ಮಾಧ್ಯಮ ಸೀಮೇಲಿ ಕೊಲೆಗಿಲೆ ಇತ್ಯಾದಿ…


Team Udayavani, Sep 10, 2017, 7:35 AM IST

murder-journalist.jpg

ಕಳೆದ ವರ್ಷ ಮೇ ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಇಬ್ಬರು ಪತ್ರಕರ್ತರು ಕೊಲೆಗೀಡಾದರು. ಇಬ್ಬರನ್ನೂ ಗುಂಡಿಕ್ಕಿ ಕೊಲ್ಲಲಾಗಿತ್ತು. ಮೊದಲ ಕೊಲೆ ನಡೆದದ್ದು ಜಾರ್ಖಂಡ್‌ನ‌ ಛಾತ್ರಾ ಜಿಲ್ಲೆಯಲ್ಲಿ. ಕೊಲೆಗೀಡಾಗಿದ್ದು ತಾಝಾ ಟಿ.ವಿ.ಯ ವರದಿಗಾರ ಅಖೀಲೇಶ್‌ ಪ್ರತಾಪ್‌. ಎರಡನೆಯ ಕೊಲೆ ನಡೆದದ್ದು ಬಿಹಾರದಲ್ಲಿ. ಹತ್ಯೆಗೀಡಾಗಿದ್ದು ಹಿಂದುಸ್ತಾನ್‌ ಎಂಬ ಹಿಂದಿ ಪತ್ರಿಕೆಯ ವರದಿಗಾರ ರಾಜ್‌ದೇವ್‌ ರಂಜನ್‌.

ಅಖೀಲೇಶ್‌ ಅವರ ಕೊಲೆಯ ಹಿಂದೆ ಅವರ ವೃತ್ತಿಯಿತ್ತೋ ಇಲ್ಲವೋ ಎಂಬುದು ಇನ್ನೂ ಪರಿಹಾರವಾಗಿಲ್ಲ. ಆದರೆ, ರಾಜ್‌ದೇವ್‌ ಅವರ ಕೊಲೆಗೆ ಕಾರಣವಾಗಿದ್ದು ಅವರು ಮಾಡುತ್ತಿದ್ದ ವರದಿಗಳು. ಅವರು 2014ರಲ್ಲಿ ಕೊಲೆಗೀಡಾದ ಶ್ರೀಕಾಂತ್‌ ಭಾರ್ತಿ ಪ್ರಕರಣದ ಕುರಿತಂತೆ ಹಲವು ವರದಿಗಳನ್ನು ಮಾಡಿದ್ದರು. 

ಈ ಎರಡೂ ಪ್ರಕರಣಗಳ ನಂತರ ಭಾರತ ಪತ್ರಕರ್ತರಿಗೆ ಬಹಳ ಅಪಾಯಕಾರಿಯಾದ ತಾಣವಾಗಿಯೇ ಬದಲಾಗುತ್ತಿದೆಯೇ ಎಂಬ ಚರ್ಚೆ ಆರಂಭವಾಯಿತು. ರಿಪೋರ್ಟರ್ಸ್‌ ಸ್ಯಾನ್ಸ್‌ ಫ್ರಾಂಟಿಯರ್ಸ್‌ ವರದಿ ಹೇಳುವಂತೆ ಪತ್ರಕರ್ತರ ಮಟ್ಟಿಗೆ ಏಷ್ಯಾದಲ್ಲಿಯೇ ಭಾರತ ಹೆಚ್ಚು ಅಪಾಯಕಾರಿ. ಎಷ್ಟರಮಟ್ಟಿಗೆ ಎಂದರೆ ಯುದ್ಧ ಪೀಡಿತ ಅಫ್ಘಾನಿಸ್ಥಾನ ಮತ್ತು ಭಯೋತ್ಪಾದಕ ಸಂಘಟನೆಗಳಿರುವ ಪ್ರದೇಶಕ್ಕಿಂತ ಹೆಚ್ಚು ಅಪಾಯಕಾರಿಯಾದ ಸ್ಥಳ ಎಂದು ವರದಿ ಹೇಳಿತ್ತು.

ಮಾಧ್ಯಮ ಸ್ವಾತಂತ್ರ್ಯದ ಸೂಚಿಯಲ್ಲಿ ಕೂಡಾ ಭಾರತ ಸ್ಥಾನ 136ನೆಯದ್ದು. ಇದು ನೆರೆಯ ನೇಪಾಳ ಮತ್ತು ಅಫ್ಘಾನಿಸ್ತಾನಗಳಿಗಿಂತ ಕೆಳಗಿನದ್ದು ಎಂಬುದನ್ನು ನಾವು ಮರೆಯುವಂತಿಲ್ಲ.  1992ರಿಂದ 2015ರ ತನಕ 67 ಮಂದಿ ಪತ್ರಕರ್ತರನ್ನು ವೃತ್ತಿ ಸಂಬಂಧಿ ಕಾರಣಗಳಿಗಾಗಿ ಕೊಲೆ ಮಾಡಲಾಗಿದೆ ಎಂದು ಸೆಂಟರ್‌ ಫಾರ್‌ ಪೊ›ಟೆಕ್ಷನ್‌ ಆಫ್ ಜರ್ನಲಿಸ್ಟ್ ವರದಿ ಹೇಳುತ್ತದೆ. 

ಭಾರತದಲ್ಲಿ ಕೊಲೆಯಾಗಿರುವ ಪತ್ರಕರ್ತರಲ್ಲಿ ಹೆಚ್ಚಿನವರು ಭಾರತೀಯ ಭಾಷೆಗಳ ಮಾಧ್ಯಮಗಳಲ್ಲಿ ದುಡಿಯುತ್ತಿರುವವರು. ಹೆಚ್ಚಿನ ಕೊಲೆಗಳು ಕಾಶ್ಮೀರವೂ ಸೇರಿದಂತೆ ಉತ್ತರಭಾರತದಲ್ಲಿ ಹೆಚ್ಚು. ದಕ್ಷಿಣಕ್ಕೆ ಬಂದರೆ ಆಂಧ್ರಪ್ರದೇಶ ಹೆಚ್ಚು ಸಾವುಗಳನ್ನು ಕಂಡಿದೆ. ತಮಿಳು ನಾಡಿಗೆ ನಂತರದ ಸ್ಥಾನ. ಗೌರಿ ಲಂಕೇಶ್‌ ಅವರ ಕೊಲೆಯೊಂದಿಗೆ ಕರ್ನಾಟಕವೂ ಈ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದೆ.

ಸೆಂಟರ್‌ ಫಾರ್‌ ಪೊ›ಟೆಕ್ಷನ್‌ ಆಫ್ ಜರ್ನಲಿಸ್ಟ್‌ ಮತ್ತು ರಿಪೋರ್ಟರ್ಸ್‌ ಸ್ಯಾನ್ಸ್‌ ಫ್ರಾಂಟಿಯರ್ಸ್‌ನಂಥ ಸಂಸ್ಥೆಗಳು ಭಾರತವನ್ನು ಯುದ್ಧ ಪೀಡಿತ ಪ್ರದೇಶಗಳಿಗಿಂತ ಅಪಾಯಕಾರಿಯೆಂದು ಏಕೆ ಪರಿಗಣಿಸುತ್ತಿವೆ? ಇದಕ್ಕೆ ಬಹುಮುಖ್ಯ ಕಾರಣ ಸೈದ್ಧಾಂತಿಕ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳು ಹಿಂಸಾತ್ಮಕ ಸ್ವರೂಪ ಪಡೆಯುತ್ತಿರುವುದು. ಭಿನ್ನ ನಿಲುವುಗಳನ್ನು ಇಟ್ಟುಕೊಂಡವರಿಗೆ ದೇಶದಲ್ಲಿ ಬದುಕಲು ಅವಕಾಶವೇ ಇಲ್ಲ ಎಂಬ ಬಗೆಯಲ್ಲಿ ವಾದಿಸುವ ಸಂಘಟನೆಗಳು ಹೆಚ್ಚು ಬಲಪಡೆದುಕೊಳ್ಳುತ್ತಿರುವುದು!

ಅಮೆರಿಕದಂತೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಕಾನೂನುಗಳಿಲ್ಲ. ಪತ್ರಕರ್ತರು ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಪರಿಧಿಯÇÉೇ ಕಾರ್ಯನಿರ್ವಹಿಸುತ್ತಾರೆ. ಅಂದರೆ ಸಾಮಾನ್ಯನಿಗಿಂತ ಹೆಚ್ಚಿನ ಯಾವ ರೀತಿಯ ರಕ್ಷಣೆಯೂ ಪತ್ರಕರ್ತನಿಗಿಲ್ಲ ಎಂದರ್ಥ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಅನೇಕ ಹೊಸ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ. ಕೊಲೆ ಈ ಮಾರ್ಗಗಳಲ್ಲಿ ಒಂದು ಮಾತ್ರ.

ಭಾರೀ ಮೊತ್ತದ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆಗಳನ್ನು ಹೂಡುವುದು. ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ಪತ್ರಕರ್ತರನ್ನು ಸಿಲುಕಿಸುವುದು ಇತ್ಯಾದಿಗಳು ಭಾರತದಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿದೆ. ಹತ್ಯೆ ಕೂಡಾ ಇದೇ ಪಟ್ಟಿಯಲ್ಲಿರುವ ಮತ್ತೂಂದು ತಂತ್ರ. ಬೇರೆಲ್ಲ ತಂತ್ರಗಳು ವಿಫ‌ಲವಾದಾಗ ಪತ್ರಕರ್ತರನ್ನು ಹತ್ಯೆ ಮಾಡುವುದು ನಡೆಯುತ್ತದೆ. ಇದು ಕೇವಲ ಒಬ್ಬನ ಅಥವಾ ಒಬ್ಬಳ ಬಾಯಿ ಮುಚ್ಚಿಸುವ ತಂತ್ರವಷ್ಟೇ ಅಲ್ಲ. ಇದು ಇಡೀ ಪತ್ರಕರ್ತ ಸಮುದಾಯ ಒಂದು ಹೆದರಿಕೆಯಲ್ಲಿ ಬದುಕುವಂತೆ ಮಾಡುವ ತಂತ್ರ.

– ಈಶಾ

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.