ನನ್ನದಲ್ಲದ ನನ್ನ ಮಾತು


Team Udayavani, Jul 9, 2017, 3:45 AM IST

nanna-mathu.jpg

ತನಗೇ ಆಶ್ಚರ್ಯ ಎನಿಸುತ್ತಿರುವಂತೆ ತನ್ನ ಮನದಲ್ಲಿ ಮೂಡುತ್ತಿರುವ ಹೊಳಹುಗಳನ್ನು ಕುರಿತು ಸಾಕ್ರಟೀಸ್‌ ಹೇಳುತ್ತಿದ್ದಾನೆ : ಇವು ನನ್ನಿಂದ ಬಂದವಲ್ಲ, ಹೇಳುತ್ತಿರುವವನು ನಾನು ಅಷ್ಟೇ.  
ತಮ್ಮದೇ ಕವಿತೆ “ಅಂಬಿಕಾತನಯದತ್ತ’ದಲ್ಲಿ ಬೇಂದ್ರೆ ಹೇಳುತ್ತಾರೆ : ನಿನ್ನ ಹೆಸರಿನಲ್ಲಿ ನಾನು ಬರೆವುದೇನು ಸೋಜಿಗ, ತಿಳಿಯಲಾರದೀ ಜಗ!’.

ಒಂದಂತೂ ನಿಜ, ತಾನೇ ಆಡುತ್ತಿರುವ ಮಾತು ತನ್ನದಲ್ಲ ಅಂದುಕೊಂಡ ಕೂಡಲೇ ಆಡುವ ಮಾತಿಗೆ ಸಿಗುವ ಸ್ವಾತಂತ್ರ್ಯ ಎಣೆ ಇಲ್ಲದ್ದು. ಈ ಸ್ವಾತಂತ್ರ್ಯವನ್ನು ಬಯಸಿಯೇ ಮಾತು ತಾನೇ ತಾನಾಗಿ, “ನಾನು ನಾನಲ್ಲ’ ಎಂದು ಹೇಳುತ್ತಿರಬೇಕು. ಮುಖವಾಡದ ಮಾತು ಮುಖವಾಡ ತೊಟ್ಟವರದ್ದಲ್ಲ. ತೊಡುವ ಸ್ವಾತಂತ್ರ್ಯ ಮಾತ್ರ ಅವರದ್ದೇ! ನಮ್ಮ ನಿಮ್ಮ ಹಾಗೆಯೇ ಮಾಮೂಲಿ ದೈನಿಕದ, ಮಾರಮ್ಮನ ಗುಡಿಯ ಪೂಜಾರಿ ತನ್ನ ಮೈಮೇಲೆ “ದೇವರು’ ಬಂದ ವೇಳೆಯಲ್ಲಿ ಮಾತ್ರ ಸ್ವತಃ ಅಮ್ಮನಾಗಿ ನುಡಿಯುವುದು, ಒಂದು ತಿಂಗಳ ಬ್ರಹ್ಮಚರ್ಯದಲ್ಲಿದ್ದು, ಹೆಂಗಸಿನ ವೇಷ ಧರಿಸಿ ಕರಗ ಹೊತ್ತ ವೇಳೆಯಲ್ಲಷ್ಟೇ ಕರಗ ಹೊತ್ತ ಗಂಡು ಹೆಣ್ಣಾಗಿಬಿಡುವುದು ಇವೆಲ್ಲವೂ ಹೀಗೆ ತನಗಿಂತ ಹಿರಿದಾದ ಮತಾöವುದಕ್ಕೋ ಮಾಧ್ಯಮವಾಗುವ ರೂಪಾಂತರಕ್ಕೆ ತನ್ನನ್ನು ಒಡ್ಡಿಕೊಳ್ಳುವ ಅಪೂರ್ವ ಅವಕಾಶ ಒದಗಿಸಿದ ಸ್ವಾತಂತ್ರ್ಯವೊಂದಕ್ಕೆ ಸಂಸ್ಕೃತಿ ಕೊಟ್ಟ ಮನ್ನಣೆ.

“ಕವಿ ವೀರ ನಾರಾಯಣನಿಗೆ ತಾನು ಲಿಪಿಕಾರ ಮಾತ್ರ’ ಎಂದ ಕುಮಾರವ್ಯಾಸ, ಹಾಗೆ ಹೇಳುವ ಮೂಲಕ ತಾನಾಡುತ್ತಿರುವ ತನ್ನದೇ ಮಾತಿನ ಹೊಣೆಯನ್ನು ತನ್ನ ದೈವ ವೀರನಾರಾಯಣನಿಗೆ ಸಂಪೂರ್ಣವಾಗಿ ಹೊರೆಸಿ, ತಾನು ನಿರಾಳವಾಗಿ ಬರೆಯಲು ಕೂರುತ್ತಿದ್ದ ಪರಿಯನ್ನು ನೆನೆಯುತ್ತಿದ್ದೇನೆ. 

ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ

ಹೀಗೆ ಹೇಳುತ್ತ ಈ ಕೃತಿ ನನ್ನದಲ್ಲ, ನನ್ನಿಂದ ಬರೆಸಿಕೊಂಡದ್ದಷ್ಟೇ ಎಂಬ ವಿನಯವಿರುವ ಕವಿಯಲ್ಲಿ, ನುಡಿಯುತ್ತಿರುವ ವೀರನಾರಾಯಣನಿಗೆ ತಾನು ಮಾಧ್ಯಮವಾಗಿರುವೆನೆಂಬ ಹೆಮ್ಮೆ ಕರುಣಿಸಿರುವ ಆತ್ಮಪ್ರತ್ಯಯವೂ ಇದೆ. ಹೀಗಾಗಿಯೇ ಕುಮಾರವ್ಯಾಸನಿಗೆ ಹೀಗೂ ಹೇಳಲು ಸಾಧ್ಯವಾಗಿದೆ,

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ವೀರನಾರಾಯಣನ ಕಿಂಕರಗೆ

ಮನದಲ್ಲಿ ಮೂಡುತ್ತಿರುವ ಮಾತೆಲ್ಲ ಅದು ನನ್ನದಲ್ಲ ಅಂದುಕೊಂಡ ಕ್ಷಣವೇ ಬಳವನ್ನು ಹಿಡಿದು ಹಲಗೆಯ ಮೇಲೆ ಬರೆಯಬೇಕಾದ ಹಂಗನ್ನು ಕಳೆದುಕೊಳ್ಳುವ ಸ್ವಾತಂತ್ರ್ಯ! ಕೃತಿರಚನೆಯ ಸಮಯಕ್ಕೆ ಬೇಕಾದ ಧ್ಯಾನಸ್ಥ ಮನಃಸ್ಥಿತಿಯನ್ನೂ ಬಳಿಕ ತನ್ನನ್ನು ತನ್ನ ಕೃತಿಯಿಂದ ಬಿಡಿಸಿಕೊಂಡು ದೂರ ನಿಂತು ನೋಡಬಲ್ಲ  ಅನುಕೂಲವೊಂದನ್ನು ಕೃತಿಕಾರನಿಗೆ ಈ ನಂಬಿಕೆ ಎಷ್ಟು ಚೆನ್ನಾಗಿ ಒದಗಿಸಿಕೊಟ್ಟಿದೆಯÇÉಾ ಎನಿಸುತ್ತಿದೆ. 

ಈ ನಂಬಿಕೆ ಅನಾದಿ ಕಾಲದಿಂದಲೂ ಮನುಷ್ಯನ ಅರಿವನ್ನು ಕಾಯುತ್ತಲೇ ಬಂದಿದೆ. ಪ್ರಾಚೀನ ಗ್ರೀಕ್‌ ಮತ್ತು ರೋಮ್‌ನಲ್ಲಿ ಸೃಜಿಸುತ್ತಿರುವ ಮನುಷ್ಯ ಕೇವಲ ನಿಮಿತ್ತ ಮಾತ್ರ. ಅವನ ಮೂಲಕ ದೈವ ಅಥವಾ ವಿಶ್ವ ಶಕ್ತಿಯೊಂದು ಆ ಕಾವ್ಯವನ್ನೋ ಕಲೆಯನ್ನೋ ನಿರ್ಮಿಸಿದೆ ಎಂಬ ನಂಬಿಕೆ ಇತ್ತು. ಈ ನಂಬಿಕೆಯ ಹಿನ್ನೆಲೆಯÇÉೇ ಸಾಕ್ರಟೀಸ್‌ “ತಾನಾಡುತ್ತಿರುವ ತನ್ನ ಮಾತು ದೂರದಿಂದೆÇÉೋ ನನಗೆ ಕೇಳಿಬಂದ ದೈವದ ಮಾತುಗಳು’ ಎಂದು ಹೇಳಿದ್ದು. ರೋಮನ್‌ ನಂಬಿಕೆಯಂತೆ ಕೃತಿಕಾರನ ಕೋಣೆಯ ಗೋಡೆಯೊಳಗೆÇÉೋ ಅವಿತು ಕುಳಿತಿರುವ ಮೇಧಾವಿ ಚೇತನವೊಂದು ತನಗಿಷ್ಟ ಬಂದಾಗಲೆಲ್ಲ ಗೋಡೆಯಿಂದ ಆಚೆ ಬಂದು ಕೃತಿಯೊಂದನ್ನು ರಚಿಸಲು ಕುಳಿತಿರುವ ಕೃತಿಕಾರನನ್ನು ನಿರ್ದೇಶಿಸುತ್ತಾ ತನ್ನ ಇಷ್ಟದಂತೆಯೇ ಕೃತಿಯೊಂದು ಮೂಡಿಬರುವಂತೆ ಮಾಡುತ್ತಿತ್ತು!

ನಾವಿರುವ ಕಾಲ, ದೇಶ, ಪರಿಸ್ಥಿತಿಗಳೇ ನಮ್ಮಿಂದ ಮಾತು ಹೊರಡಿಸುತ್ತಿರುವ ಕಾರಣ ಮಾತು ಕೇವಲ ನಮ್ಮದು ಅಂದುಕೊಳ್ಳುವುದು ಸಾಧ್ಯವೇ ಇಲ್ಲದ ಮಾತು ಎನ್ನಬಹುದಾದರೂ ಆಡುವ ಮಾತಿನ ಹೊಣೆಯನ್ನು ಹೊರಬೇಕಾದವರು ಯಾರು? ಹಾಗೆ ಆಡುವ ಮಾತಿನ ಹೊಣೆಯನ್ನು ಹೊರುವ ಭಾರದಿಂದ ದೂರ ಉಳಿಯುವುದಕ್ಕಾಗಿಯೇ “ಇದು ನನ್ನದಲ್ಲ’ ಎಂಬ ಮಾತನ್ನು ಆಡುವ ಮನಸು, ಆಡುವವರಿಗೆ ಬಂದಿರಬಹುದು. ಹಾಗೆ ನೋಡಿದರೆ, ದೈವವೋ ಮೇಧಾವಿ ಚೈತನ್ಯವೋ ವಿಶ್ವಶಕ್ತಿಯೊ, ಇನ್ನೊಂದೊ, ಇದಕ್ಕೇನೇ ಹೆಸರಿರಲಿ, ಅದು ಇಡೀ ಮಾನವ ಜನಾಂಗದ ಅಲ್ಲಿಯವರೆಗಿನ ಅರಿವನರಸುವ ಹಾದಿಯÇÉೇ ಸಾಗಿಬಂದಿದ್ದು. ಆಡಿದ್ದು ಯಾರೇ ಇದ್ದರೂ ಅದು ಕೇವಲ ಅವರ ಸೊತ್ತಲ್ಲ. ಆದರೂ ಈ ಮಾತಿನ ಹೊಣೆ ಹೊರುವ ಭಾರವನ್ನು ದೈವಕ್ಕೆ ಹೊರೆಸಿ, ನಾನು ನಿನ್ನನ್ನು ಹೊತ್ತ ವಾಹನವಷ್ಟೇ ಎಂದು ಹೇಳಿ ನಿರಾಳವಾಗಿಬಿಡುವ ಮನಸು ಅರಿತವರದ್ದು.

ಅಯ್ನಾ, ನೀನು ನಿರಾಕಾರವಾಗಿರ್ದಲ್ಲಿ 
ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ
ಅಯ್ನಾ, ನೀನು ನಾಟ್ಯಕ್ಕೆ ನಿಂದಲ್ಲಿ 
ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ
ಅಯ್ನಾ, ನೀನು ಆಕಾರವಾಗಿರ್ದಲ್ಲಿ 
ನಾನು ವೃಷಭವೆಂಬ ವಾಹನವಾಗಿರ್ದೆ ಕಾಣಾ
ಅಯ್ನಾ, ನೀನೆನ್ನ ಭವದ ಕೊಂದೆಹೆನೆಂದು
ಜಂಗಮಲಾಂಚನವಾಗಿ ಬಂದಡೆ
ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ
ಕೂಡಲಸಂಗಮದೇವಾ…

ಅರಿಯದ ಮಂದಿ “ವೃಷಭನೆಂಬ ವಾಹನವಾಗಿರ್ದೆ’ ಎಂಬ ಶಬ್ದಗಳನ್ನಷ್ಟೇ ಹಿಡಿದು ಬಸವಣ್ಣನನ್ನು ನಂದಿಯ ಅವತಾರವೆಂದು ಹೇಳಿದಾಗ ಮಾತ್ರ ಆ ಮಾತಿನ ಸಂಪೂರ್ಣ ಹೊಣೆಯನ್ನು ಅವರೇ ಹೊರಬೇಕಾದ ಕರ್ಮ. 
ಅರಿತ ಕವಿಗೆ ಮಾತ್ರ, “ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದು ಹಾಡುವ ಸಂತೋಷ. 
ನಿರ್ದಿಷ್ಟ ರಾಗಗಳಲ್ಲಿ ನಿರ್ದಿಷ್ಟ ಸ್ವರಗಳೂ ಅದರ ಸಂಚಾರಗಳೂ ಇರುವ ಹಾಗೆಯೇ ಮಾತಿಗೂ ಒಂದು ನಿರ್ದಿಷ್ಟ ಸಂಚಾರ ಇರಬಹುದೆ? ತಾನೇ ತಾನಾಗಿ ತನ್ನ ದಾರಿ ತಾನು ಕಂಡುಕೊಳ್ಳುತ್ತಾ ಹರಿವ ನದಿಯ ಹಾಗೆ, ವಿವಿಧ ಸಂಚಾರಗಳಲ್ಲಿ ಹೊರಳಿ ಅರಳಿ ಪಲ್ಲವಿಸುವ ರಾಗದ ಹಾಗೆ ಆಡುವವರ ಅರಿವನ್ನೂ ಮೀರಿ ಮಾತು ಕೂಡ ತನ್ನ ನಡೆಯನ್ನು ತಾನೇ ನಿರ್ಧರಿಸಬಲ್ಲದೆ? ಹಾಗೆ ಆಗುವ ಸಾಧ್ಯತೆ ಉಂಟು ಅಥವಾ ಅದು ಹಾಗೆಯೇ ಆಗುತ್ತದೆ ಎಂಬ ಅನಿಸಿಕೆಯೊಂದನ್ನು ಮಾತು ತನ್ನನ್ನು ಆಡುತ್ತಿರುವವರ ಮನದಲ್ಲಿ ಒಮ್ಮೊಮ್ಮೆ ಮೂಡಿಸುವುದು ಉಂಟು. ಇಡೀ ಮಾನವ ಜನಾಂಗದ ಕುತೂಹಲದ ಹಾದಿಯಲ್ಲಿ ಕಂಡುಕೊಂಡ ಕಾಣೆRಯೇ ಆಡುವ ಮಾತಾಗಿ ಬಂದ ಕಾರಣ ಅದು ಯಾವ ಸಂಚಾರದಲ್ಲಿ ಹೇಗೇ ಬಂದರೂ ಚೆಂದವೇ. ಆಗ ಮಾತ್ರ ಮನಸ್ಸು, ಇದು ನನ್ನಿಂದ ಬಂದಿ¨ªೆಂಬ ದೊಡ್ಡ ಭಾರವನ್ನು ಹೊತ್ತುಕೊಳ್ಳದೆ, ಶಿಶು ಸಹಜ ಉತ್ಸಾಹದಲ್ಲಿ, “ಅವನಿಗೆ ಕಾಲಿಲ್ಲವಮ್ಮ ಅಂಬೆಗಾಲು ಬಿಡನಮ್ಮಾ’ (ಶ್ರೀಪಾದರಾಯರು) ಎನ್ನುತ್ತ ವಾತ್ಸಲ್ಯದಿಂದಲೇ ಮಾತನ್ನೆತ್ತಿಕೊಂಡು ಅದರ ಚೆಂದ ನೋಡುತ್ತಾ ನಲಿಯಬಲ್ಲದೇನೋ.
ಹಲವು ಬರಹಗಾರರ ಒಂದು ದೊಡ್ಡ ಪರಂಪರೆಯೇ “ವ್ಯಾಸ’ನೆಂಬ ಹೆಸರಿನಲ್ಲಿ ಒಂದು ಮಹಾಕೃತಿ ರಚಿಸಿ, ಬರೆದ ಭಾರವನ್ನು ಕಳಚಿ ದೂರ ನಿಂತು ಅದರ ಸೊಗಸು ನೋಡಿದ ಪರಿಯನ್ನು ನೆನೆಯುತ್ತ ಹಾಗೇ ಸುಮ್ಮನೆ ಮನ ತುಂಬುತ್ತಿದೆ! ಇದು ಕೇವಲ collaborative writing ಅಲ್ಲದ ಸಮಷ್ಟಿ ಪ್ರಜ್ಞೆಯ ಮಾತು.

– ಮೀರಾ ಪಿ. ಆರ್‌., ನ್ಯೂಜೆರ್ಸಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.