ಲೇಡಿ ಕಂಡಕ್ಟರ್
Team Udayavani, Mar 5, 2017, 8:23 PM IST
ಮಾರ್ಚ್ 8, ವಿಶ್ವ ಮಹಿಳಾ ದಿನ. ಎಷ್ಟೆಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರವೇಶವಾಗಿದೆ; ಆದರೂ “ಲೇಡಿ’ ಎಂಬ ವಿಶೇಷಣವೊಂದು ಹಾಗೆಯೇ ಉಳಿದುಕೊಂಡಿದೆ. ಬಸ್ಸು ಕಂಡಕ್ಟರ್‌ನ ಕೆಲಸ ಪುರುಷರಿಗೆ ಮೀಸಲಾದುದು ಎಂದು ಭಾವಿಸುವ ದಿನಗಳಿದ್ದವು; ಈಗ ಮಹಿಳೆಯರೂ ಕಂಡಕ್ಟರ್‌ಗಳಾಗುತ್ತಿದ್ದಾರೆ. ಅವರನ್ನು “ಲೇಡಿ ಕಂಡಕ್ಟರ್’ಗಳೆಂದು ಕರೆಯಲಾಗುತ್ತದೆ. ಬಸ್ಸಿನಂಥ ಸಾರ್ವಜನಿಕ ಅವಕಾಶದಲ್ಲಿ ಲೇಡಿಯೊಬ್ಬಳ ಪ್ರವೇಶವಾದಾಗ ವಾತಾವರಣವು ಒಂದು ವಿಶಿಷ್ಟ ಶಿಸ್ತಿಗೊಳಪಡುವ ರೀತಿಯನ್ನು ಕೊಂಚ ಲಘುಧಾಟಿಯಲ್ಲಿ ನಿರೂಪಿಸುವ ಲೇಖನವಿದು…
ಕೆಂಪು ಬಸ್ಸಿಗೂ ನನಗೂ ಒಂದು ರೀತಿಯ ಅವಿನಾಭಾವ ಸಂಬಂಧ. ನನ್ನ ದಿನನಿತ್ಯದ ಓಡಾಟದಲ್ಲಿ ಬಸ್ ಪ್ರಯಾಣ ಅನಿವಾರ್ಯ. ತಿಂಗಳ ಕೊನೆಯ ದಿನಗಳವರೆಗೆ ವೇತನವನ್ನು ಸರಿದೂಗಿಸಲು ಹರಸಾಹಸ ಪಡುವಾಗ ಇನ್ನು ಸ್ವಂತ ಗಾಡಿ ಖರೀದಿ ಕನಸಿನ ಮಾತೇ ಬಿಡಿ. ಹಾಗಾಗಿ, ನಮ್ಮ ಸಾರಿಗೆ ಸಂಸ್ಥೆಯ ಕೆಂಪು ಬಸ್‌ಗಳು ನಮ್ಮದೇ ಗಾಡಿಗಳೆನಿಸಿಬಿಟ್ಟಿrವೆ. ನಮ್ಮ ಜೀವನದ ಕಾಲು ವಯಸ್ಸಿಗಿಂತ ಸ್ವಲ್ಪ ಜಾಸ್ತಿ, ಅರ್ಧ ವಯಸ್ಸಿಗಿಂತ ಸ್ವಲ್ಪ ಕಡಿಮೆ ದಿನಗಳನ್ನು ಬಸ್ಸಿನ ಪ್ರಯಾಣದÇÉೇ ಕಳೆದುಬಿಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಕಷ್ಟವೋ ಸುಖವೋ, ನಮ್ಮ ಜೀವನ ಬಸ್ ಪ್ರಯಾಣದ ಸೂರೊÂàದಯದಿಂದ ಪ್ರಾರಂಭವಾಗಿ ಸೂರ್ಯಾಸ್ತದೊಂದಿಗೆ ಮುಗಿಯುತ್ತಿದೆ.
ಪುರುಷ ಪ್ರಧಾನ ಸಮಾಜವೆಂಬಂತೆ ಈ ಬಸ್ಸುಗಳು ಸಹ ಒಂದು ಕಾಲದಲ್ಲಿ ಪುರುಷ ಪ್ರಧಾನ ಬಸ್ಸುಗಳೇ. ಡ್ರೈವರ್ ಮತ್ತು ಕಂಡಕ್ಟರ್‌ಗಳಾಗಿ ಪುರುಷರೇ ಹೆಚ್ಚಾಗಿ ಇರುತ್ತಿದ್ದರಿಂದ ಬಸ್‌ನಲ್ಲಿ ಪುರುಷರ ಹವಾನೇ ಜಾಸ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಟಿಕೆಟ್ ತೆಗೆಯದೇ ಕಂಡಕ್ಟರ್‌ನೊಂದಿಗೆ ತನ್ನ ಸ್ಟಾಪ್ ಬರುವವರೆಗೂ ಜಗಳ ಕಾಯುವ ಕುಡುಕ, ಚಿಲ್ಲರೆಗಾಗಿ, ಇಲ್ಲದ ಸ್ಟಾಪಿಗಾಗಿ, ಚಿಕ್ಕ ಮಕ್ಕಳಿಗೆ ತೆಗೆಯುವ ಹಾಫ್ ಟಿಕೆಟ್‌ಗಾಗಿ ಹಾವು-ಮುಂಗುಸಿಯಂತೆ ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ನಡೆಯುವ ಜಗಳ ನಮಗೆ ಬೇಸರ ಕಳೆಯುವ ಮನರಂಜನೆಯಾಗುತ್ತಿತ್ತು. ಇಲ್ಲವೆ, ಅದರಲ್ಲಿ ನಾವು ಯಾವುದಾದರೂ ಪಾರ್ಟಿಯ ಭಾಗಿಯಾಗಿ ಜಗಳದ ಪಾಲುದಾರರಾಗಿರುತ್ತಿ¨ªೆವು.
ಹಾಂ! ಪುರುಷಪ್ರಧಾನ ಬಸ್ಸುಗಳು ಅಂದೆನಲ್ಲ, ಆದರೆ, ಈಗ ಹಾಗಿಲ್ಲ. ಪುರುಷ ಕಂಡಕ್ಟರ್ ಜಾಗಕ್ಕೆ ಈಗ ಸಾಕಷ್ಟು ಮಹಿಳೆಯರು ಬಂದಿ¨ªಾರೆ. ಈಗ ಎಲ್ಲರ ಬಾಯಲ್ಲೂ ಕಂಡಕ್ಟರ್ ಹೋಗಿ ಲೇಡಿ ಕಂಡಕ್ಟರ್! ಇಷ್ಟಕ್ಕೂ ನಮ್ಮ ಕರಾವಳಿ ಭಾಗಕ್ಕೆ ಲೇಡಿ ಕಂಡಕ್ಟರ್‌ಗಳ ಆಗಮನ ಆಗಿದ್ದು ಇತ್ತೀಚಿನ ಐದಾರು ವರ್ಷಗಳಲ್ಲಿ. ಉತ್ತರಕರ್ನಾಟಕದ ಹೆಣ್ಣುಮಕ್ಕಳೇ ಹೆಚ್ಚಿನ ಸಂಂಖ್ಯೆಯಲ್ಲಿ ಲೇಡಿ ಕಂಡಕ್ಟರ್‌ಗಳಾಗಿ ನಮ್ಮ ಜಿÇÉೆಗೆ ಬಂದುಬಿಟ್ಟರು. ಹುಬ್ಬಳ್ಳಿಗೋ ಬೆಂಗಳೂರಿಗೋ ಹೋದಾಗ ಮಾತ್ರ ಲೇಡಿ ಕಂಡಕ್ಟರ್‌ಗಳನ್ನು ನೋಡುತ್ತಿದ್ದ ನನಗೆ, ದಿನಾ ನಾನು ಓಡಾಡುತ್ತಿದ್ದ ಬಸ್ಸಿಗೆ ಲೇಡಿ ಕಂಡಕ್ಟರ್‌ಗಳಾಗಿ ಬರುತ್ತಿರುವುದು ಶುರುವಾದ ಮೇಲೆ ಪುರುಷ ವಾತಾವರಣದ ಬಸ್ಸುಗಳಲ್ಲಿ ವಾತಾವರಣ ಕಸಿವಿಸಿಗೊಂಡಂತಾಗಿದ್ದು ಸುಳ್ಳಲ್ಲ. ಮೊದಮೊದಲಿಗೆ ಅವರಿಗೂ ನಮಗೂ ಭಾಷಾ ಸಮಸ್ಯೆ ಆಗಿದ್ದು ಹೌದು. ಇಷ್ಟಕ್ಕೂ ಹೊರಗಿನ ಊರಿನ ಹೆಣ್ಣುಮಕ್ಕಳು ಎಂದು ಒಂದಿಷ್ಟು ನಮ್ಮ ನಿತ್ಯ ಪ್ರಯಾಣಿಕರ ಪುರುಷ ಅಹಂ ಜಾಗೃತಗೊಂಡು ಒಂದಿಷ್ಟು ಅವರನ್ನು ಕಾಡಿಸಿದ್ದು ಇಲ್ಲವೇ ರುಬಾಬು ಮಾಡಿದ್ದೂ ಇದೆ. ಕಾಲೇಜು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ಬಸ್ಸುಗಳಲ್ಲಿ ಪುಂಡು ಕಾಲೇಜು ಹುಡುಗರ ಗಲಾಟೆ ಕೀಟಲೆ ಯಾವಾಗಲೂ ಅತಿಯಾಗಿರುತ್ತಿತ್ತು. ಹುಡುಗಿಯರಿಗೆ ಸದಾ ಕೀಟಲೆ ಮಾಡುತ್ತ ಒಂದು ರೀತಿಯ ದಾದಾಗಿರಿ ಮಾಡಿಕೊಂಡು ಬರುತ್ತಿದ್ದ ಕಾಲೇಜು ಹುಡುಗರುಗಳು ಸಾಕಷ್ಟು ಪ್ರಭಾವಶಾಲಿ, ಸ್ಥಿತಿವಂತರ ಮಕ್ಕಳು. ಕಂಡಕ್ಟರ್, ಡ್ರೈವರ್‌ಗಳನ್ನು ಗೋಳು ಹೊಯ್ದಕೊಳ್ಳುತ್ತಿದ್ದರು. ಅಲ್ಲದೆ, ಪೊಲೀಸ್ ಸ್ಟೇಶನ್ ಅಂತ ಏನಾದರೂ ಹೋದರೆ ತಮ್ಮ ಪ್ರಭಾವ ಬಳಸಿ ಕಂಡಕ್ಟರ್-ಡ್ರೈವರ್‌ಗಳದೇ ತಪ್ಪು ಎನ್ನವ ಹಾಗೇ ಮಾಡಿಬಿಡುತ್ತಿದ್ದರು. ಸಾಕಷ್ಟು ಮಂದಿ ಕಂಡಕ್ಟರ್‌ಗಳು ಈ ಪೋಕರಿಗಳ ಸಹವಾಸವೇ ಬೇಡವೆಂದು ಸುಮ್ಮನಿದ್ದು ಬಿಡುತ್ತಿದರು. ಒಟ್ಟಿನಲ್ಲಿ ಕಂಡಕ್ಟರ್- ಡ್ರೈವರಗಳನ್ನು ಗೋಳಾಡಿಸುವುದರ ಮೂಲಕ ಹುಡುಗಿಯರ ಮುಂದೆ ಹೀರೋಯಿಸಂ ಕಾಣಿಸಿಕೊಳ್ಳುತ್ತಿದ್ದರು. ಈಗ ಲೇಡಿ ಕಂಡಕ್ಟರುಗಳು ಬಂದ ಮೇಲೆ ಬಸ್‌ನಲ್ಲಿ ವಾತಾವರಣವೇ ಬದಲಾಗಿ ಹೋಗಿದೆ.
ಪುರುಷ ಕಂಡಕ್ಟರ್‌ಗಳೇ ಕಾಲೇಜ್ ಹುಡುಗರ ಉಪಟಳ ತಡೆದುಕೊಳ್ಳಲು ಹೆಣಗಾಡುತ್ತಿರಬೇಕಾದರೆ ಎಂಥ ಸ್ಥಿತಿ ಇದೆ ಎಂಬುದನ್ನು ಊಹಿಸಿ. ಒಂದು ಸಲ ಬಹುತೇಕ ಕಾಲೇಜು ಮಕ್ಕಳಿಂದ ತುಂಬಿದ ಬಸ್ಸಿನಲ್ಲಿ ಲೇಡಿ ಕಂಡಕ್ಟರೊಬ್ಬರು ಪ್ರತಿಯೊಬ್ಬರ ಪಾಸ್ ನೋಡಿ ಮುಂದಕ್ಕೆ ಸರಿಸುತ್ತ ಬಂದರು.ಹುಡುಗಿಯರೆಲ್ಲ ಪಾಸ್ ಕಾಣಿಸುತ್ತ ಮುಂದಕ್ಕೆ ಹೊದರು. ಪ್ರಭಾವಶಾಲಿ ವ್ಯಕ್ತಿಯೊಬ್ಬನ ಪುತ್ರ ಮಹಾಶಯನೊಬ್ಬ ಬಸ್ಸಿನ ಮಧ್ಯದಲ್ಲಿ ಹುಡುಗಿಯರು ದಾಟುವಾಗ ತನ್ನ ಮೈಗೆ ತಾಗಿಸಿಕೊಂಡು ದಾಟುವ ಹಾಗೇ ನಿಂತುಕೊಂಡಿದ್ದನು. ನೋಡಿದ ಲೇಡಿ ಕಂಡಕ್ಟರು, “ದಾರಿ ಬಿಟ್ಟು ಸೈಡಿಗೆ ನಿಲ್ಲಕ್ಕಾಗಲ್ವ?’ ಎಂದು ಜೋರು ಮಾಡಿದ್ದಳು. ಸದಾ ಇನ್ನೊಬ್ಬರಿಗೆ ಟಿಂಗಲ್ ಮಾಡಿ ಗೊತ್ತಿದ ಅವನಿಗೆ ಲೇಡಿ ಕಂಡಕ್ಟರು ಜೋರು ಮಾಡಿದ್ದು , ಅದೂ ಹುಡುಗಿಯರ ಮುಂದೆ, ಅವಮಾನವನ್ನು ಸಹಿಸಿಕೊಳ್ಳಲಿಕ್ಕೆ ಆಗಲಿಲ್ಲ. “ನಾನು ಇÇÉೆ ನಿÇÉೋದು. ನೀವ ಏನ ಮಾಡ್ಕೊàಳತ್ತಿರಾ ಮಾಡ್ಕೊಳ್ಳಿ’ ಎಂದ. ಮೊದಲೇ ಬಸ್Õನಲ್ಲಿ ರಶ್ ಇದ್ದುದರಿಂದ ಟಿಕೆಟ್ ತೆಗೆಯುವ ಗಡಿಬಡಿಯಲ್ಲಿದ್ದ ಲೇಡಿ ಕಂಡಕ್ಟರಿಗೆ ಕೋಪ ಬಂದು, “ಯಾಕಲೇ ಮೈಯ್ನಾಗ ನೆಟ್ಟಗೈತಿ ಇಲ್ಲವೋ, ಅವ್ವಾ ಅಪ್ಪಾ ಇದನ್ನೆ ಮಾಡಕ್ಕೆ ಕಾಲೇಜಿಗೆ ಕಳಸಕ್ಕಹತ್ತಾರೆ ಏನು, ಮಾನ ಮರಾÌದಿ ಸ್ವಲ್ಪನಾದ್ರೂ ಐತೋ ಇಲ್ಲವೋ, ಬದಿಗೆ ಸರಿತಿಯೋ ಇಲ್ಲವೋ ನಾನೇ ಎಳೆದು ಕೆಳಗೆ ಇಳಸಲೋ’ ಎಂದು ತನ್ನ ಶೈಲಿಯಲ್ಲಿ ಜೋರಾಗಿ ಒದರಿದ ಹೊಡತಕ್ಕೆ ಹುಡುಗರ ಗಲಾಟೆಯಿಂದ ಕೂಡಿದ ಬಸ್ಸು ಸೈಲೆಂಟಾಯಿತು. ಎಲ್ಲ ಹುಡುಗಿಯರು ಆ ಕಡೆ ನೋಡತೊಡಗಿದ್ದರು ಮತ್ತು ಸಣ್ಣದಾಗಿ ನಗತೊಡಗಿದ್ದರು.
ಅವನು ಮತ್ತು ಅವನ ಜೊತೆ ಇದ್ದ ಪೋಕರಿಗಳ ಮುಖ ಇಂಗು ತಿಂದ ಮಂಗನಂತಾಗಿತ್ತು. ತಾನು ಇಷ್ಟು ದಿನ ಕಾದುಕೊಂಡು ಬಂದಿದ್ದ ಒಂದು ರೀತಿಯ ಹವಾ ಲೇಡಿ ಕಂಡrರ್‌ನಿಂದ ಹಾಳಾಗುತ್ತ ಇದೆಯಲ್ಲ ಎಂದು ಅವನು ಕೋಪದಿಂದ ಬುಸುಗುಡತೊಡಗಿದ್ದ. “ನಮ್ಮೂರ ಹೇಗೆ ದಾಟಿ ಹೋಗುತ್ತಿ’ ಎಂದು ಸಿಟ್ಟಿನಲ್ಲಿ ಧವುಕಿ ಹಾಕಿದ. ಲೇಡಿ ಕಂಡrರರಿಗೂ ಸಿಟ್ಟು ನೆತ್ತಿಗೇರಿತು. “ಯಾಕೇಲೇ ಜೈಲನಾಗೆ ಮು¨ªೆ ಮುರೀಬೇಕು ಅನ್ನಾ ಆಶೆ ಐತೇನು. ಪೊಲೀಸ್ ಸ್ಟೇಷನಿಗೆ ಗಾಡಿ ತಿರಗಿಸಿಲ್ಲಿಕ್ಕೆ ಡ್ರೈವರಿಗೆ ಹೇಳಲೇನು’ ಎಂದು ಧ್ವನಿ ಏರಿಸಿ ಹೇಳಿದಳು. ಪೊಲೀಸ್ ಶಬ್ದ ಕೇಳಿದೊಡನೆ ಅವನ ಅಕ್ಕಪಕ್ಕ ಇದ್ದ ಪೋಕರಿ ಹುಡುಗರು ಸಾವಕಾಶವಾಗಿ ಜಾಗ ಖಾಲಿ ಮಾಡಿದರು.
ಒಬ್ಬಂಟಿಯಾದ ಅವನಿಗೆ ಪೊಲೀಸ್ ಸ್ಟೇಷನ್‌ಗೆ ಹೋದರೆ ಮೊದಲಿನಂತೆ ತನ್ನ ಪ್ರಭಾವ ಕೆಲಸ ಮಾಡಲಾರದು. ಕಂಡಕ್ಟರ್ ಮೊದಲೇ ಲೇಡಿ. ಅದು ಅಲ್ಲದೇ ಆಗ ತಾನೇ ದೇಶದಲ್ಲೆಡೇ ನಿರ್ಭಯಾ ಪ್ರಕರಣದ ಹವಾ ಜೋರಾಗಿರುವುದರಿಂದ ಪೊಲೀಸರು ಹಿಂದೆ ಮುಂದೆ ನೋಡದೆ ಒದ್ದು ಒಳಗೆ ಹಾಕುತ್ತಾರೆ ಅಂತಾ ಅನಿಸಿರಬೇಕು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಅವಳ ಮೇಲೆ ಬುಸಗುಡುತ್ತ¤ ಹಿಂದಕ್ಕೆ ಹೋಗಿ ನಿಂತ. ಅದೇ ಲಾಸ್ಟ್, ಅವನು ಮುಂದೆ ಲೇಡಿ ಕಂಡಕ್ಟರಗಳು ಇರುವ ಬಸ್ ಹತ್ತೋದೇ ಬಿಟ್ಟ.
ಒಮ್ಮೆ ಹೀಗಾಯಿತು. ಬಾಗಿಲು ಇಲ್ಲದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಸಾಕಷ್ಟು ಹುಡುಗಿಯರು, ಹೆಂಗಳೆಯರು ಇದ್ದರು.
ಜೀನ್ಸ್ ಪ್ಯಾಂಟು, ಟೈಟ್ ಟೀ ಶರ್ಟ್ ಹಾಕಿದ್ದ ಹಿಂದಿ ಸಿನೆಮಾ ಹೀರೋನಂತೆ ಸ್ಟೈಲ್‌ನಲ್ಲಿ ಓಡೋಡಿ ಬಂದು ಬಸ್ ಹತ್ತಿ ಬಾಗಿಲ ಬಳಿಯೇ ನಿಂತುಕೊಂಡವ ಕಾಲೇಜು ಹುಡುಗನೋ, ಡ್ರಾಪ್ ಔಟ್ ಸ್ಟೂಡೆಂಟೋ ಆಗಿರಬೇಕು. ಟಿಕೇಟ್ ತೆಗೆಯುತ್ತಿದ್ದ ಲೇಡಿ ಕಂಡಕ್ಟರ್ ಬಾಗಿಲು ಬಿಟ್ಟು ಮೇಲ್ಗಡೆ ಬರಲು ಹೇಳಿದರು. ಅದನ್ನು ಗಣನೆಗೆ ತೆಗೆದುಕೊಳ್ಳದೆ ಒಂದು ಕೈಯಲ್ಲಿ ಬಾಗಿಲಿನ ರಾಡ್ ಒಂದನ್ನು ಹಿಡಿದುಕೊಂಡು, ಒಂದು ಕಾಲನ್ನು ಬಾಗಿಲ ಮೆಟ್ಟಿಲ ಮೇಲೆ ಇಟ್ಟುಕೊಂಡು, ಬಸ್‌ನ ಹೊರಗೆ ಗಾಳಿಯಲ್ಲಿ ದೇಹವನ್ನು ತೇಲುವಂತೆ ಮಾಡುತ್ತಿದ್ದನು. ಒಂದೆರಡು ಬಾರಿ ಒಳಗೆ ಬಂದು ಸೀಟಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಳು. ಅವಳಿಗೆ ಚಾಲಗುಣಿಸಿದಂತೆ ಇನ್ನಷ್ಟು ಹೆಚ್ಚು ಮಾಡುತ್ತಿದ್ದನು. ಒಮ್ಮೆ ಜೋರು ಧ್ವನಿಯಲ್ಲಿ ಹೇಳಿದ್ದಳು. ಆಗ ಅವನು, “ಏನಾದರೂ ಆದರೆ ನನಗೆ ಆಗೋದು. ನಿಮಗ್ಯಾಕ್ರಿ ಹೆದರಿಕೆ?’ ಅಂದ. ಅವಳಿಗೂ ಸಿಟ್ಟು ನೆತ್ತಿಗೇರಿತು. “ಯಾಕ ಮನ್ಯಾಗ ಅಪ್ಪ-ಅಮ್ಮಂಗ ಹೇಳ ಬಂದಿÇÉೇನು? ಸಾಯಾಕ ನನ್ನ ಬಸ್Õ ಬೇಕೇನು, ಬೇರೆ ಗಾಡಿಗೆ ಹೋಗಿ ಸಾಯÇÉಾ, ನನಗೇನಾಗದೈತಿ, ಗಾಡಿ ಹೋಗತ್ತಿರಬೇಕಾದರೆ ನೀನ ಬಿದ್ದ ಸತ್ತು ಹೋದರೆ ನನ್ನ ಮೇಲೆ ಕೇಸ ಆಗತೈತಿ. ನಾವು ಹೊಟ್ಟೆಪಾಡಿಗೆ ಅಷ್ಟ ದೂರಿಂದ ಬಂದ ಕೆಲಸ ಮಾಡಕ್ಕ ಹತೈವಿ, ಅದರ್ಯಾಗ ನಿನ್ನ ಉಪಟಳ ಬೇರೆ.ಒಳಗ ಬಂದ ಸೀಟನಲ್ಲಿ ಕುಂದ್ರಿತಿಯೋ ಇÇÉೋ ಸೀಟಿ ಹೊಡಿತೀನಿ. ಇಳಕೊಂಡ ಹೋಗ್ತಾ ಇರು’ ಎಂದು ದೊಡ್ಡ ಧ್ವನಿಯಲ್ಲಿ ತನ್ನ ಟಿಪಿಕಲ್ ಭಾಷೆಯಲ್ಲಿ ಸರಿಯಾಗಿ ಜಾಡಿಸಿದ್ದಳು. ಇವಳ ಜೋರು ಧ್ವನಿಯ ವಾಗ್ವಾದಕ್ಕೆ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಅವರಿಬ್ಬರನ್ನು ನೋಡಿದ್ದರು. ಅದರಲ್ಲೂ ಅವನನ್ನು ಅಪರಾಧಿ ರೀತಿ ನೋಡತೊಡಗಿದ್ದರು. ಅವಮಾನವಾಗಿ ಇಳಿದು ಹೋಗೋಣವೆಂದರೆ ಟಿಕೆಟ್ ತೆಗೆದಿ¨ªಾಗಿದೆ. ಸೀಟಿನಲ್ಲಿ ಕುಳಿತುಕೊಂಡರೂ ಅವಮಾನ. ಏನು ಮಾಡಬೇಕೆಂದು ತೋಚದೆ ಕೊನೆಗೆ ಒಳಬಂದು ಹಿಂದುಗಡೆ ಸೀಟಿನಲ್ಲಿ ಮುಖ ಸಪ್ಪೆ ಮಾಡಿ ಕುಳಿತುಕೊಂಡ. ಅವನಿಗೆ ಇಂತಹ ಪ್ರತಿಕ್ರಿಯೆ ಲೇಡಿ ಕಂಡಕ್ಟರ್‌ನಿಂದ ಬರಬಹುದು ಅಂತ ನಿರೀಕ್ಷೆ ಇರಲಿಲ್ಲ. ಪುರುಷ ಕಂಡಕ್ಟರ್‌ಗಳ ಹತ್ತಿರ ಜಗಳವಾಡುತ್ತ, ತಮ್ಮ ಹೀರೋಯಿಸಂ ತೋರಿಸುತ್ತಿದ್ದರು. ಪುರುಷ ಕಂಡಕ್ಟರ್‌ಗಳೂ ಸಹ ಇಂತಹ ಪುಢಾರಿಗಳ ಸಹವಾಸ ಯಾಕೆ ಅಂತ ಸುಮ್ಮನಿರುತ್ತಿದ್ದರು. ಆದರೆ, ಲೇಡಿ ಕಂಡಕ್ಟರ್ ಕೊಟ್ಟ ಮಾತಿನ ಏಟು ಅವನ ಹೀರೋಯಿಸಮ್ಮನ್ನೆಲ್ಲ ಜೀರೋ ಮಾಡಿಬಿಟ್ಟಿತ್ತು.
ಒಂದು ಸಲ ಪೊಲೀಸ್ ಹವಾಲ್ದಾರನೊಬ್ಬ ಪೂರ್ತಿ ಮದ್ಯಪಾನ ಮಾಡಿಕೊಂಡು ಮಾರ್ಗ ಮಧ್ಯೆ ಬಸ್Õ ಅಡ್ಡಗಟ್ಟಿ ಹತ್ತಿದ್ದ. ಮೊದಲೇ ದಾರಿ ಮಧ್ಯೆ ಬಸ್Õ ನಿಲ್ಲಿಸಿದ್ದಕ್ಕೆ ಲೇಡಿ ಕಂಕಡrರ್ ಗರಂ ಆಗಿದ್ದಳು. ವೀರಪ್ಪನ್ ಮೀಸೆಯ ಈ ಪೋಲಿಸಪ್ಪ ದೊಡ್ಡ ಧ್ವನಿಯಲ್ಲಿ ಮಾತಾಡತೊಡಗಿದ್ದ. “ಎಲ್ಲಿಗೆ ಹೋಗೋರ ಟಿಕೇಟ್ ತಗೊಳ್ಳಿ’ ಎಂದು ಲೇಡಿ ಕಂಡಕ್ಟರ್ ಕೇಳಿದರು. ಅದಕ್ಕೆ ಲಕ್ಷ್ಯ ಕೊಡದೆ ತನ್ನದೇ ಪುರಾಣವನ್ನು ಪಕ್ಕದಲಿದ್ದ ಪ್ರಯಾಣಿಕನಿಗೆ ಹೇಳುತ್ತಿದ್ದ. ಎರಡು-ಮೂರು ಸಲ ಕೇಳಿದಾಗಲೂ ತಾನು ಪೊಲೀಸ್ ಎಂದು ಹೇಳತೊಡಗಿದ. ಅವಳಿಗೂ ಸಿಟ್ಟು ನೆತ್ತಿಗೇರಿರಬೇಕು. “ನೀನು ಪೊಲೀಸ್ ಆಗಿರು, ಎಸ್ಪಿ ಆಗಿರು, ನನಗೆ ಸಂಬಂಧ ಇಲ್ಲ. ಟಿಕೆಟ್ ತೆಗಿತಿಯೋ ಇಲ್ಲ, ಸೀಟಿ ಊದಲೋ’ ಎಂದು ಕೇಳಿದ್ದಳು.
ಆದರೂ ಅವನು ಬಗ್ಗದಿ¨ªಾಗ ಸೀಟಿ ಊದಿ ಗಾಡಿ ನಿಲ್ಲಿಸಿ ಬಸ್‌ನಿಂದ ಇಳಿಯುವಂತೆ ಹೇಳಿದ್ದಳು. ತಾನು ಪೊಲೀಸ್, ತನಗೇನು ಮಾಡಲಾರಳು ಇವಳು ಎಂದು ಪೊಲೀಸಪ್ಪಗೆ ಒಂದೇ ಸಲ ಶಾಕ್ ಆಯಿತು. ಮತ್ತೇನೋ ಹೇಳಹೋದ. “ಇಳಿತ್ತಿಯೋ ಇಲ್ಲ, ನಿಮ್ಮ ಎಸ್ಪಿ ಸಾಹೇಬ್ರಿಗೆ ಫೋನ್ ಮಾಡಬೇಕೋ’ ಎಂದು ಮೊಬೈಲ್ ತೆಗೆದಳು. ಕುಡಿದಿ¨ªೆಲ್ಲ ಒಮ್ಮೆ ಇಳಿದುಹೋದ ಪೊಲೀಸಪ್ಪ ಸುಮ್ಮನೆ ಬಸ್ ಬಿಟ್ಟು ಇಳಿದ.
ಮಹಿಳೆಯರದ್ದೂ ಯಾವತ್ತೂ ಮುಕ್ತ ಮನಸ್ಸು, ಮುಕ್ತ ಮಾತು. ಬೈಯುವುದೆಂದರೆ ಬೈಯುವುದೇ! ನಮ್ಮ ಲೇಡಿ ಕಂಡಕ್ಟರುಗಳು ಚಿಲ್ಲರೆ ಹಣಕ್ಕಾಗಿ ಪುರುಷ ಪ್ರಯಾಣಿಕರ ಜೊತೆ ವ್ಯವಹರಿಸುವಾಗ ವಿಪರೀತವಾಗಿ ಮಾತನಾಡಿಬಿಡುತ್ತಾರೆ. “ಈ ಲೇಡಿ ಕಂಡಕ್ಟರ್‌ರ ಬೈಗುಳ ಸಹವಾಸವೇ ಸಾಕು’ ಎಂದು ನಾನು ಸಮೇತ ಅನೇಕ ಪುರುಷ ಪ್ರಯಾಣಿಕರು ಚಿಲ್ಲರೆ ದುಡ್ಡು ನೀಡಿ ಟಿಕೇಟ್ ತೆಗೆದುಕೊಳ್ಳುತ್ತಿ¨ªೆವು. ಸಾಕಷ್ಟು ಸಲ ಇಳಿಯುವ ಸಂದರ್ಭದಲ್ಲಿ ಚಿಲ್ಲರೆ ಬಾಕಿ ನೆನಪಿದ್ದರೂ ಬೈಗುಳದ ನೆನಪಾಗಿ ಲೇಡಿ ಕಂಡಕ್ಟರ್ ಹತ್ತಿರ ಕೇಳಲು ಹೋಗುತ್ತಿರಲಿಲ್ಲ. ಶಾಸಕರ ಆಪ್ತನೊಬ್ಬನಿಗೂ ಹೀಗೆ ಬಸ್‌ನಲ್ಲಿ ಕಿರಿಕ್ ಆಗಿ ಅವಮಾನವಾಗಿತ್ತು. ಲೇಡಿ ಕಂಡಕ್ಟರ್‌ಗಳ ಈ ವರ್ತನೆಯ ಬಗ್ಗೆ ಶಾಸಕರ ಬಳಿ ದೂರು ಸಹ ಹೋಯಿತು. ಶಾಸಕರಿಗೂ ಸಂದಿಗ್ಧ ಪರಿಸ್ಥಿತಿ. ಮೊದಲೇ ಮಹಿಳೆಯರ ವಿಚಾರ. ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದರೆ ನಾಳೆ ವಿರೋಧಿಗಳು ಮಹಿಳಾ ವಿರೋಧಿ ಎಂದು ನನ್ನ ಮೇಲೆ ಆಪಾದನೆ ಮಾಡಬಹುದು. ಅದೂ ಅಲ್ಲದೇ ಪೇಪರ್‌ನಲ್ಲಿ “ಶಾಸಕರಿಂದ ಮಹಿಳಾ ಕಂಡಕ್ಟರುಗಳಿಗೆ ಕಿರುಕುಳ’ ಎಂದು ಹೆಡ್‌ಲೈನ್‌ನಲ್ಲಿ ಬಂದು ಮಾನ ಹರಾಜಾಗಬಹುದು, ಯಾಕೇ ಬೇಕು ರಗಳೆ ಎಂದು ಕೇಳಿಯೂ ಕೇಳದಂತೆ ಉಳಿದ್ದರು. ಅಲ್ಲಿಗೆ ಶಾಸಕರ ಹೆಸರು ಹೇಳಿಕೊಂಡು ಎಲ್ಲರ ಹತ್ತಿರ ದಾದಾಗಿರಿ ಮಾಡುತ್ತಿದ್ದ ಪುಢಾರಿಗಳು ಲೇಡಿ ಕಂಡಕ್ಟರ್‌ರ ಕಂಡರೆ ದೂರದಿಂದಲೇ ನಮಸ್ಕಾರ ಮಾಡಿ ಕಾಲಿಗೆ ಬುದ್ಧಿ ಹೇಳುತ್ತಿದ್ದರು.
ಲೇಡಿ ಕಂಡಕ್ಟರ್‌ಗಳ ಜಮಾನಾ ಶುರುವಾದ ಮೇಲೆ ಸದಾ ಗಡಸು ಧ್ವನಿಯಿಂದ ಮುಳುಗಿರುತ್ತಿದ್ದ ಬಸ್‌ನಲ್ಲಿ ಮಹಿಳೆಯರ ಧ್ವನಿ ಜೋರಾಗಿದೆ. ಲೇಡಿ ಕಂಡಕ್ಟರ್‌ಗಳು ಬರುವ ಮೊದಲು ನಾವು ಮಾತುಗಾರರಾಗಿ¨ªೆವು. ಮಹಿಳಾ ಪ್ರಯಾಣಿಕರು ಮೌನಿಗಳಾಗಿದ್ದರು. ಲೇಡಿ ಕಂಡಕ್ಟರಗಳು ಬಂದ ಮೇಲೆ ಅವರು ಮಾತುಗಾರರಾಗಿ¨ªಾರೆ, ನಾವು ಮೌನಿಗಳಾಗಿದ್ದೇವೆ. ಮಹಿಳಾ ಪ್ರಯಾಣಿಕರ ಕಾನ್ಫಿಡೆನ್ಸ್ ಲೆವಲ್ಲೇ ಬದಲಾಗಿ ಹೋಗಿದೆ. ಮಹಿಳಾ ಸೀಟುಗಳಲ್ಲಿ ಪವಡಿಸುವ ಗಂಡು ಆಕೃತಿಗಳನ್ನು ಎಬ್ಬಿಸಿ ತಾವು ಕುಳಿತುಕೊಳ್ಳತೊಡಗಿ¨ªಾರೆ. ಒಂದು ವೇಳೆ ಸೀಟು ಬಿಟ್ಟು ಕೊಡದಿದ್ದರೆ ಜೋರು ಧ್ವನಿಯಲ್ಲಿ ಮಾತನಾಡತೊಡಗಿ¨ªಾರೆ. ಅವರ ಧ್ವನಿಯ ಜೊತೆಗೆ ಲೇಡಿ ಕಂಡಕ್ಟರ್ ಧ್ವನಿಯೂ ಸೇರಿದರೆ ಮುಗಿದೇ ಹೋಯಿತು, ಗಂಡು ಆಕೃತಿಯ ಗತಿ ಅಯೋಮಯ! ಎಷ್ಟರಮಟ್ಟಿಗೆ ಎಂದರೆ ಕೂರಲು ಸೀಟು ಇÇÉಾ ಎಂದರೂ ಪರವಾಗಿಲ್ಲ, ಲೇಡಿಸ್ ಸೀಟ್ ಸಹವಾಸನೆ ಬೇಡ ಎಂದು ನಿಂತುಕೊಂಡೇ ಪ್ರಯಾಣ ಮಾಡುವ ಮಟ್ಟಕ್ಕೆ ಪುರುಷರು ಬಂದಿ¨ªಾರೆ. ಇನ್ನು ಮಹಿಳಾ ಪ್ರಯಾಣಿಕರು ದಿನಕ್ಕೊಂದು ಒಡವೆ, ಡ್ರೆಸ್ ಹಾಕಿಕೊಂಡು ಬಂದು ಲೇಡಿ ಕಂಡಕ್ಟರ್ ಜೊತೆ ಅದರ ಗುಣಾವಗುಣಗಳನ್ನು ಹೇಳುತ್ತಿದ್ದರೆ ತಾವು ಇಳಿಯುವ ಸ್ಥಳ ಬಂದರೂ ಪರಿವೆ ಇರುವುದಿಲ್ಲ. ಅಂತೂ ಮಹಿಳಾ ಪ್ರಯಾಣಿಕರಿಗೆ ತಮ್ಮಲ್ಲಿರುವ ಒಡವೆ, ವಸ್ತ್ರಗಳನ್ನು ತಾವೇ ವರ್ಣಿಸಿದ ತೃಪ್ತಿ ಹಾಗೂ ತಾವು ಹಾಕಿಕೊಂಡು ಬಂದ ಹೊಸ ವಸ್ತುಗಳನ್ನು ಕೇಳುವವರು ಒಬ್ಬರಾದರೂ ಇ¨ªಾರಲ್ಲ ಎನ್ನುವ ಭರವಸೆ. ಇನ್ನು ಲೇಡಿ ಕಂಡಕ್ಟರಗೂ ಡ್ನೂಟಿಯಲ್ಲಿ ಯೂನಿಫಾರ್ಮ್ನಲ್ಲಿರುವ ಕರ್ಮ ತಮ್ಮದಾಗಿರುವದರಿಂದ, ತಮಗೆ ದಿನಾ ಬಣ್ಣ ಬಣ್ಣದ ಡ್ರೆಸ್ ಹಾಕುವ ಭಾಗ್ಯ ಇಲ್ಲವೆಂದು, ಆದರೂ ವಾರಕ್ಕೊಮ್ಮೆ ಸಿಗುವ ವಾರದ ರಜೆಯಲ್ಲಿಯಾದರೂ ಚೆಂದದ ಡ್ರೆಸ್ ಹಾಕಿಕೊಂಡು ಓಡಾಡಿದರಾಯಿತು ಎಂದು ಡ್ರೆಸ್ ಸಿಗುವ ಸ್ಥಳ, ದರ ಇವುಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಿ ಮಾಹಿತಿ ತೆಗೆಯುತ್ತಿದ್ದರು. ಒಟ್ಟಿನಲ್ಲಿ ಮಹಿಳಾ ಕಂಡrಕರ್‌ಗಳಿದ್ದ ಬಸ್ಸು ಒಂದು ರೀತಿಯ ಮಹಿಳಾ ಮಂಡಳದ ಮೀಟಿಂಗ್‌ನಂತೆ ಭಾಸವಾಗುತ್ತಿತ್ತು. ಅಬ್ಬೇಪಾರಿಗಳಾದ ಗಂಡಸರು ಮುಖ ಒಣಗಿಸಿಕೊಂಡು ಓದಿದ ಪೇಪರನ್ನೇ ತಿರುವಿ ತಿರುವಿ ಹಾಕುತ್ತಿದ್ದರು.
ಲೇಡಿ ಕಂಡಕ್ಟರಗಳು ಕರಾವಳಿಗೆ ಕಾಲಿಟ್ಟ ಪ್ರಾರಂಭದಲ್ಲಿ ಅವರ ವೇಷಭೂಷಣಗಳು ನಮಗೆ ಹೊಸದೇ. ನಾಲ್ಕೈದು ಮಂದಿ ಹೊರತುಪಡಿಸಿ ಬಹುತೇಕ ಮಂದಿ ಉತ್ತರಕರ್ನಾಟಕದ ಹೆಣ್ಣುಮಕ್ಕಳೇ ಜಾಸ್ತಿ ಇದ್ದರು. ನಮ್ಮಲ್ಲಿನ ಹೆಣ್ಣುಮಕ್ಕಳು ನಿರಾಭರಣಿಗಳಾಗಿರುವದರಿಂದ ಅವರ ಕಿವಿ, ಮೂಗಿಗೆ ಚುಚ್ಚಿದ ಹಲವಾರು ಆಭರಣಗಳನ್ನು ನಾವೆಲ್ಲ ತುಸು ಆಶ್ಚರ್ಯದಿಂದ ನೋಡಿದ್ದೆವು. ಕ್ರಮೇಣ ಅವರು ನಮ್ಮಲ್ಲಿನ ಸಂಸ್ಕƒತಿಗೆ ಹೊಂದಿಕೊಳ್ಳತೊಡಗಿದ್ದರು.
ಉಡುಗೆತೊಡುಗೆಗಳು ನಮ್ಮಲ್ಲಿಯಂತೆ ಆಗತೊಡಗಿದ್ದವು. ನಮ್ಮ ಭಾಷೆಯನ್ನು ಬಳಸಲು ಪ್ರಯತ್ನಮಾಡತೊಡಗಿದ್ದರು. ಬಂದ ಪ್ರಾರಂಭದಲ್ಲಿ ಮೀನು ಮಾರುವ ಮಹಿಳೆಯರಿಗೂ ಇವರಿಗೂ ಮಾತಿನ ಜಟಾಪಟಿ ನಡೆದಿದ್ದು ಇದೆ. ಮೀನು ಬುಟ್ಟಿ ಬಸ್‌ಗೆ ಹಾಕುವ ವಿಚಾರದಲ್ಲಿ ಇಬ್ಬರಿಗೂ ಮಾತಿಗೆ ಮಾತು ನಡೆಯುತ್ತಿತ್ತು. “ಬಸ್‌ಗೆ ಮೀನು ಬುಟ್ಟಿ ಹಾಕಬೇಡ ಗಬ್ಬ ನಾರತೈತಿ’ ಎಂದು ಲೇಡಿ ಕಂಡಕ್ಟರ್ ವಾದವಾದರೆ ಮೀನು ಮಹಿಳೆಯರು, “ಇಷ್ಟ ದಿನ ಯಾರು ಈ ರೀತಿ ಮಾಡುತ್ತಿರಲಿಲ್ಲ ನೀವೆ ಯಾಕೆ ಹೀಂಗ ಮಾಡತ್ತೀರಿ?’ ಎಂದು ಅವರ ಜಗಳ. ಕೊನೆಗೂ ಕರಾವಳಿಯಲ್ಲಿ ಮೀನು ಆಹಾರದ ಒಂದು ಅವಿಭಾಜ್ಯ ಅಂಗ ಅನ್ನುವುದನ್ನ ಯಾರೋ ತಿಳಿ ಹೇಳಿರಬೇಕು. ಈಗ ಇಬ್ಬರಿಗೂ ಹೊಂದಾಣಿಕೆ ಆಗಿದೆ. “ಇವತ್ತು ಏನು ಮೀನು ಬಂದಿದೆ. ಬಂಗುಡೆ ಮೀನು ಇದ್ದರೆ ಐವತ್ತ ರೂಪಾಯಿ ಮೀನು ಕೊಡು’ ಅಂತಾನೊ, “ಒಣ ಮೀನು ಇದ್ದರೆ ತಂದು ಕೊಡು. ಮುಂದಿನ ವಾರ ಊರಿಗೆ ಹೋಗೋದಿದೆ’ ಅಂತ ಮಾತನಾಡುತ್ತ ಒಂದು ರೀತಿಯ ತಿಳುವಳಿಕೆಗೆ ಇಬ್ಬರು ಬಂದಿ¨ªಾರೆ. ಹಾಗಾಗಿ, ಮೀನು ಬುಟ್ಟಿ ಬಸ್‌ನಲ್ಲಿ ಸರಾಗವಾಗಿ ಸಾಗತೊಡಗಿದೆ.
ಇವತ್ತು ಎಷ್ಟರಮಟ್ಟಿಗೆ ಇಲ್ಲಿನ ವಾತಾವರಣ ಹಿಡಿಸಿದೆ ಎಂದರೆ ಅವರ ಊರ ಕಡೆ ಹೋಗಲು ಅವಕಾಶವಿದ್ದರೂ ಹೋಗಲು ಒಪ್ಪುತ್ತಿಲ್ಲ. ಇದರ ಬಗ್ಗೆ ಲೇಡಿ ಕಂಡಕ್ಟರರೊಬ್ಬರ ಹತ್ತಿರ ಕೇಳಿ¨ªಾಗ, “ಇಲ್ಲಿಯಷ್ಟು ಡ್ನೂಟಿ ಆರಾಮ ಎಲ್ಲಿಯೂ ಇಲ್ಲ. ನಮ್ಮಲ್ಲಿಗೆ ಹೋಲಿಸಿದ್ದರೆ ಇಲ್ಲಿ ಪ್ರಯಾಣಿಕರು ಜಗಳ ಮಾಡುವದು ತೀರ ಕಡಿಮೆ. ಸೌಮ್ಯ ಸ್ವಭಾವದವರು. ಬಾಡಿಗೆ ಮನೆಗಳಲ್ಲಿ ಬಳಕೆಗೆ ನೀರು ಬೇಕಾದಷ್ಟು ಸಿಗುತ್ತಿದೆ. ಒಳ್ಳೆ ವಾತಾವರಣ ಇದೆ. ದಿನನಿತ್ಯದ ಡ್ನೂಟಿಯಲ್ಲಿ ಯಾವುದೇ ಕಿರಿಕಿರಿ, ಜಗಳ ಇಲ್ಲ, ನೆಮ್ಮದಿಯಾಗಿದ್ದೇವೆ. ಊರ ಹತ್ತಿರ ಹೋದರೆ ಮನೆಗೆ ದಿನಾ ಹೋಗಬಹುದು ಹೊರತು, ಮತ್ತೆಲ್ಲವು ಕಷ್ಟ ಸಾರ್’ ಅಂತ ಹೇಳುತ್ತಿದ್ದರು.
ಲೇಡಿ ಕಂಡಕ್ಟರಗಳ ಆಗಮನ ನಮ್ಮಲ್ಲಿನ ಹೆಣ್ಣುಮಕ್ಕಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ನಾನು ಹೈಸ್ಕೂಲ್ ಹಂತದ ಮಕ್ಕಳಿಗೆ ತರಬೇತಿ ನೀಡಲು ಹೋದಾಗ, “ನೀವು ಜೀವನದಲ್ಲಿ ಏನಾಗಬೇಕೆಂದು ಬಯಸಿದ್ದೀರಿ?’ ಎಂದು ಕೇಳಿದ್ದೆವು. ಕನಿಷ್ಟ ನಾಲ್ಕೈದು ಹೆಣ್ಣು ಮಕ್ಕಳಾದರೂ ತಾವು ಕಂಡಕ್ಟರರಾಗಬೇಕೆಂದು ಬಯಸುತ್ತೇವೆ ಎಂದು ಹೇಳಿದ್ದರು. “ಯಾಕೆ ಕಂಡಕ್ಟರ್ ಆಗುತ್ತೀರಿ?’ ಎಂದು ಕೇಳಿದಾಗ, “ಕೀಟಲೆ ಮಾಡುವ ಹುಡುಗರಿಗೆ ಚೆನ್ನಾಗಿ ಜೋರು ಮಾಡಲಿಕ್ಕೆ ಆಗುತ್ತೆ ಸಾರ್’ ಅದಕ್ಕೆ ಅಂದಿದ್ದಳು ಒಬ್ಬಳು. ದಿನಾಲೂ ಬಸ್‌ನಲ್ಲಿ ಓಡಾಡುವ ಸ್ಕೂಲ್ ಹುಡುಗಿಯರಿಗೆ ಲೇಡಿ ಕಂಡಕ್ಟರಗಳು “ಹೀರೋ’ ಆಗಿ ಕಾಣಿಸಿ¨ªಾರೆ. ಬಸ್‌ನಲ್ಲಿ ಯಾವಾಗಲೂ ಪುರುಷ ವಾತಾವರಣದಲ್ಲಿ ಸದಾ ಮುದುಡಿ ನಿಲ್ಲುತ್ತಿದ್ದ ಹುಡುಗಿಯರಿಗೆ ಈಗ ಬಸ್‌ನಲ್ಲಿ ಧೈರ್ಯದಿಂದ ನಿಲ್ಲುವಂತಾಗಿದೆ. ಲೇಡಿಸ್ ಸೀಟು ಅವರಿಗೂ ಸಿಗುವಂತಾಗಿದೆ.
ಪುರುಷ ವಾತಾವರಣದಲ್ಲಿ ಮಹಿಳೆಯೊಬ್ಬಳಿಗೆ ಉದ್ಯೋಗ ಅವಕಾಶ ಸಿಕ್ಕಿದ್ದು ಎಷ್ಟೆಲ್ಲ ಮಹಿಳೆಯರು ನಿಜವಾದ ಖುಷಿಪಡುತ್ತಿ¨ªಾರೆ, ಸ್ವಾತಂತ್ರ್ಯಪಡುತ್ತಿ¨ªಾರೆ. ಪುರುಷ ಅಹಂಗಳು ಮೆದುವಾಗತೊಡಗಿವೆ. ಮೌನವಾಗಿ ಸಹಿಸಿಕೊಂಡು ಬಂದ ಮಹಿಳಾ ಪ್ರಯಾಣಿಕರ ಸಾಕಷ್ಟು ಕಟ್ಟಲೆಗಳನ್ನು ತಾನಾಗಿಯೇ ಸಡಿಲಗೊಂಡವು. ಕೇವಲ ಓಡಾಡುವ ಬಸ್‌ನಲ್ಲಿ ಲೇಡಿ ಕಂಡಕ್ಟರ್ ಉಪಸ್ಥಿತಿ ಇಷ್ಟೆಲ್ಲ ಬದಲಾವಣೆಗಳಿಗೆ ಕಾರಣವಾಗಬೇಕಾದರೆ, ಇನ್ನು ಉಳಿದ ರಂಗಗಳಲ್ಲಿ ಸಾಕಷ್ಟು ಅವಕಾಶಗಳು ದೊರೆತರೆ ಬದಲಾವಣೆಗಳ ವೇಗ ಯಾವ ರೀತಿಯಾಗಬಹುದು ಯೋಚಿಸಿ. ಮಹಿಳಾ ಸ್ವಾತಂತ್ರ್ಯ ಮಹಿಳಾ ಸಬಲೀಕರಣ ಅಂದರೆ ಇದೇ ಅಲ್ಲವೇ?
– ವಿನಾಯಕ ಎಲ್. ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.