುತ್ತೇನೆ. ನನ್ನನ್ನು ತಿಂದ ಕೂಡಲೇ ಅವನು ಸತ್ತು ಬೀಳುತ್ತಾನೆ” ಎಂದಿತು. ಮೂರನೆಯ ಧ್ವನಿಯೂ ಇನ್ನೊಂದು ಕತೆಯದೇ ಆಗಿತ್ತು. ಅದು, “”ಈ ಮೂರ್ಖನಿಗೆ ಅದರಿಂದ ಸಾವು ಬಾರದೆ ಹೋದರೆ ವಧುವಿನ ಮನೆಯಲ್ಲಿ ಕೊಡುವ ರೇಷ್ಮೆಯ ಉಡುಪಿನಲ್ಲಿ ವಿಷ ಹರಡಿ ಅವನ ಸಾವಿಗೆ ಕಾರಣನಾಗುತ್ತೇನೆ” ಎಂದಿತು. ನಾಲ್ಕನೆಯ ಕತೆಯೂ ಕೋಪದಿಂದ ಕುದಿಯುತ್ತಿತ್ತು. “”ಅದರಿಂದ ಪಾರಾದರೆ ಅವನು ಕುಳಿತುಕೊಳ್ಳುವ ವೇದಿಕೆ ಮುರಿದು ಬಿದ್ದು ಸಾಯುವಂತೆ ಮಾಡುವ ಹೊಣೆ ನನ್ನದು” ಎಂದು ಹೇಳಿತು.

ಕಡೆಯ ಧ್ವನಿ, “”ಇದರಿಂದ ಪಾರಾದರೆ ಅವನು ವಧುವಿನೊಂದಿಗೆ ಪವಡಿಸುವ ಹಾಸಿಗೆಯೊಳಗೆ ವಿಷಸರ್ಪವಾಗಿ ಅಡಗಿ ಕಚ್ಚಿ ಕೊಲ್ಲುತ್ತೇನೆ. ಮುಂಚಿತವಾಗಿ ನಮ್ಮ ಮಾತುಗಳನ್ನು ಅವನಿಗೆ ಯಾರಾದರೂ ಹೇಳಿದರೆ ಅವರಿಗೇ ಸಾವು ಬರುತ್ತದೆ” ಎಂದು ಹೇಳಿತು. ಎಲ್ಲ ಮಾತುಗಳನ್ನೂ ಶಿಕ್ಷಕ ಕೇಳಿಸಿಕೊಂಡ. ತನ್ನ ಪ್ರೀತಿಯ ಶಿಷ್ಯನನ್ನು ಮರಣದಿಂದ ರಕ್ಷಿಸಬೇಕು ಎಂದು ಮನಸ್ಸಿನಲ್ಲೇ ನಿರ್ಧರಿಸಿದ.

ತನ್ನ ಮದುವೆಗೆ ಬಂದ ಶಿಕ್ಷಕನನ್ನು ಕಂಡು ಡಾಂಗ್‌ ತುಂಬ ಸಂತೋಷಪಟ್ಟ. ಮದುವೆಗೆ ದಿಬ್ಬಣ ಹೊರಟಾಗ ಕುದುರೆಯ ಮೇಲೆ ಕುಳಿತುಕೊಂಡ ಡಾಂಗ್‌, ಶಿಕ್ಷಕನನ್ನೂ ಕುದುರೆಯ ಮೇಲೇರಿ ಬರುವಂತೆ ಒತ್ತಾಯಿಸಿದ. ಆದರೆ ಶಿಕ್ಷಕ ಅದಕ್ಕೆ ಒಪ್ಪಲಿಲ್ಲ. “”ನಿನ್ನ ಕುದುರೆಯ ಜೊತೆಗೆ ನಡೆದು ಬರುತ್ತೇನೆ. ಪ್ರಕೃತಿಯ ದೃಶ್ಯಗಳನ್ನು ಸವಿಯುವುದು ನನಗೆ ತುಂಬ ಪ್ರಿಯವಾದುದು” ಎಂದು ಜೊತೆಗೆ ನಡೆದುಕೊಂಡು ಹೊರಟ.

ತುಂಬ ದೂರ ಬಂದಾಗ ಡಾಂಗ್‌ ಬಾಯಾರಿಕೆಯಿಂದ ಬಳಲಿದ. ಆಗ ಬಾವಿಯೊಂದರಲ್ಲಿ ಸ್ಫಟಿಕದಂತಹ ನೀರು ಕಾಣಿಸಿತು. ಅದನ್ನು ಕುಡಿಯಲು ಮುಂದಾದ. ಶಿಕ್ಷಕ ತಡೆದುಬಿಟ್ಟ. “”ವಧುವಿನ ಮನೆಗೆ ಹೋಗಿ ಹವಳದ ಬೋಗುಣಿಯಲ್ಲಿ ಸುಗಂಧಿತವಾದ ನೀರನ್ನು ನೀನು ಕುಡಿಯುವುದು ನಿಯಮ. ದಾರಿಯಲ್ಲಿ ಕಾಣಿಸಿದ ನೀರನ್ನು ಕುಡಿಯಬಾರದು” ಎಂದು ಹೇಳಿದ. ಮುಂದೆ ಹೋದಾಗ ಒಂದು ಮರದಲ್ಲಿ ಕೆಂಪುಕೆಂಪಾಗಿ ಕಳಿತ ಚೆರಿಹಣ್ಣುಗಳು ಕಾಣಿಸಿದವು. ಡಾಂಗ್‌ ಹಣ್ಣುಗಳನ್ನು ಕಂಡು, “”ಎಷ್ಟು ಆಕರ್ಷಕವಾಗಿವೆ ಹಣ್ಣುಗಳು! ನನಗೆ ದಾಹವಾಗಿದೆ, ಹಸಿವಾಗುತ್ತಿದೆ. ಹಣ್ಣುಗಳನ್ನು ತಂದುಕೊಡಿ” ಎಂದು ಕೂಗಿದ.

ಶಿಕ್ಷಕನು ಆಗಲೂ ಬಿಡಲಿಲ್ಲ. “”ವಧುವಿನ ಮನೆಗೆ ಹೋಗಿ ಚಿನ್ನದ ತಟ್ಟೆ ತುಂಬ ಹಣ್ಣುಗಳನ್ನು ಸವಿಯಬೇಕಾದವನು ಧೂಳು ತುಂಬಿದ ದಾರಿಯ ಹಣ್ಣು ತಿಂದರೆ ಆರೋಗ್ಯ ಕೆಡುತ್ತದೆ. ಬೇಡ, ಮುಂದೆ ಹೋಗೋಣ” ಎಂದು ಅವನನ್ನು ಮುಂದೆ ಕರೆದುಕೊಂಡು ಹೋದ. ದಿಬ್ಬಣ ವಧುವಿನ ಮನೆ ತಲುಪಿತು. ಕುಲದ ಪದ್ಧತಿಯಂತೆ ಸೇವಕರು ರೇಷ್ಮೆಯಿಂದ ಸಿದ್ಧಪಡಿಸಿದ ಕಲಾತ್ಮಕವಾದ ಅಂಗಿ ಯೊಂದನ್ನು ಹಿಡಿದು ಸಿದ್ಧವಾಗಿ ನಿಂತಿದ್ದರು. ಅದನ್ನು ಡಾಂಗ್‌ ಮುಂದೆ ಚಾಚಿ, “”ಈ ಬೆಲೆಬಾಳುವ ಉಡುಪು ನಿಮಗಾಗಿ ಸಿದ್ಧವಾಗಿದೆ, ಧರಿಸಬೇಕು” ಎಂದು ಹೇಳಿದರು.

ಉಡುಪನ್ನು ಕೈಗೆ ತೆಗೆದುಕೊಂಡು ಡಾಂಗ್‌ ಧರಿಸುವಷ್ಟರಲ್ಲಿ ಶಿಕ್ಷಕ ಅವನ ಬಳಿಗೆ ಬಂದ. “”ಏನಿದು, ವಧುವಿನ ತಂದೆ ತಂದುಕೊಡಬೇಕಾದ ಉಡುಪನ್ನು ಸೇವಕರು ತಂದುಕೊಡುವುದೆ? ಅವರ ಕೈಯಿಂದ ಅದನ್ನು ಸ್ವೀಕರಿಸಿದರೆ ನಿನ್ನ ಗೌರವಕ್ಕೆ ಧಕ್ಕೆಯಾಗುತ್ತದೆ ತಾನೆ?” ಎಂದು ಹೇಳಿ ಉಡು ಪನ್ನು ಸೆಳೆದು ತೆಗೆದು ತಿಪ್ಪೆಗೆ ಎಸೆದುಬಿಟ್ಟ. ದಿಬ್ಬಣ ಮುಂದೆ ಹೋಯಿತು. ವಧೂವರರಿಗೆ ಕುಳಿತುಕೊಳ್ಳಲು ಬಹು ಚೆಲುವಾಗಿರುವ ವೇದಿಕೆ ಸಿದ್ಧವಾ ಗಿತ್ತು. ಮದುಮಗ ಡಾಂಗ್‌ನನ್ನು ವಧುವಿನ ತಂದೆ ಕೈಹಿಡಿದು ಅಲ್ಲಿಗೆ ಕರೆದುಕೊಂಡು ಹೊರಟ.

ಆದರೆ ಡಾಂಗ್‌ ವೇದಿಕೆ ತಲುಪುವ ಮೊದಲೇ ಶಿಕ್ಷಕ ಆ ಕಡೆಗೆ ಹೋದ. ವೇದಿಕೆಯನ್ನು ಕಾಲುಗಳಿಂದ ಬಲವಾಗಿ ತುಳಿದ. ಅದು ಮುರಿದುಹೋಯಿತು. ಶ್ರೀಮಂತನು, “”ಕೆಲಸದವರು ಎಡವಟ್ಟು ಮಾಡಿದ್ದಾರೆ ಅನಿಸುತ್ತದೆ. ವೇದಿಕೆಗೆ ಬಳಸಿದ ಪರಿಕರಗಳು ಬಲಹೀನ ವಾಗಿದ್ದವು. ಈ ಮಹಾಶಯರು ಅದನ್ನು ತಿಳಿದುಕೊಂಡು ದೊಡ್ಡ ಅನಾಹುತದಿಂದ ಪಾರು ಮಾಡಿದರು” ಎಂದು ಶಿಕ್ಷಕನನ್ನು ಕೊಂಡಾಡಿದ.

ಮದುವೆಯ ವಿಧಿಗಳು ಮುಕ್ತಾಯವಾದುವು. ರಾತ್ರೆ ವಧುವಿ ನೊಂದಿಗೆ ಡಾಂಗ್‌ ಶಯ್ನಾಗೃಹಕ್ಕೆ ಹೋದಾಗ ಅಲ್ಲಿ ಶಿಕ್ಷಕನು ನಿಂತಿರುವುದು ಕಾಣಿಸಿತು. ಈಗ ಡಾಂಗ್‌ ಅಸಾಧ್ಯ ಕೋಪದಿಂದ ಕುದಿದುಬಿಟ್ಟ. “”ನೀವು ನನಗೆ ವಿದ್ಯೆ ಕಲಿಸಿದ ಗುರುಗಳೆಂದು ಗೌರವಿಸಿದರೆ ನನ್ನ ಶಯ್ನಾಗೃಹದ ವರೆಗೆ ಬಂದುಬಿಟ್ಟಿರಾ? ದಾರಿಯಲ್ಲಿ ನೀರು ಕುಡಿಯಲು ಬಿಡದೆ ಬಾಯಾರಿಕೆಯಿಂದ ಸಾಯಲೆಂದು ನೋಡಿದಿರಿ. ಚೆರಿ ಹಣ್ಣುಗಳನ್ನು ತಿನ್ನುವಾಗಲೂ ತಡೆದು ನನ್ನ ಸಾವಿಗೆ ಕಾದು ಕುಳಿತಿರಿ. ವಧುವಿನ ಮನೆಯ ಉಡುಪನ್ನು ಕಿತ್ತೆಸೆದು ಅವಮಾನಿಸಿದಿರಿ. ವೇದಿಕೆಯನ್ನು ಮುರಿದು ಹಾಕಿದಿರಿ. ಈಗ ಇಲ್ಲಿಗೂ ಬಂದಿದ್ದೀರಿ. ಇನ್ನು ನನಗೆ ನಿಮ್ಮಲ್ಲಿ ಯಾವ ಪೂಜ್ಯ ಭಾವವೂ ಇಲ್ಲ, ಕೊಂದುಬಿಡುತ್ತೇನೆ” ಎಂದು ಕತ್ತಿಯನ್ನೆತ್ತಿದ.

ಶಿಕ್ಷಕನು ಶಾಂತವಾಗಿಯೇ, “”ನೋಡು ನಾಲ್ಕು ಸಲ ನಿನ್ನ ಜೀವ ವನ್ನುಳಿಸಿದ್ದೇನೆ. ಈಗ ನಿನ್ನ ಹಾಸಿಗೆಯನ್ನು ಪರೀಕ್ಷೆ ಮಾಡು. ಇದರಲ್ಲಿ ನಿನಗೆ ಸಾವು ತರುವ ಯಾವುದಾದರೂ ವಸ್ತು ಕಾಣಿಸಿದರೆ ಮತ್ತೆ ನನ್ನನ್ನು ಶಿಕ್ಷಿಸುವ ಯೋಚನೆ ಮಾಡು” ಎಂದು ಹೇಳಿದ. ಡಾಂಗ್‌ ಹಾಸಿಗೆಯನ್ನು ಕೊಡವಿದಾಗ ಒಂದು ವಿಷ ಸರ್ಪವು ಸರಸರನೆ ಕೆಳಗಿಳಿದು ಹರಿದು ಹೋಯಿತು. ಆಗ ಶಿಕ್ಷಕನು ಕತೆಗಳು ಹೇಳಿದ ವಿಷಯಗಳನ್ನು ಅವನಿಗೆ ವಿವರಿಸಿ ಅವನನ್ನು ಮರಣದಿಂದ ಕಾಪಾಡಿರುವುದನ್ನು ಅರ್ಥ ಮಾಡಿಸಿದ.

ಡಾಂಗ್‌ ಪಶ್ಚಾತ್ತಾಪದಿಂದ ನೆಲಕ್ಕೆ ಕುಸಿದ. “”ನನಗೆ ಈಗ ಸತ್ಯ ಅರ್ಥವಾಯಿತು. ಒಬ್ಬ ಗುರುವು ಯಾವ ವಿಧದಿಂದ ಶಿಷ್ಯರ ಪ್ರಾಣ ಕಾಯುತ್ತಾರೆಂಬುದನ್ನು ತಾವು ತೋರಿಸಿಕೊಟ್ಟಿರಿ. ನನ್ನ ಅಪರಾಧಕ್ಕೆ ತಾವು ಯಾವ ಶಿಕ್ಷೆ ವಿಧಿಸುವುದಿದ್ದರೂ ಅನುಭವಿಸಲು ಸಿದ್ಧನಾಗಿದ್ದೇನೆ” ಎಂದು ಕಣ್ಣೀರಿಟ್ಟ. ಶಿಕ್ಷಕ ಅವನನ್ನು ಎಬ್ಬಿಸಿ “”ಶಿಷ್ಯನ ತಪ್ಪುಗಳನ್ನು ಕ್ಷಮಿಸದವನು ಒಳ್ಳೆಯ ಗುರುವಾಗಲಾರ. ನೀನು ಯಾರಿಗೂ ಹೇಳಬಾರದೆಂದು ನನ್ನಿಂದ ವಚನ ತೆಗೆದುಕೊಂಡ ಕತೆಗಳನ್ನು ಎಲ್ಲರಿಗೂ ಹೇಳಲು ಅವಕಾಶ ನೀಡಿದರೆ ಸಾಕು” ಎಂದು ಹೇಳಿದ. ಆ ಮಾತಿಗೆ ಡಾಂಗ್‌ ಒಪ್ಪಿಕೊಂಡ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.