ಭಾವಗೀತಾತ್ಮಕ ನಿರೂಪಣೆಯ ಬರಹಗಳು


Team Udayavani, Sep 16, 2018, 6:00 AM IST

wife.jpg

ವ್ಯಕ್ತಿ ತನ್ನ ಬದುಕಿನ ಸಾರ್ಥಕತೆಯನ್ನು ಗುರುತಿಸಿಕೊಳ್ಳುವುದು ಯಾವ ರೀತಿಯಲ್ಲಿ? ಇದಕ್ಕೆ ಹಲವಾರು ಮಾರ್ಗಗಳಿವೆ- ಅಂತರಂಗದ ಮಿತ್ರರ ಮೌಲ್ಯಾಂಕನದ ಮೂಲಕ; ಊರ ಸಜ್ಜನರ ದೃಷ್ಟಿಕೋನದ ಮೂಲಕ; ಬಂಧುಬಾಂಧವರ “ವಸ್ತುನಿಷ್ಠ’ ಪಾತ್ರ ವಿಶ್ಲೇಷಣೆಯ ಪ್ರಕ್ರಿಯೆಯ ಮೂಲಕ ಇತ್ಯಾದಿ. ಆದರೆ, “ಪತ್ನಿಯರು ಕಂಡಂತೆ ಪ್ರಸಿದ್ಧರು’ ಕೃತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರ ವ್ಯಕ್ತಿತ್ವದ ದರ್ಶನ ನಮಗೆ ಆಗುವುದು ಅವರೊಂದಿಗೆ ಸುದೀರ್ಘ‌ ದಾಂಪತ್ಯ ಜೀವನ ನಡೆಸಿದ ಸದ್ಗƒಹಿಣಿಯರ ಮೂಲಕ. ಇಲ್ಲಿ ಪರಿಚಯಿಸಲ್ಪಟ್ಟಿರುವ ಎಲ್ಲರೂ ಖ್ಯಾತರೇ. ಕವಿ, ಕಲಾವಿದ, ರಾಜಕಾರಣಿ, ಇತಿಹಾಸಕಾರ, ಚಿತ್ರನಟ, ಛಾಯಾಗ್ರಾಹಕ, ವಿಜ್ಞಾನಿ, ಕ್ರೀಡಾಪಟು, ಚಿತ್ರನಿರ್ಮಾಪಕ, ಪತ್ರಿಕೋದ್ಯಮಿ - ಮುಂತಾದ ಪಾತ್ರಗಳ ಮೂಲಕ ತಮ್ಮ ಬದುಕಿನ ನಡೆಯನ್ನು ಚೆಲುವುಗೊಳಿಸಿಕೊಂಡವರು. ಈ 40 ಮಂದಿ ಮಹನೀಯರ ವ್ಯಕ್ತಿತ್ವದ ಅನಾವರಣ, ಅವರನ್ನು ನಿರಂತರವಾಗಿ “ಸಂಭಾಳಿಸಿಕೊಂಡು’ ಬಂದಿರುವ ಪತ್ನಿಯರ ಮೂಲಕ ಆಗಿರುವುದರಿಂದ ಈ ವ್ಯಕ್ತಿಚಿತ್ರಗಳು ಅತ್ಯಂತ ಆಪ್ತವಾಗಿವೆ; ಜತೆಗೇ ಈ ದಂಪತಿಗಳು ನಡೆದ ಕಲ್ಲುಮುಳ್ಳಿನ ಹಾದಿಗಳ ನಿಕಟ ದರ್ಶನವನ್ನೂ ಮಾಡಿಸುತ್ತವೆ. ಇವರಲ್ಲಿ  ಅನೇಕರು ತಮ್ಮ ತಮ್ಮ ಕಾರ್ಯಕ್ಷೇತ್ರಗಳ  ಶಿಖರಸ್ಥಾನಿಗಳು; ರಾಷ್ಟ್ರಮಟ್ಟದ ಶ್ರಮ-ಸಫ‌ಲ ಸಾಧಕರು; ಸರಳತೆ ಹಾಗೂ ಋಜು ನಡೆಯೆಂದರೇನೆಂದು ಸಮಾಜಕ್ಕೆ ತೋರಿಸಿಕೊಟ್ಟವರು. 

ಇಂಥವರ ಸಹಧರ್ಮಿಣಿಯರು ತಮ್ಮ ಪತಿಯಂದಿರ ದೋಷಗಳಿಗೆ ಅಷ್ಟೊಂದು ಗಮನಕೊಡದೆ, ಅವರ ಗುಣಗಳನ್ನಷ್ಟೇ ಕಂಡವರು. ಮಾತೃಹೃದಯದಿಂದ, ಸ್ವಂತಿಕೆ ಮರೆಯದ ಹೊಂದಾಣಿಕೆ ಗುಣದಿಂದ, ಸಾಂಸಾರಿಕ ಸಾಂಗತ್ಯವೆಂದರೇನೆಂದು ಅರ್ಥಮಾಡಿಕೊಂಡವರು. ಇಂಥವರ ಬಾಯಿಂದ ಬಂದ ಇವು ಗದ್ಯರೂಪಿ ದಾಂಪತ್ಯಗೀತೆಗಳೂ ಹೌದು; ಬದುಕಿನ ಹೋರಾಟದ ಯಶೋಗಾಥೆಗಳೂ ಹೌದು. ಇಂಥ ಮಾಗಿದ ಹಿರಿಯ ಗೃಹಿಣಿಯರನ್ನು ನಿರ್ಭಿಡೆಯಿಂದ, ಆದರೆ ಅತ್ಯಂತ ಅಕ್ಕರೆಯಿಂದ ಮಾತಾಡುವಂತೆ ಮಾಡಿರುವ, ಆ ಮೂಲಕ ಕನ್ನಡಿಗರಿಗೆ ನಾಡು ಹೆಮ್ಮೆ ಪಡುವಂತೆ ಮಾಡಿರುವ ಸಾಧಕರನ್ನು ಆಡಂಬರರಹಿತ ನಿರೂಪಣೆಯ ಮೂಲಕ ಪರಿಚಯಿಸಿಕೊಟ್ಟ ಲೇಖಕಿ ಈಗ ನಮ್ಮ ನಡುವೆ ಇಲ್ಲ. ಈ ಹಿಂದೆ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಈ ಲೇಖನಗಳನ್ನು ಅವರ ಪತಿ ಎಚ್‌.ಎನ್‌. ಶ್ಯಾಮರಾವ್‌ ಅವರು ಪ್ರಕಟನೆಗಾಗಿ ಸಿದ್ಧಪಡಿಸಿಕೊಟ್ಟಿದ್ದಾರೆ. ಇದೀಗ ಈ ಬರಹಗಳೆಲ್ಲ ಒಂದು ಸಂಕಲನವಾಗಿ ಹೊರಬರುವುದರೊಂದಿಗೆ ಈ ಸಾಧಕರ ಚಿತ್ರಗಳಿಗೆ ದೀರ್ಘಾಯುಷ್ಯ ಲಭಿಸಿದೆ; ಜೊತೆಗೆ, ಲೇಖಕಿಯ ಆದ್ರì, ಭಾವಗೀತಾತ್ಮಕ ನಿರೂಪಣೆಗೆ ಕೂಡ.

ಪತ್ನಿಯರು ಕಂಡಂತೆ ಪ್ರಸಿದ್ಧರು (ವಿಶೇಷ ವ್ಯಕ್ತಿಚಿತ್ರಗಳು)
ಲೇ.: ಬಿ. ಎಸ್‌. ವೆಂಕಟಲಕ್ಷ್ಮಿ
ಪ್ರ.: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್‌ ಎದುರು, ವಿದ್ಯಾನಗರ, ಶಿವಮೊಗ್ಗ-577203
(ಮೊಬೈಲ್‌: 9449174662)
ಮೊದಲ ಮುದ್ರಣ: 2018   ಬೆಲೆ : 300 ರೂ.

– ಜಯರಾಮ ಕಾರಂತ

ಟಾಪ್ ನ್ಯೂಸ್

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

14-uv-fusion

Mother: ಅಮ್ಮನ ಜೀವನವೇ ಆದರ್ಶ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

13-uv-fusion

Childhood Days: ಮರಳಿ ಬಾರದ ಬಾಲ್ಯ ಜೀವನ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

12-uv-fusion

UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.