ರಾಗವನ್ನು ಕೇಳಬಹುದು;ನೋಡಲೂಬಹುದು !


Team Udayavani, Feb 4, 2018, 10:55 AM IST

raga.jpg

ರಾಗವೊಂದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಮತ್ತು ಯಾವ ಕಾರಣಕ್ಕಾಗಿ ರಾಗವೊಂದನ್ನು ಸಾಮಾನ್ಯನಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ವಿಚಾರವು ಸಂಗೀತದ ರಸಿಕರಲ್ಲಿ ಸಾಮಾನ್ಯವಾಗಿ ಚರ್ಚೆಗೆ ಬರುತ್ತದೆ. ವಿದ್ವಾಂಸರೊಬ್ಬರ ಜೊತೆಗಿನ ಆಪ್ತವಾದ ಮಾತುಕತೆಯೊಂದರಲ್ಲಿ ಅವರು ಹೀಗೆ ಹೇಳಿದ್ದರು: “ರಾಗಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವಿದ್ದರೆ ರಾಗದ ಆಸ್ವಾದನೆ ಸುಲಭವಾಗುತ್ತದೆ ಮತ್ತು ರಾಗದ ಆನಂದ ಸುಲಭವಾಗಿ ಒಲಿಯುತ್ತದೆ’

ಉತ್ತರಕನ್ನಡ ಜಿÇÉೆಯ ಚಿಪಗೇರಿಯಲ್ಲಿ ದತ್ತಣ್ಣ ಎಂದು ನನ್ನ ಸರೀಕರೆಲ್ಲ ಕರೆಯುವ ಹಿರಿಯರೊಬ್ಬರಿ¨ªಾರೆ. ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಚಿಪಗೇರಿಯಂಥ ಹಳ್ಳಿಯಲ್ಲಿದ್ದು ಸುಮಾರು ಐವತ್ತಕ್ಕೂ ಹೆಚ್ಚು ರಾಗಗಳನ್ನು ಆರಂಭದ ಆಲಾಪದ ಐದು ನಿಮಿಷಗಳಲ್ಲಿಯೇ ಗುರುತಿಸುವಂಥ ಸಾಮರ್ಥ್ಯ ಅವರಲ್ಲಿದ್ದುದು ನಮಗೆಲ್ಲ ಆಗ ಸುಲಭಕ್ಕೆ ಜೀರ್ಣಿಸಿಕೊಳ್ಳಲಾಗದಂಥ ವಿಷಯ! ಇದೆಲ್ಲ ಅವರಿಗೆ ಸಾಧ್ಯವಾಗಿದ್ದು ರೇಡಿಯೋದಲ್ಲಿ ನಿಯಮಿತ ಸಮಯಗಳಲ್ಲಿ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳಿಂದ. ಇದಕ್ಕೆ ವಿಪರೀತದ ಮತ್ತು ತಮಾಷೆಯ ಸಂಗತಿಯೆಂದರೆ ನಮ್ಮ ಕಾಲದ ನನ್ನಂಥ ಯುವ ಸಂಗೀತದ ವಿದ್ಯಾರ್ಥಿಗಳು ರಾಗವೊಂದರ ಲಕ್ಷಣದ ಬಗ್ಗೆ ಸಂದೇಹವು ಬಂದಲ್ಲಿ ಮಾಡುವ ಮೊದಲ ಕೆಲಸವೆಂದರೆ ಆ ರಾಗದ ಹೆಸರನ್ನು ಗೂಗಲ್‌ ಸರ್ಚ್‌ ಬಾಕ್ಸಿನಲ್ಲಿ ಟೈಪ್‌ ಮಾಡುವುದು. ನಿಜವಾಗಿಯೂ ನಾವು ಮಾಡಬೇಕಾದದ್ದು ಯಾವುದೇ ಒಂದು ಘರಾಣೆಯ ಶ್ರೇಷ್ಠ ಕಲಾವಿದರು ಹಾಡಿರುವ ಆ ರಾಗವನ್ನು ಕೇಳುವುದು. ಆದರೆ ನಮ್ಮಲ್ಲಿನ ಆಸ್ಥೆ, ಸಮಯಾನುಕೂಲ ಮತ್ತು ತುರ್ತಾಗಿ ರಾಗವೊಂದನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಗೂಗಲ್‌ ಜಮಾನಾದ ವಿಚಿತ್ರ ಹಠವೊಂದು ನಮ್ಮನ್ನು ಗೂಗಲ್‌ ಸರ್ಚ್‌ ಬಾಕ್ಸಿಗೆ ಕರೆದೊಯ್ಯುತ್ತದೆ. 

ವಾಸ್ತವದಲ್ಲಿ ಗೂಗಲ್‌ ಸರ್ಚ್‌ ಬಾಕ್ಸು ಮತ್ತು ರಾಗದ ಥಿಯರಿಯು ನಮಗೆ ರಾಗದ ಲಕ್ಷಣವೊಂದನ್ನು ಬರೆದಿಡಲು ಕಲಿಸುತ್ತದೆಯೇ ಹೊರತು ರಾಗವನ್ನು ಎಂದಿಗೂ ಕಲಿಸುವುದಿಲ್ಲ. ಪ್ರಾಯಶಃ ಅದೇ ಕಾರಣಕ್ಕೆ ಇಂದಿಗೂ ಮತ್ತು ಮುಂದೆ ಎಂದಿಗೂ ಶಾಸ್ತ್ರೀಯ ಸಂಗೀತವೆಂಬುದು ನಿಜವಾಗಿ ಗುರುಶಿಷ್ಯ ಪರಂಪರೆಯಿಂದ ಹೊರಬರುವುದಿಲ್ಲ. 

ಜೋಹಾನ್ಸ್‌ಬರ್ಗ್‌ನಲ್ಲಿ ಸರೋದ್‌ ನುಡಿಸುವ ಹಿರಿಯ ಮಿತ್ರರೊಬ್ಬರನ್ನು ಭೇಟಿಯಾದ ಒಂದು ಸಂದರ್ಭದಲ್ಲಿ ಮಾತುಕತೆಗಳು ಕುಶಲೋಪರಿಯ ಹಂತವನ್ನು ದಾಟಿ ಸಂಗೀತ ಮತ್ತು ಕಲಿಯುವಿಕೆಯ ಪ್ರಯತ್ನದ ಬದಿಗೆ ಧಾಟಿಯು ವಾಲುತ್ತಿದ್ದಂತೆ ಘರಾನಾದ ವಿಷಯಗಳೆಲ್ಲ ಬರಲಾಗಿ ಅವರು ಹೀಗೆ ಹೇಳಿದ್ದರು: “ನಮ್ಮದು ಸೋನಿ ಘರಾನಾ!’

ನಮ್ಮ ಸಂಗೀತದಲ್ಲಿರುವ ಎಲ್ಲ ಘರಾನೆಗಳೂ ನನಗೆ ಗೊತ್ತಿಲ್ಲದಿದ್ದರೂ ಕನಸಿನಲ್ಲಿಯೂ ಕೇಳಿದ ನೆನಪಿಲ್ಲವಾದ ಈ ಸೋನಿ ಘರಾನೆಯ ವಂಶಸ್ಥರು ಪೂರ್ವಜರ ಕುರಿತಾಗಿ ಮನಸ್ಸು ಅರೆನಿಮಿಷ ಒ¨ªಾಡುವ ಹೊತ್ತಿಗೆ ನನ್ನ ಕಕ್ಕಾಬಿಕ್ಕಿ ಅವಸ್ಥೆಯನ್ನು ಕಂಡು ಅವರೇ ಸಮಸ್ಯೆಯನ್ನು ಬಗೆಹರಿಸಿದರು. ವಿಶ್ವವ್ಯಾಪೀ  ಆಡಿಯೋ ಕಂಪೆನಿಯಾದ ಸೋನಿ ಕಂಪೆನಿಯೇ ನಮ್ಮ ಘರಾನಾ ಮತ್ತು ಸೋನಿ ಕಂಪೆನಿಯಿಂದ ಹೊರಟ ಎಲ್ಲ ಆಡಿಯೋ ಕ್ಯಾಸೆಟ್ಟುಗಳು ನಮ್ಮ ಗುರುಗಳು! 

ಇಂಥ ಮಾತನ್ನು ಕೇಳಿದ ನಾನು ಒಮ್ಮೆ ಮರ್ಮಶೂಲೆಯಿಂದ ತಲೆತಿರುಗಿ ಬೀಳುವ ಹಂತವನ್ನು ತಲುಪಿದರೂ ಈ ಮಹಾಶಯರ ನೇರನುಡಿ ಮತ್ತು ಆ ನೇರ ಮಾತಿನ ಹಿಂದೆ ಅಡಗಿದ್ದ ಬದುಕಿನ ವ್ಯಂಗ್ಯವು ಕಲಿಯುವಿಕೆ ಮತ್ತು ಬದುಕಿನ ಸಂಬಂಧದ ಬಗ್ಗೆ ಹೊಸ ಬಗೆಯ ಅರ್ಥವೊಂದನ್ನು ನನ್ನಲ್ಲಿ ಹೊಳೆಯಿಸಿತು. ಅವರ ಆ ಮಾತು ಏಕಕಾಲಕ್ಕೆ ಶಾಸ್ತ್ರೀಯ ಸಂಗೀತದ ಕಲಿಯುವಿಕೆಯಲ್ಲಿ ವಿಪರೀತ ಆಸಕ್ತಿಯನ್ನು ಹೊಂದಿಯೂ ಬದುಕಿನ ಕಾರಣಕ್ಕೆ ಭಾರತದಿಂದ ಹೊರಗಿರಬೇಕಾಗಿ ಬಂದು ಗುರುವಿನ ಆಶ್ರಯವನ್ನು ಹೊಂದಲಾಗದ ದೌರ್ಭಾಗ್ಯ ಮತ್ತು ಆ ದೌರ್ಭಾಗ್ಯವು ಈ ಜನ್ಮದಲ್ಲಿ ಕೊನೆಯಾಗುವಂಥದ್ದಲ್ಲವಾದ್ದರಿಂದ ಇರುವ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಂಡು ಹೋಗುವಂಥ ಸಮಚಿತ್ತದ ಭಾವ ಇವರೆಡನ್ನೂ ಸಮದೂಗಿಸಿ ಬಿಂಬಿಸುತ್ತದೆ. 

ರಾಗವೆಂಬುದನ್ನು ಕಾವ್ಯಸೌಂದರ್ಯದ ಅಂಗದಿಂದ ನೋಡಿದರೆ ಅದಕ್ಕೆ “ಬಣ್ಣ ‘ ಎಂಬ ಅರ್ಥವೂ ಇದೆ. ಒಂದೊಳ್ಳೆಯ ಹಾಡಲು ಬರುವಂಥ ಕಾವ್ಯವೊಂದನ್ನು ಬರೆದ ಭಾವಜೀವಿಗೆ ತನ್ನ ಕಾವ್ಯದ ಭಾವಕ್ಕೆ ಮತ್ತಷ್ಟು ತೀವ್ರತೆಯನ್ನು ಹಚ್ಚುವ ಹಾಡು ಬಲ್ಲ ಜೀವಿಯೊಂದರ ತಲಾಶೆಯು ಯಾವಾಗಲೂ ಇರುತ್ತದೆ. ಹಾಗೆ ಹಾಡುಬಲ್ಲ ಜೀವಿಯು ಸಿಕ್ಕಿ ತನ್ನ ಕಾವ್ಯವನ್ನು ಹಾಡಿದರೆ ಕಾವ್ಯಜೀವಿಗೆ ಸಂತೋಷ. ಆ ಹಾಡಿನಲ್ಲಿ ನಿಜವಾಗಿ ಒಂದಾಗುವುದು ಕಾವ್ಯದ ಬಣ್ಣ ಮತ್ತು ಹಾಡಿನ ರಾಗದ ಬಣ್ಣ. ಕಾವ್ಯಜೀವಿಯ ಭಾವ ಮತ್ತು ಹಾಡುಗಾರನ ಅಂತರಂಗಗಳು ಒಂದಾಗುವ ಆ ಬಣ್ಣಗಳ ಮೇಳಕ್ಕೆ ಒಂದೊಳ್ಳೆಯ ಭದ್ರಗಲ್ಲನ್ನು ಹಾಕುವುದು ಹಾಡಿನ ರಾಗ.

ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವಿದೆ. ಅತೀ ಸಾಮಾನ್ಯ ಕೇಳುಗನೂ ಅಂಥ ಹಾಡನ್ನು ಕೇಳುತ್ತಾನೆ ಮತ್ತು ರಾಗಗಳನ್ನು ಬಲ್ಲ ಸಂಗೀತಜ್ಞನೂ ಆ ಹಾಡನ್ನು ಕೇಳುತ್ತಾನೆ. ಹಾಡಿನ ಸಾಹಿತ್ಯವನ್ನು ಆನಂದಿಸಲು ಯಾವ ಪೂರ್ವತಯಾರಿಯೂ ಬೇಕಿಲ್ಲದಿದ್ದರೂ ಹಾಡಿನಲ್ಲಿ ಹೊಸತಾದ ಬಣ್ಣವೊಂದು ಇದೆ ಅಥವಾ ಇಲ್ಲ ಎಂಬುದನ್ನು ಗಮನಿಸಲು ಒಂದು ಅಭ್ಯಸಿತ ಮನಸ್ಸು ಬೇಕು ಅಥವಾ ಹಾಡುಗಳನ್ನು ಕೇವಲ ಭಾವನಾಜಗತ್ತಿನಲ್ಲಿ ಕೇಳುತ್ತ ಕಳೆಯುವ ಹುಚ್ಚು ಮನಸ್ಸು ಬೇಕು. ಈ ಎರಡು ಬಗೆಯ ಮನಸ್ಸುಗಳು ಹಾಡೊಂದನ್ನು ಹೊಕ್ಕುವ ಬಗೆಯು ವಿಭಿನ್ನವಾಗಿದ್ದರೂ ಕೊನೆಗೆ ಮೊರೆಹೋಗುವುದು, ಕಳೆದು ಹೋಗುವುದು, ಆ ಹಾಡು ಹಚ್ಚುವ ಬಣ್ಣಗಳಲ್ಲಿಯೇ.

ದಕ್ಷಿಣಆಫ್ರಿಕಾದ “ಬ್ಲೂಮ್‌ ಫೌಂಟೀನ್‌’ ಎಂಬ ನಗರದÇÉೊಂದು ಆಪ್ತ ಸಿತಾರ್‌ ಕಛೇರಿ. ವಾದಕ ಆ ರಾಗವನ್ನು ತನ್ನ ಪ್ರಯತ್ನವನ್ನು ಮೀರುತ್ತ ನುಡಿಸುತ್ತಿ¨ªಾನೆ. ಸುತ್ತ ನೆರೆದ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಇಪ್ಪತ್ತೈದೇ ಕೇಳುಗರಲ್ಲಿ ಒಬ್ಬರಿಗೂ ರಾಗಗಳ ಪರಿಚಯವಿಲ್ಲ. ಇಷ್ಟಾಗಿ ಕಾರ್ಯಕ್ರಮವು ಮುಗಿಯುವ ಹೊತ್ತಿಗೆ ಕೆಲವರ ಕಣ್ಣುಗಳಲ್ಲಿ ಆಶ್ಚರ್ಯ, ಕೆಲವರ ಕಣ್ಣುಗಳಲ್ಲಿ ದಿವ್ಯ ಪ್ರಶಾಂತ ಭಾವ. ಒಬ್ಟಾಕೆ ಬಂದು ಕಲಾವಿದನಲ್ಲಿ ಹೇಳುತ್ತಾಳೆ: “ಕಛೇರಿಯ ಉದ್ದಕ್ಕೂ ಮುಚ್ಚಿದ ಕಣ್ಣುಗಳ ಒಳಗೆ ನಾನು ಬಣ್ಣಗಳನ್ನು ನೋಡುತ್ತಿ¨ªೆ!’ 

ಸ್ವರ, ನಾದ, ಶ್ರುತಿ ಮೊದಲಾದ ಅಗತ್ಯ ಅಂಗಗಳನ್ನು ಒಳಗೊಳ್ಳುವ ಶಾಸ್ತ್ರೀಯ ಸಂಗೀತ ಗೊತ್ತಿಲ್ಲದ ಕಿವಿಗೆ ಅತ್ಯಂತ ಕಠೊರ ಎನ್ನಿಸುವ “ರಾಗ’ ಎಂಬ ಶಬ್ದವನ್ನು ಶಬ್ದದ ಹೊರತಾಗಿ ಕಣ್ಣು ಮುಚ್ಚಿ ನಿಜವಾಗಿ ನಾವು ಹೀಗೂ ನೋಡಬಹುದು. ರಾಗಕ್ಕೊಂದು ಸೌಂದರ್ಯವಿರುತ್ತದೆ ಮತ್ತು ಆ ಸೌಂದರ್ಯವು ಅದೇ ರಾಗವನ್ನು ಎಷ್ಟು ಬಾರಿ ಕೇಳಿದರೂ ಹೊಸತಾಗಿ ಕಾಣಿಸುತ್ತದೆ. ವಿಷಯ ಕೇಳಿದರೆ, ಬಣ್ಣದ ಪ್ರಮಾಣವು ಸೌಂದರ್ಯವನ್ನು ನಿರ್ಧರಿಸುತ್ತದೆ!

– ಕಣಾದ ರಾಘವ 

ಟಾಪ್ ನ್ಯೂಸ್

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Elephant: ಕಾಫಿನಾಡಿನಲ್ಲಿ ಕಾಡಾನೆಗಳ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Elephant: ಕಾಫಿನಾಡಿನಲ್ಲಿ ಕಾಡಾನೆ ನೈಟ್ ರೌಂಡ್ಸ್… ಇದು ಮುಗಿಯದ ಗೋಳು ಎಂದ ಗ್ರಾಮಸ್ಥರು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

Someshwar Beach: ತಂಗಿ ಗಂಡನ ಪಿಂಡ ಪ್ರದಾನಕ್ಕೆ ಬಂದಿದ್ದ ಮಹಿಳೆ ನೀರುಪಾಲು

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.