Special Story: ಹಾವಿನಂತೆ ಕಾ(ಡು)ಣುವ ನಾಗಲಿಂಗ ಪುಷ್ಪ

ಪೂಜೆಗಷ್ಟೇ ಅಲ್ಲ, ಚಿಕಿತ್ಸೆಗೂ ಬೇಕು

Team Udayavani, Aug 21, 2023, 9:15 AM IST

12-article

ಇಂದಿನ ತಂತ್ರಜ್ಞಾನ ಯುಗದಲ್ಲಿ ಅದೆಷ್ಟೋ ಜೀವರಾಶಿಗಳು ಅವನತಿ ಕಂಡಿವೆ. ಅದೆಷ್ಟೋ ಜೀವರಾಶಿಗಳು. ಅಳಿವಿನಂಚಿನಲ್ಲಿವೆ. ಅವುಗಳ ಪೈಕಿ ನಾಗಲಿಂಗ ವೃಕ್ಷವೂ ಒಂದು. ಇದಕ್ಕೆ ನಾಗಲಿಂಗ, ನಾಗಚಂಪಾ ಎಂದೂ ಹೆಸರಿದೆ. ಹೆಸರೇ ಸೂಚಿಸುವಂತೆ ನಾಗರನ ಹೆಡೆಗಳ ನಡುವೆ ಶಿವಲಿಂಗ ಇರುವಂತಹ ಆಕಾರದ ಹೂವನ್ನು ಈ ವೃಕ್ಷವು ಬಿಡುತ್ತದೆ. ಈ ಮರಗಳು ಹೆಚ್ಚಾಗಿ ದಕ್ಷಿಣ ಅಮೆರಿಕ ಹಾಗೂ ಕೆರೆಬಿಯನ್‌ (ವೆಸ್ಟ್‌ ಇಂಡೀಸ್‌) ಪ್ರದೇಶದ ಉಷ್ಣವಲಯದ ಕಾಡುಗಳಲ್ಲಿ ಕಂಡುಬರುತ್ತವೆ. ನಾಗಲಿಂಗ ಪುಷ್ಪವು “ಲೆಸಿತಿಡೇಸಿ’  ಎಂಬ ಹೂ ಬಿಡುವ ಸಸ್ಯ ಕುಟುಂಬಕ್ಕೆ ಸೇರಿದೆ. ಇದಕ್ಕೆ “ಕೋರುಪಿಟಾ ಗಿಯೆನೆನ್ಸಿಸ್‌’ ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.

ನಾಗಲಿಂಗ ವೃಕ್ಷದ ವಿಶೇಷ

ದೊಡ್ಡ ಗಾತ್ರದಲ್ಲಿ ಬೆಳೆಯುವ ಈ ವೃಕ್ಷವು ಕಾಂಡದಿಂದ ತುದಿಯವರೆಗೂ ಬಿಳಲುಗಳನ್ನು ಹೊಂದಿರುತ್ತದೆ. ಬೀಳಲುಗಳಲ್ಲಿ ಹೂವು ಮತ್ತು ದೊಡ್ಡ ಗಾತ್ರದ ಕಾಯಿಗಳನ್ನು ಬಿಟ್ಟು ಮರದ ಕಾಂಡಕ್ಕೆ ತಾಗಿದಂತಿರುತ್ತದೆ. ನಾಗಲಿಂಗ ಪುಷ್ಪವು ದೇವರ ಪೂಜೆಗೆ ಅತ್ಯಂತ ವಿಶಿಷ್ಟ ಹೂವೆಂದು ಪರಿಗಣಿಸಲ್ಪಟ್ಟಿದೆ. ಹೂವು 6 ದಳಗಳನ್ನು ಹೊಂದಿದ್ದು, ದಳದ ಕೆಳಭಾಗ ಹಳದಿ ಬಣ್ಣವಿರುತ್ತದೆ. ಹೂವಿನ ಮಧ್ಯ ಭಾಗವು ಲಿಂಗದ ಆಕೃತಿ ಹೊಂದಿರುತ್ತದೆ. ಇದರ ಹಣ್ಣುಗಳು ಕಂದು ಮತ್ತು ಬೂದು ಬಣ್ಣದಲ್ಲಿರುತ್ತವೆ. ನಮ್ಮ ದೇಶದಲ್ಲಿ ಈ ಮರಕ್ಕೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವಿದೆ, ಹೇರಳ ಔಷಧೀಯ ಗುಣಗಳ ಕಾರಣದಿಂದ ಇದನ್ನು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುತ್ತಾರೆ.

ಘಮ್ಮೆನ್ನುವ ಪರಿಮಳ

ಹೂವುಗಳು ಮರದ ಗೆಲ್ಲುಗಳಲ್ಲಿ ಮೂಡುವ ಬದಲು ಕಾಂಡದಿಂದ ಹೊರಚಾಚಿರುವ 80 ಸೆಂ. ಮೀ ಉದ್ದದ ದಂಟಿನಂತಹ ರಚನೆಯ ತುದಿಯಲ್ಲಿ ಮೂಡುತ್ತವೆ. ಸುವಾಸನೆಯ ಕಾರಣದಿಂದ ಹೂ ಅರಳಿದಾಗ ರಾತ್ರಿಯಿಡೀ ಹಾಗೂ ಮುಂಜಾವಿನಲ್ಲಿ ಮರದ ಸುತ್ತೆಲ್ಲಾ ಪರಿಮಳ ಹರಡಿರುತ್ತದೆ. ಈ ಹೂಗಳು 6 ಸೆಂ. ಮೀ ವ್ಯಾಸ ಹೊಂದಿದ್ದು, 6 ಎಸಳುಗಳೊಂದಿಗೆ ಗಾಢ ಬಣ್ಣ ಹೊಂದಿರುತ್ತವೆ. ದಳಗಳು ಗುಲಾಬಿ ಮತ್ತು ಕೆಂಪು ಬಣ್ಣವನ್ನು, ತೊಟ್ಟು ಹಳದಿ ಬಣ್ಣವನ್ನೂ ಹೊಂದಿರುತ್ತದೆ. ಹೂವಿನ ಮಧ್ಯದಲ್ಲಿ ಹೇರಳ ಕೇಸರಗಳಿರುತ್ತದೆ.

ಹೆಡೆಯಂತೆ ಕಾಣುವ ಭಾಗ

ಮಕರಂದ ಇಲ್ಲದಿದ್ದರೂ, ಪರಾಗವನ್ನರಸಿ ಬರುವ ಜೇನುನೊಣಗಳನ್ನು ನಾಗಲಿಂಗ ಪುಷ್ಪವು ಬಹುವಾಗಿ ಆಕರ್ಷಿಸುತ್ತದೆ. ನಾಗಲಿಂಗ ಪುಷ್ಪವು ಎರಡು ರೀತಿಯ ಪರಾಗಗಳನ್ನು ಹೊಂದಿರುತ್ತದೆ. ಪೀಠದಂತಿರುವ ಲಿಂಗದ ಸುತ್ತಲೂ ಆವರಿಸಿರುವ “ಪುಂಕೇಸರಗಳು’ ಫ‌ಲವನ್ನು ನೀಡುವ ಪರಾಗವನ್ನು ಹೊಂದಿರುತ್ತವೆ. ಎರಡನೆಯದ್ದು, ಒಂದು ಭಾಗದಿಂದ ಹೆಡೆಯಂತೆ ಎದ್ದಿರುವ ಗಂಡುಭಾಗ. ಇದು ಫ‌ಲ ನೀಡುವುದಿಲ್ಲ ಮತ್ತು “ಸ್ಟೆಮಿನಾಯ್ಡ್’ ಎಂದು ಕರೆಯಲಾಗುವ ಇದರ ಪರಾಗಗಳು ಮೊಳೆಯುವುದಿಲ್ಲ. ಜೇನುನೊಣಗಳು, ಹೂವಿನ ನೊಣಗಳು ಮತ್ತು ಬಂಬಲ್‌ ಬೀಗಳೂ ನಾಗಲಿಂಗ ಹೂವಿನೆಡೆಗೆ ಆಕರ್ಷಿತಗೊಳ್ಳುತ್ತವೆ. ಇದರ ಹಣ್ಣುಗಳನ್ನು ತಿನ್ನುವ ಪ್ರಾಣಿಗಳು ಎÇÉೆಡೆ ಬೀಜಗಳನ್ನು ಹರಡುವ ಮೂಲಕ ಬೀಜ ಪ್ರಸಾರ ಮಾಡುತ್ತವೆ.

ಉಪಯೋಗಗಳು

ಇದನ್ನು ಸಸ್ಯೋದ್ಯಾನವನಗಳಲ್ಲಿ ಅಲಂಕಾರಕ್ಕೆ ನೆಡುತ್ತಾರೆ. ಅಧಿಕ ರಕ್ತದೊತ್ತಡ, ಗೆಡ್ಡೆಗಳು, ನೆಗಡಿ, ಹೊಟ್ಟೆ ನೋವು, ಚರ್ಮದ ಗಾಯಗಳು, ಮಲೇರಿಯಾ, ಹಲ್ಲುನೋವು ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ನಾಗಲಿಂಗ ವೃಕ್ಷದ ಬೇರು, ತೊಗಟೆ ಮುಂತಾದ ಭಾಗಗಳನ್ನು ಬಳಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಮರವನ್ನು ಉಳಿಸಿ, ಸಂರಕ್ಷಿಸಬೇಕಾಗಿದೆ. ಇದರ ಕಾಯಿಯ ಒಳಗೆ ಗಟ್ಟಿಯಾದ ಚಿಪ್ಪು ಇದ್ದು, ಇದರ ಬೀಜಗಳು ಅಲ್ಲೇ ಕೊಳೆಯುವುದರಿಂದ, ಬೀಜ ಪ್ರಸರಣವಾಗದೇ ಇರುವುದು ಇವು ಅಳಿವಿನಂಚಿಗೆ ತಲುಪಲು ಮುಖ್ಯ ಕಾರಣ ಎನ್ನಬಹುದು.

ದೈವಸ್ವರೂಪಿ ಮರ ಎಂಬ ನಂಬಿಕೆ…

ನಾಗರನ ಹೆಡೆಯಲ್ಲಿ ಲಿಂಗದ ರೂಪ ಇರುವುದರಿಂದ ಶೈವರು ಇದನ್ನು ಹಿತ್ತಲಿನ ಮರವೆಂದು ಪರಿಗಣಿಸುತ್ತಾರೆ. ಭಾರತದ ಶಿವ ದೇವಾಲಯಗಳು, ಶ್ರೀಲಂಕಾದ ಬೌದ್ಧ ಮಂದಿರಗಳಲ್ಲಿ ಇದನ್ನು ದೈವಸ್ವರೂಪಿ ಮರವೆಂದು ನಾಟಿ ಮಾಡುತ್ತಾರೆ.

ಚಿತ್ರ- ಲೇಖನ: ಸಂತೋಷ್‌ ರಾವ್‌ ಪೆರ್ಮುಡ

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.