ಮೇಲುಕೋಟೆಯಲ್ಲಿ ವೈರಮುಡಿ
Team Udayavani, Apr 2, 2017, 3:50 AM IST
ಮಂಡ್ಯಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿ ಸುಪ್ರಸಿದ್ಧ ಎಪ್ರಿಲ್ 5, ಬುಧವಾರದಂದು ವೈರಮುಡಿ ಕಿರೀಟಧಾರಣ ಉತ್ಸವ. ಒಂದು ರಾತ್ರಿ ಮಾತ್ರ ನಡೆಯುವ ಈ ಮಹೋತ್ಸವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ.
ವೈರಮುಡಿ ಜಾತ್ರೆಯ ನಂಟು ಪುರಾಣಗಳ ಪ್ರಕಾರ ತ್ರೇತಾಯುಗದಿಂದಲೇ ಆರಂಭವಾಗುತ್ತದೆ. ಅದು ಅತ್ಯಂತ ಪವಿತ್ರದಿನವಾದ ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭ ದಿನ, ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಗೊತ್ತುಮಾಡಿದ ಕ್ಷಣ. ನಿರೀಕ್ಷಿತ ಸಂಭ್ರಮ ನಡೆಯಲಿಲ್ಲ. ಇದಕ್ಕಾಗಿ ಕಾದಿದ್ದ ರಾಮನ ಸಹೋದರ ಲಕ್ಷ್ಮಣನಿಗೆ ತುಂಬಾ ನಿರಾಸೆಯಾಯಿತು. ಸ್ವಾಮಿಯ ಸೇವೆಮಾಡಲು ಆದಿಶೇಷನೇ ತ್ರೇತಾಯುಗದಲ್ಲಿ ಸಹೋದರ ಲಕ್ಷ್ಮಣನಾಗಿ, ದ್ವಾಪರಯುಗದಲ್ಲಿ ಬಲಭದ್ರನಾಗಿ ಅವತರಿಸಿದ್ದ. ಶ್ರೀವೈಷ್ಣವನ ವಿಶ್ವಾಸದ ಪ್ರಕಾರ ಆದಿಶೇಷನ ಮುಂದಿನ ಅವತಾರ ಕಲಿಯುಗದ ಶ್ರೀರಾಮಾನುಜರು.
ಶ್ರೀರಾಮಚಂದ್ರನ ಆರಾಧ್ಯದೈವನಾದ ಮೇಲುಕೋಟೆಯ ಚೆಲುವರಾಯನಿಗೆ ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ನಿಗದಿಯಾದ ಪಾಲ್ಗುಣ ಮಾಸದ ಪುಷ್ಯನಕ್ಷತ್ರದಂದೇ ವೈರಮುಡಿ ಕಿರೀಟ ಧರಿಸಿ ಅಲಂಕರಿಸುವ ಮೂಲಕ ಶ್ರೀರಾಮಾನುಜರು ತಮ್ಮ ಮನೋಭಿಲಾಷೆ ಈಡೇರಿಸಿಕೊಂಡು ಸಂಭ್ರಮಿಸಿದರೆಂದು ಹೇಳಲಾಗುತ್ತದೆ.
ದಕ್ಷಿಣ ಬದರೀಕಾಶ್ರಮವೂ ಆಗಿರುವ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಒಟ್ಟು 10 ದಿನಗಳ ಕಾಲ ನಡೆಯುವ ಭವ್ಯ ಜಾತ್ರಾಮಹೋತ್ಸವ. ಇದರಲ್ಲಿ ಜಾತ್ರೆಯ 4ನೆಯ ರಾತ್ರಿ ಸ್ವಾಮಿಗೆ ವೈರಮುಡಿ ಕಿರೀಟ ಧಾರಣಮಹೋತ್ಸವ ನಡೆದರೆ 7ನೆಯ ದಿನ ಮಹಾರಥೋತ್ಸವ ನಡೆಯುತ್ತದೆ. ಶ್ರೀಚೆಲುವ ನಾರಾಯಣ ಸ್ವಾಮಿ ವೈರಮುಡಿ ಉತ್ಸವದ ದಿನ ಆಕಾಶದಲ್ಲಿ ಗರುಡಾರೂಢನಾಗಿ ತೇಲಾಡುತ್ತ ಭಕ್ತರಿಗೆ ದರ್ಶನ ನೀಡುತ್ತಾನೆ ಎಂಬ ಪ್ರತೀತಿ ಇದೆ. ಕಾಲಕ್ರಮೇಣ ಈ ಉತ್ಸವ ನಿಂತುಹೋಗಿದ್ದು, ಇದನ್ನು ಮತ್ತೆ ಆರಂಭಿಸಿದವರು ಶ್ರೀರಾಮಾನುಜರು. ಅವರು ಇಲ್ಲಿನ ದೇಗುಲಗಳನ್ನು ಜೀರ್ಣೋದ್ಧಾರಗೊಳಿಸಿದರು. ಮೈಸೂರಿನರಸರು ಈ ಕ್ಷೇತ್ರಕ್ಕೆ ಕೊಡುಗೆಗಳನ್ನಿತ್ತಿದ್ದಾರೆ.
ವೈರಮುಡಿ ಕಿರೀಟ
ವೈರಮುಡಿ ಕಿರೀಟ ಸಾಕ್ಷಾತ್ ಭಗವಂತನ ಕಿರೀಟವೆಂದೇ ನಂಬಲಾಗಿದೆ. ಮಹಾವಿಷ್ಣು ವೈಕುಂಠದಲ್ಲಿ ಯೋಗನಿದ್ರೆಯಲ್ಲಿದ್ದ ಸಂದರ್ಭದಲ್ಲಿ ರಾಕ್ಷಸ ವಿರೋಚನ ಅವನ ಕಿರೀಟವನ್ನು ಕದ್ದೊಯ್ದಿದ್ದ. ನಾರಾಯಣನ ವಾಹನ ಗರುಡ ರಾಕ್ಷಸನೊಡನೆ ಹೋರಾಡಿ ಮರಳಿ ತಂದು ಶ್ರೀಚೆಲುವರಾಯನಿಗೆ ಸಮರ್ಪಿಸಿದ್ದಾನೆ ಎಂಬುದು ಪುರಾಣ ನೀಡುವ ವಿವರಣೆ.
ಜಾತ್ರಾ ಅವಧಿಯಲ್ಲಿ ಚೆಲುವರಾಯನನ್ನು ಅಲಂಕರಿಸುವ ಮತ್ತೂಂದು ಕಿರೀಟ ರಾಜಮುಡಿ. ಇದನ್ನು ಮೈಸೂರು ಅರಸರಾದ ರಾಜ ಒಡೆಯರ್ ದೇಗುಲಕ್ಕೆ ಸಮರ್ಪಿಸಿ¨ªಾರೆ. ಈ ಕಿರೀಟಗಳೊಂದಿಗೆ ಶಂಖ, ಚಕ್ರ, ಗದಾ, ಪದ್ಮ ಸೇರಿದಂತೆ 16 ವಜ್ರಖಚಿತ ಆಭರಣಗಳನ್ನೂ ನೀಡಿ¨ªಾರೆ. ಇವು ಹತ್ತೂ ದಿನಗಳ ಕಾಲ ಸ್ವಾಮಿಯನ್ನು ಅಲಂಕರಿಸಿರುತ್ತವೆ. ಇವುಗಳೊಂದಿಗೆ ಅಪೂರ್ವ ಮುತ್ತು ಮುಡಿಕಿರೀಟ ಹಾಗೂ ಮುತ್ತಿನಹಾರಗಳು ಸ್ವಾಮಿಯ ಚೆಲುವನ್ನು ಇಮ್ಮಡಿಗೊಳಿಸುತ್ತವೆ.
ಮೇಲುಕೋಟೆ ಜಾತ್ರೆಗ ಬಂದವರು ಇಲ್ಲಿನ ಇತರ ಸ್ಥಳಗಳನ್ನೂ ಸಂದರ್ಶಿಸಬಹುದಾಗಿದೆ. ಶ್ರೀಚೆಲುವನಾರಾಯಣಸ್ವಾಮಿ ದೇವಸ್ಥಾನ, ಶ್ರೀಯೋಗಾನರಸಿಂಹಸ್ವಾಮಿಬೆಟ್ಟ, ಕ್ಷೇತ್ರದೇವತೆ ಶ್ರೀಬದರೀನಾರಾಯಣಸ್ವಾಮಿ ದೇವಸ್ಥಾನ, ರಾಯಗೋಪುರ, ಪಂಚಕಲ್ಯಾಣಿ ಭುವನೇಶ್ವರಿ ಮಂಟಪ, ಏಕಶಿಲಾಗಣಪ, ಸತ್ಯನಾರಾಯಣ ಸನ್ನಿಧಿ, ಅಕ್ಕತಂಗಿಕೊಳ, ಧನುಷೊRàಟಿ, ಸಂಸ್ಕƒತ ಸಂಶೋಧನಾ ಸಂಸ್ಥೆ, ವರಕವಿ.ಡಾ.ಪು.ತಿ.ನರಸಿಂಹಾಚಾರ್ ಅವರ ಮನೆ, ತೊಟ್ಟಿಲಮಡು, ಗುಹಾಂತರ ದೇಗುಲ ಇವು ಮೇಲುಕೋಟೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
ವೈರಮುಡಿ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಮಂಡ್ಯ, ಮೈಸೂರು, ಬೆಂಗಳೂರು,ಹಾಸನ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ನಗರಗಳಿಂದ ವಿಶೇಷ ಬಸ್‌ಸೌಕರ್ಯವಿದೆ. ಇಲ್ಲಿನ ಎಸ್.ಇ.ಟಿ ಪಾಲಿಟೆಕ್ನಿಕ್, ಆದಿಚುಂಚನಗಿರಿ ಮಠ, ಚಿನ್ನಜೀಯರ್ ಮಠಗಳಲ್ಲಿ ಭಕ್ತರಿಗೆ ವಿವಿದ ರಾಮಾನುಜಂ ಕೂಟಂಗಳಲ್ಲಿ ಅನ್ನದಾನದ ವ್ಯವಸ್ಥೆ ಇದೆ. ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ, ದೇವಾಲಯ ಕಲ್ಯಾಣಿ ಬೆಟ್ಟ ಹಾಗೂ ವಿವಿಧ ಮಂದಿರಗಳಿಗೆ ವಿಶೇಷ ದೀಪಾಲಂಕಾರ, ಉತ್ಸವದ ವೇಳೆಯಲ್ಲಿ ನಿರಂತರ ವಿದ್ಯುತ್ ಸರಭರಾಜು, ಸುಸಜ್ಜಿತ ವೈದ್ಯಕೀಯ ಸೇವೆ, ಹೆಚ್ಚಿನ ಪೊಲೀಸ್ ಭದ್ರತೆ, ಕುಡಿಯುವ ಶುದ್ಧ ನೀರಿನ ಪೂರೈಕೆ ಹಾಗೂ ನಿರಂತರ ಸ್ವತ್ಛತಾ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಮಂಡ್ಯ ಜಿಲ್ಲಾಡಳಿತ ಕಲ್ಪಿಸುತ್ತಿದೆ.
ಸೌಮ್ಯಾ ಸಂತಾನಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.