ಬದುಕು ರೈಲು ಬಂಡಿ 


Team Udayavani, Sep 10, 2017, 7:50 AM IST

railu-bandi.jpg

ಗಾಢ ನಿದ್ರೆಯಲ್ಲಿದ್ದವನು ಒಮ್ಮಿಂದೊಮ್ಮೆಗೇ ಧಿಗ್ಗನೇ ಎಚ್ಚರಗೊಂಡೆ. ಗಂಟೆ ನೋಡಿದೆ-ಮಧ್ಯರಾತ್ರಿ 12.45! ಛೇ! ಅಲರಾಂ ಇಟ್ಟು  ಮಲಗಿದ್ದರೂ ತೀರಾ ಆಯಾಸವಿತ್ತು. ಅದು ಹೇಗೋ ಮತ್ತೆ ನಿ¨ªೆಗೆ ಜಾರಿ¨ªೆ. ರೈಲು ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿ¨ªೆ. ಟಿಕೇಟು ಕೂಡ ಕಾದಿರಿಸಿ¨ªೆ. ಇನ್ನೀಗ ಎಲ್ಲವೂ ಕೈತಪ್ಪಿಹೋದಂತೆಯೇ. ಆದರೂ ದಡಬಡಿಸಿ ಎ¨ªೆ. ಸ್ಕೂಟರ್‌ನಲ್ಲಿ ನಿಲ್ದಾಣಕ್ಕೆ 15-20 ನಿಮಿಷದ ಹಾದಿ. ಅನೇಕ ಸಲ ಈ ರೈಲು ನಿಗದಿತ ಸಮಯಕ್ಕಿಂತ ತಡವಾಗಿಯೇ ಹೊರಡುತ್ತಿದ್ದೆ. ಈ ಸಲವೂ ಹಾಗೇ ಆಗಬಹುದು. ಆಸೆಯ ಸಣ್ಣ ಕಿಡಿಯ ಜೊತೆಗೂಡಿ ನಿಲ್ದಾಣಕ್ಕೆ ಬರುವಾಗ ಹೊರಗಿನಿಂದಲೇ ನೋಡಿದೆ-ಯಾವುದೋ ರೈಲು ಬಂದು ಈಗಷ್ಟೇ ನಿಂತಿದೆ. ಭಾರವಾದ ಹೆಗಲ ಚೀಲದೊಂದಿಗೆ ಏದುಸಿರು ಬಿಡುತ್ತ ಓಡಿದೆ. ಅಲ್ಲ, ಅದು ಬೇರೆÇÉೋ ಹೋಗುವ ರೈಲು. ಕೌಂಟರಿನಲ್ಲಿ ವಿಚಾರಿಸಿದೆ, ನಾನು ಹೋಗಬೇಕಿದ್ದ ರೈಲು ಐದು ನಿಮಿಷದ ಹಿಂದೆಯಷ್ಟೇ ಹೋಗಿ ಆಗಿದೆ! ಸರಿ, ಇನ್ನು ಸಾಧಾರಣ ದರ್ಜೆಯ ಪ್ರಯಾಣವೇ ಗತಿ. ಕಾದಿರಿಸಿದ ಬರ್ತಿನಲ್ಲಿ ಸುಖವಾಗಿ ಮಲಗಿ ನಿದ್ರಿಸುವ ಅವಕಾಶ ಕನಸಿನ ಮಾತೇ. ನಂತರ ಬರುವ ರೈಲಿಗೆ ಮತ್ತೆ ಟಿಕೇಟು ಖರೀದಿಸಿ ಕಾಯುತ್ತ ಕುಳಿತೆ. ಮನಸ್ಸು ಬೇಸರಗೊಂಡಿದ್ದಕ್ಕೂ ಹೆಚ್ಚಾಗಿ, ಮುಂದಿನ ಎಂಟು ಗಂಟೆಗಳ ಪ್ರಯಾಣದ ಅನುಭವವನ್ನು  ನೆನೆಸಿಯೇ ಬೆದರಿತ್ತು. 
ಇದು ಮೊದಲ ಸಲವೇನೂ ಅಲ್ಲ, ಇಂಥ ಬೋಗಿಗಳಲ್ಲಿನ ಪಯಣ.

ತಿರುವನಂತಪುರದಿಂದ ಮಂಗಳೂರಿಗೆ ದಿನವೂ ಬಂದು ಸೇರುವ ಮೂರು ರೈಲುಗಳ ಕಾದಿರಿಸದ ದರ್ಜೆಯ, ಅದರಲ್ಲೂ 7-8 ಗಂಟೆಗಳ ಪ್ರಯಾಣ ಅತ್ಯಂತ ತ್ರಾಸದಾಯಕ. ಮಾರ್ಗ ಮಧ್ಯದ ಯಾವುದೇ ಜಾಗದಿಂದ ಹತ್ತಿದರೂ ಸರಿ, ರೈಲು ಏರುವುದಲ್ಲ, ನುಗ್ಗುವುದು. ಕಾಲಿಡಲೂ ಆಗದಂತೆ ಜನರು. ನಾಲ್ಕು ಜನರ ಆಸನದಲ್ಲಿ ಆರು-ಏಳು ಜನರು. ಓಣಿಯಲ್ಲಿ, ಮೆಟ್ಟಿಲಲ್ಲಿ, ಶೌಚಾಲಯದ ಬಳಿ ಕೂತು-ನಿಂತ ಪ್ರಯಾಣಿಕರು. ಅದೆಷ್ಟೋ ಸಲ ತೇಲಿ ಬರುವ ದುರ್ವಾಸನೆ. ಕುಳಿತರೂ ಅರ್ಧಂಬರ್ಧ. ಮತ್ತೂಂದೆಡೆ ಕಣ್ಣೆಳೆದು ಬರುವ ನಿ¨ªೆ. ಬಹುಶಃ ದೇಶದ ಯಾವುದೇ ಭಾಗಗಳ ಎಲ್ಲ ರೈಲುಗಳಲ್ಲೂ ಇದೇ ಕತೆ.

ಒಂದು ಗಂಟೆ ಕಾದ ನಂತರ ಬಂದ ರೈಲು ಹತ್ತಿದೆ. ಒಂದು ಚೂರೂ ಭಿನ್ನವಿಲ್ಲದ ಮೇಲಿನ ಯಥಾಚಿತ್ರಣ. ಹತ್ತಿಪ್ಪತ್ತು ಪ್ರಯಾಣಿಕರ ಜೊತೆ ನಾನೂ ನುಗ್ಗಿದೆ. ಅತಿ ಕಷ್ಟದಲ್ಲಿ ದಾರಿ ಮಾಡಿ ಸ್ವಲ್ಪ ಒಳಗೆ ಬಂದೆ. ಕಾಲು ಊರಿ ನಿಲ್ಲಲೂ ಹೆಣಗಾಡಿ, ಅಂತೂ ಸಾವರಿಸಿ ನಿಂತೆ. ಕತ್ತು ಮೇಲೆ ಮಾಡಿ ನೋಡುತ್ತೇನೆ- ಸಾಮಾನು ಇಡುವ ಮೇಲಿನ ಬರ್ತಿನಲ್ಲಿ ಒಬ್ಬನಿಗೆ ಗಾಢ ನಿದ್ರೆ. 

ಎದುರಿನ ಮತ್ತೂಂದರಲ್ಲಿ ಇಬ್ಬರು ಕುಳಿತಿ¨ªಾರೆ. ಕೆಳಗಿನ ಆಸನದಲ್ಲಿ ಕುಳಿತವರ ಸಂಖ್ಯೆ ಆರು-ಆರು. ಮುಂಚೆಯೇ ಹತ್ತಿದ ಅನೇಕರು ಬೋಗಿಯ ಓಣಿಯÇÉೇ ಕುಳಿತಿ¨ªಾರೆ. ಹತ್ತಿದವರಿಗೆ ಮುಂದೆ ಹೋಗಲು ದಾರಿಯೇ ಇಲ್ಲ!
ನೆಲದಲ್ಲಿ ಕುಳಿತ ಐದು-ಆರು ಜನ ಒಂದೇ ಕುಟುಂಬದವ ರಿರಬೇಕು. ಹೆಂಗಸರು, ಮಕ್ಕಳು. ಎಡಕ್ಕೆ ತಿರುಗಿ ನೋಡುತ್ತೇನೆ- ಕಿಟಿಕಿಯ ಬದಿಯ ಕೇವಲ ಒಬ್ಬೊಬ್ಬ ಪ್ರಯಾಣಿಕ ಆಚೆ-ಈಚೆ ಮುಖ ಮಾಡಿ ಕುಳಿತವರ ಮಧ್ಯದ ನೆಲದಲ್ಲಿ ಎಂಟು-ಹತ್ತು ವರ್ಷದ ಬಾಲಕಿಯೊಬ್ಬಳು ಕಣ್ಣು ಪಿಳಿಪಿಳಿ ಮಾಡುತ್ತ ಕುಳಿತಿ¨ªಾಳೆ! ಮಕ್ಕಳಂತೂ ಈಗಾಗಲೇ ಓಣಿಯÇÉೇ ಮಲಗಿ ಅರ್ಧ ನಿದ್ರಾವಸ್ಥೆಯಲ್ಲಿ¨ªಾರೆ ಹೆಂಗಸರಿಗೂ ತೂಕಡಿಕೆ. ನನ್ನಂತೆ ನಿಂತ ಇನ್ನೂ ಅನೇಕರು.

ಹೆಗಲು ಚೀಲ ತೆಗೆದು ಮೇಲೆ ಇಡಲು ಹವಣಿಸಿದೆ, ಹೇಳದೆಯೇ ಬದಿಯಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಇಟ್ಟು ಬಿಟ್ಟ. ಬದಿಯ ಆಸನದಿಂದ ಆರನೆಯವನು ಎದ್ದು ನಿಂತು ಅÇÉೇ ನಿಂತಿದ್ದ ಹೆಂಗಸಿಗೆ, “”ಇನ್ನು ನೀವು ಸ್ವಲ್ಪ ಹೊತ್ತು ಕೂತುಕೊಳ್ಳಿ” ಎಂದು ಹೇಳಿ ನ‌ಕ್ಕು ಬದಿಗೆ ಸರಿದ. ಈಕೆ ಬದಿಯ ಅತ್ಯಲ್ಪ ಜಾಗದÇÉೇ ಕುಳಿತಳು. ನನಗೂ ನಿಂತು ಸಾಕಾಗಿತ್ತು, ನಾನೂ ಅÇÉೇ ನೆಲದಲ್ಲಿ ಹೇಗೋ ಜಾಗ ಮಾಡಿ ಕುಳಿತೆ. ಮುಖವೆತ್ತಿ ನೋಡಿದರೆ ಆಕೆ ಮುಗುಳ್ನಕ್ಕಳು. ಚೂರೂ ಬೇಸರವಿಲ್ಲದ ನಗು. ನಾನೂ ನಕ್ಕೆ. ಯಾಕೋ ಏನೋ, ಹಗುರವಾದ ಅನುಭವ.

ಇಂಜಿನಿನ ನೇರ ಹಿಂದೆ ಮೊದಲ ಬೋಗಿ. ಭಡ-ಭಡ ಸದ್ದಿನ ನಡುವೆ ಕಳೆದುಹೋದ ಹಲವು ನಿಲ್ದಾಣಗಳು. ಅರೆಬರೆ ನಿ¨ªೆ ಕೆಲವರದು. ಒತ್ತೂತ್ತಾಗಿ ಕುಳಿತಿದ್ದರೂ ಇನ್ನೂ ಹಲವರಿಗೆ ಗಾಢನಿದ್ರೆ. ಪ್ರಖರವಾಗಿ ಉರಿಯುವ ಬೆಳಕು. ನಮ್ಮ ಸಾಮಾನು, ಚೀಲ ಕದಿಯುತ್ತಾರೆ ಎಂಬ ಭಯವಂತೂ ಇಲ್ಲ.

ನಾಲ್ಕು ವರ್ಷಗಳ ಹಿಂದಿನ ಇಂತಹುದೇ ಪ್ರಯಾಣದ ನೆನಪು ಬಂತು. ಅದು ಮಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಡುವ ಸಂಜೆ ನಾಲ್ಕೂವರೆಯ ಸಾಧಾರಣ ರೈಲು. ಪ್ರತಿ ನಿಲ್ದಾಣದಲ್ಲೂ ನಿಲುಗಡೆ. ಮಂಗಳೂರಿನ ಶಾಲೆ, ಕಾಲೇಜು, ಆಸ್ಪತ್ರೆಗಳ ಓಡಾಟಕ್ಕೆಂದೇ ಉತ್ತರ ಕೇರಳದವರಿಗೆ ಹೇಳಿ ಮಾಡಿಸಿದ ರೈಲು. ಕಾಸರಗೋಡಿನ ಸರಕಾರೀ ನೌಕರರಿಗೂ ಇದು ಅತೀ ಉಪಯುಕ್ತ. ಮೂರು-ನಾಲ್ಕು ತಿಂಗಳು ಇದರÇÉೇ ಹೋಗಿ ಬರುತ್ತಿ¨ªೆ. ದಟ್ಟಣೆ ಮಾತ್ರ ಇಷ್ಟಿಲ್ಲ. ಹೊರಡುವಾಗಲೇ ಆಸನಗಳು ಹೆಚ್ಚುಕಡಿಮೆ ಭರ್ತಿ. ಗುಂಪು ಗುಂಪಾಗಿ ಬರುವ ವಿದ್ಯಾರ್ಥಿಗಳು. ಆಸ್ಪತ್ರೆಗಳ ರಿಪೋರ್ಟ್‌ ಹಿಡಿದು ಬರುವ ರೋಗಿಗಳು, ಜೊತೆಯವರು. ಅನೇಕ ಸಲ ನೋಡುತ್ತಿ¨ªೆ, ಆಸ್ಪತ್ರೆಯಿಂದ ಬಂದ ಕುಟುಂಬಗಳು ಆಚೆ-ಈಚೆ ಕುಳಿತು ಹರಟುತ್ತಾರೆ. ಒಬ್ಬರು, “”ಈ ಆಸ್ಪತ್ರೆ, ಇಂಥ ವೈದ್ಯರು, ಇಂದು ಸ್ಕ್ಯಾನಿಂಗ್‌” ಎಂದೆಲ್ಲ ಹೇಳಿದರೆ ಮತ್ತೂಬ್ಬರು “”ನನ್ನ ಇಂಥವರಿಗೂ ಹೀಗೇ ಆಗಿತ್ತು. ಈಗ ಪರವಾಗಿಲ್ಲ” ಎನ್ನುತ್ತಿದ್ದರು. “ಓ… ಈ ರೋಗ ಗುಣವಾಗಲು ಹೀಗೂ ಮಾಡಬಹುದು” ಎಂದು ಇನ್ನೊಬ್ಬರು. ಆಪ್ತ ಸಲಹೆಯ ಯಾವುದೇ ತರಗತಿಗೆ ಹೋಗದವರು, ಗೊತ್ತಿರುವ ವಿವರಗಳು, ಅನುಭವದ ಗಟ್ಟಿತನ, ಕಳಕಳಿಯ ವಿನಿಮಯಗಳು. ಇಳಿದು ಹೋಗುವಾಗ ಅದೆಷ್ಟೋ ಸಲ ಅವರ ಹೆಸರೋ, ಮನೆಯೋ ಗೊತ್ತೇ ಇಲ್ಲ ! ಒಂದು ಸಲ ಒಬ್ಬರ ಕೈಯಿಂದ ಬಿಸಿ ಕಾಫಿ ಇನ್ನೊಬ್ಬ ವಿದ್ಯಾರ್ಥಿನಿಯ ಸಮವಸ್ತ್ರಕ್ಕೆ ಚೆಲ್ಲಿತ್ತು. “”ಅಯ್ಯೋ, ಸುಟ್ಟಿತೇ? ತಗೊಳ್ಳಿ, ಸ್ವಲ್ಪ ನೀರಿನಿಂದ ಒರೆಸಿ” ಆಕೆ ಹೇಳಿದ್ದಳು. 
“”ಅದೇನೂ ತೊಂದರೆ ಇಲ್ಲ. ಮನೆಗೆ ಹೋಗಿ ಒಗೆಯುತ್ತೇನೆ. ಇದೇನೂ ವಿಷಯವೇ ಅಲ್ಲ” ಎಂದು ಆ ವಿದ್ಯಾರ್ಥಿನಿ. “”ಇನ್ನೇನು ನನ್ನ ನಿಲ್ದಾಣ ಬಂತು. ನೀವು ಕೂರಿ” ಎಂದು ಆತ. “”ಕೊಡಿ, ನಿಮ್ಮ ಚೀಲ ನಾನು ಇಟ್ಟುಕೊಳ್ಳುತ್ತೇನೆ.

ಹೇಗೂ ಕೂತೇ ಇದ್ದೇನಲ್ಲ” ಎಂದು ಈಕೆ ನಿಂತವರಿಗೆ ಹೇಳುತ್ತಾಳೆ. ಹೊರಗೆ ನೋಡುತ್ತಿ¨ªೆ-ಕಡುಗೆಂಪು ಸೂರ್ಯ ಕಡಲಲ್ಲಿ ಮುಳುಗುತ್ತಿದ್ದ. ಬಾನೆÇÉಾ ರಂಗು ರಂಗು.

ಮೊನ್ನೆ ಬೆಂಗಳೂರಿಗೆ ಅಕ್ಕನ ಮನೆಗೆ ಹೋಗಿ¨ªೆ. ಸಂಬಂಧಿಕರ ಮನೆಗೆ ನಾವು ಹೋದದ್ದು ಟ್ಯಾಕ್ಸಿಯÇÉಾದರೂ ಹಿಂತಿರುಗಿದ್ದು ಮಹಾನಗರಪಾಲಿಕೆಯ ಸಾರಿಗೆ ಬಸ್ಸಿನಲ್ಲಿ. ನಿಂತೇ ಇ¨ªೆವು. ಐದು ನಿಮಿಷ ಕಳೆದಿಲ್ಲ, ಅಕ್ಕನ ನಾಲ್ಕನೆಯ ತರಗತಿಯ ಮಗ ಕಿರಿಕಿರಿ ಮಾಡತೊಡಗಿದ. ಅದೇನೋ ಇರುಸುಮುರುಸು. “”ನೋಡು, ಬದಿಯಲ್ಲಿ ಇವರ ಜೊತೆ ಕೂತುಕೋ” ಎಂದ ಅಕ್ಕ. ಇವನು ಹೋಗಲೇ ಇಲ್ಲ. ಇಪ್ಪತ್ತು ನಿಮಿಷದ ಅವಧಿಯ ಪ್ರಯಾಣದುದ್ದಕ್ಕೂ ಅವನ ಸ್ಥಿತಿ ಅದೇ ಇತ್ತು. ಮನೆಗೆ ನಡೆಯುತ್ತಿ¨ªಾಗ ಅಕ್ಕ ಹೇಳಿದಳು, “”ಅವನು ಜನ ಸೇರುವಲ್ಲಿ ಹಾಗೆಯೇ. ಕಿರಿಕಿರಿ ಮುಗಿಯದ್ದು”. 

ಆದರೆ, ಅವನು ಅತ್ಯಂತ ಬಹಿರ್ಮುಖ ವ್ಯಕ್ತಿತ್ವದ ಹುಡುಗ. ತುಂಬಾ ಸ್ನೇಹಿತರು. ಮನೆಯ ಹತ್ತಿರ ಬಂದಂತೆಯೇ ಈ ಹುಡುಗ ಅÇÉೇ ಆಟವಾಡುತ್ತಿದ್ದ ಹುಡುಗರಲ್ಲಿ ಒಬ್ಬನಾದ. ಅವನಿಗೆ ಶಾಲೆಗೆ ಹೋಗಲು ಶಾಲಾ ವಾಹನ, ಹೊರಗೆ ಹೋಗಲು ಕಾರು, ಊರಿಗೆ ಬರುವುದೂ ಕಾರÇÉೇ. ಸಾರ್ವಜನಿಕ ಸಾರಿಗೆಯ ಉಪಯೋಗವಂತೂ ಗೊತ್ತೇ ಇಲ್ಲ, ಬಹುಶಃ ಇದು ಮೊದಲ ಸಲವೋ ಏನೋ?   

ಕಲ್ಲಿಕೋಟೆ ನಿಲ್ದಾಣವರೆಗೂ ಹಾಗೇ ಕೂತಿ¨ªೆ. ಮೇಲಿನ ಬರ್ತಿನಿಂದ ಮಲಗಿದ್ದವನು ಇಳಿದು ಹೋದ. ಅಲ್ಲಿ ಹೋಗಿ ಮಲಗಿದ್ದೇ ತಡ, ಗಾಢ ನಿ¨ªೆ. ಒಂಬತ್ತು ಗಂಟೆಗೆ ಎದ್ದು ನೋಡುತ್ತೇನೆ, ರಾತ್ರಿಯ ಆ ಕುಟುಂಬ, ಪ್ರಯಾಣಿಕರು, ಮಕ್ಕಳು, ಆ ಪಿಳಿಪಿಳಿ ಕಣ್ಣಿನ ಹುಡುಗಿ ಎಲ್ಲರೂ ಇಳಿದು ಹೋಗಿ¨ªಾರೆ. ಬೋಗಿಯಲ್ಲಿ ಜನಸಂದಣಿ ಹೆಚ್ಚಿಲ್ಲ. ಈಗಷ್ಟೇ ಮನೆಯಿಂದ ಶುಭ್ರವಾಗಿ ಬಂದವರು. ರಾತ್ರಿಯ ಗಜಿಬಿಜಿ ಸಂಪೂರ್ಣ ಮಾಯವಾಗಿದೆ. ಬೋಗಿ ತುಂಬಾ ಬಿಸಿಲು.  
ಈ ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವ ಸಾಮಾನ್ಯರು ಸ್ಥಿತಿವಂತರಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವರೆಲ್ಲ ಸಮಾಜದ ನೋಟದಲ್ಲಿ ಯಶಸ್ವಿ ವ್ಯಕ್ತಿಗಳಲ್ಲ. ಎತ್ತರಕ್ಕೆ ಏರಿದವರೂ ಅಲ್ಲ. ಆದರೆ ಈ ಮುಗಿಯದ ಪ್ರಯಾಣಗಳು, ಬದುಕುವುದನ್ನು ಕಲಿಸಿದೆ. 

– ಕೃಷ್ಣಮೂರ್ತಿ ಪಿ. ಎಸ್‌.

ಟಾಪ್ ನ್ಯೂಸ್

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.