ಅಭಿಜಾತ ಕಲಾವಿದನ ಜೀವನರೇಖಾ

Team Udayavani, Feb 23, 2020, 4:06 AM IST

ram-6

ಕನ್ನಡ ನಾಡು ಕಂಡಿರುವ ಬಹುಮುಖಿ ಆಸಕ್ತಿಯ ರೇಖಾಚಿತ್ರ ಕಲಾವಿದ ಕಮಲೇಶ್‌ (1943-2014) ನಿಸರ್ಗದೃಶ್ಯ, ಸ್ಮಾರಕ ದೃಶ್ಯ, ವಿಶಿಷ್ಟ ಶಿಲ್ಪ ವೈಭವ ಕಾಣಿಸುವ ಚಿತ್ರಗಳ ರಚನೆಯ ಮೂಲಕ ಕಲಾಲೋಕವೊಂದನ್ನು ತನ್ನದೇ ಶೈಲಿಯಲ್ಲಿ ಸೃಷ್ಟಿಸುವ ಸಾಮರ್ಥ್ಯವಿದ್ದವರು. ಸಾವಿರಾರು ಪುಸ್ತಕಗಳ ಶೀರ್ಷಿಕೆ ರಚನೆಯಲ್ಲಿ, ಮುಖಪುಟ ರೂಪಣೆಯಲ್ಲಿ, ಎಷ್ಟೋ ಫ‌ಲಕಗಳ ರಚನೆಯಲ್ಲಿ ಸ್ವಂತಿಕೆಯ ಛಾಪನ್ನು ಮೂಡಿಸಿದವರು. ಅವರ ಕನ್ನಡ-ಇಂಗ್ಲಿಷ್‌ ಅಕ್ಷರ ವಿನ್ಯಾಸದ ಸೊಗಸು-ಸೌಂದರ್ಯ ಕರ್ನಾಟಕಕ್ಕೆ ಚಿರಪರಿಚಿತ. ರೇಖಾಚಿತ್ರಗಳ ಮೂಲಕ ಪ್ರಾದೇಶಿಕ ವೈಶಿಷ್ಟ್ಯಗಳ ಇತಿಹಾಸವನ್ನು ಹಿಡಿದಿಟ್ಟ ಕಲಾವಿದ ಎನ್ನುವುದು ಕಲಾ ವಿಮರ್ಶಕರಿಂದ, ಸಹ ಕಲಾವಿದರಿಂದ ಅವರಿಗೆ ಸಂದಿರುವ ಪ್ರಶಂಸಾಭಿಧಾನ.

ಗಂಭೀರವಾದ ವ್ಯಾಪಕ ಓದು, ಆಳವಾದ ಸಾಂಸ್ಕೃತಿಕ ಚಿಂತನೆ, ಚಾರಿ ತ್ರಿಕ-ಸಾಂಸ್ಕೃತಿಕ ಹಿನ್ನೆಲೆಯ ಸ್ಥಳಗಳಿಗೆ ಪ್ರವಾಸ ಮಾಡಿ ಅಲ್ಲಿನ ದೃಶ್ಯಗಳನ್ನು ತಮ್ಮ ರೇಖೆಗಳ ಮೂಲಕ ಮೂಡಿಸುವ ಲೀಲಾಜಾಲ ಸಾಮರ್ಥ್ಯ, ದೃಶ್ಯವೊಂದನ್ನು ರೇಖೀಸಬೇಕಾದಾಗ ಚಿತ್ರಕಾರನೊಬ್ಬನಿಗೆ ಅಗತ್ಯವಾಗಿ ಬೇಕಾಗುವ “ಫೋಟೋಗ್ರಾಫಿಕ್‌’ ನೋಟ- ಇವೆಲ್ಲವೂ ಮೇಳೈಸಿದ್ದ ವ್ಯಕ್ತಿತ್ವ ಅವರದಾಗಿತ್ತು. ಯಾವುದೇ ಪೂರ್ವತಯಾರಿಯಿಲ್ಲದೆ ಶಿಲ್ಪಿಯೊಬ್ಬ ತನ್ನದೇ “ಹೊಡೆತ’ಗಳ ಮೂಲಕ ತನ್ನ ಇಷ್ಟದ ಪ್ರತಿಮೆಯನ್ನು ನಿರ್ಮಿಸುವಂತೆ ರೇಖಾಕೃತಿಗಳಲ್ಲಿ ಶಿಲ್ಪ ಸೌಂದರ್ಯವನ್ನೂ ಪಡಿಮೂಡಿಸುವ ಚಾಕಚಕ್ಯ ಅವರದೆಂದು ಅವರನ್ನು ಹತ್ತಿರದಿಂದ ಬಲ್ಲವರು ಬೆರಗಿನಿಂದ ಉದ್ಗರಿಸುತ್ತಾರೆ. ಎಂದೇ ಅವರು “ಗೆರೆ ಕೊರೆವ ಕಮಲೇಶ’ ಎಂಬ ಅನ್ವರ್ಥಕ ಶ್ಲಾಘನೆಗೂ ಪಾತ್ರರಾಗಿದ್ದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ, ಅನೇಕ ಪ್ರಕಾಶನ ಸಂಸ್ಥೆಗಳು, “ದರ್ಶಿನಿ’ಗಳು ಅವರ “ಕೈಚಳಕ’ವನ್ನು ವ್ಯಾಪಕವಾಗಿ ದುಡಿಸಿಕೊಂಡಿವೆ; ನಾಡಿನ ಬಹುತೇಕ ಚಿತ್ರಕಲಾವಿದರ, ಸಿನಿ-ರಂಗಕರ್ಮಿಗಳ, ವಿವಿಧ ಕಲಾ ಪ್ರಕಾರಗಳಲ್ಲಿನ ಪ್ರಯೋಗಶೀಲ ಪ್ರತಿಭೆಗಳ, ವಾಣಿಜ್ಯ ಜಗತ್ತಿನ ಸಾಹಸಿಗಳ, ಸಾಹಿತಿಗಳ, ಅಭಿಮಾನಿ ಓದುಗರ, ಚಿಂತಕರ ಸಂಪರ್ಕ-ಸಾಹಚರ್ಯ ಅವರಿಗಿತ್ತು.

ಕಮಲೇಶ್‌ ಅವರ ಇಂಥ ಎಲ್ಲ ವ್ಯಕ್ತಿತ್ವ ವಿಶೇಷಗಳನ್ನೂ ಕಾಣಿಸಿಕೊಡುವ ಜೀವನ ಚರಿತ್ರಾತ್ಮಕ ಬರಹಗಳು; ಸಮೀಪ ಬಂಧುಗಳು, ನಿಕಟ ಸ್ನೇಹಿತರು, ಕಲಾಭಿಮಾನಿ ಮಿತ್ರರು, ಕಲಾವಿಮರ್ಶಕರು ಮುಂತಾದವರ ಸಾಹಚರ್ಯದ ಅನುಭವಗಳನ್ನು ಸಾದರಪಡಿಸುವ ವಿಶೇಷ ನೆನಪಿನ ಲೇಖನಗಳು; ಅವರ ಸಿದ್ಧಿ- ಸಾಧನೆಯನ್ನು ಕಾಣಿಸುವ ಭಾವಚಿತ್ರ/ಛಾಯಾಚಿತ್ರಗಳು, ಅವರು ರಚಿಸಿದ ಕೆಲವು ನಿಸರ್ಗ-ಸ್ಮಾರಕ ಚಿತ್ರಕೃತಿಗಳು ಇವೆಲ್ಲವನ್ನೂ ಈ ಸಂಪುಟ ಒಳಗೊಂಡಿದೆ. ಜತೆಗೆ ಅವರ ಬಗೆಗಿನ ಅನುವಾದಿತ ಹಾಗೂ ಮೂಲ ಲೇಖನಗಳನ್ನೂ ಈ ಸಂಪುಟದ ಅನುಬಂಧದಲ್ಲಿ ನೋಡಬಹುದು. ಕರ್ನಾಟಕದ ಪರಂಪರೆಯನ್ನು ಸಮರ್ಥವಾಗಿ ರೇಖೆಗಳಲ್ಲಿ ಹಿಡಿದಿಟ್ಟ ಕಲಾವಿದನೆಂದು ವರ್ಣಿತರಾಗಿರುವ ಕಮಲೇಶ್‌ ಅವರು ನಿಧನರಾದ ಐದು ವರ್ಷಗಳ ಬಳಿಕ ನಾಡಿನ ಕಲಾ-ಸಾಂಸ್ಕೃತಿಕ ಲೋಕ ಅವರಿಗೆ ಸಲ್ಲಿಸಿರುವ ಅರ್ಥಪೂರ್ಣ ಗೌರವ ಸಮರ್ಪಣ ಗ್ರಂಥ ಇದು.

ಜಯರಾಮ ಕಾರಂತ

ಟಾಪ್ ನ್ಯೂಸ್

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

Congress: ಪಕ್ಷ ಹೇಳಿದರೆ ತ್ಯಾಗ ಮಾಡಬೇಕು: ಸಚಿವ ದಿನೇಶ್‌ ಗುಂಡೂರಾವ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.