ಮಿಡ್ಲ್ ಏಜ್‌ ಕ್ರೈಸಿಸ್‌


Team Udayavani, May 14, 2017, 3:45 AM IST

midle-age.jpg

ಬೆಳ್ಳಗಾಗಲು ಆರಂಭಿಸಿದ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳುವಾಗ ಕಳವಳಗೊಳ್ಳುತ್ತ¤, ಹೊಸ ಕನ್ನಡಕದೊಂದಿಗೆ ತನ್ನ ಕಣ್ಣ ಮಿಂಚೇ ಮಂಕಾಗುತ್ತಿದೆಯೇನೋ ಎಂದು ಆತಂಕಪಡುತ್ತ, ಬಳ್ಳಿಯಂತಿದ್ದ ನಡುವಿನಲ್ಲಿ ಮೂಡುತ್ತಿರುವ ಮಡಿಕೆಗಳಿಗೆ ಚಡಪಡಿಸುತ್ತ ಇರುವಾಗ ಬಾಳೆಂಬ ನದಿಯ ನಡು ನೀರಿನಲ್ಲಿ ನಿಂತ ಅನುಭವ.

ಕಳೆದು ಹೋದ ಕಾಲಕ್ಕೆ ಪರಿತಪಿಸಿ ಫ‌ಲವಿಲ್ಲ, ಬಿದ್ದ ಹಣ್ಣೆಂದಿಗೂ ಮರಳಿ ಮರಕಿಲ್ಲ’ – ಬಲ್ಲವರ ಉಕ್ತಿ. ಹೌದು. ಆಡಿ ಹೋದ ಮಾತು, ಕಳೆದು ಹೋದ ಕನಸು, ಬೊಗಸೆಯಿಂದ ಸೋರಿ ಹೋದ ಕಾಲ  ಯಾವುದೂ ಮರಳಿ ಬರುವುದಿಲ್ಲ. ಅಸಂಖ್ಯ ಬಿಕ್ಕುಗಳ, ನಿಟ್ಟುಸಿರುಗಳ, ಅಂತೆಯೇ “ತಿಟ್ಟತ್ತಿ ತಿರುಗಿ ನೋಡುವ’ ಕಾಲವೇ ನಡು  ವಯಸ್ಸು.  ಅತ್ತ ಟೀನೇಜಿನ  ಕನಸು, ಧಾವಂತಗಳಿಲ್ಲದ, ಇತ್ತ ಮುಪ್ಪಿನ ನಿಶ್ಶಕ್ತತೆ ತೀರಾ ಸನಿಹವಿರದ, ಆತಂಕ, ಆವೇಗ, ಹಸಿಬಿಸಿ ಭ್ರಮೆಗಳು ಕರಗುವ ಕಾಲ. ಮಾವಿನ ಕಾಯಿ ತನ್ನ ಹುಳಿಯನ್ನು ಕಳೆದುಕೊಂಡು ಹಣ್ಣಾಗುವಂತೆ, ಜೀವನದ  ಬಗ್ಗೆ ಒಂದು ಪಕ್ವ ನಿಲುವು,  ಅಂತೆಯೇ  ಹಣ್ಣಾಗಿ ಉದುರುವ ಬಗ್ಗೆ ಭಯ, ಬದುಕಿನ ಬಗ್ಗೆ ತೀವ್ರ ವ್ಯಾಮೋಹ ಮುಪ್ಪುರಿಗೊಂಡ ಕಾಲ ಇದು. ತಮಾಷೆ ಎಂದರೆ ಬಾಲ್ಯ, ಯೌವನ, ಮಧ್ಯ ವಯಸ್ಸು, ಮುಪ್ಪು… ಎಲ್ಲವನ್ನೂ ಜೀವನವೆಂಬ ಪ್ರವಾಹದಲ್ಲಿ ಸಂಕ್ರಮಣ ಕಾಲ ಎಂದೇ ತಿಳಿದಿರುತ್ತೇವೆ.  ಬಹುಶಃ ಪ್ರವಾಹದಲ್ಲಿ ನದಿಗುಂಟ ಸಾಗಿ ವನ್‌ ಫ‚ೈನ್‌ ಡೇ ನದಿಯ ನಡು ನೀರಿನಲ್ಲಿ ನಿಂತಿದ್ದೇವೆ ಎಂಬ ಅರಿವೇ  ವಿವೇಕ ಇರಬೇಕು. 

ಹರೆಯದ ಹುಡುಗಿ ತನ್ನ ಮುಖದೆÇÉೇಳುವ ಮೊಡವೆಗಳೇ ದೊಡ್ಡ ಸಂಕಷ್ಟ ಎಂದುಕೊಂಡರೆ, ನಡುವಯಸ್ಸಿನ ಮಹಿಳೆ ತನ್ನ ಮುಖದಲ್ಲಿ ಕಂಡೂ ಕಾಣದಂತೆ ಕಾಣಿಸಿಕೊಳ್ಳುವ ಸುಕ್ಕುಗಳಿಗೆ ಬೆಚ್ಚುತ್ತ, ಬೆಳ್ಳಗಾಗಲು ಆರಂಭಿಸಿದ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳುವಾಗೆಲ್ಲ ಕಳವಳಗೊಳ್ಳುತ್ತ,  ಹೊಸ ಕನ್ನಡಕದೊಂದಿಗೆ  ತನ್ನ ಕಣ್ಣ ಮಿಂಚೇ ಮಂಕಾಗುತ್ತಿದೆಯೇನೋ ಎಂದು ಆತಂಕಪಡುತ್ತ, ಬಳ್ಳಿಯಂತಿದ್ದ ನಡುವಿನಲ್ಲಿ ಮೂಡುತ್ತಿರುವ ಮಡಿಕೆಗಳಿಗೆ ಚಡಪಡಿಸುತ್ತ, ಬಾಳೆಂಬ ನದಿಯ ನಡುನೀರಿನಲ್ಲಿ ನಿಂತ ಅನುಭವ. ಹುಟ್ಟು-ಸಾವುಗಳ ನಡುವಣ ಭ್ರಮೆಯ ಸ್ಥಿತಿ ಎಂದರೆ ಇದೇ ಇರಬೇಕು. ವಿಪರ್ಯಾಸ ಎಂದರೆ ಯೌವನ ತುಂಬಿ ತುಳುಕುತ್ತಿರುವಾಗ ತಮಗಿರುವ ಆರೋಗ್ಯ,   ಕೆಚ್ಚು, ಶಕ್ತಿ ಸಾಮರ್ಥಯಗಳ ಬಗ್ಗೆ ಹೆಚ್ಚಿನವರಿಗೆ ಅರಿವೇ ಇರುವುದಿಲ್ಲ.   ನಡುವಯಸ್ಸಿನಲ್ಲಿ ಅನಿರೀಕ್ಷಿತವಾಗಿ ತಮ್ಮ ಅಂದಚಂದದ ಬಗ್ಗೆ, ಅದನ್ನು ಕಳೆದುಕೊಳ್ಳಬಹುದಾದ ಅನಿವಾರ್ಯತೆಯ ಬಗ್ಗೆ ಒಂದು ಶಾಕ್‌ನೊಂದಿಗೆ ಬದುಕು ಅರಿವು ಮೂಡಿಸುತ್ತದೆ. ಹೀಗಾಗಿಯೇ  ಅವರು ಇದುವರೆಗೆ  ಗಮನಿಸದ  ಸುಖ-ಸಂತೋಷ ಸುಭದ್ರತೆಗಳನ್ನು ಮೊಗೆ ಮೊಗೆದು ಕುಡಿಯಲಾರಂಭಿಸುತ್ತಾರೆಂದೇನೋ ಎಂದು ಒಂದು  ಅನಿಸಿಕೆ. 

ನಮ್ಮ ಮನೆ ಪಕ್ಕದ ಟೈಲರ್‌ ಕೂಡ ಹಾಗೆಯೇ ಅನ್ನುತ್ತಿರುತ್ತಾರೆ. ಟೀನೇಜರುಗಳಿಗಿಂತ ಮಧ್ಯ ವಯಸ್ಸಿನವರಿಗೆಯೇ ಫ್ಯಾಷನ್‌ ಬಗ್ಗೆ ಜಾಸ್ತಿ ಕಳಕಳಿ ಎಂದು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ  ಸಕ್ರಿಯರಾಗಿರುವ, ಕತೆ, ಕವನ, ಅಡುಗೆ ರೆಸಿಪಿ ಪೋಸ್ಟ್‌ ಮಾಡುವ ವಿರಾಮ, ಅಭಿರುಚಿ ಇರುವ ಬಳಗಗಳು ಹಲವು. ಟೀನೇಜರುಗಳ ಸಮಸ್ಯೆಯಂತೆಯೇ ನಡು ಹರಯದವರ ಸಮಸ್ಯೆಯೂ  ಗಮನಾರ್ಹವೇ. ಸಮಸ್ಯೆಗಳೇ ಬಹುಶಃ ಬಾಳಿಗೊಂದು ಉದ್ದೇಶ ನೀಡುತ್ತವೇನೋ. ಒಂದು  ಕಾಲದಲ್ಲಿ ನಲ್ವತ್ತು ಎಂದರೆ ಹೆಚ್ಚು ಕಡಿಮೆ ವಾನಪ್ರಸ್ಥಾಶ್ರಮದ ಸಮಯ. ಇನ್ನು ನಮ್ಮ ರಾಜರಂತೂ ನಲ್ವತ್ತರ ಆಸುಪಾಸಿಗೆ ಯಾವುದೋ ಯುದ್ಧದಲ್ಲಿ ವೀರ ಮರಣವನ್ನಪ್ಪಿ ಅಮರರಾಗುತ್ತಿದ್ದರು. ಬಹುಶಃ ಜೀವನದ ಕ್ಷಣಿಕತೆಯ ಕಾರಣದಿಂದಲೇ ಅವರು ಮೋಜು-ಮಸ್ತಿ, ರಾಣೀವಾಸದ ವೈಭವ ಹೀಗೆಲ್ಲ ಇರುತ್ತಿದ್ದಿರಬೇಕು. ಬಾಲ್ಯವಿವಾಹವಾಗುತ್ತಿದ್ದ ಕಾರಣ ಜನ ಸಾಮಾನ್ಯರೂ ಜೀವನದಲ್ಲಿ ಮಾಗುತ್ತಿದ್ದಿರಬೇಕು. ಈಗ ಹಾಗಿಲ್ಲ. ಬದುಕು ಬದಲಾಗಿದೆ, ದೇಶ ಬದಲಾಗಿದೆ, ಜೀವನದ ಸ್ಥಾಯಿಭಾವದ ಪರಿಕಲ್ಪನೆಯೇ ನಿರಂತರ ಫ‚‌Éಕ್ಸ್‌ನಲ್ಲಿದೆ. ಈ ಗ್ಲೋಬಲೈಸ್ಡ್ ಯುಗದ ಹೊಸ ಸವಾಲುಗಳು, ಆವಿಷ್ಕಾರಗಳು ಮಾಸ್‌ ಮೀಡಿಯಾದ ಪ್ರಭಾವದಿಂದ ನಮ್ಮ ಜನಮಾನಸವನ್ನು ಇನ್ನಿಲ್ಲದಂತೆ  ಗೊಂದಲದಲ್ಲೂ, ಸಂಭ್ರಮದಲ್ಲೂ  ಇರಿಸಿ ಕಸಿವಿಸಿಗೊಳಿಸುತ್ತಿವೆ.  ನೈತಿಕತೆ-ಅನೈತಿಕತೆ, ಮಾನವೀಯತೆ-ದಬ್ಟಾಳಿಕೆ, ಪ್ರೀತಿ-ದ್ವೇಷ, ಅವಲಂಬನೆ-ಸ್ವಾಯತ್ತತೆ, ಮೈ-ಮನಸ್ಸುಗಳ ಅಂತರ್‌ಸಂಬಂಧಗಳು, ವ್ಯಾಖ್ಯಾನಗಳೇ ಬದಲಾಗುತ್ತಿರುವ ಈ ಸಂದರ್ಭದಲ್ಲಿ, ಜಗತ್ತು ಒಂದು  ಪುಟ್ಟ  ಗ್ಲೋಬಲ್‌ಲೈಜ್‌ ಆಗುತ್ತಿರುವಾಗಿನ ಜೀವನಮೌಲ್ಯಗಳ  ಪಲ್ಲಟಗಳಲ್ಲಿ, ನಡುವಯಸ್ಸಿನ ಮಹಿಳೆಯರು ಏಕಕಾಲದಲ್ಲಿ ದಿಗ್ಭ್ರಮೆಯಿಂದಲೂ, ಆಸೆಯಿಂದಲೂ, ಆಶ್ಚರ್ಯದಿಂದಲೂ ಹೊಸ ಅಲೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿ¨ªಾರೆ. ಆಧುನಿಕ ಭಾರತದ ಪಲ್ಲಟಗಳಿಗೆ ಸಾಕ್ಷಿಯಾಗಿ, ಈ ನವ್ಯೋತ್ತರ ಸಮಯದ ಹಲವು ಬಣ್ಣಗಳಿಗೆ ರೂಪಕವಾಗಿ ಅವರಿ¨ªಾರೆ.

ಬ್ರೆಜಿಲ್‌ನ ಮಳೆಕಾಡುಗಳಲ್ಲಿ ಚಿಟ್ಟೆ ರೆಕ್ಕೆ ಬಡಿದರೆ ಅಮೆರಿಕದಲ್ಲಿ ಮಳೆಯಾಗುತ್ತದಂತೆ. ಈ ರೀತಿಯ ಬಟರ್‌ ಫ್ಲೈಇಫೆ#ಕ್ಟ್ ನ ಹಾಗೆ ಬದುಕನ್ನು ಸುಧಾರಿಸುವ ಪ್ರತಿ ಪುಟ್ಟ ಪ್ರಯತ್ನವೂ ಶ್ಲಾಘನೀಯವೇ. ಈ ನಿಟ್ಟಿನಲ್ಲಿ ಒಂದು ನೋಟ. ಮಧ್ಯವಯಸ್ಸಿನ ಭಾರತೀಯ ಜನತೆಯ ಹವ್ಯಾಸಗಳೇನು? ಅವರು ತಮ್ಮ ಅಸುರಕ್ಷಿತತೆಯನ್ನು ಮೀರುವ ಮಾರ್ಗಗಳಾವುವು? ಹೀಗೆ. ಅಲ್ಲಿ ಸಂಭ್ರಮದ ಕ್ಷಣಗಳಿವೆ,  ಸಂಕಟದ ಸರಮಾಲೆಗಳೂ ಇವೆ. ನಡುವಯಸ್ಸಿನ ಖನ್ನತೆ, ಜೀವನದಲ್ಲಿ ತಾವೇನೂ ಸಾಧಿಸಲೇ ಇಲ್ಲವೇನೋ ಎನ್ನುವ ಖಾಲೀತನ, ತಮ್ಮ ತೀರ್ಮಾನಗಳಿಂದ ತಾವೇ ಮಾಡಿಕೊಂಡ ಎಡವಟ್ಟುಗಳನ್ನು ಸರಿಪಡಿಸಲಾರದ ವಾಸ್ತವ, ಸೋಲಿನಿಂದ ಪರಿತ್ಯಕ್ತವಾದ ಮನ… ಹೀಗೆ ನೋವಿನಿಂದ ನರಳುವವರು ಹಲವರಾದರೆ, ತಾವೇನೋ ಮಹತ್ತರ ಸಾಧನೆ ಮಾಡಿದವರಂತೆ ತಮ್ಮ ಮನೆ, ಮಕ್ಕಳು, ಬಂಗಾರ, ಕಾರು ಎಂದೆಲ್ಲ ಮಿತಿಯುಳ್ಳ ಪರಿಧಿಯನ್ನೇ ಭೌಮವೆಂದು ಸಂಭ್ರಮಿಸಿಕೊಳ್ಳುವವರು ಹಲವರು. ಬಹುಶಃ ತೃಪ್ತಿಯುಳ್ಳ ಬದುಕಿಗೆ ಇದು ಅವಶ್ಯವೇನೋ. ತಮ್ಮ ಜೀವನಾನುಭವಗಳಿಂದ ಕಲಿತುಕೊಂಡ ಪಾಠಗಳನ್ನು ಇತರರಿಗೆ, ಮುಖ್ಯವಾಗಿ ಎಳೆಯರಿಗೆ ಹೇಳಿಕೊಡುವ ಆತುರದಲ್ಲಿ ಅವರು ನಗೆಪಾಟಲಿಗೆ ಈಡಾಗುವುದೂ ಇದೆ. ಯಾಕೆಂದರೆ, ಎಳೆಯರಲ್ಲಿನ ಅಪಕ್ವತೆ, ಅವರಿಗಿರುವ ಟೆಕ್ನಾಲಜಿ ಜ್ಞಾನ ಹಳಬರಿಗೆ ಇಲ್ಲ. ಕುಸಿಯುತ್ತಿರುವ ಆರೋಗ್ಯ, ಹಣ ಇಲ್ಲದಿರುವಿಕೆ ಇವುಗಳಿಂದ ನಡುವಯಸ್ಸಿನವರ ಜೀವನ ಉತ್ಕರ್ಷದಿಂದ ಜಾರುಹಾದಿಗೆ ಕವಲೊಡೆಯುವುದು ಹೌದು. ಮಾರಣಾಂತಿಕ ರೋಗಗಳಾದ ಬಿ. ಪಿ., ಡಯಾಬಿಟೀಸ್‌, ಕ್ಯಾನ್ಸರ್‌ ಅÇÉೆÇÉೋ ಕದ ತಟ್ಟುತ್ತಿರುತ್ತವೆ.

ಜೀವನವಿಡೀ ಹೋರಾಡಿ ಸಂಪಾದಿಸಿದ ಸಾಮಾಜಿಕ ಸ್ಥಾನಮಾನಗಳು, ಭೂಮಿಕಾಣಿ, ಮನೆಮಠ ಮಕ್ಕಳು- ಎಂದೆಲ್ಲ  ಒಂದು ನಿಯಮಿತ ಜೀವನ ಶೈಲಿಗೆ ಒಗ್ಗಿ ಹೋದ ಜೀವನಕ್ಕೆ ನಿವೃತ್ತಿಯ ನಂತರದ ಅಚಾನಕ್ಕಾಗಿ ಸಿಕ್ಕಿದ ವಿರಾಮವನ್ನು ಬಳಸಿಕೊಳ್ಳುವುದೂ ಕಷ್ಟವೇ. ಅದೂ ಅಲ್ಲದೆ ಈಗೀಗ ದೊಡ್ಡ  ಕಾರ್ಪೊರೇಟ್‌ ಸಂಸ್ಥೆಗಳು ನಯವಾಗಿ ತಮ್ಮ ಕೆಲಸಗಾರರನ್ನು ಸ್ವಯಂನಿವೃತ್ತಿಯತ್ತ ತಳ್ಳುತ್ತಿರುತ್ತವೆ. ಹೀಗಾಗಿಯೇ ನಡುವಯಸ್ಸಿನ ಗೋಜಲುಗಳು ಹಲವು. ಇಳಿವಯಸ್ಸಿನಲ್ಲಿ ಕೂಡ ಪುನಃ ಸಂಪಾದಿಸಬೇಕಾದ ಅನಿವಾರ್ಯತೆಯೂ ಹಲವರಿಗಿರುತ್ತದೆ. ಹಾಗಿದ್ದರೂ ಒಂದು ಧನಾತ್ಮಕ ದೃಷ್ಟಿಕೋನಕ್ಕೆ,  ಒಗ್ಗೂಡಿದ ಮನಸ್ಸುಗಳಿಗೆ ಅಸಾಧ್ಯವಾದುದೇನೂ ಇಲ್ಲ.  

ಒಂದೇ ಅಭಿರುಚಿಯಿರುವ ಗುಂಪುಗಳು ತೀರ್ಥಯಾತ್ರೆ, ಟ್ರೆಕ್ಕಿಂಗ್‌ ಇತ್ಯಾದಿ ಹವ್ಯಾಸಗಳನ್ನು  ಬೆಳೆಸಿಕೊಳ್ಳಬಹುದು.  ಕೆಲಸದ ಒತ್ತಡದಲ್ಲಿ  ಹೋಗದೇ ಇದ್ದ ಪ್ರವಾಸಿ ತಾಣಗಳಿಗೆ, ತೀರ್ಥ ಕ್ಷೇತ್ರಗಳಿಗೆ ಹೋಗಿ ಬರಬಹುದು. ಮರೆತು ಹೋದ ಹವ್ಯಾಸಗಳು (ಬರವಣಿಗೆ, ಕಸೂತಿ, ನಾಟಕ ಇತ್ಯಾದಿ)  ಮರಳಿ ಕಲಿಯುವುದೋ, ಕಲಿಸುವುದೋ  ಹೀಗೆ ಸೃಜನಾತ್ಮಕವಾಗಿ ಸಮಯ ಹೊಂದಿಸಬಹುದು. ಉತ್ತಮ ಅಭಿರುಚಿಯ ಫಿಲ್ಮ್, ನಾಟಕ ಎಂದೆಲ್ಲ ಕಲಾ ಸಂವೇದನೆಯನ್ನು ಹೆಚ್ಚಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇದೊಂದು ಬದುಕಿನ ಸೆಕೆಂಡ್‌ ಇನ್ನಿಂಗ್ಸ್‌ ಎಂಬ ಧನಾತ್ಮಕ ಆಶಯದೊಂದಿಗೆ, ಗೆಲ್ಲುವ ಛಲದೊಂದಿಗೆ ತೊಡಗಿಸಿಕೊಂಡರೆ ನೇಮಿಚಂದ್ರರ ಕೃತಿಯೊಂದರ ಶೀರ್ಷಿಕೆಯಂತೆ ಬದುಕು ಬದಲಿಸಬಹುದು. 

– ಜಯಶ್ರೀ ಬಿ.

ಟಾಪ್ ನ್ಯೂಸ್

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BGV-CM

Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

1-iip

Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ

Madhugiri

Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ

HDK-DKS

Power Prayers: ಡಿಸಿಎಂ ಟೆಂಪಲ್‌ ರನ್‌ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.