ಮಂತ್ರ ಮತ್ತು ಮಾವಿನಕಾಯಿ!


Team Udayavani, Nov 25, 2017, 10:41 PM IST

mantra.jpg

ಭಾರತೀಯ ಸಂಸ್ಕƒತಿಯಲ್ಲಿ ಕರ್ಮಕಾಂಡ, ಜ್ಞಾನ ಕಾಂಡದಷ್ಟೇ ಮಹತ್ವ ಉಪಾಸನಾ ಕಾಂಡಕ್ಕಿದೆ. ಮನುಷ್ಯನ ಮನಸ್ಸು ಬಹಳ ಚಂಚಲ. ಅದಕ್ಕೆ “ಕ್ಷಣಚಿತ್ತ, ಕ್ಷಣಪಿತ್ತ’ ಎಂದು ಹೇಳುವುದುಂಟು. ಸರಿ ಯಾವುದು ಗೊತ್ತು ಮಾಡಲು ಮನಸ್ಸಿಲ್ಲ, ತಪ್ಪು ಯಾವುದು ಎಂದು ಗೊತ್ತು, ಬಿಡಲು ಮನಸ್ಸಿಲ್ಲ. ಇದು ದುರ್ಯೋಧನ ಉವಾಚ, ವ್ಯಾಸ ಭಾರತದಲ್ಲಿ! ಹೀಗೆ ಮನಸ್ಸು ಬಹಳ ಪ್ರಬಲವಾದ ಶಕ್ತಿ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಅದು ಏನನ್ನಾದರೂ ಮಾಡಲು ಸಮರ್ಥ. ಆದರೆ, ಮಾಡುವುದು ಮಾಡದಿರುವುದು ನಮ್ಮ ಕೈಯಲ್ಲಿದೆ. 

ಬೆಳಿಗ್ಗೆ ಬೇಗ ಏಳುವುದು, ನಿತ್ಯವೂ ನಿಯಮಿತ ಸಮಯಕ್ಕೆ ಸ್ನಾನ ಮಾಡುವುದು, ಸ್ವಲ್ಪ ಕಾಲ ಧ್ಯಾನ, ಮಾನಸ ಪೂಜೆ ಅಥವಾ ಭಜನೆ ಮಾಡುವುದು ಇದನ್ನು ಮನಸ್ಸಿಗೆ ಹೇಳಿಕೊಡಬೇಕು. ಮನಸ್ಸು ಸಹಜವಾಗಿ ಚಂಚಲ. ಅದು ನಾವು ಹೇಳಿದ್ದನ್ನು ಕೂಡಲೇ ಮಾಡುವುದಿಲ್ಲ, ಏನಾದರೂ ನೆಪ ಹೇಳುತ್ತದೆ. 

ಅದಕ್ಕೆ ಪ್ರತಿನಿತ್ಯ ಅದರ ಕರ್ತವ್ಯದ ನೆನಪು ಮಾಡುತ್ತ ಇರಬೇಕು. ಚಿಕ್ಕಮಕ್ಕಳು ಮೊದಲ ದಿನ ಶಾಲೆಗೆ ಹೋಗುವಾಗ ಹೇಗೆ ನೆಪ ಹೂಡುತ್ತವೋ ಹಾಗೆ ಮನಸ್ಸು ಕೂಡ ನಿಯಮಿತ ಕೆಲಸಗಳನ್ನು ಮಾಡದಿರಲು (ಯೋಗ, ಪ್ರಾಣಾಯಾಮ ಮಾಡುವುದು, ನಿಯಮಿತ ಆಹಾರ ಸೇವನೆ, ಸದ್ಗ†ಂಥಗಳ ಅಧ್ಯಯನ) ನೆಪ ಹುಡುಕುತ್ತದೆ. ಮನಸ್ಸನ್ನು ಮೊದಮೊದಲು 21 ದಿನಗಳವರೆಗೆ ಆಗ್ರಹ ಮಾಡಬೇಕಾಗುತ್ತದೆ. “ಎಲೈ ಮನಸ್ಸೇ ನಿನ್ನ ಒಳಿತಿಗಾಗಿಯೇ ಈ ಕೆಲಸಗಳನ್ನು ಇಷ್ಟವಿಲ್ಲದಿದ್ದರೂ ಮಾಡು’ ಎಂದು ಅನುನಯ ಮಾಡಬೇಕು. ಕ್ರಮೇಣ ಏಳೆಂಟು ದಿನಗಳಾದ ಮೇಲೆ ಮನಸ್ಸು ಈ ನಿಯಮಕ್ಕೆ ಒಗ್ಗಿಕೊಳ್ಳುತ್ತದೆ. 21 ದಿನಗಳವರೆಗೆ ಯಾವುದೇ ಉತ್ತಮ ಸಂಸ್ಕಾರ ನೀಡುವ ಕೆಲಸಗಳನ್ನು ಸತತವಾಗಿ ಮಾಡಿದರೆ ಆ ನಿಯಮ ನಮ್ಮ ಸಹಜ ಪ್ರವೃತ್ತಿಯಾಗುತ್ತದೆ ಎಂಬುದು ಅನುಭವಿಗಳ ನುಡಿ. ಈ ಮನೋನಿಗ್ರಹ, ಮನಸ್ಸಿನ ವಿಸ್ತಾರಗಳು- ವೇದ, ಜೈನ, ಬೌದ್ಧ ಅಥವಾ ತಂತ್ರ- ಹೀಗೆ ಯಾವುದೇ ಮಾರ್ಗದ ಅಧ್ಯಾತ್ಮ ಸಾಧನೆಗೂ ಬೇಕೇ ಬೇಕು. ಇದನ್ನು ಹಳಬರು “ಅನುಸಂಧಾನ’ ಎಂದು ಕರೆದರು, “ಉಪಾಸನೆ’ ಎಂದು ಹೆಸರಿಟ್ಟರು.

ಹಾಡುಗಾರ ಅಥವಾ ಹಾಡುಗಾರ್ತಿ ಮುಂಜಾನೆ ನಾಲ್ಕಕ್ಕೆ ಎದ್ದು ತಂಬೂರಿ ಶ್ರುತಿ ಮಾಡುವುದು ಮನಸ್ಸಿಲ್ಲದ ಕರ್ಮವಾಗಬಹುದು. ದೈನಿಕ ಯಾಂತ್ರಿಕವಾಗಬಹುದು, ಅದೇ ಸತ್‌ಭಾವದಿಂದ ತಂತಿ ಮೀಟಿದರೆ “ಉಪಾಸನೆ’ ಆದೀತು. ಈ ಉಪಾನಸೆ ಎಲ್ಲರಿಗೂ ಒಂದೇ ದಿನಕ್ಕೆ ಬರುವುದಿಲ್ಲ, ಯಾರೂ ಪೆನ್ನು ಕೈಗೆತ್ತಿಕೊಂಡ ದಿನವೇ ಲೇಖಕರಾಗಿ ತಯಾರಾಗಿಬಿಡುವುದಿಲ್ಲ. ನಿಧಾನವಾಗಿ ಬಿಳಿ ಹಾಳೆಯನ್ನು ಕಪ್ಪು ಮಾಡಲು ಅನೇಕ ತಪ್ಪು ಬೈಗುಳದ ದಾರಿ ಅನುಭವಿಸಿದ ಮೇಲೆಯೇ ಅವರು ವಿಗ್ರಹವಾಗುವುದು. ಕಲ್ಲು ವಿಗ್ರಹವಾಗಲು ಕಾಲ, ಶ್ರಮ ಬೇಕಲ್ಲ? ಈ ಶ್ರಮವೇ ಆಶ್ರಮ. ಅದೇ ಸಾಧನೆಯ ಹಾದಿ. 

ಈಗ ತಂತ್ರ-ಶಾಕ್ತ ಉಪಾಸನೆಯ ದಾರಿಯನ್ನೇ ನೋಡೋಣ. ಅದು ದುರ್ಗಮವಾದ ಆದರೆ, ಗುರುವಿನ ಕಾರುಣ್ಯದಿಂದ ಸಾಗಬೇಕಾದ, ಸಾಗಬಹುದಾದ ದಾರಿ. ಜಗತ್ತಿನ ಅತಿ ಪುರಾತನ ಉಪಾಸನೆಗಳÇÉೇ ಆದಿಶಕ್ತಿಯ ಜಗನ್ಮಾತೆಯ ಉಪಾಸನೆ ಪುರಾತನತಮ. ದೇಶ-ವಿದೇಶದ ಕಾಡುಗಳಲ್ಲಿ ಹೇಗೋ ಅಲ್ಲಿನ ಗುಹೆ-ನದಿ-ತಟಗಳಲ್ಲಿ ಹೇಗೋ ಹಾಗೆಯೇ ಭರತವರ್ಷದ ಭರತಖಂಡದಲ್ಲೂ ಜಗನ್ಮಾತೆಯ ಉಪಾಸನೆ ಹಬ್ಬಿ ಹರಡಿದೆ. ತಾಯಿಯೇ ಅಲ್ಲವೇ ಮಗು ಮೊದಲು ಈ ಲೋಕದಲ್ಲಿ ಕಣ್‌ ತೆರೆದಾಗ ಕಣ್ಣಿಗೆ ಬಿದ್ದವಳು. ಲೋಕಕ್ಕೆ ಬಂದು ಬಿದ್ದ ನಮ್ಮನ್ನು “ಬೀಳಬೇಡ ನಾನಿದ್ದೇನೆ’ ಎಂದು ತೋಳು, ಎದೆ ನೀಡಿ ಎತ್ತಿದವಳೂ ಅವಳೇ ಅಲ್ಲವೆ? ಹೀಗೆ ಆ ಶ್ರೀಮಾತೆಯ ಉಪಾಸನೆಯನ್ನು ಸ್ಮರಣೆಯನ್ನು ಭಾರತದ ಸನಾತನ ಧರ್ಮ, ಕಲೆ, ಕಲಾಪಗಳಲ್ಲಿ ಶಿಷ್ಟ-ಜಾನಪದವೆಂಬ ಭೇದವಿರದೆ ಎÇÉೆಡೆ ಕಾಣಬಹುದು.

ಎಲ್ಲಮ್ಮನೂ ಅವಳೇ, ವೇದದ ಅದಿತಿಯೂ ಅವಳೇ. ವೇದಗಳ ಭಾಗವಾದ ಸಂಹಿತೆ, ಅರಣ್ಯಕ, ಬ್ರಾಹ್ಮಣ ಮತ್ತು ಉಪನಿಷತ್ತುಗಳಲ್ಲಿ ದೇವಿಯ ಆರಾಧನೆ, ಚಿಂತನೆಯ ವಿಚಾರಗಳು ಬಂದಿವೆ. ಈ ಬಗೆಯ ವಿದ್ಯೆಯನ್ನು ಅಂದರೆ ಅಧ್ಯಾತ್ಮ ವಿದ್ಯೆಯನ್ನು ಗುಹ್ಯ, ಗೂಢ, ಗುಹ್ಯಾತಿಗುಹ್ಯ ಎಂದು ಹೇಳಲಾಗಿದೆ. ಕೆಲವರು ತಂತ್ರದ ದಾರಿಶಕ್ತಿಯ ಉಪಾಸನೆ ದಾರಿ, ನಂತರದ್ದು ಪುರಾಣ ಕಾಲದ್ದು ಎಂದು ಹೇಳುವುದುಂಟು. ಅದು ಹಾಗಲ್ಲ. ಈ ವಿದ್ಯೆ ವೇದಗಳಷ್ಟೇ ಪ್ರಾಚೀನ. ಭಾರತದಲ್ಲಿ ದೇವಿಯ ಉಪಾಸನೆಯನ್ನು ವೈದಿಕ ಮತ್ತು ತಾಂತ್ರಿಕ ಎರಡೂ ದಾರಿಗಳಲ್ಲೂ ಮಾಡಿ¨ªಾರೆ, ಮಾಡುತ್ತಿದ್ದಾರೆ. ಅದ್ವೆ„ತದ ಮಹಾಪೀಠವಾದ ಶೃಂಗೇರಿಯಲ್ಲಿ ಪ್ರತಿವರ್ಷ ಶರನ್ನವರಾತ್ರಿಯಲ್ಲಿ ಗುರುಗಳೇ ಸ್ವತಃ ಶ್ರೀಚಕ್ರದ ಆರಾಧನೆ ಮಾಡುವುದನ್ನು ಅನೇಕರು ನೇರವಾಗಿ ಅಥವಾ ದೂರದರ್ಶನದ ಮೂಲಕ ನೋಡಿರಬಹುದು. ಅಂದರೆ ಈ ನಾಡಿನಲ್ಲಿ ಅದ್ವೆ„ತ-ಶಾಕ್ತ ಒಟ್ಟೊಟ್ಟಿಗೆ ಚಲಿಸಿವೆ.

ದೇವಿಯ ಉಪಾಸನೆಯನ್ನು ಜೈನ ಬೌದ್ಧ, ಸೌರ, ಗಾಣಪತ್ಯ, ಷಣ್ಮುಖ (ಸ್ಕಂದನ ಉಪಾಸನೆ, ದಕ್ಷಿಣ ಕನ್ನಡದಲ್ಲಿ ಸುಬ್ರಹ್ಮಣ್ಯನ ಉಪಾಸನೆ)ಗಳಲ್ಲಿ ಕಾಣ ಬಹುದು. ಸ್ವತಃ ಶಾಕ್ತದಲ್ಲಿ ಶ್ರೀ ವಿದ್ಯೆಯಲ್ಲಿ ಅನೇಕ ಪಥಗಳಿವೆ. ಉಪಾಸನೆ ಮಾಡುವ ಅಂದರೆ ಸರಳವಾಗಿ ಹೇಳುವುದಾದರೆ ಆ ಮಹಾತಾಯಿಯನ್ನು ಕಾಣಲು, ಸಮೀಪಿಸಲು ಹಳಬರು ಹತ್ತು ಉಪಾಸನೆಯ ದಾರಿಗಳನ್ನು ಹಾಕಿಕೊಟ್ಟಿ¨ªಾರೆ. ಹೀಗಾಗಿ, ಈ ದಾರಿಗಳನ್ನು ಸೇರಿಸಿ ದಶಮಹಾವಿದ್ಯೆ ಎಂದು ಹೆಸರಿಟ್ಟಿ¨ªಾರೆ. ವಿದ್ಯೆ ಎಂದರೆ ಏನು? ಬಿಎ, ಬಿಕಾಂ, ಎಂಎ. ಎಂಎಸ್ಸಿ, ಪಿಎಚ್‌ಡಿ ಇವು ಲೌಕಿಕ ವಿದ್ಯೆಗಳು.

ದೇವರನ್ನು ಕಾಣಲು ಬಳಸದಿದ್ದರೆ ವೇದವೂ ಇದೇ ಪ್ರಾಂಗಣಕ್ಕೆ ಬರಬಹುದು. ಈ ಮಹಾವಿದ್ಯೆಗಳನ್ನು ಹಾಗೆ ಕರೆಯಲು ಕಾರಣ, ಅವು ದೇವಿಯನ್ನು ಕಾಣಲು ಇರುವ ಉಪಾಸನೆಯ ಖಚಿತ ಸ್ಪಷ್ಟ ದಾರಿಗಳಾದ್ದರಿಂದ. ಕಾಲೀ, ತಾರಾ, ತ್ರಿಪುರಸುಂದರೀ, ಭುವನೇಶ್ವರೀ, ಛಿನ್ನಮಸ್ತಾ, ಭೈರವೀ, ಬಹಳಾಮುಖೀ, ಮಾತಂಗೀ, ಕಮಲಾ ಮತ್ತು ಧೂಮವತೀ ಇವೇ ಆ ಹತ್ತು ಮಹಾವಿದ್ಯೆಗಳು. ಇದರಲ್ಲಿ ತಾಂತ್ರಿಕ ಆಚಾರ್ಯರು ಕೆಲವನ್ನು ಮಹಾವಿದ್ಯೆಗಳೆಂದು, ಕೆಲವನ್ನು ಸಿದ್ಧವಿದ್ಯೆಗಳೆಂದು ಮತ್ತು ಕೆಲವನ್ನು ವಿದ್ಯೆಗಳೆಂದು ಕರೆದಿ¨ªಾರೆ.

ಆಧುನಿಕ ಮನಸ್ಸಿಗೆ ಈ ಉಪಾಸನೆ, ಅನುಸಂಧಾನದಂಥ ವಿಷಯವನ್ನು ಅರಿಯಲು ಅನೇಕ ತೊಡಕುಗಳಿವೆ. ಮೊದಲನೆಯದು ನಂಬಿಕೆ ಇಲ್ಲದಿರುವುದು, ಎರಡನೆಯದು ಪರೀಕ್ಷಿಸಿ ನೋಡುವ ಧೈರ್ಯ, ಸಾಮರ್ಥ್ಯ ಇಲ್ಲದಿರುವುದು, ಮೂರನೆಯದು ತತ್ವ , ದರ್ಶನ ಇವುಗಳ ಬಗೆಗೆ ಪ್ರಾಥಮಿಕ ಮಾಹಿತಿಯೂ ಇಲ್ಲದಿರುವುದು. 
ಮೂರನೆಯದನ್ನು ಮೊದಲು ನೋಡೋಣ.

ಇಂಜಿನಿಯರಿಂಗ್‌ ಅಥವಾ ಎಂಬಿಬಿಎಸ್‌ ಮಾಡಿ ದೇಶ-ವಿದೇಶ ಸುತ್ತಿ ಬಂದಿರುತ್ತಾರೆ, ಆದರೆ ಶಂಕರಾಚಾರ್ಯ, ಅಭಿನವಗುಪ್ತ, ರಾಮಾನುಜಾ ಚಾರ್ಯ, ಮಧ್ವಾಚಾರ್ಯ ಇವರು ಧ್ಯಾನ, ಉಪಾಸನೆಯ ಕ್ಷೇತ್ರಕ್ಕೆ ಏನೇನು ಮತ್ತು ಎಂತೆಂಥ ಕೊಡುಗೆ ನೀಡಿ¨ªಾರೆ ಎಂಬುದರ ಕಿಂಚಿತ್‌ ಅರಿವೂ ಇರುವುದಿಲ್ಲ. ಮನೆಯಲ್ಲಿ ತಮ್ಮ ತಮ್ಮ ಗುರುಪರಂಪರೆಯ ಕನಿಷ್ಠ ಕೆಲವಾದರೂ ಶಾಸ್ತ್ರಗ್ರಂಥಗಳು ಕೂಡ ಇರುವುದಿಲ್ಲ. ಇದೇ ಮಾನಸಿಕ ದಾಸ್ಯ. 300-400 ವರ್ಷಗಳ ಪಾಶ್ಚಾತ್ಯ ಸಂಪರ್ಕ ಪ್ರಭಾವದಿಂದಾಗಿ “ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ’ ಎಂದು ಹೇಳುವ ಮೆಕಾಲೆ ಮಾನಸಪುತ್ರರು ಹುಟ್ಟಿಕೊಂಡಿ¨ªಾರೆ. 

ಎರಡನೆಯದು ಧೈರ್ಯ ಸಾಮರ್ಥ್ಯದ ಪ್ರಶ್ನೆ. ಅಂದರೆ, ಮಣಿ ಮಂತ್ರ, ಔಷಧ ಇವು ಪ್ರಯೋಗಿಸಿಯೇ ನೋಡಬೇಕು. ಇಂಗ್ಲಿಷ್‌ ಓದಲು ಬರುತ್ತದೆ ಎಂದು ಯಾರೂ ತಾವೇ ಔಷಧದ ಅಂಗಡಿಗೆ ಹೋಗಿ ಔಷಧ ತೆಗೆದುಕೊಳ್ಳುವುದಿಲ್ಲ ತಾನೆ? ಹಾಗೆ ಅಧ್ಯಾತ್ಮದ ದಾರಿಯಲ್ಲಿ ಸಾಧನೆ ಮಾಡುವವರು ಸಾವಿರಾರು ರೂಪಾಯಿ ಖರ್ಚುಮಾಡಿ ನೂರಾರು ಪುಸ್ತಕ ಓದಿದರೆ ಬುದ್ಧಿ ಚುರುಕಾಗುತ್ತದೆ ಅಷ್ಟೆ, ಕೆಲವು ಹೆಸರುಗಳು ಹೇಳಲು ಬರುತ್ತದೆ. ಈಜು ಕಲಿಯಲು ತರಬೇತಿ ಪಡೆಯದೆ ದಪ್ಪ ದಪ್ಪ ಪುಸ್ತಕಗಳನ್ನು ಮಗುಚಿ ಹಾಕಿದಂತೆ ಇದು. 

ಮೊದಲನೆಯದು ದೊಡ್ಡ ಸಮಸ್ಯೆ, ಅದೇ ಅಪನಂಬಿಕೆ, ಹೀಗಾದರೆ ಹೇಗೆ ಎಂಬ ಇಫ್Õ ಮತ್ತು ಬಟ್ಸ್‌ ದಾರಿ ಅದು. ಉತ್ತರದ ಕಡೆ ಕರೆದುಕೊಂಡು ಹೋಗುವ ಪ್ರಶ್ನೆಗಳೂ ಇವೆ, ಉತ್ತರ ಸಿಗದಂತೆ ಮಾಡುವ ಪ್ರಶ್ನೆಗಳೂ ಇವೆ.
ಮಂತ್ರದ್ರಷ್ಟಾರರು ಮಂತ್ರಗಳನ್ನು ಲೋಕಕ್ಕೆ ನೀಡಿದ್ದು ಮಾವಿನಕಾಯಿ ಉದುರಿಸಿ ಉಪ್ಪಿನಕಾಯಿ ಹಾಕಿ ತಿಂದು ನಾಲಿಗೆ ತೀಟೆ ತೀರಿಸಿಕೊಳ್ಳಲೆಂದೇ? ಅಥವಾ ಮಂತ್ರ ಲೋಕದ ಮಾಂತ್ರಿಕತೆಯ ದಿವ್ಯ ಕ್ಷಣಗಳನ್ನು ನಿತ್ಯ ಅನುಸಂಧಾನದ ಮೂಲಕ ಅನುಭವಿಸಲೆಂದೇ? ನಮ್ಮ ಆಧ್ಯಾತ್ಮಿಕ ಅನುಸಂಧಾನ ಲೋಕಗಳು, ಅವುಗಳ ಮುಖ್ಯರಸ್ತೆ. ಅಡ್ಡ ರಸ್ತೆಗಳನ್ನಾದರೂ ಭಾರತೀಯರಾಗಿ ನಾವು ತಿಳಿದಿರಬೇಕಲ್ಲವೇ? ನೆನಪಿರಲಿ: ಉಪಾಸನೆ ಇರುವುದು ಮನಸ್ಸಿನ ವಿಸ್ತಾರಕ್ಕೆ, ಚಿತ್ತದ ಶುದ್ಧಿಗೆ.

– ಜಿ. ಬಿ. ಹರೀಶ

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.