ಮಹಾಸೀರಿಯಸ್‌ ನಗೆ ಬರಹಗಾರ ಎಂಎಸ್‌ಎನ್‌


Team Udayavani, Oct 20, 2019, 4:48 AM IST

c-8

ಮಾತು, ಬರಹಗಳ ಮೂಲಕ ಹಲವು ದಶಕಗಳಿಂದ ಕನ್ನಡ ಜನ ಮನ ಆವರಿಸಿರುವ ವಿನೋದ ಸಾಹಿತಿ ಎಂ. ಎಸ್‌. ನರಸಿಂಹಮೂರ್ತಿಯವರಿಗೆ ಈಗ ಇಪ್ಪತ್ತು… ಕ್ಷಮಿಸಿ ಎಪ್ಪತ್ತು!

ಇಂದು ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತಿಗಳು ಅಲ್ಪಸಂಖ್ಯಾಕರಾಗುತ್ತಿದ್ದಾರೆ. ಪ್ರಶಸ್ತಿ, ಗೌರವ ಪಡೆದುಕೊಳ್ಳುವ ವಿಷಯದಲ್ಲಿ ಅವರು ಅವಕಾಶ ವಂಚಿತರು ಮತ್ತು ತೀರಾ ಹಿಂದುಳಿದವರು. ಗಂಭೀರ ಲೇಖಕರು ಮತ್ತು ವಿಮರ್ಶಕರು ಹಾಸ್ಯಬರಹಗಾರರನ್ನು ಅಸ್ಪೃಶ್ಯರಂತೆ ದೂರವಿಡುವುದರಿಂದ ಅವರು ದಲಿತರೂ ಹೌದು! ಒಟ್ಟಿನಲ್ಲಿ ಹಾಸ್ಯ ಸಾಹಿತಿಗಳಿಗೆ ಅಹಿಂದ ವರ್ಗದಲ್ಲಿ ಸೇರುವ ಎಲ್ಲ ಅರ್ಹತೆಗಳೂ ಇವೆ ಅನ್ನಬಹುದು.

ಇದು ತಮಾಷೆಯಲ್ಲ. ಹಾಸ್ಯ ಸಾಹಿತಿಗಳು ಅಲ್ಪ ಸಂಖ್ಯಾಕರಾಗುತ್ತಿದ್ದಾರೆ ಎಂಬುದು ನಿಜಕ್ಕೂ ಗಂಭೀರವಾದ ಸಂಗತಿ. ವೇದಿಕೆಗಳಲ್ಲಿ, ಟಿವಿಯಲ್ಲಿ ಹಾಸ್ಯ ಭಾಷಣ ಮಾಡುವವರು ಸಾಕಷ್ಟು ಜನರಿದ್ದಾರೆ. ಆದರೆ, ಅವರಲ್ಲಿ ಬಹಳಷ್ಟು ಮಂದಿ ಪತ್ರಿಕೆಗಳಲ್ಲಿ ಬಂದ ನಗೆಹನಿಗಳು, ವಾಟ್ಸಾಪ್‌ನಲ್ಲಿ ಹರಿದಾಡುವ ಜೋಕುಗಳು, ಯಾರೋ ಬರೆದ ಹಾಸ್ಯ ಚುಟುಕುಗಳು ಮತ್ತು ಅಣಕವಾಡುಗಳನ್ನು ಎತ್ತಿಕೊಂಡು ಅವುಗಳಿಗೆ ಒಂದಿಷ್ಟು ಮಸಾಲೆ ಹಾಕಿ, ಒಗ್ಗರಣೆ ಕೊಟ್ಟು ತಮ್ಮದೆನ್ನುವಂತೆ ಕೇಳುಗರಿಗೆ ಉಣಬಡಿಸುತ್ತಾರೆ. ಅವರಿಗೆ ತಾವೇ ಹೊಸ ಹಾಸ್ಯ ಪ್ರಸಂಗಗಳನ್ನು, ನಗೆ ಕವಿತೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿಲ್ಲ.

ಹಾಸ್ಯ ಸಾಹಿತ್ಯರಚನೆ ಮತ್ತು ಹಾಸ್ಯ ಭಾಷಣ ಎರಡನ್ನೂ ನಿರಂತರವಾಗಿ ಮಾಡುತ್ತ ಬಂದಿರುವ ಅಪರೂಪದ ಸೃಜನಶೀಲ ನಗೆಗಾರ, ಎಂಎಸ್‌ಎನ್‌ ಎಂದೇ ಖ್ಯಾತರಾದ ಗೆಳೆಯ ಎಂ. ಎಸ್‌. ನರಸಿಂಹಮೂರ್ತಿ. ಪತ್ರಿಕೆಗಳಿಗೆ ನಗೆಬರಹ, ಓದುಗರ ಪ್ರಶ್ನೆಗಳಿಗೆ ಉತ್ತರ, ನಾಟಕ, ಹಾಸ್ಯಕಾದಂಬರಿ, ಜೀವನಚರಿತ್ರೆ ಎಂದು ನಿರಂತರವಾಗಿ ಬರೆಯುತ್ತಲೇ ಬಂದಿರುವ ಎಂಎಸ್‌ಎನ್‌ ದೃಶ್ಯಮಾಧ್ಯಮದಲ್ಲೂ ಯಶಸ್ವಿಯಾಗಿದ್ದಾರೆ. ಪಾಪ ಪಾಂಡು, ಸಿಲ್ಲಿಲಲ್ಲಿ, ಪಾರ್ವತಿ ಪರಮೇಶ್ವರ ಮುಂತಾದ ಹಾಸ್ಯ ಧಾರಾವಾಹಿಗಳಿಗೆ ಹಾಗೂ ಕೆಲವು ಸಿನಿಮಾಗಳಿಗೆ ಸಂಭಾಷಣೆ ಬರೆದು ಪ್ರಸಿದ್ಧರಾಗಿದ್ದಾರೆ. ಅವರು ಟಿವಿ ಧಾರಾವಾಹಿಗಳಿಗೆ ಬರೆದ ಕಂತುಗಳ ಸಂಖ್ಯೆ 10,000 ದಾಟಿದೆ. ಅದಕ್ಕೇ ಗೆಳೆಯ ಗುಂಡೂರಾವ್‌ ಪ್ರಕಾರ ಎಂಎಸ್‌ಎನ್‌ ಎಂದರೆ ಮೆಗಾ ಸೀರಿಯಲ್‌ ನರಸಿಂಹಮೂರ್ತಿ!

ನನ್ನ ಪ್ರಕಾರ ಎಂಎಸ್‌ಎನ್‌ ಅಂದರೆ ಮಹಾಸೀರಿಯಸ್‌ ನಗೆಬರಹಗಾರ ! ಹೌದು, ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದು ಕೊಂಡದ್ದರಿಂದಲೇ ಅವರಿಗೆ ವಿಪುಲವಾದ, ವೈವಿಧ್ಯಮಯವಾದ ಹಾಸ್ಯಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯವಾಗಿದೆ. ಕಳೆದ ಐದು ದಶಕಗಳಿಂದ ಹಾಸ್ಯದ ಬ್ಯಾಟು ಬೀಸುತ್ತ, ನಗುವಿನ ಬೌಂಡರಿ, ಸಿಕ್ಸರ್‌ ಬಾರಿಸುತ್ತ ಕನ್ನಡದ ವಿನೋದ ಸಾಹಿತ್ಯ ಆಲ್‌ಔಟ್‌ ಆಗದಂತೆ ಹೋರಾಡುತ್ತಿರುವ ಎಂಎಸ್‌ಎನ್‌ ಪುಸ್ತಕಗಳ ಸಂಖ್ಯೆಯಲ್ಲಿ ಅರ್ಧಶತಕದ ಗಡಿದಾಟಿ ಶತಕದತ್ತ ಸಾಗುತ್ತಿದ್ದಾರೆ.

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಎಂಎಸ್‌ಎನ್‌ ಮತ್ತು ನನ್ನದು ಮೂರು ದಶಕಗಳ ಗೆಳೆತನ. ನಮ್ಮ ಸ್ನೇಹಕ್ಕೆ ಕಾರಣ ನಾವಿಬ್ಬರೂ ಕರುಗಳು ಸಾರ್‌ ಕರುಗಳು. ನಗೆ ಲೇಖ-ಕರು ಮಾತ್ರವಲ್ಲ ನಿವೃತ್ತ ಬ್ಯಾಂ-ಕರುಗಳು! ಅವರು ಬೆಂಗಳೂರಿನ ಉತ್ತರದಲ್ಲಿರುವ ಮಲ್ಲೇಶ್ವರದಲ್ಲಿದ್ದಾರೆ. ನಾನು ದಕ್ಷಿಣದ ಅಂಜನಾಪುರದಲ್ಲಿದ್ದೇನೆ. ನಡುವೆ 40 ಕಿಮೀ ಅಂತರ. ಆದರೂ ವರಕವಿಗಳು ಬರೆದದ್ದನ್ನು ತಿರುಚಿ ಹೇಳುವುದಾದರೆ-

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಹಾಸ್ಯದ ಗಾಳಿಯು ಬೀಸುತಿದೆ
ಮೂರ್ತಿಯ ಗದ್ಯಕೆ ಡುಂಡಿಯ ಪದ್ಯವು
ಚುಂಬಿಸಿ ನಗೆಯನು ಸೂಸುತಿದೆ

ಹಾಸ್ಯೋತ್ಸವ, ನಗೆ ಹಬ್ಬಗಳ ಉಬ್ಬರದ ದಿನಗಳು ಆರಂಭವಾಗುವ ಮೊದಲೇ ಎಂಎಸ್‌ಎನ್‌ ಮತ್ತು ನಾನು ಅನೇಕ ಊರುಗಳಲ್ಲಿ ಜಂಟಿಯಾಗಿ ವಿನೋದ ಗೋಷ್ಠಿಗಳನ್ನು ನಡೆಸಿದ್ದೆವು. ದಕ್ಷಿಣ ಕ ನ್ನಡ ಜಿಲ್ಲೆಯ ಜಿಲ್ಲೆಯ ಹಲವು ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದೆವು. ಎಂಎಸ್‌ಎನ್‌ಅವರನ್ನು ನಾನು ಮೊದಲ ಬಾರಿ ನೋಡಿದಾಗ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ ಅನ್ನಿಸುತ್ತದೆ. ಅವರ ಜೀವನೋತ್ಸಾಹ ಮತ್ತು ಬರವಣಿಗೆಯ ಸತ್ವವನ್ನು ಗಮನಿಸಿದಾಗ ಎಂಎಸ್‌ಎನ್‌ಅವರಿಗೆ ಎಪ್ಪತ್ತಾಯಿತು ಅನ್ನಿಸುವುದಿಲ್ಲ.

ಎಂಎಸ್‌ಎನ್‌ಗೆ ಎಪ್ಪತ್ತೆ? ಇಲ್ಲ, ಇಲ್ಲ,ಇಪ್ಪತ್ತೆ ಒಪ್ಪುತ್ತೆ!
ಅವರಲ್ಲಿ ನಾನು ಮೆಚ್ಚಿದ ಮತ್ತು ಅನುಸರಿಸಲು ಯತ್ನಿಸುವ ಗುಣವೆಂದರೆ ತನ್ನನ್ನು ತಾನೇ ಹಾಸ್ಯ ಮಾಡಿಕೊಳ್ಳುವುದು. ಎಂಎಸ್‌ಎನ್‌ ಅವರ ಬಾಯಿಯಿಂದಲೇ ನಾನು ಕೇಳಿದ ಈ ಪ್ರಸಂಗವನ್ನು ಗಮನಿಸಿ. ಅವರು ಬ್ಯಾಂಕ್‌ ಮ್ಯಾನೇಜರ್‌ ಆಗಿ¨ªಾಗ ಎಮ್ಮೆ ಖರೀದಿಸಲು ಸಾಲ ಪಡೆದಿದ್ದ ಹೆಂಗಸೊಬ್ಬಳು ಹಲವು ವರ್ಷಗಳ ನಂತರ ಇವರನ್ನು ನೋಡಿದಾಗ ಗುರುತಿಸಿ ನಮಸ್ಕರಿಸುತ್ತಾಳೆ. ಚಕಿತರಾದ ಎಂಎಸ್‌ಎನ್‌, “”ಏನಮ್ಮಾ, ಇನ್ನೂ ನನ್ನನ್ನು ನೆನಪಿಟ್ಟುಕೊಂಡಿದ್ದೀಯಲ್ಲ. ಪರವಾಗಿಲ್ವೆ!” ಅನ್ನುತ್ತಾರೆ. ಆಗ ಆ ಹಳ್ಳಿ ಹೆಂಗಸು ಹೇಳಿದ್ದು, “”ಏನ್‌ ಬುದ್ಧಿ ಅಂಗಂತೀರಿ. ನೀವು ನನ್ನ ಪಾಲಿಗೆ ದ್ಯಾವ್ರಿದ್ದಾಂಗೆ. ನೀವು ಕೊಡಿಸಿದ ಎಮ್ಮೆ ದೆಸೆಯಿಂದ ಇವತ್ತು ನನ್ನ ಗುಡಿಸಲಲ್ಲಿ ದೀಪ ಉರೀತೈತೆ. ದಿನಾ ಬೆಳಿಗ್ಗೆ ಆ ಎಮ್ಮೆ ಮುಖ ನೋಡಾªಗೆಲ್ಲ ನಿಮ್ಮ ಮುಖಾನೆ ನೆಪ್ಪಾಯ್ತದೆ”

ನೋಟು ಅಪಮೌಲ್ಯದ ಸಂದರ್ಭದಲ್ಲಿ ಸಂಪಾದಕ ಮಿತ್ರರೊಬ್ಬರು ನನಗೆ ಫೋನ್‌ ಮಾಡಿ, “”ನೀವು ಬ್ಯಾಂಕ್‌ಉದ್ಯೋಗಿಯಾಗಿರುವ ಲೇಖಕರು. ಡಿಮೋನಿಟೈಸೇಷನ್‌ ಬಗ್ಗೆ ನಮ್ಮ ಪತ್ರಿಕೆಗೆ ನಾಳೆ ಸಂಜೆಯ ಒಳಗೆ ಒಂದು ಹಾಸ್ಯ ಲೇಖನ ಬರೆದುಕೊಡುತ್ತೀರಾ?” ಎಂದು ಕೇಳಿದರು. ಅವರು ಕೊಟ್ಟ ಕಾಲಾವಕಾಶ ತುಂಬಾ ಕಡಿಮೆ ಇದ್ದದ್ದರಿಂದ “ಆಗುವುದಿಲ್ಲ’ ಎಂದೆ. ಮರುದಿನ ಮುಂಜಾನೆ ಬೇಗ ಎಚ್ಚರವಾಗಿ ಆ ವಿಷಯದ ಬಗ್ಗೆ ಯೋಚಿಸುತ್ತ ಹಾಸಿಗೆಯಲ್ಲಿ ಉರುಳು ಸೇವೆ ಮಾಡತೊಡಗಿದಾಗ, “ಬರೆಯಬಹುದು’ ಅನ್ನಿಸಿತು. ಬೆಳಿಗ್ಗೆ ಹತ್ತುಗಂಟೆಯ ಹೊತ್ತಿಗೆ ಸಂಪಾದಕರಿಗೆ ಫೋನ್‌ ಮಾಡಿ, “ಲೇಖನ ಬರೆದುಕೊಡುತ್ತೇನೆ’ ಎಂದೆ. ಅವರು, “”ಬೇಡಾ ಸಾರ್‌. ನೀವು ಆಗಲ್ಲ ಅಂದ ಕೂಡಲೆ ನರಸಿಂಹಮೂರ್ತಿಯವರನ್ನು ಕೇಳಿದೆ. ಅವರು ನಿನ್ನೆ ರಾತ್ರಿಯೇ ಮೈಲ್‌ ಮಾಡಿ¨ªಾರೆ” ಅಂದಾಗ ನನಗೆ ಅಚ್ಚರಿಯಾಯಿತು. ಇದು ಎಂಎಸ್‌ಎನ್‌ಅವರ ಸಾಮರ್ಥ್ಯ. ಅವಸರದಲ್ಲಿ ಸರಸರನೆ ಬರೆದರೂ ಅದು ಸ್ವಾರಸ್ಯಕರವಾಗಿರುತ್ತದೆ.

ಅದಕ್ಕೆ ಹೇಳಿದ್ದು ಎಂಎಸ್‌ಎನ್‌ ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು. ಪ್ರತಿಯೊಂದು ಭಾಷಣಕ್ಕೂ ಒಂದಷ್ಟು ಹೋಮ್‌ವರ್ಕ್‌ ಮಾಡಿಕೊಂಡೇ ಹೋಗುತ್ತಾರೆ. ಬರೆಯುವ ಒತ್ತಡ ವಿಪರೀತವಾಗಿದ್ದರೂ ಗೆಳೆಯರು ಕಾರ್ಯಕ್ರಮಕ್ಕೆ ಕರೆದರೆ ಇಲ್ಲ ಅನ್ನುವುದಿಲ್ಲ. ಅವರು ಯಾವುದೇ ಊರಿಗೆ ಭಾಷಣ ಮಾಡಲು ಹೋದರೂ ಸಮಯವನ್ನು ಹಾಳು ಮಾಡುವುದಿಲ್ಲ. ಸಭಾಂಗಣಕ್ಕೆ ಕರೆದೊಯ್ಯಲು ಸಂಘಟಕರು ಬರುವವರೆಗೂ ಸೀರಿಯಲ್‌ಗೆ ಸಂಭಾಷಣೆ ಬರೆದು ಮೈಲ್‌ ಮಾಡುತ್ತ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಕಾರ್ಪೊರೇಶನ್‌ ಬ್ಯಾಂಕಿನ ಸಿರಿಗಂಧದ ಕಾರ್ಯಕ್ರಮಕ್ಕೆ ಕರೆದಾಗಲೆಲ್ಲ ಬಂದು ನಗದು ಖ್ಯಾತಿಯ ದಕ್ಷಿಣ ಕ ನ್ನಡ ಜಿಲ್ಲೆಯ ಬ್ಯಾಂಕಿನವರೂ ನಗುವಂತೆ ಮಾಡಿದವರು ಎಂಎಸ್‌ಎನ್‌. ಮೂರು ವರ್ಷಗಳ ಹಿಂದೆ ನಾನು ಮಂಗಳೂರಿನಲ್ಲಿ ಬ್ಯಾಂಕಿನಿಂದ ನಿವೃತ್ತನಾದ ಸಂದರ್ಭದಲ್ಲಿ ಅಭಿನಂದನ ಭಾಷಣ ಮಾಡಲು ಎಂಎಸ್‌ಎನ್‌ ಬೆಂಗಳೂರಿ ನಿಂದ ಸ್ವಸಂತೋಷ ದಿಂದಬಂದಿದ್ದನ್ನು ನಾನು ಎಂದಿಗೂ ಮರೆಯಲಾರೆ.

ನಾನು ಮತ್ತು ಎಂಎಸ್‌ಎನ್‌ ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮಗಳು ಲೆಕ್ಕವಿಲ್ಲದಷ್ಟು. ಅಲ್ಲಿ ಆಸ್ವಾದಿಸಿದ ರಸನಿಮಿಷಗಳನ್ನು ನಾನು ಆಗಾಗ ಮೆಲುಕು ಹಾಕುತ್ತೇನೆ. ಒಮ್ಮೆಯಂತೂ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿ ರಾತ್ರಿ 10.30ರ ಬಸ್ಸಿಗೆ ನಾನಾಗ ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಗಲು ಬಸ್‌ ಟಿಕೆಟ್‌ ಕಾದಿರಿಸಿದ್ದೆ. ಹೊಟೇಲ್‌ ಒಂದರಲ್ಲಿ ಎಂಎಸ್‌ಎನ್‌ ಮತ್ತು ಇನ್ನೂ ಕೆಲವು ಮಿತ್ರರು ಒಟ್ಟಿಗೆ ಊಟ, ಹರಟೆಯಲ್ಲಿ ನಿರತರಾಗಿದ್ದೆವು. ಮಾತಿನಲ್ಲಿ ಮೈಮರೆತಿದ್ದ ನನಗೆ ಬಸ್ಸಿಗೆ ಸಮಯವಾದದ್ದು ನೆನಪಾಗಲಿಲ್ಲ. ಎಂಎಸ್‌ಎನ್‌ ನೆನಪಿಸಿದರು. ಅಷ್ಟೇ ಅಲ್ಲ. “”ಡುಂಡಿ, ನಿಮಗೆ ಹೋಗಲು ಮನಸ್ಸಿಲ್ಲ ಅನ್ನಿಸುತ್ತದೆ. ಬನ್ನಿ ಟಿಕೆಟ್‌ ಕ್ಯಾನ್ಸಲ್‌ ಮಾಡಿಕೊಂಡು ಬರೋಣ. ಆಮೇಲೆ ಹರಟೆ ಮುಂದುವರಿಸೋಣ” ಎಂದು ಹಾಗೆಯೇ ಮಾಡಿದರು. ನಾನು ತುಂಬ ಖುಷಿಯಲ್ಲಿ¨ªಾಗ ಸ್ವಲ್ಪ ಸೋಮಾರಿತನ, ಬೇಜವಾಬ್ದಾರಿ ತೋರುವುದುಂಟು. ಎಂಎಸ್‌ಎನ್‌ ಹಾಗಲ್ಲ. ಯಾವಾಗಲೂ ಶಿಸ್ತಿನ ಸಿಪಾಯಿ. ಸಮಯದ ವಿಷಯದಲ್ಲಿತುಂಬಾಕಟ್ಟುನಿಟ್ಟು.

ಅವರು ನನ್ನ ಪ್ರವಾಸಕಥನ ಅನಿವಾಸಿಗಳೇ ವಾಸಿ ಗೆ ಮುನ್ನುಡಿ ಬರೆದಿದ್ದಾರೆ. ನನ್ನ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಪಾಪ ಪಾಂಡು ಧಾರಾವಾಹಿಯ ಆರಂಭದ ಕಂತುಗಳಲ್ಲಿ ನನ್ನ ಹನಿಗವನಗಳನ್ನು ಬಳಸಿಕೊಳ್ಳುವಂತೆ ಸಿಹಿಕಹಿ ಚಂದ್ರುಗೆ ಸೂಚಿಸಿದವರು ಎಂಎಸ್‌ಎನ್‌. ಅವರ ಎರಡು ಪುಸ್ತಕಗಳಿಗೆ ನಾನು ಮುನ್ನುಡಿ ಬರೆದಿದ್ದೇನೆ. ಎರಡು ಸಲ ಯಾಕೆ ಅಂತೀರಾ? ಹಿಂದೊಮ್ಮೆ ಬರೆದದ್ದನ್ನು ಇಬ್ಬರೂ ಮರೆತಿದ್ದೆವು!

ಎಂಎಸ್‌ಎನ್‌ ನನಗಿಂತ ಏಳು ವರ್ಷ ಹಿರಿಯರಾದರೂ ನನ್ನನ್ನು ಸಮಾನ ವಯಸ್ಕ ಗೆಳೆಯನಂತೆ ಕಾಣುತ್ತಾರೆ. ಅವರ ಆತ್ಮೀಯ ಸ್ನೇಹಿತರ ಬಳಗದಲ್ಲಿ ನಾನಿದ್ದೇನೆ ಅನ್ನುವುದು ನನಗೆ ಹೆಮ್ಮೆಯ ಸಂಗತಿ.

(ಇಂದು ಬೆಂಗಳೂರಿನ ಜಯನಗರದ ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಎಂ. ಎಸ್‌. ನರಸಿಂಹಮೂರ್ತಿಯವರಿಗೆ ಅಭಿನಂದನೆ)

ಎಚ್‌. ಡುಂಡಿರಾಜ್‌

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.