ಗದ್ದೆಗಳಲ್ಲಿ ಓಡಾಡಿದ ಪುಟ್ಟ ಪಾದಗಳು
Team Udayavani, Aug 20, 2017, 7:10 AM IST
ಮಕ್ಕಳು ಯೂನಿಫಾರ್ಮ್ ಹಾಕಿಕೊಂಡು, ಟೈ ಕಟ್ಟಿಕೊಂಡು ಶಿಸ್ತಿನಲ್ಲಿ ಶಾಲೆಯ ವಾಹನ ಹತ್ತುವುದನ್ನು ನೋಡಿದ್ದೇವೆ. ಶಿಸ್ತು ಎಂದರೆ ಸೆರೆಮನೆಯಂಥ ಶಿಸ್ತು ಅದು! ಅಂಥ ಶಿಸ್ತನ್ನು ಮರೆತು ಪ್ರಕೃತಿಯ ಮಡಿಲಲ್ಲೊಮ್ಮೆ ಓಡಾಡಿದರೆ ಹೇಗಾದೀತು? ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಅಣಶಿ ಎಂಬ ಹಳ್ಳಿಯಲ್ಲಿರುವ ಶಾಲೆಯ ಮಕ್ಕಳು ಇತ್ತೀಚೆಗೆ ತಾವೇ ಉತ್ಸಾಹದಿಂದ ಗದ್ದೆಗಿಳಿದು ನಾಟಿ ಮಾಡಿದರು. ಹಳ್ಳಿಯ ಶಾಲೆಗಳ ಮಕ್ಕಳಿಗಲ್ಲದೆ ಬೇರೆಯವರಿಗೆ ಈ ಭಾಗ್ಯ ಸಿಗಲು ಹೇಗೆ ಸಾಧ್ಯ?
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ಅತಿ ಹೆಚ್ಚು ಅರಣ್ಯ ಸಂಪತ್ತಿರುವ ತಾಲೂಕು. ಈ ತಾಲೂಕಿನ ಅಣಶಿ ಸದಾ ಮಳೆಯಿಂದ ಕೂಡಿರುವ ವಿಶಿಷ್ಟ ಹಳ್ಳಿ. ಇಲ್ಲಿ ಮಳೆ ಬಂದರೆ ಕಾರ್ಗತ್ತಲು ಕವಿದು ಸಣ್ಣ ಚಳಿ ಅಪ್ಪುತ್ತದೆ. ಜೂನ್‌ನಿಂದ ಅಕ್ಟೋಬರ್‌ವರೆಗೂ ಬಿಡದೆ ಸುರಿವ ಮಳೆ ಕನಸು ಕಟ್ಟುತ್ತಿದೆ. ಮಂಜು ಮುಸುಕಿದ ಈ ಊರು ಮನದಲ್ಲಿ ತಣ್ಣನೆಯ ಖುಷಿ ಕೊಡುತ್ತ ಏನಾದರೂ ಹೊಸದನ್ನು ಮಾಡಲು ಪ್ರೇರೇಪಿಸುತ್ತದೆ. ದೊಡ್ಡ ಮಳೆ, ಸಣ್ಣ ಮಳೆ, ನೀರಿನ ಮಳೆ, ಗಾಳಿ ಮಳೆ, ಹನಿ ಮಳೆ, ಹೂ ಮಳೆ, ತುಂತುರು ಮಳೆ- ಹೀಗೆ ಮಳೆ ಸುರಿಯುವ ಎಲ್ಲ ಪ್ರಕಾರಗಳು ಇಲ್ಲಿ ಮುಖ ತೆರೆದು ತೋರಿಸುತ್ತದೆ.ಇಂತಹ ಸುಂದರ ಮಳೆಯಲ್ಲಿ ಅಣಶಿ ಶಾಲೆಗೆ ಹೋಗುವ ಖುಷಿ ಮಕ್ಕಳಿಗೆ, ಶಿಕ್ಷಕರಿಗೆ- ಅಷ್ಟೇ ಅಲ್ಲ, ಆಗಾಗ ಭೇಟಿ ನೀಡುವ ಅಧಿಕಾರಿ ವರ್ಗದವರಿಗೂ ಕೂಡ. ಆ ಕಾರಣದಿಂದಲೇ ಈ ನಿಸರ್ಗಕ್ಕೂ ಜೀವರಾಶಿಗೂ “ತಾಯಿ ಮಕ್ಕಳ ಪ್ರೇಮವು’ ಎಂಬ ಕವಿಯ ಸಾಲು ಚೆನ್ನಾಗಿ ಅನ್ವಯವಾಗುತ್ತದೆ.
ಹಂಚು ಹೊದ್ದ ಪ್ರಾಥಮಿಕ ಶಾಲೆಯ ಸುತ್ತ ಆಟ ಆಡಲು, ಅಭ್ಯಾಸ ಮಾಡಲು ಬಂದ ತುಸು ಜೋರಾಗಿಯೇ ಬೀಸಿದ ಗಾಳಿ ಮಳೆ. ಹಂಚಿನ ನಡುವೆ ಬೆಳಕಿಗೆಂದು ಹಾಕಿದ ಗಾಜು ಪೂರ್ತಿ ತೋಯ್ದು ನೀರು ಹರಿಯುವ ರಭಸ ಒಳಗೆ ಕೂತ ಮಕ್ಕಳ ಕಣ್ಣಿಗೂ ಬೀಳುತ್ತಿದೆ. ಮಳೆಗೆ ಹಂಚಿನ ಮೇಲೆ ಬೆಳೆದ ಹಾವಸೆ-ಕರಿಗಳೆಲ್ಲ ಒಟ್ಟಾಗಿ ಗಾಜಿನ ಬಳಿ ನಿಂತು ಬೆಳಕು ಗಾಜಿನ ಒಳಗಿಂದ ತೂರಿ ವರ್ಗ ಕೋಣೆ ಪ್ರವೇಶಿಸಲು ಒ¨ªಾಡುತ್ತಿದೆ. ಕಾಡು ಕಣಿವೆಯ ಈ ಪ್ರದೇಶದ ಮಳೆಗಾಲದಲ್ಲಿ ಕರೆಂಟು ಅಪರೂಪಕ್ಕೆ ಬರುವ ಅತಿಥಿ. ಅಲ್ಲೊಂದು ಇಲ್ಲೊಂದು ಮರ ಬಿದ್ದು ಕರೆಂಟ್ ಕಂಬಗಳು ಮುರಿದು ಲೈನ್‌ಮೆನ್ ಮುಲ್ಲಾ ಸಾಹೇಬರಿಗೆ ಬಿಡುವಿಲ್ಲದ ಕೆಲಸ.”ಕಾಯಕವೇ ಕೈಲಾಸ’ವೆಂದು ನಂಬಿದ ಅವರನ್ನು ಮಕ್ಕಳಿಗೆ ತೋರಿಸಿ ಆದರ್ಶ ಮೆರೆಯುವುದು ಶಿಕ್ಷಕರಿಗೆ ಸಂತಸದ ಸಂಗತಿ. ಹೊರಗೆ ಮಳೆ .ತರಗತಿಯೊಳಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆಲ್ಲ ಬೆಚ್ಚನೆಯ ಭಾವ. ಪಾಠಗಳಲ್ಲಿಯೂ ಮಳೆ, ಆಟದಲ್ಲಿಯೂ ಮಳೆ. ಇಂಥ ಮಳೆಯ ಸಹವಾಸದಲ್ಲಿ ಸಹಜವಾಗಿ ಅರಳುತ್ತಿರುವ ಏಳನೆಯ ವರ್ಗದ ವಿದ್ಯಾರ್ಥಿಗಳ ಕನ್ನಡ ಪುಸ್ತಕದಲ್ಲಿ “ಸೀನ ಸೆಟ್ಟರು ನಮ್ಮ ಮೇಸ್ಟ್ರೆ ‘ ಎಂಬ ಚಂದದ ಪಾಠವೊಂದಿದೆ. ಸೂಕ್ತ ಪಾಠೊಪಕರಣ ಬಳಸಿ ಪಾಠ ಮಾಡಿ ಆಗಿದೆ. ವಿಷಯಕ್ಕನುಗುಣವಾಗಿ ಕೃಷಿ ಕುಟುಂಬದಿಂದ ಬಂದ ಮಕ್ಕಳ ದೈನಂದಿನ ಜೀವನಾನುಭವದಿಂದ ಪಾಠ ಯಶಸ್ವಿಯಾಗಿ ಮುಗಿದು ರೂಪಣಾತ್ಮಕ ಮೌಲ್ಯಮಾಪನದ ತಯಾರಿಯತ್ತ ಸಾಗಿದೆ.
ಇಂಥಹುದೇ ಮಳೆ ಬೀಳುವ ಒಂದು ಮಧ್ಯಾಹ್ನ ಶಾಲೆಯ ಮುಖ್ಯ ಅಡುಗೆಯವರಾದ ಪ್ರತಿಮಾ ಕಾಜುಗಾರ, ಯಾಕೋ ಬೇಗ ಬೇಗ ತನ್ನ ಕೆಲಸ ಮುಗಿಸುತ್ತಿದ್ದರು. ಅಡುಗೆ ಮಾಡಿ ನಾಳೆ ಬಿಸಿಯೂಟಕ್ಕೆ ಬೇಕಾದ ಅಕ್ಕಿ ಆರಿಸಿ ತುಂಬಿಟ್ಟು, ಮಕ್ಕಳು ಊಟ ಮಾಡಿದ ತಾಟುಗಳನ್ನು ಪಟಪಟ ತೊಳೆದು ಒಂದರ ಮೇಲೊಂದು ಎತ್ತಿಡುತ್ತ ಕೆಲಸ ಮುಗಿಸುವ ಅವಳ ಆತುರತೆ ನೋಡಿ, “ಏನು ಅವಸರ?’ ಎಂದು ಶಿಕ್ಷಕರು ಪ್ರಶ್ನೆ ಕೇಳಿ ಆಗಿದೆ.
ಅಣಶಿಯಲ್ಲಿ ಇದೀಗ ಗ¨ªೆ ನಾಟೀ ಕೆಲಸ ಜೋರು ಶುರುವಾಗಿದೆ. ಅವರ ಗ¨ªೆಯು ಶಾಲೆಯ ಸಮೀಪವಿರುವ ಸಿದ್ದೇಶ್ವರ ದೇಗುಲದ ಹಿಂದೆ ಇದೆ.ತಾಲೂಕು ಕ್ರೀಡಾಕೂಟ ಸಮೀಪಿಸುತ್ತಿರುವ ಕಾರಣ ಮೋಹನ ಸರು ಹಾಗೂ ವಿನೋದ ಸರು ಮಕ್ಕಳಿಗೆ ಕಬಡ್ಡಿ ಹಾಗೂ ವಾಲಿಬಾಲ್ ತರಬೇತಿ ಕೊಡಲು ದೇಗುಲದ ಸಮೀಪವಿರುವ ಆಟದ ಮೈದಾನದತ್ತ ಕರೆದೊಯ್ಯುತ್ತಾರೆ. ಅದೇ ಮೈದಾನದ ಬಲಬದಿಗೆ ಶಿಕ್ಷಕಿಯರು ವಿದ್ಯಾರ್ಥಿನಿಯರಿಗೆ ತರಬೇತಿ ಕೊಡುತ್ತಿ¨ªಾರೆ. ಅಲ್ಲಿಂದಲೇ ಅಣಶಿಯವರ ಗ¨ªೆಯ ಪೂರ್ತಿ ನೋಟ ನೋಡಬಹುದಾಗಿದೆ. ಶಾಲೆ ಕೆಲಸ ಮುಗಿಸಿ ಪ್ರತಿಮಾ ಗ¨ªೆಯ ಕಡೆಗೆ ಬಂದಾಗಿದೆ. ಕುತೂಹಲದಿಂದ ಎಲ್ಲರೂ ಅವರ ಗ¨ªೆ ಕಡೆಗೆ ಇಣುಕಿ¨ªಾರೆ. ಮಕ್ಕಳಿಗೆಲ್ಲ ಈಗ ಸೀನಸೆಟ್ಟರ ಪಾಠದ ಹಸಿ ಹಸಿ ನೆನಪು.
ತಾವು ಗ¨ªೆಗಿಳಿಯುವಾಸೆ; ಆದರೆ ಶಿಕ್ಷಕರು ಬೇಡ ಎಂದರೆ ಎಂಬ ಆತಂಕ ಅವರ ಕಣ್ಣುಗಳಲ್ಲಿ ಚಲಿಸತೊಡಗಿದ್ದು ಶಿಕ್ಷಕರ ಗಮನಕ್ಕೂ ಬಂದಿದೆ. ಪ್ರತಿಮಾರ ಒಪ್ಪಿಗೆಯ ಮೇರೆಗೆ ಗ¨ªೆಯ ಒಂದು ಚಿಕ್ಕ ಭಾಗವನ್ನು ತಾವೇ ನಾಟೀ ಮಾಡಿಕೊಡುವುದಾಗಿ ಶಿಕ್ಷಕರು, ಮಕ್ಕಳು ವಿಶ್ವಾಸವನ್ನಿತ್ತಿ¨ªಾರೆ.
ಪ್ರತಿಮಾ ತನ್ನÇÉೇ ಖುಷಿಗೊಂಡು ದೊಡ್ಡದಾಗಿ, “”ಟೀಚರ್, ನಿಧಾನ ಬನ್ನಿ. ಬಹಳ ಕೆಸರು ಇದೆ, ಕಾಲು ಹುಗಿಯುತ್ತದೆ” ಎಂದಿ¨ªಾರೆ. ಶಿಕ್ಷಕಿಯರೆಲ್ಲ ಸೀರೆ ಮೇಲೆತ್ತಿ ಸಿಗಿಸಿ¨ªಾರೆ. ಅವರ ಸೆರಗು ಅವರನ್ನು ಇಡಿಯಾಗಿ ಬಳಸಿ ಸೊಂಟದಲ್ಲಿ ಬಂಧಿಯಾಗಿದೆ. ಕೈಬಳೆ, ವಾಚು ದೇಗುಲದ ಆವಾರದಲ್ಲಿ ಕೂತಿವೆ. ಅವರ ಪುಟ್ಟ ಪರ್ಸು ಗ¨ªೆಯ ಬೇಲಿಯ ಗೂಟಕ್ಕೆ ತೂಗಿಕೊಂಡಿದೆ. ಆ ಪರ್ಸಿನೊಳಗಿರುವ ಮೊಬೈಲು ಆಗಾಗ ಗುಂಯಿ ಗುಂಯಿ ಎಂದುಲಿದು ಮೌನವಾಗಿದೆ.
ಗಾಳಿಗೂ ಒಂಥರಾ ಖುಷಿ. ಗೂಟಕ್ಕೆ ಸಿಗಿಸಿದ ಬ್ಯಾಗನ್ನು ಅಲುಗಾಡಿಸಿ ಕಚಗುಳಿಯಿಡುತ್ತಿದೆ. ಮಕ್ಕಳ ಪುಟ್ಟ ಕೈಗಳಲ್ಲಿ ಪುಟ್ಟ ಸಸಿಗಳು ನಗುತ್ತಿವೆ. ನೆಟ್ಟಿ ಮಾಡಲೆಂದೇ ಬೇರೊಂದು ತುಂಡುಗ¨ªೆಯಲ್ಲಿ ಮಡಿ ಮಾಡಿ ಸಸಿಗಳನ್ನು ಬೆಳೆಸಿ¨ªಾರೆ. ಅದನ್ನು ನಿಧಾನ ಕಿತ್ತು ಹಾಳೆ ಮೇಲೆ ತಂದು ತುದಿ ಕತ್ತರಿಸಿ ಸುಮಾರು ನೂರು ಸಸಿಗಳಿರುವ ಒಂದೊಂದೇ ಕಟ್ಟು ಕಟ್ಟಿ ಗ¨ªೆ ಹಾಳೆಯ ಮೇಲಿಟ್ಟಿ¨ªಾರೆ. ಪ್ರತಿಮಾರ ಇಡೀ ಕುಟುಂಬ ಈ ಕೃಷಿ ಕಾರ್ಯದಲ್ಲಿ ತಲ್ಲೀನವಾಗಿದೆ. ನೆರೆಮನೆಯವರು ಕೂಡ ದೂರದವರೆಗೆ ಕೆಲಸ ಮಾಡುತ್ತಿದ್ದದ್ದು ಮಕ್ಕಳ ಕಣ್ಣಿಗೆ ಬಿದ್ದಿದೆ. ಕೆಲವರು ಗ¨ªೆ ಹೂಡುತ್ತಿದ್ದರೆ, ಇನ್ನೂ ಕೆಲವರು ಗ¨ªೆಗೆ ಸಮಪ್ರಮಾಣದಲ್ಲಿ ನೀರು ಬಿಟ್ಟು ಕೊಡುತ್ತಿ¨ªಾರೆ. ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಕೆಲಸ ಮಾಡಿ, “ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತಿಗೆ ಸಾಕ್ಷಿಯಾಗಿದ್ದು ಹೇಗೆಂಬುದನ್ನು ಶಿಕ್ಷಕರು ಅವರ ಉದಾಹರಣೆ ನೀಡಿ ತೋರಿಸಿಕೊಟ್ಟಿ¨ªಾರೆ.
ಪ್ರತಿಮಾರಿಂದ ಸಸಿಗಳ ಒಂದೊಂದೆ ಕಟ್ಟು ಪಡೆದು ತಮ್ಮತಮ್ಮಲ್ಲಿ 50-50 ಸಸಿಗಳನ್ನು ಹಂಚಿಕೊಂಡು ಮಕ್ಕಳು ಗ¨ªೆಗೆ ಇಳಿದಿ¨ªಾರೆ.ಹುಡುಗಿಯರು ತಮ್ಮ ಸಮವಸ್ತ್ರವನ್ನು ಸ್ವಲ್ಪ ಮೇಲೆತ್ತಿ ಕಟ್ಟಿ¨ªಾರೆ.ಶಿಕ್ಷಕರು ಪ್ಯಾಂಟಿನ ತುದಿ ಮಡಚಿ ನೀರಿಗಿಳಿದಿ¨ªಾರೆ. ಈ ಹಿಂದೆ ಪಾಠದಲ್ಲಿ ಸೀನಸೆಟ್ಟರು ನಾಟೀ ಕಾರ್ಯಕ್ಕೆ ಮಾರ್ಗದರ್ಶಕರಾದದ್ದು ಮಕ್ಕಳುನೆನಪಿಸಿಕೊಂಡಿ¨ªಾರೆ. ಏಳನೆಯ ವರ್ಗ ಶಿಕ್ಷಕಿಯು ಪ್ರತಿಮಾರನ್ನೇ ಮಾರ್ಗದರ್ಶನ ಮಾಡಲು ನೇಮಿಸಿ¨ªಾರೆ.
ಅವರ ಒಂದೊಂದು ನುಡಿಯನ್ನು ಪಾಲಿಸುತ್ತ, ಕಾಲು ಕೆಸರಲ್ಲಿ ಹೂತು, ಮಣ್ಣು ಮೈಗೆ ತಾಗಿದರೂ ಲೆಕ್ಕಿಸದೇ “ಅನ್ನದಾತಾಯ ನಮಃ’ ಎನ್ನುತ್ತ ಹುರುಪಿನಲ್ಲಿ ಕೆಲಸ ಆರಂಭಿಸಿ¨ªಾರೆ. ಶಿಕ್ಷಕರು ಕೂಡ ತಮ್ಮ ಜೊತೆ ಇದ್ದು, ಸಸಿ ನೆಡುತ್ತಿ¨ªಾರೆ ಎಂಬುದನ್ನು ನೋಡಿಯೇ ಮಕ್ಕಳಿಗೆ ಖುಷಿ. ಟೀಚರುಗಳ ಸೀರೆಯ ತುದಿಗೆ ಕೆಸರು ಮೆತ್ತಿಕೊಂಡರೂ ಬೇಸರಿಸಿಕೊಳ್ಳದೇ, “ಮನೆಗೆ ಹೋಗಿ ಬಟ್ಟೆ ಒಗೆದರಾಯಿತು, ಅಷ್ಟೇ’ ಎಂಬ ಉತ್ತರವನ್ನು ಪ್ರತಿಮಾಳಿಗೆ ಕೊಟ್ಟಿ¨ªಾರೆ. ಅದೇ ದಾರಿಯಲ್ಲಿ ಹಾದು ಹೋಗುವ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು ಶಿಕ್ಷಕರ, ಮಕ್ಕಳ ಹುರುಪು ಕಂಡು ಪೋಟೋ ತೆಗೆದು ಖುಷಿ ಪಡುತ್ತಿ¨ªಾರೆ.ಎÇÉೆಲ್ಲೂ ನಗು- ಸಮಯ ಜಾರಿದ್ದೇ ಅರಿವಾಗದಷ್ಟು.
ನಾಟಿ ಕಾರ್ಯ ಮುಗಿದ ಮೇಲೆ ಗ¨ªೆಯ ಬದಿಯಿಂದ ಹಾದು ಹೋದ ನೀರಿನ ತೋಡಿನಲ್ಲಿ ಎಲ್ಲರೂ ಕೈ ಕಾಲು ತೊಳೆದುಕೊಂಡಿ¨ªಾರೆ. ಸ್ಫ³ಟಿಕದಂತೆ ಹೊಳೆಯುತ್ತಿದ್ದ ನೀರೀಗ ಮಕ್ಕಳ ಪುಟ್ಟಪಾದಗಳನ್ನು ತೊಳೆದು ಕೆಂಪಾಗಿ ತನ್ನ ರಂಗು ಬದಲಾಯಿಸಿಕೊಂಡಿದೆ. ಕೆಲವರು ನಾಟಿ ಮಾಡುವಾಗ ಮಾಡಿದ ಸಣ್ಣ-ಪುಟ್ಟ ತಪ್ಪುಗಳನ್ನು ಪ್ರತಿಮಾ ಸರಿಪಡಿಸುತ್ತಿ¨ªಾರೆ.
ಕತ್ತಲಾಗುತ್ತ ಬಂದ ಕಾರಣ ಇದೀಗ ಎಲ್ಲರಿಗೂ ಮನೆ ನೆನಪಾಗಿದೆ. ರಾತ್ರಿಯಿಡೀ ಗ¨ªೆಯ ಕನಸು. ಶಿಕ್ಷಕರ ಕನಸಿನಲ್ಲಿ ಗ¨ªೆ ಏಕದಂ ಬೆಳೆದು ನಿಂತಿದೆ.ಈಗ ದಿನಾಲೂ ಶಾಲೆಗೆ ಬರುವಾಗ ಮಕ್ಕಳು ಗ¨ªೆಯನ್ನೊಮ್ಮೆ ನೋಡಿ ಬರುತ್ತಿ¨ªಾರೆ. ಕನಸು ಬೆಳೆಯುತ್ತಿದೆ.
– ಅಕ್ಷತಾ ಕೃಷ್ಣಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.