ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?


Team Udayavani, Nov 17, 2024, 7:02 PM IST

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಯಾವುದೇ ಹುದ್ದೆಯ ಸರ್ಕಾರಿ ನೌಕರ ನಿವೃತ್ತನಾದಾಗ, ಆತನಿಗೆ ತನ್ನ ಅದುವರೆಗಿನ ಕರ್ತವ್ಯ ನಿರ್ವಹಣೆ ಕುರಿತು ಅವಲೋಕಿಸುವ ಪ್ರಮೇಯ ಬರಲಾರದು. ಆದರೆ ಶಿಕ್ಷಕ ವೃತ್ತಿಯಲ್ಲಿ ಹಾಗಲ್ಲ… ಮಕ್ಕಳ ಬದುಕು ಏನಾಯಿತೋ, ನಾನು ಕಲಿಸಿದ್ದು ಅವರಿಗೆ ಉಪಯೋಗಕ್ಕೆ ಬಂತೋ, ಇಲ್ಲವೋ ಎಂಬ ಯೋಚನೆ ಮೇಷ್ಟ್ರುಗಳನ್ನು ಕಾಡುತ್ತಲೇ ಇರುತ್ತದೆ…

ಒಬ್ಬ ಬ್ಯಾಂಕ್‌ ಮ್ಯಾನೇಜರ್‌, ಒಬ್ಬ ಅರಣ್ಯಾಧಿಕಾರಿ, ಒಬ್ಬ ಪೋಸ್ಟ್ ಮ್ಯಾನ್‌ ನಿವೃತ್ತನಾಗುವುದಕ್ಕೂ ಒಬ್ಬ ಮೇಷ್ಟ್ರು ನಿವೃತ್ತರಾಗುವುದಕ್ಕು ತುಂಬಾ ವ್ಯತ್ಯಾಸವಿದೆ. ಎರಡು ವಾರಗಳ ಹಿಂದೆ ನಾನು ಕಾಲೇಜಿನ ಗೇಟು ದಾಟಿ ಅಕ್ಷರ ಮಂದಿರಕ್ಕೆ ಕೊನೆಯ ನಮಸ್ಕಾರ ಹೇಳಿ ಹೊರಗೆ ಬಂದಾಗ ಅದು ಬರೀ ಕಲ್ಲು ಇಟ್ಟಿಗೆಯ ಸ್ಥಾವರವಾಗಿ ಕಾಣಿಸಲಿಲ್ಲ. ಕಾಲೇಜು ನನ್ನ ಬಹುಕಾಲದ ಹೊಳಹು, ಸಂವಾದ, ಭಾವಿಸುವಿಕೆಗೆ ಬುನಾದಿಯಾಗಿತ್ತು. 28 ವರ್ಷಗಳ ಸೇವಾವಧಿಯಲ್ಲಿ ನಾನು ಎಷ್ಟೋ ಪಠ್ಯಗಳ ಪುಟಗಳನ್ನು ಮಗುಚಿ ಹಾಕಿದ್ದೇನೆ. ಎಷ್ಟು ವಿದ್ಯಾರ್ಥಿಗಳು ನನ್ನ ಪಾಠ ಕೇಳಿದ್ದಾರೆ ಎಂಬುದಕ್ಕಿಂತ, ನಾನು ಅವರಿಗೆ ಬರೆಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆಗೆ ಏನನ್ನು ಕಲಿಸಿದ್ದೇನೆ ಎಂದುಕೊಳ್ಳುತ್ತಾ ಎದೆ ಮೇಲೆ ಕೈ ಇಟ್ಟು ಆಗಾಗ ಯೋಚಿಸುವುದುಂಟು.‌

ಮಕ್ಕಳೇ, ನೀವೆಲ್ಲ ಒಂದು ಅತಿರೇಕದ ಕಾಲದಲ್ಲಿ ಬದುಕುತ್ತಿದ್ದೀರಿ. ವರ್ಷದಿಂದ ವರ್ಷಕ್ಕೆ ನಿಮ್ಮ ಓದುವ ಆಸಕ್ತಿ ಕುಂಠಿತವಾಗುತ್ತಿದೆ, ಮೊಬೈಲ್‌ ಬಿಡದಿದ್ದರೆ ನಿಮ್ಮ ಸೂಕ್ಷ್ಮ ಸಂವೇದನೆಗಳು ಸತ್ತೇ ಹೋಗುತ್ತವೆ. ನೀವು ಯಂತ್ರಗಳಿಂದ ತಪ್ಪಿಸಿಕೊಂಡು ಮನುಷ್ಯರೊಟ್ಟಿಗೆ ಬದುಕಬೇಕೆಂದು ಪಾಠದ ನಡುವೆ ಎಷ್ಟೋ ಸಲ ಹೇಳಿದ್ದಿದೆ. “ಸರ್‌, ನಮಗೆ ಈ ಕಾಲೇಜಿನಲ್ಲಿ ಮೊಬೈಲ್‌ ನಿಷೇಧವಿದೆ. ನಾವು ಯಾವತ್ತಾದರೂ ತರಗತಿಯ ಒಳಗಡೆ ಮೊಬೈಲ್‌ ಬಳಸುವುದನ್ನು ನೀವು ನೋಡಿದ್ದೀರಾ? ಆದರೆ ನೀವು ಆಗಾಗ ತರಗತಿ ಇಲ್ಲದ ಬಿಡುವಿನಲ್ಲಿ ಕೂತಾಗ ಮೊಬೈಲ್‌ ನೋಡುತ್ತೀರಿ, ಇದು ಸರಿಯಾ?’ ಎಂಬ ಪ್ರಶ್ನೆಯನ್ನು ಯಾರೊಬ್ಬರೂ ಈವರೆಗೆ ನನಗೆ ಯಾಕೆ ಕೇಳಲಿಲ್ಲ ಎಂದು ಆಗಾಗ ಕಾಡುವುದು ಸುಳ್ಳಲ್ಲ. ಇದು ಬರೀ ಭಯವಲ್ಲ, ಭಕ್ತಿಯೂ ಇರಬಹುದು, ಎಷ್ಟೋ ಸಲ ಈ ಕಾರಣಕ್ಕಾಗಿಯೇ ನಾವು ಮಕ್ಕಳಿಂದ ಕಲಿಯುದಲ್ಲ; ಮಕ್ಕಳೇ ನಮಗೆ ಗುರುಗಳಾಗುವುದು ಇದೇ ಕಾರಣಕ್ಕಾಗಿ.

ದೇವರಂಥ ಮಕ್ಕಳು…

ಎರಡು ವರ್ಷಗಳ ಹಿಂದಿನ ಘಟನೆ. ನಂದಿನಿ ಎಂಬ (ಹೆಸರು ಬದಲಾಯಿಸಿದ್ದೇನೆ) ದೇವರ ಮಗುವೊಂದು ಬಿ.ಎ ಪದವಿಗೆ ಸೇರಿತ್ತು. ಕನಿಷ್ಠ ಒಂದು ವಾಕ್ಯವನ್ನೂ ಬರೆಯಲು ಸಾಧ್ಯವಿಲ್ಲದಷ್ಟು ವಿಚಲಿತ ಭಾವ ಆಕೆಯದ್ದು. ಮೇಲ್‌ ಸಮಾಜದ ಆ ಹುಡುಗಿಯ ಅಕ್ಕಪಕ್ಕದಲ್ಲಿ ಅದೇ ಬೆಂಚಿನಲ್ಲಿ ಕೂತಿದ್ದವರು ಕೆಳ ಸಮುದಾಯದ ಮಕ್ಕಳು. ನಂದಿನಿಯ ಆ ಸಹಪಾಠಿಗಳು ಏನೂ ಗೊತ್ತಾಗ- ಗೊತ್ತಿಲ್ಲದ ನಂದಿನಿಯನ್ನು 3 ವರ್ಷ ಆಗಾಗ ವೇದಿಕೆಗೆ ಏರಿಸಿ ನೃತ್ಯ ಮಾಡಿಸುತ್ತಿದ್ದ ಪರಿ ಕಣ್ಣೀರು ತರಿಸುವಂತದ್ದು. ಆ ಮಗು ಅಕ್ಕಪಕ್ಕದ ಸಹಪಾಠಿಗಳನ್ನು ಗಮನಿಸುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ಅವ್ಯವಸ್ಥಿತ ಹೆಜ್ಜೆ ಇಡುತ್ತಿದ್ದದ್ದು ಎದುರು ಕೂತವರ ಎದೆ ಆದ್ರಗೊಳಿಸುತ್ತಿತ್ತು.

ದಿಲಾÏನ ಎನ್ನುವ ಅಲ್ಪಸಂಖ್ಯಾತ ಹುಡುಗಿಯೊಬ್ಬಳು ಕಾಲೇಜು ನಾಯಕಿಯಾಗಲು ಚುನಾವಣೆಗೆ ನಿಂತಾಗ ಇಡೀ ಕಾಲೇಜಿನ ತರಗತಿ ಪ್ರತಿನಿಧಿಗಳು ಅವಳೊಬ್ಬಳಿಗೆ ವೋಟು ಹಾಕಿ ಗೆಲ್ಲಿಸಿದ್ದ ವ್ಯಕ್ತಿ ಮಾದರಿಯನ್ನು ಗಮನಿಸಿದಾಗ ಇನ್ನೂ ನಮ್ಮ ಕರಾವಳಿಯಲ್ಲಿ ಬಹುತ್ವ, ಮನುಷ್ಯ ಪ್ರೀತಿಗೆ ಬೆಲೆ ನೆಲೆ ಉಳಿದಿದೆ ಅನಿಸುತ್ತದೆ.

ಅನ್ನುವಂತಿಲ್ಲ,ಅನುಭವಿಸುವಂತಿಲ್ಲ…

ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಮೂರು ದಿನಗಳ ಬರವಣಿಗೆಯ ಕಮ್ಮಟ ಮಾಡಬೇಕೆಂದು ತರಗತಿ ಕೊಠಡಿ ಒಂದನ್ನು ಸಿದ್ದಗೊಳಿಸುತ್ತಿರುವಾಗ ಆ ಕಟ್ಟಡದೊಳಗಡೆ ಹತ್ತಾರು ಬೇರೆ ಕೊಠಡಿಗಳಿದ್ದರೂ, ರûಾಬಂಧನ ಸಮಾರಂಭ ಮಾಡಲು ನನಗೆ ಅದೇ ಕೊಠಡಿ ಬೇಕೆಂದು ಹಠ ಹಿಡಿದ ಸಹೋದ್ಯೋಗಿ ಒಬ್ಬರ ಮನಸ್ಥಿತಿಯನ್ನು ಬೇರೊಂದು ಕಾಲೇಜಿನಲ್ಲಿ ಕಂಡು ಮರುಗಿದ್ದೂ ಇದೆ. ಮತ, ಧಾರ್ಮಿಕತೆಯ ವಿಚಾರಗಳನ್ನು ಬಿತ್ತುವ ಕಾಲೇಜುಗಳ ಕೆಲವೊಂದು ಉಪನ್ಯಾಸಕರ ವಿಕೃತ ಮನಸ್ಥಿತಿಗಳನ್ನು ಕಂಡು ದಂಗಾದದ್ದೂ ಇದೆ. ನಮಗದು ಸಾಹಿತ್ಯ ಸಂಸ್ಕೃತಿ ಜೀವನ ಮೌಲ್ಯದ ವಿಚಾರ- ವೈಚಾರಿಕತೆಯಾದರೆ ಅವರಿಗದು ಎಡಪಂಥ ಪ್ರಗತಿಪರತೆಯಾಗಿ ಕಾಣಿಸುತ್ತದೆ! ಒಂದು ಕಾಲೇಜು ಕೋಮುಬಣ್ಣ ಧರಿಸಿಕೊಂಡಾಗ ಕೆಲವು ಪತ್ರಿಕೆಗಳು ವರದಿಗಾಗಿ ಬಂದಾಗ, “ಇಡೀ ರಾಜ್ಯದಲ್ಲಿ ನಮ್ಮ ಕಾಲೇಜಿನಲ್ಲಿ ಮಾತ್ರ ಮಧ್ಯಾಹ್ನದ ಬಿಸಿ ಊಟ ಇದೆ. ಅದನ್ನೂ ವರದಿ ಮಾಡಿ’ ಎಂದಾಗ ಅದನ್ನು ಬಿಟ್ಟು ಋಣಾತ್ಮಕ ಅಂಶಗಳನ್ನು ಪ್ರಕಟಿಸಿದ ರಾಷ್ಟ್ರೀಯ ಪತ್ರಿಕೆಗಳ ಮಾಧ್ಯಮ ನೀತಿಗಳನ್ನು ಗಮನಿಸಿ ನನ್ನೊಳಗಡೆ ಇದ್ದ ಪತ್ರಕರ್ತ ಕುದಿದದ್ದು ಇದೆ.

ಪರಕಾಯ ಪ್ರವೇಶ ಆಗಬೇಕು

ಉಪನ್ಯಾಸಕನೊಬ್ಬ ಪಾಠದ ನಡುವೆ ಜೋಕ್ಸ್ ಹೇಳಿದಾಗ ಎದುರುಗಡೆ ಕೂತ ಮಗು ನಗಬೇಕೆಂದು ಆಶಿಸುವುದು ತಪ್ಪಲ್ಲ. ಆದರೆ ಆ ಮಗುವಿನ ಮನೆಯ ಮನಸ್ಥಿತಿ ನಗುವಂತದ್ದೇ ಎಂಬ ಪರಕಾಯ ಪ್ರವೇಶ ಮಾಡುವ ಬುದ್ಧಿ ಬಡತನದಿಂದ ಬಂದಂತಹ ಉಪನ್ಯಾಸಕನಿಗೆ ಮಾತ್ರ ಅರ್ಥವಾಗುತ್ತದೆ. ಶ್ರೀಮಂತ ಉಪನ್ಯಾಸಕನೊಬ್ಬ ಶ್ರೀಮಂತ ಮಕ್ಕಳಿಗೆ ಪಾಠ ಮಾಡುವುದು ನನ್ನ ಪ್ರಕಾರ ಅತ್ಯುತ್ತಮ ಸಂವಾದ ಅಲ್ಲವೇ ಅಲ್ಲ. ಹಾಗೆಯೇ ಶ್ರೀಮಂತನೊಬ್ಬ ಬಡವರಿಗೆ ಪಾಠ ಮಾಡಿದಾಗ ಅಂತದ್ದೇ ಸಂವೇದನೆ ಹುಟ್ಟಲಾರದು. ಬಡವನೊಬ್ಬ ಬಡವನೊಬ್ಬನ ಜೊತೆಗೆ ನಡೆಸುವ ಮಾತುಕತೆ ಈ ಜಗತ್ತಿನ ಶ್ರೇಷ್ಠ ಸಂವಾದ ಎಂದು ನಾನು ನಂಬಿದ್ದೇನೆ. 45 ವರ್ಷಗಳ ಹಿಂದೆ ನಾನು ಯಾವ ಜಾಗದಲ್ಲಿ ಕೂತು ಪಾಠ ಕೇಳಿದ್ದೇನೋ ಅದೇ ಮುಗ್ಧತೆ ಬಡತನ ಇವತ್ತಿನ ಮಕ್ಕಳಲ್ಲೂ ಇರುವುದರಿಂದ ನಾವಿಬ್ಬರೂ ಒಂದೇ ರೇಖೆಯಲ್ಲಿ ಸಂಧಿಸುವುದಕ್ಕೆ ಸಾಧ್ಯವಾಗುತ್ತದೆ.

ಮನಸ್ಸುಗಳೊಂದಿಗೆ ಮಾತುಕತೆ :

500- 600 ಮಕ್ಕಳು ಓದುವ ಕಾಲೇಜಿನಲ್ಲಿ ನಾವು ಮುಖಾಮುಖೀಯಾಗುವುದು ಕೇವಲ ಅಷ್ಟೊಂದು ವಿದ್ಯಾರ್ಥಿಗಳ ಮುಖದೊಂದಿಗೆ ಅಲ್ಲವೇ ಅಲ್ಲ. ಬದಲಾಗಿ ಮನೆ-ಮನಸ್ಸುಗಳೊಂದಿಗೆ. ಆ ಮಕ್ಕಳು ತರುವ ಬುತ್ತಿಯ ಅನ್ನ, ಅವರು ಧರಿಸುವ ಬಟ್ಟೆ ಇವೆಲ್ಲವನ್ನೂ ನೂರಾರು ಜನ ಮುಟ್ಟಿರುತ್ತಾರೆ. ತಿನ್ನುವ ಅನ್ನದ ಬುಡದಲ್ಲಿ ಕೂರುವ ಬೀಜ ಯಾರಲ್ಲೋ. ಯಾರೋ ಕೊಯ್ಯುವವರು. ಯಾರೋ ಸಂಸ್ಕರಿಸುವವರು. ಆ ಬಟ್ಟೆಯನ್ನು ಕತ್ತರಿಸುವ ಇನ್ಯಾರೋ. ಕತ್ತರಿಸುವ ಆ ಕತ್ತರಿ ಮತ್ತೆಲ್ಲಿಯಲ್ಲೋ. ಹತ್ತಿಯನ್ನು ಸಾಗಿಸುವ ವಾಹನದ ಚಾಲಕ ಮತ್ಯಾವುದೋ ಸಮುದಾಯದವ. ಹತ್ತಿಯ ನೂಲು ಮಾಡುವವ ಇನ್ಯಾವುದೋ ಭಾಷೆಯವ. ಹೊಲಿಯುವ ನೂಲು ಇನ್ಯಾವುದೋ ಊರಿದ್ದು. ಈ ಬಹುತ್ವ ನಮ್ಮ ಒಳಗಡೆ ಬೆಳಗದೆ ಇದ್ದರೆ ಪಂಪನನ್ನು, ಅಲ್ಲಮನನ್ನು, ಕುವೆಂಪು ಅವರನ್ನು, ಬೇಂದ್ರೆ- ಬಸವನನ್ನು ಅಂಬೇಡ್ಕರ್‌-ಗಾಂಧಿಯನ್ನು ಬೋಧಿಸು ವುದಕ್ಕೆ ನಮಗೆ ಯಾವ ನೈತಿಕತೆ ಇರುತ್ತದೆ?

-ನರೇಂದ್ರ ರೈ ದೇರ್ಲ, ಪುತ್ತೂರು

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.