ಮೆಸೇಜ್‌


Team Udayavani, Jun 16, 2019, 5:00 AM IST

z-8

ನಿತಿನ್‌, ಶ್ವೇತಾಳ ದೂರದ ಸಂಬಂಧಿ. ಮದುವೆ ಸಮಾರಂಭದಲ್ಲೊಮ್ಮೆ ಸಿಕ್ಕಿದಾಗ ಹೀಗೆಯೇ ಮಾತಾಡುತ್ತ ಶ್ವೇತಾಳ ಮೊಬೈಲ್‌ ನಂಬರ್‌ ಕೇಳಿ ಪಡೆದಿದ್ದ. ಆ ಬಳಿಕ ಪ್ರತಿನಿತ್ಯ ಅವಳಿಗೆ ವಾಟ್ಸಾಪ್‌ ಮೆಸೇಜ್‌ ಕಳಿಸುತ್ತಿದ್ದ. ಸಣ್ಣ ಪುಟ್ಟ ಮೆಸೇಜ್‌, ಅರ್ಥಗರ್ಭಿತವಾದ ಪದಗಳು. ಅದಕ್ಕೆ ಒಪ್ಪುವ ಹಿನ್ನೆಲೆ, ಬಣ್ಣ-ಬಣ್ಣದ ಆಕರ್ಷಕ ಚಿತ್ರ, ವಿಭಿನ್ನ ವಿನ್ಯಾಸ. ಮೆಸೇಜ್‌ ಯಾರನ್ನೂ ಓದಿಸುವಂತಿತ್ತು. ಚಿಂತನೆಗೆ ಎಡೆ ಮಾಡಿ ಕೊಡುವಂಥ ಪದ ಪುಂಜಗಳು. ಜೀವನದ ವಿಕಾಸಕ್ಕೆ ಬೇಕಾಗುವ‌ ಜ್ಞಾನ ಮುತ್ತುಗಳು. ಮೆಸೇಜ್‌ ಓದುತ್ತಿದ್ದಂತೆ ಬದುಕಿಗೆ ಒಂದು ರೀತಿಯ ಉತ್ತೇಜನ ಮತ್ತು ಪ್ರೋತ್ಸಾಹ ಸಿಗುತ್ತಿತ್ತು. ಬೇಸರದ ಮನಸ್ಸಿಗೆ ಧೈರ್ಯ ಮತ್ತು ಶಕ್ತಿ ತುಂಬುವಂತಿತ್ತು. ಜೀವಂತಿಕೆ ತುಂಬುವ ಅಂತಹ ಮೆಸೇಜ್‌ ಶ್ವೇತಾಳಿಗೆ ಮೆಚ್ಚುಗೆಯಾಯಿತು. ಪ್ರತಿಯಾಗಿ ಅವಳೂ ಮೆಸೇಜ್‌ ಕಳಿಸುತ್ತಿದ್ದಳು. ಹೀಗೆಯೇ ಇವರ ಮೆಸೇಜ್‌ ಸಂವಹನದ ಪ್ರಕ್ರಿಯೆ ನಿರಂತರವಾಗಿ ಸಾಗಿತ್ತು.

ಒಂದು ದಿನ ಶ್ವೇತಾ ತನ್ನ ಮಗನನ್ನು ಶಾಲೆಗೆ ಬಿಡಲು ಹೋಗಿದ್ದಾಗ, ಅದೇ ಶಾಲೆಗೆ ತನ್ನ ಮಗುವನ್ನು ಬಿಡಲು ಬರುತ್ತಿದ್ದ ರಮ್ಯಾ ಫೋನ್‌ ನಲ್ಲಿ ಬಿಸಿಬಿಸಿಯಾಗಿ ಮಾತನಾಡುತ್ತಿದ್ದುದು ಕೇಳಿಸಿತು. ಅವಳ ಮಾತಿನ ಧಾಟಿಯಲ್ಲಿ ಏನೋ ವಿಲಕ್ಷಣ ಸಂಗತಿ ನಡೆದಿರುವುದು ತಿಳಿಯಿತು. ಶ್ವೇತಾ ಮೆಲ್ಲನೆ, “”ಏನಾಯೆ¤ ರಮ್ಯಾ, ಎಲ್ಲಾ ಸುಗಮ ತಾನೆ” ಎಂದಾಗ, “”ಆಗುವುದೇನು, ನಾನು ಸಹಾಯ ಮಾಡಲು ಹೋಗಿ ದೊಡ್ಡ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡೆ. ಇದೆಲ್ಲಾ ಯಾರಿಗೆ ಬೇಕಿತ್ತು. 15 ದಿನದ ಹಿಂದೆ, ದಾರಿಯಲ್ಲಿ ಒಂದು ಪರ್ಸ್‌ ಸಿಕ್ಕಿತ್ತು. ತೆರೆದು ನೋಡಿದಾಗ ಅದರಲ್ಲಿ ಕ್ರೆಡಿಟ್‌ ಕಾರ್ಡ್‌, 500 ರೂಪಾಯಿಯ ಎರಡು ನೋಟ್‌ ಮತ್ತು ಇನ್ನಿತರ ದಾಖಲೆ ಪತ್ರಗಳಿದ್ದವು. ಕಳೆದುಕೊಂಡವನಿಗೆ ಹಿಂತಿರುಗಿಸುವ ಎಂದು ಅದರಲ್ಲಿದ್ದ ಮೊಬೈಲ್‌ ನಂಬರಿಗೆ ಫೋನ್‌ ಮಾಡಿ ಕರೆಸಿದೆ. ಹದಿಹರೆಯದ ಗಂಡಸು, ಕಾಣಲು ಸೌಮ್ಯನಂತಿದ್ದ. ಪರ್ಸ್‌ ಪಡೆದ ಮೇಲೆ ಬಹಳ ಖುಷಿ ಪಟ್ಟಿದ್ದ. ಈಗಿನ ಕಾಲದಲ್ಲಿ ನಿಮ್ಮಂಥ‌ವರು ಸಿಗುವುದು ಬಹಳ ಅಪರೂಪ, ದೇವರು ನಿಮಗೆ ಒಳ್ಳೆಯದು ಮಾಡಲೆಂದು ಹೊಗಳಿದ. ಇದೆಲ್ಲಾ ಮಾನವ ಸಹಜವಾಗಿ ಮಾಡುವಂತಹ ಕೆಲಸ, ಇದರಲ್ಲೇನು ವಿಶೇಷತೆ ಏನಿಲ್ಲ ಎಂದು ಮುಗುಳ್ಕಕ್ಕು ಬೀಳ್ಕೊಟ್ಟಿದ್ದೆ. ಆಶ್ಚರ್ಯ ಎಂದರೆ ಮರುದಿನ ಅವನಿಂದ ಗುಡ್‌ ಮಾರ್ನಿಂಗ್‌ ವಾಟ್ಸಾಪ್‌ ಮೆಸೇಜ್‌ ಬಂತು. ಮೇಲಾಗಿ, ನೀವು ಹೇಗಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು, ಹೀಗೆ ಅದು-ಇದು ಎಂದು ನನ್ನ ವೈಯಕ್ತಿಕ ವಿಷಯದ ಬಗ್ಗೆಯೂ ಕೇಳತೊಡಗಿದ. ಇವನ ಈ ವರ್ತನೆ ನನಗೆ ಹಿಡಿಸಲಿಲ್ಲ. ಇವನು ಸಂಬಂಧಿಕನೂ ಅಲ್ಲ, ಪರಿಚಯಸ್ಥನೂ ಅಲ್ಲ, ಮತ್ತೆ ಇದೆಲ್ಲಾ ಇವನಿಗೇಕೆ ಅಧಿಕಪ್ರಸಂಗ ಎಂದು ಸುಮ್ಮನಾಗಿದ್ದೆ. ಮತ್ತೆ ಅವನಿಂದ ಫೋನ್‌ ಕರೆ ಬಂದಾಗ ನನಗೆ ಕಿರಿಕಿರಿಯಾಯ್ತು, ಅಲ್ಲದೆ ಸಿಟ್ಟೂ ಬಂತು. ಇವನಿಗೆ ನನ್ನ ಮೌನದ ಮಿತಿಯನ್ನು ಪರೀಕ್ಷಿಸಲು ಬಿಡಬಾರದು, ಹೀಗೆ ಮುಂದುವರಿದರೆ ಜೀವನದಲ್ಲಿ ಅಶಾಂತಿ ಹುಟ್ಟಬಹುದೆಂದು, ಇನ್ನು ಮುಂದೆ ಈ ರೀತಿ ಮೆಸೇಜ್‌, ಫೋನ್‌ ಮಾಡಿ ಕಿರುಕುಳ ನೀಡಿದರೆ ಕಂಬಿ ಎಣಿಸ ಬೇಕಾಗುತ್ತದೆ ಎಂದು ಗಟ್ಟಿಯಾಗಿ ಗರ್ಜಿಸಿದಾಗಲೇ ಫೋನ್‌ ಕೆಳಗಿಟ್ಟಿದ್ದ. ಈ ಗಂಡಸರೇ ಹೀಗೆ, ಬೆರಳು ಕೊಟ್ಟರೆ ಕೈ ಹಿಡಿಯುತ್ತಾರೆ ಎಂದು ಸಿಟ್ಟಿನಲ್ಲಿಯೇ ಬಡಬಡಿಸಿದಳು.

ಈ ಘಟನೆ ಶ್ವೇತಾಳ ಮನದಲ್ಲಿ ಯಾಕೋ ಏನೋ ಒಂದು ರೀತಿಯ ಅಳುಕು ಮೂಡಿಸಿತು. ಬೇಸರ ಕಳೆಯಲೆಂದು ನ್ಯೂಸ್‌ ಚಾನೆಲ್‌ ಆನ್‌ ಮಾಡಿದಳು. ಅದರಲ್ಲೂ ಸಂಬಂಧಿಕನೊಬ್ಬ ತನ್ನದೇ ಪರಿವಾರದ ಹುಡುಗಿಯ ಮುಗ್ಧತೆಯನ್ನು ದುರುಪಯೋಗಪಡಿಸಿ ಅತ್ಯಾಚಾರಗೈಯ್ದ ಹೃದಯ ವಿದ್ರಾವಕ ಘಟನೆ ಬ್ರೇಕಿಂಗ್‌ ನ್ಯೂಸ್‌ ಆಗಿ ಪ್ರಸಾರವಾಗುತ್ತಿತ್ತು. ಇದನ್ನು ಕೇಳಲು ಶ್ವೇತಾಳಲ್ಲಿ ಯಾವ ವ್ಯವಧಾನವೂ ಇರಲಿಲ್ಲ. ಟಿ. ವಿ. ಆಫ್ ಮಾಡಿ, ಅಲ್ಲೇ ಇದ್ದ ವಾರ್ತಾ ಪತ್ರಿಕೆಯ ಮೇಲೆ ಕಣ್ಣಾಡಿಸಿದಳು. ಅದರಲ್ಲೂ ಇದೇ ರೀತಿಯ ಭೀಕರ ಕತೆ, ತಮ್ಮವರಿಂದಲೇ ಅನಾಹುತಕ್ಕೊಳಗಾಗಿದ್ದ ಹೆಣ್ಣು ಮಗಳೊಬ್ಬಳ ದುರಂತಮಯ ಕತೆ ಶ್ವೇತಾಳ ಕಣ್ಣು ಸೆಳೆಯಿತು. ಅವಳಿಗೆ ಪತ್ರಿಕೆಯೂ ಭಾರವಾದಂತೆ ಅನಿಸಿತು, ಅದನ್ನು ಓದಲಾಗಲಿಲ್ಲ. ತಮ್ಮವರಿಂದಲೇ ತುಳಿತಕ್ಕೊಳಗಾದ ಹೆಣ್ಣಿನ ಒಂದಿಲ್ಲೊಂದು ರೀತಿಯ ಬವಣೆಯ ದಾರುಣ ಕತೆಯನ್ನು ಬೆಳಗಿನಿಂದ ಕೇಳಿ, ಕೇಳಿ ಶ್ವೇತಾಳ ಮನಸ್ಸು ಭಾರವಾಗಿತ್ತು.

ಮನೆಯಲ್ಲಿ ಸಾಕಷ್ಟು ಕೆಲಸ ಬಾಕಿ ಇದ್ದರೂ ಕೈ ಹಾಕಲು ಮನಸ್ಸು ಬರಲಿಲ್ಲ. ಗಂಟಲು ಒಣಗಿದಂತಾಗಿತ್ತು. ಒಂದು ಲೋಟ ನೀರು ಕುಡಿದು ಬಂದವಳೇ, ಇನ್ನೇನು, ಸೋಫಾದ ಮೇಲೆ ಎರಗುವೆನೆಂದು ಕೊಂಡಾಗಲೇ, ಮನೆಯ ಕರೆಗಂಟೆ ಬಾರಿಸಿತು. ಬಾಗಿಲು ತೆರೆದರೆ ನೆರೆಮನೆಯ ಕಮಲಮ್ಮ ಕಣ್ಣರಳಿಸಿ ಒಳ ಬಂದವಳೇ, “”ಶ್ವೇತಾ, ನಿನಗೆ ಗೊತ್ತೇನು, ಎದುರು ಬಿಲ್ಡಿಂಗಿನ ಕಂಟ್ರಾಕ್ಟರ್‌ ದಿಲೀಪ್‌ ಇದ್ದಾನಲ್ಲ, ಅವನ ಮಗಳಿಗೆ ಈಗಷ್ಟೇ ಮದುವೆ ಆದದ್ದಲ್ಲ. ಈಗ ಅವಳ ಫೇಸ್‌ಬುಕ್‌ ಲವ್ವಂತೆ. ಫೇಸ್‌ಬುಕ್‌ನ‌ಲ್ಲಿ ಯಾರೋ ಅಪರಿಚಿತ ವ್ಯಕ್ತಿಯ ಗೆಳೆತನವಾಗಿ ಪ್ರೇಮವಂತೆ, ಈಗ ಇಬ್ಬರೂ ಮದುವೆ ಆಗುವವರಂತೆ. ಆ ವ್ಯಕ್ತಿ ಇವಳನ್ನು ಯಾವ ರೀತಿ ತಲೆ ಕೆಡಿಸಿದ್ದಾನೆಂದು ಗೊತ್ತಿಲ್ಲ. ವಿವಾಹಿತೆಯಾದ ಇವಳಿಗೂ ಎಂಥ ಹುಚ್ಚೊ ! ಇವನ್ನೆಲ್ಲ ನೋಡಲು ದೇವರು ನಮ್ಮನ್ನೇಕೆ ಇಟ್ಟಿ¨ªಾರೆಂದು ಅವಳ ತಂದೆ-ತಾಯಿ ರೋದಿಸುವುದನ್ನು ನೋಡಿದರೆ ಯಾರ ಹೃದಯವೂ ಕರಗಬೇಕು. ಈ ಸಾಮಾಜಿಕ ಜಾಲತಾಣಗಳ ಮೂಲಕ ಆಗುವ ರಾದ್ಧಾಂತ ನೋಡಿದರೆ ತಲೆ ಸುತ್ತ ತೊಡಗುತ್ತದೆ. ಕಮಲಮ್ಮ ಬಡಬಡಿಸುತ್ತಲೇ ಇದ್ದರು. ಈ ಘಟನೆ ಕೇಳಿ, ಶ್ವೇತಾ ಮತ್ತಷ್ಟು ಅಧೀರಳಾದಳು. ಏನೂ ಉತ್ತರಿಸಲಾಗಲಿಲ್ಲ. ತಲೆಯೂ ಸ್ವಲ್ಪ ಸಿಡಿಯತೊಡಗಿತು. ಬೇಗ ಬೇಗನೇ, ಕಮಲಮ್ಮನನ್ನು ಹೋಗಗೊಟ್ಟು ಏಕಾಂಗಿಯಾಗಿ ಕೂತಳು.

ಏಕೋ ಏನೋ ಮನಸ್ಸು ನಿತಿನ್‌ ಕಳಿಸುವ ವಾಟ್ಸಾಪ್‌ ಮೆಸೇಜ್‌ ಬಗ್ಗೆ ವಾಲಿತು. ಇದುವರೆಗೂ ಮನಸ್ಸು ಅದನ್ನು ಪ್ರಶ್ನಿಸಿರಲಿಲ್ಲ. ಆದರೆ, ಇಂದು ಬೇಡ ಎಂದರೂ ಮನಸ್ಸು ಭಾರಿ ಭಾರಿ ಚಿಂತಿಸುವಂತೆ ಮಾಡಿತು. ಹೌದಲ್ಲಾ, ನಿತಿನ್‌ ಪ್ರತಿನಿತ್ಯ ವಾಟ್ಸಾಪ್‌ ಮೆಸೇಜ್‌ ಕಳಿಸುವ ಉದ್ದೇಶವಾದರೂ ಏನು? ಕಾರಣ ಇಲ್ಲದೆ ಯಾರಾದರೂ ಮೆಸೇಜ್‌ ಕಳಿಸುತ್ತಾರಾ? ಹಾಗಂತ ಅವನು ಕಳಿಸುತ್ತಿದ್ದ ಮೆಸೇಜ್‌ ಬಗ್ಗೆ ಖಂಡಿತ ಕೆಟ್ಟ ಅಭಿಪ್ರಾಯ ಇರಲಿಲ್ಲ, ಅದಕ್ಕಾಗಿ ತಾನೇ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ಸ… ಬರೆಯುತ್ತಿದ್ದುದು. ಬಹುಶಃ ಇದು ಅವನನ್ನು ಪ್ರತಿನಿತ್ಯ ಮೆಸೇಜ್‌ ಕಳಿಸಲು ಪ್ರೇರೇಪಿಸಿರಬೇಕು. ಮನಸ್ಸಿಗೆ ಮುದ ನೀಡುತ್ತಿದ್ದ, ಬದುಕನ್ನು ಪ್ರೇರೇಪಿಸುತ್ತಿದ್ದ ಅಂತಹ ಮೆಸೇಜ್‌ಗಳಿಗಾಗಿ ತಾನೂ ಹಾತೊರೆಯುತ್ತಿದ್ದುದು ಸತ್ಯ ತಾನೆ!

ಅಲ್ಲದೆ, ಅವನಿಂದ ಒಂದು ದಿನ ಫೋನ್‌ ಕೂಡ ಬಂದಿತ್ತಲ್ಲ ! ಕಾಲ್‌ ರಿಸೀವ್‌ ಮಾಡಿ, “ಹಲೋ’ ಎಂದಿದ್ದಾಗ, “”ನೀವಾ, ಕ್ಷಮಿಸಿ, ನನ್ನ ಸಹೋದ್ಯೋಗಿ ಶ್ವೇತಾಳಿಗೆ ಫೋನ್‌ ಮಾಡಬೇಕಾಗಿತ್ತು, ಕೈ ತಪ್ಪಿ ನಿಮಗೆ ಕನೆಕ್ಟ್ ಆಯ್ತು”. ನನಗನಿಸಿತು, ಅವನು ಅರ್ಜಂಟ್‌ ಕೆಲಸದಲ್ಲಿರಬೇಕು, ಈಗ ಮಾತಾಡುವುದು ಬೇಡ ಎಂದು ಮಾತನ್ನು ನಿಲ್ಲಿಸಿದೆ. ಅವನು, “”ತೊಂದರೆ ಇಲ್ಲ, ಮಾತಾಡಿ. ಈ ಮೂಲಕವಾದರೂ ನಮಗೆ ಮಾತಾಡಲು ಅವಕಾಶ ಸಿಕ್ಕಿತ್ತಲ್ಲ” ಎಂದು ಅವನೇ ಮಾತು ಮುಂದುವರಿಸಿದ. ಬಹಳ ಸ್ವಾರಸ್ಯಕರ ರೀತಿಯಲ್ಲಿ ಮಾತಾಡುತ್ತಿದ್ದ. ತಣ್ತೀಜ್ಞಾನಿಯಂತೆ ಮಾತಾಡಿದ ರೀತಿ ಯಾರಿಗೂ ಮೆಚ್ಚುಗೆ ಆಗಬೇಕು. ಜೊತೆಗೆ ಮಗು, ಗಂಡ ಎಲ್ಲರನ್ನೂ ವಿಚಾರಿಸಿ ಆತ್ಮೀಯ ಸದಸ್ಯನಂತೆ ಕಾಳಜಿ ತೋರಿಸಿದ್ದ.

ಇದಲ್ಲದೆ, ಒಂದು ದಿನ ಶಾಲೆಯಿಂದ ಮಗುವನ್ನು ಕರೆತರುತ್ತಿ¨ªಾಗ ದಾರಿಯ ಮಧ್ಯೆ ಸಿಕ್ಕಿದ್ದ. “”ನೀವೇನು ಇಲ್ಲಿ ಅನಿರೀಕ್ಷಿತವಾಗಿ?” ಎಂದು ಕೇಳಿದಾಗ, “”ಇಲ್ಲಿ ಸಮೀಪದಲ್ಲಿಯೇ ಸ್ವಲ್ಪ ಕೆಲಸ ಇತ್ತು” ಎಂದು ಕೂಡಲೇ ಹೊರಟು ಹೋಗಿದ್ದ.

ದಿನವಿಡೀ ಅನುಭವಿಸಿದ ಒಂದಿಲ್ಲೊಂದು ಸಂಗತಿ ಶ್ವೇತಾಳ ಮನಸ್ಸನ್ನು ಕಳವಳಗೊಳಿಸಿತು. ಶ್ವೇತಾಳ ಒಂದು ಮನಸ್ಸು, “ಇಲ್ಲ ನಿತಿನ್‌ ತುಂಬಾ ಒಳ್ಳೆಯವರು, ಅವರು ಆ ರೀತಿಯ ವ್ಯಕ್ತಿ ಖಂಡಿತ ಆಗಿರಲಿಕ್ಕಿಲ್ಲ’ ಎಂದರೆ ಇನ್ನೊಂದು ಮನಸ್ಸು ಅದಕ್ಕೆ ವ್ಯತಿರಿಕ್ತವಾಗಿ ನುಡಿಯಿತು. ಈ ಗಂಡಸರನ್ನು ನಂಬಲು ಸಾಧ್ಯ ಇಲ್ಲ. ಮೊದಲು ನಯವಾಗಿ ಮಾತಾಡಿ ಹೆಣ್ಣಿನ ಸಖ್ಯ ಬೆಳೆಸುತ್ತಾರೆ. ಮತ್ತೆ, ಮೆಲ್ಲ, ಮೆಲ್ಲನೆ ಹೆಣ್ಣಿನ ಮನಸ್ಸನ್ನು ತನ್ನತ್ತ ಸೆಳೆದು ಸ್ವಾಧೀನ ಪಡಿಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಾರೆ. ತಾನು ಅವನ ಮೆಸೇಜ್‌ನಿಂದ ಆಕರ್ಷಿತಳಾದದ್ದನ್ನು ನೋಡಿದರೆ ಅವಳಿಗದು ಸರಿ ಎಂದೆನಿಸುತ್ತದೆ. ಶ್ವೇತಾಳಿಗೆ ಇದನ್ನು ಎಣಿಸಿಯೇ ಭಯವಾಗತೊಡಗಿತು. ಇನ್ನು ಯಾರೊಡನೆಯೂ ಸಲುಗೆಯಿಂದ ನಡೆದುಕೊಳ್ಳಬಾರದಪ್ಪಾ. ಈ ಸಲುಗೆಯೇ ಮುಂದೆ ಮುಳ್ಳಾಗಿ ಕಾಡಿ ಬದುಕನ್ನು ಅಸಹ್ಯಗೊಳಿಸಬಹುದು. ಗಂಡನೂ ವಿದೇಶದಲ್ಲಿದ್ದಾರೆ, ಅವರಿಗಿದು ತಿಳಿದರೆ ಅಪಾರ್ಥ ಮಾಡಿಕೊಂಡಾರು!

ತಾನಾದರೋ ನಿತಿನ್‌ನ ಮೆಸೇಜ್‌ನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿದ್ದೆ. ಆದರೆ, ಅವನು ಅದನ್ನು ಯಾವ ರೀತಿಯಲ್ಲಿ ಅರ್ಥೈಸಿದ್ದಾನೆಂದು ಗೊತ್ತಿಲ್ಲ. ಜೀವನದ ಯಾತ್ರೆಯಲ್ಲಿ ಬಹಳಷ್ಟು ಜನರ ಸಂಪರ್ಕವಾಗುತ್ತದೆ. ಹಾಗಂತ ಎಲ್ಲರ ಜತೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸಾಧ್ಯ ಇದ್ದರೂ ಕಾರಣ ಬೇಕಲ್ಲ. ಮೊತ್ತಮೊದಲಾಗಿ ಹೆಣ್ಣು ಅಪರಿಚಿತ ವ್ಯಕ್ತಿಗಿಂತ ತನ್ನವರಿಂದಲೇ ಹೆಚ್ಚಾಗಿ ಶೋಷಿತಳಾಗಿದ್ದಾಳೆ. ಏನಾದರಾಗಲಿ, ತನಗೆ ಈ ರಗಳೆ ಬೇಡ. ನಿತಿನ್‌ ಒಳ್ಳೆಯವನಿರಲಿ, ಇಲ್ಲದೇ ಇರಲಿ, ತನಗೇನಾಗಬೇಕು. ಇನ್ನು ಅವನ ವಾಟ್ಸಾಪ್‌ ಮೆಸೇಜಿನಿಂದ ದೂರ ಉಳಿಯುವುದೇ ಒಳಿತೆಂದು ತೀರ್ಮಾನಿಸಿದಳು. ಮೊದಲು, ತಾನು ಕಳಿಸುತ್ತಿದ್ದ ಮೆಸೇಜ್‌ನ ಆವರ್ತನವನ್ನು ನಿಧಾನವಾಗಿ ಕಡಿಮೆ ಮಾಡಿದಳು. ಬಳಿಕ ಕಮೆಂಟ್ಸ್‌ ಮತ್ತು ಲೈಕ್‌ ಮಾಡುವುದನ್ನು ನಿಲ್ಲಿಸಿದಳು. ಆ ಮೇಲೆ ಡಿಪಿಯಲ್ಲಿ ಎಂದೂ ಹಾಕದ ತನ್ನ ಮತ್ತು ಗಂಡನ ಪ್ರೀತಿಯ ವಿವಿಧ ಭಂಗಿಗಳ ಫೋಟೋವನ್ನು ಹಾಕತೊಡಗಿದಳು. ಜತೆಗೆ ತನ್ನ ಸ್ಟೇಟಸ್‌ನಲ್ಲಿ I love my husband, my love my business, that’s no one’s business….ಮತ್ತೂಂದು ಸಲ ನಿತಿನ್‌ನ ನಂಬರನ್ನು ಬ್ಲಾಕ್‌ ಮಾಡಿದಳು. ಹೆಸರು, ವಿವರಗಳನ್ನೆಲ್ಲ ಡಿಲೀಟ್‌ ಮಾಡಿದಳು. ಒಂದು ಸಲ ನಿಟ್ಟುಸಿರುಬಿಟ್ಟಳು.

ಆರು ತಿಂಗಳು ಕಳೆಯಿತು. ಶ್ವೇತಾ ಮಾಲ್‌ನಿಂದ ಸಾಮಾನು ಖರೀದಿಸಿ, ಇನ್ನೇನು ಹೊರಡಲು ಸ್ಕೂಟಿ ಸ್ಟಾರ್ಟ್‌ ಮಾಡ ಬೇಕೆನ್ನುವಷ್ಟರಲ್ಲಿಯೇ, ಎದುರಿನಿಂದ ನಿತಿನ್‌ ಬೈಕ್‌ನಲ್ಲಿ ಬರುತ್ತಿರುವುದು ಕಾಣಿಸಿತು. ಶ್ವೇತಾಳಿಗೆ ಮುಜುಗರವಾಯಿತು. ಇವನು ನೋಡಿದರೆ ಖಂಡಿತ ಮಾತಾಡಿಸುತ್ತಾನೆ, ಮತ್ತೆ ಮೆಸೇಜ್‌ ಬಗ್ಗೆಯೂ ವಿಚಾರಿಸ ಬಹುದೆಂದು ಕಲ್ಪಿಸಿದಳು. ಅವನನ್ನು ಎದುರಿಸಲಾಗದೆ, ಅವನ ಕಣ್ತಪ್ಪಿಸಲು ಪ್ರಯತ್ನ ಪಟ್ಟಳು. ಮನಸ್ಸಿನಲ್ಲಿ ಏನನ್ನೋ ತುಂಬಿಸಿ ಕೊಂಡು ಅಲ್ಲಿಲ್ಲಿ ನೋಡುತ್ತ, ಸ್ಕೂಟಿಯನ್ನು ತುಸು ಜೋರಾಗಿಯೇ ಓಡಿಸಿದಳು. ಮಳೆಗಾಲದ ಸಮಯ, ರಸ್ತೆಯಲ್ಲಿ ನೀರೂ ನಿಂತಿತ್ತು. ಸ್ಕೂಟಿ ಸ್ಕಿಡ್‌ ಆಯಿತು. ಸದ್ದು ಕೇಳಿ ಓಡಿಬಂದ ನಿತಿನ್‌. ತನ್ನೆದುರೇ ಮೂಛೆì ಬೀಳುತ್ತಿರುವವಳನ್ನು ಎತ್ತಿಕೊಂಡು ಟ್ಯಾಕ್ಸಿಯಲ್ಲಿ ಅವಳನ್ನು ಮಲಗಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ. ತನ್ನೆದುರು ಮಸುಕಾಗುತ್ತಿರುವ ನಿತಿನ್‌ನ ಮುಖವನ್ನು ನೋಡಿದ್ದೊಂದು ಶ್ವೇತಾಳಿಗೆ ಗೊತ್ತು. ಮತ್ತೆ ಯಾವುದರ ಅರಿವೂ ಇಲ್ಲ.

ಗುಣಮುಖಳಾಗಿ, ಎರಡು ದಿನದಲ್ಲೇ ಡಿಸ್‌ಚಾರ್ಜ್‌ ಆಗಿ ಮನೆಗೆ ಹೋದ ಶ್ವೇತಾಳಿಗೆ ತನ್ನನ್ನು ಈ ಅವಘಡದಿಂದ ಪಾರು ಮಾಡಿದ್ದು ನಿತಿನ್‌ ಎಂಬುದು ಜ್ಞಾಪಕಕ್ಕೆ ಬಂತು. ಯಾಕೋ ಫೋನ್‌ ಮಾಡಿ ಅವನಿಗೆ ಧನ್ಯವಾದ ಹೇಳ್ಳೋಣ ಎಂದು ಮೊಬೈಲ್‌ ಕೈಗೆತ್ತಿಕೊಂಡರೆ ಈ ಮೊದಲೇ ಅವನ ನಂಬರನ್ನು ಡಿಲೀಟ್‌ ಮಾಡಿಯಾಗಿತ್ತು !|

ಇಷ್ಟಕ್ಕೂ ನಿತಿನ್‌ ಹಾಗೆ ವರ್ತಿಸಿದ್ದಾದರೂ ಯಾಕೆ? ಅವನು ಮೆಸೇಜ್‌ ಮಾಡುತ್ತಿದ್ದುದು ತಪ್ಪೆ? ಇಷ್ಟಕ್ಕೂ ತಪ್ಪು ಎಂದು ಹೇಳುವಂಥಾದ್ದನ್ನು ಏನು ಮಾಡಿದ್ದಾನೆ?  ಮತ್ತೆ ಅದೇ ಮಾಲ್‌ನ ಮುಂದೆ ನಿಂತುಕೊಳ್ಳುವಾಗಲೆಲ್ಲ ಹಾದುಹೋಗುವ ಬೈಕ್‌ ನಿತಿನ್‌ನದ್ದಿರಬಹುದೇ ಎಂದು ಅವಳ ಮನಸ್ಸು ತವಕಿಸುತ್ತದೆ. ಯಾರಲ್ಲಾದರೂ ಕೇಳ್ಳೋಣವೆಂದರೆ, ಹೇಗೆ ಕೇಳುವುದು!

ಮಾಲ್‌ನ ಮುಂದಿನ ರಸ್ತೆಯಲ್ಲಿ ಎಷ್ಟೊಂದು ವಾಹನಗಳು ತಮ್ಮ ಪಾಡಿಗೆ ತಾವು ಹಾದುಹೋಗುತ್ತಿದ್ದವು!

ಮೋಹನ ಕುಂದರ್‌

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.