ಕೃಷ್ಣಾ ಸೋಬ್ತಿ
Team Udayavani, Nov 26, 2017, 6:15 AM IST
2017ರ ಸಾಲಿನ ಭಾರತದ ಜ್ಞಾನಪೀಠ ಪ್ರಶಸ್ತಿ ಪ್ರಕಟವಾಗಿದೆ, 53ನೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ 93 ವಯಸ್ಸಿನ ಹಿಂದಿ ಸಾಹಿತ್ಯದ ಮಹಾಸ್ತ್ರೀ ಎಂದೇ ಕರೆಯಲ್ಪಡುವ ಕೃಷ್ಣಾ ಸೋಬ್ತಿ ಅವರಿಗೆ. ಸಾಹಿತ್ಯದಲ್ಲಿ ಹೊಸ ದಾರಿ ಹಿಡಿದು ಭಾರತದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಕ್ಕೆ ಈ ಸಲದ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ.
ಕೃಷ್ಣಾ ಸೋಬ್ತಿ ಸೃಷ್ಟಿಸಿದ್ದು ಹತ್ತಾರು ಕೃತಿಗಳು ಮಾತ್ರ. ಆದರೆ, ಎಲ್ಲವೂ ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಹದ್ದು, ಎಂಟೆದೆಯ ಕಥಾಪಾತ್ರಗಳು, ಕೆಲವಂತೂ ಆ ಕಾಲಕ್ಕೆ ಬಂಡಾಯ ಅನ್ನಿಸುವಂತಹದ್ದು. ಸಣ್ಣ ಕಥೆಗಳಿಂದ ತಮ್ಮ ಸಾಹಿತ್ಯ ಜೀವನವನ್ನು ಶುರು ಮಾಡಿದ ಸೋಬ್ತಿ ಟಿಬೆಟಿನ ಧರ್ಮಗುರುಗಳ ಕಥೆಯಾದ ಲಾಮಾ, ನಫೀಸ, ಭಾರತ-ಪಾಕಿಸ್ತಾನ ವಿಭಜನೆಯೊಳಗೊಂಡ ಕಥೆ ಸಿಕ್ಕಾ ಬದಲ್ ಗಯಾ, ಬಾದಲೊಂ ಕೇ Nರೆ ಗಳೇ ಮುಖ್ಯವಾದ ಸಣ್ಣಕಥೆಗಳು. ಅಲ್ಲದೇ ಹಲವು ಪ್ರಶಸ್ತಿ ವಿಜೇತ ಕಾದಂಬರಿಗಳನ್ನೂ ಬರೆದರು. ಸೋಬಿ¤ ಹಶ್ಮತ್ ಎನ್ನುವ ಹೆಸರಿನಲ್ಲೂ ಬರೆದರು, ಹಮ್ ಹಶ್ಮತ್ ಅವರ ಸ್ನೇಹಿತರ ಮತ್ತು ಇತರ ಲೇಖಕರ ಕುರಿತು ಬರೆದ ಲೇಖನಗಳ ಸಂಕಲನವಾಗಿದೆ.
ಸೋಬಿ¤ಗೆ ಹೆಸರು ತಂದು ಕೊಟ್ಟಿದ್ದು 1966ರಲ್ಲಿ ಬರೆದ ಕಾದಂಬರಿ ಮಿತ್ರೊ ಮರಜಾನಿ, ಮದುವೆಯಾದ ಹೆಣ್ಣಿನ ಲೈಂಗಿಕ ಪರಿಶೋಧನೆಯೇ ಇದರ ಕಥಾವಸ್ತು, ಆ ಕಾಲಕ್ಕೆ ಇದೊಂದು ದಿಟ್ಟ ಕಥಾವಸ್ತುವಾಗಿತ್ತು. ಕಾದಂಬರಿಗಳಾದ ಡರ್ ಸೆ ಬಿಚ್ಚುಡಿ ವಿಭಜನಾಪೂರ್ವದ ಸಮಯದಲ್ಲಿ ಅಂತರ್ಜಾತೀಯ ವಿವಾಹದಲ್ಲಿ ಹುಟ್ಟಿದ ಮಗುವಿನ ಕಥೆಯಾದರೆ, ಸುರಜ್ ಮುಖೀ ಅಂದೇರೆ ಖೀ ಯು ಬಾಲ್ಯದಲ್ಲಿ ಶೋಷಣೆಗೊಳಗಾದ ಮಹಿಳೆಯ ಹೋರಾಟವೇ ಕಥಾವಸ್ತು.
ಝಿಂದಗಿನಾಮ, ಯಾರೋಂ ಕೆ ಯಾರ್, ತೀನ್ ಪಹಾರ್ ಇತರ ಕಾದಂಬರಿಗಳು. ಹೇ ಲಡಕಿ ಇತ್ತೀಚಿನ ಕೃತಿ, ಇದರಲ್ಲಿ ಮರಣಶಯೆÂಯಲ್ಲಿರುವ ತಾಯಿ ಮತ್ತು ಗೆಳತಿ, ದಾದಿಯಾಗಿ ತಾಯಿಯನ್ನು ನೋಡಿಕೊಳ್ಳುತ್ತಿರುವ ಮಗಳ ನಡುವಿನ ಸಂಬಂಧವೇ ಕಥಾವಸ್ತು. ಸೋಬಿ¤ ಎಕ್ ಶೋಭತಾ ಅವರ ಕಥಾಸಂಕಲನವಾಗಿದೆ. ಇತ್ತೀಚೆಗಷ್ಟೇ ಗುಜರಾತ್ ಪಾಕಿಸ್ತಾನ್ ಸೆ ಗುಜರಾತ್ ಹಿಂದುಸ್ತಾನ ತಕ್ ಎಂಬ ಆತ್ಮ ಚರಿತ್ರೆಯನ್ನು ಬಿಡುಗಡೆಗೊಳಿಸಿದರು.
ಸೋಬಿ¤ಯ ಪ್ರಕಾರ ಅತಿಯಾದ ಸಹಾನುಭೂತಿಯೂ ವಿನಾಶಕ್ಕೆ ಕಾರಣವಾಗಬಹುದು. ಸೋಬಿ¤ಯು ಕಥಾಪಾತ್ರಗಳಿಂದ ಅಲ್ಪ ದೂರದÇÉೇ ನಿಂತವರು, ಅತಿ ದೂರವಾಗಿದ್ದರೆ ಕಥಾಪಾತ್ರಗಳ ನೋವು ಅರಿಯದೇ ಹೋಗಬಹುದು, ಅತಿ ಹತ್ತಿರವಾದರೆ ತಮ್ಮ ಅನಿಸಿಕೆಗಳೇ ಕಥಾಪಾತ್ರಗಳ ಅನಿಸಿಕೆಗಳಾಗಬಹುದೆಂಬ ವಿಚಾರ, ತಮ್ಮ ನಿಜಜೀವನದಲ್ಲೂ ತಮ್ಮ ಹತ್ತಿರದವರೊಡನೆ ಇದೇ ಸಿದ್ಧಾಂತವನ್ನು ಅಳವಡಿಸಿಕೊಂಡವರು. ತಮ್ಮ ಕಥಾಪಾತ್ರಗಳನ್ನು ಜೀವಂತವಾಗಿಸಲು ತೀವ್ರವಾದ ಸಂಶೋಧನೆಯನ್ನೂ ನಡೆಸಿದವರು. ಆದ್ದರಿಂದಲೇ ಇರಬೇಕು, ಸೋಬಿ¤ ತಮ್ಮ ಕಾದಂಬರಿ ಡರ್ ಸೆ ಬಿಚ್ಚುಡಿ ಯಲ್ಲಿ ತಮ್ಮ ಹುಟ್ಟಿಗಿಂತಲೂ ಸಾಕಷ್ಟು ಮೊದಲೇ ಇದ್ದಿರಬಹುದಾದ ಕಥಾಹಂದರವನ್ನು ಬಹಳ ನೈಜವಾಗಿ ಚಿತ್ರಿಸಿ¨ªಾರೆ. ಝಿಂದಗೀ ನಾಮದಲ್ಲಿ ತಮ್ಮ ಎಳೆ ಪ್ರಾಯದ ಸಮಯದಲ್ಲಿ ಇದ್ದಿರಬಹುದಾದ ಸಾಮಾಜಿಕ ಚಿತ್ರಣವನ್ನು ಸುಂದರವಾಗಿ ಹೆಣೆದಿ¨ªಾರೆ, ಎಲ್ಲಿಯೂ ಸಮಯದ ಗೊಂದಲವಿಲ್ಲ. ನಮ್ಮ ಜೀವನದಲ್ಲಿ ಇತಿಹಾಸವು ಸದಾ ಹರಿಯುತ್ತಿರುವ ನದಿಯಂತೆ, ನಮ್ಮ ಹಿಂದಿನವರ ಜೀವನವನ್ನು ಅರಿಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ, ನಮ್ಮ ಜೀವನವನ್ನೇ ವಿಶ್ಲೇಷಿಸಿದರೆ ಸಾಕು ಎನ್ನುವುದು ಅವರ ಅನಿಸಿಕೆ.
.
.
ಕೃಷ್ಣಾ ಸೋಬಿ¤ 1925, ಫೆಬ್ರವರಿ 18ರಂದು ಈಗ ಪಾಕಿಸ್ಥಾನದಲ್ಲಿರುವ ಪಂಜಾಬ್-ಗುಜರಾತಿನಲ್ಲಿ ಜನಿಸಿದ್ದು, ಭಾರತ, ಪಾಕಿಸ್ತಾನ ವಿಭಾಗವಾಗುತ್ತಿದ್ದಂತೆ ಹೊಸ ದೆಹಲಿಗೆ ವಲಸೆ ಬಂದರು, ಅಲ್ಲಿಂದಲೇ ಶುರುವಾಯಿತು ಸೋಬಿ¤ಯ ಸಾಹಿತ್ಯ ಕೃಷಿ. ಕೃಷ್ಣಾ ಸೋಬಿ¤ಯ ಕುಟುಂಬದವರು ಭಾರತ- ಬ್ರಿಟಿಷ್ ಸರಕಾರಿ ಕೆಲಸದಲ್ಲಿದ್ದರೆ, ಸೋಬಿ¤ ಎರಡು ವರ್ಷ ರಾಜಸ್ತಾನದ ರಾಜನ ಮೊಮ್ಮಗನ ಸೇವೆಯಲ್ಲಿದ್ದರು. ಸೋಬಿ¤ಗೀಗ 93 ವರ್ಷ. ನವದೆಹಲಿಯಲ್ಲಿ ಗಂಡ ಶಿವನಾಥನೊಂದಿಗಿ¨ªಾರೆ. ಸೋಬಿ¤ ಶಿವನಾಥರನ್ನು ಮದುವೆಯಾದದ್ದೇ ತಮ್ಮ 70ನೆಯ ವಯಸ್ಸಿನಲ್ಲಿ.
ಸೋಬಿ¤ ಹಿಂದಿ, ಉರ್ದು ಮತ್ತು ಪಂಜಾಬಿ ಶೈಲಿಯನ್ನು ಅರಗಿಸಿಕೊಂಡು ತಮ್ಮದೇ ಹೊಸ ಶೈಲಿಯನ್ನು ಅಳವಡಿಸಿಕೊಂಡರು, ನಿರೂಪಣ ಶೈಲಿಯೂ ಭಿನ್ನ. ಭಾರತ-ಪಾಕಿಸ್ತಾನ ವಿಭಜನೆ, ಬದಲಾಗುತ್ತಿರುವ ಸಮಾಜದಲ್ಲಿ ಗಂಡು-ಹೆಣ್ಣಿನ ಸಂಬಂಧ, ಕಳೆದುಹೋಗುತ್ತಿರುವ ಮಾನವ ಮೌಲ್ಯ ಎಲ್ಲವೂ ಸೋಬಿ¤ ತಮ್ಮ ಕೃತಿಗಳಿಗೆ ಆರಿಸಿದ ವಿಷಯಗಳು. ಅವರ ಹಲವು ಕೃತಿಗಳು ಇಂಗ್ಲೀಷ್ ಮತ್ತು ಉರ್ದುವಿನಲ್ಲೂ ಲಭ್ಯ, ಇನ್ನೂ ಕೆಲವು ಕೃತಿಗಳು ಸ್ವೀಡಿಶ್ ಮತ್ತು ರಷ್ಯನ್ ಭಾಷೆಗೂ ಭಾಷಾಂತರಿಸಲ್ಪಟ್ಟಿವೆ. ಸೋಬಿ¤ಯವರ ಕೃತಿಗಳಲ್ಲಿ ಪ್ರಾಂತೀಯ ಭಾಷೆಯ ಸೊಗಡು ಮುಖ್ಯ ಆಕರ್ಷಣೆ ಯÇÉೊಂದು. ಆದರೆ, ಇದೇ ಅವರ ಕೃತಿಗಳ ಭಾಷಾಂತರಕ್ಕೆ ತಂದೊಡ್ಡುವ ಸವಾಲು.
ಲೇಖಕಿಯರ ಜಗಳ
ಸೋಬಿ¤ ಮತ್ತು ಸೋಬಿ¤ಯ ಕೃತಿಗಳ ವಿಚಾರ ಬಂದಾಗ ಅವರ ಕಾದಂಬರಿ ಝಿಂದಗಿ ನಾಮ ದ ಹುಟ್ಟು, ಬೆಳವಣಿಗೆಯ ಬಗ್ಗೆ ಬರೆಯದಿದ್ದರೆ ಹೇಗೆ. ಈ ಕಾದಂಬರಿಯ ಮೊದಲ ಹೆಸರು ಚನ್ನಾವಾಗಿತ್ತು. ಇದನ್ನು ಮೊದಲಿಗೆ 1952ರಲ್ಲಿ ಪ್ರಕಟಣೆಗೆ ಕೊಟ್ಟಾಗ ಅಲಹಾಬಾದಿನ ಮುದ್ರಕರು ಕಾದಂಬರಿಯ ಬಾಷೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದರು, ಇದನ್ನು ಅರಿತ ಸೋಬಿ¤ ಕಾದಂಬರಿಯ ಪ್ರಕಟಣೆಯನ್ನು ನಿಲ್ಲಿಸಿದರು. ಪುನಃ ಕಾದಂಬರಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿ, ಝಿಂದಗಿನಾಮ-ಝಿಂದಾ ರುಕ್ ಎಂದು ಹೊಸ ನಾಮಕರಣ ಮಾಡಿ 1979ರಲ್ಲಿ ಪ್ರಕಟಿಸಿದರು. ಝಿಂದಗಿನಾಮ 1990ರ ಸುಮಾರಿನ ಪಂಜಾಬಿನ ಹಳ್ಳಿಯ ಜನಜೀವನದ ಸುತ್ತ ಹೆಣೆದ ಕಥಾಹಂದರವಾಗಿದ್ದು, ಇದರಲ್ಲಿ ಸೋಬಿ¤ಯ ರಾಜಕೀಯ ಹಾಗೂ ಸಾಮಾಜಿಕ ಕಳಿಕಳಿಯು ಎದ್ದು ಕಾಣಿಸುತ್ತದೆ, ಇದಕ್ಕೆ 1980ರಲ್ಲಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂತು. ಝಿಂದಗಿನಾಮ-ಝಿಂದಾ ರುಕ್ ಪ್ರಕಟಣೆಗೊಂಡ ಕೆಲವೇ ವರ್ಷಗಳಲ್ಲಿ ಇನ್ನೊಬ್ಬ ಪ್ರಖ್ಯಾತ ಹಿಂದಿ ಸಾಹಿತಿ ಅಮೃತಾ ಪ್ರೀತಮ… ಹರದತ್ ಕಾ ಝಿಂದಗಿನಾಮ ಎಂಬ ಕೃತಿಯನ್ನು ಹೊರತಂದರು. ಅಲ್ಲಿಂದ ಶುರುವಾಯಿತು, ಹಿಂದಿಯ ಇಬ್ಬರು ಮಹಾ ಸಾಹಿತಿಗಳ ಜಟಾಪಟಿ, ಅಮೃತಾ ಪ್ರೀತಮ್ ತಮ್ಮ ಕಾಪಿರೈಟ್‌ನ್ನು ಮುರಿದರೆಂದು, ತಮ್ಮ ಕೃತಿಯ ಶೀರ್ಷಿಕೆಯನ್ನು ಉಪಯೋಗಿಸಿದರೆಂದು ಸೋಬಿ¤ ಕೋರ್ಟಿನ ಮೆಟ್ಟಿಲನ್ನು ಹತ್ತಿದರು, ಕೇಸು ಬರೋಬ್ಬರಿ 26 ವರ್ಷಗಳ ಕಾಲ ಕೋರ್ಟಿನಲ್ಲಿತ್ತು, ಈ ಮಧ್ಯೆ ಕೋರ್ಟಿನಲ್ಲಿ ಅಮೃತಾ ಪ್ರೀತಮ್ ಮತ್ತು ಸೋಬಿ¤ಯ ಮೂಲಕೃತಿಗಳಿಟ್ಟ ಪೆಟ್ಟಿಗೆಯೇ ಮಂಗಮಾಯವಾಯಿತು. ಮುಂದೆ ಕೋರ್ಟ್ ಅಮೃತಾ ಪ್ರೀತಮ್ ಪರವಾಗಿ ತೀರ್ಪು ಕೊಟ್ಟಾಗ ಅಮೃತಾ ಪ್ರೀತಮ್ ತೀರಿಕೊಂಡು ವರ್ಷ ಆರು ಕಳೆದಿತ್ತು.
– ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.